16.13

इदमद्य मया लब्धमिमं प्राप्स्ये मनोरथम् ।
इदमस्तीदमपि मे भविष्यति पुनर्धनम् ॥
idamadya mayā labdhamimaṃ prāpsye manoratham |
idamastīdamapi me bhaviṣyati punardhanam ||
·
Sri Madhvacharya (1238–1317)Bhagavad Gita Tatparya Nirnaya
16.6–16.20
‘येऽति मानेन मन्यन्ते परमेशोऽहमित्यपि। मिथ्या जगदिदं सर्वं भ्रमजत्वान्न तिष्ठति। मिथ्यात्वान्नेश्वरोऽस्यास्ति परेभ्यो न च जायते। स्वस्मिन्नपि तथाऽन्यस्मिन् नियन्ताऽन्य इतीरिते। प्रद्विषन्त्यसुरास्ते तु सर्वे यान्त्यधरं तमः। अयोग्येशत्वकामाच्च लोभाच्चात्मसमर्पणे। तत्त्ववेदिषु कोपाच्च तमस्तेषां न दुर्लभम्। अक्षागमानुमानां च स्वोक्तेरपि विरोधिनः। यस्मात् तेऽतोऽसुरा ज्ञेया एवमन्येऽपि तादृशाः। ये तु विष्णुं परं ज्ञात्वा यजन्तेऽनन्यदेवताः। प्रत्यक्षाद्यविसंवादिज्ञानादेव विमुक्तिगाः’ इति ब्रह्मवैवर्ते। ‘निबन्धाय’ - नीचस्थानेऽन्धेतमसि बन्धाय। ‘सर्गाणां सुबहुत्वेऽपि शुभाशुभफलाधिकौ। देवासुराख्यौ द्वावेव गन्धर्वाद्यास्तदन्तरा। मुक्तिगा एव विज्ञेया देवा एव विमुक्तिगाः’ इति च। ‘विमोक्षाय’ इत्यत्र वीत्युपसर्गादेव च मोक्षे ननात्वं ज्ञायते। ‘देवासुरनरत्वाद्या जीवानां तु निसर्गतः। निसर्गो नान्यथैतेषां केनचित् क्वचिदेव वा। देवाः शापबलादेव प्रह्लादादित्वमागताः। अतः पुनश्च देवत्वं