तस्माच्छास्त्रं प्रमाणं ते कार्याकार्यव्यवस्थितौ ।
ज्ञात्वा शास्त्रविधानोक्तं कर्म कर्तुमिहार्हसि ॥
tasmācchāstraṃ pramāṇaṃ te kāryākāryavyavasthitau |
jñātvā śāstravidhānoktaṃ karma kartumihārhasi ||
Swami Sivananda (1887–1963)Bhagavad Gita
24. Therefore, let the scripture be the authority in determining what ought to be done and
what ought not to be done. Having known what is said in the ordinance of the scriptures, thou
shouldst act here in this world.
Sri Vishwesha Tirtharu (1931–2019)Gitasaroddhara
ತಸ್ಮಾಚ್ಛಾಸ್ತ್ರಂ ಪ್ರಮಾಣಂ ತೇ
ತಸ್ಮಾಚ್ಛಾಸ್ತ್ರಂ ಪ್ರಮಾಣಂತೇ
ಹೀಗೆ ನಮ್ಮ ಜೀವನದ ಗತಿಯನ್ನೇ ಬದಲಾಯಿಸಿ, ಸರಿಯಾದ ದಿಶೆಗೆ
ನಮ್ಮನ್ನು ಒಯ್ಯುವ ಈ ಆಧ್ಯಾತ್ಮಕ ದೃಷ್ಟಿಯನ್ನು ನಾವು ಹೇಗೆ ಪಡೆಯಬೇಕು?
ಪ್ರತ್ಯಕ್ಷಕ್ಕಿ ಗೋಡರವಾಗದ ಶಸ್ತ್ರರ, ಧರ್ಮ, ಅಧರ್ಮ, ಪುಣ್ಯ ಪಾಪಗಳನ್ನೆಲ್ಲ
ನಾವು ಹೇಗೆತಿಳಿದುಕೊಳ್ಳುವುದು? ಯುಕ್ತಿಯಿಂದಸಾಧಾರಣವಾಗಿ ಈಶ್ವರನ
ಅಸ್ತಿತ್ವವನ್ನು ಮನಗಾಣಬಹುದಾದರೂ ಅವನ ಬಗ್ಗೆ ಹೆಚ್ಚಿನ ವಿವರಗಳನ್ನು
ಪ್ರತ್ಯಕ್ಷದಿಂದ ತಿಳಿಯಲಾರೆವು. ಅವನ ಆಕಾರ, ಗುಣ, ಶಕ್ತಿಗಳನ್ನಾಗಲಿ ಅವನ
ೃಷ್ಟಿಕ್ರಮ, ನೀತಿಧೋರಣೆಗಳನ್ನಾಗಲಿ ಬರಿ ಯುಕ್ತಿಯ ಬಲದಿಂದ ಅರಿಯ
ಲಾರೆವು. ಯಾವಕೃತಿಗಳು ದುಷ್ಪಹಾಗೂ ಆತ್ಮನ ಅಧಃಪತನಕ್ಕೆ ಕಾರಣವಾಗಿವೆ?
ಯಾವವು ಉತ್ತಮ ಕೃತಿಗಳು? ಅವುಗಳತಾರತಮ್ಯ ವೈಚಿತ್ರ್ಯಗಳೇನು? ಇಂತಹ
ಇಂದ್ರಿಯಾಗೋಚರ ಸೂಕ್ಷ್ಮವಿಚಾರಗಳನ್ನೆಲ್ಲ ತರ್ಕದ ಬಲದಿಂದ
ನಿರ್ಧರಿಸಲು ಸಾಧ್ಯವೇ ಇಲ್ಲ. ಈ ತರ್ಕದ ಮಹಾರಣ್ಯವನ್ನು ಪ್ರವೇಶಿಸಿದರೆ
ಯುಕ್ತಿ ಪ್ರತಿಯುಕ್ತಿಗಳ ಗೊಂದಲದಲ್ಲಿ ಸಂಪೂರ್ಣವಾಗಿ ಮಾರ್ಗ
ಭ್ರಷ್ಟರಾಗುವ ಸಂಭವವೇಇದೆ. ವಾದದ ಪ್ರಸಂಗದಲ್ಲಿ ತನ್ನತಾರ್ಕಿಕ ಶಕ್ತಿಯಿಂದ
ಪ್ರತಿಯೊಂದು ವಿಷಯವನ್ನೂ ವಿಪರ್ಯಾಸವಾಗಿ ಪ್ರತಿಪಾದನೆ ಮಾಡುವುದು
ಕಠಿಣವಾಗಲಾರದು. ಕೇವಲ ತರ್ಕದ ದಾರಿಯಲ್ಲಿ ಯೇ ನಡೆಯುವ ಜಿಜ್ಞಾನುವು
ಹೆಚ್ಚಿನ ಮಾನಸಿಕ ವಿಕ್ಷಿಪ್ತತೆಗೆ ಗುರಿಯಾಗುವನು. ಹೀಗಾಗಿ ಈ ಆಧ್ಯಾತ್ಮಿಕ
ತತ್ತ್ವಗಳನ್ನು ತಿಳಿಯುವುದೆಂತು? ಕರ್ತವ್ಯಮತ್ತು ಅಕರ್ತವ್ಯಗಳ ಜಿಜ್ಞಾಸೆಯನ್ನು
ಪರಿಹರಿಸಿಕೊಳ್ಳುವ ಬಗೆ ಹೇಗೆ? ಎನ್ನುವ ಪ್ರಶ್ನೆಯು ಉಳಿಯುತ್ತದೆ. ಶ್ರೀಕೃಷ್ಣನು
ಇದರ ಪರಿಹಾರ ಮಾರ್ಗವನ್ನುತೋರಿದ್ದಾನೆ.
