3.36

अर्जुन उवाच ।
अथ केन प्रयुक्तोऽयं पापं चरति पूरुषः ।
अनिच्छन्नपि वार्ष्णेय बलादिव नियोजितः ॥
arjuna uvāca |
atha kena prayukto'yaṃ pāpaṃ carati pūruṣaḥ |
anicchannapi vārṣṇeya balādiva niyojitaḥ ||
Sri Madhvacharya (1238–1317)Bhagavad Gita Tatparya Nirnaya
परमेश्वराद्देवेभ्यश्चार्वाक्तनप्रेरकं पृच्छति। अथ केनेति॥36॥
Swami Sivananda (1887–1963)Bhagavad Gita
36. But impelled by what does man commit sin, though against his wishes, O Varshneya (Krishna), constrained, as it were, by force?
Sri Vishwesha Tirtharu (1931–2019)Gitasaroddhara
3.36–3.39 · ಕಾಮ ಆತ್ಮದ ಪ್ರಬಲ ವೈರಿ
ಕಾಮ, ಆತ್ಮದ ಪ್ರಬಲ ವೈರಿ ಕರ್ತವ್ಯಾಕರ್ತವ್ಯ ವಿಷಯದಲ್ಲಿ ಅರ್ಜುನನ ಸಂಶಯಗಳಿಗೆಲ್ಲ ವರಿಹಾರ ದೊರಕಿದೆ. ಈ ಕರ್ತವ್ಯದ ಜ್ಞಾನವಿದ್ದರೂ ಪಾಪಕೃತ್ಯವನ್ನು ಮಾಡಬಾರದೆಂದು ತಿಳಿದಿದ್ದರೂ ಜನರು ಆಕಡೆ ಯಾಕೆಎಳೆಯಲ್ಪಡುತ್ತಾರೆ? ಇಚ್ಛೆಯಿಲ್ಲದಿದ್ದರೂ ಯಾವುದೋ ಒಂದು ಪ್ರಬಲ ಶಕ್ತಿಯ ಒತ್ತಡಕ್ಕೆ ಮಣಿದು ದುಷ್ಪಕಾರ್ಯಗಳು ನಮ್ಮಿಂದ ಸಂಭವಿಸುತ್ತವೆ. ಹೀಗೆ ನಮ್ಮನ್ನು ಬಲಾತ್ಕಾರದಿಂದ ಅಧೋಗತಿ ಗಿಳಿಸುವ ಆ ದುಷ್ಟಶಕ್ತಿ ಯಾವುದು ಎಂದು ಅರ್ಜುನನು ಕೇಳುವನು: ಅಥ ಕೇನ ಪ್ರಯುಕ್ತೋ5ಯಂ ಪಾಪಂ ಚರತಿ ಪೂರುಷಃ । ನಮ್ಮೆಲ್ಲರ ಪರವಾಗಿ ಅರ್ಜುನನು ಈ ಪ್ರಶ್ನೆಯನ್ನು ಮಾಡುತ್ತಿರುವನೆಂದು ನಮಗನಿಸುತ್ತದೆ. ತಿಳಿದೂ ತಿಳಿದೂ ನಾವು ಯಾಕೆ ಅಕೃತ್ಯವನ್ನು ಮಾಡುತ್ತಿರುವೆವೆಂಬುದನ್ನು ಪರಿಶೀಲಿಸಿನಮ್ಮ ಮೇಲೆ ಆಕ್ರಮಣವನ್ನು ಎಸಗುವ ದುಃಶಕ್ತಿಯ ಪರೀಕ್ಷಣವನ್ನು