2.69

या निशा सर्वभूतानां तस्यां जागर्ति संयमी ।
यस्यां जाग्रति भूतानि सा निशा पश्यतो मुनेः ॥
yā niśā sarvabhūtānāṃ tasyāṃ jāgarti saṃyamī |
yasyāṃ jāgrati bhūtāni sā niśā paśyato muneḥ ||
Sri Madhvacharya (1238–1317)Bhagavad Gita Tatparya Nirnaya
‘देवेभ्योऽन्ये यदा ब्रह्म पश्यन्त्यन्यन्न दृश्यते। निशायामिव सुव्यक्तं यथाऽन्यैर्ब्रह्म नेयते। आश्चर्यवस्तुदृग्यद्व्यक्तमन्यन्न पश्यति। ऐकाग्र्याद्वा सुखोद्रेकद्देवाः सूर्यवदेव च। प्रायशः सर्ववेत्तारस्तत्रापि ह्युत्तरोत्तरम्’ इति ब्रह्मतर्के॥69॥
Swami Sivananda (1887–1963)Bhagavad Gita
69. That which is night to all beings, then the self-controlled man is awake; when all beings are awake, that is night for the sage who sees. COMMENTARY: The sage lives in the Self; this is day to him. He is unconscious of worldly phenomena; this is like night to him. The ordinary man is unconscious of his real nature. So life in the Self is like night to him. He experiences sense-objects; this is day to him.
Sri Vishwesha Tirtharu (1931–2019)Gitasaroddhara
2.69–2.70 · ಸ್ಥಿತಪ್ರಜ್ಞನ ಲೋಕವ್ಯವಹಾರ
