इच्छा द्वेषः सुखं दुःखं सङ्घातश्चेतना धृतिः ।
एतत्क्षेत्रं समासेन सविकारमुदाहृतम् ॥
icchā dveṣaḥ sukhaṃ duḥkhaṃ saṅghātaścetanā dhṛtiḥ |
etatkṣetraṃ samāsena savikāramudāhṛtam ||
Sri Madhvacharya (1238–1317)Bhagavad Gita Tatparya Nirnaya
चेतना - चित्तव्याप्तिः।
‘सङ्घातो देह उद्दिष्टश्चित्तव्याप्तिस्तु चेतना’ इति च॥06॥
13.2–13.19
मद्भावाय - मयि भावाय॥01-18॥
Swami Sivananda (1887–1963)Bhagavad Gita
7. Desire, hatred, pleasure, pain, the aggregate (the body), fortitude and intelligence—the
Field has thus been described briefly with its modifications.
Sri Vishwesha Tirtharu (1931–2019)Gitasaroddhara
13.2–13.7 · ಕ್ಷೇತ್ರಜ್ಞನು ಯಾರು
`ಕ್ಷೇತ್ರಜ್ಞನು ಯಾರು?
ಇನ್ನು ಮುಂದೆ ಗೀತೆಯಲ್ಲಿ ಕ್ಷೇತ್ರ-ಕ್ಷೇತ್ರಜ್ಞರನಿರೂವಣೆಯಿದೆ. ಈ ಪ್ರಕೃತಿ-
ಪ್ರಾಕೃತರೂಪವಾದ ಸಮಗ್ರ ಬ್ರಹ್ಮಾಂಡವೇ ಕ್ಷೇತ್ರವಾಗಿದೆ. ಭಗವಂತನಿಂದ
ಅಧಿಷ್ಠಿತವಾದ ಸ್ಥಾನವನ್ನೇ ಲೋಕದಲ್ಲಿ ಕ್ಷೇತ್ರವೆಂದು ಕರೆಯಲಾಗುವುದು.
ಇಡೀ ಬ್ರಹ್ಮಾಂಡವನ್ನೇ ಭಗವಂತನು ವ್ಯಾಪಿಸಿ ನೆಲೆಸಿರುವುದರಿಂದ ಅದೆಲ್ಲವೂ
ಕ್ಷೇತ್ರವಾಗಿದೆ. ಈ ವಿಶ್ವವು ಪರಮಾತ್ಮನಿಗೆ ಶರೀರದಂತಿದೆ. ಭಗವಂತನು ಜಗತ್ತಿಗೆ
ಆತ್ಮದಂತಿದ್ದಾನೆ. ಶರೀರದ ಪ್ರತಿಯೊಂದು ಕ್ರಿಯೆಗೂ ಆತ್ಮದ ಅಧಿಷ್ಠಾನವು
ಅವಶ್ಯವಿರುವಂತೆ ಪರಮಾತ್ಮನ ಅನುಪ್ರವೇಶದಿಂದಲೇ ವಿಶ್ವದ ಎಲ್ಲ ಪ್ರವೃತ್ತಿ
ವ್ಯವಹಾರಗಳು ನಡೆದಿವೆ. ಭಗವಂತನು ವಿಶ್ವಾತ್ಮನನಿಸಿದ್ದರೆ ವಿಶ್ವವು ಭಗವಂತನ
ಶರೀರವೆನಿಸಿದೆ.
ಇದಂ ಶರೀರಂ ಕೌಂತೇಯ ಕ್ಷೇತ್ರಮಿತ್ಯಭಿಧೀಯತೇ ।
ಕ್ಷೇತ್ರಜ್ಞಂ ಚಾಪಿ ಮಾಂ ವಿದ್ದಿ।
ಪರಬ್ರಹ್ಮನ ಶರೀರದಂತಿರುವ ವಿಶ್ವವೇ ಕ್ಷೇತ್ರವು. ಇದನ್ನು ಸರ್ವಾಂಶ
ಗಳಿಂದಲೂ ತಿಳಿದಿರುವ ಸರ್ವಜ್ಞನಾದ ಪರಮಾತ್ಮನೇ ಕ್ಷೇತ್ರಜ್ಞನೆಂದೂ ಆ
ಭಗವಂತನಸ್ವರೂಪವೇತಾನೆಂದೂ ಶ್ರೀಕೃಷ್ಣನು ಹೇಳಿರುವನು.
