15.3

न रूपमस्येह तथोपलभ्यते
नान्तो न चादिर्न च सम्प्रतिष्ठा ।
अश्वत्थमेनं सुविरूढमूलं
असङ्गशस्त्रेण दृढेन छित्त्वा ॥
na rūpamasyeha tathopalabhyate
nānto na cādirna ca sampratiṣṭhā |
aśvatthamenaṃ suvirūḍhamūlaṃ
asaṅgaśastreṇa dṛḍhena chittvā ||
Sri Madhvacharya (1238–1317)Bhagavad Gita Tatparya Nirnaya
15.3–15.4
जगद्वृक्षोऽयमश्वत्थो ह्यश्ववच्चञ्चलात्मकः। अव्ययोऽयं प्रवाहेण स्वसक्तज्ञानहेतिना॥ विष्णोः सम्यक् पृथग् दृष्टिनामच्छेदनभाक् सदा। अव्यक्तादिसमस्तं तु नेति नेत्यादिवाक्यतः॥ भोधेनैव पृथग् विष्णोः कृत्वा मृग्यः स केशव। तमेवाद्यं प्रपद्येत यदंशाभासको ह्ययम्॥ जीवराशिः समस्तोऽपि ब्रह्मरुद्रेन्द्रपूर्वकः।।03,04॥
Swami Sivananda (1887–1963)Bhagavad Gita
3. Its form is not perceived here as such, neither its end nor its origin, nor its foundation nor resting place; having cut asunder this firmly-rooted peepul tree with the strong axe of non-attachment,
Bannanje Govindacharya (1936–2020)Bhagavad Gita Pravachana
ನ ರೂಪಮಸ್ಯೇಹ ತಥೋಪಲಭ್ಯತೇ ನಾಂತೋ ನಚಾತದಿರ್ನ ಚ ಸಂಪ್ರತಿಷ್ಠಾ | ಅಶ್ವತ್ಥಮೇನಂ ಸುವಿರೂಢಮೂಲಂ ಅಸಂಗಶಸ್ತ್ರೇಣ ದೃಢೇನ ಛಿತ್ತ್ವಾ ॥೩॥
15.3–15.4
