12.18

समः शत्रौ च मित्रे च तथा मानापमानयोः ।
शीतोष्णसुखदुःखेषु समः सङ्गविवर्जितः ॥
samaḥ śatrau ca mitre ca tathā mānāpamānayoḥ |
śītoṣṇasukhaduḥkheṣu samaḥ saṅgavivarjitaḥ ||
·
Sri Madhvacharya (1238–1317)Bhagavad Gita Tatparya Nirnaya
12.17–12.18
‘भक्तिं ज्ञानं च वैराग्यमृते ये नेच्छति क्वचित्। शुभाशुभपरित्यागी विद्वद्भिः कीर्तितो हि सः’ इति च। ‘प्रायः सुखादिषु समः प्रायो हर्षादिवर्जितः। तथोच्यते यथाऽल्पस्वो निःस्व इत्युच्यते जनः। नहि मुख्यतया साम्यं कस्यचित् सुखदुःखयोः। न च हर्षादिसन्त्यागो यावन्मुक्तिः कुतश्चन’ इति च। ‘हृतिर्मदादधर्माय हर्षो नाम प्रकीर्तितः’ इति शब्दनिर्णये॥17-18॥
Swami Sivananda (1887–1963)Bhagavad Gita
18. He who is the same to foe and friend, and in honour and dishonour, who is the same in cold and heat and in pleasure and pain, who is free from attachment,
Sri Vishwesha Tirtharu (1931–2019)Gitasaroddhara
12.13–12.20 · ಭಕ್ತಶೀಲ ಸಂವರ್ಧನೆ
ಸಾಧಕನಲ್ಲಿ ಶೀಲಸಂವರ್ಧನೆ ಸಾಧಕನು ನಿಷ್ಕುಮಕರ್ಮಾಚರಣ, ವೈರಾಗ್ಯಮತ್ತುಪ್ರಯತ್ನಗಳ ಜೊತೆಗೆ ತನ್ನಲ್ಲಿ ಸದ್ಗುಣಗಳನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಬೇಕು. ನಮ್ಮಲ್ಲಿ ಸದ್ಗುಣಗಳನ್ನು ವಿಕಸಿತಗೊಳಿಸುವುದೂ ಪರಮಾತ್ಮನ ಸಾಕ್ಚಾತ್ಕಾರಕ್ಕೆ ಆವಶ್ಯಕವಾಗಿದೆ. ಮುಕ್ತಿಯನ್ನು ಹೊಂದಲಿರುವ ಆತ್ಮರೆಲ್ಲರೂ ಸ್ವತಃ ಸದ್ಗುಣರೂಪಿಗಳೇ ಆಗಿರುವರು. ಅಜ್ಞಾನದಿಂದ ಆವೃತವಾದ, ಆದರೆ ಸ್ವಾಭಾವಿಕವಾಗಿ ಸದ್ಗುಣಾತ್ಮಕವಾದ ತಮ್ಮ ಚೈತನ್ಯವನ್ನು ಅವಿಷ್ಕಾರಗೊಳಿಸು ವುದೇ ಮುಕ್ತಿ ಎಂದು ಶಾಸ್ತ್ರಗಳಲ್ಲಿ ಹೇಳಿದೆ. ಹೀಗೆ ನಮ್ಮ ಮೂಲಭೂತ ಸದ್ಗುಣಗಳ ಅಭಿವ್ಯಕ್ತಿಯಾಗಲು ಅದಕ್ಕೆ ಅನುಕೂಲವೆನಿಸುವ ಪ್ರವೃತ್ತಿಗಳೇ ನಮ್ಮ ಜೀವನದಲ್ಲಿ ವ್ಯಾಪಿಸಿಕೊಂಡಿರಬೇಕು. ಆತನಸ್ವಾಭಾವಿಕಧರ್ಮಗಳೆನಿಸಿದಸತ್ವ, ಜ್ಞಾನ, ದಯೆ, ತ್ಯಾಗ ಮುಂತಾದ ಸ್ವರೂಪ ಸದ್ಗುಣಗಳಿಗೆ ತೀರ ವ್ಯತಿರಿಕ್ತವೂ ವಿರೋಧಿಯೂ ಆದಪ್ರವೃತ್ತಿಯನ್ನು ನಮ್ಮಲ್ಲಿ ರೂಢಿಸಿಕೊಂಡಲ್ಲಿ ನಮ್ಮ ಆತ್ಮವು ಇನ್ನೂ ಹೆಚ್ಚುಘನವಾದ ಆವರಣಕ್ಕೆ ಒಳಪಟ್ಟಂತಾಗುವುದು. ಅಸತ್ಯ, ಕ್ರೌರ್ಯ, ಹಿಂಸೆ, ವಂಚನೆ ಮೊದಲಾದ ದುರ್ಗುಣಗಳು ಆತ್ಮಸ್ವರೂಪಕ್ಕೆ ತೀರ ವಿಸಂಗತಗಳಾದ ವಿರೋಧಿ ಭಾವಗಳಾಗಿವೆ. ಇಂತಹ ದುರ್ಗುಣಗಳಿಗೆ ನಮ್ಮ ಜೀವನದಲ್ಲಿ ಅವಕಾಶ ದೊರೆಯುವುದರಿಂದ ನಮ್ಮ ಆತ್ಮವನ್ನು ಕುಗ್ಗಿಸಿ ಅಜ್ಞಾನ ಪ್ರಕೃತಿಗಳ ವಿಜೃಂಭಣೆಯನ್ನು ಇನ್ನೂ ಹೆಚ್ಚಿಸಿದಂತಾಗುತ್ತದೆ. ಅದರಂತೆ ನಮ್ಮಲ್ಲಿ ದುರ್ಗುಣಗಳು ಹೆಚ್ಚಿದರೆ ಅನಂತಗುಣರೂಪಿಯಾದ ಭಗವಂತನ ಧ್ಯಾನ ಸಾಕ್ಷಾತ್ಯಾರಗಳನ್ನು ಪಡೆಯುವ ಅರ್ಹತೆಯನ್ನೇ ನಾವು ಕಳೆದುಕೊಂಡಂತಾಗುವುದು. ನಮ್ಮ ನಿತ್ಯವ್ಯವಹಾರಗಳೆಲ್ಲವೂ ದುರ್ಗುಣ ದುರಾಚಾರಗಳಿಂದ ದೂಷಿತವಾಗಿದ್ದರೆ, ಸುಗುಣಮೂರ್ತಿಯಾದ ಪರಮಾತ್ಮನ ಸಾಮ್ಯಪ್ರಾಪ್ತಿಯೆನ್ನಲಾಗುವ ಮುಕ್ತಿಯನ್ನು ಪಡೆಯಲು ನಾವು ಹೇಗೆ ಅರ್ಹರಾಗಬಲ್ಲೆವು? ಆದುದರಿಂದ ನಮ್ಮ ಮೂಲಭೂತಸ್ಥಿತಿಯೆನಿಸಿದ ನಮ್ಮ ಆತ್ಮದಸ್ವಾಭಾವಿಕ ಗುಣಧರ್ಮಗಳಿಗೂ ನಮ್ಮ ಪರಮಪ್ರಾಪ್ಯಸ್ಥಾನವಾಗಿರುವ ಪರಮಾತ್ಮ ಸ್ವರೂಪಗುಣಗಳಿಗೂ ತೀರ ವಿರೋಧಿಯಾದ ಮನೋಧರ್ಮ ಗಳಿಗೆ ನಮ್ಮ ಜೀವನದಲ್ಲಿ ಸರ್ವಥಾ ಅವಕಾಶವಿರಬಾರದು. ಇದರಿಂದ ಭಗವಂತನಿಂದನಾವುಇನ್ನೂ ಹೆಚ್ಚು ದೂರ ಉಳಿಯುವ ಮತ್ತು ಆತ್ಮವಿಕಾಸಕ್ಕೆ ಅಡಚಣೆಯಾಗುವ ದುರಂತ ಸನ್ನಿವೇಶವು ಒದಗುವುದು. ಆದುದರಿಂದ ಅನಂತಗುಣಮೂರ್ತಿಯಾದ ಪರಮಾತ್ಮನ ಸಾಕ್ಷಾತ್ಕಾರದಿಂದ ನಮ್ಮಲ್ಲಿಯೇ ಸಹಜವಾಗಿ ಹುದುಗಿರುವ ಚೇತನಾತ್ಮಕ ಸದ್ಗುಣಪ್ರಭೆಗಳಿಂದ ನಾವು ಬೆಳಗಬೇಕಾದರೆ ನಮ್ಮ ಲೌಕಿಕ ಜೀವನವು ನೀತಿಶೀಲಸಂಪನ್ನವಾಗಿರಬೇಕು. ನಮ್ಮ ವ್ಯವಹಾರಗಳೆಲ್ಲ ಸದ್ಗುಣಮಯವಾಗಿರಬೇಕು. ಸಾಧಕನು ತನ್ನಲ್ಲಿ ಅಳವಡಿಸಿಕೊಳ್ಳಬೇಕಾದ ಈ ಗುಣಗಳ ಯಾದಿಯನ್ನು ಹನ್ನೆರಡನೆಯ ಅಧ್ಯಾಯದಕೊನೆಯಲ್ಲಿ ಬರುವ, ಅದ್ವೇಷ್ಟಾಸರ್ವಭೂತಾನಾಂ ಮೈತ್ರಃ ಕರುಣಏವಚ। ಮುಂತಾದ ಶ್ಲೋಕಗಳಲ್ಲಿ ನಾವು ಕಾಣಬಹುದು. ಅದ್ವೇಷ, ಮೈತ್ರಿ, ಕರುಣೆ, ನಿರ್ಮಮತೆ, ನಿರಹಂಕಾರ, ಸಹನೆ, ಅಲಂಬುದ್ಧಿ ಮೊದಲಾದವುಗಳೇನಮ್ಮಲ್ಲಿ ಅಳವಡಿಸಿಕೊಳ್ಳಬೇಕಾದ ಸದ್ಗುಣಗಳಾಗಿವೆ. ಭಕ್ತನಲ್ಲಿ ಈ ಗುಣಗಳು ತುಂಬಿರುತ್ತವೆ. ಇಂತಹ ಗುಣಶಾಲಿಯೇ ತನಗೆ ಅತ್ಯಂತ ಪ್ರೀತಿಪಾತ್ರನೆಂದು ಸ್ವಾಮಿಯು ಅರುಹಿದ್ದಾನೆ. ಲೋಕದ ಯಾವುದೇ ವ್ಯವಹಾರದಿಂದ ಉದ್ವಿಗ್ನನಾಗದೆ, ಯಾರಿಗೂ ಹೆದರದೆ ಭಕ್ತನು ತನ್ನ ಕರ್ತವ್ಯವನ್ನು ನಿರ್ವಹಿಸುತ್ತಾನೆ. ಅದರಂತೆ ಅವನಿಂದಲೂ ಜನರಿಗೆ ಯಾವ ಭಯ, ಅಪಾಯ ಉಪದ್ರವಗಳೂ ಇಲ್ಲ. ಸರ್ವರಿಗೂ ಅಭಯ ನೀಡಿತಾನೂ ನಿರ್ಭಯವಾಗಿ, ಉಳಿದವರೂನಿರುದ್ದಿಗ್ಗರಾಗಿರುವಂತಹ ಸನ್ನಿವೇಶವನ್ನು ಭಕ್ತನು ನಿರ್ಮಿಸುತ್ತಾನೆ. ಆತನು "ಸರ್ವಾರಂಭ ಪರಿತ್ಯಾಗಿ' ಅಂದರೆ ಪರಮಾತ್ಮನ ಪ್ರೀತಿಕರವಾಗದ ಕೇವಲ ಸ್ವಫಲಾಪೇಕ್ಷೆಯ ಕರ್ಮಗಳಿಂದ ದೂರವಾಗಿರುತ್ತಾನೆ. ಅವನಿಗೆ ಸುಖದುಃಖಗಳಿರಡರಲ್ಲಿಯೂ ಸಮದೃಷ್ಟಿ ಇರುತ್ತದೆ. ಸುಖದಂತೆ ದುಃಖವೂ ಅವನಿಗೆ ಅಪೇಕ್ಷಿತವೇ. ತನ್ನ ದುಷ್ಕೃತ್ಯಗಳ ಫಲರೂಪವಾದ ದುಃಖತಾಪಗಳನ್ನು ಅನುಭವಿಸಿತನ್ನ ಪಾತಕಗಳನ್ನು ಪರಿಹರಿಸಿಕೊಳ್ಳಲು ಭಕ್ತನು ತವಕಿಸುತ್ತಾನೆ. ತನ್ನ ಆತ್ಮಶುದ್ಧಿಗೆ ಸಹಾಯಕವೆಂದು ದುಃಖದ ಸನ್ನಿವೇಶವನ್ನು ಸಂತೋಷ ಸಮಾರಂಭವೆಂಬಂತೆ ಉತ್ಸಾಹದಿಂದ ಆತನು ಸ್ವಾಗತಿಸುತ್ತಾನೆ. ಅದರಂತೆ ಭಕ್ತನು ದುಃಖದಂತೆ ಸುಖವನ್ನು ಉಪೇಕ್ಷಾಬುದ್ಧಿಯಿಂದ ನೋಡುವನು. ದುಃಖವು ಕ್ಲೇಶರೂವವಾಗಿರುವಂತೆ ಸುಖವೂ ಅನಂತಕ್ಷೇಶಕರವಾಗಿದೆ. ಒಂದು ಸುಖದ ತುಣುಕಿಗಾಗಿ ಮಾನೆಔನು ಅದೆಷ್ಟು ದೈನ್ಯ ಸಂಕಟಗಳನ್ನು ಅನುಭವಿಸುತ್ತಾನೆ! ಸಮಚಿತ್ತನಾದ ಭಕ್ತನ ದೃಷ್ಟಿಯಲ್ಲಿ ವೈಷಯಿಕ ಸುಖಹಾಗೂಸಾಂಸಾರಿಕ ಕ್ಲೇಶ ಇವೆರಡಕ್ಕೂ ಒಂದೇ ಬೆಲೆ. ಎರಡನ್ನೂ ಹೇಯಭಾವನೆಯಿಂದಲೇ ಆತನು ನಿರೀಕ್ಷಿಸುತ್ತಿರುವುದರಿಂದ ಆತನು ಸಮದುಃಖ ಸುಖನೆನಿಸುತ್ತಾನೆ. ಸ್ತುತಿನಿಂದೆಗಳೆರಡರಲ್ಲಿಯೂ ನಿರ್ವಿಕಾರನಾಗಿರುವುದೂ ಒಂದು ಅಪೂರ್ವವಾದ ಮಹತ್ವದ ಗುಣವಾಗಿದೆ. ಉಳದ ಎಲ್ಲ ಗುಣಗಳಿದ್ದರೂ ಸ್ಪುತಿನಿಂದಗಳಿಂದ ವಿಕಾರವಶನಾಗದ ವ್ಯಕ್ತಿಯು ದೊರೆಯುವುದು ವಿರಳ. ಸರ್ವಸಂಗ ಪರತ್ಯಾಗಿಗಳಿಗೂನಿಸ್ಚೃಹ ಸೇವಾಜೀವಿಗಳಿಗೂಸ್ತುತಿಯ ಮೋಹವನ್ನು ಮೀರಿ ನಿಲ್ಲಲಾಗುವುದಿಲ್ಲ. ತನ್ನತ್ಯಾಗಸೇವೆಗಳನ್ನು ಸ್ತುತಿಸುವಾಗಎಂತಹತ್ಯಾಗತಪಸ್ವಿಯ ಮುಖವೂ ಅರಳುತ್ತದೆ. ಫಲಾಶೆ ಇಲ್ಲದೆ ಕೇವಲ ಹರಿ ಪ್ರೀತಿಯ ಅಪೇಕ್ಷೆಯಿಂದ ಸ್ವಕರ್ತವ್ಯಬುದ್ಧಿಯಿಂದ ನಡೆಯುವ ಕರ್ಮ ಯೋಗಿಯಾದ ಭಕ್ತನಿಗೆ ಸ್ತುತಿನಿಂದೆಗಳೆರಡೂ ಸಮಾನವೇ ಆಗುವವು. ಇಂತಹ ದಿವ್ಯಸದ್ಗುಣಗಳನ್ನೆಲ್ಲ ವಡೆಯಲು ಸಾಧಕನು ವ್ರಯತ್ನಿಸಿದಲ್ಲಿ ಅಧ್ಯಾತ್ಮನಿಧಿಯು ಅವನ ಹಸ್ತಗತವಾಗುವುದರಲ್ಲಿವಿಲಂಬವಾಗುವುದಿಲ್ಲ. ಯೇತು ಧರ್ಮ್ಯಾಮೃತಮಿದಂ ಯಥೋಕ್ತಂ ಪರ್ಯುಪಾಸತೇ। ಈ ಸದ್ಗು ಣಗಳು ಧರ್ಮ ಹಾಗೂ ಅಮೃತಗಳಾಗಿವೆ.
