ममैवांशो जीवलोके जीवभूतः सनातनः ।
मनःषष्ठानीन्द्रियाणि प्रकृतिस्थानि कर्षति ॥
mamaivāṃśo jīvaloke jīvabhūtaḥ sanātanaḥ |
manaḥṣaṣṭhānīndriyāṇi prakṛtisthāni karṣati ||
Sri Madhvacharya (1238–1317)Bhagavad Gita Tatparya Nirnaya
किञ्चित्सादृश्यमात्रेण भिन्नोऽप्यंश इवोच्यते।
ईश्वरस्तुयदा त्वस्य शरीरं विशति प्रभुः।
मनःषष्ठानीन्द्रियाणि प्रकृतिस्थानि कर्षति॥07॥
Swami Sivananda (1887–1963)Bhagavad Gita
7. An eternal portion of Myself having become a living soul in the world of life, draws to
(itself) the (five) senses with the mind for the sixth, abiding in Nature.
Sri Vishwesha Tirtharu (1931–2019)Gitasaroddhara
15.7–15.11 · ಮಮೈವಾಂಶೋ ಜೀವಲೋಕೇ
ಮಮೈವಾಂಶೋ ಜೀವಲೋಕೇ
ಈ ಜಗದ್ವೃಕ್ಷದ ಸಾರಸರ್ವಸ್ವವೇ ಪರಮಾತ್ಮನಾಗಿದ್ದು ಅವನಿಲ್ಲದೆ ಈ
ಜಗತ್ತಿಗೆ ಅಸ್ತಿತ್ವಪ್ರವೃತ್ತಿಗಳೇ ಇಲ್ಲ. ಅವನ ಶಕ್ತಿಗುಣಗಳು ಅವಾರ ಅಪರಿಮಿತ.
ಈಃ ವಿಶ್ವವೆಲ್ಲ ಅವನ ಶಕ್ತಿಯ ಅನಂತಸೂರ್ಯ ಮಂಡಲದಮುಂದೆ ಒಂದು ಚಿಕ್ಕ
ಕಿಡಿ.
ಪಾದೋಸಸ್ಯ ವಿಶ್ವಾ ಭೂತಾನಿ - ಪುರುಷಸೂಕ್ತ
ಅವನು ಜ್ಞಾನಗುಣಗಳ ಅನಂತಸಾಗರನಾಗಿದ್ದರೆ ಜೀವನು ಬರೇ ಒಂದು
ಬಿಂದು.
ಮಮೈವಾಂಶೋ ಜೀವಲೋಕೇ
ಜೀವಭೂತಃ ಸನಾತನಃ ।
ಬ್ರಹ್ಮ ಮತ್ತು ಜಗತ್ತಿಗೂ ಜೀವ ಮತ್ತು ಈಶ್ವರನಿಗೂ ಇಂತಹ
ಮಹದಂತರವಿದೆ. ಪರಮಾತ್ಮನ ಅನಂತಗುಣಗಳ ದೃಷ್ಟಿಯಲ್ಲಿ ಜೀವನು ಬರೇ
ಅಂಶಮಾತ್ರ. ಅವನ ಪೂರ್ಣತೆಯ ಮುಂದೆ ಜೀವಮತ್ತು ಜಗತ್ತಿನ ಅಲ್ಪತೆಯ
ದರ್ಶನವಾಗುವುದು. ಜೀವರು ಬ್ರಹ್ಮನ ಒಂದು ಭಾಗವೆಂದೂ ಕೆಲವರ ಕಲ್ಪನೆ
