द्वाविमौ पुरुषौ लोके क्षरश्चाक्षर एव च ।
क्षरः सर्वाणि भूतानि कूटस्थोऽक्षर उच्यते ॥
dvāvimau puruṣau loke kṣaraścākṣara eva ca |
kṣaraḥ sarvāṇi bhūtāni kūṭastho'kṣara ucyate ||
Sri Madhvacharya (1238–1317)Bhagavad Gita Tatparya Nirnaya
15.16–15.17
ब्रह्मरुद्रादयः सर्वे शरीरक्षरणात् क्षराः।
श्रीरक्षरात्मेत्युदिता नित्यचिद्देहका यतः।
चेतनाचेतनस्यास्य राशेः संस्थापकत्वतः।
कूटस्थ आत्मा सा ज्ञेया परमात्मा हरिः स्वयम्॥16,17॥
Swami Sivananda (1887–1963)Bhagavad Gita
16. Two Purushas there are in this world, the perishable and the imperishable. All beings are
the perishable, and the Kutastha is called the imperishable.
Sri Vishwesha Tirtharu (1931–2019)Gitasaroddhara
15.16–15.18 · ಪುರುಷೋತ್ತಮಯೋಗ
ಪುರುಷೋತ್ತಮಯೋಗ
ಸಮಗ್ರ ಪ್ರವಂಚವನ್ನು ಜೀವ, ಜಡ, ಪರಮಾತ್ಮರೆಂದು ವಿಭಜಿಸಿದಂತೆ
ಜೀವ-ಪರಮಾತ್ಮರ ಅನ್ಯೋನ್ಯ ಸಂಬಂಧದ ಸ್ಪಷ್ಟವಾದ ತಿಳುವಳಿಕೆಯು
ಮೂಡುವ ಉದ್ದೇಶದಿಂದ ಚೇತನವರ್ಗದ ವಿಭಾಗವನ್ನು ಹದಿನೈದನೆಯ
ಅಧ್ಯಾಯದಕೊನೆಯಲ್ಲಿ ಮಾಡಲಾಗಿದೆ.
ಕ್ಷರಪುರುಷ್ಕ ಅಕ್ಷರಪುರುಷ ಮತ್ತು ಪುರುಷೋತ್ತಮರೆಂದು ಚೇತನರು
ಮೂರುವಿಧ. ಈ ಪ್ರಾಕೃತವಾದ ಭೌತಿಕತರೀರವನ್ನು ಹೊಂದಿ ಸಂಸಾರದ ಜನನ
ಮರಣ ಚಕ್ರದಲ್ಲಿ ತಿರುಗುವಸಕಲ ಜೀವರೂ ಕ್ಚರಪುರುಷರು. ಅನಾದಿಯಾದ
ಜಡಪ್ರಕೃತಿಯ ಅಭಿಮಾನಿನಿಯಾಗಿ ಪರಮಾತ್ಮನ ಜಗದ್ವ್ವಾಪಾರದಲ್ಲಿ ಪ್ರಧಾನ
ಸಹಕಾರಿಣಿಯಾದ ಅಪ್ರಾಕೃತ ಚೈತನ್ಯಾತ್ಮಕ ಶರೀರವುಳ್ಳ ಆಕಾಶದಂತೆ
ನಿರ್ವಿಕಾರಳಾದ ಜಗನ್ಮಾತೆಯೇ ಅಕ್ಷರಪುರುಷ, ಇವರೆಲ್ಲರಿಗೂ ಅಧಿಪತಿಯಾದ
ಪರಮಾತ್ಮನೇ ಪುರುಷೋತ್ತ ಮನು. ಚೇತನರ ವಿಭಾಗವನ್ನು ನಾವು ಈ ರೀತಿ
ತಿಳಿದುಕೊಳ್ಳಬೇಕು.
ದ್ವಾವಿಮೌ ಪುರುಷೌ ಲೋಕೇ ಕ್ಚರಶ್ಪಾಕ್ಷರ ಏವ ಚ॥
ಕ್ದರಃ ಸರ್ವಾಣಿ ಭೂತಾನಿ ಕೂಟಸ್ಕೋನರ ಉಚ್ಛತೇ ॥
ಉತ್ತಮಃ ಪುರುಷಸ್ತ್ವನ್ಯಃ ಪರಮಾತ್ಮೇತ್ಯುದಾಹೃತಃ ॥
ವರಮಾತೃ, ಚಿತ್ಪ್ರಕೃತಿ ಇವರಿಬ್ಬರು ಜೀವವರ್ಗದ ತಂದೆ-ತಾಯಿ
ಗಳಾಗಿದ್ದು ಜೀವವರ್ಗವೆಲ್ಲ ಅವರ ಪ್ರತ್ರಪರಿವಾರವೇಆಗಿದೆ.