ತಸ್ಮಾತ್ ಶಾಸ್ತ್ರಂ ಪ್ರಮಾಣಂತೇ
ಕಾರ್ಯಾಕಾರ್ಯವ್ಯವಸ್ಥಿತೌ।
ಶಾಸ್ತ್ರವೇ ಅತೀಂದ್ರಿಯ ವಸ್ತುವನ್ನು ತಿಳಿಯಲು ನಮಗೆ ಇರುವ
ಸಾಧನವಾಗಿದೆ. ಎಲ್ಲವನ್ನೂ ನಮ್ಮ ಇಂದ್ರಿಯಗಳಿಂದಲೇ ತಿಳಿಯಲು ಸಾಧ್ಯ
ವಿಲ್ಲ. ಇಂದ್ರಿಯಗಳ ಶಕ್ತಿಯು ಪರಿಮಿತವಾಗಿದೆ. ಕೆಲವೊಂದು ರೂಪಗುಣ
ವಿಶೇಷವುಳ್ಳವಸ್ತುಗಳನ್ನು ಮಾತ್ರ ಅವು ಗ್ರಹಿಸಬಲ್ಲವು. ಕಣ್ಣಿಗೆ ಕಾಣದ ಶಬ್ದವನ್ನು
ಕಿವಿಯು ಗ್ರಹಿಸುತ್ತದೆ. ಹೀಗೆ ಎಲ್ಲ ಇಂದ್ರಿಯಗಳು ಕೆಲವೊಂದು
ನಿಯಮಗಳಿಗನುಸಾರವಾಗಿ ನಿರ್ದಿಷ್ಟ ವಸ್ತುವನ್ನು ಮಾತ್ರ ತೋರಿಸುತ್ತವೆ.
ಆದುದರಿಂದ ಇಂದ್ರಿಯಗಳಿಗೆ ಗೋಚರವಾಗದ ವಸ್ತುಗಳೇ ಇಲ್ಲವೆನ್ನುವುದು
ಈ ವಿಶಾಲ ವಿಶ್ವದ ಅಪಹಾಸವೆನಿಸುವುದು. ಪ್ರಕೃತಿಯ ಗರ್ಭದಲ್ಲಿ ಅಡಗಿದ
ಹೊಸಹೊಸಸಂಗತಿಗಳು ಪ್ರತಿದಿನವೂಎಂಬಂತೆ ಬೆಳಕಿಗೆ ಬರುತ್ತಿರುವ ಇಂದಿನ
ವಿಜ್ಞಾನಯುಗದಲ್ಲಿಯಂತೂ ಪ್ರತ್ಯಕ್ಷಕ್ಕೆ ಗೋಚರವಾಗದ ವಸ್ತುಗಳೇ
ಇಲ್ಲವೆನ್ನುವ ವಾದದಲ್ಲಿ ಹುರುಳಿಲ್ಲವೆನ್ನುವುದು ಹೆಜ್ಜು ಸ್ಪಷ್ಟವಾಗುತ್ತಿದೆ. ನಮ್ಮ
ಇಂದ್ರಿಯಗಳಿಗೆ ಗೋಚರವಾದುದಷ್ಟೇ ಸತ್ಯವೆಂದು ಭಾವಿಸದೆ ಈ ವಿಶಾಲ
ಎಶ್ವದಲ್ಲಿ ನಾವು ನಮ್ಮ ಇಂದ್ರಿಯಗಳಿಂದ ಕಂಡುಹಿಡಿದಿರುವ ವಸ್ತುಗಳು
ಅತ್ಯಲ್ಪವೆಂಬುದನ್ನು ನಾವು ಅರಿತುಕೊಳ್ಳಬೇಕು. ಧ್ಯಾನ, ಯೋಗಾಭ್ಯಾಸ,
ತಪಸ್ಸುಗಳಿಂದ ವಿಶ್ವದ ನಿಗೂಢವನ್ನು ಸಾಕ್ಟಾತೃರಿಸಬಲ್ಲ ದಿವ್ಯದೃಷ್ಟಿಯನ್ನು