ಇದೆ. ಪ್ರಕೃತಿಯ ಹಿಡಿತಕ್ಕೆ ಸಿಲುಕಿ ದುಃಖ, ಅಜ್ಞಾನ, ಮೋಹಗಳಿಗೆ ಒಳಗಾಗಿ
ಸಂಕಟಗ್ರಸ್ತನಾದ ಜೀವನು ಪ್ರಕೃತಿಗೆ ಅತೀತನಾದ ಪರಮಾತ್ಮನ ಒಂದು
ಭಾಗವಾಗಿರುವುದು ಹೇಗೆ ಸಾಧ್ಯ? ಅಪೂರ್ಣರೂ ವಿಕಾರವಶರೂ ಆದ
ಜೀವರೆಲ್ಲರೂ ಬ್ರಹ್ಮನ ತುಣುಕುಗಳಾಗಿದ್ದಲ್ಲಿ ಅವನ ಪೂರ್ಣತೆ,
ನಿರ್ವಿಕಾರತೆಗಳಿಗೆ ತಿಲಾಂಜಲಿಯನ್ನೇ ಇತ್ತಂತಾಗುವುದು. ಅಖಂಡ ಬ್ರ್ಟನಿಗೆ
ಅನೇಕ ಅಂಶಗಳನ್ನು ಒಪ್ಪಿ ಅವುಗಳನ್ನೆಲ್ಲ ಪ್ರಕೃತಿಯ ಬವಣೆಗೆ
ಒಳಪಡಿಸುವುದೆಂದರೆ ಪರಬ್ರಹ್ಮತತ್ತ್ವ ವನ್ನೇ ನಿರಾಕರಿಸಿದಂತಾಗುವುದು.
ಆದುದರಿಂದ ಜೀವನು ಬ್ರಹ್ಮನ ಅನಂತಗುಣರಾಶಿಗಳ ಎದುರಿಗೆ ಒಂದು
ಕಣಮಾತ್ರವೆಂಬ ಅಭಿಪ್ರಾಯ ದಿಂದಲೇ ಜೀವನನ್ನು ಬ್ರಹ್ಮನ ಅಂಶನೆಂದು ಇಲ್ಲಿ
ಉಲ್ಲೇಖಿಸಲಾಗಿದೆ. ತನ್ನಲ್ಲಿರುವ ಹಣವು ಲಕ್ಷಾಧೀಶರಾದ ಶ್ರೀಮಂತರ
ಸಂಪತ್ತಿ ನ ಒಂದಂಶ ಮಾತ್ರವೆಂದರೆ ಅವರ ತಿಜೋರಿಯಲ್ಲಿರುವ ಹಣದ ಒಂದು
ಭಾಗವು ಈತನಲ್ಲಿದೆ ಎಂದು ಯಾರೂ ಭಾವಿಸುವುದಿಲ್ಲ. ತನ್ನ ಮತ್ತು ಆ
ಶ್ರೀಮಂತರಸಂಪತ್ತುಗಳಲ್ಲಿರುವ ಅಂತರವನ್ನು ಸ್ಪಷ್ಟಪಡಿಸಲು "ಅಂಶ' ಪದವನ್ನು
ಇಲ್ಲಿ ಬಳನಲಾಗಿದೆ. ಜೀವನು ಭಗವಂತನ ಅಂಶನೆಂಬುದನ್ನು ಈ
ದೃಷ್ಟಿಯಿಂದಲೇ ನಾವು ಅರ್ಥಮಾಡಿಕೊಳ್ಳಬೇಕು. ಇರಲಿ, ಈ ಅಲ್ಪಶಕ್ತಿಯ
ಜೀವನು ತನ್ನ ಕೈ ಮೀರಿದ ಪ್ರಕೃತಿಯ ಬಂಧನದಿಂದ ಬಿಡುಗಡೆ ಹೊಂದಲು
ಶಕ್ತಿಯ ಮಹಾಮೇರುವಾದ ಅನಂತಗುಣಸಾಗರನಾದ ಪರಮಾತ್ಮನ
ಆಸರೆಯನ್ನು ಪಡೆಯಲೇಬೇಕು. ಜಗತ್ತಿನ ಭೌತಿಕಸುಖಸಾಮಗ್ರಿಯನ್ನೇ
ಹುಡುಕುವ ಬದಲು ಭಗವಂತನನ್ನೇ ಅರಸಬೇಕು. ನಮ್ಮ ಸಕಲ
ಕ್ರಿಯೆಗಳಲ್ಲಿಯೂ ನಮ್ಮ ಜೊತೆಗಾರನಾಗಿ, ನಮ್ಮ ಸಾರಥಿಯಾಗಿ, ಪರಮಾತ್ಮನು
ನಮ್ಮೊಡನಿದ್ದರೂ ನಮ್ಮ ಅಪರಿಪಕ್ವ ಮನಸ್ಸಿಗೆ ಅವನ ಜ್ಞಾನವು
ಉದಯಿಸುವುದಿಲ್ಲ.
ಯತಂತೋಶಪ್ಯಕ್ಕತಾತ್ಥಾನೋ
ನೈನಂ ಪಠ್ಯಂತ್ಯಚೇತಸಃ |
ಕರ್ಮಯೋಗ ಭಕ್ತಿಯೋಗಗಳಿಂದ ಹೃದಯಸಂಸ್ಕಾರವನ್ನು ಪಡೆದವನೇ
ಪರಮಾತ್ಮನನ್ನು ಕಾಣುವ ಭಾಗ್ಯಶಾಲಿಯೆನಿಸುವನು. ಒಂದು ಕೊಡ ನೀರಿ
ನಲ್ಲಿದ್ದ ಸಕ್ಕರೆಯನ್ನು ವಿಜ್ಞಾನಿ ಪೃಥಕ್ಕರಿಸಿ ತೆಗೆಯಬಲ್ಲನು. ಸಾಮಾನ್ಯಜನರು
ಅದರಲ್ಲಿಯ ಸಕ್ಕರೆಯನ್ನು ಹೇಗೆ ತೋರಿಸಬಲ್ಲರು? ಭಗವಂತನು ನಮ್ಮ
ಸಹಚಾರಿಯಾಗಿದ್ದ ರೂ ನಮ್ಮ ದೃಷ್ಟಿ ಯು ಆಕಡೆ ಹರಿಯುವುದೇ ಇಲ್ಲ.
ಪರಾಂಚಿ ಖಾನಿ ವೃತ್ಯಣತ್ ಸ್ವಯಂಭೂಃ
ತಸ್ಮಾತ್ ಪರಾಕ್ ಪಶ್ಯತಿ ನಾಂತರಾತೃ ನ್।
-ಕಠೋಪನಿಷತ್
ನಮ್ಮ ಇಂದ್ರಿಯಗಳಲ್ಲವೂ ಬಹಿರ್ಮುಖಗಳಾಗಿದ್ದು ನಮ್ಮಲ್ಲಿ ಬಾಹ್ಯ
ದೃಷ್ಟಿಯೇ ಅತಿಯಾಗಿದೆ. ಅಂತರ್ದ್ಯಷ್ಟಿಯನ್ನು ಬೆಳೆಸಿಕೊಳ್ಳುವ ಪ್ರಯತ್ನದಲ್ಲಿ
ಜನರು ಬಹಳ ಹಿಂದುಳಿದಿದ್ದಾರೆ. ಇಂದ್ರಿಯಗಳ ಸಹಜವಾದ ಪ್ರವಾಹದ
ತಕ್ಕ ವಿರುದ್ಧವಾಗಿ ಈಸಬಲ್ಲ ಧೀರನೇ ಈ ಅಂತರ್ದ್ಯಷ್ಟಿಯನ್ನು ಪಡೆಯು
ವಲ್ಲಿಯಶಸ್ವಿಯಾದಾನು. ಅಂತೂ ಈ ಜಗದ್ವಕ್ಷದಲ್ಲಿ ಬೀಡುಬಿಟ್ಟಿರುವನಾವು
ಅದರ ಆಂತರ, ಬಾಹ್ಯಗಳನ್ನೆಲ್ಲ ಅರಿತು ಅದರ ಆಧಾರಶಕ್ತಿಯನ್ನು ಅರಿಯಲು
ಪೂರ್ಣಪ್ರಯತ್ನವನ್ನು ಕೈಗೊಂಡು ಜೀವನದಸಾರ್ಥಕತೆಯನ್ನು ಪಡೆಯಬೇಕು.
