इदं ते नातपस्काय नाभक्ताय कदाचन ।
न चाशुश्रूषवे वाच्यं न च मां योऽभ्यसूयति ॥
idaṃ te nātapaskāya nābhaktāya kadācana |
na cāśuśrūṣave vācyaṃ na ca māṃ yo'bhyasūyati ||
Sri Madhvacharya (1238–1317)Bhagavad Gita Tatparya Nirnaya
अतपस्कायैव न वाच्यम्। अशुश्रूषवे पुनश्चेति दोषाधिक्यमश्रूषोर्दर्शयितुं च शब्दः। एवमभक्ताय
कदाऽपि न वाच्यम्। कदाचिदल्पतपसोऽल्पशुश्रूषोरपि भक्त्याधिक्ये वाच्यं भवतीति कदाचनेति
विशेषः। अभक्ताच्च न वाच्यमसूयोरिति तत्रापि च शब्दः।
‘समुच्चये तथाऽऽधिक्ये न्यूनत्वे चः प्रयुज्यते’ इति शब्दनिर्णये।
‘अभक्तादपि पापः स्यादसूयुर्दोषदृग् यतः’ इति च पाद्मे॥67॥
Swami Sivananda (1887–1963)Bhagavad Gita
67. This is never to be spoken by thee to one who is devoid of austerities, to one who is not
devoted, nor to one who does not render service, nor who does not desire to listen, nor to one who
cavils at Me.
Sri Vishwesha Tirtharu (1931–2019)Gitasaroddhara
18.46–18.78 · ಉಪಸಂಹಾರ
ಉಪಸಂಹಾರ
ಸ್ವವಿಹಿತವೃತ್ತ್ಯಾಭಕ್ತ್ಯಾ
ಭಗವದಾರಾಧನಮೇವ ಪರಮೋ ಧರ್ಮಃ।
-ಗೀತಾ ಭಾಷ್ಯ
ಎಂದು ಒಂದು ಮಾತಿನಲ್ಲಿ ಶ್ರೀಮಧ್ವಾಚಾರ್ಯರು ಗೀತೆಯ ಉಪದೇಶದ
ಸಾರವನ್ನು ಅರುಹಿದ್ದಾರೆ. ""ವಿಹಿತ ವೃತ್ತಿಯಿಂದ ಭಕ್ತಿಯಿಂದ ಭಗವಂತನನ್ನು
ಆರಾಧಿಸುವುದೇ ಮಾನವರ ವರಮಧರ್ಮವಾಗಿದೆ.'' ಸಂಸಾರ ವಾಶದಲ್ಲಿ
ಸಿಲುಕದಿರಲು ಮತ್ತು ಪ್ರಕೃತಿಬಂಧನದಿಂದ ವೂರ್ಣ ವಿಮೋಚನೆ ಪಡೆಯಲು
ಇದೇ ಜೀವನಿಗಿರುವ ಏಕಮಾತ್ರ ಉವಾಯವಾಗಿದೆ. ಪ್ರಕೃತಿಗೆ ಹೆದರಿಯಾಗಲಿ
ಉದಾಸೀನತೆಯಿಂದಾಗಲಿ ಕರ್ತವ್ಯವನ್ನು ತ್ಯಜಿಸುವುದರಿಂದ ನಾವು ಯಾವ
ಪುರುಷಾರ್ಥವನ್ನೂ ಪಡೆಯಲಾರೆವು. ಅದರಂತೆ ಲೌಕಿಕ ಸುಖದ
ಬಯಕೆಯಿಂದ ಸ್ವಾರ್ಥವರಾಯಣರಾಗಿ ಕಾಮ್ಯ ಕೃತಿಗಳನ್ನೇ ನಡೆಸಿ ವ್ರಾಕೃತ
ಸುಖವನ್ನು ಸವಿಯುತ್ತಿದ್ದರೆ ಆಪ್ರಕೃತಿಯೇನಮ್ಮನ್ನು ಕಬಳಿಸಬಹುದು.
