अक्षराणामकारोऽस्मि द्वन्द्वः सामासिकस्य च ।
अहमेवाक्षयः कालो धाताहं विश्वतोमुखः ॥
akṣarāṇāmakāro'smi dvandvaḥ sāmāsikasya ca |
ahamevākṣayaḥ kālo dhātāhaṃ viśvatomukhaḥ ||
Swami Sivananda (1887–1963)Bhagavad Gita
33. Among the letters of the alphabet, the letter “A” I am, and the dual among the
compounds. I am verily the inexhaustible or everlasting time; I am the dispenser (of the fruits of
actions), having faces in all directions.
Bannanje Govindacharya (1936–2020)Bhagavad Gita Pravachana
ಅಕ್ಷರಾಣಾಮ್ ಅಕಾರಃ ಅಸ್ಮಿ ದ್ವಂದ್ವಃ ಸಾಮಾಸಿಕಸ್ಯ ಚ |
ಅಹಮ್ ಏವ ಅಕ್ಷಯಃ ಕಾಲಃ ಧಾತಾ ಅಹಮ್ ವಿಶ್ವತೋಮುಖಃ -ಅಕ್ಷರಗಳಲ್ಲಿ ಮೊದಲ ಅಕಾರ ನಾನು. ["ಅ'
ಎಂದು ಕರೆಸಿಕೊಂಡು, “ಅಕಾರ' ಎನ್ನಿಸಿ ಅ-ಕಾರದಿಂದ ವಾಚ್ಯನಾಗಿದ್ದೇನೆ.] ಸಮಾಸಗಳ ಗುಂಪಿನಲ್ಲಿ ದ್ವಂದ್ವ
ಸಮಾಸ ನಾನು. [ಎರಡು ರೂಪಗಳಿಂದ ಒಳಗೂ ಹೊರಗೂ ಇರುವುದರಿಂದ 'ದ್ವಂದ್ವ' ಎನ್ನಿಸಿ ದ್ವಂದ್ವ
ಸಮಾಸದಲ್ಲಿದ್ದೇನೆ.] ಅಳಿವಿರದ ನಾನೇ [ಕಾಲದಲ್ಲಿದ್ದು] ಕಬಳಿಸುವವನು. ಎಲ್ಲೆಡೆ ತುಂಬಿದ್ದು ಎಲ್ಲವನ್ನು
ಸಲಹುವವನೂ ನಾನೇ.
ಹಿಂದೆ ಶಬ್ದಗಳಲ್ಲಿ ಓಂಕಾರವನ್ನು ಹೇಳಿದ್ದ ಕೃಷ್ಣ, ಇಲ್ಲಿ ಅಕ್ಷರದಲ್ಲಿ ತನ್ನ ವಿಭೂತಿಯನ್ನು ಹೇಳುತ್ತಾ ಹೇಳುತ್ತಾನೆ:
“ಅಕ್ಷರಾಣಾಮಕಾರೋಸ್ಮಿ” ಎಂದು. "ಅ' ಪೂರ್ತಿಯಾಗಿ ಭಗವಂತನ ಎಲ್ಲಾ ಗುಣಗಳನ್ನೂ ಹೇಳುವ ವಿಶಿಷ್ಟ
ಅಕ್ಷರ. ಅ- ಅಂದರೆ “ಅಲ್ಲ'. ಭಗವಂತ “ಅಲ್ಲ'. ಅಂದರೆ ನಮಗೆ ತಿಳಿದಿರುವ ಯಾವ ವಸ್ತುವೂ ಅವನಲ್ಲ. ಆತ
ಪ್ರಪಂಚದಿಂದ ವಿಲಕ್ಷಣ. ಇಂತಹ ಭಗವಂತ ‘WE’. ಅಂದರೆ ಆತನಲ್ಲಿ ಯಾವ ದೋಷವೂ ಇಲ್ಲ. ಆತ
ಸರ್ವಗುಣಪೂರ್ಣ. ಹೀಗೆ. ಸರ್ವವಿಲಕ್ಷಣ, ಸರ್ವದೋಷದೂರ, ಸರ್ವಗುಣಪೂರ್ಣ ಭಗವಂತ ©.
ಕಾರವಾಚ್ಯನಾಗಿ "ಅ'ಕಾರದಲ್ಲಿ ತುಂಬಿದ್ದಾನೆ.
ಅಕ್ಷರದ ನಂತರ ಸಮಾಸಗಳ ಬಗ್ಗೆ ಹೇಳುತ್ತಾ ಕೃಷ್ಣ ಹೇಳುತ್ತಾನೆ: “ದ್ವಂದ್ವಃ ಸಾಮಾಸಿಕಸ್ಯ” ಎಂದು. ನಮಗೆ
ತಿಳಿದಂತೆ ಯಾವುದೇ ಸಮಾಸವಾಗಬೇಕಾದರೆ ಅಲ್ಲಿ ಎರಡು ಶಬ್ದವಿರಬೇಕು (ಅಥವಾ ಒಂದು ಶಬ್ದ ಮತ್ತು
ಒಂದು ಪ್ರತ್ಯಯವಿರಬೇಕು). ಇತರ ಎಲ್ಲಾ ಸಮಾಸಗಳಲ್ಲಿ ಒಂದು ಪದ, ಅಥವಾ ಎರಡೂ ಪದ(ಬಹುವ್ರೀಹಿ)
ತನ್ನ ಪ್ರಾಧಾನ್ಯತೆಯನ್ನು ಕಳೆದುಕೊಳ್ಳಬಹುದು. ಆದರೆ ದ್ವಂದ್ವ ಸಮಾಸದಲ್ಲಿ ಎರಡೂ ಪದಗಳು ಮುಖ್ಯ.
ಉಭಯಪದ ಪ್ರಧಾನ ಸಮಾಸವಾದ ದ್ವಂದ್ವ ಸಮಾಸದಲ್ಲಿ ಭಗವಂತ ದ್ವಂದ್ವಃ ನಾಮಕನಾಗಿ ತುಂಬಿದ್ದಾನೆ.
ಎರಡು ರೂಪದಿಂದ ನಮ್ಮ ಒಳಗೂ-ಹೊರಗೂ ತುಂಬಿರುವ ಭಗವಂತ ದ್ವಂದ್ವಃ.
ಎಲ್ಲವನ್ನು ಸಂಹಾರ ಮಾಡುವ ಕಾಲಪುರುಷ ಭಗವಂತ, ಎಲ್ಲವನ್ನು ಧಾರಣೆ ಮಾಡಿ, ಪೋಷಣೆ ಮಾಡುವ
ಧಾತ'. ಇಂತಹ ಭಗವಂತ ವಿಶ್ವತೋಮುಖ. ಆತ ಎಲ್ಲೆಡೆ ತುಂಬಿದ್ದಾನೆ. ಆತನಿಲ್ಲದ ತಾಣವಿಲ್ಲ. ಆತ ಕಾಣದ
Bibek Debroy (1955–2024)The Bhagavad Gita
(33)
‘Among letters, I am the letter “A”. Among different forms of samasa, I am
dvanda.61 Indeed, I am indestructible time. My face is in every direction. I
am the controller of destiny.’