18.64

सर्वगुह्यतमं भूयः श‍ृणु मे परमं वचः ।
इष्टोऽसि मे दृढमिति ततो वक्ष्यामि ते हितम् ॥
sarvaguhyatamaṃ bhūyaḥ śṛṇu me paramaṃ vacaḥ |
iṣṭo'si me dṛḍhamiti tato vakṣyāmi te hitam ||
Sri Madhvacharya (1238–1317)Bhagavad Gita Tatparya Nirnaya
तत्त्वसारकथनं ‘द्वाविमौ पुरुषौ’ इत्यत्रैवोपसंहृतम्। तत्त्वप्रशंसार्थमेव तद्बुद्धिप्रशंसा कृता। अत्र तु साधनसारोपसंहारः - सर्वगुह्यतमिति। ‘मन्मनाः’ इत्यादेः पूर्वमेवोक्तत्वात् भूय इति। अर्थतस्त्वत्रापि विष्ण्वाधिक्यमेवोक्तं भवति॥64॥
Swami Sivananda (1887–1963)Bhagavad Gita
64. Hear thou again My supreme word, most secret of all; because thou art dearly beloved of Me, I will tell thee what is good.
Sri Vishwesha Tirtharu (1931–2019)Gitasaroddhara
18.11–18.66 · ಶರಣಾಗತಿ
ಶರಣಾಗತಿ ಈವರೆಗಿನ ವಿಸೃತನಿರೂವಣೆಯಿಂದ ಅರ್ಜುನನ ಪ್ರಶ್ನೆ ಗಳಿಗೆಲ್ಲ ಸರಿಯಾದ ಸಮಾಧಾನವು ದೊರೆತಿದೆ. ಆತ್ಮ, ವರಮಾತೃಹಾಗೂ ಪ್ರಾಕೃತ ಜಡಪದಾರ್ಥಗಳ ಪರಸ್ಪರ ಸಂಬಂಧ ಮತ್ತು ಪ್ರವಂಚದಲ್ಲಿ ಅವುಗಳ ಕಾರ್ಯವಿಭಾಗ ಹಾಗೂ ಶಕ್ತಿಸ್ತಭಾವಗಳ ಸವಿಸ್ತಾರ ವಿವೇಚನೆಯಾಗಿದೆ. ಇದರಿಂದ ಜಗತ್ತಿನಲ್ಲಿ ವ್ಯಕ್ತಿಯ ಪಾತ್ರವನ್ನು ಸರಿಯಾ ಗಿ ಅರ್ಥ ಮಾಡಿಕೊಳ್ಳಲು ಅವಕಾಶವಾಗಿದೆ. ಪ್ರಕೃ ತಿಯ ಸಂಬಂಧವು ಅನಾದಿ ಕಾಲದಿಂದಲೂ ಜೀವರಿಗೆ ಇದೆ. ಎಷ್ಟು ಕಾಲದಿಂದ ಜೀವರಿರುವರೋ ಅಷ್ಟು ಕಾಲದಿಂದಲೂ ಪ್ರಕೃತಿಯ ಅವರಣವು ಅವರನ್ನು ನಿರ್ಬಂಧಿಸಿದೆ. ಬೇಡವೆಂದರೂ ಪ್ರಕೃತಿ ಸಂಬಂಧವಿರುವವರೆಗೆ ಅದರ ಕಾರ್ಯಪರಿಣಾಮಗಳಿಗೆ ನಾವು ಒಳಗಾಗಲೇಬೇಕು. ಈ ಪ್ರಕೃತಿಯಿಂದ ಅತೀತರಾಗುವುದೇ ನಮ್ಮ ಗುರಿಯಾಗಿದ್ದರೂ ಈ ಪ್ರಾಕೃತ ಜಗತ್ತಿನಲ್ಲಿ ಇರುವವರೆಗೆ ನಮ್ಮಲ್ಲಿ ರುವ ಸಾಧನಸಾಮಗ್ರಿಯನ್ನೂ ಪ್ರಕೃತಿಯ ಶಕ್ತ ಯನ್ನೂ ಯೋಗ್ಯ ರೀತಿಯಿಂದ ಬಳಸಿಕೊಂಡು ನಮ್ಮ ಗುರಿಯನ್ನು ಮುಟ್ಟುವ ದಾರಿಯಲ್ಲಿ ನಡೆಯಬೇಕು. ಪ್ರಕೃತಿಯ ಸಂಬಂಧದಿಂದ ಮಾನವನಿಗೆ ಈ ಸಂಸಾರದ ಕ್ಲೇಶ ತಾಪಗಳೊದಗಿವೆ ಎಂದು ಅದರ ಮೇಲಿನ ದ್ವೇಷದಿಂದ ಈ ಜಗತ್ತಿನ ಯಾವ ವ್ಯವಹಾರಗಳೂ ಬೇಡವೆಂದು ನಿಷ್ಠ್ರಿಯರಾಗಿ ಕುಳಿತುಕೊಳ್ಳುವುದರಿಂದ ನಾವು ಏನನ್ನೂ ನಾಧಿಸಿದಂತಾಗುವುದಿಲ್ಲ. ಪ್ರಕೃತಿಯ ಬಂಧನದಲ್ಲಿ ನಾವಿರುವೆವೆಂಬ ವಸ್ತುಸ್ಥಿತಿಯನ್ನು ಅರಿತು ಶಿಸ್ತು ಸಂಯಮಗಳಿಂದ ಇಲ್ಲಿ ವರ್ತಿಸಿ ಈ ಕಾರಾಗೃಹದಿಂದ ಬಿಡುಗಡೆಯಾಗ ಬೇಕೆಂಬುದನ್ನು ನಾವು ತಿಳಿದಿರಬೇಕು. ಪ್ರಕೃತಿಯನ್ನು ದ್ವೇಷಿಸಿ ಜಗತ್ತಿನ ಕರ್ತವ್ಯಗಳಲ್ಲಿ ಪಾಲುಗೊಳ್ಳದಿರುವುದರಿಂದ ನಮ್ಮ ವ್ರಕೃತಿಗೇ ನಾವು ತಡೆಯನ್ನುಂಟುಮಾಡಿಕೊಂಡಂತಾಗುವುದು. ಈ ವ್ರಕೃತಿಯ ಸಾಗರವನ್ನು ದಾಟಬೇಕೆನ್ನವುದು ನಮ್ಮ ಅದಮ್ಯ ಆಕಾಂಕ್ಷೆಯಾಗಿದ್ದರೆ ನಾವು ಪ್ರಕೃತಿಯ ಈಚೆಯ ದಡದಲ್ಲಿಯೇಕುಳಿತುಸಾಗರದಲ್ಲಿ ಇಳಿಯಬೇಕೇ ಬೇಡವೇ ಎಂದು ಡೋಲಾಯಮಾನ ಚಿತ್ತದಿಂದ ಸಂಶಯಾಸ್ಯಂದಿತ ಮನಸ್ಕರಾಗಿ ಕಾಲಹರಣಮಾಡುವುದರಿಂದಎನು ಸಾಧಿಸಿದಂತಾಗುವುದು? ದೈರ್ಯದಿಂದ ಈ ಸಂಸಾರಸಾಗರದಲ್ಲಿ ನಾವು ಧುಮುಕಲೇಬೇಕು. ಈಸಬೇಕು ಇದ್ದು ಜೈಸಬೇಕು । -ಶ್ರೀ ಪುರಂದರದಾಸರು ಈ ಪ್ರವಾಹದಲ್ಲಿ ಇಳಿದರೂ ಅದರಲ್ಲಿ ಮುಳಗದೆ "ಶಸ ಜೈಸುವ' ಕಲೆಯನ್ನು ಗೀತೆಯು ನಮಗೆ ಹೇಳಿದೆ. ಆಸಕ್ತಿ ಮೋಹಗಳ ವಾಶವನ್ನು ಬಿಗಿದುಕೊಂಡು ಈ ಜಗತ್ತಿನಲ್ಲಿ ಇಳಿದರೆ ನಾವು ಇದರಿಂದ ವಾರಾಗುವ ಸಂಭವವೇ ಇಲ್ಲ. ಅನಾಸಕ್ತಿಯಿಂದ ವಿಹಿತ ಕರ್ತವ್ಯಗಳನ್ನು ಆಚರಿಸಿಕೊಂಡಿದ್ದರೆ ಜಗತ್ತಿನ ಈ ಕರ್ಮಪ್ರವಾಹದಲ್ಲಿದ್ದರೂ ಅದರ ಯಾವ ಸೆಳೆತ, ಸುಳಿಯೊಳಗೆ ಸಿಲುಕದೆ ಸಾಗಲು ನಮಗೆ ಸಾಧ್ಯವಾಗುವುದು. ಜಗತ್ತಿನಲ್ಲಿದ್ದರೂ ಅದರ ಬಂಧವು ಬಿಗಿಯಾಗದಂತೆ ಅದರ ಸೆಳೆತದಲ್ಲಿ ಕೊಚ್ಚಿಹೋಗದಂತೆ ನಾವು ಎಷ್ಟು ಎಚ್ಚರ ವಹಿಸಿದರೂ ಸಾಲದು. ಈ ಬಂಧನದಿಂದ ಪೂರ್ಣವಾಗಿ ಬಿಡುಗಡೆ ಹೊಂದುವ ಬಗೆಯನ್ನು ಆಲೋಚಿಸಬೇಕು. ಅನಾದಿಯಾದ ಈ ಪ್ರಕೃತಿಬಂಧದ ವಿಮೋಚನೆಯು ನಮ್ಮ ಶಕ್ತಿಗೆ ಮೀರಿದುದಾಗಿದೆ. ಇದು ನಮ್ಮ ಶಕ್ತಿಗೆ ಒಳವಡುತ್ತಿದ್ದರೆ, ಇದನ್ನು ಅಡಗಿಸುವತೇಜಸ್ಸು ನಮ್ಮಲ್ಲಿ ಸ್ವಯಂಸಿದ್ಧವಾಗಿದ್ದರೆ, ಈ ಕ್ಷೇಶ-ವಿಪ್ಲವಗಳಿಗೆ ನಾವು ಈಡಾಗುತ್ತಿರಲಿಲ್ಲ. ಇದಕ್ಕಾಗಿ ಪ್ರಕೃತಿ, ಜೀವರನ್ನೆಲ್ಲ ಮೀರಿಸುವ ವಿಶ್ವದ ಮಹಾಶಕ್ತಿಯ ಆಸರೆಯನ್ನು ಪಡೆಯಬೇಕು. ತಮೇವ ಶರಣಂ ಗಚ್ಛ ಸರ್ವಭಾವೇನ ಭಾರತ । ಅವನಲ್ಲಿ ಶರಣಾಗತರಾಗದೆ, ಅವನಲ್ಲಿ ಅನನ್ಯಭಕ್ತಿಯಿಂದ ನಡೆಯದೆ ಇದ್ದರೆ, ನಮ್ಮ ಜೀವನದ ಈ ಮಹಾ ಲಕ್ಷ್ಯವನ್ನು ಮುಟ್ಟಲಾರೆವು. ಮಗುವಿನ ಕೈಯಲ್ಲಿ ಮೂಸಂಬಿಯನ್ನು ಇತ್ತಂತೆ ನಮ್ಮ ಸ್ವರೂಪಾನಂದದ ನಿಧಿಯು ನಮ್ಮ ಕೈಯಲ್ಲೇನೋ ಇದೆ. ಮೂಸಂಬಿಯ ಹೊರಸಿ್ಪೆಯನ್ನುತೆಗೆಯಲುವುಗುವಿಗೆ ಸಾಧ್ಯವಾಗುವುದೆ? ತಾಯಿಯೇ ಅದನ್ನು ಮಗುವಿಗೆ ಸುಲಿದು ನೀಡಬೇಕು. ಅದರಂತೆ ನಮ್ಮ ಸ್ವರೂಪಾನಂದದ ಹೊರಗಿನ ಪ್ರಕೃತಿಯ ಆವರಣವನ್ನು ಕಿತ್ತೊಗೆಯಲು ಸಾಧ್ಯವಾಗದೆ ನಮಗೆ ಈ ಆನಂದದ ನಿಧಿಯು ಇದ್ದರೂ ಇಲ್ಲದಂತೆ, ಭಗವಂತನೇ ತಾಯಿಯ ಮಮತೆಯಿಂದ ಈ ಹೊರ ಆವರಣವನ್ನು ಬಿಡಿಸಬೇಕು. ಅಜ್ಞಾನಾಂ ಜ್ಞಾನದೋ ವಿಷ್ಣುಃ ಜ್ಞಾನಿನಾಂ ಮೋಕ್ಷದಶ್ಚ ಸಃ। ಎ ಅನುವ್ಯಾಖ್ಯಾನ ನಮಗೆ ಜ್ಞಾನ, ಬಂಧನಿವೃತ್ತಿ ಮುಂತಾದ ಎಲ್ಲ ವಿಕಾಸ, ಬೆಳವಣಿಗೆಗಳು ಪರಮಾತ್ಮ ನಿಂದಲೇ ಆಗಬೇಕು. ನಮ್ಮ ಜೀವನದ ಎಲ್ಲ ಆಗುಹೋಗುಗಳಿಗೂ ಅವನು ಕಾರಣನು. ಅವನ ಶಕ್ತಿ ಅನುಗ್ರಹಗಳಿಲ್ಲದೆ ನಮ್ಮಿಂದ ಏನೂ ನಡೆಯದೆಂಬುದನ್ನು ಅರಿತು ಸರ್ವಾತ್ಮನಾ ಭಗವಂತನನ್ನು ಆಶ್ರಯಿಸಿಕೊಂಡು ಭಕ್ತಿಪೂರ್ಣ ಮನೋಭಾವದಿಂದ ನಮ್ಮ ಕರ್ತವ್ಯವನ್ನು ಆಚರಿಸಬೇಕು. ಭಕ್ತಿಯೇ ಕರ್ಮದ ಅಂತಚತ್ತ್ವವು. ಆ ಸತ್ತ್ವವು ಇಲ್ಲದ ಕರ್ಮಗಳು ರಾಶಿರಾಶಿಯಾಗಿದ್ದರೂ ಅವೆಲ್ಲ] ವೂನಿರ್ಜೀವ ಹಾಗೂ ನಿಷ್ಟಯೋಜನವೇ. ಸರ್ವಧರ್ಮಾನ್‌ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ | ದೈವೀ ಭಾವನೆಯಿಲ್ಲದ, ಪರಮಾತ್ಮನ ಕಡೆಗೆ ನಮ್ಮನ್ನು ಒಯ್ಯದ, ಕರ್ಮಗಳೆಲ್ಲವೂ ವ್ಯರ್ಥವಾಗಿವೆ. ಅವೆಲ್ಲವನ್ನೂ ನಾವು ಮಾಡಬೇಕು. ಸರ್ವಧರ್ಮಗಳ ತ್ಯಾಗವೆನ್ನುವುದರ ಭಾವವು ಇದೇ ಆಗಿದೆ. ಅಥವಾ ಫಲಾಪೇಕ್ಷೆಯನ್ನು ತ್ಯಜಿಸುವುದೇ ಸರ್ವಧರ್ಮಗಳ ತ್ಯಾಗವೆಂದೂ ನಾವು ಭಾವಿಸಬಹುದು. ಯಸ್ತು ಕರ್ಮಫಲತ್ಯಾಗೀ ಸ ತ್ಯಾಗೀತ್ಯಭಿಧೀಯತೇ | ಎಂಬುದಾಗಿ ಫಲವನ್ನು ತೊರೆಯುವುದೇ ಕರ್ಮದನಿಜವಾದ ತ್ಯಾಗವೆಂದು ಗೀತೆಯಲ್ಲಿಯೇ ಹಿಂದೆ ಹೇಳಿದೆ. ಕೆಲವರಂತೂ ಸರ್ವಧರ್ಮಾನ್‌ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ। ಎನ್ನುವ ಪದ್ಯವನ್ನು ತಮ್ಮ ಮತೀಯ ವಿಚಾರದ ಕಡೆಗೆ ಬಲಾತ್ಕಾರದಿಂದ ಎಳೆದು ವಿಚಿತ್ರವಾದ ಅರ್ಥವನ್ನು ಮಾಡುವರು. ಈವರೆಗೆ ಕರ್ಮಾಚರಣೆ ಹಾಗೂ ಭಕ್ತಿಯ ಬಗ್ಗೆ ಹೆಚ್ಚಿನ ಪ್ರಾಧಾನ್ಯವನ್ನು ಕೊಟ್ಟು ನೀಡಿದ ಉಪದೇಶಕ್ಕೆ ಸಂಪೂರ್ಣವಾಗಿ ವ್ಯತಿರಿಕ್ತವಾದ ಮಾತನ್ನು ಅವರು ಪರಮಾತ್ಮನಿಂದ ಹೊರಡಿಸುತ್ತಾರೆ. ಸರ್ವಕರ್ಮಗಳನ್ನು ಪೂರ್ಣವಾಗಿ ಪರಿತ್ಯಜಿಸಿ, ತಾನೇ ಪರಮಾತ್ಮನೆಂಬ ಆದ್ವೈತಭಾವದಿಂದನಡೆಯದೇಕೆನ್ನುವುದು ಅವರದೃಶ್ವಿಯಲ್ಲಿ ಈ ಶ್ಲೋಕದ ಅರ್ಥವಾಗಿದೆ. ಅದ್ವೈತಭಾವ ಮತ್ತು ಶರಣಾಗತಿ ಇವೆರಡೂ ವರಸ್ಪರ ವಿರೋಧಿ ವಿಚಾರಗಳಾಗಿವೆ. ಇದರ ಹಿಂದಿನ ಶ್ಲೋಕದಲ್ಲಿಯೇ ಶ್ರೀಕೃಷ್ಣನು ಅರ್ಜುನನನ್ನು ತನಗೆವರಮ ಇಷ್ಟನೆಂದು ಕರೆದು ಅಪನಿಗಾಗಿ ಅತ್ಯಂತ ಪ್ರಧಾನವಾದ ಸಂದೇಶವನ್ನು ಕೊಡುವುದಾಗಿ ಘೋಷಿಸಿ, ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು | ಎಂಬುದಾಗಿ ಪರಮಾತ್ಮನ ಪ್ರೀತಿಯ ಉದ್ದೇಶದಿಂದ ಮಾಡುವ ಯಜ್ಞ ರೂವವಾದ ಕರ್ಮ, ಭಕ್ತಿ ನಮಸ್ಕಾರಗಳನ್ನು ಆಚರಿಸಬೇಕೆಂದೂ ಇವು ವರಮಶ್ರೇಯಸ್ಸಿಗೆ ಸಾಧನವೆಂದೂ ಹೇಳಿ ಮುಂದಿನ ಶ್ಲೋಕದಲ್ಲಿಯೇ ಅವುಗಳಿಗೆ ಪೂರ್ಣ ವಿರೋಧಿ ಮಾತುಗಳನ್ನು ಕೃಷ್ಣನಿಂದ ನುಡಿಸುವುದು ವಿಸಂಗತಿಯ ಪರಮಾವಧಿಯಾಗುವುದು. . 