ಸ್ವಕರ್ಮಣಾ ತಮಭೃರ್ಚ್ಯ
ಸಿದ್ಧಿ 0 ವಿಂದತಿ ಮಾನವಃ ।
ನಮ್ಮ ಕರ್ತವ್ಯಗಳನ್ನು ಹರಿವೂಜೆಯೆಂದು ಭಾವಿಸಿ, ನಿಷ್ಕುಮನೆಯಿಂದ
ಅದನ್ನು ಆಚರಿಸಬೇಕು. ವಿಷಯಸುಖದ ಮೇಲಿನ ವಿರಕ್ಷಿಯಿಂದ ಈ
ನಿಷ್ಕುಮನೆಯನ್ನು ನಾವು ಅಳವಡಿಸಿಕೊಳ್ಳಬಹುದು. ಹರಿಭಕ್ತಿ ಮತ್ತು ವಿಷಯ-
ವಿರಕ್ತಿ ಇವೆರಡು ನಮ್ಮ ವ್ರತಿಯೊಂದು ಕರ್ತವ್ಯದಲ್ಲಿ ಯೂ ಅಡಕವಾಗಿದ್ದ ಲ್ಲಿ
ನಾವು ನಿರ್ಭೀತಿಯಿಂದ ಯಾವ ವಿಪ್ಣವಕ್ಕೂ ಗುರಿಯಾಗದಂತೆ ಜಗತ್ತಿನಲ್ಲಿ
ನಡೆಯಲು ಸಾಧ್ಯವಾಗುವುದು. ಸಂಸಾರವನ್ನು ಈಸಿ ಅದನ್ನು ಜಯಿಸಲು ನಮಗೆ
ಏನೂ ವ್ರಯಾಸವಾಗಲಾರದು. ವ್ರಾವಂಚಿಕ ಜೀವನದಿಂದ ನಾವು ವಿಮುಖರೂ
ಆಗಬಾರದು; ಪ್ರಪಂಚದಲ್ಲಿಯೇ ತಲ್ಲೀನರೂ ಆಗಬಾರದು. ಇಂದು ಈ
ಎರಡು ವಿಧದ ಪ್ರವೃತ್ತಿಗಳನ್ನು ಎಲ್ಲೆಡೆಗಳಲ್ಲಿಯೂ ನೋಡುತ್ತಿರುವೆವು. ಆಲಸ್ಯ
ಕರ್ತವ್ಯ ಭ್ರಷ್ಟತೆಗಳು ಒಂದೆಡೆ ವ್ಯಾಪಿಸಿದ್ದರೆ, ಸಂಪತ್ತು ಅಧಿಕಾರಗಳ ಮೇಲಿನ
ಮೋಹದಿಂದ ಸ್ವಾರ್ಥಪ್ರವೃತ್ತಿಗಳಲ್ಲಿ ವೂರ್ಣವಾಗಿ ಮಗ್ಗವಾಗಿರುವ ಜನ
ಇನ್ನೊಂದೆಡೆ. ಜಗತ್ತು ಮಾಯೆಯೆಂದಾಗಲಿ ಬಂಧನವೆಂದಾಗಲಿ ಭಾವಿಸಿ,
ಕರ್ತವ್ಯವನ್ನು ತೊರೆಯುವುದು ಮತ್ತು ಈಶ್ವರನನ್ನು ಮರೆತು ಅಥವಾ ಅಲಕ್ಷಿಸಿ
ರಾಗದ್ವೇಷಪೂರ್ಣ ಕೃತಿಗಳಲ್ಲಿಯೇ ಆಸಕ್ತರಾಗಿರುವುದು, ಈ ಎರಡು ತರಹದ
ಜೀವನ ರೀತಿಗಳು ನಮ್ಮ ಮುಂದಿದ್ದು ಇವೆರಡೂ ನಮ್ಮ ಪ್ರಗತಿಗೆ