ಮಾಡುವುದರಿಂದ ಅದನ್ನು ಎದುರಿಸುವ ಶಕ್ತಿಯು ನಮಗೆ ಪ್ರಾಪ್ತವಾಗುವುದು. ಕಾಮವೇ ಈ ಪ್ರಬಲ ದುಃಶಕ್ತಿಯಾಗಿದ್ದು ಅದೇ ನಮ್ಮ ಪರಮತತ್ರುವಾಗಿದೆ ಎಂದು ಶ್ರೀಕೃಷ್ಣನು ನಿರೂಪಿಸುತ್ತಾನೆ. ಇಲ್ಲಿ ಕಾಮವೆಂದರೆ ನಮ್ಮನ್ನು ಜೀವನದ ಉತ್ತುಂಗ ಶಿಖರಕ್ಕೆ ಎರಿಸಬಲ್ಲ ಉದಾತ್ತ ಆಕಾಂಕ್ಷೆಯಲ್ಲ. ನಮ್ಮನ್ನು ಸಂಸಾರದ ಕತ್ತಲ ಗುಹೆಯಲ್ಲಿ ಕೆಡಹಬಲ್ಲ ತುಚ್ಛ ಆತೆ-ಲಂಸೆಗಳನ್ನು ಇಲ್ಲಿ "ಕಾಮ' ಎನ್ನುವ ಶಬ್ದದಿಂದ ಕರೆಯಲಾಗಿದೆ. ನಮ್ಮ ಎಲ್ಲ ದುಷ್ಟ ವೃತ್ತಿ ಗಳಿಗೆ ಈ ಕಾಮವೇ ಮೂಲವಾಗಿದೆ. ಕಾಮ ಮತ್ತು ಅದರಿಂದ ಉದ್ಭವಿಸುವ ಕ್ರೋಧ ಇವೆರಡರಿಂದಲೇ ಎಲ್ಲ ಅವ್ಯವಹಾರಗಳೂ ನಡೆಯುವವು. ತಮ್ಮ ದುರಾತೆಗಳನ್ನು ಪೂರೈಸಲು ಸುಖ-ಸಂಪತ್ತುಗಳ ರಾಲಸೆಯಿಂದ ಹೀಸಕ್ಕತ್ವಗಳನ್ನು ಜನರು ಎಸಗುವರು. ಈ ಲಾಲಸೆಯನ್ನು ಪೂರೈಸಲು ಅಡೆತಡೆಯಾದಾಗ ಕೋಪವು ಉಕ್ಕಿಬಂದು ಅದರ ಆವೇಶದಲ್ಲಿ ಹಿಂಸಾಕೃತ್ಯಗಳನ್ನು ನಡೆಸುವರು. ಪ್ರತಿಯೊಂದು ದುರ್ವ್ಯವಹಾರದ ಹಿಂದೆ ಕಾಮದ ಕೈವಾಡ ಇದ್ದೇ ಇರುವುದು. ಸ್ವಕರ್ತವ್ಯದ ಕಡೆಗೆ ಆಸ್ಥೆ ಇರುವವನು ಈ ಮಹಾವೈರಿಯನ್ನು ನಿಗ್ರಹಿಸಲು ಸರ್ವವ್ರಯತ್ನಮಾಡಬೇಕು. ಪ್ರತಿಹತವಾದ ಕಾಮವು ಕ್ರೋಧಕ್ಕೆ ಕಾರಣವಾಗುವುದರಿಂದ ಕಾಮ ಏಷಕ್ರೋಧ ಏಷಃ | ಎಂಬುದಾಗಿ ಕಾಮವನ್ನು ಕ್ರೋಧವೆಂದು ಕರೆದಿದ್ದಾರೆ. ಅಪೇಕ್ಷಿಸಿದ ಭೋಗ್ಯವಸ್ತುಗಳನ್ನು ಬೇಕಾದಂತೆ ಪೂರೈಸಿ ಕಾಮವನ್ನು ತಣಿಸಲು ಸಾಧ್ಯವಿಲ್ಲ. ಇದು; ಮಹಾಶನೋ ಮಹಾಪಾಪ್ಮಾ | ದನ್ನು ನೀಡಿದರೂ ಅದನ್ನು ಸ್ವಾಹಾಕಾರ ಮಾಡಿ ಇನ್ನೂ ಹೆಚ್ಚು ಪ್ರಜ್ವರಿತವಾಗುವುದು. ಕಟ್ಟಿಗೆಯನ್ನು. ಹಾಕಿ ಬೆಂಕಿಯನ್ನು ತಣಿಸಲು ತಕ್ಕವಾಗಬಹುದೆ? ನಜಾತು ಕಾಮಃ ಕಾಮಾನಾ ಮುಷಭೋಗೇನ ಶಾಮ್ಯತಿ | “ಕಮೋಪಭೋಗವೆಷ್ಟು ಮಾಡಿದರೂ ಅದರಿಂದ ನಮ್ಮ ಕಾಮನೆ ತಣಿಯುವುದಿಲ್ಲ'' ದೀರ್ಫಕಾಲದವರೆಗೆ ಸುಖಭೋಗದ ವರಮಾವಧಿಯನ್ನು ಅನುಭವಿಸಿದ ಯಯಾತಿ ರಾಜನ ಉದ್ಗಾರವಿದು! ಮುಪ್ಪು ಹೊಂದಿದ ಮೇಲೂ ಪುನಃ ತಾರುಣ್ಯವನ್ನು ಪಡೆದು ಬಹುಕಾಲದವರೆಗೆರಾಜಭೋಗವನ್ನು ಪಡೆದರೂತನ್ನ ಕಾಮನೆಯು ಹಿಂಗದೆ ಮತ್ತಷ್ಟು ಪ್ರವೃದ್ದವಾಗಿರುವುದನ್ನೇ ಆತನು ಕಂಡನು. ಕಾಮದ ಉಪಾಸನೆಯಿಂದಲ್ಲ ಅದರ ನಿಗ್ರಹದಿಂದಲೇ ನಾವು ಅದನ್ನು ಹಿಡಿತದಲ್ಲಿ ಇಟ್ಟುಕೊಳ್ಳಬಲ್ಲೆವೆಂಬ ಸತ್ಯವು ಅವನಿಗೆ ಗೋಚರವಾಯಿತು. ಮುಂಬಯಿ ನಗರದಲ್ಲಿ ಹೋದ ವರ್ಷ ದಂಪತಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡರು. ಮನೆ, ಸಂಬಳ ಎಲ್ಲವೂ ಅನುಕೂ೦ವಿತ್ತು ಅವರು ತಮ್ಮ ಆತ್ಮಹತ್ಯೆಗೆ ಕೊಟ್ಟ ಕಾರಣವಿಂತಿದೆ. : "ತಮಗೆ ೫-೦೦೧೮೦76ರ ಕೋಣೆಯನ್ನು ಕಟ್ಟಿಕೊಳ್ಳಲು ಬೇಕಾದ ಆರ್ಥಿಕ ಅನುಕೂಲತೆಯಿಲ್ಲವೆಂಬ ನಿರಾಶೆಯಿಂದ ಜೀವನದಲ್ಲಿ ಜಿಗುಪ್ಸೆ ಉಂಟಾಗಿ ತಾವು ಆತ್ಮಹತ್ಯೆ ಮಾಡಿ ಕೊಳ್ಳುವೆವು' ಎಂದು ಅವರು ಬರೆದಿಟ್ಟಿದ್ದರು. ವಿಷಯಭೋಗ ಸೌಕರ್ಯಗಳು ಹೆಚ್ಚಿದಷ್ಟು ನಮ್ಮ ಸುಖಲೋಲುಪತೆಯು ಹೆಚ್ಚಿ ನಾವು ಎಷ್ಟು ಅತೃಪ್ತಿ, ದುರ್ಬಲತೆಯನ್ನು ಹೊಂದಬಲ್ಲೆವು ಎಂಬುದಕ್ಕೆ ಇದು ಸರಿಯಾದ ನಿದರ್ಶನ. ಈತೃಹತ್ಯೆಯು ೨೦ನೇ ಶತಮಾನದ ಜನರ ಮನಸ್ಥಿತಿಯನ್ನು ವ್ಯಕ್ತಪಡಿಸು ತ್ತದೆ. ಭೋಗಾನುಭವದ ಬಗ್ಗೆ ವೈಜ್ಞಾನಿಕ ಸೌಕರ್ಯಗಳು ಹೆಚ್ಚಿದಷ್ಟೂ ನಮ್ಮ ಆಶೆ-ಅಪೇಕ್ಷೆಗಳು ಮತ್ತೂ ವಿಸ್ತಾರಗೊಳ್ಳುತ್ತ ಜೀವನದಲ್ಲಿ ಅತೃಪ್ತಿ ಅಶಾಂತಿಗಳು ನೆಲೆಸುವವು. ಪಾಶ್ಚಾತ್ಯ ದೇಶದಲ್ಲಿ ಒಬ್ಬರಾಜನಿದ್ದನು. ದಿನದಲ್ಲಿ ಎಷ್ಟು ಸಲ ತಿಂದರೂ ಆತನಿಗೆ ತೃಪ್ತಿ ಇಲ್ಲ. ಇನ್ನೂ ತಿನ್ನಬೇಕೆಂಬ ಆಕೆ. ಪರಿಮಿತವಾದ ಹೊಟ್ಟಿಗೆ ಅವನ ಆಶೆಯನ್ನು ಪೂರೈಸಲು ಆಗಲಿಲ್ಲ. ಕೊನೆಗೆ ವೈದ್ಯರ ಸಹಾಯವನ್ನು ಪಡೆದು ದಿನವೂ ಇಪ್ಪತ್ತು ಮೂವತ್ತು ಸಲ ತಾನು