ಸ ತ್ಸೈಲೋಕ್ಕ ಕುಟುಂಬಹಾಲನಪರಃ । ದ ಮಂಗಲಾಷ್ಠಕ
ಇಡೀ ಜಗತ್ತು ಪುರುಷೋತ್ತಮನ ಭವ್ಯಕುಟುಂಬವಾಗಿದೆ. ನಾವೆಲ್ಲರೂ ಈ
ಕುಟುಂಬದಘಟಕರು. ಇದರಪೋಷಣೆ-ಪಾಲನೆಗಳನ್ನು ಮಾಡುವ ಪುರುಷೋ
ತ್ರಮನು ವಿಶ್ವದ ಅಧಿದೇವತೆಯು. ಅವನ ಈ ಪ್ರಭುತ್ವವನ್ನು ಒಪ್ಪುವವರೆಲ್ಲರೂ
ಪರಸ್ಪರಸಹೋದರರೆಂಬ ಭಾವನೆಯಿಂದ ನಾವು ವರ್ತಿಸಬೇಕು.
ಕ್ಷರ-ಅಕ್ಷರರೆಂದರೆ ಜಡ ಜೀವರೆಂದು ಕೆಲವರ ಅಭಿಪ್ರಾಯವಿದೆ. ಈ
ಶ್ಲೋಕದಲ್ಲಿರುವ ವುರುಷರಬ್ಧವನ್ನು ಗಮನಿಸಿದಾಗ ಇದು ಜೇತನ ವರ್ಗದ
ವಿಭಾಗವೆಂದೇನಮಗೆ ಅನಿಸುತ್ತದೆ. ಏನೇ ಇರಲಿ, ಸಕಲ ಚೇತನರಿಂದಾಗಲಿ,
ಜೀವ ಜಡಗಳಿಂದಾಗಲಿ ಭಿನ್ನನೂ ಉತ್ತಮನೂ ಆದ ಮಹಾನ್ ಆತ್ಮನೇ
ಭಗವಂತನೆಂಬುದೂ ಅವನೇ ಶ್ರೀಕೃಷ್ಣನೆಂಬುದೂ ಇಲ್ಲಿ ಸ್ಪಷ್ಟವಿದೆ.
ಉತ್ತಮಃ ಪುರುಷಸ್ತ್ವನ್ಯಃ
ಅತೋಸಸ್ಕಿ ಲೋಕೇ ವೇದೇಚ
ಪ್ರಥಿತಃ ಪುರುಷೋತ್ತಮಃ |
ಈ ಶ್ಲೋಕಗಳು, ಸಕಲ ಚೇತನರಿಗಿಂತಲೂ ಭಗವಂತನಿಗೆ ಪ್ರತ್ಯೇಕವಾದ
ಅಸ್ತಿತ್ವವನ್ನು ಪ್ರತಿಪಾದಿಸುತ್ತಿವೆಯಲ್ಲದೆ, ಸರ್ವರೋಕಧಾರಕನೂ ಸರ್ವೋ
ತ್ತಮನೂ ಆದ ಆತನೇ ಶ್ರೀಕೃಷ್ಣನೆಂದೂ ಸ್ಪಷ್ಟಪಡಿಸುತ್ತವೆ. ಶ್ರೀಕೃಷ್ಣನು ಜಡ
ಡೇವರಿಂದ ಅತೀತನಾದ ಪರಬ್ರಹ್ಮನಲ್ಲವೆಂದೂ ಕೆಲವರ ವಾದವಿದೆ.
ಪರಬ್ರಹ್ಮನು ನಿರ್ಗುಣನಾಗಿರುವುದರಿಂದ ಗುಣಶಾಲಿಯಾದ ಕೃಷ್ಣನು
ಪರಬ್ರಹ್ಮನಾಗಲಾರನು. ಪರಬ್ರಹ್ಮನಮಾಯೆಯ ಶಿಶುವೇ ೃತ್ಯನೆಂದು ಇವರ.
