अनिष्टमिष्टं मिश्रं च त्रिविधं कर्मणः फलम् ।
भवत्यत्यागिनां प्रेत्य न तु संन्यासिनां क्वचित् ॥
aniṣṭamiṣṭaṃ miśraṃ ca trividhaṃ karmaṇaḥ phalam |
bhavatyatyāgināṃ pretya na tu saṃnyāsināṃ kvacit ||
Sri Madhvacharya (1238–1317)Bhagavad Gita Tatparya Nirnaya
अन्येषामिष्टम्। अस्य तु त्यागित्वादेव नेष्टम्।
‘ज्ञानादेर्मोक्षभोग्याच्च नान्यत् स्यात् कर्मणः फलम्।
त्यागिनस्तत्त्वसंवेत्तुरन्येषां तदृते फलम्’ इति च।
केवलकाम्यकर्मणां परानपेक्षयाऽप्यकरणमित्येतावांस्त्यागात् संन्यासस्य विशेष इत्यत्यागिनां
प्रतियोगित्वेन न्यासिन उक्ताः। त्यागित्वं तेषामपि ह्यस्ति।
‘परेच्छयाऽपि ये काम्यं कर्म कुर्युर्न तु क्वचित्।
न्यासिनो नाम तेऽन्येभ्यः फलत्यागिभ्य उत्तमाः’ इति च॥12॥
Swami Sivananda (1887–1963)Bhagavad Gita
12. The threefold fruit of action—evil, good and mixed—accrues after death to the
non-abandoners, but never to the abandoners.
Sri Vishwesha Tirtharu (1931–2019)Gitasaroddhara
18.3–18.40 · ತ್ಯಾಗ ಮತ್ತು ಸಂನ್ಯಾಸ
ತ್ಯಾಗ ಮತ್ತು ಸಂನ್ಯಾಸ
ನಮ್ಮ ಪ್ರತಿಯೊಂದು ಕ್ರಿಯೆಯಲ್ಲಿಯೂ ಸತ್ತ್ವ ರಜ, ತಮಗಳ ಈ
ಗತಿವಿಧಿಯನ್ನು ಪರಿಶೀಲಿಸಿದಷ್ಟೂ ನಮ್ಮ ಎಲ್ಲ ಕೃತಿಗಳನ್ನೂ ವಿಶ್ಲೇಷಿಸಿ
ಆತ್ಮ ನಿರೀಕ್ಬ ಣೆ ಮಾಡಲು ಅನುಕೂಲವಾಗುತ್ತ ದೆ.
ನತದಸ್ತಿ ಪೃಥಿವ್ಯಾಂವಾ
ದಿವಿ ದೇವೇಷು ವಾ ಪುನಃ ।
ಜಗತ್ತಿನ ಪ್ರತಿಯೊಬ್ಬರೂ ಈ ಮೂರು ಗುಣಗಳ ಪ್ರಭಾವಕ್ಕೆ ಸಿಲುಕಿದವರೇ.
ಈ ತ್ರಿಗುಣಗಳಿಂದಾಗಿ ನಾವು ಮಾಡುತ್ತಿರುವ ಧರ್ಮಾಚಾರಗಳೆಲ್ಲ ಎಂತಹ
ವಿಕೃತ ರೂಪವನ್ನು ತಳೆಯುತ್ತವೆ ಎಂಬ ಪರಿವೆಯೂ ಇಲ್ಲದೆ ನಮ್ಮ
ವ್ಯವಹಾರಗಳನ್ನು ಸಾಗಿಸುತ್ತಿರುವೆವು. ಧರ್ಮಾಚರಣೆಯಲ್ಲಿ ರಜಸ್ಸು,
ತಮಸ್ಸುಗಳಿಂದ ಸಂಭವಿಸಬಹುದಾದ ವಿಕೃತಿಯನ್ನು ಕಂಡಾಗ ಈ
ಧರ್ಮಾಚರಣೆಯೇ ಬೇಡವೆಂದು ನಮಗೆ ಅನಿಸಬಹುದು. ಎಷ್ಟು
ಜಾಗರೂಕತೆಯಿಂದಕರ್ಮಗಳನ್ನು ಆಚರಿಸಿದರೂ ಈ ಪ್ರಕೃತಿ ಗುಣಗಳಿಂದಾಗಿ
ಅಲ್ಲಿದೋಷಗಳು ನುಸುಳದಿರುವುದಿಲ್ಲ. ಈ ದೋಷಯುಕ್ತವಾದ ಕರ್ಮವನ್ನು
ಆಚರಿಸುವುದಕ್ಕಿಂತ ಅದನ್ನು ಸರ್ವಾತ್ಮನಾ ತೊರೆಯುವುದೇ ಲೇಸೆಂಬ
ಭಾವನೆಯುಂಟಾಗುವ ಅವಕಾಶವೂಇದೆ.