ನ ರೂಪಮ್‌ ಅಸ್ಯ ಇಹ ತಥಾ ಉಪಲಭ್ಯತೇ ನ ಅಂತಃ ನ ಚ ಆದಿಃ ನ ಚ ಸಂಪ್ರತಿಷ್ಠಾ | ಅಶ್ವತ್ಥಮ್‌ ಏನಮ್‌ ಸು ವಿರೂಢ ಮೂಲಮ್‌ ಅಸಂಗಶಸ್ತ್ರೇಣ ದೃಢೇನ ಛಿತ್ತ್ವಾ Il ತತಃ ಪದಂ ತತ್‌ ಪರಿಮಾರ್ಗಿತವ್ಯಮ್‌ ಯಸ್ಮಿನ್‌ ಗತಾಃ ನ ನಿವರ್ತಂತಿ ಭೂಯಃ | ತಮ್‌ ಏವ ಚ ಆದ್ಯಮ್‌ ಪುರುಷಮ್‌ ಪ್ರಪದ್ಯೇ ಯತಃ ಪ್ರವೃತ್ತಿಃ ಪ್ರಸೃತಾ ಪುರಾಣೀ --ಇದರ ಇರುವು ಇದ್ದ ಹಾಗೆ ಕಾಣಿಸುವುದಿಲ್ಲ. ಇದರ ಕೊನೆ ಕಾಣದು; ಬುಡ ಕಾಣದು; ನೆಲೆ ಕೂಡಾ. ಬಲವಾಗಿ ಬೇರೂರಿದ ಈ ಅರಳಿಯನ್ನು ಅನಾಸಕ್ತಿಯೆಂಬ ಹರಿತವಾದ ಕತ್ತಿಯಿಂದ ತರಿದು, ಅನಂತರ ಆ ಪರತತ್ವವನ್ನು ಅರಸಬೇಕು. ಅವನನ್ನು ಸೇರಿದವರು ಮತ್ತೆ ಮರಳುವುದಿಲ್ಲ. ಅವನಿಂದಲೇ ಈ ಪುರಾತನವಾದ ಪಯಣ ಪ್ರಾರಂಭವಾಯಿತು. ಎಲ್ಲದರ ಮೊದಲಿರುವ ಆ ಪರಮ ಪುರುಷನಿಗೇ ಶರಣಾಗಬೇಕು. ವಿಶ್ವವನ್ನು ಇಲ್ಲಿ ವಿವರಿಸಿದಷ್ಟು ಸ್ಪಷ್ಟವಾಗಿ ಎಲ್ಲಿಯೂ ವರ್ಣಿಸಿಲ್ಲ. ಇತರೆಡೆ ಸ್ವಲ್ಪ ಸ್ವಲ್ಪ ವಿವರಣೆ ಕಾಣಬಹುದು. ಆದರೆ ಕೃಷ್ಣ ಇಲ್ಲಿ ಪೂರ್ಣ ವಿವರಣೆ ಕೊಟ್ಟ. ಇಷ್ಟು ವಿವರಿಸಿದ ಮೇಲೆ ಕೃಷ್ಣ ಒಂದು ಎಚ್ಚರವನ್ನು ಕೊಡುತ್ತಾನೆ. ಕೃಷ್ಣ ಹೇಳುತ್ತಾನೆ: “ಈ ಪ್ರಪಂಚದಲ್ಲೇ ಇದ್ದು ಪ್ರಪಂಚವನ್ನು ನೋಡಿದರೆ ನಾನು ವರ್ಣಿಸಿದ ಅಖಂಡ ದರ್ಶನ ಸಾಧ್ಯವಿಲ್ಲ” ಎಂದು. ನಮಗೆ ಯಾವ ವಸ್ತುವನ್ನು ಕೂಡಾ ಪರಿಪೂರ್ಣವಾಗಿ ಸಮಗ್ರವಾಗಿ ತಿಳಿದುಕೊಳ್ಳಲು ಆಗುವುದೇ ಇಲ್ಲ. ಏಕೆಂದರೆ ಇಡೀ ವಿಶ್ವವನ್ನು ತಿಳಿಯದೆ ವಿಶ್ವದ ಒಂದು ಚಿಕ್ಕ ಕಣ ಅರ್ಥವಾಗದು. ಸಮುದ್ರದ ತೀರದಲ್ಲಿನ ಒಂದು ಕಪ್ಪೆ ಸಮುದ್ರದ ಆಳ-ಅಗಲ ಮತ್ತು ಸಮುದ್ರದ ಅಗಾಧತೆಯನ್ನು ಹೇಗೆ ತಿಳಿಯಲಾರದೋ, ಹಾಗೇ ನಾವು ಈ ಪ್ರಪಂಚವನ್ನು ಪೂರ್ಣ ತಿಳಿಯಲು ಸಾಧ್ಯವಿಲ್ಲ. ಈ ಪ್ರಪಂಚ ಹೇಗೆ ಸೃಷ್ಟಿಯಾಯಿತು? ಅದು ಪ್ರಳಯ ಕಾಲದಲ್ಲಿ ನಾಶವಾಗಿ ಎಲ್ಲಿಗೆ ಹೋಗುತ್ತದೆ? ಈ ಆಕಾಶದಲ್ಲಿ ಎಲ್ಲಾ ಗ್ರಹ ಗೋಲಗಳು ನಿರಾಧಾರವಾಗಿ ಹೇಗೆ ನಿಂತಿವೆ? ನಾವು ಈ ರೀತಿ ಪ್ರಶ್ನೆ ಹಾಕುತ್ತಾ ಹೋದರೆ ಇದಕ್ಕೆ ನಮ್ಮಲ್ಲಿ ಉತ್ತರವಿಲ್ಲ. ವಿಜ್ಞಾನದಲ್ಲಿ ಕೂಡಾ ಈ ಪ್ರಶ್ನೆಗೆ ಸ್ಪಷ್ಟ ಉತ್ತರವಿಲ್ಲ. ಏಕೆಂದರೆ ವಿಜ್ಞಾನ ನಿಂತಿರುವುದು ಕೇವಲ ಕಲ್ಪನೆಯ ಗೋಪುರದ ಮೇಲೆ. ಖುಗ್ವೇದದಲ್ಲಿ ಪ್ರಳಯ ಕಾಲದ ಸ್ಥಿತಿಯನ್ನು ವಿವರಿಸುತ್ತಾ ಹೇಳುತ್ತಾರೆ: “ನಾಸದಾಸೀನ್ನೋ$ಸದಾಸೀತ್ರದಾನೀಂ ನಾಸೀದ್ರಜೋ ನೋ ವ್ಯೋಮಾ....