तत्त्ववित्तु महाबाहो गुणकर्मविभागयोः ।
गुणा गुणेषु वर्तन्त इति मत्वा न सज्जते ॥
tattvavittu mahābāho guṇakarmavibhāgayoḥ |
guṇā guṇeṣu vartanta iti matvā na sajjate ||
Sri Madhvacharya (1238–1317)Bhagavad Gita Tatparya Nirnaya
3.27–3.33
‘नाहं कर्ता हरिः कर्ता तत्पूजा कर्म चाखिलम्।
तथाऽपि मत्कृता पूजा तत्प्रसादेन नान्यथा।
तद्भक्तिस्तत्फलं मह्यं तत्प्रसादः पुनः पुनः।
कर्मन्यासो हरावेवं विष्णोस्तृप्तिकरः सदा।
यस्मात् स्वतन्त्र कर्तृत्वं विष्णोरेव न चान्यगम्।
तदधीनं स्वतन्त्रत्वं स्वावराप्येक्षयैव तु।
जीवस्य विकृतिर्नाम कर्तृत्वं जडसंश्रयम्।
पुमान् दोग्धा च गौर्दोग्ध्रीस्तनो दोग्धेतिवत् क्रमात्’ - इति ब्रह्मतर्कवचनादीश्वरजीवप्रकृत्यादीनां
कर्तृत्वमकर्तृत्वं च विभागेन ज्ञातव्यं सर्वत्र।
‘क्वचित् स्वभावः प्रकृतिः क्वचिच्चत्रिगुणात्मिका।
क्वचित् प्रकृष्टकर्तृत्वाद्भगवान् प्रकृतिर्हरिः’ इति शब्दनिर्णये।
‘स्वभावतस्त्रिविधा जीवा उत्तमाधममध्यमाः।
उत्तमास्तत्र देवाद्या मर्त्यमध्यास्तु मध्यमाः।
अधमा असुराद्याश्च नैषामस्त्यन्यथाभवः।
शरीरमात्रान्यथात्वे स्वजातिं पुनरेष्यति।
उत्तमा मुक्तियोग्यास्तु सृतियोग्यास्तु मध्यमाः।
अपरेऽन्धन्तमोयोग्याः प्राप्ति साधनपूर्तितः।
पूर्त्याभावेन सर्वेषामनादिः संसृतिः स्मृता।
नैव पूर्तिश्च सर्वेषां नित्यकालहरीच्छया।
अतोऽनुवर्तते नित्यं संसारोऽयमनादिमान्।
अतोऽधमानां जीवानां मिथ्याज्ञानादयोऽखिलाः।
स्वाभाविका गुणा ज्ञेया मध्यमर्त्येषु मिश्रिताः।
तत्त्वज्ञानं विष्णुभक्तिरित्याद्या देवतादिषु।
कार्यते ह्यवशः कर्म सर्वैस्तैः प्राकृतैर्गुणैः।
स्वाभाविकगुणानेतान् हेतुं कृत्वैव विष्णुना।
कर्मसु क्रियमाणेषु कर्ताऽहमिति मूढधीः।
मन्यते तत्त्वविद्विष्णोर्गुणा इच्छादयस्तु ये।
स्वाभाविकेषु जीवस्य कामाद्येषु सदैव तु।
प्रेरकत्वेन वर्तन्ते स्वातन्त्र्यम् मम न क्वचित्।
इति मत्वा न सक्तः स्यात् प्रीतोऽस्य भवति प्रभुः।
स्वभावगुणसम्मूढा ज्ञानादिगुणवत्तरम्।
स्वातन्त्रेणैव कर्तारं चात्मानं प्रतिजानते।
तान् गुणान् कर्म तच्चैव विष्ण्वधीनं न ते विदुः।
तेष्वयोग्येषु तत्वज्ञस्तत्वं नाति प्रकाशयेत्।
वदेद्विवादरूपेण नोपदेशात्मना क्वचित्।
सभारूपेण वा ब्रूयात् पृष्ठेऽव्यक्तिकृदेव वा।
बुद्ध्वाऽप्यसौ यतो नित्यं स्वभावानुगचेष्टितः।
स्वभावं यान्ति भूतानि निग्रहः किं करिष्यति’
इत्यादि प्रकाशसंहितायाम्॥27-33॥
Swami Sivananda (1887–1963)Bhagavad Gita
28. But he who knows the truth, O mighty-armed Arjuna, about the divisions of the qualities
and their functions, knowing that the Gunas as senses move amidst the Gunas as the sense-objects,
is not attached.
Sri Vishwesha Tirtharu (1931–2019)Gitasaroddhara
3.1–3.35 · ಸ್ವಧರ್ಮೇ ನಿಧನಂ ಶ್ರೇಯಃ
ಸ್ವಧರ್ಮೇ ನಿಧನಂಶ್ರೇಯಃ
ಇನ್ನು ಅರ್ಜುನನ
ತತ್ಮಿಂ ಕಮ ಣಿ ಘೋರೇಮಾಂ
ನಿಯೋಜಯಸಿ.... ।
ಎಂಬ ಪ್ರಶ್ನೆ ಉಳಿದಿದೆ. ಕರ್ಮದ ಪ್ರಮಾಣವು ಕಡಿಮೆಯಾಗಿರುವ
ಸನಕಾದಿಗಳ ಜ್ಞಾನಯೋಗದ ಮಾರ್ಗವಿರುವಾಗ ಯುದ್ಧದ ಈ ಕಠೋರ
ಮಾರ್ಗವನ್ನು ಯಾಕೆತಾನು ಆರಿಸಬೇಕು? ಅರಣ್ಯದಲ್ಲಿ ಶಾಂತನಾಗಿದ್ದು ಜಪ,
ತಪಸ್ಸು ಮುಂತಾದ ಕರ್ಮಗಳನ್ನು ಆಚರಿಸಿಕೊಂಡು ಹಾಯಾಗಿ ಯಾಕೆ
ಇರಬಾರದು ಎಂದು ಅರ್ಜುನನು ಮಾಡಿದ ಪ್ರಶ್ನೆಗೆ ಉತ್ತರ ಕೊಡುವುದು
ಉಳಿದಿದೆ.
