18.9

कार्यमित्येव यत्कर्म नियतं क्रियतेऽर्जुन ।
सङ्गं त्यक्त्वा फलं चैव स त्यागः सात्त्विको मतः ॥
kāryamityeva yatkarma niyataṃ kriyate'rjuna |
saṅgaṃ tyaktvā phalaṃ caiva sa tyāgaḥ sāttviko mataḥ ||
Swami Sivananda (1887–1963)Bhagavad Gita
9. Whatever obligatory action is done, O Arjuna, merely because it ought to be done, abandoning attachment and also the desire for reward, that renunciation is regarded as Sattwic!
Sri Vishwesha Tirtharu (1931–2019)Gitasaroddhara
18.3–18.40 · ತ್ಯಾಗ ಮತ್ತು ಸಂನ್ಯಾಸ
ತ್ಯಾಗ ಮತ್ತು ಸಂನ್ಯಾಸ ನಮ್ಮ ಪ್ರತಿಯೊಂದು ಕ್ರಿಯೆಯಲ್ಲಿಯೂ ಸತ್ತ್ವ ರಜ, ತಮಗಳ ಈ ಗತಿವಿಧಿಯನ್ನು ಪರಿಶೀಲಿಸಿದಷ್ಟೂ ನಮ್ಮ ಎಲ್ಲ ಕೃತಿಗಳನ್ನೂ ವಿಶ್ಲೇಷಿಸಿ ಆತ್ಮ ನಿರೀಕ್ಬ ಣೆ ಮಾಡಲು ಅನುಕೂಲವಾಗುತ್ತ ದೆ. ನತದಸ್ತಿ ಪೃಥಿವ್ಯಾಂವಾ ದಿವಿ ದೇವೇಷು ವಾ ಪುನಃ । ಜಗತ್ತಿನ ಪ್ರತಿಯೊಬ್ಬರೂ ಈ ಮೂರು ಗುಣಗಳ ಪ್ರಭಾವಕ್ಕೆ ಸಿಲುಕಿದವರೇ. ಈ ತ್ರಿಗುಣಗಳಿಂದಾಗಿ ನಾವು ಮಾಡುತ್ತಿರುವ ಧರ್ಮಾಚಾರಗಳೆಲ್ಲ ಎಂತಹ ವಿಕೃತ ರೂಪವನ್ನು ತಳೆಯುತ್ತವೆ ಎಂಬ ಪರಿವೆಯೂ ಇಲ್ಲದೆ ನಮ್ಮ ವ್ಯವಹಾರಗಳನ್ನು ಸಾಗಿಸುತ್ತಿರುವೆವು. ಧರ್ಮಾಚರಣೆಯಲ್ಲಿ ರಜಸ್ಸು, ತಮಸ್ಸುಗಳಿಂದ ಸಂಭವಿಸಬಹುದಾದ ವಿಕೃತಿಯನ್ನು ಕಂಡಾಗ ಈ ಧರ್ಮಾಚರಣೆಯೇ ಬೇಡವೆಂದು ನಮಗೆ ಅನಿಸಬಹುದು. ಎಷ್ಟು ಜಾಗರೂಕತೆಯಿಂದಕರ್ಮಗಳನ್ನು ಆಚರಿಸಿದರೂ ಈ ಪ್ರಕೃತಿ ಗುಣಗಳಿಂದಾಗಿ ಅಲ್ಲಿದೋಷಗಳು ನುಸುಳದಿರುವುದಿಲ್ಲ. ಈ ದೋಷಯುಕ್ತವಾದ ಕರ್ಮವನ್ನು ಆಚರಿಸುವುದಕ್ಕಿಂತ ಅದನ್ನು ಸರ್ವಾತ್ಮನಾ ತೊರೆಯುವುದೇ ಲೇಸೆಂಬ ಭಾವನೆಯುಂಟಾಗುವ ಅವಕಾಶವೂಇದೆ. ತ್ಯಾಜ್ಯಂ ದೋಷವದಿತ್ಯೇಕೇ ಕರ್ಮ ಪ್ರಾಹುರ್ಮನೀಷಿಣಃ। ದೋಷಯುಕ್ತ ವಾದ ಈ ಕರ್ಮವನ್ನು ಬಿಡಬೆಳೆಂದು ಕೆಲ ಮನೀಷಿಗಳು ಹೇಳಿದ್ದ! ರೆ ಯಜ್ಞ! ದಾನತಪಃಕರ್ಮನ ತ್ಯಾಜ್ಯಮಿತಿ ಚಾಪರೇ। ಜೀವನದ ಪಾವನತೆಗೆ ಸಾಧನಗಳಾದ ಯಜ್ಞ, ದಾನ, ತಪಸ್ಸುಗಳನ್ನು ಸರ್ವಥಾ ತೊರೆಯಬಾರದೆಂಬ ಆದೇಶವನ್ನು ಕೆಲವರು ನೀಡಿರುವರು. ವಿರುದ್ಧವಾದ ಇವೆರಡು ವಿಚಾರಗಳಲ್ಲಿ ನಾವು ಯಾವುದನ್ನು ಆರಿಸ ಬೇಕೆನ್ನುವುದೇ ನಮ್ಮ ಮುಂದಿರುವಪ್ಪಶ್ಪೆಯಾಗಿದೆ. ನಹಿ ದೇಹಚ್ಛತಾ ಶಕ್ಕಂ ತ್ಯಕ್ತ 0 ಕರ್ಮಾಣ್ಯಶೇಷತಃ [ ಆದರೆ ಜೀವಿಗಳಿಗೆ ಕರ್ತವ್ಯವನ್ನು ಪೂರ್ತಿಯಾಗಿ ತೊರೆಯಲು ಸಾಧ್ಯವೆ? ಆಹಾರ, ವ್ಯವಹಾರಾದಿಗಳಿಗೆ ಅವಶ್ಯವೆನಿಸಿದ ಕರ್ಮಗಳನ್ನು ಬಿಟ್ಟಿರಲು ಯಾರಿಂದಲೂ ಸಾಧ್ಯವಿಲ್ಲ. ಕರ್ಮಗಳಲ್ಲಿ ದೋಷವಿದೆ, ಅದನ್ನು ತೊರೆಯಬೇಕೆನ್ನುವ ಆತುರವು ಸ್ನಾನ, ಸಂಧ್ಯಾವಂದನ, ದೇವರಪೂಜೆ, ಸಮಾಜಸೇವೆಯಂತಹ ಲೂ ೇಕೋವಯುಕ್ತ ಕಾರ್ಯಗಳನ್ನು ಪರಿತ್ಯಜಿಸುವುದರಲ್ಲಿಯೇ ಪರ್ಯವಸಾನ ಹೊಂದುವುದು. ಲೌಕಿಕ ಜೀವನೌಪಾಯಿಕ ಕಾರ್ಯಗಳನ್ನ ೦ತೂ ಬಿಡಬೇಕೆಂದರೂ ಬಿಡಲು ಸಾಧ್ಯವೇ ಇಲ್ಲ. ಸುಲಭವಾಗಿ ಪರಿತ್ಯಜಿಸಬಹುದಾದಕಾರ್ಯಗಳೆಂದರೆ ಆತ್ಮನ ಉಸ್ಪತಿಗೆ ಕಾರಣಗಳಾಗುವ ಪುಣ್ಯಕೃತಿಗಳು ಮಾತ್ರ. ಇತರ ಭೋಗಕಾರ್ಯಗಳನ್ನೆಲ್ಲ ಮಾಡಿಕೊಂಡು ಧರ್ಮಾಚರಣೆಯನ್ನು ಮಾತ್ರ ಬಿಡುವುದರಲ್ಲಿವಿನರ್ಥವಿದೆ? ಹೀಗೆ ನಮ್ಮ ಮನಸ್ಸು ಕರ್ಮದ ಪರಿತ್ಯಾಗ ಹಾಗೂ ಆಚರಣೆಯ ನಡುವೆ ತೂಗುಯ್ಯಾಲೆಯಲ್ಲಿ ಹೊಯ್ದಾಡುತ್ತಿದೆ. ಗೀತೆಯು ಈ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸಿದೆ. ಕರ್ಮಾಚರಣೆ ಬೇಡ, ಬೇಕು ಎನ್ನುವ ಎರಡು ವಾದಗಳ ಸಮನ್ವಯವನ್ನು ಗೀತೆಯು ಮಾಡಿದೆ. ಕರ್ಮವನ್ನುತ್ತಚಿಸವುದೆಂದರೆ ಅದರಲ್ಲಿ ದೋಷವು ತಗಲದಂತೆ ಆಸಕ್ತಿ ಮತ್ತು ಫಲಾಪೇಕ್ಷೆಯನ್ನು ತೊರೆಯುವುದೇ ಆಗಿದೆ ಎನ್ನುವ ಆಶಯವನ್ನು ಗೀತೆಯು ವಿವರಿಸಿದೆ. ಸಾಮಾನ್ಯ ಜನರು ಕರ್ಮ ಮತ್ತು ಅದರ ಲೌಕಿಕ ಫಲ ಇವೆರಡರಲ್ಲಿಯೂ ದೃಷ್ಟಿಯನ್ನಿಟ್ಟಿದ್ದರೆ ಅವುಗಳಲ್ಲಿ ಕರ್ಮವನ್ನು ಮಾತ್ರ ಪರಿಗ್ರಹಿಸಿ ಫಲವನ್ನು ಪರಿತ್ಯಜಿಸುವುದೇ ಕರ್ಮತ್ಯಾಗ ಹಾಗೂ ಕರ್ಮಾನುಷ್ಠಾನ ಇವೆರಡರ ಸಮನ್ವಯವಾಗಿದೆ. ಕರ್ಮಾನುಷ್ಠಾನದಲ್ಲಿ ಈ ತ್ಯಾಗವೃತ್ತಿಯನ್ನಾಗಲಿ ಸಂನ್ಯಾಸವೃತ್ತಿಯನ್ನಾಗಲಿ ಜೋಡಿಸುವುದರಿಂದ ಕರ್ಮಗಳನ್ನು ಆಚರಿಸಿದರೂ ಅದರ ದೋಷ, ಬಂಧನಗಳಿಗೆನಾವುಗುರಿಯಾಗುವುದಿಲ್ಲ. ತ್ಯಾಗ, ಸಂನ್ಯಾಸಗಳಲ್ಲಿರುವ. ಅಂತರವನ್ನೂ ನಾವು ಇಲ್ಲಿ ಪರಿಶೀಲಿಸಬೇಕಾಗಿದೆ. ತನಗಾಗಿ ಲೌಕಿಕ ಫಲವನ್ನು ಬಯಸಿದ್ದರೂ ಪರರ ಲೌಕಿಕ ಸುಖಕ್ಕಾಗಿ ಸ್ವಂತದ ಅಪೇಕ್ಷೆಯಿಲ್ಲದೆ ಮಾಡುವ ಕರ್ತವ್ಯದಲ್ಲಿ ತ್ಯಾಗ ವತ್ತಿಯಿದೆ. ತನ್ನಂತೆಯೇವರರಿಗೂ ಲೌಕಿಕಸುಖವನ್ನು ಅಪೇಕ್ಷಿಸದೆ ಅವರಿಗೂ ಜ್ಞಾನ, ಭಕ್ತಿ ಹರಿಪ್ರಸಾದಗಳನ್ನು ಮಾತ್ರ ಬಯಸಿ ಉನ್ನತ ಭಾವನೆಯಿಂದ ಮಾಡುವ ಕರ್ಮದಲ್ಲಿ ಸಂನ್ಯಾನವೃತ್ತಿಯು ಅಡಕವಾಗಿದೆ. ಈ ತ್ಯಾಗ, ಸಂನ್ಯಾಸಗಳೆರಡರಲ್ಲಿಯೂ ಕರ್ಮಾಚರಣೆಯು ಅನಿವಾರ್ಯವೇ. ಅನ್ಯರ ಸುಖಕ್ಕಾಗಿ ಹಾತೊರೆದು ಅನುಕಂಪಭಾವದಿಂದ ಸ್ವಸುಖನಿರಪೇಕ್ಟವಾಗಿ ಪ್ರವರ್ತಿಸುವ ಕರ್ಮಯೋಗಿಯ ತ್ಯಾಗದಲ್ಲಿ ಹಿರಿತನವಿದ್ದರೂ ತನ್ನಂತೆಯೇ ಅನ್ಯರ ಆಧ್ಯಾತ್ಮಿಕ ಉನ್ನತಿಯನ್ನೇ ಬಯಸುವ ಸಂನ್ಯಾಸಿಯ ಮನೋಭಾವವು ಹೆಚ್ಚು ಉದಾತ್ತವಾದುದು. ಇವರಿಬ್ಬರ ಆಚರಣೆಗಳೂ ಕರ್ಮದ ದೋಷಗಳನ್ನು ದಾಟಿ ನಿಂತಿವೆ. ವೈರಾಗ್ಯ ಭಕ್ತಿಗಳ ಧಾರೆಯಲ್ಲಿ ತೊಳೆದು ಸಿದ್ಧಗೊಳಿಸಿದ ಈ ಕರ್ಮದವಕ್ವಾನ್ನದಲ್ಲಿ ಆಸಕ್ತಿಯುಕ್ತಕರ್ಮಗಳಲ್ಲಿರುವ ಕಹಿ ದುರ್ಗಂಧಗಳು ಕಾಣಸಿಗವು. ಇಂತಹ ಕರ್ಮವನ್ನು ಸಾತ್ತ್ವಿಕವೆಂದು ಗೀತೆಯು ನಿರ್ದೇಶಿಸಿದೆ.