Bannanje Govindacharya (1936–2020)Bhagavad Gita Pravachana
ಮಮೈವಾಂಶೋ ಜೀವಲೋಕೇ ಜೀವಭೂತಃ ಸನಾತನಃ |
ಮನಃಷಷ್ಠಾನೀಂದ್ರಿಯಾಣಿ ಪ್ರಕೃತಿಸ್ಥಾನಿ ಕರ್ಷತಿ nell
15.7–15.8
ಮಮ ಏವ ಅಂಶಃ ಜೀವಲೋಕೇ ಜೀವಭೂತಃ ಸನಾತನಃ |
ಮನಃ ಷಷ್ಠಾನಿ ಇಂದ್ರಿಯಾಣಿ ಪ್ರಕೃತಿ TIN BREA ||
ಶರೀರಮ್ ಯತ್ ಅವಾಪ್ನೋತಿ ಯತ್ ಚ ಅಪಿ ಉತ್ಕಾಮತಿ ಈಶ್ವರಃ |
ಗೃಹೀತ್ವಾ ಏತಾನಿ ಸಂಯಾತಿ ವಾಯುಃ ಗಂಧಾನ್ ಇವ ಆಶಯಾತ್ --ಈ ದೇಹದಲ್ಲಿರುವ ಅಳಿವಿರದ ಜೀವನು
ನನ್ನದೇ ಒಂದು ತುಣುಕಿನಂತೆ; (ನನ್ನ ಭಿನ್ನಾಂಶ; ನನ್ನ ಪ್ರತಿಬಿಂಬ]. ಅವನು ಶರೀರದಲ್ಲಿರುವ ಐದು
ಜ್ಞಾನೇಂದ್ರಿಯಗಳನ್ನು ಆರನೆಯ ಮನಸ್ಸಿನ ಜತೆಗೆ ವಿಷಯಗಳತ್ತ ಹರಿಯಗೊಡುತ್ತಾನೆ. ವಾಸ್ತವವಾಗಿ ಜೀವ
ಈ ಶರೀರವನ್ನು ಹೊಕ್ಕಾಗ ಮತ್ತು ಬಿಟ್ಟು ಹೊರಟಾಗ ಸರ್ವಶಕ್ತನಾದ ಭಗವಂತನೇ ಈ ಇಂದ್ರಿಯಗಳನ್ನು
ನಿಯಂತ್ರಿಸುತ್ತಾ ಜತೆಗೆ ಬರುತ್ತಾನೆ; ಗಾಳಿ ಹೂವಿನ ಕಂಪನ್ನು ಹೊತ್ತು ಬಂದಂತೆ. [ಭಗವಂತ ಈ ಜೀವದ
ಶರೀರವನ್ನು ಹೊಕ್ಕಾಗ ಮತ್ತು ಹೊರಬಂದಾಗ ಐದು ಜ್ಞಾನೇಂದ್ರಿಯಗಳನ್ನು ಆರನೆಯ ಮನಸ್ಸಿನ ಜತೆಗೆ
ತನ್ನಂಕೆಯಲ್ಲಿರಿಸಿಕೊಳ್ಳುತ್ತಾನೆ. ಜೀವನಿಗೆ ವಿಷಯಾನುಭವ ನೀಡುವಾಗ ಇವುಗಳನ್ನು ಜತೆಗೊಯ್ಯುತ್ತಾನೆ.-
ಗಾಳಿ ಹೂವಿಂದ ಕಂಪನ್ನು ಜತೆಗೊಯ್ಯುವಂತೆ.]
