न हि कश्चित्क्षणमपि जातु तिष्ठत्यकर्मकृत् ।
कार्यते ह्यवशः कर्म सर्वः प्रकृतिजैर्गुणैः ॥
na hi kaścitkṣaṇamapi jātu tiṣṭhatyakarmakṛt |
kāryate hyavaśaḥ karma sarvaḥ prakṛtijairguṇaiḥ ||
Sri Madhvacharya (1238–1317)Bhagavad Gita Tatparya Nirnaya
‘कर्तृत्वं द्विविधं प्रोक्तं विकारश्च स्वतन्त्रता।
विकारः प्रकृतेरेव विष्णोरेव स्वतन्त्रता’ इति पैङ्गिश्रुतेः।
‘कार्यते ह्यवशः’ इत्यत्रावशो विष्णुवशः।
‘अः इति ब्रह्म’ इत्यादि श्रुतेः॥05॥
Swami Sivananda (1887–1963)Bhagavad Gita
5. Verily none can ever remain for even a moment without performing action; for, everyone
is made to act helplessly indeed by the qualities born of Nature.
COMMENTARY: The ignorant man is driven to action helplessly by the actions of the
Gunas—Rajas, Tamas and Sattwa.
Sri Vishwesha Tirtharu (1931–2019)Gitasaroddhara
3.4–3.6 · ಕರ್ಮತ್ಯಾಗವು ಅವ್ಯವಹಾರ್ಯ
ಕರ್ಮತ್ಯಾಗವು ಅವ್ಯವಹಾರ್ಯ
ಮೊದಲನೆಯ ಪ್ರಶ್ನೆಗೆ ಶ್ರೀಕೃಷ್ಣನು ನೀಡುವ ಉತ್ತರ ಹೀಗಿದೆ:
ಕರ್ಮವೇ ಸಂಸಾರದ ಬೀಜವಾಗಿದೆ. ಅದರ ತ್ಯಾಗದಿಂದ ಸುಲಭವಾಗಿ
ಮುಕ್ತಿಯನ್ನು ವಡೆಯಬಹುದೆಂದು ಅರ್ಜುನನ ವಾದವಾಗಿದೆ. ಹೀಗಿದ್ದರೆ
ಪಶು, ಪಕ್ಚ್ಯಾದಿ ಜನ್ಮಗಳಲ್ಲಿ ಜೀವಿಗಳಿಗೆ ಸಹಜವಾಗಿಯೇ ಮುಕ್ತಿಯು ಏಕೆ
ದೊರೆಯುವುದಿಲ್ಲ? ಪಶು-ಪಕ್ಷಿಗಳಿಗೆ ಕರ್ಮದಲ್ಲಿ ಅಧಿಕಾರವೇ ಇರುವುದಿಲ್ಲ.
ಅವುಗಳು ಮಾಡುವ ಕರ್ಮಗಳು ಸಂಸಾರಕ್ಕೆ ಕಾರಣಗಳೇ ಅಲ್ಲ. ಹೀಗೆತಿರ್ಯಕ್
ಪ್ರಾಣಿಗಳ ಜೀವನದಲ್ಲಿ ಸಂಸಾರ ಬೀಜಗಳಾದ ಕರ್ಮ, ಪಾಪ, ಪುಣ್ಯಗಳಿಗೆ
ಅವಕಾಶವೇ ಇಲ್ಲದಿರುವುದರಿಂದ ಅವುಗಳಿಗೆ ಯಾಕೆ ಮುಕ್ತಿ ದೊರೆಯ
ಬಾರದು? ಆದುದರಿಂದ ಬರಿ ನಿಷೇಧಾತ್ಮಕ (190೩9) ವ್ಯವಹಾರದಿಂದ
ಅರ್ಥಾತ್ ಕರ್ಮತ್ಯಾಗದಿಂದ ಮುಕ್ತಿಯು ದೊರೆಯದೆ ವಿಧಾನಾತ್ಮಕ
(೧೦/19) ವ್ಯವಹಾರದಿಂದ, ನಿಷ್ಕುಮಕರ್ಮದಿಂದಲೇ ಮುಕ್ತಿಯನ್ನು
ಹೊಂದಲು ಸಾಧ್ಯವಾದೀತು. ಬರಿ ಕರ್ಮವನ್ನು ಬಿಡುವುದರಿಂದಲೇ ಮುಕ್ತಿ
ಎಂಬ ಭಾವದಿಂದ ಸಂನ್ಯಾಸವನ್ನು ಸ್ವೀಕರಿಸುವುದಲ್ಲ. ಮನಸ್ಸು ಏಕಾಗ್ರವಾಗಿ
ಭಗವನ್ನಿಷ್ಠವಾಗಿರಲು ಅನುಕೂಲವಾಗುವುದೆಂಬ ವಿಧಾಯಕ ಉದ್ದೇಶ
ದಿಂದಲೇ ಸಂನ್ಯಾಸದಪದ್ಧತಿಯು ಪ್ರವೃತ್ತವಾಗಿದೆ.