ते यान्ति निजमेव तु। हेतुतः सोऽन्यथाभावो रक्तता स्फटिके यथा। अतो नित्यश्च नाप्येष स्वभावविनिवर्तकः। किन्त्वाक्रम्यैव तं तिष्ठेद् देवसर्गस्ततो हि सः। अशोच्य एव विज्ञेयो मोक्षयोग्यो हरेः प्रियः’ इति॥06-20॥
Swami Sivananda (1887–1963)Bhagavad Gita
13. “This has been gained by me today; this desire I shall obtain; this is mine and this wealth too shall be mine in future.”
Sri Vishwesha Tirtharu (1931–2019)Gitasaroddhara
16.9–16.15 · ನಿರೀಶ್ವರವಾದದ ದುಷ್ಪರಿಣಾಮಗಳು
ನಾಸ್ತಿಕ್ಕವಾದದ ದುಷ್ಪರಿಣಾಮಗಳು ಈ ನಿರೀಶ್ವರ ಭಾವನೆಯು ಜಗತ್ತಿನ ಪ್ರಗತಿಗೆ ಪೂರ್ತಿ ಕುಠಾರ ಪ್ರಾಯವಾಗಿದೆ. ಸೂರ್ಯನಸುತ್ತಲೂಸಕಲಗ್ರಹಗಳೂತಿರುಗುತ್ತಿರುವಂತೆ ಈಶ್ವರಭಾವನೆಯೇ ಸಕಲಸದ್ಗುಣಗಳ ಆಧಾರಕೇಂದ್ರವಾಗಿದೆ. ಈಶ್ವರನನ್ನೂ ಅತೀಂದ್ರಿಯ ವಸ್ತುಗಳಾದ ಧರ್ಮ ಅಧರ್ಮಗಳನ್ನೂ ಒಪ್ಪದಿರುವವರ ದೃಷ್ಟಿಯಲ್ಲಿ ಸತ್ಯ ದಯೆ, ಅಹಿಂಸೆ ಮುಂತಾದ ವಿಶ್ವಧಾರಕ ಗುಣಗಳಿಗೆ ಏನೂ ಮಹತ್ತ ಮಿರಲಾರದು. ನಾವು ಸತ್ಯವನ್ನೇಏಕೆ ನುಡಿಯಬೇಕು? ನಮಗೆ ಸುಖ ಸಂಪತ್ತುಗಳು ದೊರೆಯುವಸಂದರ್ಭದಲ್ಲಿ ನಾವು ದ್ರೋಹ ವಂಚೆಗಳನ್ನು ಕ ಎಸಗಬಾರದು? ನಮ್ಮ ಸುಖ ಸೌಕರ್ಯಗಳನ್ನು ತೊರೆದು ಅನ್ಯರ ಉಪಕಾರಕ್ಕಾಗಿ ಧುಮುಕುವ ತ್ಯಾಗಪ್ರವೃತ್ತಿಯು ಹುಚ್ಚುತನವಲ್ಲವೆ? ಕೇವಲ ಜಡವಾದಿಯು ಈ ಪ್ರಶ್ನೆಗಳನ್ನು ಹೇಗೆ ಉತ್ತರಿಸಬಲ್ಲನು? ಅವನ ದೃಷ್ಟಿಯಲ್ಲಿ ಮಾನವರೆಲ್ಲರೂ ರೇಡಿಯೋಮುಂತಾದವುಗಳಿಂತೆ ಬರೇ ಯಂತ್ರಗಳು. ಅನ್ಕರ ದುಃಖ, ಹಿಂಸೆ, ಯಾತನೆಗಳಿಗೆ ಜಡವಾದಿಯ ದೃಷ್ಟಿಯಲ್ಲಿ ಏನೂ ಬೆಲೆಯಿಲ್ಲ. ತಾನು ಮಾಡುವ ಯಾವ ಅಕೃತ್ಯಗಳಿಂದಲೂ ಪಾರಲೌಕಿಕ ಅನರ್ಥದ ಭೀತಿ ಸಂಕೋಜಿಗಳು ಅವನಿಗೆ ಇರುವುದಿಲ್ಲ. ಮತ್ತೊಬ್ಬರಿಗೆ ಅನ್ಯಾಯವನ್ನು ಬಗೆಯುವುದರಿಂದ ಐಹಿಕ ಪ್ರಯೋಜನವು ದೊರೆಯುವುದಿದ್ದರೆ ತಾನು ಅದನ್ನು ಏಕೆ ಮಾಡಬಾರದು? ಎಂಬ ಭಾವನೆಯು ಭೌಶಿಕವಾದಿಯಲ್ಲಿ ಸಹಜವಾಗಿ ಮೂಡಲು ಅವಕಾಶವಿದೆ. ಹೀಗಾಗಿ ತನ್ನ ಸ್ವಾರ್ಥಸಾಧನೆಗಾಗಿ ಯಾವ್ರದೇಹೇಯಕೃತಿಗಿಳಿಯಲೂ ಮಾನವನು ಸಿದ್ಧನಾದಾನು. ಧರ್ಮ ಮತ್ತು. ಈಶ್ವರಭಾವನೆಯೇ. ದುಷ್ಯತಿಗಳಿಂದ ಜನರಿಗೆ "ಒದಗುವ ದೂರಭಾವಿ ದುಷ್ಪರಿಣಾಮಗಳ ಬಗ್ಗೆ ಎಚ್ಚರಿಕೆಯನ್ನು ನೀಡಿ ಅವರಲ್ಲಿ ಸತ್‌ಪ್ರವೃತ್ತಗಳ ಉದಯಕ್ಕೆ ಕಾರಣವಾಗಿದೆ. ಮಾನವನ ಅತಿರೇಕದ ಸ್ಥಿತಿಯನ್ನು ನಿಯಂತ್ರಿಸಿ ಅವನು ವಿನಾಶದ ಪ್ರಪಾತದಲ್ಲಿ ಬೀಳದಂತೆ ಅವನ ಗತಿಯನ್ನು ಹಿಡಿತದಲ್ಲಿರಿಸಿಕೊಳ್ಳಲು ಇದೇ ಕಾರಣವಾಗಿದೆ. ಬ್ರೇಕ್‌ ಇಲ್ಲದ ವಾಹನದಂತೆ, ಲಗಾಮಿಲ್ಲದಕುದುರೆಯಂತೆ ಈಶ್ವರಭಾವನೆಯನ್ನು ತೊರೆದು ಕೇವಲ ಭೌತಿಕ ವಿಜ್ಞಾನದ ಸಹಾಯವನ್ನು ಪಡೆದ ಮಾನವನಸ್ಥಿತಿಯೂ ಆಗುವುದು. ಅಕ್ಕತ್ಯ, ಭ್ರಷ್ಟುಚಾರಗಳಿಂದ ತಮಗೆ ಈ ಜೀವನದಲ್ಲಿ ಸ್ವಚ್ಛಂದವಾದ ಸುಖಭೋಗಗಳನ್ನು ಸವಿಯಲು ಸಾಧ್ಯವಿದ್ದರೆ ಮ್ಮ ಈ ಅಲ್ಪಜೀವನವನ್ನು ಆ ರೀತಿಯಲ್ಲಿಯೇ ಸುಖವಾಗಿ ಏಕೆ ಕಳೆಯಬಾರದು? ತ್ಯಾಗ, ಪರೋಪಕಾರ, ಅಹಿಂಸೆಗಳೆಂಬ ಪೂರ್ವಗ್ರಹಗಳಿಗೆ ಬಲಿಬಿದ್ದು ನಮ್ಮ ಜೀವನದಲ್ಲಿ ಒದಗಬಹುದಾದ ಸುಖಸನ್ನಿವೇಶಗಳಿಗೆ ವೃಥಾ ನಾವೇಕೆ ಎರವಾಗಬೇಕು? ಎನ್ನುವಂತಹ ವಿಚಾರಲಹರಿಯಲ್ಲಿ ಸಿಲುಕಿ ಪೂರ್ಣವಾಗಿ ಅನೀತಿಯ ದಾರಿಯನ್ನು ತುಳಿಯುವ ಸಂದರ್ಭವೇ ನಾಸ್ತಿಕ್ಕವಾದದಿಂದ ಸಮಾಜಕ್ಕೆ ಒದಗುವುದು. ದೈವೀಭಾವನೆಯ ಆಧಾರದಲ್ಲಿ ಮಾನವನ ಮನಸ್ಸಿನಲ್ಲಿ ಈ ಸದ್ಗು