ಈ ಶ್ಲೋಕ ಭಗವಂತ ಮತ್ತು ಜೀವ ಎರಡನ್ನೂ ವಿವರಿಸುವ ಶ್ಲೋಕ. ಇಲ್ಲಿ ನಮಗೆ ಸ್ವಲ್ಪ ಗೊಂದಲವೆನಿಸುವ
ಮಾತನ್ನು ಕೃಷ್ಣ ಹೇಳುತ್ತಾನೆ. ಈ ಮಾತನ್ನು ಬೇರೆ ಬೇರೆ ಮುಖದಲ್ಲಿ ಸ್ಪಷ್ಟವಾಗಿ ತಿಳಿದುಕೊಳ್ಳದೇ ಇದ್ದರೆ
ಎಲ್ಲವೂ ಅಸ್ಪಷ್ಟವೆನಿಸುತ್ತದೆ. ಮೇಲ್ನೋಟದಲ್ಲಿ ನೋಡಿದರೆ ಕೃಷ್ಣ ಹೇಳುತ್ತಾನೆ: “ಎಲ್ಲಾ ಜೀವರೂ ನನ್ನದೇ
ಅಂಶ” ಎಂದು. ಇಲ್ಲಿ ಅಂಶ ಎನ್ನುವಲ್ಲಿ ಎರಡು ಮುಖವಿದೆ. ಒಂದು ಸ್ವರೂಪಭೂತ ಅಂಶ ಮತ್ತು ಇನ್ನೊಂದು
ಭಿನ್ನಾಂಶ. ಭಗವಂತ ಜ್ಞಾನ ಸ್ವರೂಪ, ಈ ಜೀವನೂ ಕೂಡಾ ಜ್ಞಾನ ಸ್ವರೂಪ. ಭಗವಂತ ಮಹಾ ಬೆಳಕಾದರೆ
ಜೀವ ಬೆಳಕಿನ ಕಿಡಿ. ಭಗವಂತ ಬಿಂಬವಾದರೆ ಜೀವ ಪ್ರತಿಬಿಂಬ. ಇದು ಸನಾತನ- ಅನಾದಿ
ಅನಂತವಾಗಿರುವಂತಹದ್ದು. ಜೀವ ಭಗವಂತನ ಪ್ರತಿಬಿಂಬ ಅಂದರೆ ಅದು ಭಗವಂತನ ಭಿನ್ನಾಂಶ. ಈ
ಜೀವನೊಳಗೆ “ಜೀವನಾಗಿ' ಧಾರಣೆ ಮಾಡಿಕೊಂಡು ಉಸಿರಾಡಿಸುವವ ಬಿಂಬರೂಪಿ ಭಗವಂತ. ಅದು
ಭಗವಂತನ ಸ್ವರೂಪಾಂಶ. ಈ ರೀತಿ ಜೀವ ಹೊರಗಿನ ಪಂಚಭೂತವನ್ನು ಅನುಭವಿಸುವ ಐದು ಇಂದ್ರಿಯ,
ಮತ್ತು ಈ ಅನುಭವವನ್ನು ಒಳಗಿನ ಜೀವಕ್ಕೆ ಮುಟ್ಟಿಸುವ ಆರನೇ ಮನಸ್ಸಿನೊಂದಿಗೆ, ಬಿಂಬರೂಪಿ ಭಗವಂತನ
ಧಾರಣೆಯಲ್ಲಿ, ತಾಯಿಯ ಗರ್ಭದಲ್ಲಿ ರೂಪುಗೊಳ್ಳುತ್ತಿರುವ ಸ್ಥೂಲ ಶರೀರವನ್ನು ಪ್ರವೇಶ
ಮಾಡುತ್ತಾನೆ(ಭಗವಂತ ಪ್ರವೇಶ ಮಾಡಿಸುತ್ತಾನೆ). ಹೀಗೆ ಪ್ರವೇಶ ಮಾಡಿದ ಜೀವಕ್ಕೆ ಬಿಂಬರೂಪಿ ಭಗವಂತ
ಸರ್ವೆಂದ್ರಿಯದಲ್ಲಿದ್ದು, ಇಂದ್ರಿಯಾಭಿಮಾನಿ ದೇವತೆಗಳ ಮುಖೇನ ಅನುಭವ ಕೊಡುತ್ತಾನೆ. ಜೀವ ಭಗವಂತನ
ಅನುಗ್ರಹದಿಂದ ವಿಷಯಗಳನ್ನು ಅನುಭವಿಸಲು ಆರಂಭಿಸುತ್ತಾನೆ.