ವ್ರತಿರೋಧಗಳಾಗಿವೆ. ನಮಗೆ ಜೀವನದಿಂದ ವಿಮುಖವಾದ ಧರ್ಮವೂ ಬೇಡ;
ಧರ್ಮದಿಂದ ವಿಮುಖವಾದ ಜೀವನವೂ ಸಲ್ಲದು. ಧರ್ಮ, ಭಕ್ತಿ ಗಳನ್ನು
ಅಳವಡಿಸಿಕೊಂಡ ಉದಾತ್ತ ಜೀವನರೀತಿಯನ್ನು ನಾವಿಂದು ರೂಪಿಸಿಕೊಳ್ಳ
ಬೇಕು. ತಾಮಸ, ರಾಜನ ಪ್ರವೃತ್ತಿಗಳಿಗೆ ತಲೆಬಾಗದೆ ನಮ್ಮ ಪಾಲಿಗೆ ಬಂದ
ಕರ್ತವ್ಯವನ್ನು ಪರಮಾತ್ಮನ ಭಕ್ತಿಯ ಹಿನ್ನೆಲೆಯಲ್ಲಿ ಆಚರಿಸುವುದರಿಂದಲೇ
ಜೀವನದ ಮಹೋನ್ನತ ಶ್ರೇಯಸ್ಸನ್ನು ನಾವು ಪಡೆಯಬಲ್ಲೆವು. ಗೀತೆಯು
ಮಾನವ ಜಗತ್ತಿಗೆ ಸಾರಿದಮಂಗಲಮಯ ಸಂದೇಶವೇಇದಾಗಿದೆ.
ವರಮಾತೃನ ಮುಖದಿಂದ ಹೊರಟ ಉಪದೇಶದ ಅಮೃತಧಾರೆಯಿಂದ
ಅರ್ಜುನನ ಅಂತಃಕರಣವಟಲದಲ್ಲಿ ಅಂಟಿದ್ದ ಮೋಹಮಲಗಳೆಲ್ಲ
ಪೂರ್ತಿಯಾಗಿ ಕೊಚ್ಚಿಹೋದವು. ಅವನ ಹೃದಯದಲ್ಲಿ ಸುಪ್ತವಾಗಿದ್ದ ಜ್ಞಾನದ
ದಿವ್ಯಾಂಕುರವು ಚಿಗುರಿ ವಿಕಸಿತವಾಯಿತು.
ನಷ್ಟೋ ಮೋಹಃಸ್ಥೃತಿರ್ಲಬ್ದಾ
ತ್ವತ್ ಪ್ರಸಾದಾನ್ಮಯಾಚ್ಯುತ |
ಸ್ಥಿತೋಸಸ್ಕಿ ಗತಸಂದೇಹಃ
ಕರಿಷ್ಯೇ ವಚನಂ ತವ ॥
"ನನ್ನ ಮೋಹದ ನಿರಸನವಾಗಿದೆ. ಮೋಹದಿಂದ ಉಂಟಾದ
ಅಭಿಭವದಿಂದ ಕಳೆದುಹೋದಂತಿರುವ ಜ್ಞಾನದ ನಿಧಿಯನ್ನು ನಿನ್ನ
ಅನುಗ್ರಹದಿಂದತಿರುಗಿ ಪಡೆದೆ. ನನ್ನ ಸಂದೇಹಸಮಸ್ಯೆಗಳನಿವಾರಣೆಯಾಗಿದೆ.
ನಿನ್ನ ಆಜ್ಞೆಯಂತೆ ಕರ್ತವ್ಯರಂಗಕ್ಕೆ ಧುಮುಕುವೆ'' ಎಂದು ಅರ್ಜುನನು ಪ್ರಸನ್ನ
ಹೃದಯದಿಂದ ಭಕ್ತಿ ಉತ್ಪಾಹಗಳಿಂದ ಪರಮಾತ್ಮನಲ್ಲಿ ನಿವೇದಿಸುತ್ತಾನೆ.