ಇದಕ್ಕೆ ಗೀತೆಯ ಸಮಾಧಾನವು ಹೀಗಿದೆ : ಪ್ರತಿಯೊಬ್ಬನಿಗೂ ಅನೇಕ
ಕರ್ತವ್ಯಮಾರ್ಗಗಳು ತೋರಬಹುದು. ಅವುಗಳಲ್ಲಿ ಯಾವುದು ತನ್ನ ಸ್ವಧರ್ಮ
ವೆಂಬುದನ್ನು ಅರಿತುಕೊಂಡು ಆ ಮಾರ್ಗದಲ್ಲಿ ನಡೆಯುವುದರಲ್ಲೇ ಅವನ
ಪುರುಷಾರ್ಥ ಅಡಗಿದೆ. ವ್ಯಕ್ತಿಯ ಸ್ವರೂಪ, ಯೋಗ್ಯತೆಯನ್ನು ಅನುಸರಿಸಿ
ಕರ್ತವ್ಯಗಳೂ ಬೇರೆಬೇರೆಯಾಗಿರುತ್ತವೆ. ನಮ್ಮ ವ್ಯಕ್ತಿಸ್ವರೂಪಕ್ಕನುಸರಿಸಿ ನಾವು
ಮಾಡಬೇಕಾದ ಕರ್ತವ್ಯವನ್ನು ನಿರ್ಧರಿಸಬೇಕು. ಶುಕ್ಕ ಸನಕಾದಿಗಳು
ಜ್ಞಾನಯೋಗವನ್ನು ಅನುಸರಿಸುವುದೂ ಮನು, ಜನಕ ಮೊದಲಾದವರು
ಕರ್ಮಯೋಗವನ್ನು ಅವಲಂಬಿಸಿರುವುದೂ ಅವರವರವ್ಯಕ್ತಿತ್ತವನ್ನು ಆಧರಿಸಿದ
ಸ್ವಧರ್ಮಗಳಿಗೆ ಅನುಸಾರವಾಗಿಯೇ ಆಗಿದೆ. ಅರ್ಜುನನದೂ ಜನಕಾದಿಗಳಂತೆ
ಕರ್ಮಯೋಗಕ್ಕೆ ಮೀನಲಾಗಿರಿಸಿದ್ದ ಜೀವನ. ಅವನ ವ್ಯಕ್ತಿತ್ವವೇ ಅಂತಹದು.
ಶಮಪ್ರಧಾನವಾದ ಯತಿಧರ್ಮವನ್ನು ಸ್ವೀಕರಿಸಿ ನಡೆಯುವ ಸ್ವರೂಪವು
ಅವನದಲ್ಲ. ಅವನು ಆಧಿಕಾರಿಕರೆಂದು ಪರಿಗಣಿಸಲಾದ ಜೀವರ ವರ್ಗದಲ್ಲಿ
ಸೇರಿದವನು. ಲೋಕದಲ್ಲಿಯ ದೌಷ್ಟ್ಯ ಅಧರ್ಮಗಳನ್ನು ನಿವಾರಿಸಿ
ಸಜ್ಜನರನ್ನು ಸಂರಕ್ಷಿಸಿ ಮುನ್ನಡೆಸುವ ಆಧಿಕಾರಿಕ ವ್ಯಕ್ತಿತ್ವವು ಅವನದಾಗಿದೆ. ತನ್ನ
ವ್ಯಕ್ತಿತ್ವಕ್ಕೆ ಅನುಗುಣವಾದ ಕರ್ತವ್ಯವನ್ನು ಬಿಟ್ಟು ಬೇರೆ ದಾರಿಯಲ್ಲಿ ನಡೆದರೆ
ಅದರಿಂದ ಅವನ ಪ್ರಗತಿಯಾಗಲಾರದು. ಹೀಗೆ ಪ್ರತಿಯೊಬ್ಬರ ವಿಷಯದಲ್ಲೂ
ವ್ಯಕ್ತಿಯ ಸ್ವರೂವವನ್ನು ಆಧರಿಸಿ ಕರ್ತವ್ಯವು ನಿರ್ಧರಿಸಲ್ಪಡುತ್ತದೆ.
