13.15

सर्वेन्द्रियगुणाभासं सर्वेन्द्रियविवर्जितम् ।
असक्तं सर्वभृच्चैव निर्गुणं गुणभोक्तृ च ॥
sarvendriyaguṇābhāsaṃ sarvendriyavivarjitam |
asaktaṃ sarvabhṛccaiva nirguṇaṃ guṇabhoktṛ ca ||
Sri Madhvacharya (1238–1317)Bhagavad Gita Tatparya Nirnaya
13.2–13.19
मद्भावाय - मयि भावाय॥01-18॥
Swami Sivananda (1887–1963)Bhagavad Gita
15. Shining by the functions of all the senses, yet without the senses; unattached, yet supporting all; devoid of qualities, yet their experiencer,
Bannanje Govindacharya (1936–2020)Bhagavad Gita Pravachana
ಸರ್ವೇಂದ್ರಿಯ ಗುಣ ಆಭಾಸಂ ಸರ್ವೇಂದ್ರಿಯ ವಿವರ್ಜಿತಮ್‌ | ಅಸಕ್ತಮ್‌ ಸರ್ವಭೃತ್‌ ಚ ಏವ ನಿರ್ಗುಣಮ್‌ ಗುಣಭೋಕ್ರ ಚ -ಎಲ್ಲಾ ಇಂದ್ರಿಯಗಳನ್ನು, ಎಲ್ಲಾ ವಿಷಯಗಳನ್ನು ಬೆಳಗಿಸುತ್ತಿರುವುದು; ಅದಕ್ಕೆ ಭೌತಿಕವಾದ ಯಾವ ಇಂದ್ರಿಯಗಳೂ ಇಲ್ಲ. ಯಾವುದಕ್ಕೂ ಅಂಟದೆ ಎಲ್ಲವನ್ನು ಹೊತ್ತಿದೆ. ತ್ರಿಗುಣಗಳ ನಂಟಿಲ್ಲ; ಎಲ್ಲಾ ಸದ್ಗುಣಗಳ ನೆಲೆ. ಜಗತ್ತಿನಲ್ಲಿರುವ ಎಲ್ಲಾ ಜೀವಜಾತಗಳು ತಮ್ಮ ಇಂದ್ರಿಯಗಳಿಂದ ಇಂದ್ರಿಯ ವಿಷಯವನ್ನು ಗ್ರಹಿಸುವುದು ಭಗವಂತನಿಂದ. ಇಂತಹ ಭಗವಂತನಿಗೆ ಪಾಂಚಭೌತಿಕವಾದ, ನಶ್ವರವಾದ, ನಮ್ಮಂತೆ ಒಂದು ದಿನ ನಾಶವಾಗುವ, ತನ್ನ ಸ್ವರೂಪಕ್ಕಿಂತ ಭಿನ್ನವಾದ ಯಾವ ಇಂದ್ರಿಯಗಳೂ ಇಲ್ಲ. ಈ ಜಗತ್ತನ್ನು ಹೊತ್ತಿರುವ ತಂದೆ ಆ ಭಗವಂತ ಗಂಡು. ಜಗತ್ತನ್ನು ಹೆತ್ತ ಆತ ತಾಯಿಯೂ ಹೌದು. ಭೌತಿಕವಾಗಿ ಆತ ಗಂಡೂ ಅಲ್ಲ, ಹೆಣ್ಣೂ ಅಲ್ಲ. ಆತ ಸ್ವರೂಪಭೂತವಾಗಿ ಗಂಡೂ ಹೌದು-ಹೆಣ್ಣೂ ಹೌದು. ಭಗವಂತ ಎಲ್ಲರೊಳಗೆ ತುಂಬಿದ್ದಾನೆ ಆದರೆ ಆತ ಯಾವುದನ್ನೂ ಅಂಟಿಸಿಕೊಂಡಿಲ್ಲ.. ಆತ ಎಲ್ಲವನ್ನೂ ಹೊತ್ತಿದ್ದಾನೆ. ಆದರೆ. ಅದರ ಬಾಂಧವ್ಯದ ಬೆಸುಗೆ(೩18೦೧/367॥ ಆತನಿಗಿಲ್ಲ. ಭಗವಂತ ತ್ರಿಗುಣಾತೀತ. ಆತನಿಗೆ ತ್ರಿಗುಣಗಳ ನಂಟಿಲ್ಲ. ಆದರೆ ಆತ ಸದ್ಗುಣಗಳ ನೆಲೆ. ಅವನು ನಿರಾಕಾರನೂ ಹೌದು, ಸಾಕಾರನೂ ಹೌದು.
Bibek Debroy (1955–2024)The Bhagavad Gita
(14) ‘Manifest in the qualities of all the senses, but without any senses, alone, like the abode of everything, without qualities and the preserver of all qualities.’23