3.11

देवान्भावयतानेन ते देवा भावयन्तु वः ।
परस्परं भावयन्तः श्रेयः परमवाप्स्यथ ॥
devānbhāvayatānena te devā bhāvayantu vaḥ |
parasparaṃ bhāvayantaḥ śreyaḥ paramavāpsyatha ||
Swami Sivananda (1887–1963)Bhagavad Gita
11. With this do ye nourish the gods, and may the gods nourish you; thus nourishing one another, ye shall attain to the highest good.
Sri Vishwesha Tirtharu (1931–2019)Gitasaroddhara
ಪರಸ್ಪರಂ ಭಾವಯಂತಃ
ಪರಸ್ಪರಂ ಭಾವಯಂತಃ ತ್ಯಾಗ-ಸೇವೆಗಳ ಸಮನ್ವಯರೂಪವಾದ ಯಜ್ಞದೃಷ್ಟಿಯಿಂದ ಈ ಕರ್ತವ್ಯಗಳನ್ನು ಮಾನವರು ಅವಶ್ಯವಾಗಿ ಆಚರಿಸಲೇಬೇಕೆಂಬುದನ್ನು ಪರಮಾತ್ಮನು ವಿವರಿಸುತ್ತಾನೆ. ಕೃತಜ್ಞತಾದೃಷ್ಟಿಯ ಸಂಕೇತವಾಗಿಯೂ ಜಗಚ್ಚಕ್ರದ ಪ್ರವರ್ತನೆಯ ಉದ್ದೇಶದಿಂದಲೂ ಈ ಕರ್ತವ್ಯವನ್ನು ಜಗತ್ತಿನಲ್ಲಿ ಹುಟ್ಟಿದ ಮಾನವನು ಅವಶ್ಯವಾಗಿ ಆಚರಿಸಲೇಬೇಕಾಗುವುದು. ನಾವು ಪ್ರತಿಕ್ಷಣದಲ್ಲಿ ಪರಮಾತ್ಮನಿಂದ ಹಾಗೂ ದೇವತೆಗಳಿಂದ ಉಪಕೃತರಾಗಿದ್ದೇವೆ. ಭೂಮಿ, ನೀರು, ತೇಜಸ್ಸು ಗಾಳಿ, ಆಕಾಶ ಮುಂತಾದ ಭಗವಂತನು ಒದಗಿಸಿದ ವಸ್ತುಗಳನ್ನು ನಾವು ಅವಲಂಬಿಸಿಕೊಂಡಿರುತ್ತೇವೆ. ಈ ಸೃಷ್ಟಿಯ ಅಭಿಮಾನಿ ಹಾಗೂ ಅಂತರ್ಯಾಮಿ ದೇವತೆಗಳನ್ನು ಆಧರಿಸಿಯೇ ನಮ್ಮ ಆಹಾರ, ವ್ಯವಹಾರ ಮೊದಲಾದ ಎಲ್ಲ ಪ್ರವೃತ್ತಿಗಳೂ ನಡೆದಿವೆ. ಹೀಗೆ ಜಗನ್ನಿಯಾಮಕವಾದ ಆ ಪರಾತ್ಚರ ಶಕ್ತಿಯಿಂದ ಪ್ರತಿ ಕ್ಷಣವೂ ಪ್ರಯೋಜನ ವನ್ನು ಪಡೆಯುತ್ತಿರುವಾಗ, ಅವನಿಗಾಗಿ ಅವನ ಸೇವಾರೂಪವಾಗಿ ಮಾಡ ಬೇಕಾದ ಕರ್ತವ್ಯಗಳೂ ನಮಗಿವೆ ಎಂಬುದನ್ನು ನಾವು ಅರಿತುಕೊಳ್ಳಬೇಕು. ಈ ಜಗತ್ತಿನ ಒಡೆತನ ಯಾರಿಗಿದೆ? ಯಾವ ವ್ಯಕ್ತಿಗೂ ಸಮಾಜಕ್ಕೂ ಈ ಜಗತ್ತಿನ ಮೇಲೆಪ್ರಭುತ್ವವಿಲ್ಲ. ಈಶಾವಾಸ್ಯಮಿದಂ ಸರ್ವಮ್‌ । -ಈಶೋಪನಿಷತ್ತು ಈ ಜಗತ್ತಿಗೆಲ್ಲ ಒಬ್ಬನೇ ಮಹಾಪ್ರಭು. ಅವನೇ ಶ್ರೀಹರಿ. ಇದೆಲ್ಲವೂ ಅವನ ಸೊತ್ತು ಅವನಸೇವಾರೂಪವಾದಕರ್ತವ್ಯವನ್ನು ಮಾಡದೆ ಜಗತ್ತಿನವಸ್ತುಗಳನ್ನು ಇಚ್ಛಾನುಸಾರವಾಗಿ ನಾವು ಹೇಗೆ ಭೋಗಿಸಬಲ್ಲೆವು? ಆಗರ್ಭ ಶ್ರೀಮಂತ ನಾದರೂ ಇಂತಹ ಸೇವಾರೂಪವಾದ ಕರ್ತವ್ಯಗಳನ್ನು ಮಾಡದೆ ಆತನಿಗೆ ಈ ವಿಶ್ವದ ವಸ್ತುಗಳನ್ನು ಸ್ವೀಕರಿಸಲು ಅಧಿಕಾರವಿಲ್ಲ. ಕಡುಬಡವನಾದರೂ ಕರ್ತವ್ಯನಿಷ್ಠನಾದರೆ ಅವನಿಗೆ ತನ್ನ ಜೀವನಕ್ಕೆ ಆವಶ್ಯಕವಾದುದನ್ನು ಪಡೆಯಲು ಅಧಿಕಾರವಿದೆ. ಇದನ್ನೆ ( ಈಶಾವಾಸ್ಯೋಪನಿಷತ್ತಿ ನಲ್ಲಿ ಹೇಳಿದೆ; ಕುರ್ವನ್ನೇವೇಹ ಕರ್ಮಾಣಿ ಜಿಜೀವಿಷೇತ್‌ । ಸೊತ್ತು ವ್ಯಕ್ತಿಗತವಾಗಿದ್ದರೆ ಆತನು ಅದನ್ನು ತನಗಾಗಿ, ತನ್ನ ಪರಿವಾರದವರಿಗಾಗಿಯೇ ಉಪಯೋಗಿಸುತ್ತಾನೆ. ತನ್ನ ಸಂಚಯವನ್ನು ಹೆಚ್ಚಿಸಲು ಇತರರನ್ನು ಶೋಷಣೆ ಮಾಡಲು ಆತನು ಹಿಂಜರಿಯುವುದಿಲ್ಲ. ವಕ್ಷದ ಹಾಗೂ ಒಂದು ಗುಂಪಿನ ಸರ್ವಾಧಿಕಾರವು ಬೆಳೆದು ವ್ಯಕ್ತಿತ್ವದ ದಮನ ಮತ್ತು ಪ್ರಜೆಗಳ ಶೋಷಣೆಯು ನಡೆಯಲು ಅವಕಾಶವಿದೆ. ಎಲ್ಲ ವಸ್ತುಗಳ ಒಡೆತನ ವ್ಯಕ್ತಿಯದೂ ಅಲ್ಲ ಸರಕಾರದ್ದೂ ಅಲ್ಲ; ಅವೆಲ್ಲವೂ ವರಮಾತ್ಮನವು ಎಂಬ ಭಾವವು ರೂಢಮೂಲವಾದರೆ ವ್ಯಕ್ತಿತ್ವ ಹಾಗೂ ರಾಷ್ಟ್ರ ಇವೆರಡರ ಪ್ರಗತಿಯು ಸಾಧ್ಯವಾಗುವುದು. ವಿಶ್ವದಲ್ಲಿ ಸತ್‌ ಪ್ರವೃತ್ತಿಗಳು ಬೆಳೆಯುವವು. ಜಗತ್ತಿಗೆಲ್ಲ ದೇವರೇ ಒಡೆಯನೆಂದು ಭಾವಿಸುವವನು ಆ ವಿಶ್ವಚಾಲಕ ಶಕ್ತಿಯ ನಿಷ್ಠಾವಂತ ನಾಗರಿಕನಾಗಿ ವರ್ತಿಸಲು ಪ್ರಯತ್ನಿಸುವನು. ಅಂತಹ ವ್ಯಕ್ತಿಯು ಭಗವಂತನ ನಿಯಮ-ಆದೇಶಗಳಿಗನುಸಾರವಾಗಿ ದೇವರಿಗೆ ಪ್ರೀತಿಕರವೂ ಲೋಕಹಿತಕಾರಿಯೂ ಆದ ಕರ್ತವ್ಯಮಾರ್ಗದಲ್ಲಿ ಸ್ವಲ್ಪವೂ ವಿಚಲಿತನಾಗದೆ ಮುನ್ನಡೆಯುವನು. ಇಂತಹ ಸತ್ಯರ್ಮಗಳೇ ದೇವರಿಗೆ ನಾವು ಕೊಡಬಹುದಾದ ಆಹಾರ. ಭಗವಂತನಿಂದ ನಾವು ಆಹಾರವನ್ನು ವಡೆಯುತ್ತಿರುವಾಗಪ್ರತಿಯಾಗಿ ನಾವೂ ಅವನಿಗೆ ಪ್ರಿಯವಾದ ಭೋಜ್ಯವಸ್ತುವನ್ನು ಕೊಡಬೇಡವೆ? ಲೋಕದಲ್ಲಿ ಧರ್ಮ, ಕರ್ಮಗಳು ಲೋಪವಾದಾಗ ದೇವತೆಗಳು ಬಡವಾಗುತ್ತಾರೆಂದು ಪುರಾಣಗಳಲ್ಲಿ ವರ್ಣಿಸಲಾಗಿದೆ. ಇದರ ಅರ್ಥವೇನು? ನಾವು ಮಾಡುವ ಸತ್ಯರ್ಮಗಳನ್ನು ಪರಮಾತ್ಮ] ನು ಸ್ವೀಕರಿಸುವನು, ದೇವತೆಗಳು ಸ್ವೀಕರಿಸುವರು. ಶುಭಂ ಪಿಬತ್ಯಸೌ ನಿತ್ಯಂ ನಾಶುಭಂಸ ಹರಿಃ ಪಿಬೇತ್‌ । ಇಂತಹ ಸತ್ಯರ್ಮಗಳನ್ನು ನಾವು ಮಾಡುವುದರಿಂದಲೇ ದೇವತೆಗಳಿಗೆ ನಾವು ಆಹಾರ ಒದಗಿಸಿದಂತಾಗುವುದು. ಉತ್ತಮ ಧರ್ಮ, ಕರ್ಮಗಳಿಂದಲೇ ಲೋಕದಲ್ಲಿ ದೈವೀಶಕ್ತಿಯು ಪ್ರವರ್ಧಮಾನವಾಗುವುದು. ಇಂತಹ ಸತ್ಯರ್ಮಗಳು ಲೋಕದಲ್ಲಿ ಶಿಥಿಲವಾದರೆ ದೈವೀಶಕ್ತಿಗೆ ಆಹಾರ ಸಿಗದಂತಾಗಿ ಅದರ ಪೋಷಣೆಯು ನಿಂತುಹೋಗಿ ಲೋಕದಲ್ಲಿ ಆ ಶಕ್ತಿಯು ಕುಂಠಿತವಾಗುವುದು. ಇದರಿಂದ ಲೋಕಕ್ಕೆ ತೀವ್ರ ಹಾನಿ ಇದೆ. ಆದುದರಿಂದ ದೇವತೆಗಳಿಂದ ಉಪಕೃತರಾದ ನಾವು ಅವರಿಗೆ ಇಷ್ಟವಾದ ಆಹಾರವನ್ನು ಸಮರ್ಪಿಸುವುದು ನಮ್ಮ ಕರ್ತವ್ಯವಾಗಿದೆ. ಭಗವಂತನ ಉದ್ದೇಶದಿಂದ ಮಾಡುವ ಸತ್ಯರ್ಮವೇ ಯಜ್ಞ] ವಾಗಿದ್ದು ಇದೇ ದೇವತೆಗಳಿಗೆ ನಾವು ನೀಡಬಹುದಾದ ಪರಮ ಪವಿತ್ರ ನೈವೇದ್ಯವಾಗಿದೆ. ಇದರಿಂದಲೇ ಲೋಕದಲ್ಲಿ ದೈವೀಶಕ್ತಿಯು ವಿಜೃಂಭಿತವಾಗಿ ಹಿತವಾತಾವರಣದ ನಿರ್ಮಾಣವಾಗುವುದು: ಪರಸ್ಪರಂ ಭಾವಯಂತಃ ಶ್ರೇಯಃ ಪರಮವಾಪ್ಟೃಥ |
3.10–3.16 · ಯಜ್ಞ ಮತ್ತು ಜಗಚ್ಚಕ್ರ
ಯಜ್ಞಮತ್ತು ಜಗಚ್ಚಕ್ರ ಇಂತಹ ಯಜ್ಞವನ್ನು ಆಚರಿಸುವುದರಿಂದ ವಿಶ್ವಚಕ್ರವೂ ಯೋಗ್ಯ ರೀತಿಯಲ್ಲಿನಡೆಯಲು ಅವಕಾಶವಾಗುವುದು. ನಾವು ಮಾಡುವ ಶುಭ, ಅಶುಭ ಕರ್ಮಗಳು ಪ್ರಕೃತಿಯ ಮೇಲೂ ಒಳ್ಳೇ ಹಾಗೂ ಕೆಟ್ಟ ಪರಿಣಾಮವನ್ನು ಬೀರಬಲ್ಲವು. ಲೋಕದಲ್ಲಿ ಏನೂ ಅನಾಹುತ ನಡೆಯದೆ ಠಾಂತಿಸುಭಿಕ್ಷೆಗಳು ಉಂಟಾಗಲು ಸತ್ಯರ್ಮಗಳೂ ಕಾರಣವಾಗುವವು. ನಮ್ಮ ಪ್ರತಿಯೊಂದು ಕೃತಿಯೂ ಪ್ರಕೃತಿಯ ಮೇಲೆ ಅವ್ಯಕ್ತವಾಗಿ ಪರಿಣಾಮಗಳನ್ನು ಉಂಟುಮಾಡು ವುದು. ಅಣುವಿಕಿರಣದಿಂದ ಆಗುವ ಪರಿಣಾಮವು ನಮ್ಮ ಸ್ಟೂಲ ದೃಷ್ಟಿಗೆ ಗೋಚರಿಸದಿದ್ದರೂ ಅದರಿಂದ ಆಗುವ ದೂರಗಾಮಿಗಳಾದ ಅನರ್ಥ ಪರಿಣಾಮಗಳನ್ನು ಎಲ್ಲರೂ ಅಂಗೀಕರಿಸುವರು. ಅದರಂತೆ ಸತ್ಯರ್ಮಗಳ ಪ್ರತಿಕ್ರಿಯೆಯೂ ಪ್ರಕೃತಿಯ ಮೇಲೆ ಆಗುವುದೆಂಬ ಶಾಸ್ತ್ರಕಾರರ ವಚನವನ್ನು ನಾವು ಒಪ್ಪದಿರಲು ಕಾರಣವಿಲ್ಲ. ಅಧರ್ಮ, ಅನ್ಯಾಯಗಳು ನಡೆಯು ವಲ್ಲಿಯೂ ಮಳೆ, ಬೆಳೆ ಬರುವುದಿಲ್ಲವೇ ಎಂದು ಕೆಲವರು ಆಕ್ಷೇಪಿಸಬಹುದು. ಡಾಕ್ಟರರ ಸಲಹೆಯನ್ನು ಮೀರಿ ನಡೆದರೂ ಅಪಥ್ಯ ವಸ್ತುಗಳನ್ನು ಭುಂಜಿಸಿದರೂ, ಕೆಲವರು ದೃಢಕಾಯರಾಗಿಯೇ ಇರುವುದಿಲ್ಲವೇ ಎಂಬುದಾಗಿಯೇಇದಕ್ಕೆ ನಾವು ಉತ್ತರ ಕೊಡಬೇಕಾಗುತ್ತದೆ. ಒಂದು ಕಾರ್ಯಕ್ಕೆ ಹಲವಾರುಕಾರಣಗಳಿರುವವು. ಅಂತೆಯೇ ಲೋಕದಲ್ಲಿ ವಳಿ ಬೆಳೆಗಳು ಬಂದು ಸುಭಿಕ್ಷೆ. ನೆಲೆಸಲು ಪ್ರಕೃತಿಯಲ್ಲಿ ಇರುವ ಅನೇಕ ಕಾರಣಗಳಲ್ಲಿ ಸತ್‌ಕರ್ಮಾಚರಣೆಯೂ ಒಂದು ಎನ್ನುವುದರಲ್ಲಿ ಅನೌಚಿತ್ಯವೇನೂ ಇಲ್ಲ. ಅಂತೂ ನಾವು ಮಾಡುವ ಸತ್‌ಕರ್ಮಗಳಿಂದ ಜಗತ್ತಿನ ಮೇಲೆ ಎರಡು ವಿಧದ ವರಿಣಾಮವಾಗುವುದೆಂದು ನಾವು ಒಪ್ಪಬಹುದು. ಒಂದು ಪ್ರಾಕೃತಿಕವಾದರೆ ಇನ್ನೊಂದು ಸಾಮಾಜಿಕ. ಶ್ರೀಹರಿಯ ಉದ್ದೇಶದಿಂದ ನಾವು ಮಾಡುವ ಯಜ್ಞರೂವವಾದ ಸತ್‌ಕರ್ಮಗಳಿಂದ ದೈವೀಶಕ್ತಿಯು ಜಾಗ್ರತವಾಗಿ ನೀತಿ, ಶೀಲ, ಸದ್ಗುಣಗಳು ಬೆಳೆದು ಅನೀತಿ, ಭ್ರಷ್ಟಾಚಾರಗಳಿಗೆ ಅವಕಾಶವಿಲ್ಲ ವೆಂದಾದರೆ ಜಗತ್ತು ಸಹಜವಾಗಿಯೇ ಸಮೃದ್ಧಿಯ ಕಡೆಗೆ ಸಾಗುವುದು. ಇದು ಯಜ್ಞದಿಂದಾಗುವನಾಮಾಜಿಕ ಪರಿಣಾಮ. ಸಕಾಲದಲ್ಲಿಮಳೆ ಬೆಳೆಗಳು ಬಂದು ಯಾವುದೇ ಭೌತಿಕ ಉವದ್ರವಗಳಿಲ್ಲದೆ ಲೋಕದಲ್ಲಿ ಸುಭಿಕ್ಷೆಯೂ ಆಗುವುದು. ಇದು ಯಜ್ಞದಿಂದಾಗುವವ್ರಾಕೃತಿಕ ಪರಿಣಾಮ. ಇಂದು ಯಜ್ಞದೃಶ್ಟಿ ಇಲ್ಲದೆ ಸ್ವಾರ್ಥವ್ರವೃತ್ತಿಯೇ ನಮ್ಮಲ್ಲಿ ನೆಲೆಸಿರುವುದರಿಂದ. ಇವೆರಡೂ ಸತ್ಪರಿಣಾಮಗಳಿಗೆ ನಾವು ಎರವಾಗಿದ್ದೇವೆ. ದೇವತೆಗಳಿಗೆ ಸತ್ಯರ್ಮಗಳನ್ನು ಅರ್ಪಿಸದೆ ಅವರಿಗೆ ಆಹಾರ ಸಮಸ್ಯೆಯನ್ನು ನಾವು ನಿರ್ಮಿಸಿರುವುದರಿಂದ ನಮಗೂ ಆಹಾರಸಮಸ್ಯೆ ಉಂಟಾಗಿದೆ. ವಿಶ್ವಚಕ್ರದ ಪ್ರವರ್ತನೆಗಾಗಿ ದುಡಿಯುವುದು ಪ್ರಪಂಚದಘಟಕರಾಗಿರುವ ನಮ್ಮ ಅವಶ್ಯ ಕರ್ತವ್ಯವಾಗಿದೆ. ನಮ್ಮ ಸತ್‌ಕರ್ಮ ಸದ್‌ವ್ಯವಹಾರಗಳಿಂದ ಪ್ರಾಕೃತಿಕವಾಗಿಯೂ ಸಾಮಾಜಿಕವಾಗಿಯೂ ಉತ್ತಮ ವಾತಾವರಣವು ನೆಲೆಸುವಂತೆ ಪ್ರಯತ್ನಿಸಿ ಜಗಚ್ಚಕ್ರದ ಅಬಾಧಿತವಾದ ಮುನ್ನಡೆಗೆ ನಾವು ಸಹಕಾರಿಗಳಾಗಿ ಸೃಷ್ಟಿಕರ್ತನ ಸೇವೆಯನ್ನು ಸಲ್ಲಿಸಬೇಕು. ಏವಂ ಪ್ರವರ್ತಿತಂ ಚಕ್ರಂ ನಾನುವರ್ತಯತೀಹ ಯಃ । ಎಂದು ವರಮಾತ್ಮನು ಈ ವಿಶ್ವಚಕ್ರದ ಪ್ರವರ್ತನೆಯ ಕಾರ್ಯದಲ್ಲಿ ಸಹಕಾರಿಯಾಗದೆತನ್ನ ಭೌತಿಕಸುಖದಲ್ಲಿಯೇ ಲೋಲುವನಾದವನ ಜೀವನವು ವ್ಯರ್ಥವೆಂದು ನಿಂದಿಸಿರುವನು. ವರಮಾತೃನು ಈ ಜಗತ್ತಿಗೆ ನಮ್ಮನ್ನು ಬರೀ ಕೈಯಿಂದ ಕಳಿಸಿಲ್ಲ. ತಂದೆಯು ಮಗನಿಗೆ ಸರಿಯಾಗಿ ಬಂಡವಾಳ ನೀಡಿ ವ್ಯವಹಾರವನ್ನು ಆರಂಭಿಸುವುದಕ್ಕಾಗಿ ಇನ್ನೊಂದು ಊರಿಗೆ ಕಳಿಸುವಂತೆ ಭಗವಂತನೂ ನಮ್ಮನ್ನು ಈ ಪ್ರವಂಚಕ್ಕೆ ಕಳಿಸಿದ್ದಾನೆ. ಅವನು ನಮಗೆ ನೀಡಿದ ಬಂಡವಾಳವೆಂದರೆ ಈ ಯಜ್ಞ ದೃಷ್ಟಿ: ಸಹಯಡಜ್ಞಾ ಪ್ರಜಾಃ ಸೃಷ್ಟಾಃ। ಅನೇನ ಪ್ರಸವಿಷ್ಯಧ್ವಮ್‌ | ಈ ಯಜ್ಞದೃಷ್ಟಿಯನ್ನು ಉಪಯೋಗಿಸಿಕೊಂಡು ಐಹಿಕ, ಆಮುಷ್ಠಿಕ, ವೈಯಕ್ತಿಕ, ಸಾಮಾಜಕ ಸುಖ-ಹಿತಗಳನ್ನು ಪಡೆಯಿರಿ ಎಂದು ಪರಮಾತ್ಮನು ಇಲ್ಲಿಗೆ ನಮ್ಮನ್ನು ಕಳಿಸಿದ್ದಾನೆ. ಪರಮಾತ್ಮನು, ಸಜ್ಜೀವರ ಆತ್ಮವಿಕಾಸಕ್ಕಾಗಿಯೇ ಈ ಸೃಷ್ಟಿಯನ್ನು ಏರ್ವಡಿಸಿದ್ದಾನೆ. ಆತ್ಮನು ತನ್ನ ಸುಪ್ತವಾದಸುಂದರವ್ಯಕ್ತತ್ವವನ್ನು ವಡೆಯಲಿ ಎಂಬ ಅಭಿಪ್ರಾಯದಿಂದಲೇ ಈ ಜಗತ್ತನ್ನು ಪರಮಾತ್ಮನು ನಿರ್ಮಿಸಿರುವನು. ಅದಕ್ಕಾಗಿ ಈ ಯಜ್ಞದೃಷ್ಟಿಯೆಂಬ ಪವಿತ್ರ ಸಾಧನವನ್ನು ನಮಗೆ ನೀಡಿರುವನು. ಈ ಸೃಷ್ಟಿಯ ಉದ್ದೇಶವನ್ನು, ಜೀವವಿಕಾಸದ ಬಗ್ಗೆ ಪರಮಾತ್ಮನಿಗೆ ಇರುವ ಈ ಸಂಕಲ್ಪವನ್ನು ನಾವು ಅರಿತುಕೊಂಡು ಅವನ ಉದ್ದೇಶಕ್ಕನುಗುಣವಾಗಿ ಈ ವಿಶ್ವದಿಕಾಸದ ಕಾರ್ಯದಲ್ಲಿನಾವೂ ಪಾಲುಗಾರರಾಗ ಬೇಕು. ಈ ಹೊಣೆಗಾರಿಕೆಯನ್ನು ತಿಳಿದುಕೊಳ್ಳದೆ ಸ್ವಾರ್ಥಮಾತ್ರ ಪರಾಯಣ ರಾಗಿ ಈ ಯಜ್ಞರೂವವಾದ ಕರ್ತವ್ಯವನ್ನು ನಿರ್ವಹಿಸದೆ ನಾವು ದೂರಸರಿದರೆ ಅದು ದೇವವಿರೋಧಿಯೂ ವಿಶ್ವವಿಘಾತಕವೂ ಆದ ಪ್ರವೃತ್ತಿ ಎನಿಸುವುದು. ಪರಮಾತ್ಮನಿಂದ ಉಪಕಾರವನ್ನು ವಡೆದೂ ಅವನ ಈ ವಿಶ್ವಕಾರ್ಯದಲ್ಲಿ ನಾವು ಭಾಗವಹಿಸದೆ ಇರುವುದು ಅಕ್ಷಮ್ಯ ಅವರಾಧವೂ ಆಗುವುದು. ಹೀಗೆ ಯಜ್ಞರೂವವಾದ ಕರ್ತವ್ಯವು ಬಂಧಕವಲ್ಲವೆನ್ನುವುದರ ಜೊತೆಗೆ ಕೃತಜ್ಞತಾಭಾವದಿಂದಲೂ ಲೋಕದಪ್ರಾಕೃತಿಕಸಾಮಾಜಿಕವ್ಯವಸ್ಥೆಯ ರಕ್ಷಣೆಯ ದೃಷ್ಟಿಯಿಂದಲೂ ಇಂತಹ ಕರ್ತವ್ಯವನ್ನು ಆಚರಿಸುವುದು ಅತ್ಯಂತ ಆವಶ್ಯಕವೂ ಅನಿವಾರ್ಯವೂ ಆಗಿದೆ. ಎಂಬುದನ್ನು ಇಲ್ಲಿ ಮನಗಾಣಿಸಲಾಗಿದೆ. ಮನುಕುಲದಲ್ಲಿ ಹುಟ್ಟಿದ ಪ್ರತಿಯೊಬ್ಬನೂ ಕರ್ಮವು ಬಂಧಕವೆಂದು ಹೆದರಿ ಕೂಡದೆ ಯಜ್ಞರೂವವಾಗಿ ಭಗವತ್‌ಸೇವಾದೃಷ್ಟಿಯಿಂದ ಕರ್ತವ್ಯಗಳನ್ನು ಆಚರಿಸಲೇಬೇಕೆಂದು ಗೀತೆಯ ಪ್ರತಿಪಾದನೆ ಇದೆ.
3.1–3.35 · ಸ್ವಧರ್ಮೇ ನಿಧನಂ ಶ್ರೇಯಃ
ಸ್ವಧರ್ಮೇ ನಿಧನಂಶ್ರೇಯಃ ಇನ್ನು ಅರ್ಜುನನ ತತ್ಮಿಂ ಕಮ ಣಿ ಘೋರೇಮಾಂ ನಿಯೋಜಯಸಿ.... । ಎಂಬ ಪ್ರಶ್ನೆ ಉಳಿದಿದೆ. ಕರ್ಮದ ಪ್ರಮಾಣವು ಕಡಿಮೆಯಾಗಿರುವ ಸನಕಾದಿಗಳ ಜ್ಞಾನಯೋಗದ ಮಾರ್ಗವಿರುವಾಗ ಯುದ್ಧದ ಈ ಕಠೋರ ಮಾರ್ಗವನ್ನು ಯಾಕೆತಾನು ಆರಿಸಬೇಕು? ಅರಣ್ಯದಲ್ಲಿ ಶಾಂತನಾಗಿದ್ದು ಜಪ, ತಪಸ್ಸು ಮುಂತಾದ ಕರ್ಮಗಳನ್ನು ಆಚರಿಸಿಕೊಂಡು ಹಾಯಾಗಿ ಯಾಕೆ ಇರಬಾರದು ಎಂದು ಅರ್ಜುನನು ಮಾಡಿದ ಪ್ರಶ್ನೆಗೆ ಉತ್ತರ ಕೊಡುವುದು ಉಳಿದಿದೆ. ಇದಕ್ಕೆ ಗೀತೆಯ ಸಮಾಧಾನವು ಹೀಗಿದೆ : ಪ್ರತಿಯೊಬ್ಬನಿಗೂ ಅನೇಕ ಕರ್ತವ್ಯಮಾರ್ಗಗಳು ತೋರಬಹುದು. ಅವುಗಳಲ್ಲಿ ಯಾವುದು ತನ್ನ ಸ್ವಧರ್ಮ ವೆಂಬುದನ್ನು ಅರಿತುಕೊಂಡು ಆ ಮಾರ್ಗದಲ್ಲಿ ನಡೆಯುವುದರಲ್ಲೇ ಅವನ ಪುರುಷಾರ್ಥ ಅಡಗಿದೆ. ವ್ಯಕ್ತಿಯ ಸ್ವರೂಪ, ಯೋಗ್ಯತೆಯನ್ನು ಅನುಸರಿಸಿ ಕರ್ತವ್ಯಗಳೂ ಬೇರೆಬೇರೆಯಾಗಿರುತ್ತವೆ. ನಮ್ಮ ವ್ಯಕ್ತಿಸ್ವರೂಪಕ್ಕನುಸರಿಸಿ ನಾವು ಮಾಡಬೇಕಾದ ಕರ್ತವ್ಯವನ್ನು ನಿರ್ಧರಿಸಬೇಕು. ಶುಕ್ಕ ಸನಕಾದಿಗಳು ಜ್ಞಾನಯೋಗವನ್ನು ಅನುಸರಿಸುವುದೂ ಮನು, ಜನಕ ಮೊದಲಾದವರು ಕರ್ಮಯೋಗವನ್ನು ಅವಲಂಬಿಸಿರುವುದೂ ಅವರವರವ್ಯಕ್ತಿತ್ತವನ್ನು ಆಧರಿಸಿದ ಸ್ವಧರ್ಮಗಳಿಗೆ ಅನುಸಾರವಾಗಿಯೇ ಆಗಿದೆ. ಅರ್ಜುನನದೂ ಜನಕಾದಿಗಳಂತೆ ಕರ್ಮಯೋಗಕ್ಕೆ ಮೀನಲಾಗಿರಿಸಿದ್ದ ಜೀವನ. ಅವನ ವ್ಯಕ್ತಿತ್ವವೇ ಅಂತಹದು. ಶಮಪ್ರಧಾನವಾದ ಯತಿಧರ್ಮವನ್ನು ಸ್ವೀಕರಿಸಿ ನಡೆಯುವ ಸ್ವರೂಪವು ಅವನದಲ್ಲ. ಅವನು ಆಧಿಕಾರಿಕರೆಂದು ಪರಿಗಣಿಸಲಾದ ಜೀವರ ವರ್ಗದಲ್ಲಿ ಸೇರಿದವನು. ಲೋಕದಲ್ಲಿಯ ದೌಷ್ಟ್ಯ ಅಧರ್ಮಗಳನ್ನು ನಿವಾರಿಸಿ ಸಜ್ಜನರನ್ನು ಸಂರಕ್ಷಿಸಿ ಮುನ್ನಡೆಸುವ ಆಧಿಕಾರಿಕ ವ್ಯಕ್ತಿತ್ವವು ಅವನದಾಗಿದೆ. ತನ್ನ ವ್ಯಕ್ತಿತ್ವಕ್ಕೆ ಅನುಗುಣವಾದ ಕರ್ತವ್ಯವನ್ನು ಬಿಟ್ಟು ಬೇರೆ ದಾರಿಯಲ್ಲಿ ನಡೆದರೆ ಅದರಿಂದ ಅವನ ಪ್ರಗತಿಯಾಗಲಾರದು. ಹೀಗೆ ಪ್ರತಿಯೊಬ್ಬರ ವಿಷಯದಲ್ಲೂ ವ್ಯಕ್ತಿಯ ಸ್ವರೂವವನ್ನು ಆಧರಿಸಿ ಕರ್ತವ್ಯವು ನಿರ್ಧರಿಸಲ್ಪಡುತ್ತದೆ. ಅದರಂತೆ ಸಾಮಾಜಿಕ ಹೊಣೆಗಾರಿಕೆಯಿಂದ ಪ್ರಾಪ್ತವಾಗುವ ವರ್ಣಾಶ್ರಮೋಚಿತ ಕರ್ತವ್ಯಗಳನ್ನು ನಾವು ನಿಷ್ಠೆಯಿಂದ ಅನುಸರಿಸಬೇಕು. ತನ್ನ ನಿಜಸ್ವರೂಪವನ್ನು ಪರಿಶೀಲಿಸಿ ವ್ಯಕ್ತಿಧರ್ಮವನ್ನು ನಿರ್ಧರಿಸುವಂತೆ ಶಾಸ್ತ್ರಗಳಿಂದ ನಮ್ಮ ಸಾಮಾಜಿಕ ಜವಾಬ್ದಾರಿಯನ್ನು ಅರಿತು ಕ್ರಮಪ್ರಾಪ್ತವಾದ ನಮ್ಮ ವರ್ಣಧರ್ಮಗಳನ್ನು ತಿಳಿದು ಅದರಂತೆ ನಡೆಯಬೇಕು. ಈ ವ್ಯಕ್ತಿಧರ್ಮ, ವರ್ಣಧರ್ಮಗಳೆರಡೂ ಸ್ವಧರ್ಮಗಳಾಗಿದ್ದು ಈ ಎರಡೂ ದೃಷ್ಟಿಗಳಿಂದ ಯತಿಧರ್ಮದ ಬದಲು ಕ್ಹಾತ್ರಧರ್ಮವನ್ನು ಅರ್ಜುನನು ಪರಿಗ್ರಹಿನ ಬೇಕಾಗಿದೆ. ಸಂನ್ಯಾಸಧರ್ಮವಾಗಲಿ ಅರಣ್ಯಕ್ಕೆ ಹೋಗಿ ವಾನವ್ರಸ್ಥವೃತ್ತಿಯನ್ನು ಅವಲಂಬಿಸುವುದಾಗಲಿ ಶ್ರೇಷ್ಠವೇ ಇರಬಹುದು. ಆದರೆ ದುಷ್ಟನಿಗ್ರಹ ಹಾಗೂ ಧರ್ಮ ರಕ್ಷಣೆಯ ವಿಶಿಷ್ಟ ಹೊಣೆಗಾರಿಕೆಯನ್ನು ಹೊತ್ತ ಅರ್ಜುನನು ತನ್ನ ಈ ಕರ್ತವ್ಯವನ್ನು ತೊರೆದು ಶ್ರೇಷ್ಠ ಮಾರ್ಗವೆಂದು ಸಂನ್ಯಾಸಿ ಅಥವಾ ವಾನಪ್ರಸ್ಥನಾಗುವುದು ಉಚಿತವಾಗಲಾರದು. ಬೇರೆ ಅಧಿಕಾರ ಸ್ಥಾನಗಳಲ್ಲಿ ನಿಯುಕ್ತರಾದವರು ತಮ್ಮ ಕರ್ತವ್ಯದಲ್ಲಿ ಅಲಕ್ಷ್ಯ ಮಾಡಿ ಬೇರೆ ಎಷ್ಟೇ ಉಪಯುಕ್ತಕಾರ್ಯವನ್ನುನಡೆಸಿದರೂ ಅದು ಪ್ರಶಂಸನೀಯವೆನಿಸುವುದಿಲ್ಲ. ಸೈನ್ಯ ಅಥವಾ ಆಡಳಿತದ ಕಾರ್ಯದಲ್ಲಿ ನಿಯುಕ್ತರಾದವರು ತಮ್ಮ ಕೆಲಸದ ವೇಳೆಯಲ್ಲಿ ಪವಿತ್ರ ಕಾರ್ಯವೆಂದು ಧಾರ್ಮಿಕ ಗಂಥಗಳ ಅಧ್ಯಯನದಲ್ಲೇ ತೊಡಗಿದರೆ ಅದು ಧರ್ಮವೆನಿಸಲಾರದು. ತನಗೆ ನಿಯೋಜಿಸಲ್ಪಟ್ಟ ಕಾರ್ಯವನ್ನು ನಿಷ್ಠೆಯಿಂದ ಆಚರಿಸುವುದರಿಂದಲೇ ಮನುಷ್ಯನು ಶ್ರೇಷ್ಠ ವ್ಯಕ್ತಿಯಾಗಬಲ್ಲನು. ಹೊರತು ಅವನು ಯಾವಕಾರ್ಯಮಾಡುತ್ತಿದ್ದಾನೆಂಬು ದರಿಂದಲೇ ಅವನ ಮಹತ್ತ್ವವನ್ನು ನಿರ್ಧರಿಸಲಾರೆವು. ಹೀಗೆಯೇವ್ಯಕ್ತಿಯ ವಿಶಿಷ್ಟ ಪರಿಸ್ಥಿತಿ, ಸಂದರ್ಭಗಳನ್ನು ಅನುಸರಿಸಿ ನಮ್ಮ ಕರ್ತವ್ಯವನ್ನು ವಿವೇಚಿಸುವ ಪ್ರಸಂಗವೂ ನಮ್ಮ ಜೀವನದಲ್ಲಿ ಬರುತ್ತದೆ. ನದಿಯಲ್ಲಿ ಒಬ್ಬನು