ಅದರಂತೆ ಸಾಮಾಜಿಕ ಹೊಣೆಗಾರಿಕೆಯಿಂದ ಪ್ರಾಪ್ತವಾಗುವ
ವರ್ಣಾಶ್ರಮೋಚಿತ ಕರ್ತವ್ಯಗಳನ್ನು ನಾವು ನಿಷ್ಠೆಯಿಂದ ಅನುಸರಿಸಬೇಕು. ತನ್ನ
ನಿಜಸ್ವರೂಪವನ್ನು ಪರಿಶೀಲಿಸಿ ವ್ಯಕ್ತಿಧರ್ಮವನ್ನು ನಿರ್ಧರಿಸುವಂತೆ ಶಾಸ್ತ್ರಗಳಿಂದ
ನಮ್ಮ ಸಾಮಾಜಿಕ ಜವಾಬ್ದಾರಿಯನ್ನು ಅರಿತು ಕ್ರಮಪ್ರಾಪ್ತವಾದ ನಮ್ಮ
ವರ್ಣಧರ್ಮಗಳನ್ನು ತಿಳಿದು ಅದರಂತೆ ನಡೆಯಬೇಕು. ಈ ವ್ಯಕ್ತಿಧರ್ಮ,
ವರ್ಣಧರ್ಮಗಳೆರಡೂ ಸ್ವಧರ್ಮಗಳಾಗಿದ್ದು ಈ ಎರಡೂ ದೃಷ್ಟಿಗಳಿಂದ
ಯತಿಧರ್ಮದ ಬದಲು ಕ್ಹಾತ್ರಧರ್ಮವನ್ನು ಅರ್ಜುನನು ಪರಿಗ್ರಹಿನ
ಬೇಕಾಗಿದೆ. ಸಂನ್ಯಾಸಧರ್ಮವಾಗಲಿ ಅರಣ್ಯಕ್ಕೆ ಹೋಗಿ ವಾನವ್ರಸ್ಥವೃತ್ತಿಯನ್ನು
ಅವಲಂಬಿಸುವುದಾಗಲಿ ಶ್ರೇಷ್ಠವೇ ಇರಬಹುದು. ಆದರೆ ದುಷ್ಟನಿಗ್ರಹ ಹಾಗೂ
ಧರ್ಮ ರಕ್ಷಣೆಯ ವಿಶಿಷ್ಟ ಹೊಣೆಗಾರಿಕೆಯನ್ನು ಹೊತ್ತ ಅರ್ಜುನನು ತನ್ನ ಈ
ಕರ್ತವ್ಯವನ್ನು ತೊರೆದು ಶ್ರೇಷ್ಠ ಮಾರ್ಗವೆಂದು ಸಂನ್ಯಾಸಿ ಅಥವಾ
ವಾನಪ್ರಸ್ಥನಾಗುವುದು ಉಚಿತವಾಗಲಾರದು. ಬೇರೆ ಅಧಿಕಾರ ಸ್ಥಾನಗಳಲ್ಲಿ
ನಿಯುಕ್ತರಾದವರು ತಮ್ಮ ಕರ್ತವ್ಯದಲ್ಲಿ ಅಲಕ್ಷ್ಯ ಮಾಡಿ ಬೇರೆ ಎಷ್ಟೇ
ಉಪಯುಕ್ತಕಾರ್ಯವನ್ನುನಡೆಸಿದರೂ ಅದು ಪ್ರಶಂಸನೀಯವೆನಿಸುವುದಿಲ್ಲ.
ಸೈನ್ಯ ಅಥವಾ ಆಡಳಿತದ ಕಾರ್ಯದಲ್ಲಿ ನಿಯುಕ್ತರಾದವರು ತಮ್ಮ ಕೆಲಸದ
ವೇಳೆಯಲ್ಲಿ ಪವಿತ್ರ ಕಾರ್ಯವೆಂದು ಧಾರ್ಮಿಕ ಗಂಥಗಳ ಅಧ್ಯಯನದಲ್ಲೇ
ತೊಡಗಿದರೆ ಅದು ಧರ್ಮವೆನಿಸಲಾರದು. ತನಗೆ ನಿಯೋಜಿಸಲ್ಪಟ್ಟ
ಕಾರ್ಯವನ್ನು ನಿಷ್ಠೆಯಿಂದ ಆಚರಿಸುವುದರಿಂದಲೇ ಮನುಷ್ಯನು ಶ್ರೇಷ್ಠ
ವ್ಯಕ್ತಿಯಾಗಬಲ್ಲನು. ಹೊರತು ಅವನು ಯಾವಕಾರ್ಯಮಾಡುತ್ತಿದ್ದಾನೆಂಬು
ದರಿಂದಲೇ ಅವನ ಮಹತ್ತ್ವವನ್ನು ನಿರ್ಧರಿಸಲಾರೆವು.
ಹೀಗೆಯೇವ್ಯಕ್ತಿಯ ವಿಶಿಷ್ಟ ಪರಿಸ್ಥಿತಿ, ಸಂದರ್ಭಗಳನ್ನು ಅನುಸರಿಸಿ ನಮ್ಮ
ಕರ್ತವ್ಯವನ್ನು ವಿವೇಚಿಸುವ ಪ್ರಸಂಗವೂ ನಮ್ಮ ಜೀವನದಲ್ಲಿ ಬರುತ್ತದೆ.
ನದಿಯಲ್ಲಿ ಒಬ್ಬನು ಮುಳುಗುತ್ತಿರುವಾಗ, ತೀರದಲ್ಲಿ ಜಪಮಾಡುತ್ತಿರುವವನು
ಜಪವನ್ನು ಬಿಟ್ಟು ಮುಳುಗುವವನನ್ನು ಮೇಲಕ್ಕೆತ್ತಲು ಪ್ರಯತ್ನಿಸುವುದೇ
ಧರ್ಮವೆನಿಸುವುದು. ಜಪವೇ ಶ್ರೇಷ್ಠವೆಂದು ಆತನು ಮೂಗು ಹಿಡಿದು ಕುಳಿತರೆ
ಅದು ಸರಿಯೆನಿಸುವುದೆ? ದೇವರ ಗುಡಿಗೆ ಹೋಗುವುದೇನೋ ಒಳ್ಳೆಯ
ಕಾರ್ಯವೇ; ಆದರೆ ಶಾಲೆಗೆ ಹೋಗುವುದನ್ನು ತಪ್ಪಿಸಿ ಹುಡುಗರು ದೇವರ
ಗುಡಿಗೆ ಹೋದರೆ ಅದನ್ನು ಯಾರೂ ಅಭಿನಂದಿಸಲಾರರು. ಮಕ್ಕಳಿಗಾಗಿ,
ಪತಿಗಾಗಿ ತಾನು ನಿರ್ವಹಿಸಬೇಕಾದ ಕೌಟುಂಬಿಕ ಕರ್ತವ್ಯಗಳನ್ನು ತೊರೆದು
ಮಹಿಳೆಯರು ಸಮಾಜಸೇವೆಯೆಂದು ಹೊರಗೇ ಅಡ್ಮಾಡುತ್ತಿದ್ದರೆ ಅದು
ಧರ್ಮ ಎನಿಸಲಾರದು.