ತ್ಯಾಜ್ಯಂ ದೋಷವದಿತ್ಯೇಕೇ ಕರ್ಮ ಪ್ರಾಹುರ್ಮನೀಷಿಣಃ।
ದೋಷಯುಕ್ತ ವಾದ ಈ ಕರ್ಮವನ್ನು ಬಿಡಬೆಳೆಂದು ಕೆಲ ಮನೀಷಿಗಳು
ಹೇಳಿದ್ದ! ರೆ
ಯಜ್ಞ! ದಾನತಪಃಕರ್ಮನ ತ್ಯಾಜ್ಯಮಿತಿ ಚಾಪರೇ।
ಜೀವನದ ಪಾವನತೆಗೆ ಸಾಧನಗಳಾದ ಯಜ್ಞ, ದಾನ, ತಪಸ್ಸುಗಳನ್ನು
ಸರ್ವಥಾ ತೊರೆಯಬಾರದೆಂಬ ಆದೇಶವನ್ನು ಕೆಲವರು ನೀಡಿರುವರು.
ವಿರುದ್ಧವಾದ ಇವೆರಡು ವಿಚಾರಗಳಲ್ಲಿ ನಾವು ಯಾವುದನ್ನು ಆರಿಸ
ಬೇಕೆನ್ನುವುದೇ ನಮ್ಮ ಮುಂದಿರುವಪ್ಪಶ್ಪೆಯಾಗಿದೆ.
ನಹಿ ದೇಹಚ್ಛತಾ ಶಕ್ಕಂ ತ್ಯಕ್ತ 0 ಕರ್ಮಾಣ್ಯಶೇಷತಃ [
ಆದರೆ ಜೀವಿಗಳಿಗೆ ಕರ್ತವ್ಯವನ್ನು ಪೂರ್ತಿಯಾಗಿ ತೊರೆಯಲು ಸಾಧ್ಯವೆ?
ಆಹಾರ, ವ್ಯವಹಾರಾದಿಗಳಿಗೆ ಅವಶ್ಯವೆನಿಸಿದ ಕರ್ಮಗಳನ್ನು ಬಿಟ್ಟಿರಲು
ಯಾರಿಂದಲೂ ಸಾಧ್ಯವಿಲ್ಲ. ಕರ್ಮಗಳಲ್ಲಿ ದೋಷವಿದೆ, ಅದನ್ನು
ತೊರೆಯಬೇಕೆನ್ನುವ ಆತುರವು ಸ್ನಾನ, ಸಂಧ್ಯಾವಂದನ, ದೇವರಪೂಜೆ,
ಸಮಾಜಸೇವೆಯಂತಹ ಲೂ ೇಕೋವಯುಕ್ತ ಕಾರ್ಯಗಳನ್ನು
ಪರಿತ್ಯಜಿಸುವುದರಲ್ಲಿಯೇ ಪರ್ಯವಸಾನ ಹೊಂದುವುದು. ಲೌಕಿಕ
ಜೀವನೌಪಾಯಿಕ ಕಾರ್ಯಗಳನ್ನ ೦ತೂ ಬಿಡಬೇಕೆಂದರೂ ಬಿಡಲು ಸಾಧ್ಯವೇ
ಇಲ್ಲ. ಸುಲಭವಾಗಿ ಪರಿತ್ಯಜಿಸಬಹುದಾದಕಾರ್ಯಗಳೆಂದರೆ ಆತ್ಮನ ಉಸ್ಪತಿಗೆ
ಕಾರಣಗಳಾಗುವ ಪುಣ್ಯಕೃತಿಗಳು ಮಾತ್ರ. ಇತರ ಭೋಗಕಾರ್ಯಗಳನ್ನೆಲ್ಲ
ಮಾಡಿಕೊಂಡು ಧರ್ಮಾಚರಣೆಯನ್ನು ಮಾತ್ರ ಬಿಡುವುದರಲ್ಲಿವಿನರ್ಥವಿದೆ?
ಹೀಗೆ ನಮ್ಮ ಮನಸ್ಸು ಕರ್ಮದ ಪರಿತ್ಯಾಗ ಹಾಗೂ ಆಚರಣೆಯ ನಡುವೆ
ತೂಗುಯ್ಯಾಲೆಯಲ್ಲಿ ಹೊಯ್ದಾಡುತ್ತಿದೆ. ಗೀತೆಯು ಈ ಸಮಸ್ಯೆಯನ್ನು
ಸುಲಭವಾಗಿ ಬಗೆಹರಿಸಿದೆ. ಕರ್ಮಾಚರಣೆ ಬೇಡ, ಬೇಕು ಎನ್ನುವ ಎರಡು
ವಾದಗಳ ಸಮನ್ವಯವನ್ನು ಗೀತೆಯು ಮಾಡಿದೆ. ಕರ್ಮವನ್ನುತ್ತಚಿಸವುದೆಂದರೆ
ಅದರಲ್ಲಿ ದೋಷವು ತಗಲದಂತೆ ಆಸಕ್ತಿ ಮತ್ತು ಫಲಾಪೇಕ್ಷೆಯನ್ನು
ತೊರೆಯುವುದೇ ಆಗಿದೆ ಎನ್ನುವ ಆಶಯವನ್ನು ಗೀತೆಯು ವಿವರಿಸಿದೆ. ಸಾಮಾನ್ಯ
ಜನರು ಕರ್ಮ ಮತ್ತು ಅದರ ಲೌಕಿಕ ಫಲ ಇವೆರಡರಲ್ಲಿಯೂ
ದೃಷ್ಟಿಯನ್ನಿಟ್ಟಿದ್ದರೆ ಅವುಗಳಲ್ಲಿ ಕರ್ಮವನ್ನು ಮಾತ್ರ ಪರಿಗ್ರಹಿಸಿ ಫಲವನ್ನು
ಪರಿತ್ಯಜಿಸುವುದೇ ಕರ್ಮತ್ಯಾಗ ಹಾಗೂ ಕರ್ಮಾನುಷ್ಠಾನ ಇವೆರಡರ
ಸಮನ್ವಯವಾಗಿದೆ. ಕರ್ಮಾನುಷ್ಠಾನದಲ್ಲಿ ಈ ತ್ಯಾಗವೃತ್ತಿಯನ್ನಾಗಲಿ
ಸಂನ್ಯಾಸವೃತ್ತಿಯನ್ನಾಗಲಿ ಜೋಡಿಸುವುದರಿಂದ ಕರ್ಮಗಳನ್ನು ಆಚರಿಸಿದರೂ
ಅದರ ದೋಷ, ಬಂಧನಗಳಿಗೆನಾವುಗುರಿಯಾಗುವುದಿಲ್ಲ.
