क्रोधाद्भवति सम्मोहः सम्मोहात्स्मृतिविभ्रमः ।
स्मृतिभ्रंशाद् बुद्धिनाशो बुद्धिनाशात्प्रणश्यति ॥
krodhādbhavati sammohaḥ sammohātsmṛtivibhramaḥ |
smṛtibhraṃśād buddhināśo buddhināśātpraṇaśyati ||
Sri Madhvacharya (1238–1317)Bhagavad Gita Tatparya Nirnaya
संमोहान्मिथ्याज्ञानात्। ज्ञातमप्यन्यथा स्मर्यते। वाक्यार्थानामन्यथास्मरणान्निर्णीतं ज्ञानमपि
नश्यति॥63॥
Swami Sivananda (1887–1963)Bhagavad Gita
63. From anger comes delusion; from delusion the loss of memory; from loss of memory the
destruction of discrimination; from the destruction of discrimination he perishes.
Sri Vishwesha Tirtharu (1931–2019)Gitasaroddhara
2.59–2.66 · ಸ್ಥಿತಪ್ರಜ್ಞನೂ ಇಂದ್ರಿಯನಿಗ್ರಹವೂ
ಸ್ಥಿತಪ್ರಜ್ಞನೂ ಇಂದ್ರಿಯನಿಗ್ರಹವೂ
ಇನ್ನುಮುಂದೆ ಸ್ಥಿತಪ್ರಜ್ಞನ ಬಗ್ಗೆ ವಿಶೇಷ ವಿವರಣೆಯನ್ನು ಭಗವಂತನು
ಕೊಡುವನು. ಕಾಮವರ್ಜಿತನೂ ಭಗವದೇಕನಿಷ್ಠನೂ ಆದ ವ್ಯಕ್ತಿಯೇ
ಸ್ಥಿತಪ್ರಜ್ಞನು. ರಾಗ-ದ್ವೇಷ್ಠ ಭಯ ಮೊದಲಾದ ಮನೋದೋಷಗಳು
ಈತನಲ್ಲಿರುವುದಿಲ್ಲ. ಸುಖ-ದುಃಖಗಳೆರಡರಲ್ಲೂ ನಿರ್ವಿಕಾರನಾಗಿರುವನು.
ಅಪರೋಕ್ಷನ್ನಾನಕ್ಕೆ ಪೂರ್ವಭಾವಿಯಾಗಿಯೂ ಇವೆಲ್ಲ ಸದ್ಗುಣಗಳು ನಮಗೆ
ಆವಶ್ಯಕವೇ ಆಗಿವೆ. ಆದರೆ ಸ್ಥಿತಪ್ರಜ್ಞನಲ್ಲಿ ಈ ಗುಣಗಳು ಸ್ವಭಾವಸಿದ್ಧವಾಗಿ
ಇರುತ್ತವೆ. ಸಾಧಕರು ಪ್ರಯತ್ನ ಪೂರ್ವಕವಾಗಿ ಈ ಗುಣಗಳನ್ನು
ಸಂಪಾದಿಸಬೇಕಾಗಿದೆ. ಮಗುನಡೆಯಲುಕಲಿಯುವಾಗ ಬಹಳ ಪ್ರಯಾಸದಿಂದ
ನಡೆಯುತ್ತದೆ. ಅದು ದೊಡ್ಡದಾದಮೇಲೆತಾನು ನಡೆಯುತ್ತೇನೆಂಬಕಲ್ಪನೆಯೇ
ಇಲ್ಲದಂತೆ ಸಹಜವಾಗಿ ನಡೆಯುತ್ತದೆ. ಈ ಅಂತರವನ್ನು ಸಾಧಕ ಹಾಗೂ
ಜ್ಞಾನಿಗಳಲ್ಲಿ ನಾವು ಕಾಣುತ್ತೇವೆ. ಯಾರಲ್ಲಿ ಸಹಜವಾದ ನಡಿಗೆಯಂತೆ ಈ
ಸದ್ಗುಣಗಳು ಸ್ವಭಾವಸಿದವಾಗಿ ಸೇರಿಕೊಂಡಿವೆಯೋ ಇವುಗಳ ಅವಿಷ್ಯಾರಕ್ಕೆ
ಯಾವ ಪ್ರಯತ್ನದ ಆವಶ್ಯಕತೆಯೂ ಇಲ್ಲವೋ ಆತನೇಸ್ಥಿತಪ್ರಜ್ಞನು.
ಇಂದ್ರಿಯಗಳ ಮೇಲೆ ಹಿಡಿತವಿರುವುದರಿಂದಲೇ ಯಾವ ಲೌಕಿಕ
ಆಕರ್ಷಣೆಗೂ ಒಳಗಾಗದೆ ಕಾಮ, ಕ್ರೋಧ ಮೊದಲಾದ ಉಪದ್ರವಗಳಿಂದ
ರಹಿತವಾದ ಜೀವನವನ್ನು ಅವನು ನಡೆಸುತ್ತಾನೆ. ಆಮೆಯು ತನಗೆ ಬೇಕಾದಾಗ
ತನ್ನ ಅವಯವಗಳನ್ನು ನಿರಾಯಾಸವಾಗಿ ಒಳಗೆ ಎಳೆದುಕೊಳ್ಳುವಂತೆ ಅವನು
ಇಂದ್ರಿಯಗಳನ್ನು ವಿಷಯ ಪದಾರ್ಥಗಳಿಂದ ಯಾವ ಪ್ರಯಾಸವಿಲ್ಲದೇ
ಎಳೆದುಕೊಳ್ಳಬಲ್ಲನು. ವೈಷಯಿಕ ಪದಾರ್ಥಗಳ ಸಂಬಂಧವು ಇವನಿಗೆ ಏನೂ
ಆತಂಕವನ್ನುಂಟುಮಾಡಲಾರದು. ಹಾಲನ್ನು ನೀರಿನಲ್ಲಿ ಹಾಕಿದರೆಮತ್ತೆ ಅದನ್ನು
ಪ್ರತ್ಯೇಕಿಸುವುದು ಕಠಿಣವಾದೀತು. ಆದರೆ ಅದೇ ಹಾಲನ್ನು ಹದಗೊಳಿಸಿ
ತಯಾರಿಸಿದ ಬೆಣ್ಣೆಯನ್ನು ನೀರಿನಲ್ಲಿ ಹಾಕಿದರೂ ನೀರಿನಿಂದ ಬೇಕಾದಂತೆ
ತೆಗೆಯುವುದು ಏನೂ ಅಶಕ್ಕವಾಗುವುದಿಲ್ಲ. ನಾವು ನಮ್ಮ ಮನಸ್ಸನ್ನು ಒಮ್ಮೆ
ಪ್ರಪಂಚದಲ್ಲಿ ಹರಿಸಿಬಿಟ್ಟರೆ ಮತ್ತೆ ಅದು ನಮ್ಮ ಕೈಜಿಟ್ಟಂತೆ. ವುನಃ ಜಗತ್ತಿನಿಂದ
ಅದನ್ನು ಬೇರ್ಪಡಿಸಲಾರೆವು. ಜ್ಞಾನಿಗಳ ಮನಸ್ಸು ಹದಗೊಳಿಸಿದ ನವನೀತ,
ಪ್ರವಂಚದಲ್ಲಿದ್ದರೂ ಅದು ನೀರಿನಲ್ಲಿದ್ದ ಬೆಣ್ಣೆ. ಅವರಿಗೆ ವೈಷಯಿಕ
ಸಂಬಂಧವನ್ನು ಹಿಡಿಯುವುದೂ ಬಿಡುವುದೂ ಎರಡೂ ಸುಲಭ. ನಾವಂತೂ
ಇಂದ್ರಿಯಗಳನ್ನು ವಿಷಯ ಪದಾರ್ಥಗಳ ಕಡೆಗೆ ಸುಲಭವಾಗಿ ಕಳಿಸುವೆವು.
ಆದರೆ ನಮ್ಮ ಇಂದ್ರಿಯಗಳನ್ನು ಭೋಗವಸ್ತುಗಳಿಂದ ತಿರುಗಿ ಹಿಂದೆಳೆಯಲು
ಸಾಧ್ಯವೇ ಆಗುವುದಿಲ್ಲ ಇದು ದುರ್ಬಲಚಿತ್ರ ದವರಿಣಾಮ.
ಅರ್ಜುನ-ಅಶ್ವತ್ತಾಮರಲ್ಲಿ ಒಮ್ಮೆ ವರಸ್ಪರ ಯುದ್ಧನಡೆಯಿತು. ರಾತ್ರಿಯಲ್ಲಿ
ಕಳ್ಳತನದಿಂದ ಶಿಬಿರವನ್ನು ಪ್ರವೇಶಿಸಿ ತನ್ನ ವೀರ ಸೈನಿಕರನ್ನು ಹಾಗೂ
ಕುಮಾರರನ್ನು ಕೊಲೆ ಮಾಡಿದ ಅಶ್ವತ್ಥಾಮನ ಜೊತೆಗೆ ಅರ್ಜುನನು
ಹೋರಾಡುತ್ತಿದ್ದ. ಅಶ್ವತ್ಥಾಮನು ಎಲ್ಲ ಅಸ್ವಗಳನ್ನೂ ಪ್ರಯೋಗಿಸಿ
ಅರ್ಜುನನನ್ನು ಸೋಲಿಸಲಾರದೆ ಕೊನೆಗೆ ಭಯಂಕರವಾದ ಬ್ರಹ್ಮಾಸ್ತ್ರವನ್ನು
ಪ್ರಯೋಗಿಸಿದ. ಅರ್ಜುನನೂ ನಿರುಪಾಯನಾಗಿ ಪ್ರತಿಯಾಗಿ ಬ್ರಹ್ಮಾಸ್ತ್ರವನ್ನೆ!