ನಮ್ಮ ದೇಹವೇಕ್ಷೇತ್ರವೆಂದೂ ಇದರ ಅಭಿಮಾನಿಯಾದ ಜೀವನುಕ್ಷೇತ್ರಜ್ಞ
ನಾಗಿದ್ದು ಅವನಿಗೂ ವರಬ್ರಹ್ಮನಿಗೂ ಅಭೇದವನ್ನು ಇಲ್ಲಿ ಹೇಳಲಾಗುತ್ತದೆ
ಎಂದೂ ಕೆಲವರ ನಿರೂಪಣೆಇದೆ. ಗೀತೆಯಲ್ಲಿಯೇಮಾಡಿರುವಕ್ಷೇತ್ರಶಬ್ದದ
ಅರ್ಥವ್ಯಾಪ್ತಿಯನ್ನು ವರಿಶೀಲಿಸಿದಲ್ಲಿ ನಮ್ಮ ದೇಹೇಂದ್ರಿಯಗಳನ್ನು ಮಾತ್ರ
ಅರ್ಡವಾಪಿಯನು ವರಿಶೀಲಿಸಿದಲಿ ನಮ ದೇಹೇಂದಿಯಗಳನು ಮಾ
ಇಲ್ಲಿಪರಿಗೃಹಿಸಲು ಶಕ್ಕವಾಗಲಾರದು.
ಮಹಾಭೂತಾನೃಹಂಕಾರೋ ಬುದ್ದಿರವೃಕ್ತಮೇವ ಚ|
ಏತತ್ ಕ್ಷೇತ್ರಂ ಸಮಾಸೇನ ಸವಿಕಾರಮುದಾಹೃತಮ್ ।
ಪ್ರಕೃತಿ, ಅಹಂಕಾರತತ್ತ್ವ ಪಂಚಭೂತಗಳು ಮುಂತಾದ ಪ್ರಕೃತಿ
ವಿಕಾರಾತ್ಮಕವಾದ ಈ ಚರಾಚರ ವಿಶ್ವವೆಲ್ಲವೂ ಕ್ಷೇತ್ರವೆಂಬ ವಿಸ್ತತ ಅರ್ಥದಲ್ಲಿ
ಕ್ಷೇತ್ರಶಬ್ದದ ವ್ಯಾಖ್ಯೆಯನ್ನು ಇಲ್ಲಿ ಮಾಡಲಾಗಿದೆ. ಜಗದಂತರ್ಯಾಮಿಯಾಗಿ
ಬ್ರಹ್ಮಾ ಡದ ಒಳಹೊರಗನ್ನೆ ಲ್ಲ. ಅರಿತಿರುವ ಪರಮಾತ್ಮ ನೇಕ್ಷೇತ್ರಜ್ಞನೆಂದೂ ತನ್ನ
ಶರೀರವನ್ನೇ ಸಮಗ್ರವಾಗಿ ಅರಿಯದ ಈ ಬಡಪಾಯಿ ಜೀವನು
ಕೇತ್ರಜ್ಞನಲ್ಲವೆಂದೂ ಇದರಿಂದಸುಸ್ಪಷ್ಟವಾಗುತದೆ. ಭಾಗವತದಲ್ಲಿಯೂ
ದ್ರ ದರಾ ದ್್ ಆಸೆಗೆ ಆ ಟ್ ಓಟ್ ಬ 0 ನ” ರ ಟದ
ಕೇತಜ ಆತಾ ಪರುಪಃ ಪರಾಣಃ
ಕ್ಷೇತ್ರಜ್ಞ ಆತ್ಮಾ ಪುರುಷಃ ಪುರಾಣಃ
ಸಾಕ್ಷಾತ್ ಸ್ವಯಂಜ್ಯೋತಿರಜಃ ಪರೇಶಃ |
ನಾರಾಯಣೋ ಭಗವಾನ್ ವಾಸುದೇವಃ
ಸ್ವಮಾಯಯಾಜತತ್ಮನ್ಯವಧೀಯಮಾನಃ ॥
ಜೀವನಿಂದ ಪ್ರತ್ಯೇಕವಾದ ಸರ್ವಜ್ಞನಾದ ಶ್ರೀನಾರಾಯಣನೇ ಕ್ಷೇತ್ರಜ್ಞ
ನೆಂದು ನಿಸಂದಿಗ್ನವಾಣಿಯಲ್ಲಿ ಹೇಳಿದೆ.
