18.47

श्रेयान्स्वधर्मो विगुणः परधर्मात्स्वनुष्ठितात् ।
स्वभावनियतं कर्म कुर्वन्नाप्नोति किल्बिषम् ॥
śreyānsvadharmo viguṇaḥ paradharmātsvanuṣṭhitāt |
svabhāvaniyataṃ karma kurvannāpnoti kilbiṣam ||
Sri Madhvacharya (1238–1317)Bhagavad Gita Tatparya Nirnaya
18.44–18.48
‘क्षत्रियोनब्रह्मगुणो वैश्यः कृष्यादिजीविनः। तत ऊनः शमाद्यैर्यः शुश्रूषुः शूद्र उच्यते। अधिकाश्चेद् गुणाः शूद्रे ब्राह्मणादिः स उच्यते। ब्राह्मणोऽप्यल्पगुणकः शूद्र एवेति कीर्तितः। नरोऽपि यो देवगुणो ज्ञेयो देवो नृतां गतः’ इति ‘स्वकर्मणा तमभ्यर्च्य’ इति वचनात्। क्षत्रियादिष्वपि शमाद्यनुवृत्तिर्ज्ञायते। न हि शमादिकं विना तस्याभ्यर्चनं भवति। सम्यक् शमादिभिरर्चनं ह्यभ्यर्चनम्। न च शमादीन् विना सिद्धिं विन्दति। ‘यज्ञदानतपःकर्म न त्याज्यं ‘ इत्युक्तत्वाच्च। ‘शमो मन्निष्ठता बुद्धेर्दम इन्द्रियनिग्रहः’ इति हि भागवते। न च क्षत्रियादिरपि शौचतपःक्षमादिभिर्हीनैर्भावितव्यमिति तत्तद्धर्मेषूच्यते। युक्ता ह्येतैः सर्वगुणैर्जनकतुलाधारादयः। अतो युद्धेऽपलायनमैश्वर्यं च क्षत्रियस्य विशेषगुणौ। तौ च कृष्यादयः, जीवनार्थं शुश्रूषा, याजनं जीवनार्थं प्रतिग्रहश्चेत्येत एवान्येषां परधर्माः। ‘शौर्यं तेजो धृतिर्दाक्ष्यं दानं च क्षत्रियेऽधिकाः। तद्धीना ब्राह्मणे तस्माद् वैश्ये शूद्रे ततोऽल्पकाः। अध्यापनं च शुश्रूषा जीवनार्थमृते सताम्। विप्रादिषु क्रमाज्ज्ञेयाः शूद्रस्याध्यापनं विना। तस्माच्छूद्रोऽल्पशुश्रूषुः स्वभावाज्जीवनं विना। एते नैसर्गिका भावाः स्याद् भावोऽन्योऽपि कुत्रचित्। बलाद् विरुद्धभावस्तुहेयः स्वाभाविकोऽपि यः। अनिसर्गोऽपि हि शुभो वर्धनीयः प्रयत्नतः। याजनैश्वर्यपूर्वास्तुनान्यैः कार्याः शुभा अपि। अपलायनं च शूद्राणां ब्रह्मक्षत्रार्थमिष्यते’ इति च। ‘प्रसह्य वित्ताहरणं शारीरो दण्ड एव च। अशिष्याणां शासनं च तथैवार्थ विनाशनम्। एष ईश्वरभावः स्यान्न कार्यः क्षत्रियेतरैः। सर्वे विधर्मिणः शास्याः क्षत्रियैर्यत्नतः सदा। अङ्गाद्यहानिकृद् दण्डः शिष्येषु ब्राह्मणादिभिः। कार्यो देहेऽपि शिष्यश्च स्वामिना स्वेन वाऽर्पितः। पुत्रानुजादयः सर्वे शिष्या एव निसर्गतः। गुरवश्चैव मित्राणि सखिसब्रह्मचारिणः। सम्बन्धिनश्च सर्वेऽपि तत्तद्योग्यतयाऽखिलैः। शिक्षणीयेषु भावेषु शिक्षणीयाः प्रयत्नतः। उन्मादे बन्धनाद्यैर्वा ताडनं न गुरोः क्वचित्। पापं चरन्तस्त्वन्येऽपि सर्वे दृष्टिपथं गताः। शक्तितो वारणीयाः स्युर्देशकालानुसारतः। तदुत्तमविरोद्धारः सन्त्याज्या गुरवोऽपि तु। यथाशक्त्यनुशास्यैव कालतोऽपि न चेच्छुभाः। विष्णौ परमभक्तस्तु न त्याज्यः शास्य एव च। शिक्षयंश्च गुरून् शिष्यो गुरवन्नैव शिक्षयेत्। महान्तो नानुशास्याश्च विरुद्धाचरिता अपि। यदि च स्वाधिकानां तु विरोधं नैव कुर्वते’ इत्यादि च। ‘आपत्सु विप्रः क्षात्रं तु विशां वा धर्ममाचरेत्। क्षात्रसिद्धौ न शूद्रस्तु विप्रक्षत्रिययोः क्वचित्। क्षत्रियो ब्राह्ममापत्सु तदापत्सु विशामपि। क्षत्रियो विप्रधर्मोऽपि नैवभैक्षप्रतिग्रही। वैश्य आपत्सु शौद्रं तु धर्ममेकं नचापरम्। शूद्र आपत्सु विड् धर्मा तदापत्सु च कारुकः। शूद्रस्तुवैश्यधर्माऽपि नैव वेदाक्षरो भवेत्। अत्यापदि क्षत्रियोऽपि पादशुश्रूषणं विना। शौद्रधर्मं चरन् विप्रक्षत्रियेषु न दुष्यति। येषु कर्मसु याच्यः स्यात् स्वामिनाऽपि न याचिता। शौद्राण्यपि स्वधर्मत्वे क्षत्रियस्यापदो यदि। आत्मनश्चेद्बलाधिक्यं सानुबन्धादपि प्रभो। धर्मार्थं सेवतोऽर्थार्थं विप्रधर्माधिकाद्वरः। प्रभुणा याच्यवृत्तिस्तु विशेषेणापि धर्मभाक्। बाह्वोर्बलाधिको यः स्यात् क्षत्रियो विद्ययाऽधिकः। विप्रो भागवतौ चैतौ सेशा लोकास्तयोरिमे’ इत्यादि व्यासस्मृतौ॥44-48॥
Swami Sivananda (1887–1963)Bhagavad Gita
47. Better is one’s own duty (though) destitute of merits, than the duty of another well performed. He who does the duty ordained by his own nature incurs no sin.