ಪ್ರಯೋಗಿಸಿದಾಗ ಈ ಎರಡೂ ಘೋರ ಅಸ್ತ್ರಗಳ ತಿಕ್ಕಾಟದಿಂದ ಪ್ರಪಂಚಕ್ಕೆ
ಕ್ಪೋಭೆಯುಂಟಾಯಿತು. ಇದನ್ನುನಿಲ್ಲಿಸಲು ಶ್ರೀ ವೇದವ್ಯಾಸರು ಈ ಅಸ್ವವನ್ನು
ಹಿಂದೆಗೆದುಕೊಳ್ಳಲು ಇಬ್ಬರಿಗೂ ಆದೇಶ ನೀಡಿದರು. ಅರ್ಜುನನು ತನ್ನ
ಅಸ್ತ್ರವನ್ನು ಸುಲಭವಾಗಿ ಉಪಸಂಹಾರ ಮಾಡಿದನು. ಆದರೆ ನೈತಿಕ ಬಲವನ್ನು
ಕಳೆದುಕೊಂಡ ಅಶ್ವತ್ಥಾಮನಿಗೆ ಇದು ಸಾಧ್ಯವಾಗದೆ ಅಪಹಾಸ್ಯಕ್ಕೆ ಗುರಿಯಾದನು.
ನಾವೂ ಇದೇ ಸ್ಥಿತಿಯಲ್ಲಿ ಇದ್ದೇವೆ. ಇಂದ್ರಿಯಗಳನ್ನು ವಿಷಯಗಳ ಕಡೆಗೆ
ಓಡಿಸುವುದು ದೊಡ್ಡದಲ್ಲ. ಅವುಗಳನ್ನು ನಮಗೆ ಬೇಕೆನಿಸಿದಾಗ ಹಿಂದಿರುಗಿ
ಸುವುದರಲ್ಲೇ ನಮ್ಮ ಜೀವನದ ಯಶಸ್ಸು ಅಡಗಿದೆ. ನಮಗೆಇಂದ್ರಿಯಗಳಮೇಲೆ
ಇಂತಹ ಪ್ರಭುತ್ವ ಇಲ್ಲದಿರುವುದರಿಂದ ಅಶ್ವತ್ಥಾಮನ ಕೈಯಲ್ಲಿ ಸಿಕ್ಕ
ಬ್ರಹ್ಮಾಸ್ತ್ರದಂತೆ ನಮ್ಮ ಇಂದ್ರಿಯಗಳ ಪ್ರವೃತ್ತಿಯು ಆಗಿರುವುದು. ನಾವು ಅದರ
ಮೇಲೆ ಅಧಿಕಾರ ನಡೆಸುವ ಬದಲು ಅದೇನಮ್ಮ ಮೇಲೆ ಅಧಿಕಾರನಡೆಸುತ್ತದೆ.
ಇಂದ್ರಿಯಗಳ ಒಡೆಯರಾಗಬೇಕಾದವರು ಅವುಗಳ ಗುಲಾಮರಾಗುತ್ತೇವೆ.
ವ್ರತ, ಉಪವಾಸಗಳಿಂದ ನಾವೇನೋ ಭೋಗವನ್ನುಗಳ ಸಂಬಂಧವನ್ನು
ಬಿಡಲು ಪ್ರಯತ್ನಿಸುತ್ತೇವೆ. ದೈಓಕವಾಗಿ ಆವನ್ತುಗಳ ಸಂಬಂಧವನ್ನು ಕೆಲವೊಮ್ಮೆ
ತೊರೆದರೂ ಮಾನಸಿಕವಾಗಿ ಅದನ್ನು ಬಿಡಲು ನಮ್ಮಿಂದ ಆಗುವುದಿಲ್ಲ.
ಏಕಾದಶೀ ದಿನ ನಿರ್ಜಲ ಉಪವಾಸವನ್ನು ಮಾಡುವಾಗಲೂ ದ್ವಾದಶೀ ದಿನದ
ಅಡಿಗೆಯದೇ ನಮಗೆ ಚಿಂತೆ. ಆಹಾರ ಇಲ್ಲದಾಗ ಇತರ ಇಂದ್ರಿಯಗಳ ಶಕ್ತಿ
ಕುಂಠಿತವಾದರೂನಾಲಿಗೆಯ ಶಕ್ತಿಯು ಚುರುಕಾಗಿಯೇ ಇರುವುದು. ಮರದ
ಶಾಖೆಗಳನ್ನು ಕಡಿದರೂ ಬೇರಿಗೆ ನೀರು ಹಾಕಿದರೆ ಅದು ಚಿಗಿಯುವಂತೆ
ನಾಲಿಗೆಯನ್ನು ನಿಯಂತ್ರಿಸದಿದ್ದರೆ ಮಾನಸಿಕರಾಗವನ್ನು ನಿಲ್ಲಿನಲಾಗದು. ನಮ್ಮ
ಈ ಬಾಹ್ಯ ವ್ರಯತ್ನದಿಂದ ತಕ್ಕಮಟ್ಟಿಗೆ ಪ್ರಯೋಜನವಾಗಬಹುದಾದರೂ
ವೂರ್ಣವಾಗಿ ನಮ್ಮ ಮಾನಸಿಕ ರಾಗದ ನಿವೃತ್ತಿಯು ಪರಮಾತ್ಮನ
ಸಾಕ್ಟಾತ್ಯಾರದಿಂದಲೇ ಸಾಧ್ಯ. ಪರಮಾತ್ಮನ ದರ್ಶನದಿಂದ ಆಗುವ ಆನಂದದ
ಮುಂದೆ ಉಳಿದ ವ್ರಾಪಂಚಿಕ ಕ್ಷುದ್ರ ಸುಖಗಳಿಗೆ ಎಲ್ಲಿಯ ಮಹತ್ವ?
ಜ್ಞಾನಿಯನ್ನು ಈ ಕ್ಷುದ್ರ ಸುಖಗಳ ಆಕರ್ಷಣವು ಏನೂ ವಿಚಿಲಿತಗೊಳಿಸು
ವುದಿಲ್ಲ. ಮಗು ಎಷ್ಟೇತಿಂಡಿವದಾರ್ಥಗಳನ್ನು ಹಿಡಿದುಕೊಂಡಿದ್ದರೂ ಅಗಲಿದ
ತಾಯಿಯು ಬಂದಾಗ ಅವನ್ನೆಲ್ಲ ಒಗೆದು ತಾಯಿಯನ್ನು ಅಪ್ಪಿಕೊಳ್ಳುವಂತೆ,
ಪರಮಾತ್ಮನ ದರ್ಶನವನ್ನು ವಡೆದವರಿಗೆ ವಿಷಯ ವಸ್ತುಗಳನ್ನೆಲ್ಲ ದೂರ
ಒಗೆಯಲು ಏನೂ ಪ್ರಯಾಸವಾಗಲಾರದು. ಪರಮಾತ್ಮನ ವ್ರೇಮದ ಮುಂದೆ
ಉಳಿದವಸ್ತುಗಳು ಬಹಳ ತುಚ್ಛವಾಗಿ ಕಾಣಿಸುತ್ತವೆ. ಭಗವಂತ ಹೇಳುತ್ತಾನೆ:
ರಸವರ್ಜಂ ರಸೋಡಪೃಸ್ಯ
ಪರಂ ದೃಷ್ಟ್ವಾ ನಿವರ್ತತೇ |
ಭಗವತ್ಪ್ರೇಮ ಹಾಗೂ ಅವನ ಧ್ಯಾನದಿಂದ ಉಂಟಾಗುವ ಆನಂದದ
ಕಲ್ಪನೆಯಿಲ್ಲದೆ ನಾವು ಭೋಗಪದಾರ್ಥಗಳ ಬೆನ್ನುಹತ್ತಿರುದೆವು. ಅವುಗಳನ್ನು
ಬಿಟ್ಟು ಪರಮಾತ್ಮನ ಕಡೆಗೆ ದೃಷ್ಟಿಯನ್ನು ಹರಿಸಲು ನಮ್ಮಿಂದ ಆಗುವುದಿಲ್ಲ. ಈ
ಶಕ್ತಿಯನ್ನು ವಡೆಯುವುದಕ್ಕಾಗಿ ಪರಮಾತ್ಮನ ಗುಣಗಳ ಚಿಂತನವನ್ನೂ
ವಿಷಯವಸ್ತುಗಳಲ್ಲಿರುವ ದೋಷಗಳಸಮಾಲೋಚನೆಯನ್ನೂ ಮಾಡಬೇಕು.