ಒಬ್ಬ ಜೀವನಿಗೆ ಒಟ್ಟು ಮೂರು ಶರೀರಗಳಿರುತ್ತವೆ. ಒಂದು ಕಾಣುವ ಸ್ಥೂಲ ಶರೀರ, ಅದರೊಳಗೆ ಸೂಕ್ಷ್ಮ
ಶರೀರ(ಅನಿರುದ್ಧ ಶರೀರ) ಮತ್ತು ಅದರೊಳಗೆ ಲಿಂಗ ಶರೀರ. ಈ ಸ್ಥೂಲ ಶರೀರವನ್ನು ಪ್ರವೇಶಿಸುವ
ಸೂಕ್ಷ್ಮಶರೀರಿ ಜೀವಕ್ಕೆ ಎಲ್ಲಾ ಇಂದ್ರಿಯಗಳೂ ಇರುತ್ತವೆ. ಆದ್ದರಿಂದ ಈ ಜೀವ ತನ್ನ ಪೂರ್ವಜನ್ಮದ ನೆನಪನ್ನು
ಅಂತರಂಗದಲ್ಲಿಟ್ಟುಕೊಂಡು ಗರ್ಭವನ್ನು ಪ್ರವೇಶಿಸುತ್ತಾನೆ. ಪೂರ್ವ ಜನ್ಮದ ಅಧ್ಯಾತ್ಮ ಸಾಧನೆ ಈ ಸೂಕ್ಷ್ಮ
ಜೀವದ ಮನಸ್ಸಿನಲ್ಲಿ ಪೂರ್ಣವಾಗಿ ಉಳಿದಿರುತ್ತದೆ. ಇದಕ್ಕಾಗಿ 'ಅಧ್ಯಾತ್ಮ ಸಾಧನೆ ಎಂದೂ ವ್ಯರ್ಥವಾಗುವುದಿಲ್ಲ,
ಅದು ಸದಾ ನಮ್ಮೊಂದಿಗೆ ಸಾವಿನಲ್ಲೂ ಜೊತೆಯಾಗಿ ಬರುತ್ತದೆ' ಎಂದು ಹೇಳುವುದು. ಏಕೆಂದರೆ ಸಾವು ಕೇವಲ
ಸ್ಥೂಲ ಶರೀರಕ್ಕೇ ಹೊರತು ಸೂಕ್ಷ್ಮಶರೀರಕ್ಕಲ್ಲ. ಸಂಮೋಹನ ನಿದ್ರೆಯಲ್ಲಿ(೧೫॥7೦೪573) ಜೀವದ ಪೂರ್ವಜನ್ಮದ
ವಿಷಯವನ್ನು ತಿಳಿಯಲು ಸಾಧ್ಯವಾಗುವುದು ಈ ಕಾರಣದಿಂದ. ನಮಗೆ ಕೆಲವೊಮ್ಮೆ ಒಬ್ಬರನ್ನು ನೋಡಿದಾಗ
ಹಿಂದೆ ತುಂಬಾ ಪರಿಚಿತರಾಗಿ ನಮ್ಮೊಂದಿಗಿದ್ದವರಂತೆ ಕಂಡರೆ-ಅದಕ್ಕೆ ಪೂರ್ವ ಜನ್ಮದ ನೆನಪೂ ಒಂದು