ಮಹಾಭಾರತದಲ್ಲಿ ಧರ್ಮವ್ಯಾಧನ ಉಪಾಖ್ಯಾನದಲ್ಲಿ ಪ್ರತಿಯೊಬ್ಬನೂ
ತನ್ನ ಈ ವೈಯಕ್ತಿಕ ಹೊಣೆಗಾರಿಕೆಯನ್ನು ಪಾಲಿಸುವುದರ ಅವಶ್ಯಕತೆಯನ್ನು
ಒತ್ತಿಹೇಳಲಾಗಿದೆ. ತರುಣ ಬ್ರಾಹ್ಮಣ ಯುವಕನೊಬ್ಬನು ತನ್ನ ವೃದ್ಧ
ತಾಯಿತಂದೆಗಳಿಗೆ ಸಲ್ಲಿಸಬೇಕಾದ ಸೇವಾಕಾರ್ಯವನ್ನು ನಿರ್ವಹಿಸದೆ ಯಾವ
ರಕ್ಷಕರೂ ಇಲ್ಲದ ಅವರನ್ನು ಮನೆಯಲ್ಲೇ ಬಿಟ್ಟುತಾನು ತಪಸ್ವಿಯಾಗಬೇಕೆಂದು
ಅರಣ್ಯದಲ್ಲಿ ಇರುತ್ತಾನೆ. ಅನೇಕ ವರ್ಷಗಳವರೆಗೆ ತಪ್ಪಸ್ಸನ್ನು ಆಚರಿಸಿ
ಉಗ್ರಶಕ್ತಿಯನ್ನು ಪಡೆಯುತ್ತಾನೆ. ಒಮ್ಮೆ ಒಂದು ಮರದ ಕೆಳಗೆ ಆತ
ಕುಳಿತಿರುವಾಗಮೇಲಿರುವಹಕ್ಕಿಯು ಆತನಮೇಲಿತನ್ನ ಅಶುಚಿ ಪದಾರ್ಥವನ್ನು
ಕೆಡಹಿತು. ಕೋಪಾವಿಷ್ಠನಾದ ಆತನು ಮುಖವೆತ್ತ ಕೆಂಗಣ್ಣಿನಿಂದ ಆಹಕ್ಕಿಯನ್ನು
ನೋಡಿದ. ಕೂಡಲೇ ಅದು ಸುಟ್ಟು ಬೂದಿಯಾಯಿತು. ತನ್ನ ತಪಸ್ಸಿನ ಬಗ್ಗೆ
ಈತನಲ್ಲಿ ಅಹಂಭಾವ ಉದಯಿಸಿತು. ಭಿಕ್ಷೆಗಾಗಿ ಗ್ರಾಮದಲ್ಲಿ ಸಂಚರಿಸುತ್ತ ಈ
ತಪಸ್ವಿಯು ಒಂದು ಮನೆಯ ಮುಂದೆ ಬಂದು ನಿಂತನು. ಮನೆಯ ಗೃಹಿಣಿಯು
ಅತ್ಯಂತಸಾದ್ವಿಯಾಗಿದ್ದಳು. ತಪಸ್ವಿಗೆ ಭಿಕ್ಷೆಯನ್ನು ನೀಡಬೇಕೆಂದು ಆಕೆಹೊರಟು
ನಿಂತಾಗ ಬಳಲಿದ ತನ್ನ ಪತಿಯು ಹೊರಗಿನಿಂದ ಬರುವುದನ್ನು ಕಂಡಳು.
ಪತಿಯನ್ನು ಉಪಚರಿಸಿ ಆತನ ಸೇವೆಯನ್ನು ಮಾಡುವ ಭರದಲ್ಲಿ ಈ
ಅತಿಥಿಯನ್ನು ಅಕೆ ಮರೆತಳು. ಸ್ವಲ್ಪಹೊತ್ತಿನ ನಂತರ ಅತಿಥಿಯ ನೆನಪಾಗಿ ಭಿಕ್ಷ
ಹಿಡಿದುಕೊಂಡು ಅವನ ಬಳಿಗೆ ಬಂದಳು. ಕೋವಾಕ್ರಾಂತನಾದ ಅತಿಥಿ
ತಪಸ್ವಿಯನ್ನು ಇವಳು ಎಷ್ಟು ಸಂತೈಸಿದರೂ ಅವನ ಸಿಟ್ಟು ಇಳಿಯಲಿಲ್ಲ.
