श्रद्धावाननसूयश्च शृणुयादपि यो नरः ।
सोऽपि मुक्तः शुभाँल्लोकान्प्राप्नुयात्पुण्यकर्मणाम् ॥
śraddhāvānanasūyaśca śṛṇuyādapi yo naraḥ |
so'pi muktaḥ śubhām̐llokānprāpnuyātpuṇyakarmaṇām ||
Sri Madhvacharya (1238–1317)Bhagavad Gita Tatparya Nirnaya
‘सोऽपि मुक्तः’ न तस्मान्मनुष्येषु’ इत्युक्तेर्मुक्तानां महत् तारतम्यं ज्ञायते। ‘मनुष्येषु’ इति विशेषणात्
तत्रापि देवानामाधिक्यं च।
‘मुक्तिर्ज्ञात्वाऽपि विष्णुं स्याच्छास्त्रम् श्रुत्वा ततोऽधिकम्।
मुक्तौ सुखं तत् पठतस्ततोऽप्यधिकमिष्यते।
व्याख्यातुस्तुसमं मुक्तौ सुखं नान्यस्य कस्यचित्।
ततोऽधिकं तु देवानां मुख्यव्याख्याकृतो यतः’ इति च॥71॥
Swami Sivananda (1887–1963)Bhagavad Gita
71. The man also who hears this, full of faith and free from malice, he, too, liberated, shall
attain to the happy worlds of those of righteous deeds.
Sri Vishwesha Tirtharu (1931–2019)Gitasaroddhara
18.46–18.78 · ಉಪಸಂಹಾರ
ಉಪಸಂಹಾರ
ಸ್ವವಿಹಿತವೃತ್ತ್ಯಾಭಕ್ತ್ಯಾ
ಭಗವದಾರಾಧನಮೇವ ಪರಮೋ ಧರ್ಮಃ।
-ಗೀತಾ ಭಾಷ್ಯ
ಎಂದು ಒಂದು ಮಾತಿನಲ್ಲಿ ಶ್ರೀಮಧ್ವಾಚಾರ್ಯರು ಗೀತೆಯ ಉಪದೇಶದ
ಸಾರವನ್ನು ಅರುಹಿದ್ದಾರೆ. ""ವಿಹಿತ ವೃತ್ತಿಯಿಂದ ಭಕ್ತಿಯಿಂದ ಭಗವಂತನನ್ನು
ಆರಾಧಿಸುವುದೇ ಮಾನವರ ವರಮಧರ್ಮವಾಗಿದೆ.'' ಸಂಸಾರ ವಾಶದಲ್ಲಿ
ಸಿಲುಕದಿರಲು ಮತ್ತು ಪ್ರಕೃತಿಬಂಧನದಿಂದ ವೂರ್ಣ ವಿಮೋಚನೆ ಪಡೆಯಲು
ಇದೇ ಜೀವನಿಗಿರುವ ಏಕಮಾತ್ರ ಉವಾಯವಾಗಿದೆ. ಪ್ರಕೃತಿಗೆ ಹೆದರಿಯಾಗಲಿ
ಉದಾಸೀನತೆಯಿಂದಾಗಲಿ ಕರ್ತವ್ಯವನ್ನು ತ್ಯಜಿಸುವುದರಿಂದ ನಾವು ಯಾವ
ಪುರುಷಾರ್ಥವನ್ನೂ ಪಡೆಯಲಾರೆವು. ಅದರಂತೆ ಲೌಕಿಕ ಸುಖದ
ಬಯಕೆಯಿಂದ ಸ್ವಾರ್ಥವರಾಯಣರಾಗಿ ಕಾಮ್ಯ ಕೃತಿಗಳನ್ನೇ ನಡೆಸಿ ವ್ರಾಕೃತ
ಸುಖವನ್ನು ಸವಿಯುತ್ತಿದ್ದರೆ ಆಪ್ರಕೃತಿಯೇನಮ್ಮನ್ನು ಕಬಳಿಸಬಹುದು.
ಸ್ವಕರ್ಮಣಾ ತಮಭೃರ್ಚ್ಯ
ಸಿದ್ಧಿ 0 ವಿಂದತಿ ಮಾನವಃ ।
ನಮ್ಮ ಕರ್ತವ್ಯಗಳನ್ನು ಹರಿವೂಜೆಯೆಂದು ಭಾವಿಸಿ, ನಿಷ್ಕುಮನೆಯಿಂದ
ಅದನ್ನು ಆಚರಿಸಬೇಕು. ವಿಷಯಸುಖದ ಮೇಲಿನ ವಿರಕ್ಷಿಯಿಂದ ಈ
ನಿಷ್ಕುಮನೆಯನ್ನು ನಾವು ಅಳವಡಿಸಿಕೊಳ್ಳಬಹುದು. ಹರಿಭಕ್ತಿ ಮತ್ತು ವಿಷಯ-
ವಿರಕ್ತಿ ಇವೆರಡು ನಮ್ಮ ವ್ರತಿಯೊಂದು ಕರ್ತವ್ಯದಲ್ಲಿ ಯೂ ಅಡಕವಾಗಿದ್ದ ಲ್ಲಿ
ನಾವು ನಿರ್ಭೀತಿಯಿಂದ ಯಾವ ವಿಪ್ಣವಕ್ಕೂ ಗುರಿಯಾಗದಂತೆ ಜಗತ್ತಿನಲ್ಲಿ
ನಡೆಯಲು ಸಾಧ್ಯವಾಗುವುದು. ಸಂಸಾರವನ್ನು ಈಸಿ ಅದನ್ನು ಜಯಿಸಲು ನಮಗೆ
ಏನೂ ವ್ರಯಾಸವಾಗಲಾರದು. ವ್ರಾವಂಚಿಕ ಜೀವನದಿಂದ ನಾವು ವಿಮುಖರೂ
ಆಗಬಾರದು; ಪ್ರಪಂಚದಲ್ಲಿಯೇ ತಲ್ಲೀನರೂ ಆಗಬಾರದು. ಇಂದು ಈ
ಎರಡು ವಿಧದ ಪ್ರವೃತ್ತಿಗಳನ್ನು ಎಲ್ಲೆಡೆಗಳಲ್ಲಿಯೂ ನೋಡುತ್ತಿರುವೆವು. ಆಲಸ್ಯ
ಕರ್ತವ್ಯ ಭ್ರಷ್ಟತೆಗಳು ಒಂದೆಡೆ ವ್ಯಾಪಿಸಿದ್ದರೆ, ಸಂಪತ್ತು ಅಧಿಕಾರಗಳ ಮೇಲಿನ
ಮೋಹದಿಂದ ಸ್ವಾರ್ಥಪ್ರವೃತ್ತಿಗಳಲ್ಲಿ ವೂರ್ಣವಾಗಿ ಮಗ್ಗವಾಗಿರುವ ಜನ
ಇನ್ನೊಂದೆಡೆ. ಜಗತ್ತು ಮಾಯೆಯೆಂದಾಗಲಿ ಬಂಧನವೆಂದಾಗಲಿ ಭಾವಿಸಿ,
ಕರ್ತವ್ಯವನ್ನು ತೊರೆಯುವುದು ಮತ್ತು ಈಶ್ವರನನ್ನು ಮರೆತು ಅಥವಾ ಅಲಕ್ಷಿಸಿ
ರಾಗದ್ವೇಷಪೂರ್ಣ ಕೃತಿಗಳಲ್ಲಿಯೇ ಆಸಕ್ತರಾಗಿರುವುದು, ಈ ಎರಡು ತರಹದ
ಜೀವನ ರೀತಿಗಳು ನಮ್ಮ ಮುಂದಿದ್ದು ಇವೆರಡೂ ನಮ್ಮ ಪ್ರಗತಿಗೆ
ವ್ರತಿರೋಧಗಳಾಗಿವೆ. ನಮಗೆ ಜೀವನದಿಂದ ವಿಮುಖವಾದ ಧರ್ಮವೂ ಬೇಡ;
ಧರ್ಮದಿಂದ ವಿಮುಖವಾದ ಜೀವನವೂ ಸಲ್ಲದು. ಧರ್ಮ, ಭಕ್ತಿ ಗಳನ್ನು
ಅಳವಡಿಸಿಕೊಂಡ ಉದಾತ್ತ ಜೀವನರೀತಿಯನ್ನು ನಾವಿಂದು ರೂಪಿಸಿಕೊಳ್ಳ
ಬೇಕು. ತಾಮಸ, ರಾಜನ ಪ್ರವೃತ್ತಿಗಳಿಗೆ ತಲೆಬಾಗದೆ ನಮ್ಮ ಪಾಲಿಗೆ ಬಂದ
ಕರ್ತವ್ಯವನ್ನು ಪರಮಾತ್ಮನ ಭಕ್ತಿಯ ಹಿನ್ನೆಲೆಯಲ್ಲಿ ಆಚರಿಸುವುದರಿಂದಲೇ
ಜೀವನದ ಮಹೋನ್ನತ ಶ್ರೇಯಸ್ಸನ್ನು ನಾವು ಪಡೆಯಬಲ್ಲೆವು. ಗೀತೆಯು
ಮಾನವ ಜಗತ್ತಿಗೆ ಸಾರಿದಮಂಗಲಮಯ ಸಂದೇಶವೇಇದಾಗಿದೆ.