'ಅದ್ವೈತಸಿದ್ದಿ'ಕಾರರಾದ ಮಧುಸೂದನ ಸರಸ್ವತಿಯವರು ಇದು ಕ್ಲಿಷ್ಟಕಲ್ಪನೆಯೆಂದು ಈ ಅರ್ಥದ ಅಸ್ವಾರಸ್ಯವನ್ನು ತೋರಿಸಿರುವರು. ಇಲ್ಲಿ ಶ್ರೀಕೃಷ್ಣನು ಭಕ್ತಿಯ ವರಮೋಚ್ಛ್ರಾ ಯದಶೆಯಾದ ಶರಣಾಗತಿಯನ್ನು ಉವದೇಶಿಸಿರುವನು. ಸರ್ವಭಾವದಿಂದ ಪರಮಾತ್ಮನನ್ನು ಆಶ್ರಯಿಸಿ ಪರಮಭಕ್ತಿಯಿಂದ ಕರ್ತವ್ಯಗಳನ್ನು ಆಚರಿಸುವುದೊಂದೇ ನಮ್ಮ ಈ ಅನರ್ಥ ವಿಪ್ಲವಗಳ ಏಕಮಾತ್ರ ಪರಿಹಾರೋಪಾಯವಾಗಿದೆ. ಈ ಶರಣಾಗತಿಯ ಭಾವವು ನಮ್ಮ ಪ್ರತಿಯೊಂದು ಕೃತಿಯಲ್ಲಿ ಅನುಸ್ಯೂತವಾಗಿರಬೇಕು. ಕುರು ಭುಂಕ್ಸ್ವಚ ಕರ್ಮ ನಿಜಂ ನಿಯತಂ ಹರಿಪಾದವಿನಮ್ರಧಿಯಾ ಸತತಮ್‌ । -ದ್ವಾದಶಸ್ತೋತ್ರ ಕರ್ಮವನ್ನು ಆಚರಿಸುವಾಗಲೂ ಅದರ ಫಲವನ್ನು ಭೋಗಿಸುವಾಗಲೂ ಹರಿಯಸ್ಥರಣೆಯು ನಿರಂತರವಾಗಿರಬೇಕು. ನಮ್ಮ ಶರೀರದ ಅಂಗಾಂಗಗಳಲ್ಲಿ ಚೇತನವು ಹರಿಯುವುದು ಅವಶ್ಯವಿರುವಂತೆ ನಮ್ಮ ಪ್ರತಿಯೊಂದು ಕರ್ಮದಲ್ಲಿ ನಿರಂತರವಾಗಿ ಹರಿಭಕ್ತಿಯು ಹರಿಯಬೇಕು. ಗೀತೆಯಲ್ಲಿ ಸರ್ವಪ್ರಧಾನವೆಂದು ಉಲ್ಲೇಖಿಸಿ, ಅಂತಿಮವಾಗಿ ಬಂದಿರುವ ಈ ಉಪದೇಶವೇ ಗೀತೆಯ ಸಾರ ಸಂದೇಶವಾಗಿದೆ.
18.46–18.78 · ಉಪಸಂಹಾರ
ಉಪಸಂಹಾರ ಸ್ವವಿಹಿತವೃತ್ತ್ಯಾಭಕ್ತ್ಯಾ ಭಗವದಾರಾಧನಮೇವ ಪರಮೋ ಧರ್ಮಃ। -ಗೀತಾ ಭಾಷ್ಯ ಎಂದು ಒಂದು ಮಾತಿನಲ್ಲಿ ಶ್ರೀಮಧ್ವಾಚಾರ್ಯರು ಗೀತೆಯ ಉಪದೇಶದ ಸಾರವನ್ನು ಅರುಹಿದ್ದಾರೆ. ""ವಿಹಿತ ವೃತ್ತಿಯಿಂದ ಭಕ್ತಿಯಿಂದ ಭಗವಂತನನ್ನು ಆರಾಧಿಸುವುದೇ ಮಾನವರ ವರಮಧರ್ಮವಾಗಿದೆ.'' ಸಂಸಾರ ವಾಶದಲ್ಲಿ ಸಿಲುಕದಿರಲು ಮತ್ತು ಪ್ರಕೃತಿಬಂಧನದಿಂದ ವೂರ್ಣ ವಿಮೋಚನೆ ಪಡೆಯಲು ಇದೇ ಜೀವನಿಗಿರುವ ಏಕಮಾತ್ರ ಉವಾಯವಾಗಿದೆ. ಪ್ರಕೃತಿಗೆ ಹೆದರಿಯಾಗಲಿ ಉದಾಸೀನತೆಯಿಂದಾಗಲಿ ಕರ್ತವ್ಯವನ್ನು ತ್ಯಜಿಸುವುದರಿಂದ ನಾವು ಯಾವ ಪುರುಷಾರ್ಥವನ್ನೂ ಪಡೆಯಲಾರೆವು. ಅದರಂತೆ ಲೌಕಿಕ ಸುಖದ ಬಯಕೆಯಿಂದ ಸ್ವಾರ್ಥವರಾಯಣರಾಗಿ ಕಾಮ್ಯ ಕೃತಿಗಳನ್ನೇ ನಡೆಸಿ ವ್ರಾಕೃತ ಸುಖವನ್ನು ಸವಿಯುತ್ತಿದ್ದರೆ ಆಪ್ರಕೃತಿಯೇನಮ್ಮನ್ನು ಕಬಳಿಸಬಹುದು. ಸ್ವಕರ್ಮಣಾ ತಮಭೃರ್ಚ್ಯ ಸಿದ್ಧಿ 0 ವಿಂದತಿ ಮಾನವಃ । ನಮ್ಮ ಕರ್ತವ್ಯಗಳನ್ನು ಹರಿವೂಜೆಯೆಂದು ಭಾವಿಸಿ, ನಿಷ್ಕುಮನೆಯಿಂದ ಅದನ್ನು ಆಚರಿಸಬೇಕು. ವಿಷಯಸುಖದ ಮೇಲಿನ ವಿರಕ್ಷಿಯಿಂದ ಈ ನಿಷ್ಕುಮನೆಯನ್ನು ನಾವು ಅಳವಡಿಸಿಕೊಳ್ಳಬಹುದು. ಹರಿಭಕ್ತಿ ಮತ್ತು ವಿಷಯ- ವಿರಕ್ತಿ ಇವೆರಡು ನಮ್ಮ ವ್ರತಿಯೊಂದು ಕರ್ತವ್ಯದಲ್ಲಿ ಯೂ ಅಡಕವಾಗಿದ್ದ ಲ್ಲಿ ನಾವು ನಿರ್ಭೀತಿಯಿಂದ ಯಾವ ವಿಪ್ಣವಕ್ಕೂ ಗುರಿಯಾಗದಂತೆ ಜಗತ್ತಿನಲ್ಲಿ ನಡೆಯಲು ಸಾಧ್ಯವಾಗುವುದು. ಸಂಸಾರವನ್ನು ಈಸಿ ಅದನ್ನು ಜಯಿಸಲು ನಮಗೆ ಏನೂ ವ್ರಯಾಸವಾಗಲಾರದು. ವ್ರಾವಂಚಿಕ ಜೀವನದಿಂದ ನಾವು ವಿಮುಖರೂ ಆಗಬಾರದು; ಪ್ರಪಂಚದಲ್ಲಿಯೇ ತಲ್ಲೀನರೂ ಆಗಬಾರದು. ಇಂದು ಈ ಎರಡು ವಿಧದ ಪ್ರವೃತ್ತಿಗಳನ್ನು ಎಲ್ಲೆಡೆಗಳಲ್ಲಿಯೂ ನೋಡುತ್ತಿರುವೆವು. ಆಲಸ್ಯ ಕರ್ತವ್ಯ ಭ್ರಷ್ಟತೆಗಳು ಒಂದೆಡೆ ವ್ಯಾಪಿಸಿದ್ದರೆ, ಸಂಪತ್ತು ಅಧಿಕಾರಗಳ ಮೇಲಿನ ಮೋಹದಿಂದ ಸ್ವಾರ್ಥಪ್ರವೃತ್ತಿಗಳಲ್ಲಿ ವೂರ್ಣವಾಗಿ ಮಗ್ಗವಾಗಿರುವ ಜನ ಇನ್ನೊಂದೆಡೆ. ಜಗತ್ತು ಮಾಯೆಯೆಂದಾಗಲಿ ಬಂಧನವೆಂದಾಗಲಿ ಭಾವಿಸಿ, ಕರ್ತವ್ಯವನ್ನು ತೊರೆಯುವುದು ಮತ್ತು ಈಶ್ವರನನ್ನು ಮರೆತು ಅಥವಾ ಅಲಕ್ಷಿಸಿ ರಾಗದ್ವೇಷಪೂರ್ಣ ಕೃತಿಗಳಲ್ಲಿಯೇ ಆಸಕ್ತರಾಗಿರುವುದು, ಈ ಎರಡು ತರಹದ ಜೀವನ ರೀತಿಗಳು ನಮ್ಮ ಮುಂದಿದ್ದು ಇವೆರಡೂ ನಮ್ಮ ಪ್ರಗತಿಗೆ ವ್ರತಿರೋಧಗಳಾಗಿವೆ. ನಮಗೆ ಜೀವನದಿಂದ ವಿಮುಖವಾದ ಧರ್ಮವೂ ಬೇಡ; ಧರ್ಮದಿಂದ ವಿಮುಖವಾದ ಜೀವನವೂ ಸಲ್ಲದು. ಧರ್ಮ, ಭಕ್ತಿ ಗಳನ್ನು