ಆಶಯವಾಗಿದೆ. ಈ ಜಡ-ಜೀವರನ್ನು ಮೀರಿನಿಂತಿರುವ ಪುರುಷೋತ್ತಮನೇ
ಶ್ರೀಕೃಷ್ಣನೆಂದು ಸಾರುವ ಈ ಭಾಗವು ಮೇಲಿನ ಭ್ರಮೆಯನ್ನು ಪೂರ್ಣವಾಗಿ
ನಿರಸನ ಮಾಡಿದೆ. ಪುರುಷೋತ್ತಮ ತತ್ತ್ವವನ್ನು ಸಾರಿಹೇಳುವ ಈ ಭಾಗವು
ಗೀತೆಯ ಸಾರಸಂದೇಶವಾಗಿದೆ. ಶ್ರೀಮಧ್ವಾಚಾರ್ಯರಿಗೆ ಬಹಳ ಪ್ರಿಯವಾದ
ಭಾಗವಿದು. ಇದನ್ನು ಆಧರಿಸಿಯೇ ಭಗವಂತನ ಸರ್ವೋತ್ತಮತ್ತ್ವದ
ಸಂದೇಶವನ್ನು ಅವರು ಘೋಷಿಸಿದ್ದಾರೆ. ಜೀವ-ಪರಮಾತ್ಮರ ಸಂಬಂಧವನ್ನೂ
ಜೀವ-ಜಗತ್ತುಗಳನ್ನು ನಿಯಂತ್ರಿಸುವ ಪರಮಾತ್ಮನ ಮಹಾಶಕ್ತಿಯನ್ನೂ
ನಿಸಂದಿಗೃಭಾಷೆಯಲ್ಲಿ ಇದು ಬೋಧಿಸಿದೆ. ಶ್ರೀಶಂಕರಾಚಾರ್ಯರೂ ಈ
ಭಾಗವನ್ನು ಸಕಲ ಶಾಸ್ತ್ರದ ಸಾರವೆಂದು ಘೋಷಿಸಿರುವರು.
ಸರ್ವೋ ಹಿ ಗೀತಾಶಾಸ್ತ್ರಾರ್ಥೋಂಸ್ಥಿನ್ನಧ್ಯಾಯೇ।
ಸಮಾಸೇನೋಕ್ತಃ 1 ನ ಕೇವಲಂ ಗೀತಾಶಾಸ್ತ್ರಾರ್ಥ ಏವ,
ಕಿಂತು ಸರ್ವಶ್ಚ ವೇದಾರ್ಥ ಇಹ ಪರಿಸಮಾಪ್ರಃ ॥
ಆದುದರಿಂದ ಗೀತೆಯ ಹೃದಯವೆನಿಸಿದ ವುರುಷೋತ್ತಮಯೋಗದ
ಸಂದೇಶದಂತೆ ಈ ಜಗತ್ತನ್ನು ಶ್ರೀಹರಿಯ .ಅಧಿರಾಜ್ಯವೆಂದು ಭಾವಿಸಿ, ಆ
ಸಾರ್ವಭೌಮ ದೇವತೆಯನ್ನು ಮರೆಯದೇ ಅವನ ನಿಷ್ಠ ಪ್ರಜೆಗಳಾಗಿ ನಮ್ಮ
ಜೀವನವನ್ನು ರೂಪಿಸಲು ಯತ್ನಿಸುವುದು ಸಂಶಯಾತೀತವಾದ ನಿರಾಬಾಧ
ವಾದಮಾರ್ಗವಾಗಿದೆ.
Bannanje Govindacharya (1936–2020)Bhagavad Gita Pravachana
ದ್ವಾವಿಮೌ ಪುರುಷೌ ಲೋಕೇ ಕ್ಷರಃ ಚ ಅಕ್ಷರಃ ಏವ ಚ |
80: ಸರ್ವಾಣಿ ಭೂತಾನಿ ಕೂಟಸ್ಗಃ ಅಕ್ಷರಃ ಉಚ್ಯತೇ-ಲೋಕದಲ್ಲಿ ಈ ಎರಡು ಬಗೆಯ ಪುರುಷರು: ಕ್ಷರಪುರುಷ
ಮತ್ತು ಅಕ್ಷರಪುರುಷ. ಬ್ರಹ್ಮಾದಿ ಸಮಸ್ತ ಜೀವರೂ ಕ್ಷರಪುರುಷರು. ಈ ಚರಾಚರದ ಕೂಟವನ್ನು ಕೂಡಿಸಿಟ್ಟ ಚಿತ್
ಪ್ರಕೃತಿಯೇ ಅಕ್ಷರ ಪುರುಷಳೆನ್ನಿಸಿದ್ದಾಳೆ.
