यत्तदग्रे विषमिव परिणामेऽमृतोपमम् ।
तत्सुखं सात्त्विकं प्रोक्तमात्मबुद्धिप्रसादजम् ॥
yattadagre viṣamiva pariṇāme'mṛtopamam |
tatsukhaṃ sāttvikaṃ proktamātmabuddhiprasādajam ||
Sri Madhvacharya (1238–1317)Bhagavad Gita Tatparya Nirnaya
‘विष्णोः प्रसादात् स्वमनःप्रसादात् सात्त्विकं सुखम्’इति पाद्मे॥37॥
Swami Sivananda (1887–1963)Bhagavad Gita
37. That which is like poison at first but in the end like nectar—that pleasure is declared to
be Sattwic, born of the purity of one’s own mind due to Self-realisation.
Sri Vishwesha Tirtharu (1931–2019)Gitasaroddhara
18.3–18.40 · ತ್ಯಾಗ ಮತ್ತು ಸಂನ್ಯಾಸ
ತ್ಯಾಗ ಮತ್ತು ಸಂನ್ಯಾಸ
ನಮ್ಮ ಪ್ರತಿಯೊಂದು ಕ್ರಿಯೆಯಲ್ಲಿಯೂ ಸತ್ತ್ವ ರಜ, ತಮಗಳ ಈ
ಗತಿವಿಧಿಯನ್ನು ಪರಿಶೀಲಿಸಿದಷ್ಟೂ ನಮ್ಮ ಎಲ್ಲ ಕೃತಿಗಳನ್ನೂ ವಿಶ್ಲೇಷಿಸಿ
ಆತ್ಮ ನಿರೀಕ್ಬ ಣೆ ಮಾಡಲು ಅನುಕೂಲವಾಗುತ್ತ ದೆ.
ನತದಸ್ತಿ ಪೃಥಿವ್ಯಾಂವಾ
ದಿವಿ ದೇವೇಷು ವಾ ಪುನಃ ।
ಜಗತ್ತಿನ ಪ್ರತಿಯೊಬ್ಬರೂ ಈ ಮೂರು ಗುಣಗಳ ಪ್ರಭಾವಕ್ಕೆ ಸಿಲುಕಿದವರೇ.
ಈ ತ್ರಿಗುಣಗಳಿಂದಾಗಿ ನಾವು ಮಾಡುತ್ತಿರುವ ಧರ್ಮಾಚಾರಗಳೆಲ್ಲ ಎಂತಹ
ವಿಕೃತ ರೂಪವನ್ನು ತಳೆಯುತ್ತವೆ ಎಂಬ ಪರಿವೆಯೂ ಇಲ್ಲದೆ ನಮ್ಮ
ವ್ಯವಹಾರಗಳನ್ನು ಸಾಗಿಸುತ್ತಿರುವೆವು. ಧರ್ಮಾಚರಣೆಯಲ್ಲಿ ರಜಸ್ಸು,
ತಮಸ್ಸುಗಳಿಂದ ಸಂಭವಿಸಬಹುದಾದ ವಿಕೃತಿಯನ್ನು ಕಂಡಾಗ ಈ
ಧರ್ಮಾಚರಣೆಯೇ ಬೇಡವೆಂದು ನಮಗೆ ಅನಿಸಬಹುದು. ಎಷ್ಟು
ಜಾಗರೂಕತೆಯಿಂದಕರ್ಮಗಳನ್ನು ಆಚರಿಸಿದರೂ ಈ ಪ್ರಕೃತಿ ಗುಣಗಳಿಂದಾಗಿ
ಅಲ್ಲಿದೋಷಗಳು ನುಸುಳದಿರುವುದಿಲ್ಲ. ಈ ದೋಷಯುಕ್ತವಾದ ಕರ್ಮವನ್ನು
ಆಚರಿಸುವುದಕ್ಕಿಂತ ಅದನ್ನು ಸರ್ವಾತ್ಮನಾ ತೊರೆಯುವುದೇ ಲೇಸೆಂಬ
ಭಾವನೆಯುಂಟಾಗುವ ಅವಕಾಶವೂಇದೆ.
ತ್ಯಾಜ್ಯಂ ದೋಷವದಿತ್ಯೇಕೇ ಕರ್ಮ ಪ್ರಾಹುರ್ಮನೀಷಿಣಃ।
ದೋಷಯುಕ್ತ ವಾದ ಈ ಕರ್ಮವನ್ನು ಬಿಡಬೆಳೆಂದು ಕೆಲ ಮನೀಷಿಗಳು
ಹೇಳಿದ್ದ! ರೆ
ಯಜ್ಞ! ದಾನತಪಃಕರ್ಮನ ತ್ಯಾಜ್ಯಮಿತಿ ಚಾಪರೇ।
ಜೀವನದ ಪಾವನತೆಗೆ ಸಾಧನಗಳಾದ ಯಜ್ಞ, ದಾನ, ತಪಸ್ಸುಗಳನ್ನು
ಸರ್ವಥಾ ತೊರೆಯಬಾರದೆಂಬ ಆದೇಶವನ್ನು ಕೆಲವರು ನೀಡಿರುವರು.
ವಿರುದ್ಧವಾದ ಇವೆರಡು ವಿಚಾರಗಳಲ್ಲಿ ನಾವು ಯಾವುದನ್ನು ಆರಿಸ
ಬೇಕೆನ್ನುವುದೇ ನಮ್ಮ ಮುಂದಿರುವಪ್ಪಶ್ಪೆಯಾಗಿದೆ.
ನಹಿ ದೇಹಚ್ಛತಾ ಶಕ್ಕಂ ತ್ಯಕ್ತ 0 ಕರ್ಮಾಣ್ಯಶೇಷತಃ [
ಆದರೆ ಜೀವಿಗಳಿಗೆ ಕರ್ತವ್ಯವನ್ನು ಪೂರ್ತಿಯಾಗಿ ತೊರೆಯಲು ಸಾಧ್ಯವೆ?
ಆಹಾರ, ವ್ಯವಹಾರಾದಿಗಳಿಗೆ ಅವಶ್ಯವೆನಿಸಿದ ಕರ್ಮಗಳನ್ನು ಬಿಟ್ಟಿರಲು
ಯಾರಿಂದಲೂ ಸಾಧ್ಯವಿಲ್ಲ. ಕರ್ಮಗಳಲ್ಲಿ ದೋಷವಿದೆ, ಅದನ್ನು
ತೊರೆಯಬೇಕೆನ್ನುವ ಆತುರವು ಸ್ನಾನ, ಸಂಧ್ಯಾವಂದನ, ದೇವರಪೂಜೆ,
ಸಮಾಜಸೇವೆಯಂತಹ ಲೂ ೇಕೋವಯುಕ್ತ ಕಾರ್ಯಗಳನ್ನು
ಪರಿತ್ಯಜಿಸುವುದರಲ್ಲಿಯೇ ಪರ್ಯವಸಾನ ಹೊಂದುವುದು. ಲೌಕಿಕ
ಜೀವನೌಪಾಯಿಕ ಕಾರ್ಯಗಳನ್ನ ೦ತೂ ಬಿಡಬೇಕೆಂದರೂ ಬಿಡಲು ಸಾಧ್ಯವೇ
ಇಲ್ಲ. ಸುಲಭವಾಗಿ ಪರಿತ್ಯಜಿಸಬಹುದಾದಕಾರ್ಯಗಳೆಂದರೆ ಆತ್ಮನ ಉಸ್ಪತಿಗೆ
ಕಾರಣಗಳಾಗುವ ಪುಣ್ಯಕೃತಿಗಳು ಮಾತ್ರ. ಇತರ ಭೋಗಕಾರ್ಯಗಳನ್ನೆಲ್ಲ
ಮಾಡಿಕೊಂಡು ಧರ್ಮಾಚರಣೆಯನ್ನು ಮಾತ್ರ ಬಿಡುವುದರಲ್ಲಿವಿನರ್ಥವಿದೆ?
ಹೀಗೆ ನಮ್ಮ ಮನಸ್ಸು ಕರ್ಮದ ಪರಿತ್ಯಾಗ ಹಾಗೂ ಆಚರಣೆಯ ನಡುವೆ
ತೂಗುಯ್ಯಾಲೆಯಲ್ಲಿ ಹೊಯ್ದಾಡುತ್ತಿದೆ. ಗೀತೆಯು ಈ ಸಮಸ್ಯೆಯನ್ನು
ಸುಲಭವಾಗಿ ಬಗೆಹರಿಸಿದೆ. ಕರ್ಮಾಚರಣೆ ಬೇಡ, ಬೇಕು ಎನ್ನುವ ಎರಡು
ವಾದಗಳ ಸಮನ್ವಯವನ್ನು ಗೀತೆಯು ಮಾಡಿದೆ. ಕರ್ಮವನ್ನುತ್ತಚಿಸವುದೆಂದರೆ
ಅದರಲ್ಲಿ ದೋಷವು ತಗಲದಂತೆ ಆಸಕ್ತಿ ಮತ್ತು ಫಲಾಪೇಕ್ಷೆಯನ್ನು
ತೊರೆಯುವುದೇ ಆಗಿದೆ ಎನ್ನುವ ಆಶಯವನ್ನು ಗೀತೆಯು ವಿವರಿಸಿದೆ. ಸಾಮಾನ್ಯ
ಜನರು ಕರ್ಮ ಮತ್ತು ಅದರ ಲೌಕಿಕ ಫಲ ಇವೆರಡರಲ್ಲಿಯೂ
ದೃಷ್ಟಿಯನ್ನಿಟ್ಟಿದ್ದರೆ ಅವುಗಳಲ್ಲಿ ಕರ್ಮವನ್ನು ಮಾತ್ರ ಪರಿಗ್ರಹಿಸಿ ಫಲವನ್ನು
ಪರಿತ್ಯಜಿಸುವುದೇ ಕರ್ಮತ್ಯಾಗ ಹಾಗೂ ಕರ್ಮಾನುಷ್ಠಾನ ಇವೆರಡರ
ಸಮನ್ವಯವಾಗಿದೆ. ಕರ್ಮಾನುಷ್ಠಾನದಲ್ಲಿ ಈ ತ್ಯಾಗವೃತ್ತಿಯನ್ನಾಗಲಿ
ಸಂನ್ಯಾಸವೃತ್ತಿಯನ್ನಾಗಲಿ ಜೋಡಿಸುವುದರಿಂದ ಕರ್ಮಗಳನ್ನು ಆಚರಿಸಿದರೂ
ಅದರ ದೋಷ, ಬಂಧನಗಳಿಗೆನಾವುಗುರಿಯಾಗುವುದಿಲ್ಲ.
ತ್ಯಾಗ, ಸಂನ್ಯಾಸಗಳಲ್ಲಿರುವ. ಅಂತರವನ್ನೂ ನಾವು ಇಲ್ಲಿ
ಪರಿಶೀಲಿಸಬೇಕಾಗಿದೆ. ತನಗಾಗಿ ಲೌಕಿಕ ಫಲವನ್ನು ಬಯಸಿದ್ದರೂ ಪರರ
ಲೌಕಿಕ ಸುಖಕ್ಕಾಗಿ ಸ್ವಂತದ ಅಪೇಕ್ಷೆಯಿಲ್ಲದೆ ಮಾಡುವ ಕರ್ತವ್ಯದಲ್ಲಿ ತ್ಯಾಗ
ವತ್ತಿಯಿದೆ. ತನ್ನಂತೆಯೇವರರಿಗೂ ಲೌಕಿಕಸುಖವನ್ನು ಅಪೇಕ್ಷಿಸದೆ ಅವರಿಗೂ
ಜ್ಞಾನ, ಭಕ್ತಿ ಹರಿಪ್ರಸಾದಗಳನ್ನು ಮಾತ್ರ ಬಯಸಿ ಉನ್ನತ ಭಾವನೆಯಿಂದ
ಮಾಡುವ ಕರ್ಮದಲ್ಲಿ ಸಂನ್ಯಾನವೃತ್ತಿಯು ಅಡಕವಾಗಿದೆ. ಈ ತ್ಯಾಗ,
ಸಂನ್ಯಾಸಗಳೆರಡರಲ್ಲಿಯೂ ಕರ್ಮಾಚರಣೆಯು ಅನಿವಾರ್ಯವೇ. ಅನ್ಯರ
ಸುಖಕ್ಕಾಗಿ ಹಾತೊರೆದು ಅನುಕಂಪಭಾವದಿಂದ ಸ್ವಸುಖನಿರಪೇಕ್ಟವಾಗಿ
ಪ್ರವರ್ತಿಸುವ ಕರ್ಮಯೋಗಿಯ ತ್ಯಾಗದಲ್ಲಿ ಹಿರಿತನವಿದ್ದರೂ ತನ್ನಂತೆಯೇ
ಅನ್ಯರ ಆಧ್ಯಾತ್ಮಿಕ ಉನ್ನತಿಯನ್ನೇ ಬಯಸುವ ಸಂನ್ಯಾಸಿಯ ಮನೋಭಾವವು
ಹೆಚ್ಚು ಉದಾತ್ತವಾದುದು. ಇವರಿಬ್ಬರ ಆಚರಣೆಗಳೂ ಕರ್ಮದ
ದೋಷಗಳನ್ನು ದಾಟಿ ನಿಂತಿವೆ. ವೈರಾಗ್ಯ ಭಕ್ತಿಗಳ ಧಾರೆಯಲ್ಲಿ ತೊಳೆದು
ಸಿದ್ಧಗೊಳಿಸಿದ ಈ ಕರ್ಮದವಕ್ವಾನ್ನದಲ್ಲಿ ಆಸಕ್ತಿಯುಕ್ತಕರ್ಮಗಳಲ್ಲಿರುವ ಕಹಿ
ದುರ್ಗಂಧಗಳು ಕಾಣಸಿಗವು. ಇಂತಹ ಕರ್ಮವನ್ನು ಸಾತ್ತ್ವಿಕವೆಂದು ಗೀತೆಯು
ನಿರ್ದೇಶಿಸಿದೆ.
18.16–18.61 · ನಿಷ್ಕಾಮ ಸಕಾಮ ಕರ್ಮಗಳಲ್ಲಿರುವ ಅಂತರ
ನಿಷ್ಕಾಮ ಸಕಾಮ ಕರ್ಮಗಳಲ್ಲಿರುವ ಅಂತರ
ಫಲಾಪೇಕ್ಷೆಯಿಂದ ಮಾಡುವ ಕರ್ಮವುದಾದಿಯುವುಗುವಿಗೆಸಲ್ಲಿಸುವ
ಸೇವೆಯಂತಿರುತ್ತದೆ. ಕೂಲಿಯನ್ನು ವಡೆದು ದಾದಿಯುಸಲ್ಲಿಸುವಶುಶ್ರೂಷೆಗೂ
ಮಗುವಿನ ಮೇಲಿನ ಪ್ರೇಮದಿಂದ ನಿರಪೇಕ್ಷೆಯಿಂದ ತಾಯಿಯು ನಡೆಸುವ
ಸೇವೆಗೂ ಎಷ್ಟು ಅಂತರವಿದೆ! ಬಾಹ್ಯದೃಷ್ಟಿಗೆ ಎರಡೂ ಸಮಾನವೇ ಆಗಿ
ತೋರಬಹುದು. ಆದರೆ ಅವುಗಳ ಅಂತರಂಗದಲ್ಲಿ ಅಂತರ ಇದ್ದೇ ಇದೆ.
ತಾಯಿಯು ಮಾಡುವ ಸೇವೆಯಲ್ಲಿರುವ ಆಂತರಿಕ ಸತ್ತ್ವವನ್ನು ದಾದಿಯ
ಕೆಲಸದಲ್ಲಿ ನಾವು ಕಾಣಲಾರೆವು. ಮಿಠಾಯಿಗಾರನು ನಾನಾ ರೀತಿಯ
ತಿಂಡಿಗಳನ್ನು ಸಿದ್ದಪಡಿಸುವನು; ಆದರೆತಾಯಿಯುವನೆಯಲ್ಲಿಮಗುವಿಗಾಗಿ
ಸಿದ್ಧಪಡಿಸುವ ತಿಂಡಿಯ ಬೆಲೆ ಹಾಗೂ ಪವಿತ್ರತೆಯು ಅಂಗಡಿಯ
ವದಾರ್ಥಗಳಲ್ಲಿ ಬರಲಾರದು. ಅಂಗಡಿಗಾರನು ಅದನ್ನು ತಯಾರಿಸುವುದು
ಫಲಾವೇಕ್ಷೆಯಿಂದ. ಅದನ್ನು ಮಾರಿ ಹೆಚ್ಚು ಹಣ ಗಳಿಸಬೇಕೆನ್ನುವುದೇ ಅವನ
ಉದ್ದೇಶ. ಆದರೆ ಮಗುವಿಗಾಗಿ ಆಹಾರವನ್ನು ಸಿದ್ಧಪಡಿಸುವ ತಾಯಿಯ
ಉದ್ದೇಶವು ಎಷ್ಟು ಪವಿತ್ರವಿರುತ್ತದೆ! ಅವಳಿಗೆ ತನ್ನ ಸ್ವಾರ್ಥದ ಕಲ್ಪನೆಯೇ
ಇರುವು ದಿಲ್ಲ. ಅವಳದು ನಿಷ್ಕುಮ ಸೇವೆ. ನಿಷ್ಕುಮ ಭಾವನೆಯಿಂದ ಆಚರಿಸಿದ
ಕಾರ್ಯವೇ ವರಿಪೂರ್ಣವೂ ಸಮಾಜಕ್ಕೆ ಹೆಚ್ಚು ಹಿತಕರವೂ ಆಗುತ್ತದೆ.
ಹೋಟೆಲ್ ಅಡಿಗೆಗಿಂತ ಮನೆಯ ಅಡಿಗೆಯು ಶುಚಿಯೂ ಪುಷಿಕರವೂ
ಆರೋಗ್ಯಕರವೂ ಎಂಬುದನ್ನು ಎಲ್ಲರೂ ಒಪ್ಪುವರು. ರೋಕದಸ್ರಿಯೂ
ಸ್ವಾರ್ಥದೃಷ್ಟಿಯಿಂದ ಕರ್ಮವನ್ನು ಮಾಡುವವನಿಗೆ ಕರ್ಮಕ್ಕಿಂತಲೂ ಅದರ
ಫಲದ ಕಡೆಗೆ ಹೆಚ್ಚು ಗಮನವಿರುವುದರಿಂದ ಕರ್ಮದಲ್ಲಿ ಅನೇಕ
ಲೋವದೋಷಗಳೂ ಅದರಿಂದ ಸಮಾಜಕ್ಕೆ ಅನೇಕ ವಿಧದ ಹಾನಿಯೂ
ಬರುವ ಸಂಭವವಿದೆ. ಫಲದ ತ್ಯಾಗವನ್ನು ಮಾಡಿದವನಿಗೆ ಕರ್ಮದಲ್ಲಿ ಮಾತ್ರ
ದೃಷ್ಟಿ. ಕರ್ಮವು ಸರ್ವಾಂಗಸುಂದರವಾಗುವಂತೆ ಅವನು ನಿಷ್ಠೆಯಿ ೦ದ ಅದನ್ನು
ಆಚರಿಸುತ್ತಾನೆ. ಆ ಪರಿಪೂರ್ಣವಾದ. ಕರ್ಮವೇ ಲೋಕ
ಹಿತಕಾರಿಯಾಗಿರುತ್ತದೆ. ಸಾತ್ತ್ವಿಕ ಕರ್ಮದ ಈ ವಿಧಾನವನ್ನು ಗೀತೆಯು
ನಿರೂಪಿಸಿ ಕರ್ಮತ್ಯಾಗ ಹಾಗೂ ಕರ್ಮಾಚರಣೆಯ ಪರಸ್ಫರ ವಿರೋಧ
ವಿಚಾರಗಳ ಸುಂದರಸಮನ್ತಯವನ್ನು ಸಾಧಿಸಿದೆ.
ನಿಷ್ಕುಮಕರ್ಮರೂಪವಾದ ಈ ಸಾತ್ತ್ವಿಕ ಕರ್ಮವನ್ನು ಎಲ್ಲರಿಂದಲೂ
ಆಚರಿಸಲು ಆಗುವುದಿಲ್ಲ. ಆಸಕ್ತಿ ಮತ್ತು ಅಭಿಮಾನವನ್ನು ತೊರೆದವನಿಗೆ ಮಾತ್ರ
ಇದು ಸಾಧ್ಯ ತಾನೇ ಕರ್ತನೆಂಬ ಅಹಂಭಾವದಿಂದಲೇ ಆಸಕ್ತಿ ಅಭಿಮಾನಗಳು
ನಮ್ಮಲ್ಲಿ ಮೂಡುತ್ತವೆ. ಪರಮಾತ್ಮನೇ ಪ್ರತಿಯೊಂದು ವ್ಯಾಪಾರಕ್ಕೂ ಸ್ವತಂತ್ರ
ಕರ್ತಾರನಾಗಿರುವನು. ಅವನ ಈ ಕರ್ತೃತ್ವಶಕ್ತಿಯನ್ನು ನಮ್ಮಲ್ಲಿ
ಆರೋಪಿಸಿಕೊಂಡು ಅಹಂಕಾರದಿಂದ ನಾವು ವ್ಯವಶರಿಸುತ್ತಿದ್ದೇವೆ. ದ್ವೈತ
ಹಾಗೂ ಭಕ್ತಿಯ ಮಾತುಗಳನ್ನು ಆಡುತ್ತಿದ್ದರೂ ನಮ್ಮ ಕ್ರಿಯೆಗಳೆಲ್ಲವೂ
ಅದ್ವೈತದ ಭ್ರಾಂತಿಯಿಂದ ಕೂಡಿವೆ. ಭಗವಂತನನ್ನು ಮರೆತು ತನ್ನ
ವ್ಯವಹಾರಗಳಿಗೆಲ್ಲತಾನೇಸ್ವತಂತ್ರ ಕರ್ತನೆಂದು ಭಾವಿಸಿನಡೆಯುವುದೂ ಒಂದು
ಅದ್ವೈತಭ್ರಾಂತಿಯೇ, ಪರಮಾತೃನಲ್ಲಿರುವ ಸ್ವತಂತ್ರ ಶಕ್ತಿಯನ್ನು ತನ್ನಲ್ಲಿ
ಆರೋಪಿಸಿಕೊಳ್ಳುವುದೂ ಒಂದು ರೀತಿಯ ಅದ್ವೈತಚಿಂತನವೇ. ಈ
ಸ್ವಾತಂತ್ರ್ಯದ ದುರಭಿಮಾನದಿಂದಲೇ ನಮ್ಮ ಶರೀರ ಹಾಗೂ ಅದಕ್ಕೆ
ಸಂಬಂಧಿಸಿದ ವಸ್ತುಗಳ ಮೇಲೆ ಅಧಿಕಾರ ಹಾಗೂ ಮಮತೆಯ ಬುದ್ದಿ ಹುಟ್ಟಿ
ಆಸ ಆ ಮಾನಗಳಿಂದಕೆಂದ ರಾಗಿಆಸೆ. ಲಾಲಸೆಗಳಿಂದ ಕಾಯ ಗಳನ್ನು
ಕೈಗೊಳ್ಳಲು ಆರಂಭಿಸುತ್ತೇವೆ. ಜಗತ್ತಿನ ಬಗ್ಗೆ ವರಮಾತ್ಮನಿಗಿರುವ
ಸಾರ್ವಭೌಮತೆಯನ್ನೂ ಅವನ ಸರ್ವಸ್ಥಾತಂತ್ರ್ಯವನ್ನೂ ಮರೆತು ಜಗತ್ತನ್ನು
ತಂತಮ್ಮ ಅಧಿಕಾರದ ಚಿಕ್ಕ ಚಿಕ್ಕ ವಲಯಗಳನ್ನಾಗಿ ವಿಭಜಿಸಿ ಕಚ್ಚಾಡುವ
ದುಚ್ಚಿತಿಯು ಸ್ವಾತಂತ್ರ್ಯದ ಭ್ರಮೆಯಿಂದ ನಮಗೆ ಉಂಟಾಗಿದೆ. ಜಗತ್ತಿನ
ಘರ್ಷಣೆ, . ಸ್ವಾರ್ಥಪ್ರವೃತ್ತಿಗಳಿಗೆ ಮೂಲವಾದ ಈ ಸ್ವಾತಂತ್ರ್ಯದ
ಭಾವನೆಯನ್ನೇ ನಾವು ಕಿತ್ತೊಗೆಯಬೇಕು.
ತತ್ಕೈವಂ ಸತಿ ಕರ್ತಾರಮಾತ್ಮಾನಂ ಕೇವಲಂತು ಯಃ
ಒಂದು ಕಾರ್ಯಕ್ಕೆ ಅನೇಕ ಕಾರಣಗಳಿವೆ. ಪ್ರಕೃತಿ, ಜೀವ, ಪರಮಾತ್ಮ
ಮುಂತಾದ ಅನೇಕೆಕಾರಣಗಳುಸೇರಿ ಒಂದು ಕಾರ್ಯದನಿಷ್ಠತ್ತಿಯಾಗುವುದು.
ನಮ್ಮ ನಿಯಂತ್ರಣಕ್ಕೊಳಪಡದ ಇಂತಹ ಅನೇಕ ವಸ್ತುಗಳ ಬಲದಿಂದ ನಾವು
ಕಾರ್ಯಗಳನ್ನು ಮಾಡುತ್ತಿರುವೆವು. ಇದನ್ನು ತಿಳಿಯದೆ ತಾನೊಬ್ಬನೇ
ಸ್ವತಂತ್ರಕರ್ತನು, ಒಂದು ಕಾರ್ಯಸೃಶ್ಟಿಗೆ, ತನ್ನ ಒಡೆತನಕ್ಕೆ ಒಳಪಡದ ಯಾವ
ವಸ್ತುವಿನ ಸಹಾಯದ ಅಗತ್ಯವೂಇಲ್ಲ. ಪ್ರಕೃತ, ಶರೀರೆಗಳಿಗೆಲ್ಲ ತಾನೇ ಒಡೆಯ
ನೆಂಬ ಅಹಂಕಾರದಿಂದ ನಾವು ಕಾರ್ಯದಲ್ಲಿ ಪ್ರವರ್ತಿಸುತ್ತೇವೆ. ಜಗತ್ತಿನ
ಸೃಷ್ಟಿಕಾರ್ಯದಲ್ಲಿ ಸಹಭಾಗಿಗಳಾದ ಚೇತನ ಮತ್ತು ಅಚೇತನ ವಸ್ತುಗಳನ್ನು
ಅರಿತು, ಇದರಲ್ಲಿ ತನಗಿರುವ ವಾತ್ರವನ್ನು ಅರ್ಥಮಾಡಿಕೊಂಡರೆ ಇಂತಹ
ಅಹಂಕಾರ, ಆಸಕ್ತಿಗಳಿಗೆ ಅವಕಾಶವು ದೊರೆಯಲಾರದು. ಪರಮಾತ್ಮನ
ಸ್ವಾತಂತ್ರ್ಯ, ಸರ್ವಶಕ್ತಿಗಳನ್ನೂ ಜೀವನ ಅಲ್ಪಶಕ್ತಿಯನ್ನೂ ಪ್ರಕೃತಿ, ಶರೀರೇಂದ್ರಿ
ಯಗಳ ಕಾರ್ಯವಿಸ್ತಾರವನ್ನೂ ಅರಿತವನು ಅಹಂಕಾರ, ಮಮಕಾರಗಳಿಗೆ ಒಳ
ಗಾಗದೆ ನಿರ್ಲಿಪ್ರತೆಯಿಂದ ನಿಷ್ಕುಮನೆಯಿಂದಸ್ವಕರ್ತವ್ಯವನ್ನು ಮಾಡಬಲ್ಲನು.
ಯಸ್ಕ ನಾಹಂಕೃತೋ ಭಾವೋ ಬುದ್ದಿ ರ್ಯಸ್ಯ ನ ಲಿಪ್ಕತೇ
ಈ ನಿರಹಂಕಾರ, ನಿರ್ಲಿವತೆಗಳೇ ನಿಷ್ಕಾಮಕರ್ಮದ ಬುನಾದಿ.
ಈಶ್ವರಃ ಸರ್ವಭೂತಾನಾಂ
ಹೃದ್ದೇಶೇನರ್ಜುನ ತಿಷ್ಕತಿ ।
ಭ್ರಾಮಯನ್ ಸರ್ವಭೂತಾನಿ
ಯಂತ್ರಾರೂಢಾನಿ ಮಾಯಯಾ ॥
ಈಶ್ವರನು ಎಲ್ಲ ಹೃದಯದೊಳಗೂ ನೆಲೆಸಿ ಈ ಜಗತ್ತನ್ನು ಕುಣಿಸುತ್ತಾನೆ.
ಯಂತ್ರದ ಕುದುರೆಗಳಲ್ಲಿ ಮಕ್ಕಳನ್ನು ತಿರುಗಿಸಿ ಆಡಿಸುವಂತೆ ಪರಮಾತ್ಮನು ಈ
ಜಗಚ್ಚಕ್ರ ಚಾಲನವನ್ನು ನಡೆಸಿದ್ದಾನೆ. ಸರ್ವಾಂತರ್ಯಾಮಿಯಾದ ಅವನ ಈ
ಕಾರ್ಯವೈಭವವನ್ನು ತಿಳಿದವನು ಯಾವ ವಸ್ತುವಿನ ಮೇಲೂ ತನ್ನ ಒಡೆತನ
ಮತ್ತು ಅಧಿಕಾರವನ್ನು ಸ್ಥಾಪಿಸಬಯಸುವುದಿಲ್ಲ. ಸರ್ವವೂ ಪರಮಾತ್ಮನ
ಸೊತ್ತೆಂದು ಎಲ್ಲ ಕಾರ್ಯಗಳೂ ಅವನ ಶಕ್ತಿಯಿಂದಲೇ ನಡೆಯುವುದೆಂಬ
ಅರಿವು ಮೂಡಿದಾಗ ಅಹಂಕಾರ, ಮಮತೆಗಳೆಲ್ಲ ದೂರವಾಗುವವು.