ಮುಳುಗುತ್ತಿರುವಾಗ, ತೀರದಲ್ಲಿ ಜಪಮಾಡುತ್ತಿರುವವನು ಜಪವನ್ನು ಬಿಟ್ಟು ಮುಳುಗುವವನನ್ನು ಮೇಲಕ್ಕೆತ್ತಲು ಪ್ರಯತ್ನಿಸುವುದೇ ಧರ್ಮವೆನಿಸುವುದು. ಜಪವೇ ಶ್ರೇಷ್ಠವೆಂದು ಆತನು ಮೂಗು ಹಿಡಿದು ಕುಳಿತರೆ ಅದು ಸರಿಯೆನಿಸುವುದೆ? ದೇವರ ಗುಡಿಗೆ ಹೋಗುವುದೇನೋ ಒಳ್ಳೆಯ ಕಾರ್ಯವೇ; ಆದರೆ ಶಾಲೆಗೆ ಹೋಗುವುದನ್ನು ತಪ್ಪಿಸಿ ಹುಡುಗರು ದೇವರ ಗುಡಿಗೆ ಹೋದರೆ ಅದನ್ನು ಯಾರೂ ಅಭಿನಂದಿಸಲಾರರು. ಮಕ್ಕಳಿಗಾಗಿ, ಪತಿಗಾಗಿ ತಾನು ನಿರ್ವಹಿಸಬೇಕಾದ ಕೌಟುಂಬಿಕ ಕರ್ತವ್ಯಗಳನ್ನು ತೊರೆದು ಮಹಿಳೆಯರು ಸಮಾಜಸೇವೆಯೆಂದು ಹೊರಗೇ ಅಡ್ಮಾಡುತ್ತಿದ್ದರೆ ಅದು ಧರ್ಮ ಎನಿಸಲಾರದು. ಮಹಾಭಾರತದಲ್ಲಿ ಧರ್ಮವ್ಯಾಧನ ಉಪಾಖ್ಯಾನದಲ್ಲಿ ಪ್ರತಿಯೊಬ್ಬನೂ ತನ್ನ ಈ ವೈಯಕ್ತಿಕ ಹೊಣೆಗಾರಿಕೆಯನ್ನು ಪಾಲಿಸುವುದರ ಅವಶ್ಯಕತೆಯನ್ನು ಒತ್ತಿಹೇಳಲಾಗಿದೆ. ತರುಣ ಬ್ರಾಹ್ಮಣ ಯುವಕನೊಬ್ಬನು ತನ್ನ ವೃದ್ಧ ತಾಯಿತಂದೆಗಳಿಗೆ ಸಲ್ಲಿಸಬೇಕಾದ ಸೇವಾಕಾರ್ಯವನ್ನು ನಿರ್ವಹಿಸದೆ ಯಾವ ರಕ್ಷಕರೂ ಇಲ್ಲದ ಅವರನ್ನು ಮನೆಯಲ್ಲೇ ಬಿಟ್ಟುತಾನು ತಪಸ್ವಿಯಾಗಬೇಕೆಂದು ಅರಣ್ಯದಲ್ಲಿ ಇರುತ್ತಾನೆ. ಅನೇಕ ವರ್ಷಗಳವರೆಗೆ ತಪ್ಪಸ್ಸನ್ನು ಆಚರಿಸಿ ಉಗ್ರಶಕ್ತಿಯನ್ನು ಪಡೆಯುತ್ತಾನೆ. ಒಮ್ಮೆ ಒಂದು ಮರದ ಕೆಳಗೆ ಆತ ಕುಳಿತಿರುವಾಗಮೇಲಿರುವಹಕ್ಕಿಯು ಆತನಮೇಲಿತನ್ನ ಅಶುಚಿ ಪದಾರ್ಥವನ್ನು ಕೆಡಹಿತು. ಕೋಪಾವಿಷ್ಠನಾದ ಆತನು ಮುಖವೆತ್ತ ಕೆಂಗಣ್ಣಿನಿಂದ ಆಹಕ್ಕಿಯನ್ನು ನೋಡಿದ. ಕೂಡಲೇ ಅದು ಸುಟ್ಟು ಬೂದಿಯಾಯಿತು. ತನ್ನ ತಪಸ್ಸಿನ ಬಗ್ಗೆ ಈತನಲ್ಲಿ ಅಹಂಭಾವ ಉದಯಿಸಿತು. ಭಿಕ್ಷೆಗಾಗಿ ಗ್ರಾಮದಲ್ಲಿ ಸಂಚರಿಸುತ್ತ ಈ ತಪಸ್ವಿಯು ಒಂದು ಮನೆಯ ಮುಂದೆ ಬಂದು ನಿಂತನು. ಮನೆಯ ಗೃಹಿಣಿಯು ಅತ್ಯಂತಸಾದ್ವಿಯಾಗಿದ್ದಳು. ತಪಸ್ವಿಗೆ ಭಿಕ್ಷೆಯನ್ನು ನೀಡಬೇಕೆಂದು ಆಕೆಹೊರಟು ನಿಂತಾಗ ಬಳಲಿದ ತನ್ನ ಪತಿಯು ಹೊರಗಿನಿಂದ ಬರುವುದನ್ನು ಕಂಡಳು. ಪತಿಯನ್ನು ಉಪಚರಿಸಿ ಆತನ ಸೇವೆಯನ್ನು ಮಾಡುವ ಭರದಲ್ಲಿ ಈ ಅತಿಥಿಯನ್ನು ಅಕೆ ಮರೆತಳು. ಸ್ವಲ್ಪಹೊತ್ತಿನ ನಂತರ ಅತಿಥಿಯ ನೆನಪಾಗಿ ಭಿಕ್ಷ ಹಿಡಿದುಕೊಂಡು ಅವನ ಬಳಿಗೆ ಬಂದಳು. ಕೋವಾಕ್ರಾಂತನಾದ ಅತಿಥಿ ತಪಸ್ವಿಯನ್ನು ಇವಳು ಎಷ್ಟು ಸಂತೈಸಿದರೂ ಅವನ ಸಿಟ್ಟು ಇಳಿಯಲಿಲ್ಲ. ಆಕ್ಕೆ “ನಾನೇನು ಅರಣ್ಯದಲ್ಲಿನೀನು ಬೂದಿಮಾಡಿದ ಹಕ್ಕಿಯಲ್ಲ' ಎಂದು ನುಡಿದಳು. ಇದನ್ನು ಕೇಳಿ ಆತಪಸ್ವಿತಣ್ಣಗಾದ. ಅಲ್ಲಿಯ ಘಟನೆಯನ್ನು ಇವಳು ತಿಳಿದ ಬಗೆ ಹೇಗೆ? ಇವಳಿಗೆ ಈ ಜ್ಞಾನಶಕ್ತಿ ಹೇಗೆ ಬಂದಿತು? ಎಂದು ಅಚ್ಚರಿಗೊಂಡು ಇವಳನ್ನು ಬೇಡಿದಾಗ, ಧರ್ಮವ್ಯಾಧನ ಬಳಿ ಹೋಗಲು ತಿಳಿಸಿದಳು. ಧರ್ಮವ್ಯಾಧನು ಮಾಂಸವನ್ನು ಮಾರುತ್ತಿದ್ದನು. ಅವನ ಈ ವ್ಯಾಪಾರವನ್ನು ಕಂಡು ಅವನ ಬಳಿ ಹೋಗಲು ಈ ತಪಸ್ವಿ ಹಿಂಜರಿದಾಗ, ಧರ್ಮವ್ಯಾಧನೇ "ಸಾಧ್ವೀಮಣಿಯಿಂದ ಕಳಿಸಲ್ಪಟ್ಟವನಲ್ಲ ವೇನೀನು?' ಎಂದು ಈತನ ಪೂರ್ವಾಪರವನ್ನು ಹೇಳಲು, ಇವನಿಗೆ ಮತ್ತೂ ವಿಸ್ಮಯವಾಯಿತು. ಧರ್ಮವ್ಯಾಧನು