ನ ಚ ಸಂನ್ಯಸನಾದೇವ
ಸಿದ್ಧಿಂ ಸಮಧಿಗಚ್ಛತಿ |
ಬರಿ. ಸಂನ್ಯಾಸವನ್ನು ಅವಲಂಬಿಸಿ ಕರ್ಮತ್ಯಾಗವನ್ನು ಮಾತ್ರ
ಮಾಡುವುದರಿಂದ ಮುಕ್ತಿ ಯಿಲ್ಲ; ಅಲ್ಲೂ ನಿಷ್ಕಾಮಕರ್ಮ ಹಾಗೂ ಜ್ಞಾನದ
ಪ್ರಯತ್ನ ಇವೆರಡೂ ಬೇಕು.
ಕರ್ಮವು ಸಂಸಾರದ ಬೀಜವಾಗಿರುವುದರಿಂದ ಯಾವ ಕರ್ಮವನ್ನೂ
ಆಚರಿಸದೆ ಇದ್ದರೆ, ಬೇರು ಕಿತ್ತರೆ ಮರವು ಬೀಳುವಂತೆ, ನಮ್ಮ ಇಡೀ ಸಾಂಸಾರಿಕ
ಜೀವನವೇ ಒಮ್ಮೆ ಚಿರವಿಶ್ರಾಂತಿಯನ್ನು ಪಡೆಯಬಹುದಲ್ಲ ಎಂದು
ಪ್ರಶ್ನಿಸಬಹುದು. ಆದರೆ ಕರ್ಮದಿಂದ ಪೂರ್ಣ ಬಿಡುಗಡೆ ನಮಗೆ ಎಂದಿಗೂ
ಶಕ್ಕವಿಲ್ಲ. ನಾವು ಅದನ್ನು ಬಿಟ್ಟರೂ ಅದು ನಮ್ಮನ್ನು ಅಂಟಿಕೊಂಡೇತೀರುವುದು.
ಹೊಸ ಕರ್ಮಗಳನ್ನು ನಾವು ಮಾಡದಿದ್ದರೂ ಹಿಂದಿನ ಕರ್ಮಗಳನ್ನು ನಾವು
ಭೋಗಿಸಿಯೇ ಅವುಗಳನ್ನು ಮುಕ್ತಾಯಗೊಳಿಸಬೇಕು. ಒಂದು ಕರ್ಮವನ್ನು
ಅನುಭವಿಸುವಾಗ ಹತ್ತು ಹೊಸ ಕರ್ಮಗಳು ಸಿದ್ಧವಾಗುತ್ತವೆ. ರಕ್ತಬೀಜನ
ಸಂತಾನದಂತೆ ಈ ಕರ್ಮಗಳ ಸಂತಾನವು ಬೆಳೆಯುತ್ತಲೇ ಹೋಗುವುದು. ಒಬ್ಬ
ರಕ್ತಬೀಜನು ಸಾಯುವಾಗ ಅವನ ರಕ್ತದಿಂದ ಸಾವಿರಾರು ರಕ್ತಬೀಜರು
ಹುಟ್ಟಿದಂತೆ ಒಂದು ಕರ್ಮವನ್ನು ಭೋಗಿಸಿ ಅದನ್ನು ಮುಗಿಸುವಾಗ ನೂರು
ಕರ್ಮಗಳು ತಯಾರಾಗುತ್ತವೆ. ಇದಕ್ಕೆ ಪರ್ಯವಸಾನವಿಲ್ಲ. ಆದುದರಿಂದ
ಕರ್ಮವನ್ನು ತ್ಯಾಗಮಾಡಿ ಸುಲಭವಾಗಿ ಸಂಸಾರದ ಬೇರನ್ನೇ ಕಿತ್ತು
ಒಗೆಯಬಹುದೆಂದು ಆಲೋಚಿಸುವುದು ಬರಿ ಹುಚ್ಚು ಕಲ್ಪನೆ.
