कामात्मानः स्वर्गपरा जन्मकर्मफलप्रदाम् ।
क्रियाविशेषबहुलां भोगैश्वर्यगतिं प्रति ॥
kāmātmānaḥ svargaparā janmakarmaphalapradām |
kriyāviśeṣabahulāṃ bhogaiśvaryagatiṃ prati ||
Sri Madhvacharya (1238–1317)Bhagavad Gita Tatparya Nirnaya
2.42–2.44
‘प्रारम्भमात्रमिच्छा वा विष्णुधर्मे न निष्फला।
न चान्यधर्माकरणाद्दोषवान् विष्णुधर्मकृत्’ इत्याग्नेये।
‘स्वोचितेनैव धर्मेण विष्णुपूजामृते क्वचित्।
नाप्रवृत्तिः प्रवृत्तिर्वा यत्र धर्मः स वैष्णवः।
एनं धर्मं च देवाद्या वर्तन्ते सात्त्विका जनाः।
एष कार्तयुगो धर्मः पाञ्चरात्रश्च वैदिकः।
तत्प्रीत्यर्थं विनाऽन्यस्मैनोदबिन्दुं न तण्डुलम्।
दद्यान्निराशीश्च सदा भवेद्भक्तस्च केशवे।
न तत्समेऽधिके वाऽपि कुर्याच्छङ्कामपि क्वचित्।
जानीयात् तदधीनं च सर्वं तत्तत् त्ववित् सदा।
यथाक्रमं तु देवानां तारतम्यविदेव च।
एष भागवतो मुख्यस्त्रेतादिषु विशेषतः।
एष धर्मोऽतिफलदो विशेषेण पुनः कलौ।
एवं भागवतो यस्तु स एव हि विमुच्यते।
त्रैविद्यस्त्वपरो धर्मो नानादैवतपूजनम्।
तत्राहि विष्णुर्ज्ञातव्यः सर्वेभ्योऽभ्यधिको गुणैः।
समर्पयति यज्ञाद्यमन्ततस्त्वेव विष्णवे।
त्रैविद्यधर्मा पुरुषः स्वर्गं भुक्त्वा निवर्तते।
पुनः कुर्यात् पुनः स्वर्गं याति यावद्धरेर्वशे।
सर्वान् देवान् प्रविज्ञाय तत्कर्मैव सदा भवेत्।
सम्यक्तत्वापरिज्ञानादन्यकर्मकृतेरपि।
स्वर्गादिप्रार्थनाच्चैव रागादेश्चापरिक्षयात्।
सदा विष्णोरस्मरणात् त्रैविद्यो नाप्नुयात् परम्।
क्रमेण मुच्यते विष्णौ कर्माण्यन्ते समर्पयन्।
यदि सर्वाणि नियमाज्जन्मभिर्बहुभिः शुभैः।
परं विष्णुं न यो वेत्ति कुर्वाणोऽपि त्रयीक्रियाः।
नासौ त्रैविद्य इत्युक्तो वेदवादी स उच्यते।
वादो विवादः सम्प्रोक्तो वादो वचनमेव च।
वेदोक्ते विष्णुमाहात्म्ये विवादात् पठनादपि।
अथवा निरर्थकात् पाठाद्वेदवादी स उच्यते।
वेदावादरतो न स्यान्न पाषण्डी न हैतुकी।
तेभ्यो याति तमो घोरमन्धं यस्मान्न चोत्थितिः।
अनारम्भमनन्तं च नित्यदुःखं सुखोज्झितम्।
वव्रं यद्वेदगदितं यत्र यान्त्यसुरादयः।
बुद्धिर्निर्णीततत्वानामेका विष्णुपरायणा।
बहुशाखा ह्यनन्ताश्च बुद्धयोऽव्यवसायिनाम्’
इति ब्रह्मवैवर्ते॥40-44॥
अव्यवसायबुद्धिः केषाम्? यां वाचमविपश्चितः प्रवदन्ति। तयाऽपहृतचेतसाम्।
बुद्धिर्व्यवसायात्मकत्वेन समाधाने न वर्तते।
‘यथावस्तु तथा ज्ञानं तत्साम्यात् सममीरितम्।
विषमं त्वन्यथाज्ञानं समाधानं समस्थितिः।
न तद्भवत्यसद्वाक्यैर्विषमीकृतचेतसाम्।
स्वर्गादिपुष्पवाद्येव वचनं यदचेतसाम्।
न मन्यन्ते फलं मोक्षं विष्णुसामीप्यरूपकम्।
फलदं च न मन्यन्ते तं विष्णुं जगतः पतिम्।
भोगैश्वर्यानुगत्यर्थं क्रियाबाहुल्यसन्तताम्।
बहुसंसारफलदामन्ते तमसि पातिनीम्।
यां वदन्ति दुरात्मानो वेदवाक्यविवादिनः।
तया सम्मोहितधियां कथं तत्त्वज्ञता भवेत्’ इति च
‘इष्टापूर्तं मन्यमाना वरिष्ठं नान्यच्छ्रेयो वेदयन्ते प्रमूढाः। नाकस्य पृष्ठे सुकृते तेऽनुभूत्वा इमं लोकं
हीनतरं वा विशन्ति’ इति चाथर्वणीयश्रुतिः।
‘वेदावादरतो न स्यान्न पाषण्डी न हैतुकी’ इति हि भागवते।
‘ये न जानन्ति तं विष्णुं यथातथ्येन संशयात्।
जिज्ञासवश्च नितरां श्रद्धावन्तः सुसाधवः।
निर्णीतृणामभावेन केवलं ज्ञानवर्जिताः।
ते याज्ञिकाः स्वर्गभोगक्षये यान्ति मनुष्यताम्।
यैर्निश्चितं परत्वं तु विष्णोः प्रायो न यातनाम्।
ब्रह्महत्यादिभिरपि यान्त्याधिक्ये चिरं न तु।
विशेष एव तेषां तु तदन्येषां विपर्ययः।
ये तु भागवताचार्यैः सम्यग्यज्ञादि कुर्वते।
बहिर्मुखा भगवतो निवृत्ताश्च विकर्मणः।
दक्षिणातर्पितानां तु ह्याचार्याणां तु तेजसा।
यान्ति स्वर्गं ततः क्षिप्रं तमोऽन्धं प्राप्नुवन्ति च।
तदन्ये नैव च स्वर्गं यान्ति विष्णुबहिर्मुखाः’ इति नारदीये॥42-44॥
Swami Sivananda (1887–1963)Bhagavad Gita
43. Full of desires, having heaven as their goal, they utter speech which promises birth as the
reward of one’s actions, and prescribe various specific actions for the attainment of pleasure and
power.
Sri Vishwesha Tirtharu (1931–2019)Gitasaroddhara
2.42–2.47 · ವೇದ ಮತ್ತು ಕಾಮ್ಯಕರ್ಮ
ವೇದ ಮತ್ತು ಕಾಮ್ಯಕರ್ಮ
ವೇದಗಳಲ್ಲಿ ಕಾಮ್ಯಕರ್ಮಗಳ ಪ್ರತಿಪಾದನೆ ಇದೆ. ಜ್ಯೋತಿಷ್ಟೋಮ
ಮುಂತಾದ ಯಜ್ಞಗಳ ಅನುಷ್ಯುನದಿಂದಸ್ವರ್ಗವನ್ನುವಡೆಯಬಹುದೆಂದು ಅಲ್ಲಿ
ಹೇಳಲಾಗಿದೆ. ಯಾವ ಕಾಮನೆಯೂ ಇಲ್ಲದೆ ಕರ್ತವ್ಯವನ್ನು ಮಾಡಬೇಕೆಂದು
ಗೀತೆಯು ಹೇಳುವುದು ವೇದವಿರೋಧಿ ವಿಚಾರವಲ್ಲವೇ ಎಂಬ ಸಂಶಯ
ಮೂಡಬಹುದು. ಆದರೆ ಸ್ವರ್ಗದ ಭೋಗವನ್ನು ಪಡೆಯುವುದಕ್ಕಾಗಿ ಯಜ್ಞ
ಯಾಗಾದಿಗಳನ್ನು ಬೋಧಿಸುವುದೇವೇದದ ಗುರಿಯಲ್ಲ. ವೇದದ ನಿಜವಾದ
ಅಂತರಾರ್ಥವನ್ನುತಿಳಿಯದೆ ಜ್ಞಾನ ರಹಿತವಾದ ಶುಷ್ಕಕರ್ಮಕಾಂಡದ ಕಡೆಗೆ
ವೇದವನ್ನು ಎಳೆದು ವೇದಕ್ಕೆ ಅಪಚಾರ ಎಸಗಿದವರು ಮೀಮಾಂಸಕರು. ಸ್ವರ್ಗದ
ಸುಖಭೋಗದ ಆಮಿಷವನ್ನು ಜನರ ಮುಂದಿಟ್ಟು ಕೇವಲ ಕರ್ಮಕಾಂಡದ
ವ್ರಸ್ಥವನ್ನು ದೇಶದಲ್ಲಿ ಬೆಳೆಸಿ ಇಲ್ಲಿ ಪೂರೈಸಲಾಗದ ಭೋಗಲಾಲಸೆಯನ್ನು
ಮಾತ್ರ ಜಾಗೃತಗೊಳಿಸಿದರು. ಇದರಿಂದ ಜ್ಞಾನ, ಅಧ್ಯಾತ್ಮಚಿಂತನವೆಲ್ಲ
ಸ್ಥಗಿತವಾಗುವಂತಾಯಿತು. ಇವರು ವೇದವೇತ್ವರಲ್ಲ ವೇದವಾದಿಗಳು; ಬರೇ
ವೇದಪಾಠಕರು. ಮರವು ಹೂ ಬಿಟ್ಟಾಗ ಅದರಿಂದ ಉಂಟಾಗುವ ಮಧುರ
ಫಲಕ್ಕಾಗಿ ಕಾಯದೆ ಹೂವಿನ ಪರಿಮಳಕ್ಕಾಗಿ ಆತುರತೆಯಿಂದ ಹೂವನ್ನೇ
ಕಿತ್ತುಕೊಂಡು ಹಣ್ಣನ್ನು ಕಳೆದುಕೊಳ್ಳುವವರಂತೆ ಇವರಸ್ಥಿತಿಯಾಗಿದೆ. ವೇದವು
ಮಾಡಿದ ಕಾಮ್ಮಕರ್ಮಗಳ ಬೋಧನೆಯ ಉದ್ದೇಶವನ್ನು ಅರಿಯದೆ
ಭೋಗಪ್ರಧಾನವಾದ ಸಾಮಾನ್ಯ ಫಲಗಳನ್ನೇ ಆಶಿಸಿದರೆ ಶಾಸ್ತ್ರದ
ಅಮೃತಫಲವನ್ನೇ ನಾವು ಕಳೆದುಕೊಳ್ಳುತ್ತೇವೆ. ಮೀಮಾಂಸಕರು ಇಂತಹ
ವ್ರಮಾದವನ್ನುಮಾಡಿದರು. ಅದನ್ನೇ-
ಯಾಮಿಮಾಂ ಪುಷ್ಟಿತಾಂ ವಾಚಮ್ ।
ಎಂಬ ಶ್ಲೊ ೇಕದಲ್ಲಿ ನಿಂದಿಸಲಾಗಿದೆ.
ವೇದವೇನೋ ಸ್ವರ್ಗಸುಖಗಳ ಮಾತನ್ನು ಹೇಳಿದೆ. ಭೋಗ ಪ್ರವೃತ್ತಿಯ
ಸಾಮಾನ್ಯ ಜನರ ಮನಸ್ಸನ್ನು ವರಮಾತ್ಮನ ಕಡೆಗೆ ತಿರುಗಿಸುವ ಕಾರ್ಯದ
ಮೊದಲನೇ ಹಂತವಾಗಿ ಸ್ವರ್ಗ ಹಾಗೂ ಐಹಿಕ ಫಲಗಳಿಗಾಗಿ ಅನೇಕ
ಕರ್ಮಗಳನ್ನು ಬೋಧಿಸಿದೆ. ಅದೇ ಅದರ ಅಂತಿಮ ಉದ್ದೇಶವಲ್ಲ, ತಾಯಿಯು
ಮಕ್ಕಳಿಗೆ ಕಹಿ ಔಷಧ ನೀಡಲು ಪ್ರಾರಂಭಿಕವಾಗಿ ಸಕ್ಕರೆಯನ್ನು ನೀಡುವಂತೆ
ವೇದವುಸ್ವರ್ಗದ ಅಮಿಷವನ್ನು ನಮ್ಮ ಮುಂದೆ ಇಡುವುದುಂಟು. ವೇದದ ಈ
ಮಾತೃೃದಯದವಾತ್ಸಲ್ಯ ಭಾವವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನಮ್ಮ
ನಮ್ಮ ಮಾನಸಿಕ ಮಟ್ಟವನ್ನು ಅನುಸರಿಸಿ ನಮ್ಮ ಆತ್ಮವನ್ನು ಎತ್ತರಿಸಲು ವೇದವು
ಪ್ರವೃತ್ತವಾಗಿದೆ. ಇದನ್ನೇ ಭಾಗವತದಲ್ಲಿ
ರೋಚನಾರ್ಥಂ ಫಲಶ್ರುತಿಃ ।
ಎಂದು ಹೇಳಿದೆ. ಛಾಂದೋಗ್ಯೋಪನಿಷತ್ತಿನಲ್ಲಿ ಒಂದು ವರ್ಣನೆ ಇದೆ.
