18.7

नियतस्य तु संन्यासः कर्मणो नोपपद्यते ।
मोहात्तस्य परित्यागस्तामसः परिकीर्तितः ॥
niyatasya tu saṃnyāsaḥ karmaṇo nopapadyate |
mohāttasya parityāgastāmasaḥ parikīrtitaḥ ||
Sri Madhvacharya (1238–1317)Bhagavad Gita Tatparya Nirnaya
सङ्गफलत्यागमृते स्वरूपत्यागः कार्य इति मिथ्याज्ञानाख्यमोहात्। ‘स्वयज्ञादीन् परित्यज्य निरयं यात्यसंशयम्’ इति पाद्मे॥07॥
Swami Sivananda (1887–1963)Bhagavad Gita
7. Verily, the renunciation of obligatory action is improper; the abandonment of the same from delusion is declared to be Tamasic.
Sri Vishwesha Tirtharu (1931–2019)Gitasaroddhara
18.3–18.40 · ತ್ಯಾಗ ಮತ್ತು ಸಂನ್ಯಾಸ
ತ್ಯಾಗ ಮತ್ತು ಸಂನ್ಯಾಸ ನಮ್ಮ ಪ್ರತಿಯೊಂದು ಕ್ರಿಯೆಯಲ್ಲಿಯೂ ಸತ್ತ್ವ ರಜ, ತಮಗಳ ಈ ಗತಿವಿಧಿಯನ್ನು ಪರಿಶೀಲಿಸಿದಷ್ಟೂ ನಮ್ಮ ಎಲ್ಲ ಕೃತಿಗಳನ್ನೂ ವಿಶ್ಲೇಷಿಸಿ ಆತ್ಮ ನಿರೀಕ್ಬ ಣೆ ಮಾಡಲು ಅನುಕೂಲವಾಗುತ್ತ ದೆ. ನತದಸ್ತಿ ಪೃಥಿವ್ಯಾಂವಾ ದಿವಿ ದೇವೇಷು ವಾ ಪುನಃ । ಜಗತ್ತಿನ ಪ್ರತಿಯೊಬ್ಬರೂ ಈ ಮೂರು ಗುಣಗಳ ಪ್ರಭಾವಕ್ಕೆ ಸಿಲುಕಿದವರೇ. ಈ ತ್ರಿಗುಣಗಳಿಂದಾಗಿ ನಾವು ಮಾಡುತ್ತಿರುವ ಧರ್ಮಾಚಾರಗಳೆಲ್ಲ ಎಂತಹ ವಿಕೃತ ರೂಪವನ್ನು ತಳೆಯುತ್ತವೆ ಎಂಬ ಪರಿವೆಯೂ ಇಲ್ಲದೆ ನಮ್ಮ ವ್ಯವಹಾರಗಳನ್ನು ಸಾಗಿಸುತ್ತಿರುವೆವು. ಧರ್ಮಾಚರಣೆಯಲ್ಲಿ ರಜಸ್ಸು, ತಮಸ್ಸುಗಳಿಂದ ಸಂಭವಿಸಬಹುದಾದ ವಿಕೃತಿಯನ್ನು ಕಂಡಾಗ ಈ ಧರ್ಮಾಚರಣೆಯೇ ಬೇಡವೆಂದು ನಮಗೆ ಅನಿಸಬಹುದು. ಎಷ್ಟು ಜಾಗರೂಕತೆಯಿಂದಕರ್ಮಗಳನ್ನು ಆಚರಿಸಿದರೂ ಈ ಪ್ರಕೃತಿ ಗುಣಗಳಿಂದಾಗಿ ಅಲ್ಲಿದೋಷಗಳು ನುಸುಳದಿರುವುದಿಲ್ಲ. ಈ ದೋಷಯುಕ್ತವಾದ ಕರ್ಮವನ್ನು ಆಚರಿಸುವುದಕ್ಕಿಂತ ಅದನ್ನು ಸರ್ವಾತ್ಮನಾ ತೊರೆಯುವುದೇ ಲೇಸೆಂಬ ಭಾವನೆಯುಂಟಾಗುವ ಅವಕಾಶವೂಇದೆ. ತ್ಯಾಜ್ಯಂ ದೋಷವದಿತ್ಯೇಕೇ ಕರ್ಮ ಪ್ರಾಹುರ್ಮನೀಷಿಣಃ। ದೋಷಯುಕ್ತ ವಾದ ಈ ಕರ್ಮವನ್ನು ಬಿಡಬೆಳೆಂದು ಕೆಲ ಮನೀಷಿಗಳು ಹೇಳಿದ್ದ! ರೆ ಯಜ್ಞ! ದಾನತಪಃಕರ್ಮನ ತ್ಯಾಜ್ಯಮಿತಿ ಚಾಪರೇ। ಜೀವನದ ಪಾವನತೆಗೆ ಸಾಧನಗಳಾದ ಯಜ್ಞ, ದಾನ, ತಪಸ್ಸುಗಳನ್ನು ಸರ್ವಥಾ ತೊರೆಯಬಾರದೆಂಬ ಆದೇಶವನ್ನು ಕೆಲವರು ನೀಡಿರುವರು. ವಿರುದ್ಧವಾದ ಇವೆರಡು ವಿಚಾರಗಳಲ್ಲಿ ನಾವು ಯಾವುದನ್ನು ಆರಿಸ ಬೇಕೆನ್ನುವುದೇ ನಮ್ಮ ಮುಂದಿರುವಪ್ಪಶ್ಪೆಯಾಗಿದೆ. ನಹಿ ದೇಹಚ್ಛತಾ ಶಕ್ಕಂ ತ್ಯಕ್ತ 0 ಕರ್ಮಾಣ್ಯಶೇಷತಃ [ ಆದರೆ ಜೀವಿಗಳಿಗೆ ಕರ್ತವ್ಯವನ್ನು ಪೂರ್ತಿಯಾಗಿ ತೊರೆಯಲು ಸಾಧ್ಯವೆ? ಆಹಾರ, ವ್ಯವಹಾರಾದಿಗಳಿಗೆ ಅವಶ್ಯವೆನಿಸಿದ ಕರ್ಮಗಳನ್ನು ಬಿಟ್ಟಿರಲು ಯಾರಿಂದಲೂ ಸಾಧ್ಯವಿಲ್ಲ. ಕರ್ಮಗಳಲ್ಲಿ ದೋಷವಿದೆ, ಅದನ್ನು ತೊರೆಯಬೇಕೆನ್ನುವ ಆತುರವು ಸ್ನಾನ, ಸಂಧ್ಯಾವಂದನ, ದೇವರಪೂಜೆ, ಸಮಾಜಸೇವೆಯಂತಹ ಲೂ ೇಕೋವಯುಕ್ತ ಕಾರ್ಯಗಳನ್ನು ಪರಿತ್ಯಜಿಸುವುದರಲ್ಲಿಯೇ ಪರ್ಯವಸಾನ ಹೊಂದುವುದು. ಲೌಕಿಕ ಜೀವನೌಪಾಯಿಕ ಕಾರ್ಯಗಳನ್ನ ೦ತೂ ಬಿಡಬೇಕೆಂದರೂ ಬಿಡಲು ಸಾಧ್ಯವೇ ಇಲ್ಲ. ಸುಲಭವಾಗಿ ಪರಿತ್ಯಜಿಸಬಹುದಾದಕಾರ್ಯಗಳೆಂದರೆ ಆತ್ಮನ ಉಸ್ಪತಿಗೆ ಕಾರಣಗಳಾಗುವ ಪುಣ್ಯಕೃತಿಗಳು ಮಾತ್ರ. ಇತರ ಭೋಗಕಾರ್ಯಗಳನ್ನೆಲ್ಲ ಮಾಡಿಕೊಂಡು ಧರ್ಮಾಚರಣೆಯನ್ನು ಮಾತ್ರ ಬಿಡುವುದರಲ್ಲಿವಿನರ್ಥವಿದೆ? ಹೀಗೆ ನಮ್ಮ ಮನಸ್ಸು ಕರ್ಮದ ಪರಿತ್ಯಾಗ ಹಾಗೂ ಆಚರಣೆಯ ನಡುವೆ ತೂಗುಯ್ಯಾಲೆಯಲ್ಲಿ ಹೊಯ್ದಾಡುತ್ತಿದೆ. ಗೀತೆಯು ಈ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸಿದೆ. ಕರ್ಮಾಚರಣೆ ಬೇಡ, ಬೇಕು ಎನ್ನುವ ಎರಡು ವಾದಗಳ ಸಮನ್ವಯವನ್ನು ಗೀತೆಯು ಮಾಡಿದೆ. ಕರ್ಮವನ್ನುತ್ತಚಿಸವುದೆಂದರೆ ಅದರಲ್ಲಿ ದೋಷವು ತಗಲದಂತೆ ಆಸಕ್ತಿ ಮತ್ತು ಫಲಾಪೇಕ್ಷೆಯನ್ನು ತೊರೆಯುವುದೇ ಆಗಿದೆ ಎನ್ನುವ ಆಶಯವನ್ನು ಗೀತೆಯು ವಿವರಿಸಿದೆ. ಸಾಮಾನ್ಯ ಜನರು ಕರ್ಮ ಮತ್ತು ಅದರ ಲೌಕಿಕ ಫಲ ಇವೆರಡರಲ್ಲಿಯೂ ದೃಷ್ಟಿಯನ್ನಿಟ್ಟಿದ್ದರೆ ಅವುಗಳಲ್ಲಿ ಕರ್ಮವನ್ನು ಮಾತ್ರ ಪರಿಗ್ರಹಿಸಿ ಫಲವನ್ನು ಪರಿತ್ಯಜಿಸುವುದೇ ಕರ್ಮತ್ಯಾಗ ಹಾಗೂ ಕರ್ಮಾನುಷ್ಠಾನ ಇವೆರಡರ ಸಮನ್ವಯವಾಗಿದೆ. ಕರ್ಮಾನುಷ್ಠಾನದಲ್ಲಿ ಈ ತ್ಯಾಗವೃತ್ತಿಯನ್ನಾಗಲಿ ಸಂನ್ಯಾಸವೃತ್ತಿಯನ್ನಾಗಲಿ ಜೋಡಿಸುವುದರಿಂದ ಕರ್ಮಗಳನ್ನು ಆಚರಿಸಿದರೂ ಅದರ ದೋಷ, ಬಂಧನಗಳಿಗೆನಾವುಗುರಿಯಾಗುವುದಿಲ್ಲ. ತ್ಯಾಗ, ಸಂನ್ಯಾಸಗಳಲ್ಲಿರುವ. ಅಂತರವನ್ನೂ ನಾವು ಇಲ್ಲಿ ಪರಿಶೀಲಿಸಬೇಕಾಗಿದೆ. ತನಗಾಗಿ ಲೌಕಿಕ ಫಲವನ್ನು ಬಯಸಿದ್ದರೂ ಪರರ ಲೌಕಿಕ ಸುಖಕ್ಕಾಗಿ ಸ್ವಂತದ ಅಪೇಕ್ಷೆಯಿಲ್ಲದೆ ಮಾಡುವ ಕರ್ತವ್ಯದಲ್ಲಿ ತ್ಯಾಗ ವತ್ತಿಯಿದೆ. ತನ್ನಂತೆಯೇವರರಿಗೂ ಲೌಕಿಕಸುಖವನ್ನು ಅಪೇಕ್ಷಿಸದೆ ಅವರಿಗೂ ಜ್ಞಾನ, ಭಕ್ತಿ ಹರಿಪ್ರಸಾದಗಳನ್ನು ಮಾತ್ರ ಬಯಸಿ ಉನ್ನತ ಭಾವನೆಯಿಂದ ಮಾಡುವ ಕರ್ಮದಲ್ಲಿ ಸಂನ್ಯಾನವೃತ್ತಿಯು ಅಡಕವಾಗಿದೆ. ಈ ತ್ಯಾಗ, ಸಂನ್ಯಾಸಗಳೆರಡರಲ್ಲಿಯೂ ಕರ್ಮಾಚರಣೆಯು ಅನಿವಾರ್ಯವೇ. ಅನ್ಯರ ಸುಖಕ್ಕಾಗಿ ಹಾತೊರೆದು ಅನುಕಂಪಭಾವದಿಂದ ಸ್ವಸುಖನಿರಪೇಕ್ಟವಾಗಿ ಪ್ರವರ್ತಿಸುವ ಕರ್ಮಯೋಗಿಯ ತ್ಯಾಗದಲ್ಲಿ ಹಿರಿತನವಿದ್ದರೂ ತನ್ನಂತೆಯೇ ಅನ್ಯರ ಆಧ್ಯಾತ್ಮಿಕ ಉನ್ನತಿಯನ್ನೇ ಬಯಸುವ ಸಂನ್ಯಾಸಿಯ ಮನೋಭಾವವು ಹೆಚ್ಚು ಉದಾತ್ತವಾದುದು. ಇವರಿಬ್ಬರ ಆಚರಣೆಗಳೂ ಕರ್ಮದ ದೋಷಗಳನ್ನು ದಾಟಿ ನಿಂತಿವೆ. ವೈರಾಗ್ಯ ಭಕ್ತಿಗಳ ಧಾರೆಯಲ್ಲಿ ತೊಳೆದು ಸಿದ್ಧಗೊಳಿಸಿದ ಈ ಕರ್ಮದವಕ್ವಾನ್ನದಲ್ಲಿ ಆಸಕ್ತಿಯುಕ್ತಕರ್ಮಗಳಲ್ಲಿರುವ ಕಹಿ ದುರ್ಗಂಧಗಳು ಕಾಣಸಿಗವು. ಇಂತಹ ಕರ್ಮವನ್ನು ಸಾತ್ತ್ವಿಕವೆಂದು ಗೀತೆಯು ನಿರ್ದೇಶಿಸಿದೆ.
Bannanje Govindacharya (1936–2020)Bhagavad Gita Pravachana
ನಿಯತಸ್ಯ ತು ಸಂನ್ಯಾಸಃ ಕರ್ಮಣಃ ನ ಉಪಪದ್ಯತೇ | ಮೋಹಾತ್‌ ತಸ್ಯ ಪರಿತ್ಯಾಗಃ ತಾಮಸಃ ಪರಿಕೀರ್ತಿತಃ - ವಿಹಿತವಾದ ಕರ್ಮವನ್ನು ತೊರೆಯುವುದು ತರವಲ್ಲ. ಅರಿವುಗೆಟ್ಟು ಅದನ್ನು ತೊರೆವುದು ತಾಮಸ ತ್ಯಾಗ ಎನಿಸುತ್ತದೆ. ಯಾವ ಕಾಲಕ್ಕೂ ನಾವು ನಮ್ಮ ನಿಯತಕರ್ಮವನ್ನು ತೊರೆಯಬಾರದು. ಒಂದು ವೇಳೆ ತಪ್ಪು ತಿಳುವಳಿಕೆಯಿಂದ ನಿಯತ ಕರ್ಮವನ್ನು ಬಿಟ್ಟರೆ ಆಗ ಅದು ತಾಮಸ ತ್ಯಾಗ ಎನಿಸುತ್ತದೆ. ಇಲ್ಲಿ 'ನಿಯತಕರ್ಮ' ಎಂದರೆ ನಮ್ಮ ಜೀವಯೋಗ್ಯತೆಗೆ ಯಾವುದು ನಿಯತವೋ ಆ ಕರ್ಮ. ನಮಗೆ ತಿಳಿದಂತೆ ಎಲ್ಲಾ ಕರ್ಮವನ್ನು ಎಲ್ಲರೂ ಮಾಡುವಂತಿಲ್ಲ. ಉದಾಹರಣೆಗೆ ಯಜ್ಞ: ಯತಿಗಳು ಅಗ್ನಿಮುಖದಲ್ಲಿ ಆಹುತಿ ನೀಡುವಂತಿಲ್ಲ; ಬ್ರಹ್ಮಚಾರಿಗಳು ಪೂರ್ಣಪ್ರಮಾಣದ ಅಗ್ನಿಹೋತ್ರ ಮಾಡುವಂತಿಲ್ಲ. ಆದರೆ ಯತಿಗಳು ಜ್ಞಾನಯಜ್ಞ ಮಾಡಬಹುದು ಅದು ಅವರ ನಿಯತಕರ್ಮ. ಎಲ್ಲಾ ಕಾಲದಲ್ಲೂ ಎಲ್ಲರೂ ಮಾಡಬಹುದಾದ ಯಜ್ಞ 'ನಾಮಯಜ್ಞ'. ಅಂದರೆ ಭಗವಂತನ ನಾಮ ಸ್ಮರಣೆ. ಇದು ಯಜ್ಞದಲ್ಲಿ ಎಲ್ಲರಿಗೂ ಅನ್ವಯಿಸುವ ನಿಯತಕರ್ಮ. ಇನ್ನು ದಾನ: ಬ್ರಹ್ಮಚಾರಿಗಳು ಕನ್ಯಾದಾನ ಮಾಡಲಾಗುವುದಿಲ್ಲ, ಅದನ್ನು ಗೃಹಸ್ಥ ಮಾಡಬೇಕು. ಗೃಹಸ್ಥನಿಗೆ ಕನ್ಯಾದಾನ ನಿಯತಕರ್ಮ. ಎಲ್ಲರೂ ಮಾಡಬಹುದಾದ ದಾನ-ಅಭಯದಾನ ಮತ್ತು ಜ್ಞಾನದಾನ. ಮೂರನೆಯದು ತಪಸ್ಸು: ಕೆಲವು ತಪಸ್ಸನ್ನು ಎಲ್ಲರೂ ಮಾಡಲಾಗುವುದಿಲ್ಲ. ಅದಕ್ಕೆ ವೇದಧೀಕ್ಷೆ ಬೇಕಾಗಬಹುದು. ಆದರೆ ಎಲ್ಲರೂ ಮಾಡಬಹುದಾದ ತಪಸ್ಸು ಎಂದರೆ ಉಪವಾಸಾದಿ ವೃತಾನುಷ್ಠಾನಗಳು. ಈ ತಪಸ್ಸನ್ನು ಮನುಷ್ಯ ಮಾತ್ರದವರು ಮಾಡಬಹುದು. ಹೀಗೆ ಯಾರಿಗೆ ಯಾವ ಕರ್ಮ ನಿಯತವೋ ಆ ಕರ್ಮವನ್ನು ಮಾಡಬೇಕು. ನಿಯತ ಕರ್ಮದಲ್ಲಿ ಫಲಾಪೇಕ್ಷೆಯ ಪ್ರಶ್ನೆಯೇ ಇಲ್ಲ. ತಪ್ಪು ತಿಳುವಳಿಕೆಯಿಂದ ನಿಯತಕರ್ಮವನ್ನು ಬಿಟ್ಟರೆ ಅದು ತಾಮಸ ತ್ಯಾಗ ಎನಿಸುತ್ತದೆ ಎನ್ನುವ ಎಚ್ಚರವನ್ನು ಕೃಷ್ಣ ಈ ಶ್ಲೋಕದ ಮೂಲಕ ಕೊಟ್ಟಿದ್ದಾನೆ.
Bibek Debroy (1955–2024)The Bhagavad Gita
(7) ‘It is not advisable to renounce indicated action.10 Discarding this through delusion is known as tamas- type.’11