ಆಕ್ಕೆ “ನಾನೇನು ಅರಣ್ಯದಲ್ಲಿನೀನು ಬೂದಿಮಾಡಿದ ಹಕ್ಕಿಯಲ್ಲ' ಎಂದು
ನುಡಿದಳು. ಇದನ್ನು ಕೇಳಿ ಆತಪಸ್ವಿತಣ್ಣಗಾದ. ಅಲ್ಲಿಯ ಘಟನೆಯನ್ನು ಇವಳು
ತಿಳಿದ ಬಗೆ ಹೇಗೆ? ಇವಳಿಗೆ ಈ ಜ್ಞಾನಶಕ್ತಿ ಹೇಗೆ ಬಂದಿತು? ಎಂದು
ಅಚ್ಚರಿಗೊಂಡು ಇವಳನ್ನು ಬೇಡಿದಾಗ, ಧರ್ಮವ್ಯಾಧನ ಬಳಿ ಹೋಗಲು
ತಿಳಿಸಿದಳು. ಧರ್ಮವ್ಯಾಧನು ಮಾಂಸವನ್ನು ಮಾರುತ್ತಿದ್ದನು. ಅವನ ಈ
ವ್ಯಾಪಾರವನ್ನು ಕಂಡು ಅವನ ಬಳಿ ಹೋಗಲು ಈ ತಪಸ್ವಿ ಹಿಂಜರಿದಾಗ,
ಧರ್ಮವ್ಯಾಧನೇ "ಸಾಧ್ವೀಮಣಿಯಿಂದ ಕಳಿಸಲ್ಪಟ್ಟವನಲ್ಲ ವೇನೀನು?' ಎಂದು
ಈತನ ಪೂರ್ವಾಪರವನ್ನು ಹೇಳಲು, ಇವನಿಗೆ ಮತ್ತೂ ವಿಸ್ಮಯವಾಯಿತು.
ಧರ್ಮವ್ಯಾಧನು ತಾನು ಮಾಡುವ ವ್ಯಾಪಾರದ ನೀತಿ, ಸೇವಾಭಾವಗಳನ್ನು
ಆತನಿಗೆ ವಿವರಿಸಿ, ತನ್ನ ವೃದ್ಧ ತಂದೆತಾಯಿಗಳ ಸೇವೆಯನ್ನು ತಾನು ಮಾಡುವ
ವಿಧಾನವನ್ನು ಅವನಿಗೆ ಪ್ರತ್ಯಕ್ಷವಾಗಿ ತೋರಿಸಿದನು. ತಂದೆತಾಯಿಗಳ ಬಗ್ಗೆ ತಾನು
ಮಾಡಬೇಕಾದ ಕರ್ತವ್ಯವನ್ನು ಬಿಟ್ಟು ಅರಣ್ಯಕ್ಕೆ ಬಂದಿರುವ ಈ ತವಸ್ವಿಗಿಂತ
ಶೆಚ್ಚಿನಸಿದ್ಧಿಯನ್ನು, ಯೋಗ್ಯತೆಯನ್ನು ಪಕಿಯ ಬಗ್ಸೆ ತಂದೆತಾಯಿಯರ ಬಗ್ಗೆ
ತಮ್ಮ ವೈಯಕ್ತಿಕ ಕರ್ತವ್ಯವನ್ನು ನಿಷ್ಠೆಯಿಂದ, ಭಗವದ್ಭಕ್ತಿಯಿಂದ ಸಲ್ಲಿಸುತ್ತಲೇ
ತಮ್ಮ ವ್ಯವಹಾರವನ್ನು ನಡೆಸುತ್ತಿರುವ ಸಾಧ್ವಿ ಹಾಗೂ ಧರ್ಮವ್ಯಾಧರು
ಪಡೆದಿರುವರು. ಯಾರೂತಾವು ಮಾಡಬೇಕಾದ ವೈಯಕ್ತಿಕಹಾಗೂಸಾಮಾಜಿಕ
ಕರ್ತವ್ಯಗಳನ್ನು ಬಟ್ಟು ಬೇರೆ ಯಾವುದೇಎಷ್ಟೇ ಶ್ರೇಷ್ಠವಾದ ಕಾರ್ಯಗಳನ್ನು
ಮಾಡಿದರೂ ಅವರು ಅದರಿಂದ ಶ್ರೇಯಸ್ಸನ್ನು ಪಡೆಯಲಾರರು.
ಧರ್ಮವ್ಯಾಧನ ಕಥೆಯಲ್ಲಿ ಕಂಡುಬರುವ ತಪಸ್ವಿ ಬ್ರಾಹ್ಮಣನು ಈ ಮಾತಿಗೆ
ಒಳ್ಳೆಯ ನಿದರ್ಶನನಾಗಿದ್ದಾನೆ. ಪ್ರತಿಯೊಬ್ಬರೂ ತಮ್ಮ ತಮ್ಮ ವ್ಯಕ್ತಿಧರ್ಮ,
ವರ್ಣ-ಧರ್ಮಗಳನ್ನು ಅರಿತುಕೊಂಡು ತಮ್ಮ ಹೊಣೆಗಾರಿಕೆಯನ್ನು
ಭಕ್ತಿಯಿಂದ, ಶ್ರದ್ಧೆಯಿಂದ ನಿರ್ವಹಿಸುವುದರಲ್ಲೇ ಅವರ ಜೀವನದಸಿದ್ಧಿ ಇದೆ.
