15.5

निर्मानमोहा जितसङ्गदोषा
अध्यात्मनित्या विनिवृत्तकामाः ।
द्वन्द्वैर्विमुक्ताः सुखदुःखसंज्ञै-
र्गच्छन्त्यमूढाः पदमव्ययं तत् ॥
nirmānamohā jitasaṅgadoṣā
adhyātmanityā vinivṛttakāmāḥ |
dvandvairvimuktāḥ sukhaduḥkhasaṃjñai-
rgacchantyamūḍhāḥ padamavyayaṃ tat ||
Swami Sivananda (1887–1963)Bhagavad Gita
5. Free from pride and delusion, victorious over the evil of attachment, dwelling constantly in the Self, their desires having completely turned away, freed from the pairs of opposites known as pleasure and pain, the undeluded reach the eternal goal.
Bannanje Govindacharya (1936–2020)Bhagavad Gita Pravachana
ನಿರ್ಮಾನಮೋಹಾಃ ಜಿತ ಸಂಗ ದೋಷಾಃ ಅಧ್ಯಾತ್ಮ ನಿತ್ಯಾಃ ವಿನಿವೃತ್ತಕಾಮಾಃ | ದ್ವಂದ್ವೈಃ ವಿಮುಕ್ತಾಃ ಸುಖ ದುಃಖ ಸಂಜ್ಞೈಃ ಗಚ್ಛಂತಿ ಅಮೂಢಾಃ ಪದಮ್‌ ಅವ್ಯಯಮ್‌ ತತ್‌-ಬಿಂಕವಿರದವರು, ಮೋಹವಳಿದವರು, ಬಯಕೆಗಳನ್ನು ಬಿಟ್ಟವರು, ಸುಖ-ದುಃಖಗಳೆಂಬ ಇಕ್ಕಟ್ಟಿನ ಇರುಕನ್ನು ಮೀರಿ ನಿಂತವರು- ಇಂತಹ ಜಾಣರು ಈ ಅಳಿವಿರದ ತಾಣವನ್ನು ಸೇರುತ್ತಾರೆ. ಕೃಷ್ಣ ಈ ಶ್ಲೋಕದಲ್ಲಿ ಹೇಳಿರುವ ವಿಚಾರ ಈ ಹಿಂದಿನ ಅನೇಕ ಅಧ್ಯಾಯಗಳಲ್ಲಿ ಅಲ್ಲಲ್ಲಿ ಬಂದಿದೆ ಮತ್ತು ಬಂದಾಗ ನಾವು ಆ ಬಗ್ಗೆ ವಿಶೇಷವಾಗಿ ವಿಶ್ಲೇಷಣೆ ಮಾಡಿದ್ದೇವೆ. ಎಲ್ಲವನ್ನು ಸಮಪ್ಪಿಯಾಗಿ ಇಲ್ಲಿ ಕೃಷ್ಣ ಹೇಳಿದ್ದಾನೆ. ಭಗವಂತನಲ್ಲಿ ಶರಣಾಗತಿ ಬೇಡಿ ಸಾಗುವ ನಮ್ಮ ಜೀವನದ ನಡೆ ಹೇಗಿರಬೇಕು ಎನ್ನುವುದನ್ನು ಈ ಶ್ಲೋಕದಲ್ಲಿ ವಿವರಿಸಲಾಗಿದೆ. “ಎಲ್ಲಕ್ಕೆಂತ ಮೊದಲು ಮಾನ-ಮೋಹವನ್ನು ಬಿಡಬೇಕು” ಎನ್ನುತ್ತಾನೆ ಕೃಷ್ಣ. ಅಂದರೆ 'ನಾನು' ಎನ್ನುವ '"ಅಹಂಕಾರ' ಮತ್ತು 'ನನ್ನದು' ಎನ್ನುವ "ಮಮಕಾರ' ಇವೆರಡನ್ನು ನಾವು ಮೊದಲು ತೊರೆಯಬೇಕು. ಈ ಪ್ರಪಂಚಕ್ಕೆ ಬರುವಾಗಲೂ ನಾವು ಬತ್ತಲೆ, ಹೋಗುವಾಗಲೂ ಬತ್ತಲೆ. ಹೀಗಿರುವಾಗ ಇಲ್ಲಿ Toy, “ನನ್ನದು' ಎಂದು ಅಹಂಕಾರ-ಮಮಕಾರದಲ್ಲಿ ಬೀಳುವುದರಲ್ಲಿ ಯಾವುದೇ ಅರ್ಥವಿಲ್ಲ. ಸಂಗದೋಷ ನಮ್ಮ ಮೇಲೆ ಅನೇಕ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಅದಕ್ಕಾಗಿ ನಾವು ಸಂಗದೋಷವನ್ನು ಗೆಲ್ಲಬೇಕು. ಒಂದು ವಸ್ತುವಿನ ಅತಿಯಾದ ಒಡನಾಟ, ಅದರ ಮೇಲಿನ ಅತಿಯಾದ ಮಮಕಾರ ಎಂದೆಂದಿಗೂ ಒಳ್ಳೆಯದಲ್ಲ. ಈ ರೀತಿ ನಿರ್ಲಿಪ್ತತೆಯಿಂದ ಬದುಕಬೇಕಾದರೆ... ಮೊದಲು... ನಮ್ಮನ್ನು ನಾವು. ಅಧ್ಯಾತ್ಮ ಚಿಂತನೆಯಲ್ಲಿ ತೊಡಗಿಸಿಕೊಳ್ಳಬೇಕು. ಬಯಕೆಗಳನ್ನು ಬಿಟ್ಟು, ಸುಖ ಬಂದಾಗ ಹಾರಾಡದೇ, ದುಃಖ ಬಂದಾಗ ಕುಗ್ಗದೇ, ದ್ವಂದ್ವಾತೀತರಾಗಿ ಬದುಕುವುದನ್ನು ನಾವು ಕಲಿಯಬೇಕು. ಸೋಲೇ ಗೆಲುವಿನ ಮೆಟ್ಟಿಲು, ದುಃಖ-ಸುಖದ ಮೆಟ್ಟಿಲು. ಹಗಲು-ರಾತ್ರಿಯನ್ನು ಸ್ವೀಕರಿಸಿದಂತೆ ಕಷ್ಟ-ಸುಖವನ್ನು ನಾವು ಸಮನಾಗಿ ಸ್ವೀಕರಿಸಬೇಕು. ಲೌಕಿಕ ನಿರೀಕ್ಷೆ-ನಿರಾಶೆಯ ಮೂಲ. ಇದರ ಹಿಂದೆ ಹೋದವರು ತಿಳಿಗೇಡಿಗಳು. ಅವರು ತಾವೇ ತಾವಾಗಿ ತಮ್ಮ ಜೀವನದಲ್ಲಿ ಸಮಸ್ಯೆಯನ್ನು ತಂದುಕೊಳ್ಳುತ್ತಾರೆ. ಆದರೆ ಈ ಮರ್ಮವನ್ನು ಅರಿತ ಜ್ಞಾನಿಗಳು ಭಗವಂತನ ಲೋಕವನ್ನು ನಿರಾಯಾಸವಾಗಿ ಸೇರುತ್ತಾರೆ-ಇದು ನಿಶ್ಚಿತ. ದೇವರ ಬಗ್ಗೆ ದೇವರನ್ನು ನಂಬುವವರಲ್ಲೇ ಅನೇಕ ಅಭಿಪ್ರಾಯ ಭೇದಗಳಿವೆ. ಪ್ರತಿಯೊಬ್ಬರಿಗೂ ತಮ್ಮ ವಿಚಾರಧಾರೆಯೇ ಸರಿ ಎನ್ನುವ ಭಾವನೆ ಇರುತ್ತದೆ. ಇದಕ್ಕಾಗಿ ಮುಂದಿನ ಶ್ಲೋಕಗಳಲ್ಲಿ ಕೃಷ್ಣ ಈ ಕುರಿತ ವಿವರಣೆಯನ್ನು ಕೊಡುತ್ತಾನೆ. ಇಲ್ಲಿ ಪ್ರಸ್ತುತವಿರುವ ಶ್ಲೋಕಗಳಲ್ಲಿ ಇರುವ ವಿಚಾರ ನಮಗೆ ಸ್ವಲ್ಪ ಅಸ್ಪಷ್ಟವಾಗಿ ಕಾಣಬಹುದು. ನಮ್ಮ ಸಾಧನೆ ಮತ್ತು ನಮ್ಮ ಯೋಗ್ಯತೆಗನುಗುಣವಾಗಿ ಈ ಶ್ಲೋಕಗಳು ತೆರೆದುಕೊಳ್ಳುತ್ತವೆ. ಇಲ್ಲಿ ಕೃಷ್ಣ ಜೀವ-ಜಗತ್ತು-ಭಗವಂತ ಈ ತ್ರಿಪುಟಿಗಳ ಕಲ್ಪನೆಯನ್ನು ಬಹಳ ರೋಚಕವಾಗಿ ವಿವರಿಸಿದ್ದಾನೆ. ಭಗವಂತನ ಚಿಂತನೆಯಲ್ಲಿ ಕಾಳಜಿ ಇರುವವರಿಗೆ ಈ ಅಧ್ಯಾಯದ ಮುಂದಿನ ಭಾಗ ಬಹಳ ಮುಖ್ಯವಾಗುತ್ತದೆ. ನಮ್ಮ ಜೀವನದಲ್ಲಿ ನಾವು ಹೇಗೆ ಸಾಧನೆ ಮಾಡಬೇಕು, ಹೇಗೆ ಭಗವಂತನ ಚಿಂತನೆ ಮಾಡಬೇಕು ಅನ್ನುವುದರ ಸಮಸ್ತ ಸಾರವನ್ನು ಕೃಷ್ಣ ಇಲ್ಲಿ ವಿವರಿಸಿದ್ದಾನೆ.
Bibek Debroy (1955–2024)The Bhagavad Gita
(5) ‘Without pride and delusion, having conquered the fault of attachment, constant in the knowledge of the atman, having restrained desire, freed from the opposites of happiness and unhappiness, the wise go to that indestructible goal.’