ವರಮಾತೃನ ಮುಖದಿಂದ ಹೊರಟ ಉಪದೇಶದ ಅಮೃತಧಾರೆಯಿಂದ
ಅರ್ಜುನನ ಅಂತಃಕರಣವಟಲದಲ್ಲಿ ಅಂಟಿದ್ದ ಮೋಹಮಲಗಳೆಲ್ಲ
ಪೂರ್ತಿಯಾಗಿ ಕೊಚ್ಚಿಹೋದವು. ಅವನ ಹೃದಯದಲ್ಲಿ ಸುಪ್ತವಾಗಿದ್ದ ಜ್ಞಾನದ
ದಿವ್ಯಾಂಕುರವು ಚಿಗುರಿ ವಿಕಸಿತವಾಯಿತು.
ನಷ್ಟೋ ಮೋಹಃಸ್ಥೃತಿರ್ಲಬ್ದಾ
ತ್ವತ್ ಪ್ರಸಾದಾನ್ಮಯಾಚ್ಯುತ |
ಸ್ಥಿತೋಸಸ್ಕಿ ಗತಸಂದೇಹಃ
ಕರಿಷ್ಯೇ ವಚನಂ ತವ ॥
"ನನ್ನ ಮೋಹದ ನಿರಸನವಾಗಿದೆ. ಮೋಹದಿಂದ ಉಂಟಾದ
ಅಭಿಭವದಿಂದ ಕಳೆದುಹೋದಂತಿರುವ ಜ್ಞಾನದ ನಿಧಿಯನ್ನು ನಿನ್ನ
ಅನುಗ್ರಹದಿಂದತಿರುಗಿ ಪಡೆದೆ. ನನ್ನ ಸಂದೇಹಸಮಸ್ಯೆಗಳನಿವಾರಣೆಯಾಗಿದೆ.
ನಿನ್ನ ಆಜ್ಞೆಯಂತೆ ಕರ್ತವ್ಯರಂಗಕ್ಕೆ ಧುಮುಕುವೆ'' ಎಂದು ಅರ್ಜುನನು ಪ್ರಸನ್ನ
ಹೃದಯದಿಂದ ಭಕ್ತಿ ಉತ್ಪಾಹಗಳಿಂದ ಪರಮಾತ್ಮನಲ್ಲಿ ನಿವೇದಿಸುತ್ತಾನೆ.
ಅರ್ಜುನನಿಗೆ ಬಂದಿರುವ ಸಂದರ್ಭ ಸನ್ನಿವೇಶಗಳು ನಮ್ಮೆಲ್ಲರ ಜೀವನದಲ್ಲಿ
ಅನುದಿನವೂ ಸಂಭವಿಸುತ್ತವೆ. ಗೀತೆಯ ಸಂದೇಶವು ಅರ್ಜುನನಿಗೆ ಮಾತ್ರ
ಪರಿಸೀಮಿತವಲ್ಲ. ಜಗತ್ತಿನ ಮಾನವರೆಲ್ಲರ ಜೀವನದ ಗೊಂದಲ ವಿಪ್ಣವಗಳನ್ನು
ಪರಿಹರಿಸಿ, ಉದಾತ್ತ ರೀತಿಯ ಕರ್ತವ್ಯದ ಸ್ಫೂರ್ತಿಯನ್ನು ಗೀತೆಯು ನಮಗೆ
ನೀಡುತ್ತಿದೆ. ಭಾರತದ ಮಹಾ ಯುದ್ಧದಲ್ಲಿ ಒಂದೇ ರಥದಲ್ಲಿ ಅರ್ಜುನನ
ಜೊತೆಗೆ ಶ್ರೀಕೃಷ್ಣನು ಸಾರಥಿಯಾಗಿದ್ದು ಹೆಜ್ಜೆ ಹೆಜ್ಜೆಗೂ ಸ್ಫೂರ್ತಿದಾತನಾಗಿ
ಅವನನ್ನು ಮುನ್ನಡೆಸಿದ್ದಾನೆ. ಅರ್ಜುನನು ನರನಾಗಿದ್ದರೆ ಶ್ರೀಕೃಷ್ಣನು
ನರಾಯಣನಾಗಿದ್ದಾನೆ. ಈ ನರ-ನಾರಾಯಣರ ಜೊತೆಯಿಂದಲೇ ಅಲ್ಲಿ
ುಜಯ-ಭೂತಿ-ನೀತಿಗಳ ಸಮಾವೇಶವಾಗಿದೆ.