ಮೃತ್ಯುವು ಜೀವನನ್ನು ಹಿಡಿಯಬೇಕೆಂದು ಆತನನ್ನು ನೋಡಿದಾಗ ಅವನು ಬೆದರಿ
ವೇದದ ಆಶ್ರಯವನ್ನು ಪಡೆದನು. ಮೀನು ನೀರಿನಲ್ಲಿ ಇದ್ದರೂ ಅದನ್ನು
ಹಕ್ಕಿಯು ತನ್ನ ಉದ್ದನೆಯ ಕೊಕ್ಕಿನಿಂದ ಹಿಡಿಯುವಂತೆ ಮೃತ್ಯುವು ಮುಂದೆ
ಬಂದಾಗ ಜೀವನು. ಇನ್ನೂ ಒಳಗೊಳಗೆ ಸೇರಿಕೊಂಡು ಮೃತ್ಯುವಿನಿಂದ
ಪಾರಾದನು. ನೀರಿನಲ್ಲಿ ಆಳವಾಗಿ ಒಳ ಹೊಕ್ಕಿರುವ ಮೀನನ್ನು ಹಕ್ಕಿ ಏನೂ
ಮಾಡಲಾರದು. ವೇದದಲ್ಲಿ ಮೇಲಿಂದ ಮೇಲೆ ಹರಿದಾಡಿದರೆ ಏನೂ
ಪ್ರಯೋಜನವಾಗಲಾರದು. ವೇದದ ಒಳಹೊಕ್ಕು ಆಳವಾಗಿ ವಿಮರ್ಶಿಸಿ ಅದರ
ಅಂತರಾರ್ಥವನ್ನು ತಿಳಿದರೆ ಮಾತ್ರ ನಾವು ಮೃತ್ಯುವಿನಿಂದ ಅಮೃತತ್ತ್ವದ ಕಡೆಗೆ
ನಾಗಬಲ್ಲೆವೆಂದು ಇದರತಾತ್ಪರ್ಯವಾಗಿದೆ.
ತೈಗುಣ್ಯ ವಿಷಯಾ ವೇದಾಃ
ನಿಸ್ತ `ಗುಣ್ಯೋ ಭವಾರ್ಜುನ।
ಈ ಶ್ಲೋಕದಿಂದ ಶ್ರೀಕೃಷ್ಣನು '“ವೇದವು ತ್ರಿಗುಣಜನ್ಯವಾದ ಕರ್ಮವನ್ನು
ಹೇಳಿದರೂ ನೀನು ಅದನ್ನು ಮಾಡಬೇಡ'' ಎಂದು ವೇದದ ನಿರಾಕರಣೆ
ಮಾಡಿರುವನೆಂದೇ ಆಪಾತವಾಗಿ ಪ್ರತೀತಿಯಾಗುವುದು. ಇದರಿಂದ ವೇದದ
ವಿಚಾರವನ್ನು ಅಲ್ಲಗಳಿದು ಗೀತೆಯು ಹೊಸ ಹೆಜ್ಜೆಯನ್ನು ಇಟ್ಟಿದೆಯೆಂದು
ಕೆಲವರು ಪ್ರತಿವಾದಿಸುತ್ತಾರೆ. ಆದರೆ ನಿಷ್ಕುಮಕರ್ಮವು ಗೀತೆಯ ಹೊಸ
ವಿಚಾರವಲ್ಲ. ಉಪನಿಷತ್ತಿನಲ್ಲಿ ಈ ನಿಷ್ಕುಮಕರ್ಮದ ಮಾತು ಅನೇಕ ಕಡೆ
ಬರುತ್ತದೆ. ಈಶಾವಾಸ್ಯದಲ್ಲೇ ಇದರಸುಂದರನಿರೂಪಣೆಇರುವುದು. ವೇದದಿಂದ
ಕಾಮ್ಯಧರ್ಮದ ಬೋಧೆಯಾದರೂ ಅದರ ನಿಜಾರ್ಥವನ್ನು ಅರಿತು
ಕಾಮ್ಯಧರ್ಮಗಳ ಕಡೆಗೆ ನಮ್ಮ ಮನವನ್ನು ಹರಿಸದೆ ವೇದದ ಪರಮ
ತಾತ್ಪರ್ಯವಿಷಯವಾದ ನಿಷ್ಕುಮಧರ್ಮವನ್ನು ಆಚರಿಸುವುದೇ ನಮ್ಮ
ಧ್ಯೇಯವಾಗಿರಬೇಕೆಂಬುದು ಶ್ರೀಕೃಷ್ಣನ ಆಶಯವಾಗಿದೆ.
ವೇದಗಳು ದೊಡ್ಡಸರೋವರದಂತೆಇದ್ದುಎಲ್ಲ ಬಗೆಯ ವಿಚಾರಗಳನ್ನು
ಒಳಗೊಂಡಿರುವವು. ಸರೋವರದಲ್ಲಿಯ ನೀರನ್ನು ನಮಗೆ ಬೇಕಾಗುವಷ್ಟು
ತೆಗೆದುಕೊಳ್ಳುವಂತೆ ವೇದಗಳಲ್ಲಿಯ ವಿಚಾರಗಳನ್ನು ಸರಿಯಾಗಿ ಮಥನಮಾಡಿ
ನಮಗೆ ಯಾವುದು ಯೋಗ್ಯವೋ ಯಾವುದು ಜೀರ್ಣವಾಗುವುದೋ ಅದನ್ನು
ಸ್ವೀಕರಿಸಬೇಕು. ಆತ್ಮದ ಮಟ್ಟವನ್ನು ಎತ್ತರಿಸಬೇಕೆಂಬುದೇ ವೇದದ
ಉದ್ದೇಶವಾಗಿದೆ. ಜ್ಞಾನದಲ್ಲಿ ಅಭಿರುಚಿ ಹುಟ್ಟಿಸಲು, ಪರಮಾತ್ಮನಲ್ಲಿ
ಭಕ್ತಿಯನ್ನು ಹುಟ್ಟಿಸಲು ವೇದಗಳು ಕಾಮ್ಯಕರ್ಮಗಳನ್ನು ಬೋಧಿಸುವವು.