ಪಡೆದಿರುವ ಅನುಭಾವಿಗಳ ವಚನಗಳಿಂದಲೇ ಇಂದ್ರಿಯಾತೀತವಾದ ಈ
ಪ್ರಪಂಚವನ್ನು ನಾವು ತಿಳಿದುಕೊಳ್ಳಬೇಕಾಗಿದೆ. ಪ್ರತ್ಯಕ್ಷವಾಗಿ ನೋಡದಿರುವ
ಪ್ರಕೃತಿಯ ಅನೇಕ ಅದ್ಭುತ ಸಂಗತಿಗಳನ್ನು ವಿಜ್ಞಾನಿಗಳ ಮಾತಿನಿಂದ ನಾವು
ನಂಬುವೆವು.. ಅವರು ವೈಜ್ಞಾ ನಿಕ ಸಲಕರಣೆಗಳನ್ನು ಬಳಸಿ ನಮಗೆ
ಅಗೋಚರಗಳಾದ ವಸ್ತುಗಳನ್ನೂ ಗ್ರಹಿಸಬಲ್ಲರು. ಅದರಂತೆಯೆ ಬಷಿಗಳೂ
ವಿಶಿಷ್ಟವಾದ ಸಾಧನಸಾಮಗ್ರಿಯಿಂದ ಅವೂರ್ವ ಶಕ್ತಿ ಯನ್ನು ವಡೆದು ನಮಗೆ
ಕಾಣದ ಅಲೌಕಿಕ ವಸ್ತುಗಳನ್ನು ನೋಡಬಲ್ಲರು. ವಿಜ್ಞಾನಿಗಳು ತಮ್ಮ
ಯಂತ್ರೋಪಕರಣಗಳ ಮೂಲಕವಾಗಿ ತೀವ್ರ ಸಂಶೋಧನೆಯಿಂದ
ಕಂಡುಹಿಡಿದವಸ್ತುಗಳು ನಮ್ಮಸ್ಟೂಲದೃಷ್ಟಿಗೆ ಕಾಣುವುದಿಲ್ಲವೆಂದು ನಾವವನ್ನು
ಅಲ್ಲಗಳೆಯುವೆವೆ? ಅಂತಹ ಸೂಕ್ಷ್ಮ ಉಪಕರಣಗಳ ಸಹಾಯದಿಂದ ಆ
ವಿಜ್ಞಾನಿಯ ಸಿದ್ಧಾಂತದಲ್ಲಿ ಹುಳುಕುಗಳನ್ನು ತೋರಿಸಲು ವ್ರಯತ್ನಿಸಿದಲ್ಲಿ
ಮಾತ್ರ ಅವನ ಮಾತುಗಳಿಗೆ ಮಹತ್ತ್ವ ಬರಬಹುದಲ್ಲದೆಸಂಶೋಧನದ ಯಾವ
ಸಾಹಸವನ್ನೂ ಮಾಡದೆ ತೆಪ್ಪಗೆ ಕುಳಿತು ವಿಜ್ಞಾನಿಯು ಹೇಳಿದ್ದು ಕಣ್ಣಿಗೆ
ಕಾಣದಿರುವುದರಿಂದ ಅದು ಅಸತ್ಯವೆಂದಿಷ್ಟೇ ಖಂಡಿಸಿದರೆ ಅದಕ್ಕೆ ಯಾವ
ಬೆಲೆಯೂ ಬರಲಾರದು. ನಮ್ಮಪ್ರಾಚೀನ ಯುಷಿ-ಮುನಿಗಳು ತೀವ್ರ ಅಭ್ಯಾಸ,
ಯೋಗಸಾಧನೆ ಮುಂತಾದ ಕ್ಲಿಷ್ಟ ಮಾರ್ಗಗಳಿಂದ ಅತೀಂದ್ರಿಯ
ಪದಾರ್ಥಗಳನ್ನು ತಾವು ಕಂಡುಹಿಡಿದಿರುವುದಾಗಿ ಸಾರಿರುವಾಗ ಅವರ