ಸ್ವಧರ್ಮೆ ನಿಧನಂ ಶ್ರೇಯಃ ।
ಪರಧರ್ಮೋ ಭಯಾವಹಃ।
ಅರ್ಜುನನದು ಕರ್ಮಯೋಗಿಯ ವ್ಯಕ್ತಿತ್ವ ಅದರಲ್ಲೂ ಕ್ಚತ್ರಿಯನಾಗಿ
ಲೋಕ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತವ. ಇಂತಹ ಧರ್ಮಯುದ್ಧದಲ್ಲಿ
ಪ್ರಮುಖ ಭಾಗವನ್ನು ವಹಿಸಿ ಕರ್ತವ್ಯವನ್ನು ಪೂರೈಸದೆ ಶಮಪ್ರಧಾನವಾದ
ಯತಿಧರ್ಮವನ್ನು ಆಚರಿಸಲು ಅವನಿಗೆ ಅಧಿಕಾರ ಏನಿದೆ? ನೀರಿಗಿಂತ ಹಾಲು
ಶ್ರೇಷ್ಠವೇನೋನಿಜ. ಆದರೆ ಮೀನನ್ನು ನೀರಿನಿಂದ ತೆಗೆದು ಹಾಲಿನಲ್ಲೇಇಟ್ಟರೆ
ಅದು ಬದುಕಬಹುದೆ? ಅದರಂತೆ ಮಾನವನು ತನ್ನ ವ್ಯಕ್ತಿಧರ್ಮ,
ವರ್ಣಧರ್ಮ, ಪ್ರಾಸಂಗಿಕ ಧರ್ಮಗಳನ್ನು ಪರಿಶೀಲಿಸಿ ತನ್ನ ಸ್ವಧರ್ಮವನ್ನು
ನಿರ್ಧರಿಸಿ ಆಮಾರ್ಗದಿಂದಲೇ ನಡೆಯಬೇಕು.
ಒಬ್ಬನು ತನಗೆ ಒಪ್ಪಿಗೆಯಾಗುವ ಪತ್ನಿಯನ್ನು ಆರಿಸಬಲ್ಲ. ತನಗೆ
ಬೇಡವಾದಾಗ ಪತ್ನಿಯನ್ನು ತೊರೆಯಲೂ ಸಾಧ್ಯವಾಗಬಹುದು. ಆದರೆ ತನ್ನ
ತಾಯಿಯ ಬಗ್ಗೆ ಹೀಗೆ ನಡೆಯಬಲ್ಲನೆ? ಈ ತಾಯಿ ಚೆನ್ನಾಗಿಲ್ಲ
ಸುಂದರಳಾಗಿಲ್ಲ; ತನಗೆ ಬೇರೆತಾಯಿ ಬೇಕೆಂದು ಬದಲಿಸಲು ಸಾಧ್ಯವೆ? ನಾವು
ಹುಟ್ಟುವಾಗಲೇ ನಮ್ಮತಾಯಿ ಸಿದ್ಧಳಾಗಿರುತ್ತಾಳೆ. ಅವಳನ್ನೇ ತಾಯಿಯೆಂದು
ಸ್ವೀಕರಿಸಿ ಪ್ರತ್ರರಾಗಿ ನಮ್ಮ ಸೇವೆ, ಕರ್ತವ್ಯಗಳನ್ನು ನಾವು ಮಾಡಬೇಕಾಗುತ್ತದೆ.
ಧರ್ಮದ ಬಗ್ಗೆಯೂ ಇದೇ ರೀತಿಯನ್ನು ನಾವು ಅನುಸರಿಸಬೇಕು. ನಾವು
ಹುಟ್ಟುವಾಗಲೇನಮ್ಮ ಧರ್ಮವೂನಿರ್ಧರಿತವಾಗಿರುತ್ತದೆ. ನಮ್ಮ ಸೇವೆಯನ್ನು
ಪಡೆಯಲು ಅದು ಸಿದ್ಧವಾಗಿರುವುದು. ಅದನ್ನು ಬದಲಿಸುವ ಗೋಜಿಗೇನಾವು
ಹೋಗಬಾರದು. ನಮಗೆ ವ್ರಾಪ್ತವಾದ ಧರ್ಮವನ್ನು ನಿಷ್ಠೆಯಿಂದ ಅನುಷ್ಠಾನ
ಮಾಡಬೇಕು. ಇದನ್ನೇ ವರ್ಣಧರ್ಮವೆನ್ನಲಾಗುವುದು.
Bannanje Govindacharya (1936–2020)Bhagavad Gita Pravachana
ತತ್ತ್ವವಿತ್ ತು ಮಹಾಬಾಹೋ ಗುಣ ಕರ್ಮ ವಿಭಾಗಯೋಃ |
ಗುಣಾಃ ಗುಣೇಷು ವರ್ತಂತೇ ಇತಿ ಮತ್ವಾ ನ ಸಜ್ಜತೇ- £ ಮಹಾವೀರಾ, ಇಂದ್ರಿಯಾದಿಗಳ(ಜೀವ ಸ್ವಭಾವದ
ಗುಣಗಳ) ಮತ್ತು ಕ್ರಿಯೆಗಳ ಪ್ರಭೇದಗಳ ನಿಜವನ್ನರಿತವನು, ಇಂದ್ರಿಯಗಳ ವಿಷಯಗಳಲ್ಲಿ ಚರಿಸುತ್ತವೆ
ಎಂದರಿತು ಅವುಗಳನ್ನು ಅಂಟಿಸಿಕೊಳ್ಳುವುದಿಲ್ಲ.