ಯತ್ರ ಯೋಗೇಶ್ವರಃ ಕೃಷ್ಣೋ
ಯತ್ರ ಪಾರ್ಥೋ ಧನುರ್ಧರಃ।
ತತ್ರ ಶ್ರೀರ್ವಿಜಯೋ ಭೂತಿಃ
ಧ್ರುವಾ ನೀತಿರ್ಮತಿರ್ಮಮ ॥
ನಮ್ಮ ಜೀವನದ ಯುದ್ಧರಂಗದಲ್ಲಿ ಯೂ ಈ ನರರಿಗೆ ನಾರಾಯಣನೇ
ಎರಥಿಯಾಗಿರಬೇಕು. ನರರಿಗೆ ತಮ್ಮ ಜೀವನದಲ್ಲಿ ನಾರಾಯಣನ
ನಿಯೋಗವಾದುದರಿಂದಲೇ ಇಂದು ಎಲ್ಲೆಡೆಗಳಲ್ಲಿಯೂ ಅನೀತಿ ಮತ್ತು
ತರ್ಥಿಕ ಸಂಕಟದ ದುಃಖದ ದೃಶ್ಯವನ್ನು ನಾವು ನೋಡುತ್ತಿರುವೆವು. ನಮ್ಮ
ಕೀವನದಲ್ಲಿನರ-ನಾರಾಯಣರ ಸಮಾಗಮವಾಗಬೇಕು. ಭಗವಂತನನ್ನು ನಾವು
ಮ್ಮ ಸಾರಥಿ, ಸ್ಪೂರ್ತಿದಾತ ಹಾಗೂ ಮಾರ್ಗದರ್ಶಕನನ್ನಾಗಿ ಆರಿಸಬೇಕು.
*ಗಲೇ ನಮ್ಮ ಜೀವನವು ದೈವೀಸಂವತ್ತಿನ ಆಗರವಾಗುವುದು.
೫ ಈ ಈ%
Bannanje Govindacharya (1936–2020)Bhagavad Gita Pravachana
ಶ್ರದ್ಧಾವಾನ್ ಅನಸೂಯಃ ಚ ಶೃಣುಯಾತ್ ಅಪಿ ಯಃ ನರಃ |
ಸಃ ಅಪಿ ಮುಕ್ತಃ ಶುಭಾನ್ ಲೋಕಾನ್ ಪ್ರಾಪ್ನುಯಾತ್ ಪುಣ್ಯಕರ್ಮಣಾಮ್ - ನಂಬಿಕೆ ಇರುವ, ಕಿಚ್ಚು ಇರದ
ಮನುಷ್ಯ ಕೇಳಿದರೂ ಸಾಕು. ಅಂತವನೂ ಪಾಪದಿಂದ ಬಿಡುಗಡೆಗೊಂಡು ಪುಣ್ಯಜೀವಿಗಳ ಮಂಗಲಮಯ
ಲೋಕಗಳನ್ನು ಪಡೆದಾನು.
ಒಂದು ವೇಳೆ ಗೀತೆಯನ್ನು ಸ್ವಯಂ ಅಧ್ಯಯನ ಮಾಡುವ ಸಾಮರ್ಥ್ಯ ನಮ್ಮಲ್ಲಿ ಇಲ್ಲದೇ ಇದ್ದರೆ, ಯಾವುದೇ
ಅಸೂಯೆ ಇಲ್ಲದೆ, ಶ್ರದ್ಧಾಭಕ್ತಿಯಿಂದ ತಿಳಿದವರಿಂದ ಕೇಳಿ ತಿಳಿದುಕೊಂಡರೂ ಸಾಕು- ನಾವು ನಮ್ಮ ಪಾಪವನ್ನು
ತೊಳೆದುಕೊಂಡು ಭಗವಂತನ ಲೋಕವನ್ನು ಸೇರಬಹುದು. ಇದು ಕೃಷ್ಣನ ಭರವಸೆ.
Bibek Debroy (1955–2024)The Bhagavad Gita
(71)
‘The man who only listens with faith and without disrespect, he too will be
freed from sin and attain the worlds attained by those who are pure of
deeds.’