ಅಳವಡಿಸಿಕೊಂಡ ಉದಾತ್ತ ಜೀವನರೀತಿಯನ್ನು ನಾವಿಂದು ರೂಪಿಸಿಕೊಳ್ಳ ಬೇಕು. ತಾಮಸ, ರಾಜನ ಪ್ರವೃತ್ತಿಗಳಿಗೆ ತಲೆಬಾಗದೆ ನಮ್ಮ ಪಾಲಿಗೆ ಬಂದ ಕರ್ತವ್ಯವನ್ನು ಪರಮಾತ್ಮನ ಭಕ್ತಿಯ ಹಿನ್ನೆಲೆಯಲ್ಲಿ ಆಚರಿಸುವುದರಿಂದಲೇ ಜೀವನದ ಮಹೋನ್ನತ ಶ್ರೇಯಸ್ಸನ್ನು ನಾವು ಪಡೆಯಬಲ್ಲೆವು. ಗೀತೆಯು ಮಾನವ ಜಗತ್ತಿಗೆ ಸಾರಿದಮಂಗಲಮಯ ಸಂದೇಶವೇಇದಾಗಿದೆ. ವರಮಾತೃನ ಮುಖದಿಂದ ಹೊರಟ ಉಪದೇಶದ ಅಮೃತಧಾರೆಯಿಂದ ಅರ್ಜುನನ ಅಂತಃಕರಣವಟಲದಲ್ಲಿ ಅಂಟಿದ್ದ ಮೋಹಮಲಗಳೆಲ್ಲ ಪೂರ್ತಿಯಾಗಿ ಕೊಚ್ಚಿಹೋದವು. ಅವನ ಹೃದಯದಲ್ಲಿ ಸುಪ್ತವಾಗಿದ್ದ ಜ್ಞಾನದ ದಿವ್ಯಾಂಕುರವು ಚಿಗುರಿ ವಿಕಸಿತವಾಯಿತು. ನಷ್ಟೋ ಮೋಹಃಸ್ಥೃತಿರ್ಲಬ್ದಾ ತ್ವತ್‌ ಪ್ರಸಾದಾನ್ಮಯಾಚ್ಯುತ | ಸ್ಥಿತೋಸಸ್ಕಿ ಗತಸಂದೇಹಃ ಕರಿಷ್ಯೇ ವಚನಂ ತವ ॥ "ನನ್ನ ಮೋಹದ ನಿರಸನವಾಗಿದೆ. ಮೋಹದಿಂದ ಉಂಟಾದ ಅಭಿಭವದಿಂದ ಕಳೆದುಹೋದಂತಿರುವ ಜ್ಞಾನದ ನಿಧಿಯನ್ನು ನಿನ್ನ ಅನುಗ್ರಹದಿಂದತಿರುಗಿ ಪಡೆದೆ. ನನ್ನ ಸಂದೇಹಸಮಸ್ಯೆಗಳನಿವಾರಣೆಯಾಗಿದೆ. ನಿನ್ನ ಆಜ್ಞೆಯಂತೆ ಕರ್ತವ್ಯರಂಗಕ್ಕೆ ಧುಮುಕುವೆ'' ಎಂದು ಅರ್ಜುನನು ಪ್ರಸನ್ನ ಹೃದಯದಿಂದ ಭಕ್ತಿ ಉತ್ಪಾಹಗಳಿಂದ ಪರಮಾತ್ಮನಲ್ಲಿ ನಿವೇದಿಸುತ್ತಾನೆ. ಅರ್ಜುನನಿಗೆ ಬಂದಿರುವ ಸಂದರ್ಭ ಸನ್ನಿವೇಶಗಳು ನಮ್ಮೆಲ್ಲರ ಜೀವನದಲ್ಲಿ ಅನುದಿನವೂ ಸಂಭವಿಸುತ್ತವೆ. ಗೀತೆಯ ಸಂದೇಶವು ಅರ್ಜುನನಿಗೆ ಮಾತ್ರ ಪರಿಸೀಮಿತವಲ್ಲ. ಜಗತ್ತಿನ ಮಾನವರೆಲ್ಲರ ಜೀವನದ ಗೊಂದಲ ವಿಪ್ಣವಗಳನ್ನು ಪರಿಹರಿಸಿ, ಉದಾತ್ತ ರೀತಿಯ ಕರ್ತವ್ಯದ ಸ್ಫೂರ್ತಿಯನ್ನು ಗೀತೆಯು ನಮಗೆ ನೀಡುತ್ತಿದೆ. ಭಾರತದ ಮಹಾ ಯುದ್ಧದಲ್ಲಿ ಒಂದೇ ರಥದಲ್ಲಿ ಅರ್ಜುನನ ಜೊತೆಗೆ ಶ್ರೀಕೃಷ್ಣನು ಸಾರಥಿಯಾಗಿದ್ದು ಹೆಜ್ಜೆ ಹೆಜ್ಜೆಗೂ ಸ್ಫೂರ್ತಿದಾತನಾಗಿ ಅವನನ್ನು ಮುನ್ನಡೆಸಿದ್ದಾನೆ. ಅರ್ಜುನನು ನರನಾಗಿದ್ದರೆ ಶ್ರೀಕೃಷ್ಣನು ನರಾಯಣನಾಗಿದ್ದಾನೆ. ಈ ನರ-ನಾರಾಯಣರ ಜೊತೆಯಿಂದಲೇ ಅಲ್ಲಿ ುಜಯ-ಭೂತಿ-ನೀತಿಗಳ ಸಮಾವೇಶವಾಗಿದೆ. ಯತ್ರ ಯೋಗೇಶ್ವರಃ ಕೃಷ್ಣೋ ಯತ್ರ ಪಾರ್ಥೋ ಧನುರ್ಧರಃ। ತತ್ರ ಶ್ರೀರ್ವಿಜಯೋ ಭೂತಿಃ ಧ್ರುವಾ ನೀತಿರ್ಮತಿರ್ಮಮ ॥ ನಮ್ಮ ಜೀವನದ ಯುದ್ಧರಂಗದಲ್ಲಿ ಯೂ ಈ ನರರಿಗೆ ನಾರಾಯಣನೇ ಎರಥಿಯಾಗಿರಬೇಕು. ನರರಿಗೆ ತಮ್ಮ ಜೀವನದಲ್ಲಿ ನಾರಾಯಣನ ನಿಯೋಗವಾದುದರಿಂದಲೇ ಇಂದು ಎಲ್ಲೆಡೆಗಳಲ್ಲಿಯೂ ಅನೀತಿ ಮತ್ತು ತರ್ಥಿಕ ಸಂಕಟದ ದುಃಖದ ದೃಶ್ಯವನ್ನು ನಾವು ನೋಡುತ್ತಿರುವೆವು. ನಮ್ಮ ಕೀವನದಲ್ಲಿನರ-ನಾರಾಯಣರ ಸಮಾಗಮವಾಗಬೇಕು. ಭಗವಂತನನ್ನು ನಾವು ಮ್ಮ ಸಾರಥಿ, ಸ್ಪೂರ್ತಿದಾತ ಹಾಗೂ ಮಾರ್ಗದರ್ಶಕನನ್ನಾಗಿ ಆರಿಸಬೇಕು. *ಗಲೇ ನಮ್ಮ ಜೀವನವು ದೈವೀಸಂವತ್ತಿನ ಆಗರವಾಗುವುದು. ೫ ಈ ಈ%
Bannanje Govindacharya (1936–2020)Bhagavad Gita Pravachana
ಸರ್ವ ಗುಹ್ಯ ತಮಮ್‌ ಭೂಯಃ ಶೃಣು ಮೇ ಪರಮಂ ವಚಃ | ಇಷ್ಟಃ ಅಸಿ ಮೇ ದೃಢಮ್‌ ಇತಿ ತತಃ ವಕ್ಷ್ಯಾಮಿ ತೇ ಹಿತಮ್‌ - ಎಲ್ಲಕ್ಕಿಂತ ಹೆಚ್ಚು ಬಚ್ಚಿಡಬೇಕಾದ ನನ್ನೀ ಹಿರಿಯ ಮಾತನ್ನು ಇನ್ನೊಮ್ಮೆ ಆಲಿಸು. ನೀನು ನನಗೆ ತುಂಬಾ ಮೆಚ್ಚಿನವನೆಂದು, ಅದಕ್ಕಾಗಿ ನಿನಗೆ ಹಿತ-ವಾದವನ್ನು ಹೇಳುತ್ತಿದ್ದೇನೆ: ಹಿಂದೆ ಹೇಳಿದ ಸಾಧನೆಯ ಸಾರವನ್ನು, ನಾವು ತಿಳಿದುಕೊಳ್ಳಬೇಕಾದ ವಿಷಯಗಳಲ್ಲಿ ಅತ್ಯಂತ ರಹಸ್ಯವಾದ ಸಾಧನೆಯ ಗುಟ್ಟನ್ನು ಸಾತ್ವಿಕನಾದ ನಿನಗೆ ಇನ್ನೊಮ್ಮೆ ಹೇಳುತ್ತಿದ್ದೇನೆ; ನನ್ನ ಭಕ್ತನಾದ ನೀನು ಜ್ಞಾನಿ. ಜ್ಞಾನಿಗಳು ನನಗೆ ಅಚ್ಚುಮೆಚ್ಚು, ಅದಕ್ಕಾಗಿ ಅದನ್ನು ಮತ್ತೊಮ್ಮೆ ಹೇಳುತ್ತಿದ್ದೇನೆ- ಕೇಳು:
Bibek Debroy (1955–2024)The Bhagavad Gita
(64) ‘Listen yet again to my supreme words, the most secret of all secrets. You are my dearly beloved. Therefore, I am telling you what is good for you.’