ಅರ್ಜುನನಿಗೆ ಬಂದಿರುವ ಸಂದರ್ಭ ಸನ್ನಿವೇಶಗಳು ನಮ್ಮೆಲ್ಲರ ಜೀವನದಲ್ಲಿ
ಅನುದಿನವೂ ಸಂಭವಿಸುತ್ತವೆ. ಗೀತೆಯ ಸಂದೇಶವು ಅರ್ಜುನನಿಗೆ ಮಾತ್ರ
ಪರಿಸೀಮಿತವಲ್ಲ. ಜಗತ್ತಿನ ಮಾನವರೆಲ್ಲರ ಜೀವನದ ಗೊಂದಲ ವಿಪ್ಣವಗಳನ್ನು
ಪರಿಹರಿಸಿ, ಉದಾತ್ತ ರೀತಿಯ ಕರ್ತವ್ಯದ ಸ್ಫೂರ್ತಿಯನ್ನು ಗೀತೆಯು ನಮಗೆ
ನೀಡುತ್ತಿದೆ. ಭಾರತದ ಮಹಾ ಯುದ್ಧದಲ್ಲಿ ಒಂದೇ ರಥದಲ್ಲಿ ಅರ್ಜುನನ
ಜೊತೆಗೆ ಶ್ರೀಕೃಷ್ಣನು ಸಾರಥಿಯಾಗಿದ್ದು ಹೆಜ್ಜೆ ಹೆಜ್ಜೆಗೂ ಸ್ಫೂರ್ತಿದಾತನಾಗಿ
ಅವನನ್ನು ಮುನ್ನಡೆಸಿದ್ದಾನೆ. ಅರ್ಜುನನು ನರನಾಗಿದ್ದರೆ ಶ್ರೀಕೃಷ್ಣನು
ನರಾಯಣನಾಗಿದ್ದಾನೆ. ಈ ನರ-ನಾರಾಯಣರ ಜೊತೆಯಿಂದಲೇ ಅಲ್ಲಿ
ುಜಯ-ಭೂತಿ-ನೀತಿಗಳ ಸಮಾವೇಶವಾಗಿದೆ.
ಯತ್ರ ಯೋಗೇಶ್ವರಃ ಕೃಷ್ಣೋ
ಯತ್ರ ಪಾರ್ಥೋ ಧನುರ್ಧರಃ।
ತತ್ರ ಶ್ರೀರ್ವಿಜಯೋ ಭೂತಿಃ
ಧ್ರುವಾ ನೀತಿರ್ಮತಿರ್ಮಮ ॥
ನಮ್ಮ ಜೀವನದ ಯುದ್ಧರಂಗದಲ್ಲಿ ಯೂ ಈ ನರರಿಗೆ ನಾರಾಯಣನೇ
ಎರಥಿಯಾಗಿರಬೇಕು. ನರರಿಗೆ ತಮ್ಮ ಜೀವನದಲ್ಲಿ ನಾರಾಯಣನ
ನಿಯೋಗವಾದುದರಿಂದಲೇ ಇಂದು ಎಲ್ಲೆಡೆಗಳಲ್ಲಿಯೂ ಅನೀತಿ ಮತ್ತು
ತರ್ಥಿಕ ಸಂಕಟದ ದುಃಖದ ದೃಶ್ಯವನ್ನು ನಾವು ನೋಡುತ್ತಿರುವೆವು. ನಮ್ಮ
ಕೀವನದಲ್ಲಿನರ-ನಾರಾಯಣರ ಸಮಾಗಮವಾಗಬೇಕು. ಭಗವಂತನನ್ನು ನಾವು
ಮ್ಮ ಸಾರಥಿ, ಸ್ಪೂರ್ತಿದಾತ ಹಾಗೂ ಮಾರ್ಗದರ್ಶಕನನ್ನಾಗಿ ಆರಿಸಬೇಕು.