ಕಾರಣವಾಗಿರಬಹುದು. ಈ ನೆನಪು ಒಳಗಿರುವ ಸೂಕ್ಷ ಶರೀರದಲ್ಲಿ ಮಾತ್ರ ಜಾಗೃತವಾಗಿರುತ್ತದೆ-ಆದರೆ ಸ್ಥೂಲ
ಇಂದ್ರಿಯದಲ್ಲಿ ಇದು ಜಾಗೃತವಾಗಿರುವುದಿಲ್ಲ. ಹೀಗೆ ಜೀವ ಸ್ಥೂಲ ಶರೀರವನ್ನು ಪ್ರವೇಶ ಮಾಡುವಾಗ
ಇಂದ್ರಿಯಗಳನ್ನು ಕರ್ಷಣೆ ಮಾಡಿಕೊಂಡು ಬರುತ್ತಾನೆ. ಮತ್ತು ಹೋಗುವಾಗ ಕರ್ಷಣೆ ಮಾಡಿಕೊಂಡು
ಹೋಗುತ್ತಾನೆ. ಈ ಕ್ರಿಯೆಯಲ್ಲಿ ಜೀವ ಸ್ವತಂತ್ರನಲ್ಲ. ಇದನ್ನು ಮಾಡಿಸುವವ 'ಈಶ್ವರ'. ಇಲ್ಲಿ ಈಶ್ವರ ಎಂದರೆ
ಸರ್ವ ಸಮರ್ಥ ಭಗವಂತ ಎಂದರ್ಥ. ಶಂಕರಾಚಾರ್ಯರು ತಮ್ಮ ಭಾಷ್ಯದಲ್ಲಿ “ಈಶ್ವರಃ ಈಶನಶೀಲೋ
ನಾರಾಯಣಃ” ಎಂದಿದ್ದಾರೆ. ಇಲ್ಲಿ 'ಈಶನಶೀಲಃ' ಎಂದರೆ ಸರ್ವಸಮರ್ಥ ಎಂದರ್ಥ.
ಈ ಶ್ಲೋಕದಲ್ಲಿ ಶಬ್ದಗಳ ಚಮತ್ಮ್ಕಾರವಿದೆ. "ಅವಾಪ್ನೋತಿ' ಎನ್ನುವಲ್ಲಿ "ಅವ' ಅನ್ನುವುದು ಉಪಸರ್ಗ. ಹದಿನೈದು
ಬೇಲಿಗಳೊಂದಿಗೆ ಜೀವ ದೇಹವನ್ನು ಪ್ರವೇಶಿಸುವುದು ಜೀವದ ಬಂಧನ. ಇದು ಒಂದು ರೀತಿಯ 'ಅಧಃಪಾತ'.
ಆದರೆ ಇದು ಊರ್ಧ್ವಗಮನಕ್ಕೆ ಪೂರ್ವ ಜೀವದ ಅಧಃಪಾತ. ಏಕೆಂದರೆ ಜೀವ ಮೋಕ್ಷ ಸೇರಲು ಈ ಸಾಧನಾ
ಶರೀರ ಬೇಕೇಬೇಕು. ಇದೇ ರೀತಿ ಜೀವ ದೇಹವನ್ನು ಬಿಟ್ಟು ಹೊರ ಹೋಗುವುದನ್ನು "ಉತ್ಕಾ ಮತಿ' ಎಂದಿದ್ದಾರೆ.