ಸ್ಥಿತಪ್ರಜ್ಞನ ಲೋಕವ್ಯವಹಾರ ಈ ಅವರೋಕ್ಷ ಜ್ಞಾನಿಗಳಿಗೂ ಉಳಿದವರಿಗೂ ಇರುವ ಅಂತರವನ್ನು ಒಂದು ಚುಟುಕಾದಮಾತಿನಿಂದ ಪರಮಾತ್ಮನು ತಿಳಿಸುತ್ತಾನೆ ಯಾನಿಶಾಸರ್ವಭೂತಾನಾಂ ತಸ್ಯಾಂ ಜಾಗರ್ತಿ ಸಂಯಮೀ | ಯಸ್ಯಾಂ ಜಾಗ್ರತಿ ಭೂತಾನಿ ಸಾ ನಿಶಾ ಪಠ್ಯತೋ ಮುನೇಃ ॥ "ಸಾಮಾನ್ಯ ಜನರಿಗೆ ಎಲ್ಲಿ ಕತ್ತೇ ಲೋ ಅಲ್ಲಿ ಜ್ಞಾ] ನಿಗಳಿಗೆ ಹಗಲು; ಅವರಿಗೆ ಹಗಲಾದದ್ದುಸಾಮಾನ್ಯ ಜನರಿಗೆ ಕತ್ತಲು''. ನಮಗೆ ಪ್ರವಂಚದಲ್ಲಿ ಅತ್ಯಾಸಕ್ತಿ ಇರುವುದರಿಂದ ಅದನ್ನೇ ಯೋಚಿಸುತ್ತಿರುವೆವು. ಅದರಲ್ಲೇ ತಲ್ಲೀನರಾಗಿರುವೆವು. ಹೀಗೆ ನಾವು ಯಾವ ಜಗತ್ತಿನ ಬಗ್ಗೆ ಎಚ್ಚರದಿಂದಿರುವೆವೋ ಸ್ಥಿತವ್ರಜ್ಞರು ಆ ಪ್ರವಂಚದ ಕಡೆಗೆ ಗಮನವನ್ನೇ ಕೊಡುವುದಿಲ್ಲ; ವಿಷಯಪದಾರ್ಥಗಳ ಕಡೆಗೆ ಅವರಿಗೆ ಏನೂ ಆಕರ್ಷಣೆ ಇಲ್ಲ. ಅವರಿಗೆ ಆಕರ್ಷಣೆ ಇರುವುದು ವರಮಾತ್ಮಿನಕೆಗೆ, ಅವನನ್ನು ತುಂಬಿದ ಹೃದಯದಿಂದ ಧ್ಯಾನಿಸುವರು. ಇತರ ಭೋಗವದಾರ್ಥಗಳ ಪರಿವೆಯೇ ಇಲ್ಲ. ಯಾವ ಭಗವಂತನ ವಿಷಯದಲ್ಲಿ ಜ್ಞಾನಿಗಳು ಸದಾ ಜಾಗೃತರಾಗಿರುವರೋ ಆ ವರಮಾತೃನ ಕಡೆಗೆ ನಮಗೆ ಗಮನವೇ ಇಲ್ಲ. ಆ ಪರವಸ್ತುವನ್ನು ಚಿಂತಿಸಬೇಕೆಂದು ಪ್ರವೃತ್ತಿಸಿ ಧ್ಯಾನ, ಜವಗಳಿಗೆ ಕುಳಿತರೂ ಇತರ ಪದಾರ್ಥಗಳ ಕಡೆಗೇ ನಮ್ಮ ಮನಸ್ಸು ಹರಿಯುತ್ತ ದೆ. ಒಂದೇ ಮಾತಿನಲ್ಲಿ ಹೇಳುವುದಾದರೆ, ಸ್ಥಿತವ್ರಜ್ಞರು ಪರಮಾತ್ಮನಲ್ಲಿ ಭಕ್ತಿಯನ್ನೂ ವ್ರವಂಚದಲ್ಲಿ ವೈರಾಗ್ಯವನ್ನೂ ಅಳವಡಿಸಿಕೊಂಡಿದ್ದಾರೆ; ನಾವು ಪ್ರಪಂಚದಲ್ಲಿ ಭಕ್ತಿಯನ್ನೂ ಪರಮಾತ್ಮನಲ್ಲಿ ವೈರಾಗ್ಯವನ್ನೂ ಸಾಧಿಸಿಕೊಂಡಿದ್ದೇವೆ. ಹೀಗೆ ಲೌಕಿಕ ವಸ್ತುಗಳ ಅಪೇಕ್ಷೆಯಿಲ್ಲದೆ ಭಗವಂತನಲ್ಲೇ ತಲ್ಲೀನವಾದ ಜೀವನವನ್ನು ನಡೆಸಿದ ಈ ಸ್ಥಿತವ್ರಜ್ಞನಿಗೆ ಪ್ರಪಂಚದ ಭೋಗಭಾಗ್ಯಗಳೇನೂ ಇಲ್ಲವೆ? ಊಟ-ಉಡಿಗೆಗಳಿಲ್ಲದೆ, ಅವನು ಹೇಗೆ ಜೀವಿಸುವನು? ಎನ್ನುವಪ್ರಕ್ಕೆ ಬರುವುದು. ಇದಕ್ಕೆ ಪರಮಾತ್ಮನು ಹೀಗೆ ಸಮಾಧಾನ ನೀಡುವನು; ಆಪೂರ್ಯಮಾಣಮಚಲಪ್ರತಿಷ್ಠಂ ಸಮುದ್ರಮಾಪಃ ಪ್ರವಿಶಂತಿ ಯದ್ವತ್‌ ತದ್ವತ್ಕಾಮಾ ಯಂ ಪ್ರವಿಶಂತಿ ಸರ್ವೇ ಸ ಶಾಂತಿಮಾಪ್ನೊ ತಿ ನಕಾಮಕಾಮೀ ॥ ಸಮುದ್ರದಲ್ಲಿ ನದಿಯ ನೀರು ಪ್ರವೇಶಿಸುವಂತೆ ಜ್ಞಾನಿಯು ವಿಷಯ ಪದಾರ್ಥಗಳನ್ನು ಸ್ವೀಕರಿಸುವನು. ಸಮುದ್ರಕ್ಕೆ ನದಿಯ ನೀರು ಬಂದರೂ ಅಷ್ಟೆ ಬಾರದಿದ್ದರೂ ಅವ್ಟೆ ಸಮುದ್ರದಲ್ಲಿ ಯಾವುದೇ ಉದ್ರೇಕವಾಗಲಾರದು. ಅದು ಏಕರೂಪವಾಗಿಯೇ ಇರುವುದು. ಸ್ಥಿತಪ್ರಜ್ಞನು ವಿಷಯ ಪದಾರ್ಥಗಳನ್ನು ಸ್ವೀಕರಿಸಿದರೂ ಅವನಲ್ಲಿ ಏನೂ ವಿಕಾರವಾಗಲಾರದು. ಅದು ಇಲ್ಲದಿದ್ದರೂ ಅವನು ಕೊರಗಲಾರನು. ಸಮುದ್ರದಂತೆ ಆತ ಅಚಲ ಪ್ರತಿಷ್ಠನಾಗಿರುವನು. ಭುಂಜಾನೋಇಪಿ ಹಿಯಃ ಕಾಮಾನ್‌ ಮರ್ಯಾದಾಂ ನತರೇತ್‌ ಕ್ವಚಿತ್‌ | ಸಮುದ್ರವತ್‌ ಧರ್ಮಮಯೀಂ ನಾಸ್‌ ಕಾಮೀಸ ಉಚ್ಯತೇ || -ಗೀತಾತಾತ್ಪರ್ಯ “ಎಷ್ಟೇ ನೀರಿದ್ದರೂ ಸಮುದ್ರ ತನ್ನ ದಡ ಬಿಟ್ಟು ಮೇಲೆ ಬರುವುದಿಲ್ಲ. ಅದರಂತೆ ವೈಷಯಿಕ ವಸ್ತುಗಳನ್ನು ಭೋಗಿಸಿದರೂ ಧರ್ಮದ ಎಲ್ಲೆಯನ್ನು ಮೀರಿ ಜ್ಞಾನಿಯು ನಡೆಯಲಾರ''. ಆತನು ಭಗವಂತನ ಶಿಸ್ತಿನ ಸೇವಕ. ಭಗವಂತನ ಆದೇಶದ ನೀತಿ, ನಿಯಮಗಳನ್ನು ಮೀರದೆ, ಪ್ರಾವಂಚಿಕ ವಸ್ತುಭೋಗಗಳನ್ನು ಪಡೆದರೂ ಅದರಿಂದ ಅತೀತವಾಗಿರುವ, ನಿರ್ವಿಕಾರ, ಸಂತೃಪ್ತ ಜೀವನವದ್ಧತಿಯನ್ನು ಜ್ಞಾನಿಯು ಅಳವಡಿಸಿಕೊಂಡಿರುತ್ತಾನೆ. ಆತನು ಬಯಸದೆ ಇದ್ದರೂ ಸಕಲ ಲೌಕಿಕ ವಸ್ತುಗಳು ತಮ್ಮಷ್ಟಕ್ಕೆ ಅವನ ಕಾಲ ಬುಡಕ್ಕೆ ಬಂದು ಬೀಳುತ್ತವೆ. ಸಮುದ್ರವು ಬಯಸದೆ ಇದ್ದರೂ ಎಲ್ಲ ಭಾಗಗಳಿಂದನೀರು ಸಮುದ್ರದ ಕಡೆಗೆ ಧಾವಿಸಿ ಬರುವಂತೆ ಪ್ರಪಂಚದ ಎಲ್ಲ ಭೋಗಭಾಗ್ಯಗಳನ್ನು ಅವನು ಸಹಜವಾಗಿ ಪಡೆಯಬಲ್ಲ. ನಾವು ನೆರಳನ್ನು ಮುಟ್ಟಬೇಕೆಂದು ಪ್ರಯತ್ನಿಸಿದರೂ ಅದುನಮ್ಮ ಕ್ಳಿಗೆಸಿಗಲಾರದು. ನಾವು ಓಡಿದಂತೆ ಅದೂದೂರ ಓಡುವುದು. ಆದರೆ ಅದರ ಆಕೆಯನ್ನು ಬಿಟ್ಟುಸೂರ್ಯನಕಡೆ ಮುಖ ತಿರುಗಿಸಿದರೆ ಅದು ನಾವು ಓಡುವಷ್ಟೇ ವೇಗದಿಂದ ನಮ್ಮನ್ನು ಹಿಂಬಾಲಿಸುವುದು. ವಿಷಯಸುಖವೂ ಇದೇತರಹ. ಅದನ್ನು ಬೆಂಬತ್ತಿ ನಾವು ಓಡಿದರೆ ನಮಗೆ ಅದು ಕೊನೆಯವರೆಗೂಸಿಗುವುದಿಲ್ಲ. ಅದರ ಆಸೆಯನ್ನುತೊರೆದು ಪರಮಾತ್ಮನ ಕಡೆಗೆ ಓಡುವಾ. ಸಹಜವಾಗಿ ನಮ್ಮ ಬೆನ್ನ ಹಿಂದೆ ಅವೆಲ್ಲಭೋಗವದಾರ್ಥಗಳು ಓಡಿ ಬರುವವು. ಜ್ಞಾನಿಯು ಅವುಗಳನ್ನು ಪಡೆಯಲು ಏನೂ ಶ್ರಮಿಸಬೇಕಿಲ್ಲ. ಅಪ್ರಾರ್ಥಿತವಾಗಿಯೇ ಅವು ಆತನ ಬಳಿ ಸೇರುವವು. ವಿಭೀಷಣನು ಬ್ರಹ್ಮನಲ್ಲಿ ಏನೂ ವರವನ್ನು ಬೇಡಲಿಲ್ಲ. ರಾವಣ, ಕುಂಭಕರ್ಣರಾದರೋ ಜಗತ್ತನ್ನೇ ಗೆಲ್ಲುವ ಮಹಾಶಕ್ತಿಯನ್ನು ಪಡೆದು ತಮ್ಮ ಸ್ವೇಚ್ಛಾಪ್ರವೃತ್ತಿಗಳನ್ನು ಅಬಾಧಿತವಾಗಿ ನಡೆಸಬೇಕೆಂದು ಹವಣಿಸಿ ಬ್ರಹ್ಮನನ್ನು ಕುರಿತು ತಪಸ್ಸು ನಡೆಸಿದರು. ಯಾರಿಂದಲೂ ತಮ್ಮ ವಧೆಯಾಗದಂತಹ ಶಕ್ತಿಯನ್ನು ಹೊಂದಬೇಕೆಂದು ಅವರ ಆಶೆ. ಕುಂಭಕರ್ಣನು ತನ್ನ ಎದುರು ಪ್ರತ್ಯಕ್ಷನಾದ ಬ್ರಹ್ಮನಲ್ಲಿ ಯಾವುದನ್ನೋ ಕೇಳಬಯಸಿ ಮತ್ತೇನನ್ನೋ ತಪ್ಪಿ ಕೇಳಿ ನಿದ್ರಾತುರನೇ ಆದನು. ಸಕಲ ದೈತ್ಯ, ದೇವತೆಗಳಿಂದ ತಾನು ಅಜೇಯನೂ ಅವಧ್ಯನೂ ಆಗಬೇಕೆಂದು ರಾವಣನು ಬೇಡಿದ. ಈ ವರವನ್ನೇನೋ ಆತಪಡೆದ. ಆದರೆ ತನ್ನ ಅಪೇಕ್ಷೆಯಂತೆ ಬದುಕಿ ಉಳಿಯುವುದಾಗಲಿಲ್ಲ. ಮಾನವರೂಪಿ ಯಾದ ಭಗವಂತನಿಂದ ಆತ ಮರಣವನ್ನು ಅಪ್ಪಿದನು. ಆದರೆ ವಿಭೀಷಣನು ಬ್ರಹ್ಮದೇವರಿಂದತನ್ನ ಲೌಕಿಕ ಆಶೆಯನ್ನು ತಣಿಸಲು ಬಯಸಲಿಲ್ಲ. ಧರ್ಮನಿಷ್ಠೆ ಮತ್ತು ಭಗವದ್‌ ಭಕ್ತಿಯನ್ನು ಮಾತ್ರ ಬ್ರಹ್ಮದೇವರಲ್ಲಿ ಆತ ಬೇಡಿದ. ಇಂತಹ ನಿರಪೇಕ್ಷ ಭಾವನೆಯ ಭಕ್ತನನ್ನು ಕಂಡು ಬ್ರಹ್ಮದೇವರು ಬಹಳ ಸಂತುಷ್ಠರಾದರು. ಉಳಿದವರಿಬ್ಬರಿಗೂ ದೊರೆಯದ ಮಹಾ ಭಾಗ್ಯವು ವಿಭೀಷಣನಿಗೆ ದೊರೆಯಿತು. '"ಚಿರಂಜೀವಿಯಾಗಿ ನೀನು ಈ ಜಗತ್ತಿನಲ್ಲಿ ಮೆರೆ'' ಎಂದು ಬ್ರಹ್ಮದೇವರು ಅನುಗ್ರಹಿಸಿದರು. ಇಂದಿಗೂ ಚಿರಂಜೀವಿಗಳಲ್ಲಿ ವಿಭೀಷಣನ ಹೆಸರನ್ನು ಉಚ್ಚರಿಸುತ್ತೇವೆ. ಉಳಿದ ಇಬ್ಬರು ಬಯಸಿದರೂ ಅವರಿಂದ ಪಡೆಯಲಾಗದಿದ್ದ ಮರಣದ ಮೇಲಿನ ವಿಜಯವು ಅದನ್ನು ಆಶಿಸದ ವಿಭೀಷಣನ ಕರಗತವಾಯಿತು. ನಿಷ್ಕುಮನಾದ ಜ್ಞಾನಿಯು ತಾನು ಬಯಸ ದಿದ್ದರೂಸಕಲ ಭೋಗಗಳನ್ನು ಹೀಗೆ ಅನಾಯಾಸವಾಗಿ ಪಡೆಯುವನು. ಈ ರೀತಿಯಾಗಿ ಭಗವಂತನ ದರ್ಶನವನ್ನು ಪಡೆದ ವ್ಯಕ್ತಿಯು, ಭೋಗ ಲಾಲಸೆಯಿಂದ ಅತೀತವೂ ಭಾಗ್ಯಸಂಪನ್ನವೂ ಪ್ರಸನ್ನವೂ ಆದ ಭಗವನ್ನಿಷ್ಠ ಜೀವನವನ್ನು ನಡೆಸುವನು. ಇದೇ ಬ್ರಾಹ್ಮೀಸ್ಥಿತಿ ಎಂದೆನಿಸುವುದು. ಸತ್ಯರ್ಮಾಚರಣೆಯಿಂದ ಪಡೆದ ಅಂತಃಕರಣಶುದ್ಧಿಯ ಬಾಗಿಲಿನಿಂದ ಧ್ಯಾನ ಸಾಕ್ಷಾತ್ಕಾರಗಳ ಮಾರ್ಗದಲ್ಲಿ ನಡೆದು ಬ್ರಾಹ್ಮೀಸ್ಥಿತಿಯನ್ನು ಹೊಂದಬಹುದು. ಸ್ಥಿತಪ್ರಜ್ಞನ ವಿಸ್ತಾರವಾದ ವರ್ಣನೆಯ ಜೊತೆಗೆ ಗೀತೆಯ ಎರಡನೆಯ ಅಧ್ಯಾಯದ ಮುಕ್ತಾಯವಾಗುವುದು. ಸಾಧಾರಣ ಪ್ರಾರಂಭದಿಂದ ಅಂತಿಮ ತಿಯನ್ನು: ಮುಟ್ಟುವವರೆಗಿನ ಎಲ್ಲಮೆಟ್ಟಲುಗಳನ್ನು ಬಹು ಸುಂದರವಾಗಿ ಈ ಅಧ್ಯಾಯದಲ್ಲಿ ವರ್ಣಿಸಲಾಗಿದೆ.