Bannanje Govindacharya (1936–2020)Bhagavad Gita Pravachana
13.6–13.7
ಮಹಾಭೂತಾನಿ[ಮಹಾನ್ ಭೂತಾನಿ1ಅಹಂಕಾರ। ಬುದ್ದಿ ಅವ್ಯಕ್ತಮ್ ಏವ ಚ।
ಇಂದ್ರಿಯಾಣಿ ದಷ ಏಕಮ್ ಚ ಪಂಚ ಚ ಇಂದ್ರಿಯ ಗೋಚರಾಃ ॥
ಇಚ್ಛಾ ದ್ವೇಷಃ ಸುಖಂ ದುಃಖಂ ಸಂಘಾತಃ ಚೇತನಾ ಧೃತಿಃ |
ಏತತ್ ಕ್ಷೇತ್ರಂ ಸಮಾಸೇನ ಸವಿಕಾರಮ್ ಉದಾಹೃತಮ್ -- ಮಣ್ಣು[ಪೃಥಿವಿ], ನೀರು[ವರುಣ], ಬೆಂಕಿ[ಅಗ್ನಿ],
ಗಾಳಿ[ವಾಯುಪುತ್ರ ಮರೀಚಿ], ಬಾನು[ಅವಕಾಶ ದೇವತೆ, ವಿಘ್ನನಾಶ-ವಿನಾಯಕ-ಗಣಪತಿ]-ಎಂಂಬ ಐದು
ಮಹಾಭೂತಗಳು. ಅಹಂಕಾರತತ್ವ [ಬ್ರಹ್ಮವಾಯು ಮತ್ತು ಶಿವ], ಬುದ್ಧಿತತ್ವ[ಪಾರ್ವತಿ], ಮೂಲಪ್ರಕೃತಿ[ಶ್ರೀ],
ಕಿವಿ[ಚಂದ್ರ1೦, ತೊಗಲು[ವಾಯುಪುತ್ರ ಮರುತ್], ಕಣ್ಣು[ಸೂರ್ಯ], ನಾಲಿಗೆ[ವರುಣ], ಮೂಗು[ಅಶ್ವಿಗಳು],
ಬಾಯಿ[ಅಗ್ನಿ], ಕೈಗಳು[ವಾಯುಪುತ್ರರಿಬ್ಬರು], ಕಾಲುಗಳು[ಇಂದ್ರ ಪುತ್ರರಾದ ಯಜ್ಞ(ಜಯತ) ಮತ್ತು ಶಂಭು],
ಪಾಯು[ಯಮ], ಉಪಸ್ಥ[ಲಿಂಗ ದೇವತೆ ಶಿವ-ಗಂಡಸರಲ್ಲಿ ; ಸ್ವಾಯಂಭುವಮನು-ಸ್ತ್ರೀಯರಲ್ಲಿ] ಹೀಗೆ ಹತ್ತು
ಇಂದ್ರಿಯಗಳು. ಹನ್ನೊಂದನೆಯದು ಮನಸ್ತತ್ವ[ಇಂದ್ರ, ಕಾಮ ಮತ್ತು ಅನಿರುದ್ಧ] ಮತ್ತು ಐದು ಜ್ಞಾನೇಂದ್ರಿಯ
ವಿಷಯಗಳು: ಶಬ್ದ, ಸ್ಪರ್ಶ ರೂಪ, ರಸ ಮತ್ತು ಗಂಧ[ರುದ್ರ ಪುತ್ರರಾದ ಪ್ರಾಣ, ಅಪಾನ, ವ್ಯಾನ, ಉದಾನ
ಮತ್ತು ಸಮಾನ]ಇವು ೨೪ ಅಡಕವಾಗಿ ಕ್ಷೇತ್ರಗಳು.
ಬಯಕೆ[ಶ್ರೀ ಮತ್ತು ಭಾರತಿ, ದ್ವೇಷ[ದ್ವಾಪರ-ಶಕುನಿ], ಸುಖ[ಮುಖ್ಯಪ್ರಾಣ-ವಾಯು-ಭೀಮ], ದುಃಖ[ಕಲಿ-
ದುರ್ಯೋಧನ], ಸಮಪ್ಟಿಶರೀರ[ಶರೀರದಲ್ಲಿರುವ ಅಭಿಮಾನಿ ಜೀವ; ಸಮಸ್ತ ಅಭಿಮಾನಿ ದೇವತೆಗಳು],
ನೆನಪಿನ ಹರಹು[ಶ್ರೀ], ಧೈರ್ಯ[ಸರಸ್ವತಿ ಮತ್ತು ಭಾರತಿ] ಇವು ಏಳು ವಿಶೇಷ ಕ್ರಿಯೆಗಳಾದ ವಿಕಾರಗಳು. ಹೀಗೆ
ವಿಕಾರಗಳ ಜೊತೆಗೆ ಕ್ಷೇತ್ರವನ್ನು ಅಡಕವಾಗಿ ಹೇಳಿದ್ದಾಯಿತು.
ಈ ಎರಡು ಶ್ಲೋಕಗಳಲ್ಲಿ ಕೃಷ್ಣ ಕ್ಷೇತ್ರ ಮತ್ತು ಕ್ಷೇತ್ರದ ವಿಕಾರವನ್ನು ವಿವರಿಸಿದ್ದಾನೆ. ಕ್ಷೇತ್ರ ಎನ್ನುವ ಅಖಂಡ
ಘಟಕದೊಳಗೆ ಇರುವ ಜಗತ್ತಿನ ಘಟಕಾಂಶಗಳನ್ನು ಕೃಷ್ಣ ಇಲ್ಲಿ ಸೂತ್ರ ರೂಪದಲ್ಲಿ ಅಡಕವಾಗಿ ವಿವರಿಸಿದ್ದಾನೆ.
ಮೊದಲನೆಯದಾಗಿ ಪಂಚಮಹಾಭೂತಗಳು. ಈ ಐದರಿಂದ ಈ ಪಿಂಡಾಂಡ ಮತ್ತು ಬ್ರಹ್ಮಾಂಡ
ನಿರ್ಮಾಣವಾಗಿದೆ. ಈ ಕಾರಣಕ್ಕಾಗಿ ಬ್ರಹ್ಮಾಂಡವನ್ನು 'ಪ್ರ-ಪಂಚ' ಎಂದು ಕರೆಯುತ್ತಾರೆ. ಈ ಪಂಚ
ಮಹಾಭೂತಗಳೇ ಪ್ರಪಂಚದ ಮೂಲದ್ರವ್ಯ. ಪಿಂಡಾಂಡದಲ್ಲಿ ಈ ಪಂಚ ಮಹಾಭೂತಗಳನ್ನು ಅನ್ನಮಯ ಮತ್ತು
ಪ್ರಾಣಮಯ ಎಂದು ಕರೆಯತ್ತಾರೆ. ಕಾಣುವ ಸ್ಥೂಲ ಶರೀರ ಪ್ರಥಿವಿ ಮತ್ತು ನೀರಿನ ಭಾಗದಿಂದಾಗಿದೆ. ಇಂತಹ
ಸ್ಥೂಲ ಶರೀರದೊಳಗೆ ಕಾಣದ ಪ್ರಾಣಮಯಕೋಶವಿದೆ. ದೇಹದ ಶಾಖ(ಬೆಂಕಿ), ಉಸಿರಾಟ(ಗಾಳಿ) ಮತ್ತು
ಒಳಗೆ ರಕ್ತ-ಗಾಳಿ ಸಂಚಾರದ ಅವಕಾಶ(ಆಕಾಶ). ಇದರಿಂದಾಚೆಗೆ ಮನಸ್ಸು ಮತ್ತು ಬುದ್ಧಿಯನ್ನೂಳಗೊಂಡ
ಮನೋಮಯಕೋಶ, ಅದರಿಂದಾಚೆಗೆ ವಿಜ್ಞಾನಮಯಕೋಶ-ಸ್ಮರಣಶಕ್ತಿ. ಆದ್ದರಿಂದ ಬುದ್ದಿಗೆ ಮೊದಲು
ಅಹಂಕಾರ ಮತ್ತು ಚಿತ್ತ. ಇಲ್ಲಿ ಅಹಂಕಾರ ಅಂದರೆ "ನನ್ನ ಅಸ್ತಿತ್ವದ OF) (awareness of self). ಈ