ಈ ಚೇತನಾ ಪ್ರಪಂಚದಲ್ಲಿ ಎರಡು ಬಗೆಯ ಪುರುಷರಿದ್ದಾರೆ. ಒಂದು ಕ್ಷರಪುರುಷ ಮತ್ತು ಇನ್ನೊಂದು
ಅಕ್ಷರಪುರುಷ. [ಇಲ್ಲಿ ಪುರುಷ ಎಂದರೆ ಗಂಡಸು ಎನ್ನುವ ಅರ್ಥವಲ್ಲ. ಈ ಬಗ್ಗೆ ವಿಶೇಷವಾಗಿ ಹಿಂದೆ ಅನೇಕ ಬಾರಿ
ಚರ್ಚಿಸಿದ್ದೇವೆ]. ಒಂದು ದಿನ ಬಿದ್ದುಹೋಗುವ ಶರೀರ ಉಳ್ಳವರು ಕ್ಷರಪುರುಷರು. ಬ್ರಹ್ಮಾದಿ ಸಮಸ್ತ ಜೀವರೂ
ಕೂಡಾ ಕ್ಷರಪುರುಷರು. ಬ್ರಹ್ಮಾದಿ ಸಮಸ್ತ ದೇವತೆಗಳೂ ಕೂಡಾ ಮೋಕ್ಷವನ್ನು ಸೇರುವಾಗ ತಮ್ಮ ಶರೀರ
ಸಮೇತರಾಗಿ ಹೋಗುವಂತಿಲ್ಲ. ಚತುರ್ಮುಖ ಬ್ರಹ್ಮನ ಆಯುಸ್ಸು ಒಂದು ಕಲ್ಪ(೩೧,೧೦೪ ಸಾವಿರ ಕೋಟಿ
ಮಾನವ ವರ್ಷ). ಆ ನಂತರ ಆತನ ಶರೀರ ಕೂಡಾ ಬಸ್ಕವಾಗುತ್ತದೆ. ಇದನ್ನು ಈಶೋಪನಿಷತ್ತಿನಲ್ಲಿ ಹೀಗೆ
ವಿವರಿಸಿದ್ದಾರೆ: “ವಾಯುರನಿಲಮ್ ಅಮೃತಮ್ ಅಥೇದಂ ಭಸ್ಮಾಂತಂ ಶರೀರಂ || ०९॥". “ಭಗವಂತನಿಗೆ
ಅಧಿಷ್ಠಾನವಾಗಿ ನಿಂತಿರುವ ಪ್ರಾಣ ದೇವರು ಅಮೃತರು. ಆದರೂ ಕೂಡಾ, ಒಂದು ದಿನ ಅವರ ದೇಹ
ಬಸ್ಮವಾಗಲೇ ಬೇಕು” ಎಂದು. ಹೀಗೆ ಸಮಸ್ತ ದೇವತೆಗಳು, ಜೀವಜಾತಗಳು-ಕ್ಷರಪುರುಷರು.
ನಾಶವಿಲ್ಲದ ಜ್ಞಾನಾನಂದಮಯ ಸ್ವರೂಪಭೂತವಾದ ದೇಹವುಳ್ಳ ಶ್ರೀಲಕ್ಷ್ಮಿ ಅಕ್ಷರಪುರುಷಳು. ಸಮಸ್ತ
ಕ್ಷರಪುರುಷರೂ ಮೋಕ್ಷದಲ್ಲಿ ಅಕ್ಷರರಾಗುತ್ತಾರೆ. ಆದರೆ ಲಕ್ಷ್ಮಿ ಸದಾ ಅಕ್ಷರಳು. ಇಲ್ಲಿ ಲಕ್ಷ್ಮಿಯನ್ನು ಕೂಟಸ್ಥಳು
ಎಂದು ವರ್ಣಿಸಿದ್ದಾರೆ. ಕೂಟ ಎಂದರೆ “ಕೂಡುವುದು'. ಜೀವ ಮತ್ತು ಶರೀರದ ಕೂಡುವಿಕೆಗೆ ಕಾರಣಳಾದವಳು
ತಾಯಿ-ಶ್ರೀಲಕ್ಷ್ಮಿ. ಸದಾ ನಿರ್ಲಿಪ್ತಳಾಗಿ, ಯಾವುದೇ ಲೇಪವಿಲ್ಲದೆ, ಪ್ರಪಂಚವನ್ನು ವ್ಯವಸ್ಥೆಗೊಳಿಸಿದ ಶಕ್ತಿ -
ಜಗನ್ಮಾತೆ ಶ್ರೀಲಕ್ಷ್ಮಿ. ಇವಳು ಅಕ್ಷರಪುರುಷಳು.
Bibek Debroy (1955–2024)The Bhagavad Gita
(16)
‘The destructible and the indestructible, these two purushas exist in the
world. All these beings are destructible.24 The fixed is known as the
indestructible.25