ತ್ಯಾಗ, ಸಂನ್ಯಾಸಗಳಲ್ಲಿರುವ. ಅಂತರವನ್ನೂ ನಾವು ಇಲ್ಲಿ
ಪರಿಶೀಲಿಸಬೇಕಾಗಿದೆ. ತನಗಾಗಿ ಲೌಕಿಕ ಫಲವನ್ನು ಬಯಸಿದ್ದರೂ ಪರರ
ಲೌಕಿಕ ಸುಖಕ್ಕಾಗಿ ಸ್ವಂತದ ಅಪೇಕ್ಷೆಯಿಲ್ಲದೆ ಮಾಡುವ ಕರ್ತವ್ಯದಲ್ಲಿ ತ್ಯಾಗ
ವತ್ತಿಯಿದೆ. ತನ್ನಂತೆಯೇವರರಿಗೂ ಲೌಕಿಕಸುಖವನ್ನು ಅಪೇಕ್ಷಿಸದೆ ಅವರಿಗೂ
ಜ್ಞಾನ, ಭಕ್ತಿ ಹರಿಪ್ರಸಾದಗಳನ್ನು ಮಾತ್ರ ಬಯಸಿ ಉನ್ನತ ಭಾವನೆಯಿಂದ
ಮಾಡುವ ಕರ್ಮದಲ್ಲಿ ಸಂನ್ಯಾನವೃತ್ತಿಯು ಅಡಕವಾಗಿದೆ. ಈ ತ್ಯಾಗ,
ಸಂನ್ಯಾಸಗಳೆರಡರಲ್ಲಿಯೂ ಕರ್ಮಾಚರಣೆಯು ಅನಿವಾರ್ಯವೇ. ಅನ್ಯರ
ಸುಖಕ್ಕಾಗಿ ಹಾತೊರೆದು ಅನುಕಂಪಭಾವದಿಂದ ಸ್ವಸುಖನಿರಪೇಕ್ಟವಾಗಿ
ಪ್ರವರ್ತಿಸುವ ಕರ್ಮಯೋಗಿಯ ತ್ಯಾಗದಲ್ಲಿ ಹಿರಿತನವಿದ್ದರೂ ತನ್ನಂತೆಯೇ
ಅನ್ಯರ ಆಧ್ಯಾತ್ಮಿಕ ಉನ್ನತಿಯನ್ನೇ ಬಯಸುವ ಸಂನ್ಯಾಸಿಯ ಮನೋಭಾವವು
ಹೆಚ್ಚು ಉದಾತ್ತವಾದುದು. ಇವರಿಬ್ಬರ ಆಚರಣೆಗಳೂ ಕರ್ಮದ
ದೋಷಗಳನ್ನು ದಾಟಿ ನಿಂತಿವೆ. ವೈರಾಗ್ಯ ಭಕ್ತಿಗಳ ಧಾರೆಯಲ್ಲಿ ತೊಳೆದು
ಸಿದ್ಧಗೊಳಿಸಿದ ಈ ಕರ್ಮದವಕ್ವಾನ್ನದಲ್ಲಿ ಆಸಕ್ತಿಯುಕ್ತಕರ್ಮಗಳಲ್ಲಿರುವ ಕಹಿ
ದುರ್ಗಂಧಗಳು ಕಾಣಸಿಗವು. ಇಂತಹ ಕರ್ಮವನ್ನು ಸಾತ್ತ್ವಿಕವೆಂದು ಗೀತೆಯು
ನಿರ್ದೇಶಿಸಿದೆ.
