तत्रैकस्थं जगत्कृत्स्नं प्रविभक्तमनेकधा ।
अपश्यद्देवदेवस्य शरीरे पाण्डवस्तदा ॥
tatraikasthaṃ jagatkṛtsnaṃ pravibhaktamanekadhā |
apaśyaddevadevasya śarīre pāṇḍavastadā ||
Swami Sivananda (1887–1963)Bhagavad Gita
13. There, in the body of the God of gods, Arjuna then saw the whole universe resting in the
one, with its many groups.
Sri Vishwesha Tirtharu (1931–2019)Gitasaroddhara
ವಿಶ್ವರೂಪದರ್ಶನ
ವಿಶ್ವರೂಪ ದರ್ಶನ
ಪರಮಾತ್ಮನ ಅಗಾಧ ಮಹಿಮೆಯ ವಿಸ್ತತ ವರ್ಣನೆಯನ್ನು ಕೇಳಿದ
ಅ ರ್ಜುನನಿ ಗೆ ವಿಶ್ವಧಾರಕವಾದ ಅವನ ವಿರಾಡು ಪದ ಪ್ರತ್ಯಕ್ಷದರ್ಶ ನವ ನ್ದ
ಪಡೆಯುವ ಬಯಕೆಯುಂಟಾಗುವುದು. ಅದಕ್ಕಾಗಿ ಅವನಿಗೆ ದವದೃಷ್ಠಿಯನ್ನು
ಕರುಣಿಸಿ ಶ್ರೀಕೃಷ್ಣನು ತನ್ನ ವಿಶ್ವರೂಪದರ್ಶನವನ್ನು ಅವನಿಗೆ ಅನುಗ್ರಹಿಸುವನು.
ನಮ್ಮೆದುರಿಗೆ ನೂರಾರು ಸೂಕ್ಷ್ಮ ವಸ್ತುಗಳು ಹರಿದಾಡುತ್ತಿದ್ದರೂ ನಮಗೆ
ಅವುಗಳ ಪರಿಜ್ಞಾನವೇ ಆಗುವುದಿಲ್ಲ. ಸೂಕ್ಷ್ಮದರ್ಶಕಯಂತ್ರದಸಹಾಯದಿಂದ
ನಮ್ಮ ಚಕ್ನುಸ್ಸಿಗೆ ಗೋಚರವಾಗದ ಅನೇಕ ಸೂಕ್ಷ್ಮ ವಿಷಯಗಳನ್ನು ನಾವು
ಗ್ರಹಿಸುವೆವು. ಅದರಂತೆ ವಿಶ್ವವ್ಯಾಪಿಯಾಗಿ ಸರ್ವಪದಾರ್ಥಗಳಲ್ಲಿಯೂ
ಅನುಸ್ಯೂತನಾದ ಪರಮಾತ್ಮನ ಸಚ್ಚಿದಾನಂದಮಯ ರೂಪಗಳು ನಮ್ಮಸ್ಟೂಲ
ದೃಷ್ಟಿಗೆ ನಿಲುಕುವುದಿಲ್ಲ. ಅದಕ್ಕಾಗಿ ಈ ಸಂದರ್ಭದಲ್ಲಿ ಅರ್ಜುನನಿಗೆ
ದಿವ್ಯಚಕ್ಸುಸ್ಸನ್ನು ಪರಮಾತ್ಮನು ಪ್ರದಾನ ಮಾಡಿದ್ದಾನೆ. ಹುಟ್ಟು ಕುರುಡನಾದ
ಧೃತರಾಷ್ಟ್ರನಿಗೂ ದಿವ್ಯ ದೃಷ್ಟಿಯನ್ನು ನೀಡಿ ತನ್ನ ವಿಶ್ವರೂಪದ ದರ್ಶನವನ್ನು
ಶ್ರೀಕೃಷ್ಣನು ಮಾಡಿಸಿದ್ದುಂಟು. ಶಾಂತಿಯ ಉಪದೇಶವನ್ನು ನೀಡಿದ