ಉಂಡದ್ದನ್ನುವಾಂತಿ ಮಾಡಿಸಿತಿರುಗಿ ತಿನ್ನುತ್ತಿದ್ದಂತೆ. ಕಾಮನೆಯ ಚಾಪಲ್ಯವು ನಮ್ಮನ್ನು ಈ ರೀತಿ ಕುಣಿಸುತ್ತದೆ. ಒಂದು ಪ್ರಸಿದ್ಧ ವಚನವಿದೆ. "ಮೊದಲು ಮನುಷ್ಯನು ಮದ್ಯವನ್ನು ಕುಡಿಯಲು ಉಪಕ್ರಮಿಸುತ್ತಾನೆ. ಆಮೇಲೆ ಮದ್ಯವೇ ಮನುಷ್ಯನನ್ನುಕುಡಿಯುತ್ತದೆ'. ಅರ್ಥಾತ್‌ ಅಂತಹ ದುಶ್ಚಟಕ್ಕೆತಾನು ಪೂರ್ಣ ಬಲಿಯಾಗಿ ತನ್ನ ಸ್ವಾತಂತ್ರ್ಯವನ್ನೇ ಕಳೆದುಕೊಳ್ಳುತ್ತಾನೆ. ಹೀಗೆ ನಮ್ಮ ಅಪೇಕ್ಷೆಯನ್ನೆಲ್ಲ ಪೂರೈಸಿಕೊ ೦ಡು ನಾವು ನಮ್ಮ ಕಾಮವನ್ನು ಹಿಂಗಿಸಿಕೊಳ್ಳಬಹು ದೆಂದು ಸರ್ವಥಾ ಭಾವಿಸಬಾರದು. ವಿಷಯಭೊ ೇಗಗಳಿಂದ ಕಾಮವುಮತ್ತೂ ಜೆಡಂಭೂತವಾಗಿಕೊಬ್ಬನಮ್ಮ ನ್ನು ವೂ ರ್ಣವಾಗಿ ಪಾದಾಕ್ರಾಂತಗೊಳಿಸುವುದು. ಆಹಾರವನ್ನುನೀಡಿ ಉದರಾಗ್ನಿಯನ್ನುತಣಿಸಬಹುದಾದರೂ ಕಾಮಾಗ್ನಿಯನ್ನು ತೃಪ್ತಿಪಡಿಸಲು ಸಾಧ್ಯವಿಲ್ಲ. ಆದ್ದರಿಂದಲೇ- ದುಪ್ಪೂ ರೇಣಾನಲೇನ ಚ । ಎಂದು ಗಿಣೆಯಲ್ಲಿ ಕಾಮವನ್ನು ವರ್ಣಿಸಲಾಗಿದೆ.
Bannanje Govindacharya (1936–2020)Bhagavad Gita Pravachana
ಅರ್ಜುನಃ ಉವಾಚ-ಅರ್ಜುನ ಕೇಳಿದನು ಅಥ ಕೇನ ಪ್ರಯುಕ್ತಃ ಅಯಮ್‌ ಪಾಪಮ್‌ ಚರತಿ ಪೂರುಷಃ | ಅನಿಚ್ಛನ್‌ ಅಪಿ ವಾರ್ಷ್ವೇಯ ಬಲಾತ್‌ ಇವ ನಿಯೋಜಿತಃ-ಓ ವಾರ್ಷೇಯಾ, ಮನುಷ್ಯ ಪಾಪ ಮಾಡುತ್ತಾನೆ. ತನಗೆ ಇಷ್ಟವಿರದಿದ್ದರೂ ಯಾರೋ ಬಲವಂತದಿಂದ ಮಾಡಿಸಿದಂತೆ! ಇದು ಯಾರ ಪ್ರೇರಣೆ? ಕೃಷ್ಣನ ಉಪದೇಶವನ್ನು ಕೇಳಿದ ಮೇಲೆ ಅರ್ಜುನ ನಮ್ಮ.ನಿಮ್ಮೆಲ್ಲರಿಗೆ ಬರುವಂಥಹ ಒಂದು ಬಹಳ ಮುಖ್ಯವಾದ ಪ್ರಶ್ನೆಯನ್ನು ಹಾಕುತ್ತಾನೆ. "ಪಾಪ ಪುಣ್ಯದ ಅರಿವಿದ್ದೂ, ಮಾಡಬಾರದ ಕೆಲಸ ಎಂದು ತಿಳಿದಿದ್ದೂ, ಮನುಷ್ಯ ಕೆಲವೊಮ್ಮೆ ತಪ್ಪು ಮಾಡುತ್ತಾನೆ-ಇದು ಏಕೆ? ನಮಗೆ ಸರಿ-ತಪ್ಪಿನ ಅರಿವಿದ್ದೂ ಏಕೆ ತಪ್ಪನ್ನು ಮಾಡುತ್ತೇವೆ? ಮಾಡಬಾರದು ಅನಿಸಿದ್ದನ್ನು ಮಾಡುವಂತೆ ಪ್ರೇರೇಪಿಸುವ ಶಕ್ತಿ ಯಾವುದು? ನಾವು ಬೇಡವೆಂದರೂ ನಮ್ಮ ಕೈಯಲ್ಲಿ ಮಾಡಿಸುವ ಶಕ್ತಿ ಯಾವುದು?" ಇದು ಅರ್ಜುನನ ಪ್ರಶ್ನೆ. ಇಲ್ಲಿ 'ಪೂರುಷ' ಎನ್ನುವ ಪದ ಬಳಕೆಯಾಗಿದೆ. ಒಬ್ಬ ಅಪರೋಕ್ಷ ಜ್ಞಾನಿ ಕೂಡಾ ಈ ಮೇಲಿನ ತಪ್ಪನ್ನು ಮಾಡುತ್ತಾನೆ ಎನ್ನುವ ಅರ್ಥದಲ್ಲಿ ಈ ಪದ ಇಲ್ಲಿ ಬಳಕೆಯಾಗಿದೆ. ಮಹಾಭಾರತದಲ್ಲಿ ನೋಡಿದಾಗ ನಮಗೆ ಇದಕ್ಕೆ ಅನೇಕ ಉದಾಹರಣೆಗಳು ಸಿಗುತ್ತವೆ. ಭೀಷ್ಮ- ದ್ರೋಹಾಚಾರ್ಯರು ಆ ಕಾಲದ ಮಹಾ ಜ್ಞಾನಿಗಳು. ಆದರೆ ಯಾವುದೋ ಕಾರಣದಿಂದ, ತಪ್ಪು ಎಂದು ತಿಳಿದಿದ್ದರೂ ಸಹ ದುರ್ಯೋಧನನ ಕಡೆ ಯುದ್ಧಕ್ಕೆ ನಿಂತರು. ಈ ರೀತಿ ಏಕೆ? ಯಾವ ದುಷ್ಟ ಶಕ್ತಿ (ಸೈತಾನ) ನಮ್ಮೊಳಗಿದ್ದು ಈ ಕೆಲಸವನ್ನು ಮಾಡಿಸುತ್ತದೆ? ಎನ್ನುವ ಮೂಲಭೂತವಾದ ಪ್ರಶ್ನೆಯನ್ನು ಅರ್ಜುನ ಕೃಷ್ಣನ ಮುಂದಿರಿಸುತ್ತಾನೆ. ಇಲ್ಲಿ ಅರ್ಜುನ ಕೃಷ್ಣನನ್ನು 'ವಾರ್ಷೇಯ' ಎಂದು ಸಂಬೋಧಿಸಿದ್ದಾನೆ. 'ವೃಷ್ಟಿ' ಅನ್ನುವುದು ವೈದಿಕ ಪದ. 'ವೃಷ್ಟಿ' ಅಂದರೆ ಬಯಸಿದ ಬಯಕೆಗಳನ್ನು ಈಡೇರಿಸುವವ. ಬಯಸಿದ ಬಯಕೆಗಳನ್ನು ಈಡೇರಿಸುವವರಿಗೆ, ಹಾಗೂ ಎಲ್ಲರಿಗೂ ಆಶ್ರಯದಾತ 'ವಾರ್ಷಯ'. “ಬಯಸಿದ ಬಯಕೆಗಳನ್ನು ಈಡೇರಿಸುವವರನ್ನು ಒದಗಿಸಿಕೊಡುವವ ಮತ್ತು ಎಲ್ಲಾ ಬಯಕೆಗಳನ್ನು ಈಡೇರಿಸುವ ಮಹಾಶಕ್ತಿಯಾಗಿ ನಿಂತಿರುವ ನೀನು, ಇಷ್ಟವಿರದಿದ್ದರೂ ನಮ್ಮಿಂದ ಬಲವಂತವಾಗಿ. ಕೆಲಸ ಮಾಡಿಸುವ ಶಕ್ತಿ ಯಾವುದು ಎನ್ನುವುದನ್ನು ತಿಳಿಸು” ಎನ್ನುವ ಭಾವ ಈ ಸಂಬೋಧನೆಯಲ್ಲಿದೆ.
Bibek Debroy (1955–2024)The Bhagavad Gita
(36) Arjuna said: ‘O descendant of the Vrishnis!41 By whom are these men compelled? Despite being unwilling, it is almost as if they are forced into evil action.’42