ವರರ ದೋಷಗಳನ್ನು ಚಿಂತಿಸುವ ಬದಲು ನಾವು ಉಪಯೋಗಿಸುವ ಭೋಗ
ಪದಾರ್ಥಗಳಲ್ಲಿ ಇರುವ ದೋಷಗಳನ್ನು ಯಾಕೆ ಚಿಂತಿಸಬಾರದು? ಹೀಗೆ
ಪ್ರಪಂಚದಲ್ಲಿ ಪದಾರ್ಥದ ದೋಷವನ್ನು ತಿಳಿಯುವುದರಿಂದ ಅದರಲ್ಲಿ
ವೈರಾಗ್ಯವೂ ಭಗವಂತನ ಗುಣಾನುಸಂಧಾನದಿಂದ ದೇವರಲ್ಲಿ ಭಕ್ತಿಯೂ
ಸಹಜವಾಗಿ ಮೂಡುವವು.
ನಾವು ವಿಷಯವದಾರ್ಥಗಳಲ್ಲಿಯೇ ಗುಣಗಳನ್ನು ಕಾಣುತ್ತ ಅವನ್ನೇ
ಅತಿಯಾಗಿ ಪ್ರೇಮಿಸುತ್ತೇವೆ. ಜಪಕ್ಕೆ ಕುಳಿತಾಗಲೂ ನಮಗೆ ಭಗವಂತನನ್ನು
ಚಿಂತಿಸಲು ಆಗುವುದಿಲ್ಲ. ಕೈಯಲ್ಲಿ ಜವದ ಮಣಿಗಳೇನೋ ತಿರುಗುತ್ತವೆ.
ಮನಸ್ಸು ಮಾತ್ರ ಶ್ರೀಹರಿಯನ್ನು ನೆನೆಯದೆ ಸಂಸಾರಿಕ ವಿಷಯಗಳನ್ನೇ
ಆಲೋಚಿಸುತ್ತಿರುವುದು. ಇಂತಹ ವೈಷಯಿಕ ಪ್ರೇಮ, ಧ್ಯಾನಗಳಿಂದ
ಅವುಗಳಲ್ಲಿಯೇ ಆಸಕ್ತಿಯು ಮತ್ತೂ ದೃಢವಾಗುವುದು. ಅದನ್ನು ತಡೆಯುವಂಥ
ವಿಘ್ನಗಳು ಏನಾದರೂ ಸಂಭವಿಸಿದರೆ ಕ್ರೋಧವೂ ಉಕ್ಕೇರುವುದು. ಈ
ಕಾಮ-ಕ್ರೋಧಗಳಿಂದ ಮೋಹಪರವಶನಾದ ವ್ಯಕ್ತಿಗೆ ತನ್ನ ಕರ್ತವ್ಯದ
ಸ್ಮರಣೆಯೇ ಇರುವುದಿಲ್ಲ. ಶಾಸ್ತ್ರಗಳು ಹೇಳಿದ ವಿಧಿ, ನಿಷೇಧಗಳನ್ನೆಲ್ಲ ಅವನು
ಮರೆಯುತ್ತಾನೆ. ಹೀಗಾಗಿ ಆತನ ವಿವೇಕವೇ ಭ್ರಷ್ಟವಾಗಿ ಸ್ವೇಚ್ಛಾಚಾರಿಯಾಗಿ
ವರ್ತಿಸಿ ತನ್ನ ವಿನಾಶವನ್ನೇ ಆಹ್ವಾನಿಸಿಕೊಳ್ಳುವನು. ಪರಮಾತ್ಮನು ಹೇಳುತ್ತಾನೆ:
ಧ್ಯಾಯತೋವಿಷಯಾನ್ ಪುಂಸಃ
ಸಂಗಸ್ತೇಷೂಪಜಾಯತೇ ।
ಸಂಗಾತ್ ಸಂಜಾಯತೇ ಕಾಮಃ
ಕಾಮಾತ್ ಕ್ರೋಧೋಇಭಿಜಾಯತೇ।
ಕ್ರೋಧಾದ್ಭವತಿ ಸಮ್ಮೊ ಹಃ
ಸಮ್ಮೋಹಾತ್ ಸ್ಫೃತಿವಿಭ್ರಮಃ |
ಸ್ಥೃತಿಭ್ರಂಶಾತ್ ಬುದ್ಧಿನಾಶಃ
ಬುದ್ಧಿನಾಶಾತ್ ಪ್ರಣಶ್ಯತಿ ॥
ಹೀಗೆ ವಿಷಯಪದಾರ್ಥಗಳನ್ನು ಪ್ರೀತಿಸಿ ಹಂಬಲಿಸುವುದರಿಂದ ನಮಗೆ
ನಮ್ಮ ಮೇಲೆಯೇ ಹಿಡಿತ ತಪ್ಪಿ ಸಂಭವಿಸುವ ಅನರ್ಥಗಳನ್ನು ನಾವು