ವರೀಕ್ಷೆಯಲ್ಲಿ ಉತ್ತಮ ರೀತಿಯಿಂದ ಉತ್ತೀರ್ಣನಾದವನಿಗೆ ಬಹುಮಾನದ
ಆಮಿಷ ತೋರಿಸುವಂತೆ ವೇದದ ಬೋಧನೆಯಾಗಿದೆ. ವಿದ್ಯಾರ್ಥಿಯಲ್ಲಿ
ವಿದ್ಯಾಭಿರುಚಿಯನ್ನು ಬೆಳೆಸುವುದೇ. ಬಹುಮಾನ ನೀಡುವ
ಉದ್ದೇಶವಾಗಿರುವುದು. ಸ್ವರ್ಗಸುಖಗಳಿಗಾಗಿ ಕರ್ಮವನ್ನು ಬೋಧಿಸುವ
ವೇದದ ಆಶಯವೂಇದೇ ಆಗಿದೆ. ಇದೇ ವೇದದ ಅಂತಿಮ ಉದ್ದೇಶವೆಂದು
ಭಾವಿಸಬಾರದು. ಭಗವಂತನ ಜ್ಞಾನ ಪಡೆದು ಭಕ್ತಿಯಿಂದ ನಿಷ್ಕ್ರಮಕರ್ಮವನ್ನು
ಆಚರಿಸುವುದೇ ವೇದಗಳ ತಾತ್ಚರ್ಯಾರ್ಥವಾಗಿರುವುದರಿಂದ ಶಾಸ್ತ್ರದ ಬಗ್ಗೆ
ತಪ್ಪುತಿಳುವಳಿಕೆ ಮಾಡಿಕೊಳ್ಳಲು ಅವಕಾಶವಿಲ್ಲ.
ಇನ್ನೂ ಒಂದು ವಿಷಯವನ್ನುಇಲ್ಲಿ ನಾವು ಗಮನದಲ್ಲಿ ಇಟ್ಟುಕೊಳ್ಳಬೇಕು.
ವೇದವು ವಲದ ಆಶೆಯಿರುವವನಿಗಾಗಿ ಅನೇಕ ಕರ್ಮಗಳನ್ನು ಬೋಧಿಸಿದರೂ
ಫಲದ ಕಾಮನೆಯನ್ನು ಮಾಡಬೇಕೆಂದು ಎಲ್ಲಿ ಯೂ ವಿಧಿಸಿಲ್ಲ ಮೋಕ್ಷದ ಇಚ್ಛೆ
ಹಾಗೂ ಆತುರತೆಯನ್ನು ಒತ್ತಿಹೇಳಿದಂತೆ ಫಲಕಾಮನೆಯ ಬಗ್ಗೆ ವಿಧಿವಾಕೃವಿಲ್ಲ.
ಫಲದ ಆಶೆ ಇದ್ದವರು ಇಂತಹ ಕರ್ಮಗಳನ್ನು ಮಾಡಲಿಎಂದು ಹೇಳುವುದರಿಂದ
ಆಶೆಯನ್ನು ಅದು ಬೋಧಿಸಿದಂತೆ ಆಗುವುದಿಲ್ಲ. ಹಣದ ಆಶೆಯುಳ್ಳವನಿಗಾಗಿ
ಒಂದು ಒಳ್ಳೇ ಕೆಲಸ ಕೊಟ್ಟು ಸಂಬಳ ನೀಡುವುದರಿಂದ ನಿರಪೇಕ್ಷೆ ಯಿಂದಏನೂ
ಸಂಬಳಪಡೆಯದೆ ಆಕೆಲಸವನ್ನು ಇನ್ನೊಬ್ಬಮಾಡಬಾರದೆಂದು ಆಗುವುದಿಲ್ಲ.
ಸ್ವರ್ಗ ಮುಂತಾದ ಫಲಾತೆಯಿಂದ ಮಾಡಬಹುದಾದ ಕಾರ್ಯಗಳನ್ನೇ
ಫಲಾಶೆಯನ್ನುತೊರೆದೂ ಮಾಡಲು ಅವಕಾಶವಿದೆ.
ಕರ್ಮಣ್ಯೇವಾಧಿಕಾರಸ್ತೆ (
ಮಾ ಫಲೇಷು ಕದಾಚನ ।
"ವೇದವು ಕರ್ಮವನ್ನು ಮಾತ್ರ ವಿಧಾನಮಾಡಿದೆ. ಫಲಾಶೆಯನ್ನು ಅದು
ವಿಧಿಸಲಿಲ್ಲ.''
Bannanje Govindacharya (1936–2020)Bhagavad Gita Pravachana
ಕಾಮ ಆತ್ಮಾನಃ ಸ್ವರ್ಗ ಪರಾಃ ಜನ್ಮ ಕರ್ಮ ಫಲ ಪ್ರದಾಮ್ |
ಕ್ರಿಯಾ ವಿಶೇಷ ಬಹುಲಾಮ್ ಭೋಗ ಐಶ್ವರ್ಯ ಗತಿಮ್ ಪ್ರತಿ -- ಐಷಾರಾಮದ ಐಸಿರಿಯ ಬದುಕಿಗಾಗಿ ಅದರ
ತುಂಬಾ ಬಗೆ ಬಗೆಯ ಕರ್ಮ ಕಲಾಪಗಳು. ಅವರು ವೇದದ ಹೊರನೋಟದ ಅರ್ಥದಲ್ಲೇ ನಿಂತುಬಿಡುವರು.
[ವೇದದಲ್ಲಿ ವಿವಾದ ಬೆಳೆಸುವವರು, ಅಥವಾ ಅರ್ಥವನ್ನರಿಯದೇ ಬರಿದೆ ಉರು ಹೊಡೆಯುವವರು] ಅದರಾಚೆ
ಏನೂ ಇಲ್ಲ ಎನ್ನುವವರು. ಬಗೆಯಲ್ಲಿ ಆಸೆ ತುಂಬಿ ಸ್ವರ್ಗದ ಕನಸು ಕಾಣುವವರು.
2.42–2.44
ಭೋಗ ಐಶ್ವರ್ಯ ಪ್ರಸಕ್ತಾನಾಮ್ ತಯಾ ಅಪಹೃತ ಚೇತಸಾಮ್ |
ವ್ಯವಸಾಯ ಆತ್ಮಿಕಾ ಬುದ್ಧಿಃ ಸಮಾಧೌ ನ ವಿಧೀಯತೇ- ಐಷಾರಾಮದ ಐಸಿರಿಯಲ್ಲಿ ಮುಳುಗಿ, ವೇದ ಓದಿಯೇ
ತಲೆ ಕೆಡಿಸಿಕೊಂಡ ಇಂತವರಿಗೆ, ಹದಗೊಂಡ ತಿಳಿನುಡಿ ಕೂಡಾ ಮನಸ್ಸಿನ ಸಮಸ್ಥಿತಿಗೆ ನೆರವಾಗದು.