ದುರ್ವಿನೀತನಾದ ಶ್ವೇತಕೇತುವು ತಂದೆಯಿಂದ ಪರಮಾತ್ಮನ ಮಹಿಮೆಯ
ಬೋಧೆಯನ್ನು ಕೇಳಿ ವಿನಯಶೀಲನಾಗಿ ವರಿವರ್ತನೆಗೊಂಡನು.
ವಿಜಯೋನ್ಯತ್ತರಾದ ದೇವತೆಗಳಿಗೂ ಭಗವಂತನು ಶಕ್ತಿ ಸತ್ತ್ವಗಳನ್ನು
ತುಂಬದಿದ್ದರೆ, ತಮ್ಮಿಂದ ಅಲ್ಬಕಾರ್ಯವೂ ನಡೆಯದೆಂಬ ಅನುಭವ
ಉಂಟಾದಾಗಲೇ ಅವರಿಗೆ ವಿದ್ಯೆಯ ದರ್ಶನವಾಯಿತು. ಆದುದರಿಂದ ತನ್ನ
ಆನ್ಥಾತಂತ್ರ್ಯ ಮತ್ತುಪರಮಾತ್ಮನ ಸ್ವಾತಂತ್ರ್ಯದ ಪರಿಜ್ಞಾನವು ಕರ್ಮಯೋಗಕ್ಕೆ
ಮುಖ್ಯಸಹಾಯಕವಾಗಿದೆ.
18.11–18.66 · ಶರಣಾಗತಿ
ಶರಣಾಗತಿ
ಈವರೆಗಿನ ವಿಸೃತನಿರೂವಣೆಯಿಂದ ಅರ್ಜುನನ ಪ್ರಶ್ನೆ ಗಳಿಗೆಲ್ಲ ಸರಿಯಾದ
ಸಮಾಧಾನವು ದೊರೆತಿದೆ. ಆತ್ಮ, ವರಮಾತೃಹಾಗೂ ಪ್ರಾಕೃತ ಜಡಪದಾರ್ಥಗಳ
ಪರಸ್ಪರ ಸಂಬಂಧ ಮತ್ತು ಪ್ರವಂಚದಲ್ಲಿ ಅವುಗಳ ಕಾರ್ಯವಿಭಾಗ ಹಾಗೂ
ಶಕ್ತಿಸ್ತಭಾವಗಳ ಸವಿಸ್ತಾರ ವಿವೇಚನೆಯಾಗಿದೆ. ಇದರಿಂದ ಜಗತ್ತಿನಲ್ಲಿ ವ್ಯಕ್ತಿಯ
ಪಾತ್ರವನ್ನು ಸರಿಯಾ ಗಿ ಅರ್ಥ ಮಾಡಿಕೊಳ್ಳಲು ಅವಕಾಶವಾಗಿದೆ. ಪ್ರಕೃ ತಿಯ
ಸಂಬಂಧವು ಅನಾದಿ ಕಾಲದಿಂದಲೂ ಜೀವರಿಗೆ ಇದೆ. ಎಷ್ಟು ಕಾಲದಿಂದ
ಜೀವರಿರುವರೋ ಅಷ್ಟು ಕಾಲದಿಂದಲೂ ಪ್ರಕೃತಿಯ ಅವರಣವು ಅವರನ್ನು
ನಿರ್ಬಂಧಿಸಿದೆ. ಬೇಡವೆಂದರೂ ಪ್ರಕೃತಿ ಸಂಬಂಧವಿರುವವರೆಗೆ ಅದರ
ಕಾರ್ಯಪರಿಣಾಮಗಳಿಗೆ ನಾವು ಒಳಗಾಗಲೇಬೇಕು. ಈ ಪ್ರಕೃತಿಯಿಂದ
ಅತೀತರಾಗುವುದೇ ನಮ್ಮ ಗುರಿಯಾಗಿದ್ದರೂ ಈ ಪ್ರಾಕೃತ ಜಗತ್ತಿನಲ್ಲಿ
ಇರುವವರೆಗೆ ನಮ್ಮಲ್ಲಿ ರುವ ಸಾಧನಸಾಮಗ್ರಿಯನ್ನೂ ಪ್ರಕೃತಿಯ ಶಕ್ತ ಯನ್ನೂ
ಯೋಗ್ಯ ರೀತಿಯಿಂದ ಬಳಸಿಕೊಂಡು ನಮ್ಮ ಗುರಿಯನ್ನು ಮುಟ್ಟುವ
ದಾರಿಯಲ್ಲಿ ನಡೆಯಬೇಕು. ಪ್ರಕೃತಿಯ ಸಂಬಂಧದಿಂದ ಮಾನವನಿಗೆ ಈ
ಸಂಸಾರದ ಕ್ಲೇಶ ತಾಪಗಳೊದಗಿವೆ ಎಂದು ಅದರ ಮೇಲಿನ ದ್ವೇಷದಿಂದ ಈ
ಜಗತ್ತಿನ ಯಾವ ವ್ಯವಹಾರಗಳೂ ಬೇಡವೆಂದು ನಿಷ್ಠ್ರಿಯರಾಗಿ
ಕುಳಿತುಕೊಳ್ಳುವುದರಿಂದ ನಾವು ಏನನ್ನೂ ನಾಧಿಸಿದಂತಾಗುವುದಿಲ್ಲ. ಪ್ರಕೃತಿಯ
ಬಂಧನದಲ್ಲಿ ನಾವಿರುವೆವೆಂಬ ವಸ್ತುಸ್ಥಿತಿಯನ್ನು ಅರಿತು ಶಿಸ್ತು
ಸಂಯಮಗಳಿಂದ ಇಲ್ಲಿ ವರ್ತಿಸಿ ಈ ಕಾರಾಗೃಹದಿಂದ ಬಿಡುಗಡೆಯಾಗ
ಬೇಕೆಂಬುದನ್ನು ನಾವು ತಿಳಿದಿರಬೇಕು. ಪ್ರಕೃತಿಯನ್ನು ದ್ವೇಷಿಸಿ ಜಗತ್ತಿನ
ಕರ್ತವ್ಯಗಳಲ್ಲಿ ಪಾಲುಗೊಳ್ಳದಿರುವುದರಿಂದ ನಮ್ಮ ವ್ರಕೃತಿಗೇ ನಾವು
ತಡೆಯನ್ನುಂಟುಮಾಡಿಕೊಂಡಂತಾಗುವುದು. ಈ ವ್ರಕೃತಿಯ ಸಾಗರವನ್ನು
ದಾಟಬೇಕೆನ್ನವುದು ನಮ್ಮ ಅದಮ್ಯ ಆಕಾಂಕ್ಷೆಯಾಗಿದ್ದರೆ ನಾವು ಪ್ರಕೃತಿಯ
ಈಚೆಯ ದಡದಲ್ಲಿಯೇಕುಳಿತುಸಾಗರದಲ್ಲಿ ಇಳಿಯಬೇಕೇ ಬೇಡವೇ ಎಂದು
ಡೋಲಾಯಮಾನ ಚಿತ್ತದಿಂದ ಸಂಶಯಾಸ್ಯಂದಿತ ಮನಸ್ಕರಾಗಿ
ಕಾಲಹರಣಮಾಡುವುದರಿಂದಎನು ಸಾಧಿಸಿದಂತಾಗುವುದು? ದೈರ್ಯದಿಂದ
ಈ ಸಂಸಾರಸಾಗರದಲ್ಲಿ ನಾವು ಧುಮುಕಲೇಬೇಕು.
ಈಸಬೇಕು ಇದ್ದು ಜೈಸಬೇಕು । -ಶ್ರೀ ಪುರಂದರದಾಸರು
ಈ ಪ್ರವಾಹದಲ್ಲಿ ಇಳಿದರೂ ಅದರಲ್ಲಿ ಮುಳಗದೆ "ಶಸ ಜೈಸುವ' ಕಲೆಯನ್ನು
ಗೀತೆಯು ನಮಗೆ ಹೇಳಿದೆ. ಆಸಕ್ತಿ ಮೋಹಗಳ ವಾಶವನ್ನು ಬಿಗಿದುಕೊಂಡು ಈ
ಜಗತ್ತಿನಲ್ಲಿ ಇಳಿದರೆ ನಾವು ಇದರಿಂದ ವಾರಾಗುವ ಸಂಭವವೇ ಇಲ್ಲ.
ಅನಾಸಕ್ತಿಯಿಂದ ವಿಹಿತ ಕರ್ತವ್ಯಗಳನ್ನು ಆಚರಿಸಿಕೊಂಡಿದ್ದರೆ ಜಗತ್ತಿನ ಈ
ಕರ್ಮಪ್ರವಾಹದಲ್ಲಿದ್ದರೂ ಅದರ ಯಾವ ಸೆಳೆತ, ಸುಳಿಯೊಳಗೆ ಸಿಲುಕದೆ
ಸಾಗಲು ನಮಗೆ ಸಾಧ್ಯವಾಗುವುದು.
ಜಗತ್ತಿನಲ್ಲಿದ್ದರೂ ಅದರ ಬಂಧವು ಬಿಗಿಯಾಗದಂತೆ ಅದರ ಸೆಳೆತದಲ್ಲಿ
ಕೊಚ್ಚಿಹೋಗದಂತೆ ನಾವು ಎಷ್ಟು ಎಚ್ಚರ ವಹಿಸಿದರೂ ಸಾಲದು. ಈ
ಬಂಧನದಿಂದ ಪೂರ್ಣವಾಗಿ ಬಿಡುಗಡೆ ಹೊಂದುವ ಬಗೆಯನ್ನು
ಆಲೋಚಿಸಬೇಕು. ಅನಾದಿಯಾದ ಈ ಪ್ರಕೃತಿಬಂಧದ ವಿಮೋಚನೆಯು ನಮ್ಮ
ಶಕ್ತಿಗೆ ಮೀರಿದುದಾಗಿದೆ. ಇದು ನಮ್ಮ ಶಕ್ತಿಗೆ ಒಳವಡುತ್ತಿದ್ದರೆ, ಇದನ್ನು
ಅಡಗಿಸುವತೇಜಸ್ಸು ನಮ್ಮಲ್ಲಿ ಸ್ವಯಂಸಿದ್ಧವಾಗಿದ್ದರೆ, ಈ ಕ್ಷೇಶ-ವಿಪ್ಲವಗಳಿಗೆ
ನಾವು ಈಡಾಗುತ್ತಿರಲಿಲ್ಲ. ಇದಕ್ಕಾಗಿ ಪ್ರಕೃತಿ, ಜೀವರನ್ನೆಲ್ಲ ಮೀರಿಸುವ ವಿಶ್ವದ
ಮಹಾಶಕ್ತಿಯ ಆಸರೆಯನ್ನು ಪಡೆಯಬೇಕು.
ತಮೇವ ಶರಣಂ ಗಚ್ಛ ಸರ್ವಭಾವೇನ ಭಾರತ ।
ಅವನಲ್ಲಿ ಶರಣಾಗತರಾಗದೆ, ಅವನಲ್ಲಿ ಅನನ್ಯಭಕ್ತಿಯಿಂದ ನಡೆಯದೆ
ಇದ್ದರೆ, ನಮ್ಮ ಜೀವನದ ಈ ಮಹಾ ಲಕ್ಷ್ಯವನ್ನು ಮುಟ್ಟಲಾರೆವು. ಮಗುವಿನ
ಕೈಯಲ್ಲಿ ಮೂಸಂಬಿಯನ್ನು ಇತ್ತಂತೆ ನಮ್ಮ ಸ್ವರೂಪಾನಂದದ ನಿಧಿಯು ನಮ್ಮ
ಕೈಯಲ್ಲೇನೋ ಇದೆ. ಮೂಸಂಬಿಯ ಹೊರಸಿ್ಪೆಯನ್ನುತೆಗೆಯಲುವುಗುವಿಗೆ
ಸಾಧ್ಯವಾಗುವುದೆ? ತಾಯಿಯೇ ಅದನ್ನು ಮಗುವಿಗೆ ಸುಲಿದು ನೀಡಬೇಕು.
ಅದರಂತೆ ನಮ್ಮ ಸ್ವರೂಪಾನಂದದ ಹೊರಗಿನ ಪ್ರಕೃತಿಯ ಆವರಣವನ್ನು
ಕಿತ್ತೊಗೆಯಲು ಸಾಧ್ಯವಾಗದೆ ನಮಗೆ ಈ ಆನಂದದ ನಿಧಿಯು ಇದ್ದರೂ
ಇಲ್ಲದಂತೆ, ಭಗವಂತನೇ ತಾಯಿಯ ಮಮತೆಯಿಂದ ಈ ಹೊರ ಆವರಣವನ್ನು
ಬಿಡಿಸಬೇಕು.
ಅಜ್ಞಾನಾಂ ಜ್ಞಾನದೋ ವಿಷ್ಣುಃ
ಜ್ಞಾನಿನಾಂ ಮೋಕ್ಷದಶ್ಚ ಸಃ।
ಎ ಅನುವ್ಯಾಖ್ಯಾನ
ನಮಗೆ ಜ್ಞಾನ, ಬಂಧನಿವೃತ್ತಿ ಮುಂತಾದ ಎಲ್ಲ ವಿಕಾಸ, ಬೆಳವಣಿಗೆಗಳು
ಪರಮಾತ್ಮ ನಿಂದಲೇ ಆಗಬೇಕು. ನಮ್ಮ ಜೀವನದ ಎಲ್ಲ ಆಗುಹೋಗುಗಳಿಗೂ
ಅವನು ಕಾರಣನು. ಅವನ ಶಕ್ತಿ ಅನುಗ್ರಹಗಳಿಲ್ಲದೆ ನಮ್ಮಿಂದ ಏನೂ
ನಡೆಯದೆಂಬುದನ್ನು ಅರಿತು ಸರ್ವಾತ್ಮನಾ ಭಗವಂತನನ್ನು ಆಶ್ರಯಿಸಿಕೊಂಡು
ಭಕ್ತಿಪೂರ್ಣ ಮನೋಭಾವದಿಂದ ನಮ್ಮ ಕರ್ತವ್ಯವನ್ನು ಆಚರಿಸಬೇಕು.
ಭಕ್ತಿಯೇ ಕರ್ಮದ ಅಂತಚತ್ತ್ವವು. ಆ ಸತ್ತ್ವವು ಇಲ್ಲದ ಕರ್ಮಗಳು
ರಾಶಿರಾಶಿಯಾಗಿದ್ದರೂ ಅವೆಲ್ಲ] ವೂನಿರ್ಜೀವ ಹಾಗೂ ನಿಷ್ಟಯೋಜನವೇ.
ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ |
ದೈವೀ ಭಾವನೆಯಿಲ್ಲದ, ಪರಮಾತ್ಮನ ಕಡೆಗೆ ನಮ್ಮನ್ನು ಒಯ್ಯದ,
ಕರ್ಮಗಳೆಲ್ಲವೂ ವ್ಯರ್ಥವಾಗಿವೆ. ಅವೆಲ್ಲವನ್ನೂ ನಾವು ಮಾಡಬೇಕು.