ಅಹಂಕಾರ ತತ್ವ ಪಿಂಡಾಂಡದಲ್ಲಿ ಚಿತ್ತ, ಬ್ರಹ್ಮಾಂಡದಲ್ಲಿ ಮಹತತ್ವ
ವ್ಯಕ್ತವಾಗುವ ಈ ಪ್ರಪಂಚದ ಮೂಲ ಅವ್ಯಕ್ತ. ಸೃಷ್ಟಿಯ ಮೂಲಸ್ಥಿತಿ-ಪ್ರಳಯಸಾಗರ. ಅಂದರೆ
ಪರಮಾಣುರೂಪದಲ್ಲಿ ಚದುರಿಕೊಂಡಿರುವ ಅವ್ಯಕ್ತ ಪ್ರಪಂಚ. ಇಂತಹ ಪ್ರಪಂಚದಲ್ಲಿ ಚತುರ್ಮುಖ
ಮಹತತ್ವವನ್ನು ಸೃಷ್ಟಿ ಮಾಡಿದ. ಪ್ರಳಯ ಸಾಗರದಲ್ಲಿ ತನ್ನ ಅಸ್ತಿತ್ವದ ಅರಿವಿಲ್ಲದೇ ಇದ್ದ ಜೀವಗಳಿಗೆ 'ನಾನು'
ಎನ್ನುವ ಅರಿವು ಬರುವುದೇ ಮಹತತ್ವದ ಸೃಷ್ಟಿ. ಚಿತ್ತದ ವ್ಯಾಪ್ತಿ ಚೇತನ. ಇದು ನಮ್ಮ ನೆನಪಿನ ವಿಸ್ತಾರ.
ಈ ಶರೀರದಲ್ಲಿ ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳಿವೆ. ಮತ್ತು ಹನ್ನೊಂದನೇ
ಇಂದ್ರಿಯವಾಗಿರುವುದು ಮನಸ್ಸು. ಕಿವಿಯಿಂದ ಶಬ್ದಗ್ರಹಣ, ಕಣ್ಣಿನಿಂದ ರೂಪ ಗ್ರಹಣ, ಮೂಗಿನಿಂದ ಗಂಧ
ಗ್ರಹಣ, ನಾಲಿಗೆಯಿಂದ ರಸ ಗ್ರಹಣ, ತೊಗಲಿನಿಂದ ಗಾಳಿಯ ಗ್ರಹಣ. ಅದೇ ರೀತಿ ಬಾಯಿ ಮಾತನಾಡಲು, ಕೈ
ಕೆಲಸ ಮಾಡಲು, ಕಾಲು ನಡೆಯಲು. ಈ ಎಂಟನ್ನು ಗ್ರಹ(೧90609/)ಗಳೆನ್ನುತ್ತಾರೆ. ನಂತರ ಪಾಯು ಮತ್ತು
ಉಪಸ್ಥ(ವಿಸರ್ಜನಾಂಗ ಮತ್ತು ಸಂತಾನವೃದ್ಧಿ)ಗಳು. ಈ ಎಲ್ಲವನ್ನು ಚಿಂತನೆಗೊಳಪಡಿಸುವ ಹನ್ನೊಂದನೇ
ಇಂದ್ರಿಯ ಮನಸ್ಸು. ಇವೆಲ್ಲವೂ ಕ್ಷೇತ್ರದ ಘಟಕಾಂಶಗಳು. ಸಮಪ್ಪಿಯಾಗಿ ಇದು ಕ್ಷೇತ್ರ. [ಇಲ್ಲಿ ಹೇಳಿರುವ
ಪ್ರತಿಯೊಂದು ಘಟಕದೊಂದಿಗೆ ಅದರ ಅಭಿಮಾನಿ ದೇವತೆಯರೂ ಸೇರಿದ್ದಾರೆ. ಅದನ್ನು ಮೇಲೆ ಸಂಕ್ಷೆಪ್ತವಾಗಿ
ಹೇಳಲಾಗಿದೆ]
ಈ ಜಗತ್ತು ಸದಾ ಬದಲಾಗುತ್ತಿರುತ್ತದೆ. ಅದಕ್ಕಾಗಿ ಜಗತ್ತನ್ನು ಅಶ್ವತ್ಥ ಎಂತಲೂ ಕರೆಯುತ್ತಾರೆ. ಅಶ್ವ ನಿರಂತರ