ಮೇಲಿನ ಮೂರು ಶ್ಲೋಕ ಅತ್ಯಂತ ಮುಖ್ಯವಾದುದು. ಹೆಚ್ಚಿನವರಿಗೆ ಇದು ಅರ್ಥವೇ ಆಗುವುದಿಲ್ಲ. ಅರ್ಥವಾಗದೇ
ಈ ಶ್ಲೋಕವನ್ನು ಟೀಕಿಸಿದವರೂ ಇದ್ದಾರೆ! ಪ್ರಾಚೀನ ಗ್ರಂಥಗಳಲ್ಲಿ, ವೇದಗಳಲ್ಲಿ, ಶ್ರುತಿಗಳಲ್ಲಿ, ಕೇವಲ
ಅಧ್ಯಾತ್ಮವಲ್ಲದೆ ಅನೇಕ ಲೌಕಿಕ ವಿಷಯಗಳು ತುಂಬಿಕೊಂಡಂತೆ ಕಾಣುತ್ತದೆ. ಬರಿಯ ವೇದ ಗ್ರಂಥಗಳನ್ನು
ಓದುವುದರಿಂದ ನನ್ನನ್ನು ತಿಳಿಯಲು ಸಾಧ್ಯವಿಲ್ಲ ಎನ್ನುತ್ತಾನೆ ಕೃಷ್ಣ. ಕೃಷ್ಣ ಹೇಳುತ್ತಾನೆ ವೇದವಾದಿಗಳಾದವರು
ವೇದದ ಮೇಲ್ನೋಟದ ಅರ್ಥವೆಂಬ ಹೂವನ್ನು ಕಿತ್ತು ತೆಗೆದುಕೊಂಡು ಆಳವಾದ ಜ್ಞಾನ ಸಾಗರವೆಂಬ ಹಣ್ಣಿನಿಂದ
ವಂಚಿತರಾಗುತ್ತಾರೆ ಎಂದು. ವೇದವನ್ನು ಆಳವಾಗಿ ಅರ್ಥ ಮಾಡಿಕೊಳ್ಳದೇ, ಕೇವಲ ಮೇಲ್ನೋಟದ ಅರ್ಥದಲ್ಲೇ
ನಿಂತು ವೇದವೆಂದರೆ ಇಷ್ಟೇ ಎಂದು ಹೇಳುವವರಿಗೆ ಕೃಷ್ಣ ಈ ಮಾತನ್ನು ಹೇಳಿದ್ದಾನೆ. ಇಲ್ಲಿ 'ವೇದವಾದರು'
ಎಂದರೆ ವೇದದ ಅರ್ಥ ತಿಳಿಯದೇ ಅದರ ಬಗ್ಗೆ ವಿವಾದ ಮಾಡುವವರು. ವೇದವನ್ನು ಬಾಯಿಪಾಠ ಮಾಡಿ
ಅದರ ಅರ್ಥ ತಿಳಿಯದೇ ಮಾತನಾಡುವವರು. ವೇದದ ಮೇಲ್ನೋಟದ ಅರ್ಥದಲ್ಲೇ ನಿಂತವರು. ಇವರು
ಮೇಲಿನಿಂದ ಈಜುವವರು. ಇವರಿಗೆ ತಳದಲ್ಲಿರುವ ಮುತ್ತು ರತ್ನಗಳ ಅರಿವಿಲ್ಲ. ವೇದವನ್ನು ನಿಜವಾಗಿ
ಅರಿತುಕೊಳ್ಳದೇ, ಅದರ ಬಗ್ಗೆ ತಪ್ಪು ಕಲ್ಪನೆ ಮಾಡಿಕೊಂಡು, ಅದನ್ನೇ ಜನರಿಗೆ ಹೇಳುವುದು ನರಕಕ್ಕೆ ನೇರ
ದಾರಿ. ಪೌರೋಹಿತ್ಯ ಕೂಡಾ ಹೀಗೆ. ನಿಜವಾದ ಜ್ಞಾನವಿಲ್ಲದೆ, ಮಂತ್ರದ ಅರ್ಥ ಗೊತ್ತಿಲ್ಲದೆ ಪೌರೋಹಿತ್ಯ
ಮಾಡುವುದು ಕೂಡಾ ಅಷ್ಟೇ ಅಪಾಯಕಾರಿ. ಪೌರೋಹಿತ್ಯ ಒಂದು ಜವಾಬ್ದಾರಿಯುತ ಕೆಲಸ. ಒಬ್ಬ ಮನುಷ್ಯನ
ಪಾಪವನ್ನು ಪರಿಹರಿಸಿ ಅವನನ್ನು ಎತ್ತರಕ್ಕೇರಿಸಬೇಕಾದರೆ ಪೌರೋಹಿತ್ಯ ಮಾಡುವವನೂ ಕೂಡಾ
ಎತ್ತರದಲ್ಲಿರಬೇಕು. ವೇದಮಂತ್ರದ ರಹಸ್ಯ ತಿಳಿದವನಾಗಿರಬೇಕು. ಕೃಷ್ಣ ಇಲ್ಲಿ ಹೇಳುತ್ತಾನೆ; “ವೇದದ
ಅಂತರಂಗದ ಅರ್ಥ ತಿಳಿಯದಿದ್ದರೆ ಎಲ್ಲವೂ ಅಪಾರ್ಥವಾಗುತ್ತದೆ. ಯಾರು ಪ್ರಾಚೀನ ಗ್ರಂಥಗಳ ಮೇಲ್ನೋಟದ
ಅರ್ಥವನ್ನು ಹೇಳಿ ಸಮಾಜಕ್ಕೆ ಮೋಸ ಮಾಡುತ್ತಾರೋ ಅವರು ಅವಿಪಶ್ಚಿತರು” ಎಂದು. 'ವಿಪಶ್ಚಿತರು' ಎಂದರೆ
ಜ್ಞಾನ ಸ್ವರೂಪವಾದ ಆತ್ಮವನ್ನು ಕಂಡವರು, ಆತ್ಮ ಜ್ಞಾನಿಗಳು. ಅವಿಪಶ್ಚಿತರು ಶಾಸ್ತ್ರಕ್ಕೆ ಮೇಲ್ನೋಟದ
ಅರ್ಥವನ್ನು ಹೇಳುವವರು-ಅವರು ತಿಳಿಗೇಡಿಗಳು ಎನ್ನುತ್ತಾನೆ ಕೃಷ್ಣಟ ಈ ಮಾತು ಪ್ರಪಂಚದ ಪ್ರತಿಯೊಂದು
ಧರ್ಮ ಗ್ರಂಥಗಳಲ್ಲಿದೆ. ಬೈಬಲ್ ನಲ್ಲಿ ಇದನ್ನು ಗೂಡಾರ್ಥ ಎನ್ನುತ್ತಾರೆ. ಕುರಾನಿನಲ್ಲಿ ಕೂಡಾ ಈ ಬಗ್ಗೆ ಎಚ್ಚರದ
ನುಡಿ ಇದೆ. "There are Sentences that are clear in meaning and there are Sentences that are
susceptible of different interpretations” . ಇದು ಕುರಾನ್ ನಲ್ಲಿ ಬರುವ ಒಂದು ನುಡಿ. ಎಲ್ಲಾ ಪ್ರಾಚೇನ
ಅನುಭಾವ ಸಾಹಿತ್ಯದಲ್ಲಿ ಈ ಎಚ್ಚರವನ್ನು ಕೊಟ್ಟಿದ್ದಾರೆ. ಪ್ರಾಚೀನ ಗ್ರಂಥಗಳು ಒಗಟಿನಂತೆ. ಅದರ
ಮೇಲ್ನೋಟದ ಅರ್ಥವನ್ನು ತಿಳಿದುಕೊಂಡರೆ ಅಸಂಗತವಾಗುತ್ತದೆ. ಅಧ್ಯಾತ್ಮ ಗ್ರಂಥಗಳಲ್ಲಿ ನಮ್ಮನ್ನು ಆಭೂತಿಗೆ
ಕೊಂಡೊಯ್ಯಲು ಈ ರೀತಿ ಒಗಟಿನ ಭಾಷೆಯನ್ನು (mystical language) ಉಪಯೋಗಿಸಿದ್ದಾರೆ.
ವೇದವೆನ್ನುವುದು ಸಾಂಕೇತಿಕ ಭಾಷೆ ಎನ್ನುವುದನ್ನು ಅರಿಯದಿದ್ದರೆ ಅಧ್ಯಾತ್ಮ ಚಿಂತನೆ ಅನರ್ಥವಾಗುತ್ತದೆ. ಈ
ರೀತಿ ತಿಳಿಯದೇ ಮಾಡುವ ಸಾಧನೆಯಿಂದ ಏನೂ ಉಪಯೋಗವಿಲ್ಲ.
ಪ್ರಾಚೀನ ಗ್ರಂಥಗಳಲ್ಲಿ ಅನೇಕ ಕಥೆಗಳನ್ನು ಕಾಣುತ್ತೇವೆ. ಅದನ್ನು ಮೇಲ್ನೋಟದಲ್ಲಿ ನೋಡಿದರೆ
ವಿನೋದವೆನಿಸುತ್ತದೆ. ಆದರೆ ಅದರ ತಿರುಳನ್ನು ಅರಿತರೆ ಜೀವನ ಸಾರ್ಥಕ. ಇದಕ್ಕೆ ಉತ್ತಮ ಉದಾಹರಣೆ
ಗಣಪತಿಯ ಕಥೆ. "ಪಾರ್ವತಿ ತನ್ನ ಮೈಯ ಮಣ್ಣಿನಿಂದ ಗಣಪತಿಯನ್ನು ನಿರ್ಮಿಸಿದಳು, ಆತನ ತಲೆಯನ್ನು ಶಿವ
ಕಡಿದ, ನಂತರ ಆತನಿಗೆ ಉತ್ತರ ದಿಕ್ಕಿಗೆ ತಲೆ ಹಾಕಿದ ಆನೆಯ ತಲೆಯನ್ನು ಜೋಡಿಸಿದರು, ಕಡಬು ತಿಂದ
ಗಣೇಶ ಹೊಟ್ಟೆಗೆ ಹಾವನ್ನು ಸುತ್ತಿಕೊಂಡ". ಏನಿದರ ಅರ್ಥ? ಭಾಗಶಃ ಈ ಕಥೆಯನ್ನು ಕೇಳದವರಿಲ್ಲ; ಆದರೆ
ಅರ್ಥ ತಿಳಿದವರು ಸಾವಿರಕ್ಕೆ ಒಬ್ಬರಿಲ್ಲ! ಈ ಕಥೆಯನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದರೆ ಮಾತ್ರ ನಮಗೆ ಕಥೆಯ
ಮಹತ್ವ, ಪೂಜೆಯ ಮಹತ್ವ, ನಂಬಿಕೆಯ ಮಹತ್ವ ಅರಿಯುತ್ತದೆ. ಗಣಪತಿ ಆಕಾಶದ ದೇವತೆ. ಆಕಾಶ ಪಂಚ
ಭೂತಗಳಲ್ಲಿ ಮಹತ್ತಾದದ್ದು. ಗಣಪತಿಯ ಸ್ಥಾನ ಇಪ್ಪತ್ತೊಂದನೆಯದು. ಅದಕ್ಕಾಗಿ ಆತನಿಗೆ ಇಪ್ಪತ್ತೊಂದು
ಮೋದಕ ಅರ್ಪಣೆ. ಐದು ಅಂತಃಕರಣ, ಐದು ಜ್ಞಾನೇಂದ್ರಿಯ, ಐದು ಕರ್ಮೇಂದ್ರಿಯ, ಐದು ತನ್ಮಾತ್ರೆಗಳು(ಶಬ್ಧ,
ಸ್ಪರ್ಶ ರೂಪ ರಸ ಗಂಧ) ಇದರಿಂದ ಆಚೆಗೆ ಆಕಾಶ, ಗಾಳಿ, ಬೆಂಕಿ,ನೀರು, ಮಣ್ಣು. ಇಲ್ಲಿ ಆಕಾಶ ಇಪ್ಪತ್ತೊಂದನೇ
ಮೆಟ್ಟಿಲಲ್ಲಿದೆ. ಇದು ಇಪ್ಪತ್ತೊಂದನೇ ತತ್ವ. ಗಣಪತಿಗಿಂತ ಮೊದಲ ಸ್ತರದಲ್ಲಿರುವ ತತ್ತ್ವಾಭಿಮಾನಿಗಳು
ಇಪ್ಪತ್ತುಮಂದಿ. ಬ್ರಹ್ಮ, ವಾಯು, ಗರುಡ, ಶೇಷ, ರುದ್ರ, ಇಂದ್ರ, ಕಾಮ, ಅಹಂಪ್ರಾಣ, ಅನಿರುದ್ಧ,
ಸ್ವಾಯಂಭುವಮನು, ಬೃಹಸ್ವತಿ, ದಕ್ಷಪ್ರಜಾಪತಿ, ಪ್ರವಹವಾಯು, ಚಂದ್ರ, ಸೂರ್ಯ, ಯಮಧರ್ಮ, ವರುಣ,
ವಹ್ನಿ, ಮಿತ್ರ ಮತ್ತು ನಿರ್ ಖುತಿ. ಗಣಪತಿ ಇಪ್ಪತ್ತೊಂದನೆಯವನು.
