18.69

न च तस्मान्मनुष्येषु कश्चिन्मे प्रियकृत्तमः ।
भविता न च मे तस्मादन्यः प्रियतरो भुवि ॥
na ca tasmānmanuṣyeṣu kaścinme priyakṛttamaḥ |
bhavitā na ca me tasmādanyaḥ priyataro bhuvi ||
Swami Sivananda (1887–1963)Bhagavad Gita
69. Nor is there any among men who does dearer service to Me, nor shall there be another on earth dearer to Me than he. COMMENTARY: He who hands down this Gita to My devotees does immense service to Me. He is extremely dear to Me. In the present generation, there will be none dearer to Me in the world, nor shall there be in the future also.
Sri Vishwesha Tirtharu (1931–2019)Gitasaroddhara
18.46–18.78 · ಉಪಸಂಹಾರ
ಉಪಸಂಹಾರ ಸ್ವವಿಹಿತವೃತ್ತ್ಯಾಭಕ್ತ್ಯಾ ಭಗವದಾರಾಧನಮೇವ ಪರಮೋ ಧರ್ಮಃ। -ಗೀತಾ ಭಾಷ್ಯ ಎಂದು ಒಂದು ಮಾತಿನಲ್ಲಿ ಶ್ರೀಮಧ್ವಾಚಾರ್ಯರು ಗೀತೆಯ ಉಪದೇಶದ ಸಾರವನ್ನು ಅರುಹಿದ್ದಾರೆ. ""ವಿಹಿತ ವೃತ್ತಿಯಿಂದ ಭಕ್ತಿಯಿಂದ ಭಗವಂತನನ್ನು ಆರಾಧಿಸುವುದೇ ಮಾನವರ ವರಮಧರ್ಮವಾಗಿದೆ.'' ಸಂಸಾರ ವಾಶದಲ್ಲಿ ಸಿಲುಕದಿರಲು ಮತ್ತು ಪ್ರಕೃತಿಬಂಧನದಿಂದ ವೂರ್ಣ ವಿಮೋಚನೆ ಪಡೆಯಲು ಇದೇ ಜೀವನಿಗಿರುವ ಏಕಮಾತ್ರ ಉವಾಯವಾಗಿದೆ. ಪ್ರಕೃತಿಗೆ ಹೆದರಿಯಾಗಲಿ ಉದಾಸೀನತೆಯಿಂದಾಗಲಿ ಕರ್ತವ್ಯವನ್ನು ತ್ಯಜಿಸುವುದರಿಂದ ನಾವು ಯಾವ ಪುರುಷಾರ್ಥವನ್ನೂ ಪಡೆಯಲಾರೆವು. ಅದರಂತೆ ಲೌಕಿಕ ಸುಖದ ಬಯಕೆಯಿಂದ ಸ್ವಾರ್ಥವರಾಯಣರಾಗಿ ಕಾಮ್ಯ ಕೃತಿಗಳನ್ನೇ ನಡೆಸಿ ವ್ರಾಕೃತ ಸುಖವನ್ನು ಸವಿಯುತ್ತಿದ್ದರೆ ಆಪ್ರಕೃತಿಯೇನಮ್ಮನ್ನು ಕಬಳಿಸಬಹುದು. ಸ್ವಕರ್ಮಣಾ ತಮಭೃರ್ಚ್ಯ ಸಿದ್ಧಿ 0 ವಿಂದತಿ ಮಾನವಃ । ನಮ್ಮ ಕರ್ತವ್ಯಗಳನ್ನು ಹರಿವೂಜೆಯೆಂದು ಭಾವಿಸಿ, ನಿಷ್ಕುಮನೆಯಿಂದ ಅದನ್ನು ಆಚರಿಸಬೇಕು. ವಿಷಯಸುಖದ ಮೇಲಿನ ವಿರಕ್ಷಿಯಿಂದ ಈ ನಿಷ್ಕುಮನೆಯನ್ನು ನಾವು ಅಳವಡಿಸಿಕೊಳ್ಳಬಹುದು. ಹರಿಭಕ್ತಿ ಮತ್ತು ವಿಷಯ- ವಿರಕ್ತಿ ಇವೆರಡು ನಮ್ಮ ವ್ರತಿಯೊಂದು ಕರ್ತವ್ಯದಲ್ಲಿ ಯೂ ಅಡಕವಾಗಿದ್ದ ಲ್ಲಿ ನಾವು ನಿರ್ಭೀತಿಯಿಂದ ಯಾವ ವಿಪ್ಣವಕ್ಕೂ ಗುರಿಯಾಗದಂತೆ ಜಗತ್ತಿನಲ್ಲಿ ನಡೆಯಲು ಸಾಧ್ಯವಾಗುವುದು. ಸಂಸಾರವನ್ನು ಈಸಿ ಅದನ್ನು ಜಯಿಸಲು ನಮಗೆ ಏನೂ ವ್ರಯಾಸವಾಗಲಾರದು. ವ್ರಾವಂಚಿಕ ಜೀವನದಿಂದ ನಾವು ವಿಮುಖರೂ ಆಗಬಾರದು; ಪ್ರಪಂಚದಲ್ಲಿಯೇ ತಲ್ಲೀನರೂ ಆಗಬಾರದು. ಇಂದು ಈ ಎರಡು ವಿಧದ ಪ್ರವೃತ್ತಿಗಳನ್ನು ಎಲ್ಲೆಡೆಗಳಲ್ಲಿಯೂ ನೋಡುತ್ತಿರುವೆವು. ಆಲಸ್ಯ ಕರ್ತವ್ಯ ಭ್ರಷ್ಟತೆಗಳು ಒಂದೆಡೆ ವ್ಯಾಪಿಸಿದ್ದರೆ, ಸಂಪತ್ತು ಅಧಿಕಾರಗಳ ಮೇಲಿನ ಮೋಹದಿಂದ ಸ್ವಾರ್ಥಪ್ರವೃತ್ತಿಗಳಲ್ಲಿ ವೂರ್ಣವಾಗಿ ಮಗ್ಗವಾಗಿರುವ ಜನ ಇನ್ನೊಂದೆಡೆ. ಜಗತ್ತು ಮಾಯೆಯೆಂದಾಗಲಿ ಬಂಧನವೆಂದಾಗಲಿ ಭಾವಿಸಿ, ಕರ್ತವ್ಯವನ್ನು ತೊರೆಯುವುದು ಮತ್ತು ಈಶ್ವರನನ್ನು ಮರೆತು ಅಥವಾ ಅಲಕ್ಷಿಸಿ ರಾಗದ್ವೇಷಪೂರ್ಣ ಕೃತಿಗಳಲ್ಲಿಯೇ ಆಸಕ್ತರಾಗಿರುವುದು, ಈ ಎರಡು ತರಹದ ಜೀವನ ರೀತಿಗಳು ನಮ್ಮ ಮುಂದಿದ್ದು ಇವೆರಡೂ ನಮ್ಮ ಪ್ರಗತಿಗೆ ವ್ರತಿರೋಧಗಳಾಗಿವೆ. ನಮಗೆ ಜೀವನದಿಂದ ವಿಮುಖವಾದ ಧರ್ಮವೂ ಬೇಡ; ಧರ್ಮದಿಂದ ವಿಮುಖವಾದ ಜೀವನವೂ ಸಲ್ಲದು. ಧರ್ಮ, ಭಕ್ತಿ ಗಳನ್ನು ಅಳವಡಿಸಿಕೊಂಡ ಉದಾತ್ತ ಜೀವನರೀತಿಯನ್ನು ನಾವಿಂದು ರೂಪಿಸಿಕೊಳ್ಳ ಬೇಕು. ತಾಮಸ, ರಾಜನ ಪ್ರವೃತ್ತಿಗಳಿಗೆ ತಲೆಬಾಗದೆ ನಮ್ಮ ಪಾಲಿಗೆ ಬಂದ ಕರ್ತವ್ಯವನ್ನು ಪರಮಾತ್ಮನ ಭಕ್ತಿಯ ಹಿನ್ನೆಲೆಯಲ್ಲಿ ಆಚರಿಸುವುದರಿಂದಲೇ ಜೀವನದ ಮಹೋನ್ನತ ಶ್ರೇಯಸ್ಸನ್ನು ನಾವು ಪಡೆಯಬಲ್ಲೆವು. ಗೀತೆಯು ಮಾನವ ಜಗತ್ತಿಗೆ ಸಾರಿದಮಂಗಲಮಯ ಸಂದೇಶವೇಇದಾಗಿದೆ. ವರಮಾತೃನ ಮುಖದಿಂದ ಹೊರಟ ಉಪದೇಶದ ಅಮೃತಧಾರೆಯಿಂದ ಅರ್ಜುನನ ಅಂತಃಕರಣವಟಲದಲ್ಲಿ ಅಂಟಿದ್ದ ಮೋಹಮಲಗಳೆಲ್ಲ ಪೂರ್ತಿಯಾಗಿ ಕೊಚ್ಚಿಹೋದವು. ಅವನ ಹೃದಯದಲ್ಲಿ ಸುಪ್ತವಾಗಿದ್ದ ಜ್ಞಾನದ ದಿವ್ಯಾಂಕುರವು ಚಿಗುರಿ ವಿಕಸಿತವಾಯಿತು. ನಷ್ಟೋ ಮೋಹಃಸ್ಥೃತಿರ್ಲಬ್ದಾ ತ್ವತ್‌ ಪ್ರಸಾದಾನ್ಮಯಾಚ್ಯುತ | ಸ್ಥಿತೋಸಸ್ಕಿ ಗತಸಂದೇಹಃ ಕರಿಷ್ಯೇ ವಚನಂ ತವ ॥ "ನನ್ನ ಮೋಹದ ನಿರಸನವಾಗಿದೆ. ಮೋಹದಿಂದ ಉಂಟಾದ ಅಭಿಭವದಿಂದ ಕಳೆದುಹೋದಂತಿರುವ ಜ್ಞಾನದ ನಿಧಿಯನ್ನು ನಿನ್ನ ಅನುಗ್ರಹದಿಂದತಿರುಗಿ ಪಡೆದೆ. ನನ್ನ ಸಂದೇಹಸಮಸ್ಯೆಗಳನಿವಾರಣೆಯಾಗಿದೆ. ನಿನ್ನ ಆಜ್ಞೆಯಂತೆ ಕರ್ತವ್ಯರಂಗಕ್ಕೆ ಧುಮುಕುವೆ'' ಎಂದು ಅರ್ಜುನನು ಪ್ರಸನ್ನ ಹೃದಯದಿಂದ ಭಕ್ತಿ ಉತ್ಪಾಹಗಳಿಂದ ಪರಮಾತ್ಮನಲ್ಲಿ ನಿವೇದಿಸುತ್ತಾನೆ. ಅರ್ಜುನನಿಗೆ ಬಂದಿರುವ ಸಂದರ್ಭ ಸನ್ನಿವೇಶಗಳು ನಮ್ಮೆಲ್ಲರ ಜೀವನದಲ್ಲಿ ಅನುದಿನವೂ ಸಂಭವಿಸುತ್ತವೆ. ಗೀತೆಯ ಸಂದೇಶವು ಅರ್ಜುನನಿಗೆ ಮಾತ್ರ ಪರಿಸೀಮಿತವಲ್ಲ. ಜಗತ್ತಿನ ಮಾನವರೆಲ್ಲರ ಜೀವನದ ಗೊಂದಲ ವಿಪ್ಣವಗಳನ್ನು ಪರಿಹರಿಸಿ, ಉದಾತ್ತ ರೀತಿಯ ಕರ್ತವ್ಯದ ಸ್ಫೂರ್ತಿಯನ್ನು ಗೀತೆಯು ನಮಗೆ ನೀಡುತ್ತಿದೆ. ಭಾರತದ ಮಹಾ ಯುದ್ಧದಲ್ಲಿ ಒಂದೇ ರಥದಲ್ಲಿ ಅರ್ಜುನನ ಜೊತೆಗೆ ಶ್ರೀಕೃಷ್ಣನು ಸಾರಥಿಯಾಗಿದ್ದು ಹೆಜ್ಜೆ ಹೆಜ್ಜೆಗೂ ಸ್ಫೂರ್ತಿದಾತನಾಗಿ ಅವನನ್ನು ಮುನ್ನಡೆಸಿದ್ದಾನೆ. ಅರ್ಜುನನು ನರನಾಗಿದ್ದರೆ ಶ್ರೀಕೃಷ್ಣನು ನರಾಯಣನಾಗಿದ್ದಾನೆ. ಈ ನರ-ನಾರಾಯಣರ ಜೊತೆಯಿಂದಲೇ ಅಲ್ಲಿ ುಜಯ-ಭೂತಿ-ನೀತಿಗಳ ಸಮಾವೇಶವಾಗಿದೆ. ಯತ್ರ ಯೋಗೇಶ್ವರಃ ಕೃಷ್ಣೋ ಯತ್ರ ಪಾರ್ಥೋ ಧನುರ್ಧರಃ। ತತ್ರ ಶ್ರೀರ್ವಿಜಯೋ ಭೂತಿಃ ಧ್ರುವಾ ನೀತಿರ್ಮತಿರ್ಮಮ ॥ ನಮ್ಮ ಜೀವನದ ಯುದ್ಧರಂಗದಲ್ಲಿ ಯೂ ಈ ನರರಿಗೆ ನಾರಾಯಣನೇ ಎರಥಿಯಾಗಿರಬೇಕು. ನರರಿಗೆ ತಮ್ಮ ಜೀವನದಲ್ಲಿ ನಾರಾಯಣನ ನಿಯೋಗವಾದುದರಿಂದಲೇ ಇಂದು ಎಲ್ಲೆಡೆಗಳಲ್ಲಿಯೂ ಅನೀತಿ ಮತ್ತು ತರ್ಥಿಕ ಸಂಕಟದ ದುಃಖದ ದೃಶ್ಯವನ್ನು ನಾವು ನೋಡುತ್ತಿರುವೆವು. ನಮ್ಮ ಕೀವನದಲ್ಲಿನರ-ನಾರಾಯಣರ ಸಮಾಗಮವಾಗಬೇಕು. ಭಗವಂತನನ್ನು ನಾವು ಮ್ಮ ಸಾರಥಿ, ಸ್ಪೂರ್ತಿದಾತ ಹಾಗೂ ಮಾರ್ಗದರ್ಶಕನನ್ನಾಗಿ ಆರಿಸಬೇಕು. *ಗಲೇ ನಮ್ಮ ಜೀವನವು ದೈವೀಸಂವತ್ತಿನ ಆಗರವಾಗುವುದು. ೫ ಈ ಈ%
Bannanje Govindacharya (1936–2020)Bhagavad Gita Pravachana
ನಚ ತಸ್ಮಾತ್‌ ಮನುಷ್ಯೇಷು ಕಶ್ಚಿತ್‌ ಮೇ ಪ್ರಿಯಕೃತ್‌ ತಮಃ | ಭವಿತಾ ನಚ ಮೇ ತಸ್ಮಾತ್‌ ಅನ್ಯಃ ಪ್ರಿಯತರಃ ಭುವಿ - ಮನುಷ್ಯರಲ್ಲಿ ಅವನಿಗಿಂತ ಹೆಚ್ಚು ಮೆಚ್ಚಿನವನು ನನಗೆ ಇನ್ನೊಬ್ಬನಿಲ್ಲ. ಅವನಿಗಿಂತ ಹೆಚ್ಚು ಮೆಚ್ಚಿನ ಇನ್ನೊಬ್ಬ ಭೂಮಿಯಲ್ಲಿ ಮುಂದೆ ಹುಟ್ಟಲಾರ. “ಗೀತೆಯನ್ನು ತಿಳಿದು ಅದನ್ನು ಭಕ್ತ ಜನಾಂಗಕ್ಕೆ ತಲುಪಿಸುವ ಶ್ರೇಷ್ಠ ಕಾರ್ಯ ಮಾಡುವವರು "ಮನುಷ್ಯರಲ್ಲಿ' ನನಗೆ ಅತ್ಯಂತ ಮೆಚ್ಚಿನವರು. ಇವರಿಗಿಂತ ಹೆಚ್ಚು ಇಷ್ಟವಾದದ್ದನ್ನು ಮಾಡುವ ಮಾನವ ಈ ಭೂಮಿಯ ಮೇಲೆ ಇಲ್ಲ” ಎನ್ನುತ್ತಾನೆ ಕೃಷ್ಣ. ಭಗವಂತನಿಗೆ ಜ್ಞಾನಿಗಳು ಅಚ್ಚುಮೆಚ್ಚು. ಅವರಿಗಿಂತಲೂ ಅಚ್ಚುಮೆಚ್ಚು ತಾವು ಜ್ಞಾನಿಗಳಾಗಿ, ಆ ಜ್ಞಾನದ ಸವಿಯನ್ನು ಸಮಾಜಕ್ಕೆ ಕೊಡುವವರು. “ಇವರು ಭೂಮಿಯಲ್ಲಿ ನನಗೆ ಇಷ್ಟವಾದದ್ದನ್ನು ಮಾಡುವವರಲ್ಲಿ ಸರ್ವಶ್ರೇಷ್ಠರು” ಎಂದಿದ್ದಾನೆ ಕೃಷ್ಣ.
Bibek Debroy (1955–2024)The Bhagavad Gita
(69) ‘Among men, there is no one who does greater service to me.72 In the world, there is no one, and there will be no one, more dear to me.’