Bannanje Govindacharya (1936–2020)Bhagavad Gita Pravachana
ಸಮಃ ಶತ್ರೌ ಚ ಮಿತ್ರೇ ಚ ತಥಾ ಮಾನಾಪಮಾನಯೋಃ | ಶೀತೋಷ್ಟಸುಖದುಃಖೇಷು ಸಮಃ ಸಂಗವಿವರ್ಜಿತಃ ॥೧೮॥
12.18–12.19
ಸಮಃ ಶತ್ರೌ ಚ ಮಿತ್ರೇ ಚ ತಥಾ ಮಾನ ಅಪಮಾನಯೋಃ | ಶೀತ ಉಷ್ಣ ಸುಖ ದುಃಖೇಷು ಸಮಃ ಸಂಗವಿವರ್ಜಿತಃ ॥ ತುಲ್ಯ ನಿಂದಾ ಸ್ತುತಿಃ ಮೌನೀ ಸಂತುಷ್ಟಃ ಯೇನ ಕೇನಚಿತ್‌ | ಅನಿಕೇತಃ ಸ್ಥಿರ ಮತಿಃ ಭಕ್ತಿಮಾನ್‌ ಮೇ ಪ್ರಿಯಃ ನರಃ - ಹಗೆಯ-ಗೆಳೆಯರಲ್ಲಿ ಭೇದ ಬಗೆಯದವನು; ಗೌರವ- ಅಗೌರವಗಳನ್ನು, ಶೀತ-ಉಷ್ಣಗಳನ್ನು, ಸುಖ-ದುಃಖಗಳನ್ನು ಸಮನಾಗಿ ಕಾಣುವವನು; ಯಾವುದಕ್ಕೂ ಅಂಟಿಕೊಳ್ಳದವನು; ಹೊಗಳಿಕೆಯನ್ನು ತೆಗಳಕೆಯಂತೆ ಕಾಣುವವನು; ಚಿಂತನಶೀಲನು; ಏನು ಇದೆಯೋ ಅಷ್ಟರಲ್ಲಿ ತೃಪ್ತನಾದವನು; ಒಂದೆಡೆ ನೆಲೆನಿಲ್ಲದವನು [ಭಗವಂತನಲ್ಲಿ ನೆಲೆ ನಿಂತವನು;] ಭಗವಂತನ ಅರಿವು ಗಟ್ಟಿಗೊಂಡವನು-ಭಕ್ತನಾದ ಇಂತಹ ಮನುಜ ನನಗೆ ಅಚ್ಚುಮೆಚ್ಚು. ಸಾಮಾನ್ಯವಾಗಿ ನಾವು. ಶತ್ರು ಅಥವಾ ಮಿತ್ರ ಅನ್ನುವ ಭಾವನೆಯನ್ನು ವ್ಯಾವಹಾರಿಕವಾಗಿ ರೂಢಿಸಿಕೊಳ್ಳುತ್ತೇವೆ. ನಮ್ಮನ್ನು ಹೊಗಳುವವರು ನಮಗೆ ಮಿತ್ರರು, ನಮ್ಮ ತಪ್ಪನ್ನು ತೆಗಳುವವರು ಶತ್ರುಗಳು. ಇದು ನಮ್ಮ ಅಪ್ರಭುದ್ಧ ನಡೆ. ಸ್ನೇಹದ ಹಿಂದೆ ದ್ವೇಷವಿರಬಹುದು, ದ್ವೇಷದ ಹಿಂದೆ ಸ್ನೇಹವಿರಬಹುದು. ಪುರಂದರದಾಸರು 'ನಿಂದಕರಿರಬೇಕು' ಎಂದು ಹಾಡಿರುವುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದು. ನಿಂದಕರು ನಮ್ಮ ನಿಂದೆ ಮಾಡುವ ಮೂಲಕ ನಮ್ಮಲ್ಲಿರುವ ನಿಂದ್ಯವಾದ ದೋಷಗಳ ಫಲವನ್ನು ತೆಗೆದುಕೊಳ್ಳುತ್ತಾರೆ. ಹೊಗಳುವವರು ಹೊಗಳುವ ಮೂಲಕ ನಮ್ಮಲ್ಲಿರುವ ಒಳ್ಳೆಯತನದ ಪುಣ್ಯದ ಫಲದ ಪಾಲನ್ನು ಪಡೆಯುತ್ತಾರೆ. ಆದ್ದರಿಂದ ಸಾಧನೆಯ ಮಾರ್ಗದಲ್ಲಿ ಹೊಗಳುವವರಿಗಿಂತ ನಿಂದಕರು ಸಹಾಯಕರು. ಈ ಕಾರಣದಿಂದ ಶತ್ರು ಮಿತ್ರ ಎನ್ನುವ ಪರಿಭೇದ ಮಾಡಿಕೊಂಡು ಯಾರನ್ನೋ ಟೀಕೆ ಮಾಡುವುದಾಗಲಿ, ದ್ವೇಷ ಕಟ್ಟಿಕೊಳ್ಳುವುದಾಗಲಿ ಮಾಡಿಕೊಳ್ಳಬೇಡ. ದುರ್ಗುಣದಿಂದ ದೂರವಿರು. ಒಳ್ಳೆಯ ಗುಣವನ್ನು ಪ್ರೀತಿಸು. ಎಲ್ಲಿ ಒಳ್ಳೆಯತನವಿದೆಯೋ ಅವರ ಒಡನಾಟಮಾಡುಮೈತ್ರಿ); ದುಃಖವನ್ನು ಕಂಡು ಕರಗು(ಕರುಣ); ಇನ್ನೊಬ್ಬರ ಸಂತೋಷವನ್ನು ಕಂಡು ಸಂತೋಷಪಡು(ಮುದಿತ); ಕೆಟ್ಟತನದಿಂದ ದೂರವಿರು(ಉಪೇಕ್ಷ. ಮೂಲಭೂತವಾಗಿ ಶತ್ರು ಮಿತ್ರ ಎನ್ನುವ ವಿಭಾಗ ಬೇಡ. ಎಲ್ಲರಲ್ಲಿಯೂ ಭಗವಂತನನ್ನು ಕಾಣು. ಲೌಕಿಕ ಶತ್ರು-ಮಿತ್ರ ಭಾವನೆಯನ್ನು ಬಿಟ್ಟುಬಿಡು. ಸನ್ಮಾನ ಮಾಡಿದಾಗ ಉಬ್ಬಬೇಡ. ಅವಮಾನ ಮಾಡಿದಾಗ ಕುಗ್ಗಬೇಡ. ಮಾನ-ಅವಮಾನವನ್ನು ಗೆಲ್ಲು. ಇನ್ನೊಬ್ಬರು ಏನು ಹೇಳಿದರು ಎನ್ನುವುದು ಮುಖ್ಯವಲ್ಲ. ನಮ್ಮ ಅಂತರಾತ್ಮ ಏನು ಎನ್ನುವುದು ಮುಖ್ಯ. ಇನ್ನೊಬ್ಬರು ಹೊಗಳಿದಾಗ ನಮ್ಮಲ್ಲಿ ಇಲ್ಲದ ಗುಣ ನಮ್ಮನ್ನು ಬಂದು ಸೇರುವುದಿಲ್ಲ. ಅದೇ ರೀತಿ ಇನ್ನೊಬ್ಬರು ತೆಗಳಿದಾಗ ನಾವು ಕೆಳಗೆ ಹೋಗುವುದಿಲ್ಲ. ಹೊಗಳಿಕೆ ಬಗ್ಗೆ ನಾವು ಎಚ್ಚರದಿಂದಿರಬೇಕು. ಏಕೆಂದರೆ ಅದರಿಂದ ನಾವು ದಾರಿ ತಪ್ಪುವ ಸಾಧ್ಯತೆ ಹೆಚ್ಚು. ಅವಮಾನದಿಂದ ನಾವು ತಪ್ಪು ದಾರಿಯನ್ನು ಬಿಟ್ಟು ಸರಿ ದಾರಿಯಲ್ಲಿ ಸಾಗಿ ಎತ್ತರಕ್ಕೇರುವ ಸಾಧ್ಯತೆ ಇದೆ. ಸುಖ-ದುಃಖವನ್ನು ಸಮನಾಗಿ ಕಾಣು. ಯಾವುದೇ ವಸ್ತು ನಮಗೆ ಸುಖ-ದುಃಖವನ್ನು ಕೊಡುವುದಿಲ್ಲ. ಆ ವಸ್ತುವನ್ನು ನಾವು ನೋಡುವ ಭಾವನೆ ನಮಗೆ ಸುಖ-ದುಃಖವನ್ನು ಕೊಡುತ್ತದೆ. ಆದ್ದರಿಂದ ಶೀತ-ಉಷ್ಣದಂತೆ ಸುಖ- ದುಃಖವನ್ನು ಸಮನಾಗಿ ಕಾಣುವುದನ್ನು ರೂಢಿಸಿಕೋ. ನಮಗನಿಸುತ್ತದೆ ಇವೆಲ್ಲವೂ ಮಾನವ ಸಹಜಪ್ರವೃತ್ತಿ(!150700 ಎಂದು. ಆದರೆ ಇದು ಸಹಜ ಧರ್ಮವಲ್ಲ. ನಾವು ಅಂಟಿಸಿಕೊಳ್ಳುವುದರಿಂದ ನಮ್ಮಲ್ಲಿ ನಮಗೆ ಬೇಡವಾದ ಈ ಗುಣಗಳು ತುಂಬಿಕೊಳ್ಳುತ್ತವೆ. ಆದ್ದರಿಂದ ಹೊಗಳಿಕೆ ಮತ್ತು ತೆಗಳಿಕೆಗೆ ತಕ್ಷಣ ಪ್ರತಿಕ್ರಿಯಿಸಬೇಡ. ಮೌನಿಯಾಗು. ವಿಷಯದ ಬಗ್ಗೆ ಮನನ ಮಾಡು. ದುಡುಕಬೇಡ. ಎಷ್ಟು ಕಡಿಮೆ ಮಾತನಾಡಲು ಸಾಧ್ಯವೋ ಅಷ್ಟು ಕಡಿಮೆ ಮಾತನಾಡು. ಯೋಚಿಸಿ ಮಾತನಾಡು. ಏನಿದೆಯೋ ಅದನ್ನು ತೃಪ್ತಿಯಿಂದ ಅನುಭವಿಸು. ಸ್ಥಿರ-ಚರ ವಸ್ತುಗಳ(18176 own property) ಹಿಂದೆ ಹೋಗಬೇಡ. ಭಗವಂತ ಕೊಟ್ಟಿರುವುದರಲ್ಲಿ ಸಂತೋಷದಿಂದ ನಿಶ್ಚಿಂತೆಯಿಂದ ಬದುಕು. ಭಕ್ತಿಯಿಂದ ಭಗವಂತನಲ್ಲಿ ಶರಣಾದಾಗ ನಾವು ನಮ್ಮ ಸಾಧನೆಯ ಹಾದಿಯಲ್ಲಿ ಈ ಎತ್ತರಕ್ಕೇರಬಹುದು. “ಇಂತಹ ಗುಣವನ್ನು ಹೊಂದಿರುವ ಭಕ್ತ ನನಗೆ ಅಚ್ಚುಮೆಚ್ಚು' ಎನ್ನುತ್ತಾನೆ ಕೃಷ್ಣ.
Bibek Debroy (1955–2024)The Bhagavad Gita
(18) ‘Equal between friend and enemy, and respect and insult, equal between cold and warmth, happiness and unhappiness and without all attachment...’