ಇನ್ನು ಶಿವ ಪಾರ್ವತಿಯರು. ಇವರು ದಂಪತಿಗಳು. ಇಲ್ಲಿ ಶಿವ ಮನಸ್ಸಿನ ಅಭಿಮಾನಿ ಮತ್ತು ಪಾರ್ವತಿ ವಾಕ್
ದೇವತೆ. ಮನಸ್ಸು ಯೋಚಿಸಿದಂತೆ ಮಾತು. ಅದಕ್ಕಾಗಿ ಅವರದು ಅನ್ಯೋನ್ಯ ದಾಂಪತ್ಯ. ಶಬ್ದದ ಮೂಲ ಶಕ್ತಿ
ಗಾಳಿ ಮತ್ತು ಆಕಾಶ. ಆಕಾಶ ಮತ್ತು ಗಾಳಿ ಇಲ್ಲದಿದ್ದರೆ ಶಬ್ದವಿಲ್ಲ. ನಮ್ಮ ಒಳಗಿನ ವಾಕ್ ನಾದವೇ ಪಾರ್ವತಿ-
ಅದು ಶಬ್ದ ರೂಪದಲ್ಲಿ ಹೊರ ಹೊಮ್ಮುವುದೇ ಮಾತು. ಇದು ಮೂಲ ನಾದದ ಸ್ಥೂಲ ರೂಪ. ಮನುಷ್ಯನಿಗೆ
ದೊಡ್ಡ ಆಪತ್ತು ಮಾತು. ಅದ್ಯಾತ್ಮ ಸಾಧನೆಗೆ ಬೇಕಾಗಿರುವುದು ಮಾತಿಗಿಂತ ಹೆಚ್ಚಾಗಿ ಮೌನ, ತನ್ನತನದ
ಅರಿವಿಲ್ಲದೇ(ಓ%/೩೫6೧7೦56 of self), ಅಹಂಕಾರ ತತ್ವದ ವಿರುದ್ಧ ಮಾತು ಬೆಳೆದಾಗ, ಮಾತಿನ
ಶಿರಛಭೇದನವಾಗದೇ ಜ್ಞಾನವಿಲ್ಲ. ಶಿರಭೇದನವಾದ ಮೇಲೆ ಪುನಃ ಅದೇ ಮಾತು ಮುಂದುವರಿಯಬಾರದು.
ಅದಕ್ಕಾಗಿ ಎಲ್ಲವನ್ನು ಕೇಳುವ ದೊಡ್ಡ ಕಿವಿಯುಳ್ಳ, ಪ್ರಾಣಶಕ್ತಿಯನ್ನು ನಿಯಂತ್ರಿಸುವ ಉದ್ದನೆಯ ಮೂಗಿನ
ಸಾಂಕೇತ ರೂಪವಾದ ಆನೆಯ ತಲೆಯನ್ನು ಇಟ್ಟು ಗಣಪತಿ ಎನ್ನುವ ಹೊಸ ಆಕಾರದ ಜನನವಾಯಿತು.
ಗಣಪತಿಯನ್ನು ನೋಡಿದಾಕ್ಷಣ ನಮಗೆ ನೆನಪಿಗೆ ಬರಬೇಕಾದ ವಿಷಯ ಮಾತಿಗಿಂತ ಮನನ ಹೆಚ್ಚು ಮಾಡು,
ಸರಿಯಾಗಿ ಕೇಳಿಸಿಕೋ (Be a good listener) ಎನ್ನುವ ವಿಚಾರ, ಇನ್ನು ಉತ್ತರ ದಿಕ್ಕಿಗೆ ತಲೆ ಹಾಕುವುದು
ಅಂದರೆ ಏನು? ಸಾಮಾನ್ಯವಾಗಿ ನಮಗೆಲ್ಲರಿಗೂ ಗೊತ್ತಿರುವಂತೆ ಉತ್ತರಕ್ಕೆ ತಲೆ ಹಾಕಿ ಮಲಗಬಾರದು.
ದಕ್ಷಿಣಕ್ಕೆ ಮುಖ ಮಾಡಿ ಪೂಜೆಗೆ ಕುಳಿತು ಕೊಳ್ಳಬಾರದು. ದೇವಸ್ಥಾನದಲ್ಲಿ ಅಪ್ರದಕ್ಷಿಣೆ ಸುತ್ತಬಾರದು ಇತ್ಯಾದಿ.
ಆದರೆ ಈ ಎಲ್ಲಾ ವಿಚಾರ ಏಕೆ? ಇದರ ಹಿಂದಿರುವ ಸಿದ್ಧಾಂತ ಏನು? ಈ ಭೂಮಿಯಲ್ಲಿ ಉತ್ತರ ದ್ರುವದ ಶಕ್ತಿ
ಉತ್ತರದಿಂದ ಪೂರ್ವಕ್ಕೆ ಹರಿಯುತ್ತಿರುತ್ತದೆ ಹಾಗೂ ದಕ್ಷಿಣ ದ್ರುವದ ಶಕ್ತಿ ದಕ್ಷಿಣದಿಂದ ಪಶ್ಚಿಮಕ್ಕೆ
ಹರಿಯುತ್ತಿರುತ್ತದೆ. ನಮ್ಮ ಚಲನೆ ಕೂಡಾ ಈ ಶಕ್ತಿಪಾತಕ್ಕೆ ಅನುಗುಣವಾಗಿರಬೇಕು. ನಾವು ದಕ್ಷಿಣಕ್ಕೆ ಮುಖ
ಮಾಡಿದರೆ ದಕ್ಷಿಣ ದ್ರುವದ ಶಕ್ತಿಪಾತಕ್ಕೆ ನಮ್ಮನ್ನು ನಾವು ಒಡ್ಡಿಕೊಂಡಂತೆ ಹಾಗೂ ಉತ್ತರಕ್ಕೆ ಮುಖ ಮಾಡಿದರೆ
ಉತ್ತರ ದ್ರುವದ ಶಕ್ತಿಪಾತಕ್ಕೆ ಒಡ್ಡಿಕೊಂಡಂತೆ. ಉತ್ತರಕ್ಕೆ ತಲೆ ಹಾಕಿ ಮಲಗುವುದು ಎಂದರೆ ಎದ್ದಾಗ ದಕ್ಷಿಣಕ್ಕೆ
ಮುಖ ಮಾಡುವುದು. ಆದ್ದರಿಂದ ದಕ್ಷಿಣ ಮುಖ ಹಾಗೂ ಉತ್ತರ ತಲೆ ಎರಡೂ ಒಂದೆ. ಈ ಎರಡು ಶಕ್ತಿಪಾತದಲ್ಲಿ
ಒಂದು ದೊಡ್ಡ ವ್ಯತ್ಯಾಸವಿದೆ. ಅದೇನೆಂದರೆ ಉತ್ತರದ ಶಕ್ತಿಪಾತ ಊರ್ಧ್ವಮುಖವಾದದ್ದು ಹಾಗೂ ದಕ್ಷಿಣದ
ಶಕ್ತಿಪಾತ ಸಂಸಾರದ ಸುಳಿಯಲ್ಲಿ ಸಿಲುಕಿಸುವಂತಾದ್ದು. ಈ ಕಾರಣಕ್ಕಾಗಿ ಉತ್ತರಕ್ಕೆ ತಲೆ ಹಾಕಿ ಮಲಗಿದರೆ
ಅಥವಾ ದಕ್ಷಿಣಕ್ಕೆ ಮುಖ ಮಾಡಿ ಪೂಜೆಗೆ ಕುಳಿತರೆ ನಮ್ಮ ಶಿರಛೇದನವಾಗುತ್ತದೆ. ನಾವು ಪುನಃ ಈ ಸಂಸಾರದ