ಪರ್ಯಾಲೋಚಿಸಬೇಕು. ರಾಗದ್ವೇಷಗಳು ಇಂದ್ರಿಯಗಳಲ್ಲಿ ಹುದುಗಿರುವ
ವಿಷವೆಂದು ಪರಿಗಣಿಸಬಹುದು. ರಾಗದ್ವೇಷಗಳಿಂದ ಕೂಡಿದ ಇಂದ್ರಿಯಗಳು
ವಿಷಭರಿತ ಸರ್ಪಗಳಂತೆ ಪೂತ್ಕರಿಸಿ ನಮ್ಮನ್ನು ಕೆಡಹುವವು. ಇದಕ್ಕಾಗಿ ನಾವು
ಇಂದ್ರಿಯಗಳನ್ನು ದ್ವೇಷಿಸಬೇಕೆಲ್ಲ. ಅವುಗಳಲ್ಲಿರುವ ಈ ವಿಷದ ಹಲ್ಲುಗಳನ್ನು
ಮಾತ್ರ ತೆಗೆಯಬೇಕು. ಹಾವಾಡಿಗರು ವಿಷತೆಗೆಸಿದ ಹಾವುಗಳನ್ನು ಬೇಕಾದಂತೆ
ಆಡಿಸುತ್ತಾರೆ. ಅದರಂತೆ ರಾಗದ್ವೇಷಗಳನ್ನು ತೊರೆದರೆ ಆ ಇಂದ್ರಿಯಗಳು
ನಮಗೆ ಏನೂ ಅಪಾಯಕಾರಿಯಾಗಲಾರವು. ಇದನ್ನು ಹೀಗೆ ಹೇಳಿದ್ದಾರೆ:
ರಾಗದ್ವೇಷವಿಯುಕ್ತೆಸ್ತು ವಿಷಯಾನಿಂದ್ರಿಯೈಶ್ಚರನ್ |
ಆತ್ಮವತ್ಯೆ 'ರ್ವಿಧೇಯಾತ್ಮಾ ಪ್ರಸಾದಮಧಿಗಚ್ಛತಿ ॥
ಇಂದ್ರಿಯಗಳನ್ನು ನಿಗ್ರಹಿಸುವುದೆಂದರೆ ಅವುಗಳನ್ನು ಹಿಂಸಿಸುವುದಲ್ಲ.
ಅವುಗಳ ಶಕ್ತಿಯನ್ನೇ ಕುಂಠಿತಗೊಳಿಸುವುದಲ್ಲ. ಇಂದ್ರಿಯಗಳನ್ನು ಯೋಗ್ಯ
ರೀತಿಯಿಂದ ಬಳಸುವುದರಿಂದ, ಯೋಗ್ಯ ವಿಷಯಗಳ ಕಡೆಗೇ ಅವುಗಳನ್ನು
ಹರಿಸುವುದರಿಂದ ನಾವು ಇಂದ್ರಿಯನಿಗ್ರಹವನ್ನು ಸಾಧಿಸಿದಂತಾಗುವುದು.
ಅಲರ್ಕನೆಂಬ ರಾಜನು ಇಂದ್ರಿಯಗಳನ್ನು ಗೆಲ್ಲಬೇಕೆಂದು ಬಾಣಗಳಿಂದ
ಅವುಗಳನ್ನು ಕಿತ್ತೊಗೆಯಲು ಉಪಕ್ರಮಿಸಿದನು. ಆಗಇಂದ್ರಿಯಗಳ ಅಭಿಮಾನಿ
ದೇವತೆಗಳು ಅವನ ಈ ಹುಚ್ಚು ಕೆಲಸವನ್ನು ತಡೆದು, ""ಇದರಿಂದ ನಿನಗೆ ಏನೂ
ಸಾಧನೆಯನ್ನು ಮಾಡಿಕೊಂಡ ಹಾಗೆ ಆಗುವುದಿಲ್ಲ. ಸಾಧನೆ ಮಾಡಲು ಬೇಕಾದ
ಸಲಕರಣೆಗಳನ್ನು ಒಡೆದು ಹಾಕುತ್ತಿರುವಿ. ಇಂದ್ರಿಯಗಳನ್ನು ಹೀಗೆ
ಕತ್ತೊಗೆಯುವುದರಿಂದ ಯಾವಜ್ಞಾನ,ಸತ್ಯರ್ಮಗಳಿಗೂ ಅವಕಾಶವಾಗದೆನಿನ್ನ
ಜೀವನವೇ ವ್ಯರ್ಥವಾಗುವುದು. ಯೋಗ್ಯ ದಾರಿಯಲ್ಲಿ ಇಂದ್ರಿಯಗಳು
ಪ್ರವೃತ್ತವಾಗುವಂತೆ ಮಾಡುವುದೇ ನಿಜವಾದ ಇಂದ್ರಿಯ ನಿಗ್ರಹ'' ಎಂದು
ಬೋಧಿಸಿದರು.