ಸರ್ವಧರ್ಮಗಳ ತ್ಯಾಗವೆನ್ನುವುದರ ಭಾವವು ಇದೇ ಆಗಿದೆ. ಅಥವಾ
ಫಲಾಪೇಕ್ಷೆಯನ್ನು ತ್ಯಜಿಸುವುದೇ ಸರ್ವಧರ್ಮಗಳ ತ್ಯಾಗವೆಂದೂ ನಾವು
ಭಾವಿಸಬಹುದು.
ಯಸ್ತು ಕರ್ಮಫಲತ್ಯಾಗೀ ಸ ತ್ಯಾಗೀತ್ಯಭಿಧೀಯತೇ |
ಎಂಬುದಾಗಿ ಫಲವನ್ನು ತೊರೆಯುವುದೇ ಕರ್ಮದನಿಜವಾದ ತ್ಯಾಗವೆಂದು
ಗೀತೆಯಲ್ಲಿಯೇ ಹಿಂದೆ ಹೇಳಿದೆ.
ಕೆಲವರಂತೂ
ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ।
ಎನ್ನುವ ಪದ್ಯವನ್ನು ತಮ್ಮ ಮತೀಯ ವಿಚಾರದ ಕಡೆಗೆ ಬಲಾತ್ಕಾರದಿಂದ
ಎಳೆದು ವಿಚಿತ್ರವಾದ ಅರ್ಥವನ್ನು ಮಾಡುವರು. ಈವರೆಗೆ ಕರ್ಮಾಚರಣೆ
ಹಾಗೂ ಭಕ್ತಿಯ ಬಗ್ಗೆ ಹೆಚ್ಚಿನ ಪ್ರಾಧಾನ್ಯವನ್ನು ಕೊಟ್ಟು ನೀಡಿದ ಉಪದೇಶಕ್ಕೆ
ಸಂಪೂರ್ಣವಾಗಿ ವ್ಯತಿರಿಕ್ತವಾದ ಮಾತನ್ನು ಅವರು ಪರಮಾತ್ಮನಿಂದ
ಹೊರಡಿಸುತ್ತಾರೆ. ಸರ್ವಕರ್ಮಗಳನ್ನು ಪೂರ್ಣವಾಗಿ ಪರಿತ್ಯಜಿಸಿ, ತಾನೇ
ಪರಮಾತ್ಮನೆಂಬ ಆದ್ವೈತಭಾವದಿಂದನಡೆಯದೇಕೆನ್ನುವುದು ಅವರದೃಶ್ವಿಯಲ್ಲಿ
ಈ ಶ್ಲೋಕದ ಅರ್ಥವಾಗಿದೆ. ಅದ್ವೈತಭಾವ ಮತ್ತು ಶರಣಾಗತಿ ಇವೆರಡೂ
ವರಸ್ಪರ ವಿರೋಧಿ ವಿಚಾರಗಳಾಗಿವೆ. ಇದರ ಹಿಂದಿನ ಶ್ಲೋಕದಲ್ಲಿಯೇ
ಶ್ರೀಕೃಷ್ಣನು ಅರ್ಜುನನನ್ನು ತನಗೆವರಮ ಇಷ್ಟನೆಂದು ಕರೆದು ಅಪನಿಗಾಗಿ ಅತ್ಯಂತ
ಪ್ರಧಾನವಾದ ಸಂದೇಶವನ್ನು ಕೊಡುವುದಾಗಿ ಘೋಷಿಸಿ,
ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು |
ಎಂಬುದಾಗಿ ಪರಮಾತ್ಮನ ಪ್ರೀತಿಯ ಉದ್ದೇಶದಿಂದ ಮಾಡುವ ಯಜ್ಞ
ರೂವವಾದ ಕರ್ಮ, ಭಕ್ತಿ ನಮಸ್ಕಾರಗಳನ್ನು ಆಚರಿಸಬೇಕೆಂದೂ ಇವು
ವರಮಶ್ರೇಯಸ್ಸಿಗೆ ಸಾಧನವೆಂದೂ ಹೇಳಿ ಮುಂದಿನ ಶ್ಲೋಕದಲ್ಲಿಯೇ
ಅವುಗಳಿಗೆ ಪೂರ್ಣ ವಿರೋಧಿ ಮಾತುಗಳನ್ನು ಕೃಷ್ಣನಿಂದ ನುಡಿಸುವುದು
ವಿಸಂಗತಿಯ ಪರಮಾವಧಿಯಾಗುವುದು. . 'ಅದ್ವೈತಸಿದ್ದಿ'ಕಾರರಾದ
ಮಧುಸೂದನ ಸರಸ್ವತಿಯವರು ಇದು ಕ್ಲಿಷ್ಟಕಲ್ಪನೆಯೆಂದು ಈ ಅರ್ಥದ
ಅಸ್ವಾರಸ್ಯವನ್ನು ತೋರಿಸಿರುವರು. ಇಲ್ಲಿ ಶ್ರೀಕೃಷ್ಣನು ಭಕ್ತಿಯ
ವರಮೋಚ್ಛ್ರಾ ಯದಶೆಯಾದ ಶರಣಾಗತಿಯನ್ನು ಉವದೇಶಿಸಿರುವನು.
ಸರ್ವಭಾವದಿಂದ ಪರಮಾತ್ಮನನ್ನು ಆಶ್ರಯಿಸಿ ಪರಮಭಕ್ತಿಯಿಂದ
ಕರ್ತವ್ಯಗಳನ್ನು ಆಚರಿಸುವುದೊಂದೇ ನಮ್ಮ ಈ ಅನರ್ಥ ವಿಪ್ಲವಗಳ ಏಕಮಾತ್ರ
ಪರಿಹಾರೋಪಾಯವಾಗಿದೆ. ಈ ಶರಣಾಗತಿಯ ಭಾವವು ನಮ್ಮ ಪ್ರತಿಯೊಂದು
ಕೃತಿಯಲ್ಲಿ ಅನುಸ್ಯೂತವಾಗಿರಬೇಕು.
ಕುರು ಭುಂಕ್ಸ್ವಚ ಕರ್ಮ ನಿಜಂ ನಿಯತಂ
ಹರಿಪಾದವಿನಮ್ರಧಿಯಾ ಸತತಮ್ । -ದ್ವಾದಶಸ್ತೋತ್ರ
ಕರ್ಮವನ್ನು ಆಚರಿಸುವಾಗಲೂ ಅದರ ಫಲವನ್ನು ಭೋಗಿಸುವಾಗಲೂ
ಹರಿಯಸ್ಥರಣೆಯು ನಿರಂತರವಾಗಿರಬೇಕು. ನಮ್ಮ ಶರೀರದ ಅಂಗಾಂಗಗಳಲ್ಲಿ
ಚೇತನವು ಹರಿಯುವುದು ಅವಶ್ಯವಿರುವಂತೆ ನಮ್ಮ ಪ್ರತಿಯೊಂದು ಕರ್ಮದಲ್ಲಿ
ನಿರಂತರವಾಗಿ ಹರಿಭಕ್ತಿಯು ಹರಿಯಬೇಕು. ಗೀತೆಯಲ್ಲಿ ಸರ್ವಪ್ರಧಾನವೆಂದು
ಉಲ್ಲೇಖಿಸಿ, ಅಂತಿಮವಾಗಿ ಬಂದಿರುವ ಈ ಉಪದೇಶವೇ ಗೀತೆಯ ಸಾರ
ಸಂದೇಶವಾಗಿದೆ.