ಶ್ರೀಕೃಷ್ಣನನ್ನು ಬಂಧಿಸಲು ದುರ್ಯೋಧನಾದಿಗಳು ಹವಣಿಸಿದಾಗ ಭೀಷ್ಮ
ಧ್ವತರಾಷ್ಟಾದಿ ಸಜ್ಜನವರ್ಗಕ್ಕೆ ಶ್ರೀಕೃಷ್ಣನ ವಿರಾಟ್ ರೂಪದ ದರ್ಶನವನ್ನು
ವಡೆಯುವ ಮಹಾಭಾಗ್ಯ ಒದಗಿತ್ತು. ಕೃಷ್ಣನ ಅನುಗ್ರಹದಿಂದ ಚಕ್ಕುಸ್ಸನ್ನು ಪಡೆದ
ದೃತರಾಷ್ಟ್ರನಂತೂ ಶ್ರೀಕೃಷ್ಣನ ದಿವ್ಯಮಂಗಲ ರೂಪಗಳನ್ನು ಕಂಡು
ಆನಂದತುಂದಿಲನಾಗಿ “ಕೃಷ್ಣ ಈ ವಿಶ್ವರೂಪವನ್ನು ಉಪಸಂಹರಿಸಿದ ನಂತರ
ನನ್ನನ್ನು ಮೊದಲಿನಂತೆ ಕುರುಡನನ್ನಾಗಿಸು. ಪರಮಕಲ್ಯಾಣವಾದ ನಿನ್ನ ಈ
ರೂಪವನ್ನು ಕಂಡ ಕಣ್ಣುಗಳಿಂದ ಜಗತ್ತಿನ ಅಭದ್ರ ಪ್ರಾಕೃತ ರೂಪಗಳನ್ನು ನಾನು
ಹೇಗೆ ನೋಡಲಿ? ಆದುದರಿಂದ ಮೊದಲಿನಂತೆ ಕುರುಡನಾಗಿರುವುದರಲ್ಲೇ
ನನಗೆ ಆನಂದವಿದೆ'' ಎಂದು ಶ್ರೀಕೃಷ್ಣನನ್ನು ಪ್ರಾರ್ಥಿಸುತ್ತಾನೆ. ಜೀವನದಲ್ಲಿ
ಶ್ರೀಕೃಷ್ಣನ ವಿಶ್ವರೂಪವನ್ನು ಹೊರತು ಬೇರೆ ಯಾವ ಪ್ರಾಪಂಚಿಕ ಪದಾರ್ಥ
ವನ್ನೂ ಒಮ್ಮೆಯೂ ನೋಡದ ಈ ಕುರುಡ ಭಕ್ತನೇ ವರಮ ಧನ್ಯನೆಂದು
ನಮಗನಿಸುತ್ತದೆ.
ಶ್ರೀಕೃಷ್ಣನ ವಿಶ್ವಂಭರ ರೂಪವನ್ನು ಕಂಡ ಅರ್ಜು ನನು ಹರ್ಷಪುಲಕಿತನಾಗು
ವನು. ನಾವಿರ ಸೂರ್ಯರು ಒಮ್ಮೆಲೆ ಗಗನದಲ್ಲಿ ಉದಿಸಿದಂತಹ ಅದ್ಭುತ
ಪ್ರಭೆಯುಸುತ್ತಲೂ ಹರಡಿದೆ. ಎಲ್ಲಿನೋಡಿದರೂ ವರಮಾತ್ಮನಮುಖಕಮಲ
ಗಳು ಗೋಡರಿಸುತ್ತಿದ್ದರೆ ಸುತ್ತಲೂ ಪರಮಾತ್ಮನ ಕಣ್ಣುಗಳು ಜಗತ್ತಿನ
ಕಣಕಣಗಳನ್ನೂ ವರೀಕ್ಷಿಸುತ್ತಿವೆ. ಅವನ ಸಹಸ್ರಾರು ಕರಚರಣಗಳು ಜಗತ್ತನ್ನೆಲ್ಲ
ವಸರಿಸಿ ನಿಂತಿವೆ. ವಿಶ್ವತಶೃಕ್ಟುವೂ ವಿಶ್ವತೋಮುಖನೂ ಆದ ಪರಮಾತ್ಮನಲ್ಲಿ
ಭೂತಭವಿಷ್ಯದ್ ವರ್ತಮಾನಗಳೆಲ್ಲವನ್ನೂ ಅರ್ಜುನನು ಕಂಡನು.
ತತ್ರೈಕಸ್ಮಂ ಜಗತ್ ಕೃತ್ಸ್ನಂ ಪ್ರವಿಭಕ್ತಮನೇಕಧಾ ।
ಅನಂತ ವೈವಿಧ್ಯಪೂರ್ಣವಾದ ಜಗತ್ತೆಲ್ಲವೂ ಕ್ರೋಡೀಕೃತವಾಗಿ ಅಲ್ಲಿದೆ.
ಅರ್ಜುನನಿಗೆ ಪರಮಾತ್ಮನ ದೇಹದಲ್ಲಿ ಸಮಗ್ರವಿಶ್ವದ ದರ್ಶನವಾಗುವುದು.