18.11–18.66 · ಶರಣಾಗತಿ
ಶರಣಾಗತಿ
ಈವರೆಗಿನ ವಿಸೃತನಿರೂವಣೆಯಿಂದ ಅರ್ಜುನನ ಪ್ರಶ್ನೆ ಗಳಿಗೆಲ್ಲ ಸರಿಯಾದ
ಸಮಾಧಾನವು ದೊರೆತಿದೆ. ಆತ್ಮ, ವರಮಾತೃಹಾಗೂ ಪ್ರಾಕೃತ ಜಡಪದಾರ್ಥಗಳ
ಪರಸ್ಪರ ಸಂಬಂಧ ಮತ್ತು ಪ್ರವಂಚದಲ್ಲಿ ಅವುಗಳ ಕಾರ್ಯವಿಭಾಗ ಹಾಗೂ
ಶಕ್ತಿಸ್ತಭಾವಗಳ ಸವಿಸ್ತಾರ ವಿವೇಚನೆಯಾಗಿದೆ. ಇದರಿಂದ ಜಗತ್ತಿನಲ್ಲಿ ವ್ಯಕ್ತಿಯ
ಪಾತ್ರವನ್ನು ಸರಿಯಾ ಗಿ ಅರ್ಥ ಮಾಡಿಕೊಳ್ಳಲು ಅವಕಾಶವಾಗಿದೆ. ಪ್ರಕೃ ತಿಯ
ಸಂಬಂಧವು ಅನಾದಿ ಕಾಲದಿಂದಲೂ ಜೀವರಿಗೆ ಇದೆ. ಎಷ್ಟು ಕಾಲದಿಂದ
ಜೀವರಿರುವರೋ ಅಷ್ಟು ಕಾಲದಿಂದಲೂ ಪ್ರಕೃತಿಯ ಅವರಣವು ಅವರನ್ನು
ನಿರ್ಬಂಧಿಸಿದೆ. ಬೇಡವೆಂದರೂ ಪ್ರಕೃತಿ ಸಂಬಂಧವಿರುವವರೆಗೆ ಅದರ
ಕಾರ್ಯಪರಿಣಾಮಗಳಿಗೆ ನಾವು ಒಳಗಾಗಲೇಬೇಕು. ಈ ಪ್ರಕೃತಿಯಿಂದ
ಅತೀತರಾಗುವುದೇ ನಮ್ಮ ಗುರಿಯಾಗಿದ್ದರೂ ಈ ಪ್ರಾಕೃತ ಜಗತ್ತಿನಲ್ಲಿ
ಇರುವವರೆಗೆ ನಮ್ಮಲ್ಲಿ ರುವ ಸಾಧನಸಾಮಗ್ರಿಯನ್ನೂ ಪ್ರಕೃತಿಯ ಶಕ್ತ ಯನ್ನೂ
ಯೋಗ್ಯ ರೀತಿಯಿಂದ ಬಳಸಿಕೊಂಡು ನಮ್ಮ ಗುರಿಯನ್ನು ಮುಟ್ಟುವ
ದಾರಿಯಲ್ಲಿ ನಡೆಯಬೇಕು. ಪ್ರಕೃತಿಯ ಸಂಬಂಧದಿಂದ ಮಾನವನಿಗೆ ಈ
ಸಂಸಾರದ ಕ್ಲೇಶ ತಾಪಗಳೊದಗಿವೆ ಎಂದು ಅದರ ಮೇಲಿನ ದ್ವೇಷದಿಂದ ಈ
ಜಗತ್ತಿನ ಯಾವ ವ್ಯವಹಾರಗಳೂ ಬೇಡವೆಂದು ನಿಷ್ಠ್ರಿಯರಾಗಿ
ಕುಳಿತುಕೊಳ್ಳುವುದರಿಂದ ನಾವು ಏನನ್ನೂ ನಾಧಿಸಿದಂತಾಗುವುದಿಲ್ಲ. ಪ್ರಕೃತಿಯ
ಬಂಧನದಲ್ಲಿ ನಾವಿರುವೆವೆಂಬ ವಸ್ತುಸ್ಥಿತಿಯನ್ನು ಅರಿತು ಶಿಸ್ತು
ಸಂಯಮಗಳಿಂದ ಇಲ್ಲಿ ವರ್ತಿಸಿ ಈ ಕಾರಾಗೃಹದಿಂದ ಬಿಡುಗಡೆಯಾಗ
ಬೇಕೆಂಬುದನ್ನು ನಾವು ತಿಳಿದಿರಬೇಕು. ಪ್ರಕೃತಿಯನ್ನು ದ್ವೇಷಿಸಿ ಜಗತ್ತಿನ
ಕರ್ತವ್ಯಗಳಲ್ಲಿ ಪಾಲುಗೊಳ್ಳದಿರುವುದರಿಂದ ನಮ್ಮ ವ್ರಕೃತಿಗೇ ನಾವು
ತಡೆಯನ್ನುಂಟುಮಾಡಿಕೊಂಡಂತಾಗುವುದು. ಈ ವ್ರಕೃತಿಯ ಸಾಗರವನ್ನು
ದಾಟಬೇಕೆನ್ನವುದು ನಮ್ಮ ಅದಮ್ಯ ಆಕಾಂಕ್ಷೆಯಾಗಿದ್ದರೆ ನಾವು ಪ್ರಕೃತಿಯ
ಈಚೆಯ ದಡದಲ್ಲಿಯೇಕುಳಿತುಸಾಗರದಲ್ಲಿ ಇಳಿಯಬೇಕೇ ಬೇಡವೇ ಎಂದು
ಡೋಲಾಯಮಾನ ಚಿತ್ತದಿಂದ ಸಂಶಯಾಸ್ಯಂದಿತ ಮನಸ್ಕರಾಗಿ
ಕಾಲಹರಣಮಾಡುವುದರಿಂದಎನು ಸಾಧಿಸಿದಂತಾಗುವುದು? ದೈರ್ಯದಿಂದ
ಈ ಸಂಸಾರಸಾಗರದಲ್ಲಿ ನಾವು ಧುಮುಕಲೇಬೇಕು.