Sri Vishwesha Tirtharu (1931–2019)Gitasaroddhara
18.16–18.61 · ನಿಷ್ಕಾಮ ಸಕಾಮ ಕರ್ಮಗಳಲ್ಲಿರುವ ಅಂತರ
ನಿಷ್ಕಾಮ ಸಕಾಮ ಕರ್ಮಗಳಲ್ಲಿರುವ ಅಂತರ ಫಲಾಪೇಕ್ಷೆಯಿಂದ ಮಾಡುವ ಕರ್ಮವುದಾದಿಯುವುಗುವಿಗೆಸಲ್ಲಿಸುವ ಸೇವೆಯಂತಿರುತ್ತದೆ. ಕೂಲಿಯನ್ನು ವಡೆದು ದಾದಿಯುಸಲ್ಲಿಸುವಶುಶ್ರೂಷೆಗೂ ಮಗುವಿನ ಮೇಲಿನ ಪ್ರೇಮದಿಂದ ನಿರಪೇಕ್ಷೆಯಿಂದ ತಾಯಿಯು ನಡೆಸುವ ಸೇವೆಗೂ ಎಷ್ಟು ಅಂತರವಿದೆ! ಬಾಹ್ಯದೃಷ್ಟಿಗೆ ಎರಡೂ ಸಮಾನವೇ ಆಗಿ ತೋರಬಹುದು. ಆದರೆ ಅವುಗಳ ಅಂತರಂಗದಲ್ಲಿ ಅಂತರ ಇದ್ದೇ ಇದೆ. ತಾಯಿಯು ಮಾಡುವ ಸೇವೆಯಲ್ಲಿರುವ ಆಂತರಿಕ ಸತ್ತ್ವವನ್ನು ದಾದಿಯ ಕೆಲಸದಲ್ಲಿ ನಾವು ಕಾಣಲಾರೆವು. ಮಿಠಾಯಿಗಾರನು ನಾನಾ ರೀತಿಯ ತಿಂಡಿಗಳನ್ನು ಸಿದ್ದಪಡಿಸುವನು; ಆದರೆತಾಯಿಯುವನೆಯಲ್ಲಿಮಗುವಿಗಾಗಿ ಸಿದ್ಧಪಡಿಸುವ ತಿಂಡಿಯ ಬೆಲೆ ಹಾಗೂ ಪವಿತ್ರತೆಯು ಅಂಗಡಿಯ ವದಾರ್ಥಗಳಲ್ಲಿ ಬರಲಾರದು. ಅಂಗಡಿಗಾರನು ಅದನ್ನು ತಯಾರಿಸುವುದು ಫಲಾವೇಕ್ಷೆಯಿಂದ. ಅದನ್ನು ಮಾರಿ ಹೆಚ್ಚು ಹಣ ಗಳಿಸಬೇಕೆನ್ನುವುದೇ ಅವನ ಉದ್ದೇಶ. ಆದರೆ ಮಗುವಿಗಾಗಿ ಆಹಾರವನ್ನು ಸಿದ್ಧಪಡಿಸುವ ತಾಯಿಯ ಉದ್ದೇಶವು ಎಷ್ಟು ಪವಿತ್ರವಿರುತ್ತದೆ! ಅವಳಿಗೆ ತನ್ನ ಸ್ವಾರ್ಥದ ಕಲ್ಪನೆಯೇ ಇರುವು ದಿಲ್ಲ. ಅವಳದು ನಿಷ್ಕುಮ ಸೇವೆ. ನಿಷ್ಕುಮ ಭಾವನೆಯಿಂದ ಆಚರಿಸಿದ ಕಾರ್ಯವೇ ವರಿಪೂರ್ಣವೂ ಸಮಾಜಕ್ಕೆ ಹೆಚ್ಚು ಹಿತಕರವೂ ಆಗುತ್ತದೆ. ಹೋಟೆಲ್‌ ಅಡಿಗೆಗಿಂತ ಮನೆಯ ಅಡಿಗೆಯು ಶುಚಿಯೂ ಪುಷಿಕರವೂ ಆರೋಗ್ಯಕರವೂ ಎಂಬುದನ್ನು ಎಲ್ಲರೂ ಒಪ್ಪುವರು. ರೋಕದಸ್ರಿಯೂ ಸ್ವಾರ್ಥದೃಷ್ಟಿಯಿಂದ ಕರ್ಮವನ್ನು ಮಾಡುವವನಿಗೆ ಕರ್ಮಕ್ಕಿಂತಲೂ ಅದರ ಫಲದ ಕಡೆಗೆ ಹೆಚ್ಚು ಗಮನವಿರುವುದರಿಂದ ಕರ್ಮದಲ್ಲಿ ಅನೇಕ ಲೋವದೋಷಗಳೂ ಅದರಿಂದ ಸಮಾಜಕ್ಕೆ ಅನೇಕ ವಿಧದ ಹಾನಿಯೂ ಬರುವ ಸಂಭವವಿದೆ. ಫಲದ ತ್ಯಾಗವನ್ನು ಮಾಡಿದವನಿಗೆ ಕರ್ಮದಲ್ಲಿ ಮಾತ್ರ ದೃಷ್ಟಿ. ಕರ್ಮವು ಸರ್ವಾಂಗಸುಂದರವಾಗುವಂತೆ ಅವನು ನಿಷ್ಠೆಯಿ ೦ದ ಅದನ್ನು ಆಚರಿಸುತ್ತಾನೆ. ಆ ಪರಿಪೂರ್ಣವಾದ. ಕರ್ಮವೇ ಲೋಕ ಹಿತಕಾರಿಯಾಗಿರುತ್ತದೆ. ಸಾತ್ತ್ವಿಕ ಕರ್ಮದ ಈ ವಿಧಾನವನ್ನು ಗೀತೆಯು ನಿರೂಪಿಸಿ ಕರ್ಮತ್ಯಾಗ ಹಾಗೂ ಕರ್ಮಾಚರಣೆಯ ಪರಸ್ಫರ ವಿರೋಧ ವಿಚಾರಗಳ ಸುಂದರಸಮನ್ತಯವನ್ನು ಸಾಧಿಸಿದೆ. ನಿಷ್ಕುಮಕರ್ಮರೂಪವಾದ ಈ ಸಾತ್ತ್ವಿಕ ಕರ್ಮವನ್ನು ಎಲ್ಲರಿಂದಲೂ ಆಚರಿಸಲು ಆಗುವುದಿಲ್ಲ. ಆಸಕ್ತಿ ಮತ್ತು ಅಭಿಮಾನವನ್ನು ತೊರೆದವನಿಗೆ ಮಾತ್ರ ಇದು ಸಾಧ್ಯ ತಾನೇ ಕರ್ತನೆಂಬ ಅಹಂಭಾವದಿಂದಲೇ ಆಸಕ್ತಿ ಅಭಿಮಾನಗಳು ನಮ್ಮಲ್ಲಿ ಮೂಡುತ್ತವೆ. ಪರಮಾತ್ಮನೇ ಪ್ರತಿಯೊಂದು ವ್ಯಾಪಾರಕ್ಕೂ ಸ್ವತಂತ್ರ ಕರ್ತಾರನಾಗಿರುವನು. ಅವನ ಈ ಕರ್ತೃತ್ವಶಕ್ತಿಯನ್ನು ನಮ್ಮಲ್ಲಿ ಆರೋಪಿಸಿಕೊಂಡು ಅಹಂಕಾರದಿಂದ ನಾವು ವ್ಯವಶರಿಸುತ್ತಿದ್ದೇವೆ. ದ್ವೈತ ಹಾಗೂ ಭಕ್ತಿಯ ಮಾತುಗಳನ್ನು ಆಡುತ್ತಿದ್ದರೂ ನಮ್ಮ ಕ್ರಿಯೆಗಳೆಲ್ಲವೂ ಅದ್ವೈತದ ಭ್ರಾಂತಿಯಿಂದ ಕೂಡಿವೆ. ಭಗವಂತನನ್ನು ಮರೆತು ತನ್ನ ವ್ಯವಹಾರಗಳಿಗೆಲ್ಲತಾನೇಸ್ವತಂತ್ರ ಕರ್ತನೆಂದು ಭಾವಿಸಿನಡೆಯುವುದೂ ಒಂದು ಅದ್ವೈತಭ್ರಾಂತಿಯೇ, ಪರಮಾತೃನಲ್ಲಿರುವ ಸ್ವತಂತ್ರ ಶಕ್ತಿಯನ್ನು ತನ್ನಲ್ಲಿ ಆರೋಪಿಸಿಕೊಳ್ಳುವುದೂ ಒಂದು ರೀತಿಯ ಅದ್ವೈತಚಿಂತನವೇ. ಈ ಸ್ವಾತಂತ್ರ್ಯದ ದುರಭಿಮಾನದಿಂದಲೇ ನಮ್ಮ ಶರೀರ ಹಾಗೂ ಅದಕ್ಕೆ ಸಂಬಂಧಿಸಿದ ವಸ್ತುಗಳ ಮೇಲೆ ಅಧಿಕಾರ ಹಾಗೂ ಮಮತೆಯ ಬುದ್ದಿ ಹುಟ್ಟಿ ಆಸ ಆ ಮಾನಗಳಿಂದಕೆಂದ ರಾಗಿಆಸೆ. ಲಾಲಸೆಗಳಿಂದ ಕಾಯ ಗಳನ್ನು ಕೈಗೊಳ್ಳಲು ಆರಂಭಿಸುತ್ತೇವೆ. ಜಗತ್ತಿನ ಬಗ್ಗೆ ವರಮಾತ್ಮನಿಗಿರುವ ಸಾರ್ವಭೌಮತೆಯನ್ನೂ ಅವನ ಸರ್ವಸ್ಥಾತಂತ್ರ್ಯವನ್ನೂ ಮರೆತು ಜಗತ್ತನ್ನು ತಂತಮ್ಮ ಅಧಿಕಾರದ ಚಿಕ್ಕ ಚಿಕ್ಕ ವಲಯಗಳನ್ನಾಗಿ ವಿಭಜಿಸಿ ಕಚ್ಚಾಡುವ ದುಚ್ಚಿತಿಯು ಸ್ವಾತಂತ್ರ್ಯದ ಭ್ರಮೆಯಿಂದ ನಮಗೆ ಉಂಟಾಗಿದೆ. ಜಗತ್ತಿನ ಘರ್ಷಣೆ, . ಸ್ವಾರ್ಥಪ್ರವೃತ್ತಿಗಳಿಗೆ ಮೂಲವಾದ ಈ ಸ್ವಾತಂತ್ರ್ಯದ ಭಾವನೆಯನ್ನೇ ನಾವು ಕಿತ್ತೊಗೆಯಬೇಕು. ತತ್ಕೈವಂ ಸತಿ ಕರ್ತಾರಮಾತ್ಮಾನಂ ಕೇವಲಂತು ಯಃ ಒಂದು ಕಾರ್ಯಕ್ಕೆ ಅನೇಕ ಕಾರಣಗಳಿವೆ. ಪ್ರಕೃತಿ, ಜೀವ, ಪರಮಾತ್ಮ ಮುಂತಾದ ಅನೇಕೆಕಾರಣಗಳುಸೇರಿ ಒಂದು ಕಾರ್ಯದನಿಷ್ಠತ್ತಿಯಾಗುವುದು. ನಮ್ಮ ನಿಯಂತ್ರಣಕ್ಕೊಳಪಡದ ಇಂತಹ ಅನೇಕ ವಸ್ತುಗಳ ಬಲದಿಂದ ನಾವು ಕಾರ್ಯಗಳನ್ನು ಮಾಡುತ್ತಿರುವೆವು. ಇದನ್ನು ತಿಳಿಯದೆ ತಾನೊಬ್ಬನೇ ಸ್ವತಂತ್ರಕರ್ತನು, ಒಂದು ಕಾರ್ಯಸೃಶ್ಟಿಗೆ, ತನ್ನ ಒಡೆತನಕ್ಕೆ ಒಳಪಡದ ಯಾವ ವಸ್ತುವಿನ ಸಹಾಯದ ಅಗತ್ಯವೂಇಲ್ಲ. ಪ್ರಕೃತ, ಶರೀರೆಗಳಿಗೆಲ್ಲ ತಾನೇ ಒಡೆಯ ನೆಂಬ ಅಹಂಕಾರದಿಂದ ನಾವು ಕಾರ್ಯದಲ್ಲಿ ಪ್ರವರ್ತಿಸುತ್ತೇವೆ. ಜಗತ್ತಿನ ಸೃಷ್ಟಿಕಾರ್ಯದಲ್ಲಿ ಸಹಭಾಗಿಗಳಾದ ಚೇತನ ಮತ್ತು ಅಚೇತನ ವಸ್ತುಗಳನ್ನು ಅರಿತು, ಇದರಲ್ಲಿ ತನಗಿರುವ ವಾತ್ರವನ್ನು ಅರ್ಥಮಾಡಿಕೊಂಡರೆ ಇಂತಹ ಅಹಂಕಾರ, ಆಸಕ್ತಿಗಳಿಗೆ ಅವಕಾಶವು ದೊರೆಯಲಾರದು. ಪರಮಾತ್ಮನ ಸ್ವಾತಂತ್ರ್ಯ, ಸರ್ವಶಕ್ತಿಗಳನ್ನೂ ಜೀವನ ಅಲ್ಪಶಕ್ತಿಯನ್ನೂ ಪ್ರಕೃತಿ, ಶರೀರೇಂದ್ರಿ ಯಗಳ ಕಾರ್ಯವಿಸ್ತಾರವನ್ನೂ ಅರಿತವನು ಅಹಂಕಾರ, ಮಮಕಾರಗಳಿಗೆ ಒಳ ಗಾಗದೆ ನಿರ್ಲಿಪ್ರತೆಯಿಂದ ನಿಷ್ಕುಮನೆಯಿಂದಸ್ವಕರ್ತವ್ಯವನ್ನು ಮಾಡಬಲ್ಲನು. ಯಸ್ಕ ನಾಹಂಕೃತೋ ಭಾವೋ ಬುದ್ದಿ ರ್ಯಸ್ಯ ನ ಲಿಪ್ಕತೇ ಈ ನಿರಹಂಕಾರ, ನಿರ್ಲಿವತೆಗಳೇ ನಿಷ್ಕಾಮಕರ್ಮದ ಬುನಾದಿ. ಈಶ್ವರಃ ಸರ್ವಭೂತಾನಾಂ ಹೃದ್ದೇಶೇನರ್ಜುನ ತಿಷ್ಕತಿ । ಭ್ರಾಮಯನ್‌ ಸರ್ವಭೂತಾನಿ ಯಂತ್ರಾರೂಢಾನಿ ಮಾಯಯಾ ॥ ಈಶ್ವರನು ಎಲ್ಲ ಹೃದಯದೊಳಗೂ ನೆಲೆಸಿ ಈ ಜಗತ್ತನ್ನು ಕುಣಿಸುತ್ತಾನೆ. ಯಂತ್ರದ ಕುದುರೆಗಳಲ್ಲಿ ಮಕ್ಕಳನ್ನು ತಿರುಗಿಸಿ ಆಡಿಸುವಂತೆ ಪರಮಾತ್ಮನು ಈ ಜಗಚ್ಚಕ್ರ ಚಾಲನವನ್ನು ನಡೆಸಿದ್ದಾನೆ. ಸರ್ವಾಂತರ್ಯಾಮಿಯಾದ ಅವನ ಈ ಕಾರ್ಯವೈಭವವನ್ನು ತಿಳಿದವನು ಯಾವ ವಸ್ತುವಿನ ಮೇಲೂ ತನ್ನ ಒಡೆತನ ಮತ್ತು ಅಧಿಕಾರವನ್ನು ಸ್ಥಾಪಿಸಬಯಸುವುದಿಲ್ಲ. ಸರ್ವವೂ ಪರಮಾತ್ಮನ ಸೊತ್ತೆಂದು ಎಲ್ಲ ಕಾರ್ಯಗಳೂ ಅವನ ಶಕ್ತಿಯಿಂದಲೇ ನಡೆಯುವುದೆಂಬ ಅರಿವು ಮೂಡಿದಾಗ ಅಹಂಕಾರ, ಮಮತೆಗಳೆಲ್ಲ ದೂರವಾಗುವವು. ದುರ್ವಿನೀತನಾದ ಶ್ವೇತಕೇತುವು ತಂದೆಯಿಂದ ಪರಮಾತ್ಮನ ಮಹಿಮೆಯ ಬೋಧೆಯನ್ನು ಕೇಳಿ ವಿನಯಶೀಲನಾಗಿ ವರಿವರ್ತನೆಗೊಂಡನು. ವಿಜಯೋನ್ಯತ್ತರಾದ ದೇವತೆಗಳಿಗೂ ಭಗವಂತನು ಶಕ್ತಿ ಸತ್ತ್ವಗಳನ್ನು ತುಂಬದಿದ್ದರೆ, ತಮ್ಮಿಂದ ಅಲ್ಬಕಾರ್ಯವೂ ನಡೆಯದೆಂಬ ಅನುಭವ ಉಂಟಾದಾಗಲೇ ಅವರಿಗೆ ವಿದ್ಯೆಯ ದರ್ಶನವಾಯಿತು. ಆದುದರಿಂದ ತನ್ನ ಆನ್ಥಾತಂತ್ರ್ಯ ಮತ್ತುಪರಮಾತ್ಮನ ಸ್ವಾತಂತ್ರ್ಯದ ಪರಿಜ್ಞಾನವು ಕರ್ಮಯೋಗಕ್ಕೆ ಮುಖ್ಯಸಹಾಯಕವಾಗಿದೆ.