ಣಗಳ ಸಂಸ್ಕಾರಗಳು ಬಲವಾಗಿ ಬೇರೂರಿರುವುದರಿಂದಲೇ ಈ ಅನೀತಿ ಅವ್ಯವಹಾರಗಳ ಗಾಂಢಾಂಧಕಾರದಲ್ಲಿಯೂ ನೀತಿ, ಪ್ರಾಮಾಣಿಕತೆಗಳ ಮಿಣುಕು ಬೆಳಕನ್ನು ನಾವು ನೋಡುತ್ತಿರುತ್ತೇವೆ. ದೇವರನ್ನು ಒಪ್ಪಲಿ, ಒಪ್ಪದಿರಲಿ; ನೀತಿ, ಶೀಲ, ಚಾರಿತ್ರ್ಯಗಳ ಮಹತ್ತ್ವವನ್ನು ಪ್ರತಿಯೊಬ್ಬರೂ ಅಂಗೀಕರಿಸುವರು. ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅವಶ್ಯವೆಂಬುದನ್ನು ಪ್ರತಿಯೊಬ್ಬರೂ ಅರಿಕಿರುವರು. ಎಂತಹ ಹೀನ ಅಕೃತ್ಯಗಳನ್ನು ಮಾಡುತ್ತಿರುವಾಗಲೂ ತಾನು ಹೇಯವಾದ ಕಾರ್ಯವನ್ನು ಮಾಡುತ್ತಿರುವೆನೆಂಬ ಸಂಕೋಚ, ಜಿಗುಪ್ಸೆಗಳು ಹೆಚ್ಚಾಗಿ ಪ್ರತಿಯೊಬ್ಬ ನಲ್ಲಿಯೂ ಇರುತ್ತವೆ. ಅನುಚಿತ ವರ್ತನೆಗೆ ಇಳಿದಾಗಲೆಲ್ಲ ತಾನಿದನ್ನು ಮಾಡುವುದು ಸರಿಯಲ್ಲ ವೆಂಬ ಒಳದನಿಯ ಆದೇಶವನ್ನು ಕೇಳದವರು ವಿರಳ. ಒಳದನಿಯ ಎಚ್ಚರಿಕೆಯನ್ನು ಮೀರಿ ರಾಗಾವೇಶದಿಂದ ಅನುಚಿತ ಕಾರ್ಯವನ್ನೆಸಗಿದರೂ ತಾನು ಮಾಡಿದ್ದು ತಪ್ಪು ಎಂಬ ಭಾವನೆಯು ಜೊತೆಯಾಗಿಯೇ ಇರುತ್ತದೆ. ಈಶ್ವರಭಾವನೆಯಿಂದ ಸದ್ಗುಣಗಳ ಸಂಸ್ಕಾರಗಳು ಬಲವಾದ ರೀತಿಯಲ್ಲಿ ಸಮಾಜದಲ್ಲಿ ಹೇಗೆ ರೂಢಮೂಲವಾಗಿವೆ ಎಂಬುದನ್ನು ಇದರಿಂದ ನಾವು ಅರಿತುಕೊಳ್ಳಬಹುದು. ಈಶ್ವರನನ್ನು ಅಂಗೀಕರಿಸದ ಸ್ವತಂತ್ರ ಭೌತಿಕವಾದಿಯು ಈ ಶ್ರದ್ಧೆ ಸಂಸ್ಕಾರಗಳನ್ನೆಲ್ಲ ಮೆಟ್ಟಿ ನಿಲ್ಲಬಲ್ಲನು. ತನ್ನ ಲೌಕಿಕ ಜೀವನದ ಸುಖ, ಭೋಗಗಳಿಗೆ ಆತಂಕವಾಗುವ ನೈತಿಕ ಆದರ್ಶಗಳನ್ನು ಕುರುಡು ಭಾವನೆಗಳೆಂದು ಹರಿದು ಕಿತ್ತೆಸೆಯಲು ಅವನಿಗೆ ಏನೂ ಸಂಕೋಚವಾಗದು. ಅವನ ಭೌತಿಕ ದೃಷ್ಟಿಯಲ್ಲಿ ನೈತಿಕ ನಿಷ್ಠೆಗೆ ಏನೂ ಆಧಾರವು ಕಾಣಿಸದು. ಶ್ರದ್ಧೆಯ ಭರದಲ್ಲಿ ರೂಪಿತವಾದ ಪೂರ್ವಗ್ರಹವೆಂದು ಮಾತ್ರ ಇವುಗಳನ್ನು ಆತನು ಪರಿಗಣಿಸಿ, ತನ್ನ ಸ್ವತಂತ್ರ ವಿಚಾರದಿಂದ ಹಳೆಯ ನೈತಿಕ ಸಂಸ್ಕಾರಗಳನ್ನು ಕಿತ್ತೊಗೆಯಲು ಪ್ರವರ್ತಿಸಬಹುದು. ಇದರ ಪರಿಣಾಮವೇನೆಂಬುದು ಸ್ಪಷ್ಟ ದೈವೀ ಭಾವನೆಯೂ ಅದರ ಆಧಾರದಲ್ಲಿಯೇ ರೂಪುಗೊಂಡಿರುವ, ನೈತಿಕ ಆದರ್ಶಗಳೂ ಪೂರ್ತಿಯಾಗಿ ಮರೆಯಾದ ಪ್ರಪಂಚದ ಚಿತ್ರವನ್ನು ಊಹಿಸುವುದೇ ನಮಗೆ ಕಠಿಣವೆನಿಸುವುದು. ಶ್ರೀಮಧ್ವಾಚಾರ್ಯರು ವಿಷ್ಣುತತ್ತ್ವ ನಿರ್ಣಯದಲ್ಲಿ ಹೇಳಿದಂತೆ ಅಶಾಂತಿ, ಅಭದ್ರತೆ, ಅವ್ಯವಸ್ಥೆಗಳ ನೆಲೆಯಾಗಿ ಜಗತ್ತೊಂದು ಘೋರವಾದ ರುದ್ರಭೂಮಿಯೇ ಆಗಬಹುದು: ಏತಾಂ ದೃಷ್ಟಿಮವಷ್ಟಭ್ಯ ನಷ್ಟಾತ್ಮಾನೋಠಲ್ಪಬುದ್ಧಯಃ | ಪ್ರಭವಂತ್ಯುಗ್ರಕರ್ಮಾಣೋ ಕ್ಹಯಾಯ ಜಗತೋಹಹಿತಾಃ ॥ ನಿರೀಶ್ವರನಿಷ್ಠವಾದ ಸ್ವಾರ್ಥದೃಷ್ಟಿಯ ಜನರು ತಮ್ಮ ವರ್ತನೆಯಿಂದ ಜಗತ್ತಿನ ವಿನಾಶಕ್ಕೆ ಕಾರಣರಾಗುವರು. ಕಾಮೋಪಭೋಗಪರಮಾ ಏತಾವದಿತಿ ನಿಶ್ಚಿ ತಾಃ। ವೈಷಯಿಕ ಭೋಗದಲ್ಲಿ ಆಸಕ್ತರಾದ ಆಸುರೀಪ್ರವೃತ್ತಿಯ ಈ ಜನರು ಸಾಂಸಾರಿಕ ಸುಖಾನುಭವವೇ ಜೀವನದ ಪರಮ ವುರುಷಾರ್ಥವೆಂದು ಭಾವಿಸುತ್ತಾರೆ. ಈಗಿನ ಕಾಲದಲ್ಲಿ ನಮ್ಮ ದೇಶದಲ್ಲಿ ಎಲ್ಲರ ವೈಯಕ್ತಿಕ ಹಾಗೂ ರಾಷ್ಟ್ರೀಯ ಧ್ಯೇಯವೇಇದಾಗಿದೆ. ಸಂಪತ್ತನ್ನು ಗಳಿಸುವುದು, ಭೋಗಸಾಮಗ್ರಿ ಗಳನ್ನು ವಡೆಯುವುದು ಇವುಗಳಲ್ಲಿಯೇ ಬಿರುಸಿನ ಸ್ಪರ್ಧೆ, ಕೋಲಾಹಲಗಳು ನಡೆದಿವೆ. ಎಷ್ಟು ಸಂಪತ್ತುಗಳನ್ನು ಗಳಿಸಿದ್ದೇವೆ, ಎಂತಹ ಸೌಧಗಳನ್ನು ಟೇ , ಎಂತಹ ವಿರಸ ಸಾಮ ಸನ್ನು ಸ್ತಿ ದ ಎ ಆಯದ ರಿಂದ ಲೇ ನಮ್ಮ ಜೀವನದ ಸಾ ರ್ಥಕ್ಕ ಶಾ ಗೂ. ಯಸ್ವತೆಗಳನ್ನು ನಿರ್ಧರಸ ಗುತ್ತಿದೆ. ಭೋಗವಿಲಾಸಸಾಮಗ್ರಿಗಳನ್ನು ಬಳಸಕೊಳ್ಳುವಕೆಯೇ ಇಂದು ಜನಾಂಗದ ಸಭ್ಯತೆ, ನಾಗರಿಕತೆಗಳನ್ನು ಅಳೆಯುವಮಾನದಂಡವಾಗಿದೆಯ ಲ್ಲ ದೇ ಸಂಸ್ಕತ ಸದಾಚಾರಗಳಲ್ಲ ವೈರಾಸಿಕ ವಸ್ತು ಗಳ ವ್ರದರ್ಶನ ಧ್ಯಾಶನ್‌ ಶೆರೇಡುಗಳ ಸಂಭ್ರಮಗಳಿಲ್ಲದ. ಸಮಾಜವನ್ನು ಹಿಂದುಳಿದ ಜನಾಂಗವೆಂದು ಹೀಯಾಳಿಸುವೆವು. ಹೀಗೆ ಕಾಮವ್ರಧಾನವಾದ ಜೀವನರೀತಿಯು ಇಂದು ಏರ್ಪಟ್ಟಿದೆ. ಈ ನಿರೀಶ್ವರಭಾವನೆ ಹಾಗೂ ಭೌತಿಕ ಸುಖಲಾಲಸೆಯ ಪರಿಣಾಮವೇನು? ಈಹಂತೇ ಕಾಮಭೋಗಾರ್ಥಂ ಅನ್ಯಾಯೇನಾರ್ಥಸಂಚಯಾನ್‌ | ತಮ್ಮ ವಿಷಯಲಾಲಸೆಯನ್ನು ತೃಪ್ತಿಪಡಿಸುವುದಕ್ಕಾಗಿ ಅನ್ಯಾಯ ಮಾರ್ಗ ದಿಂದಹಣವನ್ನು ಗಳಿಸುವ ಪ್ರವೃತ್ತಿಯುಂಟಾಗುವುದು. ಇದರವಿಶ್ವರೂಪವನ್ನೇ ಲಂಚಗುಳಿತನ, ಕಳ್ಳಪೇಟೆ, 5೮೭ರ, ಆದಾಯಕರವನ್ನುತಪ್ಪಿಸುವಕ್ಕ, ಸರಕಾರ ಹಾಗೂ ಸಾರ್ವಜನಿಕ ಸಂಪತ್ತಿನ ದುರುಪಯೋಗ ಮುಂತಾದ ವಿವಿಧ ರೀತಿಗಳಲ್ಲಿ ಜಗತ್ತಿನಲ್ಲಿ ನೋಡುತ್ತಿರುವೆವು. ನಮ್ಮ ದೇಶದ ಈಗಿನ ಸ್ಥಿತಿಯ ಚಿತ್ರಣವನ್ನೇ ಗೀತೆಯ ಈ 'ಭಾಗವು ಮಾಡಿದೆಯೇನೋ ಎಂದು ನಮಗನಿಸುತ್ತದೆ. ಇದಮಸ್ತೀದವುಷಿ ಮೇ ಭವಿಷ್ಯತಿ ಪುನರ್ಧನಮ್‌ ॥ ಆಧ್ಯೋತಭಿಜನವಾಸಸ್ಥಿ ಕೋನಕ್ಯೋಸ್ತಿ ಸದೃತೋಮಯಾ | “ಇಷ್ಟು ಹಣ ಪಡೆದಿರುವೆನು, ನಾಳೆಗೆ ಇನ್ನಷ್ಟು ದೊರಕಿಸಿಕೊಳ್ಳುವೆನು'' "ನನಗೆ ಅಧಿಕಾರಬಲವಿದೆ, ನಾನು ಏನು ಬೇಕಾದರೂ ಮಾಡಬಲ್ಲೆ'' ಇಂತಹ ಲೋಜ ದರ್ಪಗಳ ಸಾಮ್ರಾಜ್ಯವನ್ನೇ ನಾವು ಎಲ್ಲೆಲ್ಲಿಯೂ ನೋಡುತ್ತಿ ರುವೆವು. ಆಸುರೀಭಾವನೆಯಿಂದ ಲೋಕದಲ್ಲಿ ಆಗಬಹುದಾದ ಈ ಅನರ್ಥ ಹಾವಳಿಗಳನ್ನು ತಪ್ಪಿಸಲು ಈಶ್ವರಭಾವನೆಯನ್ನು ಜಾಗೃತಗೊಳಿಸುವುದೇ ಏಕ ಮಾತ್ರ ಉಪಾಯವಾಗಿದೆ... ಶಶ್ವರಭಾವನೆಯು ಸಮಾಜದಲ್ಲಿ ರೂಢಮೂಲವಾದಲ್ಲಿ ಪರಮಾತ್ಮನು ಜಗತ್ತಿನ ಸುವ್ಯವಸ್ಥೆಗಾಗಿ ಆತ್ಮನ ಕಲ್ಯಾಣಕ್ಕಾಗಿ ಏರ್ಪಡಿಸಿದ ನೀತಿನಿಯಮಗಳನ್ನು ಅನುಸರಿಸಬೇಕೆನ್ನುವ ಪ್ರೇರಣೆಯು ಲೋಕದಲ್ಲಿ ಒಡಮೂಡುವುದರಿಂದ ಸ್ವಾರ್ಥಮೂಲಕ ದುಷ್ಟವೃತ್ತಿಗಳು