ಅಂತೂ ಇಂದ್ರಿಯನಿಗ್ರಹದಿಂದ, ಮನೋನಿರೋಧದಿಂದ ಧ್ಯಾನದ
ಮಾರ್ಗದಲ್ಲಿ ಮುಂದೆ ನಡೆದು ಅದರಿಂದ ಅಪರೋಕ್ಷ ಜ್ಞಾನವಾಗಿ ಅವರು
ಪರಮಶಾಂತಿಯನ್ನು ಪಡೆಯುವರು. ಇದನ್ನು-
ನ ಚಾಯುಕ್ತಸ್ಯ ಭಾವನಾ ।
ನಚಾಭಾವಯತಃ ಶಾಂತಿಃ... ||
ಎಂದು ಪರಮಾತ್ಮನು ತಿಳಿಸಿರುವನು.
Bannanje Govindacharya (1936–2020)Bhagavad Gita Pravachana
ಕ್ರೋಧಾತ್ ಭವತಿ ಸಮ್ಮೋಹಃ ಸಮ್ಮೋಹಾತ್ ಸ್ಮೃತಿ ವಿಭ್ರಮಃ |
ಸ್ಮೃತಿಭ್ರಂಶಾತ್ ಬುದ್ಧಿನಾಶಃ ಬುದ್ಧಿನಾಶಾತ್ ವಿನಶ್ಯತಿ --ರೊಚ್ಚಿನಿಂದ ಮಾಡಬಾರದ್ದನ್ನು ಮಾಡುವ ಬಯಕೆ
(ತಪ್ಪು ಗ್ರಹಿಕೆ. ಅಂತಹ ಬಯಕೆಗಳಿಂದ ವಿಧಿ-ನಿಷೇಧಗಳ ಮರೆವು. ಮರೆವಿನಿಂದ ತಿಳಿಗೇಡಿತನ,
ತಿಳಿಗೇಡಿತನದಿಂದ ಸರ್ವನಾಶ!
ಒಂದು ವಸ್ತುವಿನ ನಿರಂತರ ಸಂಪರ್ಕದಿಂದ ನಮಗೆ ಅದರ ಮೇಲೆ ಮೋಹ ಬೆಳೆಯುತ್ತದೆ. ಮೊದಲು ಪರಿಚಯ,
ಪರಿಚಯದಿಂದ ಸ್ನೇಹ, ನಂತರ ಆ ಸ್ನೇಹವನ್ನು BY BRW,YW (Attachment). ನಂತರ ಅವರು
ನನ್ನವರಾಗಬೇಕು ಎನ್ನುವ ಆಸೆ. ನಾವು ಆಸೆ ಪಟ್ಟಂತೆ ನೆರವೇರದಾಗ ಕ್ರೋಧ. ಈ ಕ್ರೋಧದ ಮೂಲ ಪ್ರೀತಿ!
ಕೋಪಕ್ಕೆ ಮೂಲ ಕಾರಣ ಕಾಮನೆ. ನಮಗೆ ಕೋಪ ಬಾರದಂತೆ ತಡೆಯಬೇಕಾದರೆ ಮೊದಲು ಕಾಮನೆಯನ್ನು
ತೊರೆಯಬೇಕು. ಆಸೆ. ಕಡಿಮೆಯಾದಂತೆ ಸಿಟ್ಟು ಕಡಿಮೆಯಾಗುತ್ತದೆ. ಅಂಟಿಸಿಕೊಳ್ಳುವುದು ಅಥವಾ
ಹಚ್ಚಿಕೊಳ್ಳುವುದರಿಂದ ಆಸೆ ಆಕಾಂಕ್ಷೆಗಳು ಬೆಳೆಯುತ್ತವೆ. ಅದು ಈಡೇರದಿದ್ದಾಗ ಕೋಪ. ಕೋಪದಿಂದ
ಸಮ್ಮೋಹ. ಅಂದರೆ ಅಸಂಗತವಾದ ವಿಚಾರಗಳು ತಲೆಯಲ್ಲಿ ಬಂದು ಮಾಡಬಾರದ್ದನ್ನು ಮಾಡುವ ಬಯಕೆ.
ಇದರಿಂದ ಯುಕ್ತಾಯುಕ್ತಗಳನ್ನು ವಿಶ್ಲೇಷಣೆ ಮಾಡುವ ಶಕ್ತಿ ಹೊರಟು ಹೋಗಿ, ತಪ್ಪನ್ನೇ ಸರಿ ಎಂದು ಸಮರ್ಥನೆ
ಮಾಡುವ ಮಟ್ಟಕ್ಕೆ ನಾವು ಇಳಿಯುತ್ತೇವೆ. ಪಲಿತಾಂಶ: ಪ್ರತೀಕಾರ ಮಾಡಬೇಕು ಎನ್ನುವ ಹಠ. ಅದರಿಂದ
ಪೂರ್ತಿ ತಿಳಿಗೇಡಿತನ ಮತ್ತು ಕೊನೆಗೆ ಆತ್ಮದ ಅಧಃಪತನ- ವಿನಾಶ-ಸರ್ವನಾಶ!
ಬುದ್ದಿ ನಾಶವಾದಾಗ ಮನಸ್ಸು ಸತ್ತಂತೆ. ಅದರಿಂದ ಜೀವ ನರಕದ ದಾರಿಯಲ್ಲಿ ಹೋಗುವಂತಾಗುತ್ತದೆ. ಇದು
ಅಧಃಪಾತದ ದಾರಿ. ನಾವು ಎತ್ತರಕ್ಕೇರಬೇಕೆಂದರೆ. ಪರಮಾತ್ಮನ ಮಹತ್ವವನ್ನು ಅರಿತು ಅವನಿಗೆ
ಶರಣಾಗಬೇಕು. ಒಳ್ಳೆಯ ದಾರಿಯಲ್ಲಿ ಮನಸ್ಸು ಚಿಂತನೆ ಮಾಡಿದಾಗ ಆತ್ಮ ಎತ್ತರಕ್ಕೇರಲು ಸಾಧ್ಯ. ಇದಕ್ಕೆ
ಮೊದಲು ನಾವು BIBT (Over attachment) ಕಡಿಮೆ ಮಾಡಬೇಕು. ಇದರರ್ಥ ಯಾರನ್ನೂ
ಪ್ರೀತಿಸಬಾರದು, ಸ್ನೇಹ ಬೆಳೆಸಬಾರದು ಎಂದರ್ಥವಲ್ಲ. ಪ್ರೀತಿ ಇರಲಿ, ಸ್ನೇಹವಿರಲಿ, ಆದರೆ ಮೋಹ ಬೇಡ.
ಬಂದಿದ್ದು ಬರಲಿ ಎನ್ನುವ ದೃಢ ನಿರ್ಧಾರವಿರಲಿ. ಹೀಗೇ ಆಗಬೇಕು-ಹಾಗೇ ಆಗಬೇಕು ಎನ್ನುವ ಅತಿಮೋಹ
ದುಃಖಕ್ಕೆ ಕಾರಣ. ಎಲ್ಲವುದರ ಜೊತೆಗಿದ್ದು, ಎಲ್ಲರನ್ನೂ ಪ್ರೀತಿಸುವುದು-ಆದರೆ.. ಹಚ್ಚಿಕೊಳ್ಳದೇ
QDI) T(Detached attachment). ಇದೇ ಸಾಧನೆಯ, ಸಂತೋಷದ ಮೂಲ ಮಂತ್ರ.
ಮನಸ್ಸು ಯಾವಾಗಲೂ ಪ್ರಸನ್ನವಾಗಿರಬೇಕು. ಪ್ರಸನ್ನತೆ ಇಲ್ಲದಿದ್ದಾಗ ಮಾನಸಿಕವಾಗಿ, ದೈಹಿಕವಾಗಿ ನಾವು
ಆರೋಗ್ಯವನ್ನು ಕಳೆದುಕೊಳ್ಳುತ್ತೇವೆ. ಎಂತಹ ಪ್ರಸಂಗದಲ್ಲೂ ತಲೆ ಕೆಡಿಸಿಕೊಳ್ಳದೇ ಹಾಯಾಗಿರುವುದು
ಪ್ರಸನ್ನತೆ. ಇದನ್ನು ಗಳಿಸುವುದು ಹೇಗೆ ಎನ್ನುವ ಚಿತ್ರಣ ಮುಂದಿನ ಶ್ಲೋಕ.
Bibek Debroy (1955–2024)The Bhagavad Gita
(63)
‘Anger gives birth to delusion and delusion leads to confusion of memory.58
From confusion of memory comes loss of intellect and loss of intellect
results in destruction.’