ತಾನು ಮಾಡುವ ವ್ಯಾಪಾರದ ನೀತಿ, ಸೇವಾಭಾವಗಳನ್ನು ಆತನಿಗೆ ವಿವರಿಸಿ, ತನ್ನ ವೃದ್ಧ ತಂದೆತಾಯಿಗಳ ಸೇವೆಯನ್ನು ತಾನು ಮಾಡುವ ವಿಧಾನವನ್ನು ಅವನಿಗೆ ಪ್ರತ್ಯಕ್ಷವಾಗಿ ತೋರಿಸಿದನು. ತಂದೆತಾಯಿಗಳ ಬಗ್ಗೆ ತಾನು ಮಾಡಬೇಕಾದ ಕರ್ತವ್ಯವನ್ನು ಬಿಟ್ಟು ಅರಣ್ಯಕ್ಕೆ ಬಂದಿರುವ ಈ ತವಸ್ವಿಗಿಂತ ಶೆಚ್ಚಿನಸಿದ್ಧಿಯನ್ನು, ಯೋಗ್ಯತೆಯನ್ನು ಪಕಿಯ ಬಗ್ಸೆ ತಂದೆತಾಯಿಯರ ಬಗ್ಗೆ ತಮ್ಮ ವೈಯಕ್ತಿಕ ಕರ್ತವ್ಯವನ್ನು ನಿಷ್ಠೆಯಿಂದ, ಭಗವದ್ಭಕ್ತಿಯಿಂದ ಸಲ್ಲಿಸುತ್ತಲೇ ತಮ್ಮ ವ್ಯವಹಾರವನ್ನು ನಡೆಸುತ್ತಿರುವ ಸಾಧ್ವಿ ಹಾಗೂ ಧರ್ಮವ್ಯಾಧರು ಪಡೆದಿರುವರು. ಯಾರೂತಾವು ಮಾಡಬೇಕಾದ ವೈಯಕ್ತಿಕಹಾಗೂಸಾಮಾಜಿಕ ಕರ್ತವ್ಯಗಳನ್ನು ಬಟ್ಟು ಬೇರೆ ಯಾವುದೇಎಷ್ಟೇ ಶ್ರೇಷ್ಠವಾದ ಕಾರ್ಯಗಳನ್ನು ಮಾಡಿದರೂ ಅವರು ಅದರಿಂದ ಶ್ರೇಯಸ್ಸನ್ನು ಪಡೆಯಲಾರರು. ಧರ್ಮವ್ಯಾಧನ ಕಥೆಯಲ್ಲಿ ಕಂಡುಬರುವ ತಪಸ್ವಿ ಬ್ರಾಹ್ಮಣನು ಈ ಮಾತಿಗೆ ಒಳ್ಳೆಯ ನಿದರ್ಶನನಾಗಿದ್ದಾನೆ. ಪ್ರತಿಯೊಬ್ಬರೂ ತಮ್ಮ ತಮ್ಮ ವ್ಯಕ್ತಿಧರ್ಮ, ವರ್ಣ-ಧರ್ಮಗಳನ್ನು ಅರಿತುಕೊಂಡು ತಮ್ಮ ಹೊಣೆಗಾರಿಕೆಯನ್ನು ಭಕ್ತಿಯಿಂದ, ಶ್ರದ್ಧೆಯಿಂದ ನಿರ್ವಹಿಸುವುದರಲ್ಲೇ ಅವರ ಜೀವನದಸಿದ್ಧಿ ಇದೆ. ಸ್ವಧರ್ಮೆ ನಿಧನಂ ಶ್ರೇಯಃ । ಪರಧರ್ಮೋ ಭಯಾವಹಃ। ಅರ್ಜುನನದು ಕರ್ಮಯೋಗಿಯ ವ್ಯಕ್ತಿತ್ವ ಅದರಲ್ಲೂ ಕ್ಚತ್ರಿಯನಾಗಿ ಲೋಕ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತವ. ಇಂತಹ ಧರ್ಮಯುದ್ಧದಲ್ಲಿ ಪ್ರಮುಖ ಭಾಗವನ್ನು ವಹಿಸಿ ಕರ್ತವ್ಯವನ್ನು ಪೂರೈಸದೆ ಶಮಪ್ರಧಾನವಾದ ಯತಿಧರ್ಮವನ್ನು ಆಚರಿಸಲು ಅವನಿಗೆ ಅಧಿಕಾರ ಏನಿದೆ? ನೀರಿಗಿಂತ ಹಾಲು ಶ್ರೇಷ್ಠವೇನೋನಿಜ. ಆದರೆ ಮೀನನ್ನು ನೀರಿನಿಂದ ತೆಗೆದು ಹಾಲಿನಲ್ಲೇಇಟ್ಟರೆ ಅದು ಬದುಕಬಹುದೆ? ಅದರಂತೆ ಮಾನವನು ತನ್ನ ವ್ಯಕ್ತಿಧರ್ಮ, ವರ್ಣಧರ್ಮ, ಪ್ರಾಸಂಗಿಕ ಧರ್ಮಗಳನ್ನು ಪರಿಶೀಲಿಸಿ ತನ್ನ ಸ್ವಧರ್ಮವನ್ನು ನಿರ್ಧರಿಸಿ ಆಮಾರ್ಗದಿಂದಲೇ ನಡೆಯಬೇಕು. ಒಬ್ಬನು ತನಗೆ ಒಪ್ಪಿಗೆಯಾಗುವ ಪತ್ನಿಯನ್ನು ಆರಿಸಬಲ್ಲ. ತನಗೆ ಬೇಡವಾದಾಗ ಪತ್ನಿಯನ್ನು ತೊರೆಯಲೂ ಸಾಧ್ಯವಾಗಬಹುದು. ಆದರೆ ತನ್ನ ತಾಯಿಯ ಬಗ್ಗೆ ಹೀಗೆ ನಡೆಯಬಲ್ಲನೆ? ಈ ತಾಯಿ ಚೆನ್ನಾಗಿಲ್ಲ ಸುಂದರಳಾಗಿಲ್ಲ; ತನಗೆ ಬೇರೆತಾಯಿ ಬೇಕೆಂದು ಬದಲಿಸಲು ಸಾಧ್ಯವೆ? ನಾವು ಹುಟ್ಟುವಾಗಲೇ ನಮ್ಮತಾಯಿ ಸಿದ್ಧಳಾಗಿರುತ್ತಾಳೆ. ಅವಳನ್ನೇ ತಾಯಿಯೆಂದು ಸ್ವೀಕರಿಸಿ ಪ್ರತ್ರರಾಗಿ ನಮ್ಮ ಸೇವೆ, ಕರ್ತವ್ಯಗಳನ್ನು ನಾವು ಮಾಡಬೇಕಾಗುತ್ತದೆ. ಧರ್ಮದ ಬಗ್ಗೆಯೂ ಇದೇ ರೀತಿಯನ್ನು ನಾವು ಅನುಸರಿಸಬೇಕು. ನಾವು ಹುಟ್ಟುವಾಗಲೇನಮ್ಮ ಧರ್ಮವೂನಿರ್ಧರಿತವಾಗಿರುತ್ತದೆ. ನಮ್ಮ ಸೇವೆಯನ್ನು ಪಡೆಯಲು ಅದು ಸಿದ್ಧವಾಗಿರುವುದು. ಅದನ್ನು ಬದಲಿಸುವ ಗೋಜಿಗೇನಾವು ಹೋಗಬಾರದು. ನಮಗೆ ವ್ರಾಪ್ತವಾದ ಧರ್ಮವನ್ನು ನಿಷ್ಠೆಯಿಂದ ಅನುಷ್ಠಾನ ಮಾಡಬೇಕು. ಇದನ್ನೇ ವರ್ಣಧರ್ಮವೆನ್ನಲಾಗುವುದು.