ಸಾವು ಎಂದರೆ ಜೀವನನ್ನು ಭಗವಂತ ಸ್ಥೂಲ ಶರೀರದಿಂದ ಆಚೆ ಕರೆದುಕೊಂಡು ಹೋಗುವುದು. ಇದು
ಅಮಂಗಳವಲ್ಲ. ಅದಕ್ಕಾಗಿ ಇಲ್ಲಿ "ಉತ್' ಎನ್ನುವ ಉಪಸರ್ಗವನ್ನು ಬಳಸಲಾಗಿದೆ. ಇನ್ನು ಭಗವಂತ ಜೀವನನ್ನು
ಕರೆತರುವುದನ್ನು ಇಲ್ಲಿ 'ಸಂಯಾತಿ' ಎಂದಿದ್ದಾರೆ. ಸಂ-ಎಂದರೆ ಸ್ವಯಂ, ಸ್ವೇಚ್ಛಾಯ, ಸ್ವಾತಂತ್ರೇಣ. ಎಲ್ಲವೂ
ಭಗವಂತನ ಅಧೀನ, ಜೀವ ಸ್ವತಂತ್ರ ಅಲ್ಲ, ಕೇವಲ ಭಗವಂತ ಸ್ವತಂತ್ರ ಅನ್ನುವುದನ್ನು ಇದು ಸೂಚಿಸುತ್ತದೆ
ಜೀವನಿಗೆ. ಹುಟ್ಟುವುದಕ್ಕಾಗಲೀ, ಸಾಯುವುದಕ್ಕಾಗಲೀ ಸ್ವಾತಂತ್ರ್ಯವಿಲ್ಲ... ಎಲ್ಲವೂ ಭಗವಂತನ
ನಿಯಮನದಂತೇ ನಡೆಯುತ್ತದೆ
ಹೇಗೆ ಜೀವ ತನ್ನ ಇಂದ್ರಿಯಗಳೊಂದಿಗೆ ಭಗವಂತನ ಜೊತೆಗೆ ಒಳ ಬರುತ್ತದೆ ಮತ್ತು ಹೂರ ಹೋಗುತ್ತದೆ
ಎನ್ನುವುದನ್ನು ಹೂವಿನ ಸುಗಂಧದ ದೃಷ್ಟಾಂತದೊಂದಿಗೆ ಕೃಷ್ಣ ವಿವರಿಸಿದ್ದಾನೆ. ಅರಳಿ ನಿಂತಿರುವ ಹೂವಿನ
ಸುಗಂಧ ಹೇಗೆ ನಮ್ಮ ಮೂಗನ್ನು ಬಂದು ಪ್ರವೇಶಿಸುತ್ತದೆಯೋ ಹಾಗೇ ಈ ಜೀವದ ಗತಿ. ಅದು ಕಾಣುವುದಿಲ್ಲ.
ಹೂವಿನ ಸುಗಂಧದ ಸೂಕ್ಷ್ಮಾಣುಗಳು ನಮ್ಮ ಮೂಗನ್ನು ಪ್ರವೇಶಿಸುವುದು ನಮಗೆ ತಿಳಿಯುವುದು ಕೇವಲ
ಸುವಾಸನೆಯಿಂದಾಗಿ, ಹೊರತು ಭೌತಿಕವಾಗಿ ಅಲ್ಲ. ಜೀವದ ಈ ಎಲ್ಲಾ ಗತಿ ಕೂಡಾ ಇದೇ ರೀತಿ. ಅದು
ಕಾಣುವುದಿಲ್ಲ. ಇದನ್ನೇ ಇನ್ನೂ ಸ್ಪಷ್ಟವಾಗಿ ಕೃಷ್ಣ ಮುಂದಿನ ಮೂರು ಶ್ಲೋಕದಲ್ಲಿ ವಿವರಿಸುತ್ತಾನೆ.
Bibek Debroy (1955–2024)The Bhagavad Gita
(7)
‘Indeed, part of my eternal form is established as beings in nature and
attracts the mind and six12 senses to the world of beings.’