Bannanje Govindacharya (1936–2020)Bhagavad Gita Pravachana
ಕಾರ್ಯಮ್‌ ಇತಿ ಏವ ಯತ್‌ ಕರ್ಮ ನಿಯತಮ್‌ ಕ್ರಿಯತೇ ಅರ್ಜುನ | ಸಂಗಂ ತ್ಯಕ್ತ್ವಾ ಫಲಂ ಚ ಏವ ಸಃ ತ್ಯಾಗಃ Tod Br ಮತಃ - ಅರ್ಜುನಾ, ಕರ್ತವ್ಯ ದೃಷ್ಟಿಯಿಂದ ವಿಹಿತ ಕರ್ಮವನ್ನು ಮಾಡುತ್ತಲೇ ಮಮತೆಯನ್ನೂ ಫಲದ ಹಂಬಲವನ್ನೂ ತೊರೆಯುವುದು ಸಾತ್ತ್ವಿಕ ತ್ಯಾಗ ಎನಿಸುತ್ತದೆ. ನಿಯತಕರ್ಮವನ್ನು ಮಾಡದೇ ಇರಲು ಸಾಧ್ಯವಿಲ್ಲ ಎನ್ನುವ ಮಟ್ಟಕ್ಕೆ ನಮ್ಮ ಮನಸ್ಸು ತಲುಪಬೇಕು. ಈ ರೀತಿ ಸತ್ತ್ವಗುಣ ಮನಸ್ಸಿನಲ್ಲಿ ತುಂಬಿದಾಗ(ಅರ್ಜುನರಾದಾಗ)ಯಾವ ಕರ್ಮವನ್ನೂ AB ನಮಗೆ ಮನಸ್ಸಾಗುವುದಿಲ್ಲ. ಅಲ್ಲಿ ಫಲದ ಬಯಕೆ ಇರುವುದೇ ಇಲ್ಲ. ಸದಾ ಭಗವದರ್ಪಣ ಭಾವನೆಯಲ್ಲಿ ಖುಷಿಯಿಂದ ಕರ್ಮ ಮಾಡುವುದು; ಯಾವುದೇ ಅಹಂಕಾರ ಇಲ್ಲದೇ ಇರುವುದು; ಎಲ್ಲಾ ಕರ್ಮದ ಮಹತ್ವ ತಿಳಿದು ನಿಯತವಾಗಿ ಕರ್ಮ ಮಾಡುವುದು- ಸಾತ್ರ್ವಿಕತ್ಯಾಗ. ಇಲ್ಲಿ ತ್ಯಾಗ ಮಾಡುವುದು ಕರ್ಮವನ್ನಲ್ಲ ಬದಲಿಗೆ ಕರ್ಮ ಫಲವನ್ನು. ಹೀಗೆ ನಮ್ಮಲ್ಲಿರುವ ಗೊಂದಲಗಳಿಗೆ ಕೃಷ್ಣ ಅತ್ಯಂತ ಸರಳವಾದ ಉತ್ತರ ಕೊಟ್ಟ. ಒಟ್ಟಿನಲ್ಲಿ ಹೇಳಬೇಕೆಂದರೆ: ಫಲಾಪೇಕ್ಷೆ ಇಲ್ಲದೆ. ಅಹಂಕಾರ ತೊರೆದು ನಿಯತಕರ್ಮವನ್ನು ಮಾಡುವುದು ಸಾತ್ತ್ವಿಕ ತ್ಯಾಗ; ಸೋಮಾರಿತನದಿಂದ ಕಷ್ಟವಾಗುತ್ತದೆ ಎಂದು ನಿಯತಕರ್ಮವನ್ನು ಬಿಡುವುದು ರಾಜಸ ತ್ಯಾಗ ಮತ್ತು ತಪ್ಪು ತಿಳುವಳಿಕೆಯಿಂದ, “ಎಲ್ಲವೂ ಮೂಢನಂಬಿಕೆ' ಎಂದು ನಿಯತಕರ್ಮವನ್ನು ಮಾಡದೇ ಬಿಡುವುದು ತಾಮಸ
Bibek Debroy (1955–2024)The Bhagavad Gita
(9) ‘O Arjuna! Sattva-type relinquishing is known as that where attachment and fruits are relinquished and action is performed only because it is indicated action.’