तमस्त्वज्ञानजं विद्धि मोहनं सर्वदेहिनाम् ।
प्रमादालस्यनिद्राभिस्तन्निबध्नाति भारत ॥
tamastvajñānajaṃ viddhi mohanaṃ sarvadehinām |
pramādālasyanidrābhistannibadhnāti bhārata ||
Swami Sivananda (1887–1963)Bhagavad Gita
8. But know thou Tamas to be born of ignorance, deluding all embodied beings; it binds fast,
O Arjuna, by heedlessness, sleep and indolence!
Bannanje Govindacharya (1936–2020)Bhagavad Gita Pravachana
ತಮಃ ತು ಅಜ್ಞಾನಜಮ್ ವಿದ್ಧಿ ಮೋಹನಂ ಸರ್ವದೇಹಿನಾಮ್ |
ಪ್ರಮಾದ ಆಲಸ್ಯ ನಿದ್ರಾಭಿಃ ತತ್ ನಿಬಧ್ನಾತಿ ಭಾರತ -- ಎಲ್ಲಾ ಜೀವಿಗಳಿಗೆ ಅಜ್ಞಾನ ನೀಡುವಂತಾದ್ದು,
ಭ್ರಮೆಗೊಳಿಸುವಂತಾದ್ದು- ತಮೋಗುಣ ಎಂದು ತಿಳಿ. ಭಾರತಾ, ಅದು ಮೈಮರೆವು, ಸೋಮಾರಿತನ ಮತ್ತು
ನಿದ್ದೆಗಳಿಂದ ಕಟ್ಟಿಹಾಕುತ್ತದೆ.
ಏನೂ ಗೊತ್ತಿಲ್ಲದೆ ಇರುವುದು ತಮಸ್ಸು. ತಮೋಗುಣದಿಂದ ಅಜ್ಞಾನ ಹುಟ್ಟುತ್ತದೆ. ಅದು ಎಷ್ಟು ಬಲಿಷ್ಟ ಎಂದರೆ-
ಅದು ನನ್ನಲ್ಲಿ ಜ್ಞಾನವಿಲ್ಲ, ನಾನು ಅಜ್ಞಾನಿ ಎನ್ನುವ ಜ್ಞಾನವೂ ಬಾರದಂತೆ ಮಾಡಬಲ್ಲದು. ಇದು ಅತ್ಯಂತ
ಭಯಾನಕ. ಆಂಗ್ಲ ಭಾಷೆಯಲ್ಲಿ ಹೇಳುವಂತೆ: “He who knows not, and knows not that he knows not, is
a fool”. ನನಗೆ ಏನೂ ಗೊತ್ತಿಲ್ಲ ಅನ್ನುವ ವಿಷಯ ಕೂಡಾ ನನಗೆ ಗೊತ್ತಿಲ್ಲದೇ ಇರುವುದು ತಮೋಗುಣದಿಂದ.
ಇದು ಸಮಸ್ತರನ್ನು ಭ್ರಮೆಯಲ್ಲಿ ಸಿಲುಕಿಹಾಕಿಸುವ ಗುಣ. ತಮಸ್ಸು ನಾವು ಬಿಡಿಸಿಕೊಳ್ಳಲಾಗದ ಮೂರು
ಕಟ್ಟಿನಿಂದ ನಮ್ಮನ್ನು ಬಂಧಿಸುತ್ತದೆ. ಅವುಗಳೆಂದರೆ ನಿದ್ದೆ, ಆಲಸ್ಯ ಮತ್ತು ಪ್ರಮಾದ. ಎಚ್ಚರದಲ್ಲೂ
ಎಚ್ಚರವಿಲ್ಲದೇ ಬದುಕುವುದು ಪ್ರಮಾದ. ತಪ್ಪು ಮಾಡುವುದು ತಪ್ಪಲ್ಲ, ಆದರೆ ತಪ್ಪು ಮಾಡಿಯೂ ತಿದ್ದಿಕೊಳ್ಳದೇ
ಇರುವುದು ಪ್ರಮಾದ. ಇದಕ್ಕೆಲ್ಲಾ ಕಾರಣ ನಮ್ಮಲ್ಲಿರುವ ತಮೋಗುಣ.
Bibek Debroy (1955–2024)The Bhagavad Gita
(8)
‘O descendant of Bharata!18 Know tamas to be born from ignorance and the
source of delusion in every being. That19 binds firmly through error,20 sloth
and sleep.’21