ಸಾಧನೆಯ ವಥದಲ್ಲಿ ನಡೆಯದೆ, ತಮ್ಮ ಅನುಭವದಪ್ರಧಾನಸಾಮಗ್ರಿಯೆಂದು
ಅವರು ಹೆಸರಿಸುವ ಯೋಗ್ಯ ತವಸ್ಸುಗಳನ್ನು ಏನೂ ಆಚರಿಸದೆ, ನಮ್ಮ
ಸ್ಥೂಲದೃಷ್ಟಿಯ ಆಧಾರದಿಂದಲೇ ಅವರ ವಿಚಾರ ದರ್ಶನಗಳನ್ನು ನಾವು
ಅಲ್ಲಗಳೆಯುವುದರಲ್ಲಿ ಅರ್ಥವೇನಿದೆ? ನಮ್ಮ ಶರೀರಕ್ಕೆ ಸಂಬಂಧಿಸಿದ ಆಹಾರ
ಔಷಧಗಳ ಬಗ್ಗೆ ತಜ್ಞನಾದ ವೈದ್ಯನ ಮಾತನ್ನೇ ಅವಲಂಬಿಸಿ ಪ್ರವೃತ್ತಿಸುವೆವು. ಅಲ್ಲಿ
ನಮ್ಮ ಪ್ರತ್ಯಕ್ಷ ಹಾಗೂ ತರ್ಕಗಳ ಆಟವೇನೂ ನಡೆಯದು. ವೈದ್ಯನ ಮಾತನ್ನು
ಮೀರಿ ಮನಬಂದಂತೆ ಔಷಧಗಳನ್ನು ಸೇವಿಸಿದರೆ ಅನಾಹುತವೇ ಆಗಬಹುದು.
ಅದರಂತೆ ಜಗತ್ತಿನ ಸೂಕ್ಷ್ಮತತ್ತ್ವಗಳ ಪ್ರತ್ಯಕ್ಷದರ್ಶಿಗಳೆನಿಸಿದ ಅನುಭಾವಿಗಳ
ಮಾತಿನಿಂದಲೇ ಜೀವನದ ಕರ್ತವ್ಯ ಅಕರ್ತವ್ಯಗಳನ್ನು ನಿರ್ಧರಿಸಬೇಕು. ಕೇವಲ
ತಾರ್ಕಿಕ ಬುದ್ಧಿಯನ್ನೇ ಅವಲಂಬಿಸುವುದರಿಂದ ಅನಿರ್ಧಾರ, ಕಾಲಹರಣ
ಮತ್ತುಗಲಿಬಿಲಿಗಳ ಹೊರತು ಮತ್ತೇನೂಸಿದ್ದಿಸದು. ತರ್ಕದಿಂದ ಅತೀಂದ್ರಿಯ
ವಸ್ತುವಿನ ನಾಮಾನ್ಯ ಕಲ್ಪನೆಯಾಗಬಹುದಾದರೂ ಅದರ ವಿಶೇಷಾಂಶಗಳ
ನಿರ್ಧಾರವು ಪ್ರತ್ಯಕ್ಷ ಮತ್ತು ತರ್ಕಗಳಿಗೆ ಅತೀತವೇ ಆಗಿದೆ. ಜಗತ್ತಿನ ಗೂಢ
ತತ್ತ್ವಗಳ ವಿಶೇಷಾಂಶಗಳನ್ನು ಅರಿಯದೆ ಅವೂರ್ಣವಾದ ಜ್ಞಾನದ
ಳಹದಿಯಲ್ಲಿ ನಮ್ಮ ಜೀವನದ ರೀತಿ-ನೀತಿಗಳನ್ನು ನಾವು ಹೇಗೆ
ರ್ಧರಿಸುವುದು? ಅದಕ್ಕಾಗಿ ನಾವು ಶಾಸ್ತ್ರಕ್ಕೆ ಶರಣೆನ್ನಲೇಬೇಕಾಗುವುದು.