Bannanje Govindacharya (1936–2020)Bhagavad Gita Pravachana
18.36–18.37
ಸುಖಮ್ ತು ಇದಾನೀಮ್ ತ್ರಿವಿಧಮ್ ಶೃಣು ಮೇ ಭರತರ್ಷಭ |
ಅಭ್ಯಾಸಾತ್ ರಮತೇ ಯತ್ರ ದುಃಖಾಂತಮ್ ಚ ನಿಗಚ್ಛತಿ Il
ಯತ್ ತತ್ ಅಗ್ರೇ ವಿಷಮ್ ಇವ ಪರಿಣಾಮೇ ಅಮೃತ ಉಪಮಮ್ |
ತತ್ ಸುಖಮ್ ಸಾತ್ವಿಕಮ್ ಪ್ರೋಕ್ತಮ್ ಆತ್ಮ ಬುದ್ದಿ ಪ್ರಸಾದಜಮ್ -- ಭರತರ್ಷಭಾ, ಈಗ ಮೂರುತೆರನಾದ
ಸುಖವನ್ನು ನನ್ನಿಂದಾಲಿಸು: ಬಳಕೆಯಿಂದ ಖುಷಿಕೊಡುವಂತಹದ್ದು, ದುಃಖವನ್ನು ನೀಗಿಸುವಂತಹದ್ದು, ಮೊದಲು
ವಿಷದಂತೆ ಅಪ್ರಿಯವಾಗಿ ಕೊನೆಗೆ ಅಮೃತದಂತೆ ಹಿತ ನೀಡುವಂತಹದ್ದು -ಇಂತಹ ಸುಖ-ಸಾತ್ವಿಕ. ಇದು ತನ್ನ
ಬಗೆ ತಿಳಿಯಾದಾಗ, ಭಗವಂತನ ಕರುಣೆಯಿಂದ ಬರುವಂತಹದ್ದು.
ಮನುಷ್ಯ ಒಟ್ಟಾಗಿ ಜೀವನದಲ್ಲಿ ಬಯಸುವುದು ಸುಖವನ್ನು. ಆತನ ಜೀವನದ ಕೊನೆಯ ಗುರಿ ಸುಖ. ಆದರೆ
ಯಾವುದು ನಿಜವಾದ ಸುಖ? ಸುಖದಲ್ಲೂ ಮೂರು ವಿಧ-ಸಾತ್ವಿಕ, ರಾಜಸ ಮತ್ತು ತಾಮಸ. “ತ್ರೈವಿದ್ಯೆಯ
ವಿವರಣೆಯ ಕೊನೆಯಲ್ಲಿ ಸುಖದ ಮೂರು ವಿಧದ ವಿವರಣೆಯನ್ನು ಕೇಳು” ಎನ್ನುತ್ತಾನೆ ಕೃಷ್ಣ. ಇಲ್ಲಿ ಬಳಸಿರುವ
"ಭರತರ್ಷಭ' ಎನ್ನುವ ವಿಶೇಷಣದ ಹಿಂದೆ ವ್ಯಾಸರು ನಮಗೆ ಅನೇಕ ಸಂದೇಶವನ್ನು ಕೊಟ್ಟಿರುವುದನ್ನು ನಾವು
ಗಮನಿಸಬೇಕು. ಭಗವಂತನ ಭಕ್ತಿಯಲ್ಲಿ-ರತ(ಶ್ರೇಷ್ಠರಾದಾಗ; ಭರತನಂತೆ ಲೌಕಿಕ ಸುಖದ ಆಸೆ ಇಲ್ಲದೆ ಪೂರ್ಣ
ಪ್ರಮಾಣದಲ್ಲಿ ಶ್ರೀರಾಮಚಂದ್ರನನ್ನು ಪ್ರೀತಿಸಿದಾಗ; ಭಗವಂತನ ಭಕ್ತಿಯಲ್ಲಿ ನಿರತರಾದವರಲ್ಲಿ ಶ್ರೇಷ್ಠರಾದ
ವಾಯು(ಹನುಮಂತ)ದೇವರಲ್ಲಿ ಗುರುಭಕ್ತಿಯನ್ನಿ ಟ್ಟು, ಭಗವದರ್ಪಣಾಭಾವದಿಂದ ನಮ್ಮ ಕರ್ಮ ನಿರ್ವಹಿಸಿದಾಗ-
ನಾವು ಭರತರ್ಷಭರಾಗಬಹುದು. ಭರತರ್ಷಭನಾದವನಿಗೆ ನಿಜವಾದ ಸುಖ ಎಂದರೇನು ಎಂದು ತಿಳಿದು
ಅದನ್ನು ಅನುಭವಿಸಲು ಸಾಧ್ಯ.
ಯಾವುದೇ ಒಂದು ವಿಷಯ ಪ್ರಾರಂಭದಿಂದಲೇ ಸುಖವಾಗಿ ಕಾಣಿಸಿದರೆ ಅದು ಸಾತ್ವಿಕ ಸುಖವಲ್ಲ. ಕಷ್ಟಪಡದೆ
ಅನಾಯಾಸವಾಗಿ ಪಡೆಯುವುದು ಮೋಹದ ಸುಖ. ಸಾತ್ವಿಕ ಸುಖ ಮೊದಲು ಕಷ್ಟ ರೂಪದಲ್ಲಿರುತ್ತದೆ. ಇದಕ್ಕೆ
ಉತ್ತಮ ದೃಷ್ಟಾಂತ ಸಮುದ್ರಮಥನ. ಅಲ್ಲಿ ಮೊದಲು ಬಂದಿರುವುದು ಅಮೃತವಲ್ಲ ಬದಲಿಗೆ ವಿಷ. ನಿಜವಾದ
ಅಮೃತ ಸಿಕ್ಕಿರುವುದು ಕೊನೆಯಲ್ಲಿ. ಕೈಕೆಸರಾದರೆ ಬಾಯಿ ಮೊಸರು-ಕಷ್ಟಪಟ್ಟರೆ ಸುಖ. ನಾವು ಕುಡಿಯುವ
ಔಷಧ ವಿಷದಂತೆ ಕಹಿ, ಆದರೆ ಅದರಿಂದ ಬರುವ ಆರೋಗ್ಯ ಅಮೃತದಂತೆ ಸಿಹಿ.
ಕೃಷ್ಣ ಇಲ್ಲಿ “ಆತ್ಮ ಬುದ್ಧಿ ಪ್ರಸಾದಜಮ್” ಎನ್ನುವ ಒಂದು ಅಪೂರ್ವ ವಿಶೇಷಣವನ್ನು ಬಳಸಿದ್ದಾನೆ. ಆತ್ಮಪ್ರಸಾದ
ಅಂದರೆ ದೇವರ ಅನುಗ್ರಹ. ಸಾತ್ವಿಕ ಸುಖ ನಾವು ಬೇಕು ಎಂದು ಬಯಸಿದಾಗ ಸಿಗುವುದಿಲ್ಲ. ಅದು ಭಗವಂತನ
ಅನುಗ್ರಹದಿಂದ ಸಿಗುವಂತಹದ್ದು. ಅದನ್ನು ಪಡೆಯಲು ನಮಗೆ ಪಾರದರ್ಶಕವಾದ ಶುದ್ಧ ಮನಸ್ಸಿರಬೇಕು. ಅದು
ಹೊರಗಿನಿಂದ ಬರುವುದಲ್ಲ ಬದಲಿಗೆ ಒಳಗಿನಿಂದ ಚಿಮ್ಮುವುದು. ಹೀಗೆ ಭಗವಂತನ ಅನುಗ್ರಹ ಮತ್ತು ಮನಸ್ಸಿನ
ಪ್ರಸನ್ನತೆಯಿದ್ದಾಗ ಒಳಗಿನ ಸ್ವರೂಪಾನಂದದ ಸುಖವನ್ನು ಅನುಭವಿಸಲು ಸಾಧ್ಯ.
Bibek Debroy (1955–2024)The Bhagavad Gita
(37)
‘...That which is initially like poison but at the end like ambrosia, based on
the tranquillity of one’s intellect focused on the atman, that is known as
sattva-type.’