ಚಲನೆಯಲ್ಲಿರುವ ಪ್ರಾಣಿ. ಅದು ನಿಶ್ಚಲವಾಗಿ ಇರುವುದೇ ಇಲ್ಲ. ಈ ಪ್ರಪಂಚ ಕೂಡಾ ಹಾಗೆ ಸದಾ
ಚಲನೆಯಲ್ಲಿರುವುದರಿಂದ-ಅದನ್ನು ಪ್ರಾಚೀನರು ಅಶ್ವತ್ಥ ಎಂದು ಕರೆದರು. ನಮ್ಮ ದೇಹ ಅನ್ನುವುದು ಭೌತಿಕ
ವಿಕಾರ. ಅದರಲ್ಲಿ ಆಗತಕ್ಕಂತಹ ಮಾನಸಿಕ ಪ್ರಪಂಚದ ಎಲ್ಲಾ ತೊಳಲಾಟ ಮಾನಸಿಕ ವಿಕಾರ. ವಿಶೇಷವಾಗಿ
ನಮ್ಮ ಇಚ್ಛೆ(ಬಯಕೆ), (ಅ)ದ್ವೇಷ, ಸುಖ-ದುಃಖ, ನಮ್ಮ ನೆನಪಿನ ಹರವು (ಚೇತನ), (ಅ)ಧೃತಿ. ಇದು ಕೃಷ್ಣನ
ಕ್ಷೇತ್ರ ಮತ್ತು ಅದರ ವಿಕಾರದ ಸೂತ್ರ ರೂಪದ ವಿವರಣೆ. ಈ ವಿಚಾರವನ್ನು ಎಷ್ಟು ವಿಸ್ತಾರವಾಗಿ ಬೇಕಾದರೂ
ನಾವು ವಿಶ್ಲೇಷಿಸಬಹುದು. ಕೃಷ್ಣ ಇಲ್ಲಿ ಎಲ್ಲವನ್ನು ಅಡಕವಾಗಿ ವಿವರಿಸಿದ್ದಾನೆ.
ಜ್ಞಾನದ ದಾರಿಯಲ್ಲಿ ಸಾಗಬೇಕಿದ್ದರೆ ನಮ್ಮ ನಡತೆಯಲ್ಲಿ ನಾವು ಅನುಸರಿಸಬೇಕಾದ ಕೆಲವು ನೀತಿ
ಸಂಹಿತೆ(€೦೮ಆ of conduct) IVI. ಅದನ್ನು ನಾವು ಅನುಸರಿಸಬೇಕು. ನಾವು ನಮ್ಮ ಜೀವನದಲ್ಲಿ
ಅನುಸರಿಸಬೇಕಾದ ಇಪ್ಪತ್ತು ಗುಣ(615010179)ಗಳನ್ನು ಕೃಷ್ಣ ಮುಂದಿನ ಐದು ಶ್ಲೋಕಗಳಲ್ಲಿ ವಿವರಿಸುತ್ತಾನೆ. ಈ
ಗುಣಗಳಲ್ಲಿ ಪ್ರತಿಯೊಂದನ್ನು ನಮ್ಮ ಜೀವನದಲ್ಲಿ ಎಷ್ಟು ಹೆಚ್ಚು ಅಳವಡಿಸಿಕೊಂಡೆವೋ ಅಷ್ಟು ನಾವು ಜ್ಞಾನ
ದಾರಿಯಲ್ಲಿ ಸಾಗಬಹುದು. ಇಲ್ಲದಿದ್ದರೆ ನಾವು ಅಜ್ಞಾನದ ದಾರಿಯಲ್ಲಿ ಸಾಗಬೇಕಾಗುತ್ತದೆ ಎನ್ನುವ ಎಚ್ಚರವನ್ನು
ಕೂಡಾ ಕೃಷ್ಣ ಇಲ್ಲಿ ಕೊಟ್ಟಿದ್ದಾನೆ.
Bibek Debroy (1955–2024)The Bhagavad Gita
(6)
‘...Desire, hatred, happiness, unhappiness, combination,15 consciousness,
patience, these together are said to be the kshetra and its transformations.’