Bannanje Govindacharya (1936–2020)Bhagavad Gita Pravachana
ಯಾ ನಿಶಾ ಸರ್ವಭೂತಾನಾಂ ತಸ್ಯಾಮ್‌ ಜಾಗರ್ತಿ ಸಂಯಮೀ। ಯಸ್ಯಾಮ್‌ ಜಾಗ್ರತಿ ಭೂತಾನಿ ಸಾ ನಿಶಾ ಪಶ್ಯತಃ ಮುನೇಃ -- ಯಾವುದು ಎಲ್ಲಾ ಜೀವಿಗಳಿಗೆ ಕತ್ತಲ ಕಗ್ಗಂಟೋ ಅಂಥಲ್ಲಿ ಇಂದ್ರಿಯಗಳನ್ನು ಗೆದ್ದ. ಯೋಗಿ ಎಚ್ಚರವಿರುತ್ತಾನೆ. ಎಲ್ಲಾ ಜೀವಿಗಳು ಎಲ್ಲಿ ಎಚ್ಚರವಿರುವರೋ-ಅದು ಬಲ್ಲ ಚಿಂತಕನಿಗೆ ನಟ್ಟಿರುಳು. ಸಾಮಾನ್ಯ ಮನುಷ್ಯನಿಗೆ ಯಾವುದು ಹಗಲೋ ಅದು ಸತ್ಯದ ಸಾಕ್ಷಾತ್ಕಾರವಾದವನಿಗೆ ರಾತ್ರಿ. ಜಗತ್ತಿನ ಎಲ್ಲಾ ಜೀವ ಜಾತಕ್ಕೆ ಯಾವುದು ರಾತ್ರಿಯೋ ಅದು ಸಾಧಕನಿಗೆ ಹಗಲು. ಅಂದರೆ ನಿಜವಾದ ಸಾಧಕ ನಮ್ಮ ರಾತ್ರಿಯಲ್ಲಿ ಎಚ್ಚರವಿರುತ್ತಾನೆ, ಹಾಗೂ ಲೌಕಿಕ ವ್ಯವಹಾರವೆಂಬ ನಮ್ಮ ಹಗಲು ಅವನಿಗೆ ರಾತ್ರಿ. ಲೌಕಿಕ ಪ್ರಪಂಚದಲ್ಲಿ ಅವನಿಗೆ ಪ್ರವೃತ್ತಿಯೇ ಇರುವುದಿಲ್ಲ. ಆತ ನಮಗೆ ಒಬ್ಬ ಮುಗ್ಧನಂತೆ, ಮಗುವಂತೆ ಕಾಣಬಹುದು. ಆತನ ಜ್ಞಾನದ ಬಗ್ಗೆ ಅರಿವಿಲ್ಲದವನಿಗೆ ಆತನೊಬ್ಬ ಹುಚ್ಚನಂತೆ ಕಂಡರೆ ಆಶ್ಚರ್ಯವಿಲ್ಲ! ಏಕೆಂದರೆ ಆತ ಲೌಕಿಕ ಪ್ರಪಂಚದೊಂದಿಗಿದ್ದು, ಅದರೊಂದಿಗೆ ಬೆರೆಯದೇ ತನ್ನ ಅಂತರಂಗದ ಆನಂದವನ್ನು ಸದಾ ಸವಿಯುತ್ತಿರುತ್ತಾನೆ. ಒಬ್ಬ ಜ್ಞಾನಿ ಭಗವಂತನನ್ನು ಕಂಡಾಗ ಆತನಿಗೆ ಉಳಿದದ್ದೆಲ್ಲಾ ಕತ್ತಲು. ಅದ್ಭುತವಾದ ಸಂಗತಿಯನ್ನು