स्वधर्ममपि चावेक्ष्य न विकम्पितुमर्हसि ।
धर्म्याद्धि युद्धाच्छ्रेयोऽन्यत्क्षत्रियस्य न विद्यते ॥
svadharmamapi cāvekṣya na vikampitumarhasi |
dharmyāddhi yuddhācchreyo'nyatkṣatriyasya na vidyate ||
Swami Sivananda (1887–1963)Bhagavad Gita
31. Further, having regard to thy own duty, thou shouldst not waver, for there is nothing
higher for a Kshatriya than a righteous war.
COMMENTARY: To a Kshatriya (one born in the warrior or ruling class) nothing is more
welcome than a righteous war.
Sri Vishwesha Tirtharu (1931–2019)Gitasaroddhara
ಧರ್ಮಯುದ್ಧದಿಂದ ಹಾನಿ ಇಲ್ಲ
ಧರ್ಮ ಯುದ್ಧ ದಿಂದ ಹಾನಿ ಇಲ್ಲ
ಮೇಲಿನ ಶ್ಲೋಕದಲ್ಲಿ ಯುದ್ಧದಿಂದ ಪರಲೋಕದಲ್ಲಿ ಅನರ್ಥವಾಗುವು
ದೆಂಬ ಭಯವನ್ನೂ ಪರಿಹರಿಸಲಾಗಿದೆ.
""ದುಷ್ಟ ಕೃತ್ಯಗಳಿಂದ ಒಳ್ಳೆಯದೂ ಸಂಭವಿಸದು; ಒಳ್ಳೆಯ ಕೃತ್ಯದಿಂದ
ಅನಿಷ್ಟವೂ ಘಟಿಸಲಾರದು'' ಎಂದೂ ಅದಕ್ಕೆ ಅರ್ಥವಾಗುವುದು.
ಇದು ದುರ್ಯೋಧನನ ವಿರುದ್ಧವಾಗಿ ಪಾಂಡವರು ನಡೆಸಿದ ದಾಯಾದಿ
ಗಳ ಜಗಳವಲ್ಲ. ಅಧರ್ಮದ ವಿರುದ್ಧವಾಗಿ ನಡೆದ ಧರ್ಮದ ಹೋರಾಟ
ವಾಗಿದೆ. ದುರ್ಯೋಧನನು ಮೊದಲಿನಿಂದಲೂ ಲೋಕಹಾನಿಕರವಾದ
ಕುಟಿಲ ಹಾಗೂ ಸ್ವಾರ್ಥಪರ ನೀತಿಯಿಂದಲೇ ರಾಜ್ಯವನ್ನು ನಡೆಸುತ್ತಿದ್ದನು.
ಅವನಿಗೆ ಕಲಿಂಗ ಅಥವಾ ಕಣಿಕ ಎಂಬ ಕುಟಿಲ ನೀತಿಯ ಗುರುವಿನಿಂದ
ಸ್ವಾರ್ಥಧರ್ಮದ ಉಪದೇಶವು ಬಾಲ್ಯದಿಂದಲೇ ದೊರೆತಿತ್ತು. ಆ ದಾರಿಯಲ್ಲೇ
ಆತ ನಡೆದು ಲೋಕದ ವಾತಾವರಣವನ್ನೇ ಕೆಡಿಸಿದ್ದ. ಭೀಷ್ಮಾದಿಗಳಂತಹ
ಮಹಾತ್ಮರಿಗೂ ಅವನ ಈ ಅನ್ಯಾಯವನ್ನು ಪ್ರತಿಭಟಿಸುವ ಶಕ್ತಿ ಕುಗ್ಗಿಹೋಗಿತ್ತು
ಶ್ರೀಮದಾಚಾರ್ಯರು ಹೇಳಿದಂತೆ -
ಛದ್ಮೈವ ಯತ್ರ ಪರಮಂ ನಸುರಾಶ್ಚ ಪೂಜ್ಯಾಃ
ಸ್ವಾರ್ಥೇನ ವಂಚನಕೃತೇ ಜಗತೋನಖಿಲಂ ಚ [
ಧರ್ಮಾದಿ ಕಾರ್ಯಮಪಿ ಯತ್ರ ಮಹೋಪಧಿಃ ಸ್ಯಾತ್
ಶ್ರೇಷ್ಠಃ ಸ ಏವ.....!!
-ತಾತ್ಪರ್ಯನಿರ್ಣಯ
"ಜೀವನದಲ್ಲಿ ಕಪಟಕ್ಕೆ ಪ್ರಧಾನ ಸ್ಥಾನವಿರಬೇಕು. ಸ್ವಾರ್ಥಕ್ಕಾಗಿ ಏನು
ಬೇಕಾದರೂ ಮಾಡಬೇಕು. ದೇವತೆಗಳ ಪೂಜೆಗೆ ಸ್ಥಾನವಿಲ್ಲ. ಜಗತ್ತಿನ
ವಂಚನೆಗಾಗಿ, ಸ್ವಾರ್ಥ ಸಾಧನೆಗಾಗಿ ಮಾತ್ರ ಧರ್ಮದ ನಾಟಕವನ್ನು
ಆಡಬೇಕು.'' ಈ ಮಾದರಿಯ ಭೋಗಪರವಾದ ನಾಸ್ತಿಕ ನೀತಿಯ
ಉಪದೇಶವನ್ನು ಪಡೆದು ಆ ಕುಟಿಲತಂತ್ರಗಳನ್ನೆಲ್ಲ ತಿಳಿದು ಆ ಮಾದರಿಯಲ್ಲೇ
ನಡೆಯುವ ದುರ್ಯೋಧನನ ಪ್ರಬಲವಾದ ದುಷ್ಟಶಕ್ತಿಯಿಂದ ಸಂಭವಿಸಿದ
ಲೋಕದ ವಿಷವಾತಾವರಣವನ್ನು ಸರಿಪಡಿಸುವುದೇ ಈ ಮಹಾಭಾರತ
ಯುದ್ಧದ ಮುಖ್ಯ ಉದ್ದೇಶವಾಗಿತ್ತು. ಹೀಗೆ ಸ್ವಾರ್ಥರಹಿತವಾದ ವಿಶ್ವ
ಕಲ್ಯಾಣಕಾರಕವಾದ ಈ ಯುದ್ಧದಿಂದ ಶ್ರೇಯಸ್ಸು ದೊರಕಬಹುದಲ್ಲದೆ ನರಕದ
ಸಂಭವವೆಲ್ಲಿ?
ಧರ್ಮ್ಯಾದ್ಧಿ ಯುದ್ಧಾಚ್ಛ್ರೀಯೋನ್ಯತ್
ಕೃತ್ರಿಯಸ್ಯ ನ ವಿದ್ಯತೇ ।
""ಧರ್ಮಸಾಧನವಾದ ಯುದ್ಧಕ್ಕಿಂತ ಮಿಗಿಲಾದ ಶ್ರೇಯೋಮಾರ್ಗವು
ಕೃತ್ರಿಯನಿಗಿಲ್ಲ.''
ಬರಿಯ ಯುದ್ಧದಿಂದ ಕ್ಚತ್ರಿಯನಿಗೆ ಶ್ರೇಯಸ್ಸಾಗುವುದೆಂದು ಇಲ್ಲಿ ಕೃಷ್ಣನ
ಅಭಿಪಾ,ಯವಲ. ಯುದವ ದರ್ಮ ನಾಗಿ ವಾಡ 03೩ ತೆ ಪಡದ ದ
ಹಿಂದಿನ ಕಾಲದಲ್ಲಿ ಕೃತ್ರಿಯರಲ್ಲಿ ಬರೇ ಯುದ್ಧ ನೀತಿಗೆ ಪ್ರೋತ್ಸಾಹವನ್ನು
ನೀಡಲಾಗುತ್ತಿತ್ತು ಎಂದು ಕೆಲವರು ಆಕ್ಷೇಪಿಸುವುದುಂಟು. ಧ್ಯೇಯರಹಿತವಾದ
ಬರಿ ಸಾಮ್ರಾಜ್ಯವಿಸ್ತರಣೆಯ ಸಮರ ಕಾರ್ಯವನ್ನು ಶ್ರೀಕೃಷ್ಣನು
ಸಮರ್ಥಿಸಲಿಲ್ಲ. ವೃಥಾ ಸ್ವಾರ್ಥ ಸಾಧನೆಗಾಗಿ ಭಯಾನಕ ಸಮರವನ್ನು
ಆರಂಭಿಸುವವನನ್ನು ಲೋಕಕಂಟಕ, ಲೋಕಕ್ಷಯಕಾರಕ ಎಂದೇ
ಕರೆಯಲಾಗುತ್ತಿತ್ತು. ಲೋಕಹಿತಕಾರಿಯಾದ ಒಂದು ವಿಶಿಷ್ಟ ತತ್ತ್ವವನ್ನು
ಸಾಧಿಸುವುದಕ್ಕಾಗಿ ನಡೆಸುವ ಅನಿವಾರ್ಯವಾದ ಸಮರವೇ ಧರ್ಮಯುದ್ಧ.