ಶಾಸ್ತ್ರವೊಂದರಿಂದಲೇ ತತ್ತ್ವಜ್ಞಾನವನ್ನು ಪಡೆದು ಕರ್ತವ್ಯ ಅಕರ್ತವ್ಯಗಳನ್ನು
ರ್ಧರಿಸಬೇಕೆನ್ನುವುದರಿಂದ ತರ್ಕವನ್ನು ಪೂರ್ತಿಯಾಗಿ ಕೈಬಿಡಬೇಕೆಂದು
'ರ್ಥವಲ್ಲ ತಾತ್ತ್ವಿಕ ವಿಚಾರದಲ್ಲಿ ತರ್ಕಕ್ಕೆ ಅಪೂರ್ವವಾದ ಸ್ಥಾನವಿದೆ. ಬ್ರಹ್ಮ
ಸೀಮಾಯಾಶಾಸ್ತ್ರವೆಲ್ಲ ಯುಕ್ತಿಗಳ ನಿರೂಪಣೆಯೇ ಆಗಿದೆ.
ಯಸ್ತ ರ್ಕೀಣಾನುಸಂಧತ್ತೇ ಸ ಧರ್ಮಂ ವೇದ ನೇತರಃ।
ತಾರ್ಕಿಕ ಬುದ್ಧಿಯನ್ನು ಉಪಯೋಗಿಸದವನಿಗೆ ಧರ್ಮದ ಪರಿಜ್ಞಾನವೇ
ಆಗಲಾರದೆಂದು ಶಾಸ್ತ್ರಕಾರರು ಹೇಳಿರುವರು. ಆದರೆ ತರ್ಕವೊಂದನ್ನೇ
ಆಶ್ರಯಿಸಿ ವಸ್ತುನಿರ್ಧಾರಣೆಗೆ ಹೊರಬಟ್ಲಿ ಜಜ್ಞಾಸುವಿಗೆತತ್ತ್ವನಿಶ್ಚಯಕ್ಕಿಂತ
ಮಾನಸಿಕ ಗೊಂದಲವೇ ಸಂಭವಿಸುವುದು. ತರ್ಕವು ನಮ್ಮ ತತ್ತ್ವಜ್ಞಾನ
ಯಾತ್ರೆಯ ವಾಹನವೆನಿಸಲಾರದು; ಅದು ವಾಹನವನ್ನು ಚೆನ್ನಾಗಿ ಬಳಸಲು
ಅವಶ್ಯಕವೆನಿಸಿದ ಒಂದು ಉಪಕರಣ ಮಾತ್ರವಾಗಿದೆ. ಶಾಸ್ತ್ರವೇ ಈ
ಜ್ಞಾನಯಾತ್ರೆಯ ವಾಹನವಾಗಿದ್ದು ಶಾಸ್ತ್ರದಿಂದ ಈ ತತ್ತ್ವಜ್ಞಾನವನ್ನು
ಪಡೆಯಲು ತರ್ಕವು ಸಹಕಾರಿಯ ಪಾತ್ರವನ್ನು ಮಾತ್ರ ನಿರ್ವಹಿಸುವುದು. ನಮ್ಮ
ಜೀವನದ ಪ್ರತಿಯೊಂದು ನಿರ್ಧಾರಪ್ರವೃತ್ತಿಯಲ್ಲಿಯೂ ತಾರ್ಕಿಕ ಬುದ್ಧಿಯ
ಪಾತ್ರವುಮಹತ್ತ್ವದ್ದಾಗಿದ್ದರೂ ಅದರ ಗತಿ-ವಿಧಿಗಳಿಗೆ ಒಂದು ಪರಿಮಿತಿಯನ್ನು
ಕಲ್ಪಿಸಲಾಗಿದೆ. ಮಗುವನ್ನು ಮನೆಯೊಳಗೆ ಹಾಗೂ ಅಂಗಳದಲ್ಲಿ ಆಟವಾಡಲು
ಬಿಡುವೆವು. ಆದರೆ ಮನೆಯ ಕಾಂಪೌಂಡಿನ ಹೊರಗೆ ಬಹುದೂರದವರೆಗೆ
ಅದನ್ನು ನಾವುಕಳಿಸಲಾರವು. ಅದು ಅಪಾಯಕ್ಕೆ ಒಳಗಾಗಬಾರದೆಂಬುದೇನಮ್ಮ
ಉದ್ದೇಶ. ಪ್ರತ್ಯಕ್ಷಮತ್ತು ಆಗಮಗಳವಲಯದಲ್ಲಿನಮ್ಮತಾರ್ಕಿಕ ಬುದ್ದಿಯನ್ನು
ಸ್ವಚ್ಛಂದವಾಗಿ ಸಂಚಾರ ಮಾಡಿಸಬಹುದು. ಆದರೆ ಆ ಮೇರೆಯನ್ನು ದಾಟಿ
ಸಂಚರಿಸಲು ತರ್ಕಕ್ಕೆ ಅನುಮತಿಯನ್ನು ನೀಡಿದರೆ ತತ್ತ ಎದ ಬದಲು
ಅಪಾಯದಸಂಭವವೇಹೆಚ್ಚು ಆದುದರಿಂದ ಅತೀಂದ್ರಿಯಪ್ರಪಂಚದ ಬಗ್ಗೆ
ತರ್ಕವನ್ನು ಅತಿಯಾಗಿ ಉವಯೋಗಿಸಬಾರದು. ಪ್ರತ್ಯಕ್ಷ ಮತ್ತು ಶಾಸ್ತ್ರದ
ಚೌಕಟ್ಟಿನಲ್ಲಿಯೇ ನಮ್ಮ ತಾರ್ಕಿಕ ಶಕ್ತಿಯನ್ನು ಉಪಯೋಗಿಸಬೇಕೆನ್ನುವ
ಪರಿಮಿತಿಯನ್ನು ಏರ್ಪಡಿಸಲಾಗಿದೆ. ಉಗಿಬಂಡಿಯು ಎರಡು ಹಳಿಗಳ
ಪರಿಧಿಯಲ್ಲಿ ನಾಗಿದರ ಮಾತ್ರ ಗುರಿಯನ್ನು ಮುಟ್ಟಬಹುದು. ಆ ಹಳಿಗಳಲ್ಲಿ
ಸ್ವಲ್ಪ ಆತಿಕ್ರಮವಾದರೆ ಅಪಘಾತವೇ ನಡೆಯುವುದು. ತರ್ಕದ ಉಗಿಬಂಡಿಗೂ
ಪ್ರತ್ಯಕ್ಷ ಮತ್ತುಶಾಸ್ತ್ರವೇಎರಡು ರೈಲ್ವೇ ಹಳಿಗಳು. ಅವರನ್ನು ಅತಿಕ್ರಮಿಸದೆ, ಆ
ಆಧಾರದಲ್ಲಿಯೇ ತರ್ಕದ ದೀರ್ಫಯಾತ್ರೆಯು ನಡೆಯಬೇಕು.
ಪಂಚವಟಿಯಲ್ಲಿ ಸೀತೆಯನ್ನು ಬಿಟ್ಟುತೆರಳುವ ಲಕ್ಷ್ಮಣನು ಒಂದು ಗೆರೆಯನ್ನು
ಹಾಕಿ ಅದನ್ನು ದಾಟದಂತೆ ಎಚ್ಚರಿಸಿದ್ದನಂತೆ. ಸಂನ್ಯಾಸಿ ವೇಷದ ರಾವಣನಿಗೆ
ಭಿಕ್ಷೆಯನ್ನು ನೀಡುವ ಭರದಲ್ಲಿ ಸೀತೆಯು ಆ ಗೆರೆಯನ್ನು ದಾಟಿ ರಾವಣನ
ಅಪಹರಣಕ್ಕೆ ಒಳಗಾದಕೆಂದು ಒಂದುಕತೆಇದೆ. ನಮ್ಮತಾರ್ಕಿಕ ಬುದ್ಧಿಯು ಈ
ಲಕ್ಷ್ಮಣ ರೇಖೆಯನ್ನು ದಾಟದೆ ಸಂಚರಿಸಿದರೆ ಅಪಾಯವಿಲ್ಲ. ಶಾಸ್ತ್ರ ಮತ್ತು
ಪ್ರತ್ಯಕ್ಷಗಳೇ ಈರೇಖೆಯಾಗಿದ್ದು ಈ ವರ್ತುಲದಲ್ಲಿಯೇತರ್ಕದ ಸಂಚಾರವನ್ನು
ಮಾಡಿಸುವುದರಿಂದ ಹಿತಕರವಾದ ರೀತಿಯಲ್ಲಿ ತತ್ತ್ವಜ್ಞಾನದ
ಬೆಳವಣಿಗೆಯಾಗಲು ಅವಕಾಶವಾಗುವುದು. ಆದುದರಿಂದಲೇ
ತರ್ಕೋರಪ್ರತಿಷ! ಇ “ಭಾರತ
ಕಾಮಾಚ್ಚ ನಾನುಮಾನಾಪೇಕ್ಟಾ! -ಬ್ರಹ್ಮಸೂತ್ರ
ಎಂದು ಮುಂತಾಗಿ ಕೇವಲ ತರ್ಕಬಲದಿಂದ ಯಾವುದೇ ವಿಷಯವನ್ನು
ನಿರ್ಧರಿಸಲು ಬರುವುದಿಲ್ಲವೆಂದು ಅನುಭವವೇದ್ಯವಾಗುವಂತೆ ನಿರೂಪಿಸಿ
ದ್ದಾರೆ. ಅಂತೂ ಪ್ರತ್ಯಕ್ಷ ಮತ್ತು ತರ್ಕಗಳಿಗೆ ಅತೀತವಾದ ಈಶ್ವರ, ಧರ್ಮಾ