ಈಸಬೇಕು ಇದ್ದು ಜೈಸಬೇಕು । -ಶ್ರೀ ಪುರಂದರದಾಸರು
ಈ ಪ್ರವಾಹದಲ್ಲಿ ಇಳಿದರೂ ಅದರಲ್ಲಿ ಮುಳಗದೆ "ಶಸ ಜೈಸುವ' ಕಲೆಯನ್ನು
ಗೀತೆಯು ನಮಗೆ ಹೇಳಿದೆ. ಆಸಕ್ತಿ ಮೋಹಗಳ ವಾಶವನ್ನು ಬಿಗಿದುಕೊಂಡು ಈ
ಜಗತ್ತಿನಲ್ಲಿ ಇಳಿದರೆ ನಾವು ಇದರಿಂದ ವಾರಾಗುವ ಸಂಭವವೇ ಇಲ್ಲ.
ಅನಾಸಕ್ತಿಯಿಂದ ವಿಹಿತ ಕರ್ತವ್ಯಗಳನ್ನು ಆಚರಿಸಿಕೊಂಡಿದ್ದರೆ ಜಗತ್ತಿನ ಈ
ಕರ್ಮಪ್ರವಾಹದಲ್ಲಿದ್ದರೂ ಅದರ ಯಾವ ಸೆಳೆತ, ಸುಳಿಯೊಳಗೆ ಸಿಲುಕದೆ
ಸಾಗಲು ನಮಗೆ ಸಾಧ್ಯವಾಗುವುದು.
ಜಗತ್ತಿನಲ್ಲಿದ್ದರೂ ಅದರ ಬಂಧವು ಬಿಗಿಯಾಗದಂತೆ ಅದರ ಸೆಳೆತದಲ್ಲಿ
ಕೊಚ್ಚಿಹೋಗದಂತೆ ನಾವು ಎಷ್ಟು ಎಚ್ಚರ ವಹಿಸಿದರೂ ಸಾಲದು. ಈ
ಬಂಧನದಿಂದ ಪೂರ್ಣವಾಗಿ ಬಿಡುಗಡೆ ಹೊಂದುವ ಬಗೆಯನ್ನು
ಆಲೋಚಿಸಬೇಕು. ಅನಾದಿಯಾದ ಈ ಪ್ರಕೃತಿಬಂಧದ ವಿಮೋಚನೆಯು ನಮ್ಮ
ಶಕ್ತಿಗೆ ಮೀರಿದುದಾಗಿದೆ. ಇದು ನಮ್ಮ ಶಕ್ತಿಗೆ ಒಳವಡುತ್ತಿದ್ದರೆ, ಇದನ್ನು
ಅಡಗಿಸುವತೇಜಸ್ಸು ನಮ್ಮಲ್ಲಿ ಸ್ವಯಂಸಿದ್ಧವಾಗಿದ್ದರೆ, ಈ ಕ್ಷೇಶ-ವಿಪ್ಲವಗಳಿಗೆ
ನಾವು ಈಡಾಗುತ್ತಿರಲಿಲ್ಲ. ಇದಕ್ಕಾಗಿ ಪ್ರಕೃತಿ, ಜೀವರನ್ನೆಲ್ಲ ಮೀರಿಸುವ ವಿಶ್ವದ
ಮಹಾಶಕ್ತಿಯ ಆಸರೆಯನ್ನು ಪಡೆಯಬೇಕು.
ತಮೇವ ಶರಣಂ ಗಚ್ಛ ಸರ್ವಭಾವೇನ ಭಾರತ ।
ಅವನಲ್ಲಿ ಶರಣಾಗತರಾಗದೆ, ಅವನಲ್ಲಿ ಅನನ್ಯಭಕ್ತಿಯಿಂದ ನಡೆಯದೆ
ಇದ್ದರೆ, ನಮ್ಮ ಜೀವನದ ಈ ಮಹಾ ಲಕ್ಷ್ಯವನ್ನು ಮುಟ್ಟಲಾರೆವು. ಮಗುವಿನ
ಕೈಯಲ್ಲಿ ಮೂಸಂಬಿಯನ್ನು ಇತ್ತಂತೆ ನಮ್ಮ ಸ್ವರೂಪಾನಂದದ ನಿಧಿಯು ನಮ್ಮ
ಕೈಯಲ್ಲೇನೋ ಇದೆ. ಮೂಸಂಬಿಯ ಹೊರಸಿ್ಪೆಯನ್ನುತೆಗೆಯಲುವುಗುವಿಗೆ
ಸಾಧ್ಯವಾಗುವುದೆ? ತಾಯಿಯೇ ಅದನ್ನು ಮಗುವಿಗೆ ಸುಲಿದು ನೀಡಬೇಕು.
ಅದರಂತೆ ನಮ್ಮ ಸ್ವರೂಪಾನಂದದ ಹೊರಗಿನ ಪ್ರಕೃತಿಯ ಆವರಣವನ್ನು
ಕಿತ್ತೊಗೆಯಲು ಸಾಧ್ಯವಾಗದೆ ನಮಗೆ ಈ ಆನಂದದ ನಿಧಿಯು ಇದ್ದರೂ
ಇಲ್ಲದಂತೆ, ಭಗವಂತನೇ ತಾಯಿಯ ಮಮತೆಯಿಂದ ಈ ಹೊರ ಆವರಣವನ್ನು
ಬಿಡಿಸಬೇಕು.
ಅಜ್ಞಾನಾಂ ಜ್ಞಾನದೋ ವಿಷ್ಣುಃ
ಜ್ಞಾನಿನಾಂ ಮೋಕ್ಷದಶ್ಚ ಸಃ।
ಎ ಅನುವ್ಯಾಖ್ಯಾನ
ನಮಗೆ ಜ್ಞಾನ, ಬಂಧನಿವೃತ್ತಿ ಮುಂತಾದ ಎಲ್ಲ ವಿಕಾಸ, ಬೆಳವಣಿಗೆಗಳು
ಪರಮಾತ್ಮ ನಿಂದಲೇ ಆಗಬೇಕು. ನಮ್ಮ ಜೀವನದ ಎಲ್ಲ ಆಗುಹೋಗುಗಳಿಗೂ
ಅವನು ಕಾರಣನು. ಅವನ ಶಕ್ತಿ ಅನುಗ್ರಹಗಳಿಲ್ಲದೆ ನಮ್ಮಿಂದ ಏನೂ
ನಡೆಯದೆಂಬುದನ್ನು ಅರಿತು ಸರ್ವಾತ್ಮನಾ ಭಗವಂತನನ್ನು ಆಶ್ರಯಿಸಿಕೊಂಡು
ಭಕ್ತಿಪೂರ್ಣ ಮನೋಭಾವದಿಂದ ನಮ್ಮ ಕರ್ತವ್ಯವನ್ನು ಆಚರಿಸಬೇಕು.
ಭಕ್ತಿಯೇ ಕರ್ಮದ ಅಂತಚತ್ತ್ವವು. ಆ ಸತ್ತ್ವವು ಇಲ್ಲದ ಕರ್ಮಗಳು
ರಾಶಿರಾಶಿಯಾಗಿದ್ದರೂ ಅವೆಲ್ಲ] ವೂನಿರ್ಜೀವ ಹಾಗೂ ನಿಷ್ಟಯೋಜನವೇ.
ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ |
ದೈವೀ ಭಾವನೆಯಿಲ್ಲದ, ಪರಮಾತ್ಮನ ಕಡೆಗೆ ನಮ್ಮನ್ನು ಒಯ್ಯದ,
ಕರ್ಮಗಳೆಲ್ಲವೂ ವ್ಯರ್ಥವಾಗಿವೆ. ಅವೆಲ್ಲವನ್ನೂ ನಾವು ಮಾಡಬೇಕು.
ಸರ್ವಧರ್ಮಗಳ ತ್ಯಾಗವೆನ್ನುವುದರ ಭಾವವು ಇದೇ ಆಗಿದೆ. ಅಥವಾ
ಫಲಾಪೇಕ್ಷೆಯನ್ನು ತ್ಯಜಿಸುವುದೇ ಸರ್ವಧರ್ಮಗಳ ತ್ಯಾಗವೆಂದೂ ನಾವು
ಭಾವಿಸಬಹುದು.
ಯಸ್ತು ಕರ್ಮಫಲತ್ಯಾಗೀ ಸ ತ್ಯಾಗೀತ್ಯಭಿಧೀಯತೇ |
ಎಂಬುದಾಗಿ ಫಲವನ್ನು ತೊರೆಯುವುದೇ ಕರ್ಮದನಿಜವಾದ ತ್ಯಾಗವೆಂದು
ಗೀತೆಯಲ್ಲಿಯೇ ಹಿಂದೆ ಹೇಳಿದೆ.