*ಗಲೇ ನಮ್ಮ ಜೀವನವು ದೈವೀಸಂವತ್ತಿನ ಆಗರವಾಗುವುದು.
೫ ಈ ಈ%
Bannanje Govindacharya (1936–2020)Bhagavad Gita Pravachana
ಇದಂ ತೇ ನ ಅತಪಸ್ಮಾಯ ನ ಅಭಕ್ತಾಯ ಕದಾಚನ |
ನಚ ಅಶುಶ್ರೂಷವೇ ವಾಚ್ಯಂ ನಚ ಮಾಂ ಯಃ ಅಭ್ಯಸೂಯತಿ - ಇದನ್ನು ನೇಮದ ನಿಷ್ಠೆ ಇರದವರಿಗೆ
ಹೇಳಬೇಡ. ಭಕ್ತಿ ಇರದವನಿಗೆ ಎಂದೂ ಹೇಳಬೇಡ. ಕೇಳುವಾಸೆ ಇರದವನಿಗೂ ಹೇಳಬೇಡ. ನನ್ನ ಬಗೆಗೆ ಕಿಚ್ಚು
ಪಡುವವನಿಗಂತೂ ಹೇಳಲೇಬೇಡ.
ಇಲ್ಲಿ ಕೃಷ್ಣ ಜ್ಞಾನದ ಪರಂಪರೆಯನ್ನು ಹೇಗೆ ರಕ್ಷಿಸಬೇಕು ಎನ್ನುವುದನ್ನು ವಿವರಿಸಿದ್ದಾನೆ. ಯಾರಿಗೆ ಆಳವಾದ
ಚಿಂತನಶೀಲತೆ ಇಲ್ಲವೋ ಅವರಿಗೆ ಇದನ್ನು ಹೇಳಬೇಡ; ಚಿಂತನಶೀಲತೆ ಇದ್ದು ಕೇಳುವ ಆಸಕ್ತೆ ಇಲ್ಲದವರಿಗೆ
ಇದನ್ನು ಹೇಳಬೇಡ; ಆಸಕ್ತಿ ಇದೆ ಆದರೆ ಭಕ್ತಿ/ಪ್ರೀತಿ ಇಲ್ಲ-ಅಂತವರಿಗೆ ಇದನ್ನು ಹೇಳಬೇಡ; ಎಲ್ಲಕ್ಕಿಂತ
ಮಿಗಿಲಾಗಿ ಭಗವಂತನ ಬಗ್ಗೆ ಅಸಹನೆ,ಅಸೂಯೆ, ದ್ವೇಷವುಳ್ಳವರಿಗೆ ಸರ್ವತಾ ಹೇಳಲೇಬೇಡ. ಎಂದೂ
ಅಧ್ಯಾತ್ಮವನ್ನು ಬೀದಿಯ ಸೊತ್ತಾಗಿಸಬೇಡ.
ಒಂದು ಕಾಲದಲ್ಲಿ ವೇದಾಂತವನ್ನು ಸಾರ್ವಜನಿಕವಾಗಿ ಬಿಚ್ಚಿಡಬಾರದು, ಅದನ್ನು ರಹಸ್ಯವಾಗಿಡಬೇಕು ಎನ್ನುವ
ಅಭಿಪ್ರಾಯ ಹೆಚ್ಚಾಗಿ ಬೆಳೆಯಿತು. ಇದರ ಪರಿಣಾಮ ಕಾಲಕ್ರಮೇಣ ಮುಚ್ಚಿಟ್ಟ ಜ್ಞಾನವನ್ನು ತೆರೆಯುವವರೇ
ಇಲ್ಲವಾಯಿತು. ಇಂದು ನಮ್ಮಲ್ಲಿ ಹೆಚ್ಚಿನವರು ಆಧ್ಯಾತ್ಮಿಕ ಗ್ರಂಥಗಳಿಗೆ ಆರತಿ ಮಾಡಿ ಕುಂಕುಮ ಹಚ್ಚೆ
ಮುಚ್ಚಿಡುವವರೇ ಹೆಚ್ಚಾಗಿದ್ದಾರೆ. ಈ ಕಾರಣದಿಂದ ನಾವು ಮುಚ್ಚಿಟ್ಟ ಈ ಅಮೂಲ್ಯ ಜ್ಞಾನವನ್ನು ತೆರೆದು
ಆಸಕ್ತಿವುಳ್ಳವರಿಗೆ ಕೊಡುವ ಕೆಲಸ ಮಾಡಬೇಕಾಗಿದೆ.