ಧರ್ಮಗಳು - ಮುಂತಾದ ಅತೀಂದ್ರಿಯ ಪ್ರಪಂಚದ ವಿಶೇಷ ಸಂಗತಿಗಳನ್ನು
ಶಾಸ್ತ್ರದ ಆಧಾರದಿಂದ ನಿರ್ಧರಿಸಿ ಕಾರ್ಯಾಕಾರ್ಯ ವ್ಯವಸ್ಥಿತಿಯನ್ನು
ವಡೆಯಬೇಕು. ಇದರ ಹೊರತು ಬೇರೆ ಸ್ವತಂತ್ರ ವಿಚಾರಗಳು ಅಪಾಯದ
ದಾರಿಗೇ ನಮ್ಮನ್ನು ಎಳೆಯಬಲ್ಲವು. ಶಾಸ್ತ್ರನಿಯಂತ್ರಿತವಾದ ಜೀವನ ರೀತಿಯು
ಉಚ್ಛೃಂಖಲವೃತ್ತಿಯಿಂದ ನಮ್ಮನ್ನು ಪಾರುಮಾಡುವುದು. ದೈವೀಸಂಪತ್ತಿಯ
ಸಂದೇಶವನ್ನು ಈ ಶಾಸ್ತ್ರದಿಂದಲೇ ನಾವು ವಡೆಯಬಲ್ಲೆವು ಎನ್ನುವುದೇ ಈ
ಭಾಗದಮತಿತಾರ್ಥವಾಗಿದೆ.
ಶಾಸ್ತ್ರವೆಂದರೆ ವೇದ ಉಪನಿಷತ್ತುಗಳು ಮತ್ತು ಅವನ್ನು ಆಧರಿಸಿದ
ಗ್ರಂಥಗಳು. ಈ ವೇದವಂತೂ ಅಪೌರುಷೇಯವಾಗಿದೆ. ಅದು ವ್ಯಕ್ತಿಯ
ನಿರ್ಮಿತಿಯಲ್ಲ. ವ್ಯಕ್ತಿಯ ರಚನೆಯಾಗಿದ್ದರೆ ಅವನ ಬುದ್ಧಿ ದೋಷಗಳ
ಪ್ರತಿಫಲವನ್ನು ಅದರಲ್ಲಿ ಶಂಕಿಸುವ ಸಂಭವವಿತ್ತು ವುರುಷಬುದ್ಧಿಗೆ ಅತೀತವಾದ
ಈ ಅನಾದಿಯಾದ ವೇದದಲ್ಲಿ ಮಾನವೀಯ ಬುದ್ಧಿಯ ದೋಷ,
ದೌರ್ಬಲ್ಯಗಳ ಸೋಸಕೂ ಇಲ್ಲದಿರುವುದರಿಂದ ಈ ಸನಾತನ ಸಂದೇಶವನ್ನೇ
ಆಧರಿಸಿ ನಮ್ಮ ಜೀವನವನ್ನು ರೂಪಿಸಬೇಕು. ಇದೇ ಪರಮಾತ್ಮ ಹಾಗೂ ಜಗತ್ತಿನ
ಅತೀಂದ್ರಿಯ ವಸ್ತುಗಳ ಬಗ್ಗೆ ಯಥಾರ್ಥವಾದ ತಿಳುವಳಿಕೆಯನ್ನು ನೀಡ
ಬಲ್ಲದು. ವೇದಾಪೌರುಷೇಯತ್ವವೇ ಒಂದು ಬಹುದೊಡ್ಡ ವಿಚಾರವಾಗಿರು
ವುದರಿಂದ ಅದನ್ನು ನಾವು ಇಲ್ಲಿ ವಿಸ್ತರಿಸುವುದಿಲ್ಲ. ಅಂತೂ ಅಪೌರುಷೇಯ
ಗಳಾದ ವೇದ, ಉಪನಿಷತ್ತುಗಳೇ ಶಾಸ್ತ್ರವಾಗಿದ್ದು ಅವುಗಳಲ್ಲಿ ಪ್ರತಿಪಾದಿಸಿದ
ವಿಚಾರಗಳಿಗೆ ಸಂಗತವೂ ಅನುಕೂಲವೂ ಆದ ಗ್ರಂಥಗಳೆಲ್ಲವೂ
ಶಸ್ರವೆನಿಸುತ್ತವೆ. ಅಗೋಚರ ವಸ್ತುಗಳನ್ನು ನಿರ್ಧರಿಸಿ ಜೀವನದ ನಿಜ
ಉದ್ದೇಶವನ್ನು ಅರಿತು ಅದರಂತೆಸಾಗಬೇಕಾದ ನಮ್ಮ ಜೀವನದ ದಿವ್ಯಯಾತ್ರೆಗೆ
ಇವೇ ದಿಗ್ಗರ್ಶಕಗಳಾಗಿವೆ.