ಕೆಲವರಂತೂ
ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ।
ಎನ್ನುವ ಪದ್ಯವನ್ನು ತಮ್ಮ ಮತೀಯ ವಿಚಾರದ ಕಡೆಗೆ ಬಲಾತ್ಕಾರದಿಂದ
ಎಳೆದು ವಿಚಿತ್ರವಾದ ಅರ್ಥವನ್ನು ಮಾಡುವರು. ಈವರೆಗೆ ಕರ್ಮಾಚರಣೆ
ಹಾಗೂ ಭಕ್ತಿಯ ಬಗ್ಗೆ ಹೆಚ್ಚಿನ ಪ್ರಾಧಾನ್ಯವನ್ನು ಕೊಟ್ಟು ನೀಡಿದ ಉಪದೇಶಕ್ಕೆ
ಸಂಪೂರ್ಣವಾಗಿ ವ್ಯತಿರಿಕ್ತವಾದ ಮಾತನ್ನು ಅವರು ಪರಮಾತ್ಮನಿಂದ
ಹೊರಡಿಸುತ್ತಾರೆ. ಸರ್ವಕರ್ಮಗಳನ್ನು ಪೂರ್ಣವಾಗಿ ಪರಿತ್ಯಜಿಸಿ, ತಾನೇ
ಪರಮಾತ್ಮನೆಂಬ ಆದ್ವೈತಭಾವದಿಂದನಡೆಯದೇಕೆನ್ನುವುದು ಅವರದೃಶ್ವಿಯಲ್ಲಿ
ಈ ಶ್ಲೋಕದ ಅರ್ಥವಾಗಿದೆ. ಅದ್ವೈತಭಾವ ಮತ್ತು ಶರಣಾಗತಿ ಇವೆರಡೂ
ವರಸ್ಪರ ವಿರೋಧಿ ವಿಚಾರಗಳಾಗಿವೆ. ಇದರ ಹಿಂದಿನ ಶ್ಲೋಕದಲ್ಲಿಯೇ
ಶ್ರೀಕೃಷ್ಣನು ಅರ್ಜುನನನ್ನು ತನಗೆವರಮ ಇಷ್ಟನೆಂದು ಕರೆದು ಅಪನಿಗಾಗಿ ಅತ್ಯಂತ
ಪ್ರಧಾನವಾದ ಸಂದೇಶವನ್ನು ಕೊಡುವುದಾಗಿ ಘೋಷಿಸಿ,
ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು |
ಎಂಬುದಾಗಿ ಪರಮಾತ್ಮನ ಪ್ರೀತಿಯ ಉದ್ದೇಶದಿಂದ ಮಾಡುವ ಯಜ್ಞ
ರೂವವಾದ ಕರ್ಮ, ಭಕ್ತಿ ನಮಸ್ಕಾರಗಳನ್ನು ಆಚರಿಸಬೇಕೆಂದೂ ಇವು
ವರಮಶ್ರೇಯಸ್ಸಿಗೆ ಸಾಧನವೆಂದೂ ಹೇಳಿ ಮುಂದಿನ ಶ್ಲೋಕದಲ್ಲಿಯೇ
ಅವುಗಳಿಗೆ ಪೂರ್ಣ ವಿರೋಧಿ ಮಾತುಗಳನ್ನು ಕೃಷ್ಣನಿಂದ ನುಡಿಸುವುದು
ವಿಸಂಗತಿಯ ಪರಮಾವಧಿಯಾಗುವುದು. . 'ಅದ್ವೈತಸಿದ್ದಿ'ಕಾರರಾದ
ಮಧುಸೂದನ ಸರಸ್ವತಿಯವರು ಇದು ಕ್ಲಿಷ್ಟಕಲ್ಪನೆಯೆಂದು ಈ ಅರ್ಥದ
ಅಸ್ವಾರಸ್ಯವನ್ನು ತೋರಿಸಿರುವರು. ಇಲ್ಲಿ ಶ್ರೀಕೃಷ್ಣನು ಭಕ್ತಿಯ
ವರಮೋಚ್ಛ್ರಾ ಯದಶೆಯಾದ ಶರಣಾಗತಿಯನ್ನು ಉವದೇಶಿಸಿರುವನು.
ಸರ್ವಭಾವದಿಂದ ಪರಮಾತ್ಮನನ್ನು ಆಶ್ರಯಿಸಿ ಪರಮಭಕ್ತಿಯಿಂದ
ಕರ್ತವ್ಯಗಳನ್ನು ಆಚರಿಸುವುದೊಂದೇ ನಮ್ಮ ಈ ಅನರ್ಥ ವಿಪ್ಲವಗಳ ಏಕಮಾತ್ರ
ಪರಿಹಾರೋಪಾಯವಾಗಿದೆ. ಈ ಶರಣಾಗತಿಯ ಭಾವವು ನಮ್ಮ ಪ್ರತಿಯೊಂದು
ಕೃತಿಯಲ್ಲಿ ಅನುಸ್ಯೂತವಾಗಿರಬೇಕು.