ಭಗವದ್ಗೀತೆಯ ಈ ಅಮೂಲ್ಯ ಸಂದೇಶದ ಅಧ್ಯಯನ ಮಾಡಿ ಮನನ ಮಾಡುವುದರಿಂದ ಸಿಗುವ ಫಲಶ್ರುತಿ
ಏನು ಎನ್ನುವುದನ್ನು ಕೃಷ್ಣ ಮುಂದಿನ ನಾಲ್ಕು ಶ್ಲೋಕಗಳಲ್ಲಿ ವಿವರಿಸಿದ್ದಾನೆ. ಭಗವದ್ಗೀತೆಯ ನಿಜವಾದ ಫಲ
ಮನುಷ್ಯನ ಪುರುಷಾರ್ಥದಲ್ಲಿ ಕೊನೆಯದಾದ ಮೋಕ್ಷ. ಅಧ್ಯಾತ್ಮ ವಿದ್ಯೆಯನ್ನು ಹೇಳುವ ಸಮಸ್ತ ಶಾಸ್ತ್ರಗಳ ಸಾರ
ಭಗವದ್ಗೀತೆ. ಭಗವಂತನ ಸ್ವರೂಪವನ್ನು ತಿಳಿದು ಭಗವಂತನ ಲೋಕ ಸೇರಲು ಇದೊಂದೇ ಗ್ರಂಥ ಸಾಕು.
ಸಮಸ್ತ ಶಾಸ್ತ್ರಗಳಲ್ಲಿನ ಸಮಸ್ತ ಸಾರವನ್ನು, ಸಮಸ್ತ ರಹಸ್ಯವನ್ನು ನಾವು ಈ ಕೃಷ್ಣಾರ್ಜುನ ಸಂವಾದದಲ್ಲಿ
ಕಾಣಬಹುದು. ಈ ರೀತಿ ಎಲ್ಲಾ ಶಾಸ್ತ್ರಗಳ ಪೂರ್ಣ ಸಾರಸಂಗ್ರಹ ಅಡಕವಾಗಿರುವ ಗ್ರಂಥ ಇನ್ನೊಂದಿಲ್ಲ.
ಇಂತಹ ಗೀತೆಯನ್ನು ನಾವು ಗುರು ಮುಖೇನ ತಿಳಿಯುವುದರಿಂದ; ಮನನ ಮಾಡುವುದರಿಂದ; ಇಲ್ಲಿ ಹೇಳಿರುವ
ಸಾಧನಾ ಉಪಾಯವನ್ನು ಜೀವನದಲ್ಲಿ ಅನುಸರಿಸುವುದರಿಂದ; ನಾವು ತಿಳಿದ ಜ್ಞಾನವನ್ನು ಆಸಕ್ತರಿಗೆ
ತಿಳಿಸುವುದರಿಂದ-ನಾವು ಭಗವಂತನ ಲೋಕವನ್ನು(ಮೋಕ್ಷವನ್ನು) ಸೇರಬಹುದು.
Bibek Debroy (1955–2024)The Bhagavad Gita
(67)
‘You should not state this70 to those who do not meditate,71 or are devoid of
devotion or do not wish to hear. Nor to those who show me disrespect.’