ಕಂಡ ವಿಸ್ಮಯದಲ್ಲಿ ತದೇಕಚಿತ್ತನಾಗಿ ಅದನ್ನೇ ನೋಡುತ್ತಿರುತ್ತಾನೆ. ಭಗವಂತನನ್ನು ಕಾಣಬೇಕಾದರೆ ನಾವು ಸದಾ ಶಾಸ್ತ್ರದ ಶ್ರವಣ ಮಾಡಬೇಕು. ಕೇವಲ ಶ್ರವಣ ಮಾಡಿದರೆ ಸಾಲದು, ಶ್ರವಣದ ನಂತರ ಮನನ-ನಿಧಿಧ್ಯಾಸನ ಅತಿ ಮುಖ್ಯ. ಇದನ್ನೇ "ಆತ್ಮಾ ವಾ ಅರೇ ದ್ರಷ್ಟವ್ಯಃ ಶ್ರೋತವ್ಯಃ ಮಂತವ್ಯಃ ನಿಧಿಧ್ಯಾಸಿತವ್ಯಃ ಚ" ಎಂದಿದ್ದಾರೆ. ಮನನ ಶೀಲನಾದವ 'ಮುನಿ' ; ಅವನೇ 'ಪಶ್ಯ' ಅಂದರೆ ಭಗವಂತನನ್ನು ಕಾಣಬಲ್ಲವ ಅಥವಾ ಕಂಡವ. ಇಂದಿನ ಸಮಾಜದಲ್ಲಿ ಸತ್ಯದ ಸಾಕ್ಷಾತ್ಕಾರನಾದವನನ್ನು ಗುರುತಿಸುವುದು ಬಹಳ ಕಷ್ಟ. ಸಿದ್ಧ ಪುರುಷರೆಲ್ಲಾ ಸತ್ಯವನ್ನು ಕಂಡವರಲ್ಲ! ಪವಾಡ ಮಾಡುವವರು ಭಗವಂತನನ್ನು ಕಂಡವರು ಎಂದು ಹೇಳಲಾಗುವುದಿಲ್ಲ. ಏಕೆಂದರೆ ನಿಜವಾದ ಸಾಧಕ ಸಾಮಾನ್ಯವಾಗಿ ಪವಾಡ ಮಾಡುವುದಿಲ್ಲ. ತೀರಾ ಅನಿವಾರ್ಯವಾದಾಗ ಮಾತ್ರ ಆತ ಪ್ರಪಂಚದ ಒಳಿತಿಗಾಗಿ ಪವಾಡ ಮಾಡಬಹುದು. ನಿರಂತರ ಸತ್ಯದ ಬಗ್ಗೆ ಅನ್ವೇಷಣೆ ಮಾಡಿ, ಸಿದ್ಧಿ ಗಳಿಸಿದರೆ ಮಾತ್ರ ಸ್ಥಿತಪ್ರಜ್ಞರಾಗಲು ಸಾಧ್ಯ.
Bibek Debroy (1955–2024)The Bhagavad Gita
(69) ‘When it is night to ordinary beings, the controlled person is awake then. When ordinary beings are awake, the sage perceives that as night.’63