ಕಡಿಮೆಯಾಗಲು ಅವಕಾಶವಾಗುವುದು. ಪರಮಾತ್ಮನ ಮೇಲಿರುವ ಭಕ್ತಿ ದುಷ್ಟರನ್ನು ನಿಗ್ರಹಿಸಿ ಶಿಷ್ಟರನ್ನು ರಕ್ಷಿಸುವ ಅವನ ನ್ಯಾಯದಾನದ ಮೇಲಿರುವನಂಬಿಕೆ- ಇವು ದುಷ್ಟವರ್ತನೆಗೆ ನಾವು ಇಳಿಯದಂತೆ ನಮ್ಮನ್ನು ಎಚ್ಚರಿಸುವವು. ವಿಶ್ವರಕ್ಷಕನಾದ ಪರಮಾತ್ಮನು ನಾವು ಮಾಡುವ ಅಕ್ಕತ್ಯ ಅಪರಾಧಗಳಿಗೆ ತಕ್ಕ ದಂಡವನ್ನು ನೀಡುವನು. ನಮ್ಮ ಕಾರ್ಯಗಳನ್ನು ನಿರೀಕ್ಷಣ ಮಾಡುವಪರಾತ್ಮರಶಕ್ತಿಇದೆಎಂಬತಿಳುವಳಿಕೆಯುವಾಪ ಅನ್ಯಾಯಗಳಿಂದ
Bannanje Govindacharya (1936–2020)Bhagavad Gita Pravachana
ಇದಮದ್ಯ ಮಯಾ ಲಬ್ಧಮಿಮಂ ಪ್ರಾಪ್ಟ್ಯೇ ಮನೋರಥಮ್‌ | ಇದಮಸ್ತೀದಮಪಿ ಮೇ ಭವಿಷ್ಯತಿ ಪುನರ್ಧನಮ್‌ ॥೧೩॥
16.13–16.15
ಇದಮ್‌ ಅದ್ಯ ಮಯಾ ಲಬ್ಧಮ್‌ ಇಮಮ್‌ ಪ್ರಾಪ್ಸ್ಯೇ ಮನೋರಥಮ್‌ | ಇದಮ್‌ ಅಸ್ತಿ ಇದಮ್‌ ಅಪಿ ಮೇ ಭವಿಷ್ಯತಿ ಪುನರ್ಧನಮ್‌ || ಅಸೌ ಮಯಾ ಹತಃ BBY: ಹನಿಷ್ಯೇ ಚ ಅಪ ರಾನ್‌ ಅಪಿ | ಈಶ್ವರಃ ಅಹಮ್‌ ಅಹಮ್‌ ಭೋಗೀ ಸಿದ್ಧಃ ಅಹಂ ಬಲವಾನ್‌ ಸುಖೀ || ಆಢ್ಯೋ ಅಭಿಜನವಾನ್‌ ಅಸ್ಮಿ ಕಃ ಅನ್ಯಃ ಅಸ್ತಿ ಸದೃಶಃ ಮಯಾ | ಯಕ್ಷ್ಯೇ ದಾಸ್ಯಾಮಿ ಮೋದಿಷ್ಯೇ ಇತಿ ಅಜ್ಞಾನ ವಿಮೋಹಿತಾಃ -ಅವರು ತಿಳಿಗೇಡಿತನದಿಂದ ಹೀಗೆ ಬಡಬಡಿಸುತ್ತಾರೆ: ಇದನ್ನೀಗ ನಾನು ಪಡೆದೆ; ಈ ಬಯಕೆಯನ್ನು ಮುಂದೆ ಈಡೇರಿಸಿಕೊಳ್ಳುತ್ತೇನೆ; ಇದಂತೂ ಇದೆ; ಮತ್ತೆ ಈ ಹೊನ್ನೂ ನನ್ನದಾಗಲಿದೆ; ಈ ಹಗೆಯನ್ನು ಕೊಂದೆ; ಉಳಿದವರನ್ನೂ ಮುಗಿಸಲಿದ್ದೇನೆ; ನಾನು ಸರ್ವಶಕ್ತ; ನಾನೇ ಭೋಗಿಸುವವನು; ನಾನೇ ಬಯಸಿದ್ದನ್ನೆಲ್ಲಾ ಪಡೆದವನು; ಶಕ್ತಿಶಾಲಿ ಮತ್ತು ಸುಖಿ; ಸಿರಿವಂತನಿದ್ದೇನೆ; ಕುಲವಂತನಿದ್ದೇನೆ; ಯಾರಿದ್ದಾರೆ ನನಗೆ ಸಾಟಿ? ನಾನು ಯಾಗ ಮಾಡಿಸುತ್ತೇನೆ. ದಾನ ನೀಡುತ್ತೇನೆ. ಖುಶಿಪಡುತ್ತೇನೆ. ಆಸುರೀ ಸ್ವಭಾವದವರ ಯೋಚನೆಗಳು ಹೇಗಿರುತ್ತವೆ ಎನ್ನುವುದನ್ನು ಕೃಷ್ಣ ಈ ಮೂರು ಶ್ಲೋಕದಲ್ಲಿ ವಿವರಿಸಿದ್ದಾನೆ. ಇವರಿಗೆ ಸದಾ ಧನ ಸಂಗ್ರಹ ಮಾಡಬೇಕು ಎನ್ನುವ ಯೋಚನೆ. ಸಿಕ್ಕಿದಾಗ “ಇಂದು ಇಷ್ಟು ಸಿಕ್ಕಿತು, ನಾಳೆ ಇಷ್ಟು ಗಳಿಸುತ್ತೇನೆ' ಎನ್ನುವ ಚಪಲ. ದುಡ್ಡು ಸಂಗ್ರಹ ಮಾಡುವುದು ಇವರಿಗೊಂದು ಚಟ. ತನಗೆ ಆಗದವನನ್ನು ಮುಗಿಸಿದೆ, ಇನ್ನು ಆಗದವರನ್ನು ಮುಗಿಸುವೆ ಎನ್ನುವ ಯೋಚನೆ. ನಾನೇ ಸರ್ವ ಸಮರ್ಥ, ನನ್ನಿಂದಾಗದ್ದು ಈ ಜಗತ್ತಿನಲ್ಲೇನಿದೆ? ನಾನು ಸುಖ ಪಡಲು ಹುಟ್ಟಿದವನು-ದುಃಖಪಡಲಿಕ್ಕಲ್ಲ; ನನ್ನ ಸುಖಕ್ಕಾಗಿ ಏನು ಬೇಕಾದರೂ ನಾನು ಮಾಡುತ್ತೇನೆ; ಅದಕ್ಕೆ ಅಡ್ಡ ಬರುವವರನ್ನು ಮುಗಿಸುತ್ತೇನೆ; ನಾನೇ ಸಿದ್ಧ ಪುರುಷ; ನ ನ ಸರಿಸಾಟಿ ಈ ಜಗತ್ತಿನಲ್ಲಿ ಯಾರಿದ್ದಾರೆ? - ಇತ್ಯಾದಿ ಇವರ ಯೋಚನೆಗಳು. ತೋರಿಕೆಗಾಗಿ ಯಜ್ಞ ಯಾಗಾದಿಗಳನ್ನು ಮಾಡುವುದು, ದಾನ ನೀಡುವುದು ಇವರ ನಿರಂತರ ಚಟುವಟಿಕೆ. ಇದು ಅಜ್ಞಾನದ ನಾಟ್ಯ. ಇದು ಅವರ ಸರ್ವನಾಶದ ಹೆಬ್ಬಾಗಿಲು ಎನ್ನುವ ಪರಿವೇ ಅವರಿಗಿರುವುದಿಲ್ಲ. ಅದೇ ದೊಡ್ಡಸ್ತಿಕೆ, ಅದೇ ಸುಭಗತನ ಎನ್ನುವ ಭ್ರಮೆಯಲ್ಲಿ ಇವರು ಬದುಕುತ್ತಿರುತ್ತಾರೆ. ಸಿದ್ದಿಗೆ ನಾನೇ ಹೊಣೆಗಾರ; ನಾನು ಸುಖಪಡಲು ಹುಟ್ಟಿದವ ಅದಕ್ಕೆ ಬೇಕಾದ ಜನ-ಧನ-ಅಧಿಕಾರ ಲಿದೆ; ನನ್ನಿಚ್ಛೆಯಂತೆ ನಾನು ನಡೆದುಕೊಳ್ಳುತ್ತೇನೆ; ದುಡ್ಡಿನಿಂದ ಏನನ್ನಾದರೂ ಖರೀದಿಸಬಲ್ಲೆ; ನನಗೆ
Bibek Debroy (1955–2024)The Bhagavad Gita
(13) ‘Today I have gained this. I will get that desired object later. I have this and again that wealth will also be mine...’