||೧೦.೧೨ € -0|| : ಅಂದರೆ ಕಣ್ಣಿಗೆ ಕಾಣುವಂತಹದ್ದೂ ಇಲ್ಲ; ಕಣ್ಣಿಗೆ ಕಾಣದ್ದೂ ಇಲ್ಲ; ಈ ಲೋಕಗಳೇ ಪ್ರಳಯಕಾಲದಲ್ಲಿ ಇಲ್ಲ ಎಂದು. ಹಾಗಾದರೆ ಏನೂ ಇಲ್ಲದೆ. ಈ ಪ್ರಪಂಚ ಸೃಷ್ಟಿಯಾಯಿತೇ? ಛಾಂದೋಗ್ಯ ಉಪನಿಷತ್ತಿನಲ್ಲಿ 'ಏನೂ ಇಲ್ಲದೆ ಎಲ್ಲವೂ ಹುಟ್ಟಿತು' ಅನ್ನುವುದನ್ನು ಖಂಡನೆ ಮಾಡುತ್ತಾ ಹೇಳುತ್ತಾರೆ: “ ಕಥಮಸತಃ ಸಜ್ಜಾಯೇತಃ...|೬.೨.೨॥" ಎಂದು. ಪ್ರಳಯ ಕಾಲದಲ್ಲಿ ಭಗವಂತ ಪ್ರಳಯ ಸಮುದ್ರದಲ್ಲಿ ಮಲಗಿರುತ್ತಾನೆ ಎನ್ನುವುದನ್ನು ನಾವೆಲ್ಲರೂ ಕೇಳಿದ್ದೇವೆ. ಈ ಲೋಕವೇ ಇಲ್ಲದಿರುವಾಗ, ಯಾವ ಸಮುದ್ರ? ಯಾವ ನೀರು? ಇದೆಲ್ಲವನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ಸಂಕ್ಷಿಪ್ತವಾಗಿ ಹೇಳಬೇಕೆಂದರೆ: ಪ್ರಳಯ ಕಾಲದಲ್ಲಿ ಎಲ್ಲವೂ ಸಿಡಿದು ಪರಮಾಣುವಿನ ರೂಪವನ್ನು ಪಡೆಯುತ್ತವೆ. ಇದೇ ಪ್ರಳಯ ಸಮುದ್ರ. ಈ ಕಾಲದಲ್ಲಿ ಎಲ್ಲಾ ಜೀವ ಜಾತಗಳು ತಮ್ಮ ಸ್ಥೂಲ ಶರೀರವನ್ನು ಕಳಚಿಕೊಂಡು ಸೂಕ್ಷ್ಮಶರೀರದಲ್ಲಿ ತಮ್ಮ ಇರುವಿನ ಅರಿವೂ ಇಲ್ಲದೆ ಭಗವಂತನ ಒಡಲಿನಲ್ಲಿರುತ್ತವೆ. ಸೃಷ್ಟಿ ಕಾಲದಲ್ಲಿ ಹಂತ ಹಂತವಾಗಿ ಈ ಪ್ರಪಂಚ ರೂಪುಗೊಳ್ಳುತ್ತದೆ. ಇದೆಲ್ಲವನ್ನು ಮಾಡುವವ ಆ ಭಗವಂತ. ಇಂತಹ ಪ್ರಪಂಚ ತಲೆ-ಬುಡ-ನಡು ಯಾವುದೂ ತಿಳಿಯದಷ್ಟು ಆಳವಾಗಿದೆ. ಇದಕ್ಕಾಗಿ ನಾವು ಯಾವುದನ್ನು ತಿಳಿದರೆ ಎಲ್ಲವನ್ನು ತಿಳಿಯಬಹುದೋ ಅದನ್ನು ಮೊದಲು ತಿಳಿಯಬೇಕು. ಛಾಂದೋಗ್ಯ ಉಪನಿಷತ್ತಿನಲ್ಲಿ ಉದ್ಧಾಲಕ ಗುರುಕುಲದಲ್ಲಿ ಹನ್ನೆರಡು ವರ್ಷ ವಿದ್ಯಾಭ್ಯಾಸ ಮುಗಿಸಿಕೊಂಡು ಬಂದು, ತನ್ನೆದುರು ಅಹಂಕಾರದಿಂದ ಸೆಟೆದು ನಿಂತ ಮಗ ಶ್ವೇತಕೇತುವನ್ನು ಉದ್ದೇಶಿಸಿ ಕೇಳುತ್ತಾನೆ: “ಉತ ತಂ ಆದೇಷ್ಯಂ ಅಪ್ರಾಕ್ಷ್ಯಃ; ಎನಾಶ್ರುತಂ ಶ್ರುತಂ ಭವತಿ, ಅಮತಂ ಮತಂ ಅವಿಜ್ಞಾತಂ ವಿಜ್ಞಾತಂ..