ತತ್ವವನ್ನು ಅರಿತ ಅಥವಾ ಯಥಾರ್ಥವನ್ನು ಅರಿತ ತತ್ವವಾದಿ-ಗುಣಕರ್ಮ, ಇಂದ್ರಿಯ ಮತ್ತು ಅದರಲ್ಲಿನ
ಕ್ರಿಯಾಭೇದವನ್ನು ತಿಳಿದಿರಬೇಕು. ಮೂಲಭೂತವಾಗಿ ಇಂದ್ರಿಯಗಳಲ್ಲಿ ಸಾತ್ವಿಕ, ರಾಜಸ ಮತ್ತು ತಾಮಸವೆಂಬ
ತ್ರೈಗುಣ್ಯಗಳಿಂದ ಕರ್ಮ ನಡೆಯುತ್ತಿರುತ್ತದೆ. ಇದು. ನಾವು ಹಿಂದೆ ಅಂಟಿಸಿಕೊಂಡು ಬಂದುದರ
ಪ್ರಭಾವವಿರಬಹುದು. ಇದರಿಂದ ಆಗುವ ಕರ್ಮವನ್ನು ನಾವು ತಟಸ್ಥರಾಗಿ ನೋಡುತ್ತಿರಬೇಕು. ಈ ವಿಷಯ
ಮನೋಶಾಸ್ತ್ರಕ್ಕೆ ಸಂಬಂಧಪಟ್ಟದ್ದು. ನಾವೇ ಮಾಡುವ ಕ್ರಿಯೆಯನ್ನು ನಾವೇ ತಟಸ್ಥರಾಗಿ ವಿಶ್ಲೇಷಿಸುವುದು!
ನನ್ನ ಮೇಲೆ ತ್ರೈಗುಣ್ಯದ ಯಾವ ಗುಣ ಪ್ರಭಾವಬೀರುತ್ತಿದೆ ಎನ್ನುವುದನ್ನು ಸ್ವಯಂ ವಿಶ್ಲೇಷಣೆ(5611 analysis)
ಮಾಡಿ, ಗುಣಕರ್ಮ ವಿಭಾಗ ತತ್ವವನ್ನು ತಿಳಿದುಕೊಂಡಾಗ, ತೈೈಗುಣ್ಯದ ಪ್ರಭಾವದ ಅರಿವಾಗುತ್ತದೆ. ಆಗ
ನಮಗೆ ಅದರಲ್ಲಿ ಒಡೆತನವಿಲ್ಲ ಎನ್ನುವ ಸತ್ಯ ತಿಳಿಯುತ್ತದೆ.ಇಂದ್ರಿಯಗಳು- ಅದರ ಮೇಲೆ ಪ್ರಕೃತಿಯ ತೈೈಗುಣ್ಯ-
ಅದರ ಮೇಲೆ ಜೀವ ಸ್ವಭಾವ-ಅದರ ಮೇಲೆ ಭಗವಂತನ ಜ್ಞಾನಾನಂದ- ಇವೆಲ್ಲವೂ ಕರ್ಮವಾಗಿ ಇಂದ್ರಿಯದ
ಮೂಲಕ ಅಭಿವ್ಯಕ್ತವಾಗುತ್ತಿರುತ್ತದೆ. ಜಡದಲ್ಲಿ ಬರಿಯ 3)3(Action), ಜೀವನಲ್ಲಿ ಇಚ್ಛೆ ಮತ್ತು ಕೃತಿ (Intentional
Action) ಹಾಗೂ ಭಗವಂತನಲ್ಲಿ ಸ್ವತಂತ್ರ 92393) S(Independent Intentional Action)-RQ%) ಕರ್ಮಭೇದ.
ಹೀಗೆ ಗುಣಭೇದ ಮತ್ತು ಕರ್ಮಭೇದವನ್ನು ಅರಿತವನು 'ತತ್ತ್ವವಿತ್'. ಈ ತತ್ವ ಅರ್ಥವಾದರೆ "ನಾನು ಮಾಡಿದೆ”
ಎನ್ನುವ ಅಹಂಕಾರ ಎಂದೂ ನಮ್ಮನ್ನು ಕಾಡುವುದಿಲ್ಲ.
ಈ ಮೇಲಿನ ವಿಷಯವನ್ನು ಉದಾಹರಣೆಯೊಂದಿಗೆ ನೋಡುವುದಾದರೆ-ಸ್ವಾರಸ್ಯವಾಗಿ, ವಿಷಯಗರ್ಭಿತವಾಗಿ
ಮಾತನಾಡುವ ಒಬ್ಬ ಮಾತುಗಾರನನ್ನು ನೋಡಿ: ಆತ ಹೀಗೆ ಮಾತನಾಡಬೇಕಾದರೆ ಕೇವಲ ಬಾಯಿ ಇದ್ದರೆ
ಸಾಲದು, ಬಾಯಿಯಲ್ಲಿ ಶಬ್ದ ಬರಬೇಕು. ಕೇವಲ ಶಬ್ದವಲ್ಲ-ಯಾವ ಮಾತನಾಡಬೇಕೋ ಅದಕ್ಕನುಗುಣವಾದ
ಶಬ್ದ ಬರಬೇಕು. ಆ ಶಬ್ದ ಬರಬೇಕಾದರೆ ಮಾತಿಗೆ ಒಂದು ಭಾವ ಬೇಕು. ಭಾವ ಅನ್ನುವುದು ಮನಸ್ಸಿನಲ್ಲಿ
ಹೊಳೆಯಬೇಕು. ಹೊಳೆದ ಭಾವಕ್ಕೆ ತಕ್ಕಂತೆ ಶಬ್ದ ಬರಬೇಕು. ಆ ಶಬ್ದ ಬಾಯಿಯಲ್ಲಿ ಸ್ಟುಟವಾಗಿ ಹೊರ
ಹೊಮ್ಮಬೇಕು. ಭಾವನೆಯಿಂದ ಶಬ್ದ ಹುಟ್ಟಬೇಕಾದರೆ ಮಾಧ್ಯಮವಾಗಿ ಆಕಾಶ ಮತ್ತು ಗಾಳಿ ಅಗತ್ಯ. ಈ ಎಲ್ಲಾ