Bannanje Govindacharya (1936–2020)Bhagavad Gita Pravachana
ದೇವಾನ್‌ ಭಾವಯತಾ ಅನೇನ ತೇ ದೇವಾಃ ಭಾವಯಂತು Js | ಪರಸ್ಪರಮ್‌ ಭಾವಯಂತಃ ಶ್ರೇಯಃ ಪರಮ್‌ ಅವಾಪ್ಸ್ಯಥ-ಇದರಿಂದ ದೇವತೆಗಳಿಗೆ ನೆರವಾಗಿ. ಆ ದೇವತೆಗಳು ನಿಮಗೆ ನೆರವಾಗಲಿ. ಒಬ್ಬರಿಗೊಬ್ಬರು ನೆರವಾಗುತ್ತಾ ಹಿರಿಯ ಹಿತವನ್ನು ಪಡೆಯಿರಿ. ಈ ರೀತಿ ಯಜ್ಞದ ಸೃಷ್ಟಿ ಮಾಡಿದ ಚತುರ್ಮುಖ ಹೇಳಿದನಂತೆ: “ಯಜ್ಞಗಳ ಮೂಲಕ ನೀವು ದೇವತೆಗಳಿಗೆ ನೆರವಾಗಿ ಹಾಗೂ ಅವರು ನಿಮ್ಮ ಅಭೀಷ್ಟವನ್ನು ಪೂರೈಸಲಿ" ಎಂದು. "ಹೀಗೆ ಒಬ್ಬರಿಗೊಬ್ಬರು ನೆರವಾಗುತ್ತಾ ಹಿರಿಯ ಹಿತವನ್ನು ಪಡೆಯಿರಿ" ಎಂದನಂತೆ. ನಾವು ನಮಗೆ ಬೇಕಾದುದನ್ನು ನಾವೇ ಸೃಷ್ಟಿಸಿಕೊಳ್ಳುತ್ತೇವೆ ಎನ್ನುವುದು ನಮ್ಮ ಭ್ರಮೆ. ನಾವು ಬಿತ್ತಿ ಬೆಳೆಯಬೇಕು ಎಂದರೆ ಪ್ರಕೃತಿಯಲ್ಲಿ ವಾತಾವರಣ ವೈಪರೀತ್ಯ ಆಗಬಾರದು. ಇಲ್ಲದಿದ್ದರೆ ನಮಗೆ ಏನನ್ನೂ ಬೆಳೆಯಲು ಸಾಧ್ಯವಿಲ್ಲ. ಪ್ರತಿಯೊಂದು ಕ್ರಿಯೆಯ ಹಿಂದೆ ಅನೇಕ ದೇವತಾಶಕ್ತಿಗಳು ಕಾರ್ಯ ನಿರ್ವಹಿಸುತ್ತಿರುತ್ತವೆ. ನಮ್ಮ ಪ್ರತಿಯೊಂದು ಅಂಗಾಂಗಳಿಗೂ ಒಬ್ಬ ಅಭಿಮಾನಿ ದೇವತೆ ಇದ್ದಾನೆ. ಆ ಶಕ್ತಿ ಕೆಲಸ ಮಾಡದೇ ಇದ್ದರೆ ನಾವು ಏನನ್ನೂ ಮಾಡಲು ಸಾಧ್ಯವಿಲ್ಲ. ಹೀಗೆ ನಮಗೆ ಬದುಕು ಕೊಟ್ಟು, ನೋಡುವ ಕಣ್ಣು, ಕೇಳುವ ಕಿವಿ ಕೊಟ್ಟು, ಒಳ್ಳೆಯದನ್ನು ನೋಡುವ, ಒಳ್ಳೆಯದನ್ನು ಕೇಳುವ ಬುದ್ಧಿ ಕೊಟ್ಟು, ಈ ಎಲ್ಲಾ ಕಾರ್ಯವನ್ನು ಒಂದು ದೇವತೆಗಳ ಸಮೂಹ ನಿರಂತರ ನಡೆಸುವಂತೆ ಭಗವಂತನ ವ್ಯವಸ್ಥೆ ಇದೆ. ಹೀಗಿರುವಾಗ ನಾವು ಇಂತಹ ದೇವತಾ ಶಕ್ತಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಬೇಕು. ಹೀಗೆ ಒಬ್ಬರಿಗೊಬ್ಬರು ನೆರವಾದಾಗ ನಾವು ಹಿತವನ್ನು ಕಾಣಲು ಸಾಧ್ಯ. ಸಾಮಾನ್ಯವಾಗಿ ಅಗ್ನಿ ಮುಖದಲ್ಲಿ ಮಾಡುವ ಪೂಜೆಯನ್ನು ಯಜ್ಞ ಎನ್ನುವುದು ವಾಡಿಕೆ. ದೇವರ ಪೂಜೆಯಲ್ಲಿ ಅಗ್ನಿ ಅತ್ಯಂತ ಮುಖ್ಯ ಪ್ರತೀಕ. ಏಕೆಂದರೆ ಅಗ್ನಿ ಅತ್ಯಂತ ಶುದ್ಧ. ಅಗ್ನಿಗೆ ಏನನ್ನು ಹಾಕಿದರೂ ಅದು ಶುದ್ಧವಾಗುತ್ತದೆ. ಅಗ್ನಿ ಭಗವಂತನ ಪ್ರತೀಕ. ಭಗವಂತನಿಗೆ ಆಕಾರವಿಲ್ಲ, ಆತ ಬೆಳಕಿನ ಪುಂಜ ಹಾಗೂ ಪವಿತ್ರ. ಇದೇ ಗುಣವನ್ನು ಅಗ್ನಿಯಲ್ಲಿ ನಾವು ಕಾಣಬಹುದು. ಇನ್ನು ನಾವು ಭಗವಂತನಿಗೆ ಏನನ್ನಾದರೂ ತಿನ್ನಿಸಬೇಕು ಎಂದರೆ ಅದು ಅಗ್ನಿ ಮುಖೇನ ಮಾತ್ರ ಸಾಧ್ಯ. ಯಜ್ಞದಲ್ಲಿ ನಾವು ಪೂಜೆ ಮಾಡುವುದು ಬೆಂಕಿಯನ್ನಲ್ಲ, ಅಗ್ನಿ ಮುಖೇನ ಅಗ್ನಿನಾರಾಯಣನ ಪೂಜೆ-ಯಜ್ಞ. ಈ ಅರಿವಿಲ್ಲದೆ ಯಜ್ಞವನ್ನು ಮಾಡಿದರೆ ಹೊಗೆ ತಿಂದು ಸಾಯಬೇಕಾದೀತು! ನಮ್ಮ ಪೂಜೆ ಅಗ್ನಿನಾರಾಯಣನಿಂದ ಸೂರ್ಯನಾರಾಯಣನನ್ನು ಸೇರಿ, ಮರಳಿ ನರನಾರಾಯಣನನ್ನು ತಲುಪುತ್ತದೆ. ಇದಕ್ಕಾಗಿ ದೇವರನ್ನು ಕುರಿತು ಮಾಡುವ ಯಜ್ಞ ಯಾವಾಗಲೂ ಹಗಲು ಹೊತ್ತಿನಲ್ಲೇ ನಡೆಯುತ್ತದೆ ಅಗ್ನಿಯ ಏಳು ಬಣ್ಣಗಳ ಮುಖೇನ ಸೂರ್ಯನ ಏಳು ಬಣ್ಣಗಳಲ್ಲಿ ವಿಲೀನವಾಗುವ ಯಜ್ಞಶಕ್ತಿ, ವಾತಾವರಣವನ್ನು ಸೇರಿ ಲೋಕಕ್ಕೆ ಮಂಗಳವನ್ನುಂಟುಮಾಡುತ್ತದೆ. ಇದನ್ನು ಇಲ್ಲಿ ಕೊಡು-ಕೊಂಡುಕೊಳ್ಳುವ ಕ್ರಿಯೆ ಎಂದಿದ್ದಾರೆ.
Bibek Debroy (1955–2024)The Bhagavad Gita
(11) ‘Through this,18 cherish the gods and those gods will cherish you. By cherishing each other, you will obtain that which is most desired.’