ಸುಳಿಯಲ್ಲಿ ಸುತ್ತಬೇಕಾಗುತ್ತದೆ. ಇನ್ನು ಹೊಟ್ಟೆಗೆ ಹಾವಿನ ಸುತ್ತು. ಹಾವು ಕುಂಡಲಿನಿ ಶಕ್ತಿಯ ಸಂಕೇತ. ಇದು
ಚಕ್ರಾಕಾರವಾಗಿ ತಲೆ ಕೆಳಗೆ ಹಾಕಿ ಮಲಗಿದ ಹಾವಿನ ರೂಪದಲ್ಲಿ ನಮ್ಮ ಮಲ-ಮೂತ್ರ ದ್ವಾರದ
ಮಧ್ಯದಲ್ಲಿರುತ್ತದೆ. ಕುಂಡಲಿನಿ ಜಾಗೃತವಾಗುವುದು ಎಂದರೆ ಈ ಹಾವು ಹೆಡೆಯೆತ್ತಿ ನಿಲ್ಲುವುದು. ಕುಂಡಲಿನಿ
ಜಾಗೃತವಾದಾಗ ಶಕ್ತಿ- ಮೂಲಾಧಾರ, ಮಣಿಪುರ ಹಾಗೂ ಸ್ವಾದಿಷ್ಠಾನ ಶಕ್ತಿ ಕೇಂದ್ರಗಳಲ್ಲಿ ಊರ್ಧ್ವ ಮುಖವಾಗಿ
ಸಂಚರಿಸುತ್ತದೆ. ನಮ್ಮ ಹೊಕ್ಕುಳಿನ ಮೇಲಿನ ಶಕ್ತಿ ಕೇಂದ್ರ ಜ್ಞಾನದ ಬಾಗಿಲು, ಗಣಪತಿ ಈ ಮೂರು ಶಕ್ತಿ
ಕೇಂದ್ರಗಳನ್ನು ನಿಯಂತ್ರಿಸಿ ನಮಗೆ ಜ್ಞಾನದ ಬಾಗಿಲನ್ನು ತೆರೆಯುವ ಶಕ್ತಿದೇವತೆ. ಇಷ್ಟೊಂದು ಸಂಗತಿ ಈ ಪುಟ್ಟ
ಕಥೆಯಲ್ಲಿದೆ. ಇದು ಹೂವಿನಿಂದ ಹಣ್ಣಿಗೆ ಹೋಗುವ ರೀತಿ. ಕೇವಲ ಮೇಲ್ನೋಟದ ಅರ್ಥದಲ್ಲೇ ನಿಂತರೆ
ತೊಂದರೆಯಿಲ್ಲ, ಅದರಿಂದಾಚೆಗೆ ಏನೂ ಇಲ್ಲ ಎಂದು ತಿಳಿದರೆ ಅದು ಅನರ್ಥ.
ನಾವು. ನಮ್ಮ ತಲೆಯಲ್ಲಿದ್ದುದನ್ನು ವೇದದಲ್ಲಿ ಕಾಣದೆ, ವೇದದಲ್ಲಿದ್ದುದನ್ನು ತಲೆಯೊಳಗೆ ತುಂಬಿಕೊಳ್ಳಬೇಕು.
ವೇದವನ್ನು ಮೇಲ್ನೋಟದಲ್ಲಿ ಕಂಡಾಗ ಕೇವಲ ಜನ್ಮ-ಕರ್ಮ, ಹುಟ್ಟು-ಸಾವು, ಈ ಸುಳಿಯಲ್ಲೇ ಇರುತ್ತೇವೆ,
ಎಂದೂ ಅಮರತ್ವದ ದಾರಿ ಕಾಣದು. ಮೇಲ್ನೋಟಕ್ಕೆ ವೇದವನ್ನು ಕಾಣುವವರು ಬೆಳಗಿನಿಂದ ಸಂಜೆಯ ತನಕ
ಭೋಗ ಐಶ್ವರ್ಯ ಕರ್ಮ ಕಲಾಪದಲ್ಲಿ ನಿಂತು ಆತ್ಮಸಾಕ್ಷಾತ್ಕಾರವನ್ನು ಮರೆತು ನಿಲ್ಲುತ್ತಾರೆ. ಇದು ದೊಡ್ಡ
ದುರಂತ.
ಈಗ ನಮಗೆ ಒಂದು ಪ್ರಶ್ನೆ ಕಾಡುತ್ತದೆ. ಅದೇನೆಂದರೆ ಪ್ರಾಚೀನ ಅಧ್ಯಾತ್ಮ ಗ್ರಂಥಗಳನ್ನು ಏಕೆ ಒಗಟಿನ
ರೂಪದಲ್ಲಿ ಬರೆದಿದ್ದಾರೆ? ಎಂದು. ತರಗತಿಗೊಂದು ಪಠ್ಯಪುಸ್ತಕವಿರುವಂತೆ ಈ ಗ್ರಂಥಗಳನ್ನು ಹಂತಹಂತವಾಗಿ
ಅರ್ಥವಾಗುವ ರೀತಿ ಏಕೆ ಬರೆದಿಲ್ಲ? ಇತ್ಯಾದಿ. ಇಲ್ಲಿ ನಾವು ತಿಳಿದುಕೊಳ್ಳಬೇಕಾದ ಮುಖ್ಯ ವಿಷಯ ಏನೆಂದರೆ ಈ
ಗ್ರಂಥಗಳನ್ನು ತಿಳಿದುಕೊಳ್ಳಲು ಯೋಗ್ಯತೆ ಬೇಕು. ಇಲ್ಲಿ ಪುಸ್ತಕ ಒಂದೇ; ಆದರೆ ಒಂದೇ ಪುಸ್ತಕದಲ್ಲಿ ಅನೇಕ
ಹಂತದ ಶಿಕ್ಷಣ ಅಡಗಿದೆ. ಈ ವೇದ ಗ್ರಂಥಗಳು ಎಂದೂ ಅಯೋಗ್ಯರಿಗೆ ದಕ್ಕದು. ಅವು ಕೇವಲ ತನ್ನನ್ನು
ಅರಿಯಬಲ್ಲ, ಅರಿತು ಅದರ ಸದುಪಯೋಗ ಮಾಡಬಲ್ಲವನ ಮುಂದೆ ಮಾತ್ರ ತೆರೆದುಕೊಳ್ಳುತ್ತವೆ.
ಯೋಗ್ಯನಾದವನು ಈ ಗ್ರಂಥದ ಆಳಕ್ಕೆಳಿದಷ್ಟೂ ಹೆಚ್ಚು ಹೆಚ್ಚು ವಿಷಯ ತಿಳಿಯುತ್ತಾನೆ. ಒಂದು ಗ್ರಂಥವನ್ನು
ಅರಿಯಲು ಅನೇಕ ಜನ್ಮಗಳ ಸಾಧನೆ ಬೇಕು.
Bibek Debroy (1955–2024)The Bhagavad Gita
(43)
‘They are addicted to desire, think of heaven as the supreme objective and
are enamoured of the fruits of birth and action.39 They praise many rites and
rituals that lead to pleasure and wealth.’