ಕುರು ಭುಂಕ್ಸ್ವಚ ಕರ್ಮ ನಿಜಂ ನಿಯತಂ
ಹರಿಪಾದವಿನಮ್ರಧಿಯಾ ಸತತಮ್ । -ದ್ವಾದಶಸ್ತೋತ್ರ
ಕರ್ಮವನ್ನು ಆಚರಿಸುವಾಗಲೂ ಅದರ ಫಲವನ್ನು ಭೋಗಿಸುವಾಗಲೂ
ಹರಿಯಸ್ಥರಣೆಯು ನಿರಂತರವಾಗಿರಬೇಕು. ನಮ್ಮ ಶರೀರದ ಅಂಗಾಂಗಗಳಲ್ಲಿ
ಚೇತನವು ಹರಿಯುವುದು ಅವಶ್ಯವಿರುವಂತೆ ನಮ್ಮ ಪ್ರತಿಯೊಂದು ಕರ್ಮದಲ್ಲಿ
ನಿರಂತರವಾಗಿ ಹರಿಭಕ್ತಿಯು ಹರಿಯಬೇಕು. ಗೀತೆಯಲ್ಲಿ ಸರ್ವಪ್ರಧಾನವೆಂದು
ಉಲ್ಲೇಖಿಸಿ, ಅಂತಿಮವಾಗಿ ಬಂದಿರುವ ಈ ಉಪದೇಶವೇ ಗೀತೆಯ ಸಾರ
ಸಂದೇಶವಾಗಿದೆ.
Bannanje Govindacharya (1936–2020)Bhagavad Gita Pravachana
ಅನಿಷ್ಟಮ್ ಇಷ್ಟಂ ಮಿಶ್ರಂ ಚ ತ್ರಿವಿಧಂ ಕರ್ಮಣಃ ಫಲಮ್ |
ಭವತಿ ಅತ್ಯಾಗಿನಾಂ ಪ್ರೇತ್ಯ ನತು ಸಂನ್ಯಾಸಿನಾಂ ಕ್ವಚಿತ್ - ಕರ್ಮದ ಫಲ ಮೂರು ತೆರ: ಬೇಕಾದ್ದು,
ಬೇಡವಾದದ್ದು, ಮತ್ತು ಎರಡರ ಬೆರಕೆ. ಫಲತ್ಯಾಗ ಮಾಡದವರಿಗೆ ಇದು ಸತ್ತಮೇಲೆ ಸಲ್ಲುತ್ತದೆ. ಫಲದ ನಂಟು
ತೊರೆದವರಿಗೆ ಇದು ಎಂದೂ ಸೋಕುವುದಿಲ್ಲ.
ಕರ್ಮ ಮಾಡುವುದರಿಂದ ಸುಖವಾಗಬಹುದು; ದುಃಖವಾಗಬಹುದು; ಅಥವಾ ಸುಖ-ದುಃಖದ ಬೆರಕೆಯ ಫಲ
ಸಿಗಬಹುದು. ಕರ್ಮಫಲ ತ್ಯಾಗ ಮಾಡದೇ ಕರ್ಮ ಮಾಡುವವರಿಗೆ ಇದು ಸತ್ತ ಮೇಲೆ ಸಲ್ಲುತ್ತದೆ. ಇವರು ಕರ್ಮ
ಮತ್ತು ಕರ್ಮ ಫಲದ ಸುಳಿಯಲ್ಲಿ ಸಿಲುಕಿ ಮತ್ತೆ ಸಂಸಾರ ಬಂಧದಲ್ಲಿ ಸಿಲುಕುತ್ತಾರೆ. ಆದರೆ ಕರ್ಮ ಫಲದ
ಅಪೇಕ್ಷೆ ಇಲ್ಲದವರಿಗೆ ಇದು ಎಂದೂ ಸೋಕುವುದಿಲ್ಲ. ಅವರಿಗೆ ಏನು ಬಂದರೂ ಅದು ಭಗವಂತನ ಪ್ರಸಾದ
ಅದರಲ್ಲಿ ಬೇಕಾದ್ದು, ಬೇಡವಾದದ್ದು ಎನ್ನುವ ಭೇದವಿಲ್ಲ. ಇದು ಮೋಕ್ಷ ಮಾರ್ಗ. ಉದಾಹರಣೆಗೆ ರಾಜ್ಯದ,
ಅಧಿಕಾರದ ಆಸೆಯಿಂದ, ಭಗವಂತನನ್ನು ಮರೆತು ಯುದ್ಧವನ್ನು ಮಾಡುವವ- ಯುದ್ಧದಲ್ಲಿ ನಡೆಯುವ
ಪ್ರಾಣಹಾನಿಗೆ ಕಾರಣನಾಗುತ್ತಾನೆ. ಆತ ಈ ಪಾಪದ ಹೊರೆಯನ್ನು ಸತ್ತ ನಂತರ ಪಡೆಯಬೇಕಾಗುತ್ತದೆ. ಆದರೆ
ಕರ್ತವ್ಯ ಕಾರಣಕ್ಕಾಗಿ ಯಾವುದೇ ಸ್ವಾರ್ಥವಿಲ್ಲದೆ ಎಲ್ಲವನ್ನೂ ಭಗವಂತನಿಗೆ ಅರ್ಪಿಸಿ ಯುದ್ಧ ಮಾಡುವವನಿಗೆ
ಯಾವ ಪಾಪದ ಲೇಪವೂ ಅಂಟುವುದಿಲ್ಲ.
Bibek Debroy (1955–2024)The Bhagavad Gita
(12)
‘Those who don’t relinquish face three types of fruits of their action in the
afterworld—bad, good and mixed. But sannyasis don’t.’12