18.11–18.66 · ಶರಣಾಗತಿ
ಶರಣಾಗತಿ ಈವರೆಗಿನ ವಿಸೃತನಿರೂವಣೆಯಿಂದ ಅರ್ಜುನನ ಪ್ರಶ್ನೆ ಗಳಿಗೆಲ್ಲ ಸರಿಯಾದ ಸಮಾಧಾನವು ದೊರೆತಿದೆ. ಆತ್ಮ, ವರಮಾತೃಹಾಗೂ ಪ್ರಾಕೃತ ಜಡಪದಾರ್ಥಗಳ ಪರಸ್ಪರ ಸಂಬಂಧ ಮತ್ತು ಪ್ರವಂಚದಲ್ಲಿ ಅವುಗಳ ಕಾರ್ಯವಿಭಾಗ ಹಾಗೂ ಶಕ್ತಿಸ್ತಭಾವಗಳ ಸವಿಸ್ತಾರ ವಿವೇಚನೆಯಾಗಿದೆ. ಇದರಿಂದ ಜಗತ್ತಿನಲ್ಲಿ ವ್ಯಕ್ತಿಯ ಪಾತ್ರವನ್ನು ಸರಿಯಾ ಗಿ ಅರ್ಥ ಮಾಡಿಕೊಳ್ಳಲು ಅವಕಾಶವಾಗಿದೆ. ಪ್ರಕೃ ತಿಯ ಸಂಬಂಧವು ಅನಾದಿ ಕಾಲದಿಂದಲೂ ಜೀವರಿಗೆ ಇದೆ. ಎಷ್ಟು ಕಾಲದಿಂದ ಜೀವರಿರುವರೋ ಅಷ್ಟು ಕಾಲದಿಂದಲೂ ಪ್ರಕೃತಿಯ ಅವರಣವು ಅವರನ್ನು ನಿರ್ಬಂಧಿಸಿದೆ. ಬೇಡವೆಂದರೂ ಪ್ರಕೃತಿ ಸಂಬಂಧವಿರುವವರೆಗೆ ಅದರ ಕಾರ್ಯಪರಿಣಾಮಗಳಿಗೆ ನಾವು ಒಳಗಾಗಲೇಬೇಕು. ಈ ಪ್ರಕೃತಿಯಿಂದ ಅತೀತರಾಗುವುದೇ ನಮ್ಮ ಗುರಿಯಾಗಿದ್ದರೂ ಈ ಪ್ರಾಕೃತ ಜಗತ್ತಿನಲ್ಲಿ ಇರುವವರೆಗೆ ನಮ್ಮಲ್ಲಿ ರುವ ಸಾಧನಸಾಮಗ್ರಿಯನ್ನೂ ಪ್ರಕೃತಿಯ ಶಕ್ತ ಯನ್ನೂ ಯೋಗ್ಯ ರೀತಿಯಿಂದ ಬಳಸಿಕೊಂಡು ನಮ್ಮ ಗುರಿಯನ್ನು ಮುಟ್ಟುವ ದಾರಿಯಲ್ಲಿ ನಡೆಯಬೇಕು. ಪ್ರಕೃತಿಯ ಸಂಬಂಧದಿಂದ ಮಾನವನಿಗೆ ಈ ಸಂಸಾರದ ಕ್ಲೇಶ ತಾಪಗಳೊದಗಿವೆ ಎಂದು ಅದರ ಮೇಲಿನ ದ್ವೇಷದಿಂದ ಈ ಜಗತ್ತಿನ ಯಾವ ವ್ಯವಹಾರಗಳೂ ಬೇಡವೆಂದು ನಿಷ್ಠ್ರಿಯರಾಗಿ ಕುಳಿತುಕೊಳ್ಳುವುದರಿಂದ ನಾವು ಏನನ್ನೂ ನಾಧಿಸಿದಂತಾಗುವುದಿಲ್ಲ. ಪ್ರಕೃತಿಯ ಬಂಧನದಲ್ಲಿ ನಾವಿರುವೆವೆಂಬ ವಸ್ತುಸ್ಥಿತಿಯನ್ನು ಅರಿತು ಶಿಸ್ತು ಸಂಯಮಗಳಿಂದ ಇಲ್ಲಿ ವರ್ತಿಸಿ ಈ ಕಾರಾಗೃಹದಿಂದ ಬಿಡುಗಡೆಯಾಗ ಬೇಕೆಂಬುದನ್ನು ನಾವು ತಿಳಿದಿರಬೇಕು. ಪ್ರಕೃತಿಯನ್ನು ದ್ವೇಷಿಸಿ ಜಗತ್ತಿನ ಕರ್ತವ್ಯಗಳಲ್ಲಿ ಪಾಲುಗೊಳ್ಳದಿರುವುದರಿಂದ ನಮ್ಮ ವ್ರಕೃತಿಗೇ ನಾವು ತಡೆಯನ್ನುಂಟುಮಾಡಿಕೊಂಡಂತಾಗುವುದು. ಈ ವ್ರಕೃತಿಯ ಸಾಗರವನ್ನು ದಾಟಬೇಕೆನ್ನವುದು ನಮ್ಮ ಅದಮ್ಯ ಆಕಾಂಕ್ಷೆಯಾಗಿದ್ದರೆ ನಾವು ಪ್ರಕೃತಿಯ ಈಚೆಯ ದಡದಲ್ಲಿಯೇಕುಳಿತುಸಾಗರದಲ್ಲಿ ಇಳಿಯಬೇಕೇ ಬೇಡವೇ ಎಂದು ಡೋಲಾಯಮಾನ ಚಿತ್ತದಿಂದ ಸಂಶಯಾಸ್ಯಂದಿತ ಮನಸ್ಕರಾಗಿ ಕಾಲಹರಣಮಾಡುವುದರಿಂದಎನು ಸಾಧಿಸಿದಂತಾಗುವುದು? ದೈರ್ಯದಿಂದ ಈ ಸಂಸಾರಸಾಗರದಲ್ಲಿ ನಾವು ಧುಮುಕಲೇಬೇಕು. ಈಸಬೇಕು ಇದ್ದು ಜೈಸಬೇಕು । -ಶ್ರೀ ಪುರಂದರದಾಸರು ಈ ಪ್ರವಾಹದಲ್ಲಿ ಇಳಿದರೂ ಅದರಲ್ಲಿ ಮುಳಗದೆ "ಶಸ ಜೈಸುವ' ಕಲೆಯನ್ನು ಗೀತೆಯು ನಮಗೆ ಹೇಳಿದೆ. ಆಸಕ್ತಿ ಮೋಹಗಳ ವಾಶವನ್ನು ಬಿಗಿದುಕೊಂಡು ಈ ಜಗತ್ತಿನಲ್ಲಿ ಇಳಿದರೆ ನಾವು ಇದರಿಂದ ವಾರಾಗುವ ಸಂಭವವೇ ಇಲ್ಲ. ಅನಾಸಕ್ತಿಯಿಂದ ವಿಹಿತ ಕರ್ತವ್ಯಗಳನ್ನು ಆಚರಿಸಿಕೊಂಡಿದ್ದರೆ ಜಗತ್ತಿನ ಈ ಕರ್ಮಪ್ರವಾಹದಲ್ಲಿದ್ದರೂ ಅದರ ಯಾವ ಸೆಳೆತ, ಸುಳಿಯೊಳಗೆ ಸಿಲುಕದೆ ಸಾಗಲು ನಮಗೆ ಸಾಧ್ಯವಾಗುವುದು. ಜಗತ್ತಿನಲ್ಲಿದ್ದರೂ ಅದರ ಬಂಧವು ಬಿಗಿಯಾಗದಂತೆ ಅದರ ಸೆಳೆತದಲ್ಲಿ ಕೊಚ್ಚಿಹೋಗದಂತೆ ನಾವು ಎಷ್ಟು ಎಚ್ಚರ ವಹಿಸಿದರೂ ಸಾಲದು. ಈ ಬಂಧನದಿಂದ ಪೂರ್ಣವಾಗಿ ಬಿಡುಗಡೆ ಹೊಂದುವ ಬಗೆಯನ್ನು ಆಲೋಚಿಸಬೇಕು. ಅನಾದಿಯಾದ ಈ ಪ್ರಕೃತಿಬಂಧದ ವಿಮೋಚನೆಯು ನಮ್ಮ ಶಕ್ತಿಗೆ ಮೀರಿದುದಾಗಿದೆ. ಇದು ನಮ್ಮ ಶಕ್ತಿಗೆ ಒಳವಡುತ್ತಿದ್ದರೆ, ಇದನ್ನು ಅಡಗಿಸುವತೇಜಸ್ಸು ನಮ್ಮಲ್ಲಿ ಸ್ವಯಂಸಿದ್ಧವಾಗಿದ್ದರೆ, ಈ ಕ್ಷೇಶ-ವಿಪ್ಲವಗಳಿಗೆ ನಾವು ಈಡಾಗುತ್ತಿರಲಿಲ್ಲ. ಇದಕ್ಕಾಗಿ ಪ್ರಕೃತಿ, ಜೀವರನ್ನೆಲ್ಲ ಮೀರಿಸುವ ವಿಶ್ವದ ಮಹಾಶಕ್ತಿಯ ಆಸರೆಯನ್ನು ಪಡೆಯಬೇಕು. ತಮೇವ ಶರಣಂ ಗಚ್ಛ ಸರ್ವಭಾವೇನ ಭಾರತ । ಅವನಲ್ಲಿ ಶರಣಾಗತರಾಗದೆ, ಅವನಲ್ಲಿ ಅನನ್ಯಭಕ್ತಿಯಿಂದ ನಡೆಯದೆ ಇದ್ದರೆ, ನಮ್ಮ ಜೀವನದ ಈ ಮಹಾ ಲಕ್ಷ್ಯವನ್ನು ಮುಟ್ಟಲಾರೆವು. ಮಗುವಿನ ಕೈಯಲ್ಲಿ ಮೂಸಂಬಿಯನ್ನು ಇತ್ತಂತೆ ನಮ್ಮ ಸ್ವರೂಪಾನಂದದ ನಿಧಿಯು ನಮ್ಮ ಕೈಯಲ್ಲೇನೋ ಇದೆ. ಮೂಸಂಬಿಯ ಹೊರಸಿ್ಪೆಯನ್ನುತೆಗೆಯಲುವುಗುವಿಗೆ ಸಾಧ್ಯವಾಗುವುದೆ? ತಾಯಿಯೇ ಅದನ್ನು ಮಗುವಿಗೆ ಸುಲಿದು ನೀಡಬೇಕು. ಅದರಂತೆ ನಮ್ಮ ಸ್ವರೂಪಾನಂದದ ಹೊರಗಿನ ಪ್ರಕೃತಿಯ ಆವರಣವನ್ನು ಕಿತ್ತೊಗೆಯಲು ಸಾಧ್ಯವಾಗದೆ ನಮಗೆ ಈ ಆನಂದದ ನಿಧಿಯು ಇದ್ದರೂ ಇಲ್ಲದಂತೆ, ಭಗವಂತನೇ ತಾಯಿಯ ಮಮತೆಯಿಂದ ಈ ಹೊರ ಆವರಣವನ್ನು ಬಿಡಿಸಬೇಕು. ಅಜ್ಞಾನಾಂ ಜ್ಞಾನದೋ ವಿಷ್ಣುಃ ಜ್ಞಾನಿನಾಂ ಮೋಕ್ಷದಶ್ಚ ಸಃ। ಎ ಅನುವ್ಯಾಖ್ಯಾನ ನಮಗೆ ಜ್ಞಾನ, ಬಂಧನಿವೃತ್ತಿ ಮುಂತಾದ ಎಲ್ಲ ವಿಕಾಸ, ಬೆಳವಣಿಗೆಗಳು ಪರಮಾತ್ಮ ನಿಂದಲೇ ಆಗಬೇಕು. ನಮ್ಮ ಜೀವನದ ಎಲ್ಲ ಆಗುಹೋಗುಗಳಿಗೂ ಅವನು ಕಾರಣನು. ಅವನ ಶಕ್ತಿ ಅನುಗ್ರಹಗಳಿಲ್ಲದೆ ನಮ್ಮಿಂದ ಏನೂ ನಡೆಯದೆಂಬುದನ್ನು ಅರಿತು ಸರ್ವಾತ್ಮನಾ ಭಗವಂತನನ್ನು ಆಶ್ರಯಿಸಿಕೊಂಡು ಭಕ್ತಿಪೂರ್ಣ ಮನೋಭಾವದಿಂದ ನಮ್ಮ ಕರ್ತವ್ಯವನ್ನು ಆಚರಿಸಬೇಕು. ಭಕ್ತಿಯೇ ಕರ್ಮದ ಅಂತಚತ್ತ್ವವು. ಆ ಸತ್ತ್ವವು ಇಲ್ಲದ ಕರ್ಮಗಳು ರಾಶಿರಾಶಿಯಾಗಿದ್ದರೂ ಅವೆಲ್ಲ] ವೂನಿರ್ಜೀವ ಹಾಗೂ ನಿಷ್ಟಯೋಜನವೇ. ಸರ್ವಧರ್ಮಾನ್‌ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ | ದೈವೀ ಭಾವನೆಯಿಲ್ಲದ, ಪರಮಾತ್ಮನ ಕಡೆಗೆ ನಮ್ಮನ್ನು ಒಯ್ಯದ, ಕರ್ಮಗಳೆಲ್ಲವೂ ವ್ಯರ್ಥವಾಗಿವೆ. ಅವೆಲ್ಲವನ್ನೂ ನಾವು ಮಾಡಬೇಕು. ಸರ್ವಧರ್ಮಗಳ ತ್ಯಾಗವೆನ್ನುವುದರ ಭಾವವು ಇದೇ ಆಗಿದೆ. ಅಥವಾ ಫಲಾಪೇಕ್ಷೆಯನ್ನು ತ್ಯಜಿಸುವುದೇ ಸರ್ವಧರ್ಮಗಳ ತ್ಯಾಗವೆಂದೂ ನಾವು ಭಾವಿಸಬಹುದು. ಯಸ್ತು ಕರ್ಮಫಲತ್ಯಾಗೀ ಸ ತ್ಯಾಗೀತ್ಯಭಿಧೀಯತೇ | ಎಂಬುದಾಗಿ ಫಲವನ್ನು ತೊರೆಯುವುದೇ ಕರ್ಮದನಿಜವಾದ ತ್ಯಾಗವೆಂದು ಗೀತೆಯಲ್ಲಿಯೇ ಹಿಂದೆ ಹೇಳಿದೆ. ಕೆಲವರಂತೂ ಸರ್ವಧರ್ಮಾನ್‌ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ। ಎನ್ನುವ ಪದ್ಯವನ್ನು ತಮ್ಮ ಮತೀಯ ವಿಚಾರದ ಕಡೆಗೆ ಬಲಾತ್ಕಾರದಿಂದ ಎಳೆದು ವಿಚಿತ್ರವಾದ ಅರ್ಥವನ್ನು ಮಾಡುವರು. ಈವರೆಗೆ ಕರ್ಮಾಚರಣೆ ಹಾಗೂ ಭಕ್ತಿಯ ಬಗ್ಗೆ ಹೆಚ್ಚಿನ ಪ್ರಾಧಾನ್ಯವನ್ನು ಕೊಟ್ಟು ನೀಡಿದ ಉಪದೇಶಕ್ಕೆ ಸಂಪೂರ್ಣವಾಗಿ ವ್ಯತಿರಿಕ್ತವಾದ ಮಾತನ್ನು ಅವರು ಪರಮಾತ್ಮನಿಂದ ಹೊರಡಿಸುತ್ತಾರೆ. ಸರ್ವಕರ್ಮಗಳನ್ನು ಪೂರ್ಣವಾಗಿ ಪರಿತ್ಯಜಿಸಿ, ತಾನೇ ಪರಮಾತ್ಮನೆಂಬ ಆದ್ವೈತಭಾವದಿಂದನಡೆಯದೇಕೆನ್ನುವುದು ಅವರದೃಶ್ವಿಯಲ್ಲಿ ಈ ಶ್ಲೋಕದ ಅರ್ಥವಾಗಿದೆ. ಅದ್ವೈತಭಾವ ಮತ್ತು ಶರಣಾಗತಿ ಇವೆರಡೂ ವರಸ್ಪರ ವಿರೋಧಿ ವಿಚಾರಗಳಾಗಿವೆ. ಇದರ ಹಿಂದಿನ ಶ್ಲೋಕದಲ್ಲಿಯೇ ಶ್ರೀಕೃಷ್ಣನು ಅರ್ಜುನನನ್ನು ತನಗೆವರಮ ಇಷ್ಟನೆಂದು ಕರೆದು ಅಪನಿಗಾಗಿ ಅತ್ಯಂತ ಪ್ರಧಾನವಾದ ಸಂದೇಶವನ್ನು ಕೊಡುವುದಾಗಿ ಘೋಷಿಸಿ, ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು | ಎಂಬುದಾಗಿ ಪರಮಾತ್ಮನ ಪ್ರೀತಿಯ ಉದ್ದೇಶದಿಂದ ಮಾಡುವ ಯಜ್ಞ ರೂವವಾದ ಕರ್ಮ, ಭಕ್ತಿ ನಮಸ್ಕಾರಗಳನ್ನು ಆಚರಿಸಬೇಕೆಂದೂ ಇವು ವರಮಶ್ರೇಯಸ್ಸಿಗೆ ಸಾಧನವೆಂದೂ ಹೇಳಿ ಮುಂದಿನ ಶ್ಲೋಕದಲ್ಲಿಯೇ ಅವುಗಳಿಗೆ ಪೂರ್ಣ ವಿರೋಧಿ ಮಾತುಗಳನ್ನು ಕೃಷ್ಣನಿಂದ ನುಡಿಸುವುದು ವಿಸಂಗತಿಯ ಪರಮಾವಧಿಯಾಗುವುದು. . 'ಅದ್ವೈತಸಿದ್ದಿ'ಕಾರರಾದ ಮಧುಸೂದನ ಸರಸ್ವತಿಯವರು ಇದು ಕ್ಲಿಷ್ಟಕಲ್ಪನೆಯೆಂದು ಈ ಅರ್ಥದ ಅಸ್ವಾರಸ್ಯವನ್ನು ತೋರಿಸಿರುವರು. ಇಲ್ಲಿ ಶ್ರೀಕೃಷ್ಣನು ಭಕ್ತಿಯ ವರಮೋಚ್ಛ್ರಾ ಯದಶೆಯಾದ ಶರಣಾಗತಿಯನ್ನು ಉವದೇಶಿಸಿರುವನು. ಸರ್ವಭಾವದಿಂದ ಪರಮಾತ್ಮನನ್ನು ಆಶ್ರಯಿಸಿ ಪರಮಭಕ್ತಿಯಿಂದ ಕರ್ತವ್ಯಗಳನ್ನು ಆಚರಿಸುವುದೊಂದೇ ನಮ್ಮ ಈ ಅನರ್ಥ ವಿಪ್ಲವಗಳ ಏಕಮಾತ್ರ ಪರಿಹಾರೋಪಾಯವಾಗಿದೆ. ಈ ಶರಣಾಗತಿಯ ಭಾವವು ನಮ್ಮ ಪ್ರತಿಯೊಂದು ಕೃತಿಯಲ್ಲಿ ಅನುಸ್ಯೂತವಾಗಿರಬೇಕು. ಕುರು ಭುಂಕ್ಸ್ವಚ ಕರ್ಮ ನಿಜಂ ನಿಯತಂ ಹರಿಪಾದವಿನಮ್ರಧಿಯಾ ಸತತಮ್‌ । -ದ್ವಾದಶಸ್ತೋತ್ರ ಕರ್ಮವನ್ನು ಆಚರಿಸುವಾಗಲೂ ಅದರ ಫಲವನ್ನು ಭೋಗಿಸುವಾಗಲೂ ಹರಿಯಸ್ಥರಣೆಯು ನಿರಂತರವಾಗಿರಬೇಕು. ನಮ್ಮ ಶರೀರದ ಅಂಗಾಂಗಗಳಲ್ಲಿ ಚೇತನವು ಹರಿಯುವುದು ಅವಶ್ಯವಿರುವಂತೆ ನಮ್ಮ ಪ್ರತಿಯೊಂದು ಕರ್ಮದಲ್ಲಿ ನಿರಂತರವಾಗಿ ಹರಿಭಕ್ತಿಯು ಹರಿಯಬೇಕು. ಗೀತೆಯಲ್ಲಿ ಸರ್ವಪ್ರಧಾನವೆಂದು ಉಲ್ಲೇಖಿಸಿ, ಅಂತಿಮವಾಗಿ ಬಂದಿರುವ ಈ ಉಪದೇಶವೇ ಗೀತೆಯ ಸಾರ ಸಂದೇಶವಾಗಿದೆ.