ವಾಯು, ಯಮ, ಅಗ್ನಿ ಬ್ರಹ್ಮ ರುದ್ರ ಮುಂತಾದ ಸಕಲ ದೇವತೆಗಳೂ
ಪರಮಾತ್ಮನ ಆಶ್ರಯದಲ್ಲಿ ಅವನ ದೇಹದಲ್ಲಿನೆಲೆಸಿರುವುದನ್ನೂ ಅರ್ಜುನನು
ನೋಡುವನು. ಹೀಗೆ ಸರ್ವ ಜಡವಸ್ತುಗಳಿಗೂ ಸಕಲವ್ರಾಣಿಗಳಿಗೂ ಸಮಸ್ತ
ದೇವತೆಗಳಿಗೂ ಆಶ್ರಯನೆನಿಸಿ ಅವೆಲ್ಲವುಗಳ ವ್ರವರ್ತನೆಗಾಗಿ ಅನಂತ ರೂವ
ಗಳನ್ನು ಧರಿಸಿದ ಈ ವಿಶ್ವ ರೂಪಿಯಾದ ಪರಮಾತ್ಮನನ್ನು ಕಂಡು ಹರ್ಷವಿಭ್ರಾಂತ
ನಾದ ಅರ್ಜುನನು ವಿಸ್ಥಯಭರಿತನಾಗಿ ಭಕ್ತಿವರವಶತೆಯಿಂದ ನಾನಾರೀತಿ
ಯಲ್ಲಿಸ್ತುತಿಸುವನು.
Bannanje Govindacharya (1936–2020)Bhagavad Gita Pravachana
ತತ್ರ OBI ಜಗತ್ ಕೃತ್ನ್ನಮ್ ಪ್ರವಿಭಕ್ತಮ್ ಅನೇಕಧಾ |
ಅಪಶ್ಯತ್ ದೇವದೇವಸ್ಯ ಶರೀರೇ ಪಾಂಡವಃ ತದಾ -ಅರ್ಜುನ ಕಂಡನಾಗ ಬಗೆಬಗೆಯಿಂದ ವಿಂಗಡಗೊಂಡ
ಇಡಿಯ ಪೊಡವಿ ಅಲ್ಲಿ, ದೇವದೇವನ ಮೈಯಲ್ಲಿ ಒಂದುಗೂಡಿದ್ದನ್ನು.
ಭಗವಂತ ಅರ್ಜುನನಿಗೆ ರಣರಂಗದಲ್ಲಿ ತೋರಿದ ವಿಶ್ವರೂಪ ತುಂಬಾ ವಿಶಿಷ್ಟವಾದದ್ದು. ಮಧ್ವಾಚಾರ್ಯರು
ಹೇಳುವಂತೆ ಅರ್ಜುನನಿಗೆ ವಿಶ್ವರೂಪ ದರ್ಶನವಾದಾಗ, ಪ್ರಪಂಚದಲ್ಲಿ ಭಗವಂತನ ವಿಶ್ವರೂಪ ದರ್ಶನ
ಕಾಣುವ ಅರ್ಹತೆಯುಳ್ಳ ಎಲ್ಲರಿಗೂ ಈ ದರ್ಶನವಾಗಿತ್ತು. [ಮೂರು ಲೋಕದಲ್ಲಿರುವ, ಅರ್ಹತೆಯುಳ್ಳ ಸಮಸ್ತ
ಜೀವಿಗಳಿಗೂ ಭಗವಂತನ ಈ ವಿಶೇಷ ದರ್ಶನವಾಗಿದೆ ಎನ್ನುವ ಮಾತು ಮುಂದೆ ಈ ಅಧ್ಯಾಯದಲ್ಲಿ ಬರುತ್ತದೆ].
ಅರ್ಜುನನಿಗೆ ಇಲ್ಲಿ ಕಾಣಿಸಿದ್ದು ಕೇವಲ ಎಲ್ಲೆಡೆ ತುಂಬಿರುವ ಭಗವಂತ ಮಾತ್ರವಲ್ಲ, ಆತನೊಳಗೆ ತುಂಬಿರುವ
ಪ್ರಪಂಚ ಕೂಡಾ. [ಇಲ್ಲಿ ಭಗವಂತನೊಳಗೆ ವಿಶ್ವವನ್ನು ಕಾಣುವುದು ಅಂದರೆ ಧ್ಯಾನದಲ್ಲಿ ಪರಮಾತ್ಮನನ್ನು,
ಆತನಿಂದ ಸೃಷ್ಟವಾದ ಸೃಷ್ಟಿಯನ್ನು ಕಂಡಂತೆ. ಸತ್ವದಿಂದ ಸ್ವಚ್ಛವಾದ ಮನಸ್ಸುಳ್ಳ ಅರ್ಜುನ(ಪಾಂಡವ), ತನ್ನ
ದಿವ್ಯ ದೃಷ್ಟಿಯಿಂದ ಭಗವಂತನಲ್ಲಿ ತುಂಬಿರುವ ಇಡೀ ವಿಶ್ವವನ್ನು ಸ್ಪಷ್ಟವಾಗಿ ಕಂಡ.]
Bibek Debroy (1955–2024)The Bhagavad Gita
(13)
Then Pandava15 saw the entire universe in one place, divided into many
parts, in that great god of god’s body.