|೬.೧.೩॥" ಯಾವುದನ್ನು ತಿಳಿದರೆ. ಎಲ್ಲವೂ ತಿಳಿಯುತ್ತದೋ, ಅದು ತಿಳಿಯಿತೇ?” ಎಂದು. ಇಲ್ಲಿ ಕೃಷ್ಣ ಹೇಳುತ್ತಾನೆ: “ಯಾವುದನ್ನು ತಿಳಿದರೆ ಎಲ್ಲವೂ ತಿಳಿಯುತ್ತದೋ ಅದನ್ನು ತಿಳಿವುದಕ್ಕೋಸ್ಕರ ಆ ಪರಶಕ್ತಿಯಲ್ಲಿ ಶರಣಾಗು” ಎಂದು. ಉಪನಿಷತ್ತೂ ಕೂಡಾ ಇದನ್ನೇ ಹೇಳುತ್ತದೆ: “ಯಸ್ಮಿನ್‌ ವಿಜ್ಞಾತೇ ಸರ್ವಮಿದಂ ವಿಜ್ಞಾತಂ ಭವತಿ . ||ಶಾಂಡಿಲ್ಯ-೨.೨; ಮುಂಡಕ 0.0.8". ಭಗವಂತನನ್ನು ತಿಳಿದರೆ ಎಲ್ಲವನ್ನು ತಿಳಿದಂತೆ ಎನ್ನುವುದೇನೋ ಸರಿ, ಆದರೆ ಅವನನ್ನು ಅರಿಯುವ ಪರಿ ಯಾವುದು? ಈ ಅಖಂಡವಾಗಿ ಬೇರೂರಿರುವ ಮರದ ಮೂಲವನ್ನು ಸೇರುವುದು ಹೇಗೆ? ಇದಕ್ಕೆ ಕೃಷ್ಣ ಹೇಳುತ್ತಾನೆ: “ಜ್ಞಾನವೆಂಬ ಕತ್ತಿಯನ್ನು, ಅನಾಸಕ್ತೆ(663008191) ಮತ್ತು ಉಪಾಸನೆ ಎನ್ನುವ ಸಾಣೆಯ ಕಲ್ಲಿನಲ್ಲಿ ಹರಿತಗೊಳಿಸಿ, ಆಳವಾಗಿ ಬೇರೂರಿರುವ ಮರವನ್ನು ತರಿದು, ಪರತತ್ವವನ್ನು ಹುಡುಕು” ಎಂದು. ನಾವು ಎಲ್ಲಿಗೆ ಹೋದರೆ ಮರಳಿ ಇಲ್ಲಿಗೆ ಬರುವುದು ಬೇಡವೋ, ಅದನ್ನು ಅನ್ವೇಷಣೆ ಮಾಡಬೇಕು. ಭಗವಂತನ ಇತಿಮಿತಿರಾಹಿತ್ಯವನ್ನು ಅರಿಯುವ ಜ್ಞಾನವೇ ಇದಕ್ಕೆ ಕೊಡಲಿ. ಇಲ್ಲಿಯೂ ಕೂಡಾ ನಾವೇ ನಮ್ಮ ಪ್ರಯತ್ನದಿಂದ ಮೂಲವನ್ನು ಸೇರಲು ಸಾಧ್ಯವಿಲ್ಲ. ಆ ಶಕ್ತಿ ನಮಗಿಲ್ಲ. ಅದಕ್ಕಾಗಿ ಇರುವ ಒಂದೇ ಮಾರ್ಗ ಆ ಪರಶಕ್ತಿಯಲ್ಲಿ ಶರಣಾಗುವುದು. ಆತನ ಅನುಗ್ರಹದಿಂದ ಮಾತ್ರ ನಾವು ಆ ಪುರುಷೋತ್ತಮನನ್ನು ಸೇರಬಹುದು.
Bibek Debroy (1955–2024)The Bhagavad Gita
(3) ‘In this,7 this form8 is not felt. Nor the end, nor the beginning. Nor even its establishment. Slicing the thick root of this ashvattha with the weapon of firm detachment...’