ಅದರಲ್ಲಿ ಭಾಗವಹಿಸಿ ವೀರತನದಿಂದ ಹೋರಾಡಿ ಪ್ರಾಣವನ್ನು
ಅರ್ಪಿಸುವವರನ್ನು ವಿಶೇಷವಾಗಿ ಪ್ರಶಂಸಿಸಲಾಗಿದೆ. ಅವರೇ ವೀರಸ್ವರ್ಗದ
ಅಧಿಕಾರಿಗಳು. ಇಂತಹ ಪವಿತ್ರ ಧ್ಯೇಯವಿಲ್ಲದ, ಸಾಮ್ರಾಜ್ಯಶಾಹಿ
ಮನೋವೃತ್ತಿಯ ಆಕ್ರಮಣ ಭಾವನೆಯ ಸ್ವಾರ್ಥಿ ಸಮರವನ್ನು ನಮ್ಮ ಶಾಸ್ತ್ರಗಳು
ಪ್ರೋತ್ಸಾಹಿಸಿಲ್ಲ. ಈಗಪಾಂಡವರು ನಡೆಸಲಿದ್ದ ಯುದ್ಧವು ಇಂತಹ ಧಾರ್ಮಿಕ
ಹೋರಾಟವಾಗಿತ್ತು. ಆದ್ದರಿಂದ ವಿಶ್ವದಲ್ಲಿ ಧರ್ಮಸಂಸ್ಥಾವನೆಗೆ ಅತ್ಯಂತ
ಸಹಾಯಕವಾದ ಇಂತಹ ಹೋರಾಟದ ಸಂದರ್ಭವು ಜೀವನದಲ್ಲಿ ಸಿಗುವುದು
ಬಹಳ ಕಡಿಮೆ. ಅರ್ಜುನನಿಗೆ ಈ ಅಪೂರ್ವ ಸಂಧಿಯು ದೊರಕಿರುವುದು
ಸ್ವರ್ಗದ ದ್ವಾರವನ್ನು ತೆರೆದಂತೆ ಆಗಿದೆ ಎಂದು ಶ್ರೀಕೃಷ್ಣನು ಅಪ್ಪಣೆ
ಕೊಡಿಸುತ್ತಾನೆ.
Bannanje Govindacharya (1936–2020)Bhagavad Gita Pravachana
ಸ್ವಧರ್ಮಮ್ ಅಪಿ ಚ ಅವೇಕ್ಷ್ಯ ನ ವಿಕಂಪಿತುಮ್ ಅರ್ಹಸಿ |
ಧರ್ಮ್ಯಾತ್ ಹಿ ಯುದ್ಧಾತ್ ಶ್ರೇಯಃ ಅನ್ಯತ್ ಕ್ಷತ್ರಿಯಸ್ಯ ನ ವಿದ್ಯತೇ ~ ನಿನ್ನ ಧರ್ಮವನ್ನು ಕಂಡಾದರೂ ನೀನು
ಎದೆಗೆಡಬಾರದು ಕ್ಷತ್ರಿಯನಾದವನಿಗೆ ನ್ಯಾಯದಿಂದ ಒದಗಿ ಬಂದ ಕಾಳಗಕ್ಕಿಂತ ಮಿಗಿಲಾದ ಏಳಿಗೆಯಿಲ್ಲ.
ಇಲ್ಲಿ ಅರ್ಜುನನ ಸನಾತನ ಧರ್ಮ ಯಾವುದು? ಸಮಾಜ ಧರ್ಮ ಯಾವುದು? ಹಾಗೂ ಸ್ವಧರ್ಮ ಯಾವುದು?
ಸನಾತನ ಧರ್ಮ ಹೇಳುತ್ತದೆ: "ಅನ್ಯಾಯದ ವಿರುದ್ಧ ಹೋರಾಡಲೇ ಬೇಕು' ಎಂದು; ಸಮಾಜ ಧರ್ಮ
ಹೇಳುತ್ತದೆ: ಕ್ಷತ್ರಿಯನಾದವನು ಅಧರ್ಮದ ವಿರುದ್ಧ ಹೋರಾಡಬೇಕು, ಸಮಾಜದ ರಕ್ಷಣೆ ಮಾಡಬೇಕು ಹಾಗೂ
ಈ ಪುಣ್ಯ ಕಾರ್ಯದಲ್ಲಿ 'ತನ್ನವರು' ಎಂದು ನೋಡಬಾರದು ಎಂದು. ಇನ್ನು ಅರ್ಜುನ ಮೂಲತಃ
ಕ್ಷತ್ರಿಯನಾದ್ದರಿಂದ ಆತನ ಸ್ವಧರ್ಮ “ಅನ್ಯಾಯದ ವಿರುದ್ಧ ಹೋರಾಟ'. ಇಲ್ಲಿ ವ್ಯಕ್ತಿಧರ್ಮ, ಸಮಾಜಧರ್ಮ
ಹಾಗೂ ಸನಾತನಧರ್ಮ ಏಕವಾಗಿದೆ. ಆದ್ದರಿಂದ ಅನ್ಯಾಯದ ವಿರುದ್ಧ ಹೋರಾಡುವುದು ಮಹಾ ಪುಣ್ಯದ
ಕೆಲಸ. ಸಮಾಜ ಸುರಕ್ಷತೆಗಾಗಿ ಹೋರಾಡುವುದು ಕ್ಷತ್ರಿಯನ ಮಹಾತಪಸ್ಸು. ಇದಕ್ಕಿಂತ ಪುಣ್ಯಕಾರ್ಯ
Bibek Debroy (1955–2024)The Bhagavad Gita
(31)28
‘Also considering your natural dharma, you should not waver. Because
there is nothing better for a kshatriya than a war fought for the sake of
dharma.’