ಕ್ರಿಯೆ ಸುಸೂತ್ರವಾಗಿ ನಡೆದರೆ ಮಾತ್ರ ಆತ ಚೆನ್ನಾಗಿ ಮಾತನಾಡಬಲ್ಲ. ಮನಸ್ಸಿನಲ್ಲಿ ಭಾವ ಮತ್ತು ಶಬ್ದವನ್ನು
ಹೊಳೆಸುವವನು ಯಾರು? ಒಂದು ವೇಳೆ ಹೇಳಬೇಕು ಅನ್ನುವ ವಿಷಯಕ್ಕೆ ಅನುಗುಣವಾದ ಶಬ್ದ ಹೊಳೆಯದೇ
ಇದ್ದರೆ? ನಮ್ಮ ಮೆದುಳಿನಲ್ಲಿ ಯಾವುದೋ ಒಂದು ಗುಂಡಿ ಆ ಕ್ಷಣದಲ್ಲಿ ಕೆಲಸ ಮಾಡದೇ ಇದ್ದರೆ? ಇಲ್ಲಿ ನಮ್ಮ
ಕೈವಾಡ ಏನಿದೆ? ಇದು ತಿಳಿದಾಗ ಅಹಂಕಾರ ಬಾರದು. ಈ ಅರಿವಿದ್ದಾಗ ಎಲ್ಲರೊಡನೆ ಎಲ್ಲರಂತೆ ಇದ್ದು
ಅಂಟಿಸಿಕೊಳ್ಳದೇ ಇರಲು ಸಾಧ್ಯ.
ಇಂದ್ರಿಯಗಳಲ್ಲಿ ಸತ್ವ-ರಜೋ-ತಮೋ ಗುಣಗಳು ಜೀವ ಸ್ವಭಾವಕ್ಕನುಗುಣವಾಗಿ ಕೆಲಸ ಮಾಡುತ್ತವೆ.
ಭಗವಂತನ ಜ್ಞಾನಾನಂದ ಸ್ವರೂಪ- ಜೀವನ ಜ್ಞಾನೇಂದ್ರಿಯ ಗುಣಗಳನ್ನು ನಿಯಂತ್ರಿಸುತ್ತವೆ. ಇದನ್ನು ತಿಳಿದಾಗ
ನಾನು-ನನ್ನದು ಎನ್ನುವುದು ಹೊರಟು ಹೋಗುತ್ತದೆ. ವಿಶ್ವವೆಂಬ ಈ ಮಹಾ ಸಾಗರದಲ್ಲಿ ನಾನೊಂದು ಮರಳಿನ
ಕಣ ಎನ್ನುವ ನಿಜ ತಿಳಿಯುತ್ತದೆ. ವಿಶ್ವದ ವಿಶ್ವತೋಮುಖವಾದ ಅಸ್ತಿತ್ವ ಗುರುತಿಸಿದವ "ನಾನು ಮಾಡಿದೆ”
ಎಂದು ಎಂದೂ ಹೇಳುವುದಿಲ್ಲ ಹಾಗೂ ಯಾವುದನ್ನೂ ಅಂಟಿಸಿಕೊಳ್ಳು(4॥೬೦೧/1600ವುದಿಲ್ಲ.
ಈ ಶ್ಲೋಕದಲ್ಲಿ ಕೃಷ್ಣ ಅರ್ಜುನನನ್ನು 'ಮಹಾಬಾಹೋ' ಎಂದು ಸಂಬೋಧಿಸಿದ್ದಾನೆ. ಮೇಲ್ನೋಟದಲ್ಲಿ
ಮಹಾಬಾಹು ಎಂದರೆ ವೀರ, ಹೋರಾಟಗಾರ. ಬಲಿಷ್ಠ ತೊಳಿನವನಾದ ನೀನು ಹೇಡಿಯಾಗದೇ ಹೋರಾಡು
ಎನ್ನುವುದು ಇಲ್ಲಿ ಕಾಣುವ ಭಾವ. ಆದರೆ ಅದರಿಂದಾಚೆಗೆ ಇನ್ನೂ ಅನೇಕ ಅರ್ಥವಿದೆ. "ಮಹತ್ ವಹತೀತಿ
ಮಹಾಬಾಹು'. ಅಂದರೆ ದೊಡ್ಡದ್ದನ್ನು ಹೊತ್ತುಕೊಂಡವ. ಜಗತ್ತಿನ ಮೂಲಭೂತವಾದ ಸತ್ಯವನ್ನು ಹೃದಯದಲ್ಲಿ
ಹೊತ್ತವ ಎಂದರ್ಥ. “ಜಗತ್ತಿನ ಮಹತ್ತಾದ ಸಂಗತಿಯನ್ನು ಗ್ರಹಿಸಬಲ್ಲ ಅರಿವಿನ ಮಹಾತೋಳಿನಿಂದ
ದಿಗಂತದಾಚೆಗಿನ ಸತ್ಯ(ಭಗವಂತ)ವನ್ನು ಹಿಡಿ” ಎನ್ನುವುದು ಈ ಸಂಬೋಧನೆಯ ಹಿಂದಿರುವ ಇನ್ನೊಂದು
Bibek Debroy (1955–2024)The Bhagavad Gita
(28)
‘O mighty-armed!31 But he who truly knows the division of the qualities,32
and different types of action,33 knows that qualities manifest themselves in
the senses and does not get attached.’34