Bannanje Govindacharya (1936–2020)Bhagavad Gita Pravachana
ತಸ್ಮಾತ್ ಶಾಸ್ತ್ರಮ್ ಪ್ರಮಾಣಂ ತೇ ಕಾರ್ಯ ಅಕಾರ್ಯ ವ್ಯವಸ್ಥಿತ್ |
ಜ್ಞಾತ್ವಾ ಶಾಸ್ತ್ರ ವಿಧಾನ ಉಕ್ತಮ್ ಕರ್ಮ ಕರ್ತುಮ್ ಇಹ ಅರ್ಹಸಿ -ಅದರಿಂದ ಬೇಕು-ಬೇಡಗಳ ತೀರ್ಮಾನಕ್ಕೆ
ನಿನಗೆ ಶಾಸ್ತ್ರವೇ ಪ್ರಮಾಣ. ಶಾಸ್ತ್ರದ ಕಟ್ಟಳೆಯನ್ನರಿತು ಇಲ್ಲಿ ಕರ್ಮ ಮಾಡಲೆಳಸು.
ಎಲ್ಲಾ ಬೇಕು ಬೇಡಗಳಿಗೆ ಶಾಸ್ತ್ರವೇ ಪ್ರಮಾಣ. ಆದ್ದರಿಂದ ನಾವು ಶಾಸ್ತ್ರದಲ್ಲಿ ಹೇಳುವುದನ್ನು ಮೊದಲು
ನಂಬಬೇಕು. ಆಗ ಅದನ್ನು ತಿಳಿಯಲು ಸಾಧ್ಯವಾಗುತ್ತದೆ. ಶಾಸ್ತ್ರದಲ್ಲಿ ಹೀಗೆ ಮಾಡು, ಹೀಗೆ ಮಾಡಬೇಡ ಎಂದು
ಹೇಳಿರುವವರು- ಅದರಿಂದಾಗುವ ಪರಿಣಾಮವನ್ನು ಸಾಕ್ಷಾತ್ಮರಿಸಿಕೊಂಡ ಜ್ಞಾನಿಗಳು. ಆದ್ದರಿಂದ ಕರ್ಮದ
ಕಟ್ಟಳೆಯನ್ನರಿತು ಕರ್ಮ ಮಾಡು ಎನ್ನುತ್ತಾನೆ ಕೃಷ್ಣ.
ಇಲ್ಲಿ ಶಾಸ್ತ್ರ ಎಂದರೆ ನಾಲ್ಕು ವೇದಗಳು ಮತ್ತು ಅದಕ್ಕೆ ಪೂರಕವಾದ ಪಂಚರಾತ್ರ, ಮಹಾಭಾರತ,
ಮೂಲರಾಮಾಯಣ, ಮತ್ತು ಹದಿನೆಂಟು ಪುರಾಣಗಳು. ಇದನ್ನು ಬಿಟ್ಟು ಇತರ ಯಾವುದನ್ನೂ ಪೂರ್ಣವಾಗಿ
ಪ್ರಮಾಣವಾಗಿರಿಸಲು ಸಾಧ್ಯವಿಲ್ಲ.
ಇತಿ ಷೋಡಶೋ*ಧ್ಯಾಯಃ
ಹದಿನಾರನೆಯ ಅಧ್ಯಾಯ ಮುಗಿಯಿತು
Bibek Debroy (1955–2024)The Bhagavad Gita
(24)
‘Therefore, in deciding what should be done and what should not be done,
the shastras are your test. In this,29 get ready to perform action, knowing
what the shastras prescribe.’