18.46–18.78 · ಉಪಸಂಹಾರ
ಉಪಸಂಹಾರ ಸ್ವವಿಹಿತವೃತ್ತ್ಯಾಭಕ್ತ್ಯಾ ಭಗವದಾರಾಧನಮೇವ ಪರಮೋ ಧರ್ಮಃ। -ಗೀತಾ ಭಾಷ್ಯ ಎಂದು ಒಂದು ಮಾತಿನಲ್ಲಿ ಶ್ರೀಮಧ್ವಾಚಾರ್ಯರು ಗೀತೆಯ ಉಪದೇಶದ ಸಾರವನ್ನು ಅರುಹಿದ್ದಾರೆ. ""ವಿಹಿತ ವೃತ್ತಿಯಿಂದ ಭಕ್ತಿಯಿಂದ ಭಗವಂತನನ್ನು ಆರಾಧಿಸುವುದೇ ಮಾನವರ ವರಮಧರ್ಮವಾಗಿದೆ.'' ಸಂಸಾರ ವಾಶದಲ್ಲಿ ಸಿಲುಕದಿರಲು ಮತ್ತು ಪ್ರಕೃತಿಬಂಧನದಿಂದ ವೂರ್ಣ ವಿಮೋಚನೆ ಪಡೆಯಲು ಇದೇ ಜೀವನಿಗಿರುವ ಏಕಮಾತ್ರ ಉವಾಯವಾಗಿದೆ. ಪ್ರಕೃತಿಗೆ ಹೆದರಿಯಾಗಲಿ ಉದಾಸೀನತೆಯಿಂದಾಗಲಿ ಕರ್ತವ್ಯವನ್ನು ತ್ಯಜಿಸುವುದರಿಂದ ನಾವು ಯಾವ ಪುರುಷಾರ್ಥವನ್ನೂ ಪಡೆಯಲಾರೆವು. ಅದರಂತೆ ಲೌಕಿಕ ಸುಖದ ಬಯಕೆಯಿಂದ ಸ್ವಾರ್ಥವರಾಯಣರಾಗಿ ಕಾಮ್ಯ ಕೃತಿಗಳನ್ನೇ ನಡೆಸಿ ವ್ರಾಕೃತ ಸುಖವನ್ನು ಸವಿಯುತ್ತಿದ್ದರೆ ಆಪ್ರಕೃತಿಯೇನಮ್ಮನ್ನು ಕಬಳಿಸಬಹುದು. ಸ್ವಕರ್ಮಣಾ ತಮಭೃರ್ಚ್ಯ ಸಿದ್ಧಿ 0 ವಿಂದತಿ ಮಾನವಃ । ನಮ್ಮ ಕರ್ತವ್ಯಗಳನ್ನು ಹರಿವೂಜೆಯೆಂದು ಭಾವಿಸಿ, ನಿಷ್ಕುಮನೆಯಿಂದ ಅದನ್ನು ಆಚರಿಸಬೇಕು. ವಿಷಯಸುಖದ ಮೇಲಿನ ವಿರಕ್ಷಿಯಿಂದ ಈ ನಿಷ್ಕುಮನೆಯನ್ನು ನಾವು ಅಳವಡಿಸಿಕೊಳ್ಳಬಹುದು. ಹರಿಭಕ್ತಿ ಮತ್ತು ವಿಷಯ- ವಿರಕ್ತಿ ಇವೆರಡು ನಮ್ಮ ವ್ರತಿಯೊಂದು ಕರ್ತವ್ಯದಲ್ಲಿ ಯೂ ಅಡಕವಾಗಿದ್ದ ಲ್ಲಿ ನಾವು ನಿರ್ಭೀತಿಯಿಂದ ಯಾವ ವಿಪ್ಣವಕ್ಕೂ ಗುರಿಯಾಗದಂತೆ ಜಗತ್ತಿನಲ್ಲಿ ನಡೆಯಲು ಸಾಧ್ಯವಾಗುವುದು. ಸಂಸಾರವನ್ನು ಈಸಿ ಅದನ್ನು ಜಯಿಸಲು ನಮಗೆ ಏನೂ ವ್ರಯಾಸವಾಗಲಾರದು. ವ್ರಾವಂಚಿಕ ಜೀವನದಿಂದ ನಾವು ವಿಮುಖರೂ ಆಗಬಾರದು; ಪ್ರಪಂಚದಲ್ಲಿಯೇ ತಲ್ಲೀನರೂ ಆಗಬಾರದು. ಇಂದು ಈ ಎರಡು ವಿಧದ ಪ್ರವೃತ್ತಿಗಳನ್ನು ಎಲ್ಲೆಡೆಗಳಲ್ಲಿಯೂ ನೋಡುತ್ತಿರುವೆವು. ಆಲಸ್ಯ ಕರ್ತವ್ಯ ಭ್ರಷ್ಟತೆಗಳು ಒಂದೆಡೆ ವ್ಯಾಪಿಸಿದ್ದರೆ, ಸಂಪತ್ತು ಅಧಿಕಾರಗಳ ಮೇಲಿನ ಮೋಹದಿಂದ ಸ್ವಾರ್ಥಪ್ರವೃತ್ತಿಗಳಲ್ಲಿ ವೂರ್ಣವಾಗಿ ಮಗ್ಗವಾಗಿರುವ ಜನ ಇನ್ನೊಂದೆಡೆ. ಜಗತ್ತು ಮಾಯೆಯೆಂದಾಗಲಿ ಬಂಧನವೆಂದಾಗಲಿ ಭಾವಿಸಿ, ಕರ್ತವ್ಯವನ್ನು ತೊರೆಯುವುದು ಮತ್ತು ಈಶ್ವರನನ್ನು ಮರೆತು ಅಥವಾ ಅಲಕ್ಷಿಸಿ ರಾಗದ್ವೇಷಪೂರ್ಣ ಕೃತಿಗಳಲ್ಲಿಯೇ ಆಸಕ್ತರಾಗಿರುವುದು, ಈ ಎರಡು ತರಹದ ಜೀವನ ರೀತಿಗಳು ನಮ್ಮ ಮುಂದಿದ್ದು ಇವೆರಡೂ ನಮ್ಮ ಪ್ರಗತಿಗೆ ವ್ರತಿರೋಧಗಳಾಗಿವೆ. ನಮಗೆ ಜೀವನದಿಂದ ವಿಮುಖವಾದ ಧರ್ಮವೂ ಬೇಡ; ಧರ್ಮದಿಂದ ವಿಮುಖವಾದ ಜೀವನವೂ ಸಲ್ಲದು. ಧರ್ಮ, ಭಕ್ತಿ ಗಳನ್ನು ಅಳವಡಿಸಿಕೊಂಡ ಉದಾತ್ತ ಜೀವನರೀತಿಯನ್ನು ನಾವಿಂದು ರೂಪಿಸಿಕೊಳ್ಳ ಬೇಕು. ತಾಮಸ, ರಾಜನ ಪ್ರವೃತ್ತಿಗಳಿಗೆ ತಲೆಬಾಗದೆ ನಮ್ಮ ಪಾಲಿಗೆ ಬಂದ ಕರ್ತವ್ಯವನ್ನು ಪರಮಾತ್ಮನ ಭಕ್ತಿಯ ಹಿನ್ನೆಲೆಯಲ್ಲಿ ಆಚರಿಸುವುದರಿಂದಲೇ ಜೀವನದ ಮಹೋನ್ನತ ಶ್ರೇಯಸ್ಸನ್ನು ನಾವು ಪಡೆಯಬಲ್ಲೆವು. ಗೀತೆಯು ಮಾನವ ಜಗತ್ತಿಗೆ ಸಾರಿದಮಂಗಲಮಯ ಸಂದೇಶವೇಇದಾಗಿದೆ. ವರಮಾತೃನ ಮುಖದಿಂದ ಹೊರಟ ಉಪದೇಶದ ಅಮೃತಧಾರೆಯಿಂದ ಅರ್ಜುನನ ಅಂತಃಕರಣವಟಲದಲ್ಲಿ ಅಂಟಿದ್ದ ಮೋಹಮಲಗಳೆಲ್ಲ ಪೂರ್ತಿಯಾಗಿ ಕೊಚ್ಚಿಹೋದವು. ಅವನ ಹೃದಯದಲ್ಲಿ ಸುಪ್ತವಾಗಿದ್ದ ಜ್ಞಾನದ ದಿವ್ಯಾಂಕುರವು ಚಿಗುರಿ ವಿಕಸಿತವಾಯಿತು. ನಷ್ಟೋ ಮೋಹಃಸ್ಥೃತಿರ್ಲಬ್ದಾ ತ್ವತ್‌ ಪ್ರಸಾದಾನ್ಮಯಾಚ್ಯುತ | ಸ್ಥಿತೋಸಸ್ಕಿ ಗತಸಂದೇಹಃ ಕರಿಷ್ಯೇ ವಚನಂ ತವ ॥ "ನನ್ನ ಮೋಹದ ನಿರಸನವಾಗಿದೆ. ಮೋಹದಿಂದ ಉಂಟಾದ ಅಭಿಭವದಿಂದ ಕಳೆದುಹೋದಂತಿರುವ ಜ್ಞಾನದ ನಿಧಿಯನ್ನು ನಿನ್ನ ಅನುಗ್ರಹದಿಂದತಿರುಗಿ ಪಡೆದೆ. ನನ್ನ ಸಂದೇಹಸಮಸ್ಯೆಗಳನಿವಾರಣೆಯಾಗಿದೆ. ನಿನ್ನ ಆಜ್ಞೆಯಂತೆ ಕರ್ತವ್ಯರಂಗಕ್ಕೆ ಧುಮುಕುವೆ'' ಎಂದು ಅರ್ಜುನನು ಪ್ರಸನ್ನ ಹೃದಯದಿಂದ ಭಕ್ತಿ ಉತ್ಪಾಹಗಳಿಂದ ಪರಮಾತ್ಮನಲ್ಲಿ ನಿವೇದಿಸುತ್ತಾನೆ. ಅರ್ಜುನನಿಗೆ ಬಂದಿರುವ ಸಂದರ್ಭ ಸನ್ನಿವೇಶಗಳು ನಮ್ಮೆಲ್ಲರ ಜೀವನದಲ್ಲಿ ಅನುದಿನವೂ ಸಂಭವಿಸುತ್ತವೆ. ಗೀತೆಯ ಸಂದೇಶವು ಅರ್ಜುನನಿಗೆ ಮಾತ್ರ ಪರಿಸೀಮಿತವಲ್ಲ. ಜಗತ್ತಿನ ಮಾನವರೆಲ್ಲರ ಜೀವನದ ಗೊಂದಲ ವಿಪ್ಣವಗಳನ್ನು ಪರಿಹರಿಸಿ, ಉದಾತ್ತ ರೀತಿಯ ಕರ್ತವ್ಯದ ಸ್ಫೂರ್ತಿಯನ್ನು ಗೀತೆಯು ನಮಗೆ ನೀಡುತ್ತಿದೆ. ಭಾರತದ ಮಹಾ ಯುದ್ಧದಲ್ಲಿ ಒಂದೇ ರಥದಲ್ಲಿ ಅರ್ಜುನನ ಜೊತೆಗೆ ಶ್ರೀಕೃಷ್ಣನು ಸಾರಥಿಯಾಗಿದ್ದು ಹೆಜ್ಜೆ ಹೆಜ್ಜೆಗೂ ಸ್ಫೂರ್ತಿದಾತನಾಗಿ ಅವನನ್ನು ಮುನ್ನಡೆಸಿದ್ದಾನೆ. ಅರ್ಜುನನು ನರನಾಗಿದ್ದರೆ ಶ್ರೀಕೃಷ್ಣನು ನರಾಯಣನಾಗಿದ್ದಾನೆ. ಈ ನರ-ನಾರಾಯಣರ ಜೊತೆಯಿಂದಲೇ ಅಲ್ಲಿ ುಜಯ-ಭೂತಿ-ನೀತಿಗಳ ಸಮಾವೇಶವಾಗಿದೆ. ಯತ್ರ ಯೋಗೇಶ್ವರಃ ಕೃಷ್ಣೋ ಯತ್ರ ಪಾರ್ಥೋ ಧನುರ್ಧರಃ। ತತ್ರ ಶ್ರೀರ್ವಿಜಯೋ ಭೂತಿಃ ಧ್ರುವಾ ನೀತಿರ್ಮತಿರ್ಮಮ ॥ ನಮ್ಮ ಜೀವನದ ಯುದ್ಧರಂಗದಲ್ಲಿ ಯೂ ಈ ನರರಿಗೆ ನಾರಾಯಣನೇ ಎರಥಿಯಾಗಿರಬೇಕು. ನರರಿಗೆ ತಮ್ಮ ಜೀವನದಲ್ಲಿ ನಾರಾಯಣನ ನಿಯೋಗವಾದುದರಿಂದಲೇ ಇಂದು ಎಲ್ಲೆಡೆಗಳಲ್ಲಿಯೂ ಅನೀತಿ ಮತ್ತು ತರ್ಥಿಕ ಸಂಕಟದ ದುಃಖದ ದೃಶ್ಯವನ್ನು ನಾವು ನೋಡುತ್ತಿರುವೆವು. ನಮ್ಮ ಕೀವನದಲ್ಲಿನರ-ನಾರಾಯಣರ ಸಮಾಗಮವಾಗಬೇಕು. ಭಗವಂತನನ್ನು ನಾವು ಮ್ಮ ಸಾರಥಿ, ಸ್ಪೂರ್ತಿದಾತ ಹಾಗೂ ಮಾರ್ಗದರ್ಶಕನನ್ನಾಗಿ ಆರಿಸಬೇಕು. *ಗಲೇ ನಮ್ಮ ಜೀವನವು ದೈವೀಸಂವತ್ತಿನ ಆಗರವಾಗುವುದು. ೫ ಈ ಈ%
Bannanje Govindacharya (1936–2020)Bhagavad Gita Pravachana
ಶ್ರೇಯಾನ್‌ ಸ್ವಧರ್ಮಃ ವಿಗುಣಃ ಪರಧರ್ಮಾತ್‌ ಸು ಅನುಷ್ಠಿತಾತ್‌ | ಸ್ವಭಾವ ನಿಯತಂ ಕರ್ಮ ಕುರ್ವನ್‌ ನ ಅಪ್ನೋತಿ ಕಿಲ್ಬಿಷಮ್‌ -- ಚೆನ್ನಾಗಿ ಆಚರಿಸಿದ ಪರಧರ್ಮಕ್ಕಿಂತ ಆಚರಣೆಯಲ್ಲಿ ಕೊರತೆಯಿದ್ದರೂ ತನ್ನ ಸಹಜಧರ್ಮ ಮಿಗಿಲು. ತನ್ನ ಸ್ವಭಾವಕ್ಕೆ ತಕ್ಕುದಾದ ಕರ್ಮ ಮಾಡಿದರೆ ಪಾಪ ತಟ್ಟುವುದಿಲ್ಲ. ನಮ್ಮ ಸ್ವಭಾವಕ್ಕೆ ಸಹಜವಾದ ಸ್ವಧರ್ಮ ಮಾಡುವುದರಿಂದ, ಆ ಕರ್ಮದಲ್ಲಿ ದೋಷವಿದ್ದರೂ ಕೂಡಾ ಅದರಿಂದ ಪಾಪ ತಟ್ಟುವುದಿಲ್ಲ. ಇದನ್ನು ಬಿಟ್ಟು ಪರಧರ್ಮ ಮಾಡುವುದು ಯುಕ್ತವಲ್ಲ. ವೇದವ್ಯಾಸರು ಯುದ್ಧಾನಂತರ ತಾನು ಸಿಂಹಾಸನವೇರಲಾರೆ, ನನಗೇನೂ ಬೇಡ, ನಾನು ಕಾಡಿಗೆ ಹೋಗುತ್ತೇನೆ ಎಂದು ಕುಳಿತ ಧರ್ಮರಾಯನಿಗೆ- “ನೀನು ನಿನ್ನ ಸಹಜ ಧರ್ಮವನ್ನು ಬಿಟ್ಟು ಕಾಡಿಗೆ ಹೋಗುವುದು ಎಷ್ಟು ಅಸಂಗತವೋ, ಅಷ್ಟೇ ಅಸಂಗತ ನಾನು ತಪಸ್ಸನ್ನು ಬಿಟ್ಟು ಬಂದು ರಾಜ್ಯಭಾರ ಮಾಡುವುದು” ಎಂದು ಬುದ್ಧಿವಾದ ಹೇಳುತ್ತಾರೆ. ಇದರಿಂದ ನಾವು ತಿಳಿಯಬೇಕಾದದ್ದು ಏನೆಂದರೆ -ನಾವು ಪರಧರ್ಮ ಮಾಡುವುದಕ್ಕೆಂತ-ದೋಷವಿದ್ದರೂ ಸರಿ, ನಮ್ಮ ಸಹಜ ಕರ್ಮ ಮಾಡುವುದೇ ಅತ್ಯಂತ ಶ್ರೇಷ್ಠ ಧರ್ಮ.
Bibek Debroy (1955–2024)The Bhagavad Gita
(47) ‘Even when performed imperfectly, svadharma50 is superior to someone else’s dharma, performed well. Sin does not result if one’s natural action is undertaken.’