11.4

मन्यसे यदि तच्छक्यं मया द्रष्टुमिति प्रभो ।
योगेश्वर ततो मे त्वं दर्शयात्मानमव्ययम् ॥
manyase yadi tacchakyaṃ mayā draṣṭumiti prabho |
yogeśvara tato me tvaṃ darśayātmānamavyayam ||
Swami Sivananda (1887–1963)Bhagavad Gita
4. If Thou, O Lord, thinkest it possible for me to see it, do Thou, then, O Lord of the Yogis, show me Thy imperishable Self!
Bannanje Govindacharya (1936–2020)Bhagavad Gita Pravachana
ಮನ್ಯಸೇ ಯದಿ ತತ್‌ ಶಕ್ಯಮ್‌ ಮಯಾ ದ್ರಷ್ಟುಮ್‌ ಇತಿ ಪ್ರಭೋ | ಯೋಗೇಶ್ವರ ತತಃ ಮೇ ತ್ವಮ್‌ ದರ್ಶಯ ಆತ್ಮಾನಮ್‌ ಅವ್ಯಯಮ್‌ -ಜಗದೊಡೆಯನೇ, ಯೋಗಿಗಳೊಡೆಯನೇ, ಅದು ನನ್ನಿಂದ ಕಾಣಲು ಸಾಧ್ಯವೆಂದು ನೀನು ಭಾವಿಸುವುದಾದರೆ, ನಿನ್ನ ಅಳಿವಿರದ ರೂಪವನ್ನು ನನಗೆ ತೋರಿಸು. ಅರ್ಜುನ ಮುಂದುವರಿದು ಹೇಳುತ್ತಾನೆ “ನಾನು ಆ ನಿನ್ನ ರೂಪವನ್ನು ನೋಡಲು ಸಾಧ್ಯ ಎಂದು ನೀನು ಭಾವಿಸುವುದಾದರೆ, ನಿನ್ನ ರೂಪವನ್ನು ನನಗೆ ತೋರಿಸು” ಎಂದು. ಇಲ್ಲಿ ಅರ್ಜುನ ಕೃಷ್ಣನನ್ನು 'ಪ್ರಭೋ' ಎಂದು ಸಂಬೋಧಿಸಿದ್ದಾನೆ. ಪ್ರಭು' ಅಂದರೆ ಸಾಮರ್ಥ್ಯ. “ನೋಡುವ ಸಾಮರ್ಥ್ಯ ನನಗಿಲ್ಲದಿದ್ದರೂ, ಆ ಸಾಮರ್ಥ್ಯವನ್ನು ಕರುಣಿಸಿ ತೋರಿಸುವ ಸಾಮರ್ಥ್ಯ ನಿನಗಿದೆ” ಎನ್ನುವುದು ಈ ಸಂಬೋಧನೆಯ ಹಿಂದಿರುವ ಭಾವ. “ಏಕೆಂದರೆ ನೀನು ಯೋಗೇಶ್ವರಃ” ಎನ್ನುತ್ತಾನೆ ಅರ್ಜುನ. ಯೋಗ ಅಂದರೆ ಉಪಾಯ. “ನನಗೆ ಹೇಗೆ ನಿನ್ನ ರೂಪವನ್ನು ತೋರಿಸಬೇಕು ಎನ್ನುವ ಉಪಾಯ ಕೂಡಾ ನಿನಗೆ ತಿಳಿದಿದೆ. ನೀನು ಎಲ್ಲಾ ಉಪಾಯ(ಯೋಗ)ಗಳ ಸ್ವಾಮಿ. ಆದ್ದರಿಂದ ಅಳಿವಿರದ, ನಿತ್ಯವಾಗಿರುವ ಆ ನಿನ್ನ ರೂಪವನ್ನು ನನಗೆ ತೋರಿಸು” ಎಂದು ಅರ್ಜುನ ಕೃಷ್ಣನನ್ನು ಕೇಳಿಕೊಳ್ಳುತ್ತಾನೆ.
Bibek Debroy (1955–2024)The Bhagavad Gita
(4) ‘O Lord!4 If you think that I am worthy of seeing that,5 then, O lord of yoga6 show me your indestructible self.’