ಇಷ್ಟೇ ಅಲ್ಲದೆ ಕರ್ಮಗಳನ್ನು ಮಾಡದೆ ಸುಮ್ಮನೆ ಇರಲೂಸಾಧ್ಯವಿಲ್ಲ. ನಾವು
ನಿರಂತರವಾಗಿ ಏನಾದರೊಂದು ಕಾರ್ಯವನ್ನು ಮಾಡುತ್ತಲೇ ಇರುವೆವು.
ಉಸಿರಾಡುವುದು ಕೂಡ ಒಂದು ಕಾರ್ಯವೇ. ಅದರಿಂದಲೂ ಅನೇಕ
ಹಿಂಸಾಕೃತಿಗಳು ನಡೆಯುವವು. ಕರ್ಮವು ಬಂಧಕ ಹಾಗೂ ಪಾಪಲೇಪಕ್ಕೆ
ಕಾರಣವೆಂದು ಕರ್ಮವನ್ನೇಪೂರ್ತಿ ಬಿಡಲು ಸಾಧ್ಯವೆ? ಆದ್ದರಿಂದ ಕರ್ಮವನ್ನು
ಪೂರ್ತಿಯಾಗಿ ತ್ಯಜಿಸುವುದು ಆಸಾಧ್ಯಹಾಗೂ ಅವ್ಯವಹಾರ್ಯವಾಗಿದೆ. ಒಂದು
ಪಕ್ಷ ಬಾಹ್ಯಕರ್ಮಗಳನ್ನು ತೊರೆದು ಅರಣ್ಯದಲ್ಲಿ ತಪಸ್ಸಿಗಾಗಿ ಕುಳಿತ ಮಾತ್ರಕ್ಕೆ
ಆತನಿಗೆ ಸಿದ್ಧಿಯಾಗುವುದೆ? ಒಳಗೆ ಮನೋದೋಷಗಳನ್ನು ತುಂಬಿಕೊಂಡು
ಅರಣ್ಯದಲ್ಲಿ ಕುಳಿತಾದರೂ ಆತ ಮಾಡುವುದೇನು? ಇಂದ್ರಿಯಗಳಿಂದ ಏನೂ
ಬಾಹ್ಯವ್ಯಾಪಾರವನ್ನು ಮಾಡದೆ ಆತಸುಮ್ಮನೆ ಕುಳಿತರೂ ಒಳಗೆ ತನಗೆ ಬೇಕಾದ
ಸಾಂಸಾರಿಕ ವಸ್ತು ಗಳನ್ನ ಚಿಂತಿಸುತ್ತಾನೆ. ಇಂತಹ ಡಂಭಾಚಾರದಿಂದ ಆತನಿಗೆ
ಈ ಸಾಂಸಾರಿಕ ಜೀವನದಲ್ಲೂ ಸುಖವಿಲ್ಲ; ಪರಲೋಕದಲ್ಲೂ ಅನಿಷ್ಟವೇ.
ಹೀಗೆ ಇಹಪರಗಳಿರಡೂ ಇಲ್ಲದೆ ಆತ ಉಭಯಬ್ರಷ್ಟನಾಗುವನು. ಕರ್ಮಗಳನ್ನು
ವರ್ಜಿಸಿ ಅರಣ್ಯಕ್ಕೆ ಹೋದರೂ ಅದು ಫಲಕಾರಿಯಾಗಲು ಮನೋನಿಗ್ರಹವೇ
ಅವಶ್ಯವೆಂದಿರುವಾಗ ಅದನ್ನೇ ಪಡೆದು ಸಂಸಾರದಲ್ಲೇಏಕಿರಬಾರದು? ಮುಕ್ತಿಗೆ
ಕರ್ಮತ್ಯಾಗಕ್ಕಿಂತಲೂ ಮನೋನಿಗ್ರಹವೇ ಮುಖ್ಯವಾಗಿರುವಾಗ ಅದನ್ನೇ
ಸಾಧಿಸಿಸಂಸಾರದಲ್ಲೇ ಇರುವುದು ಲೇಸಲ್ಲವೇ?
ದಾಂತಸ್ಕ ಕಿಮರಣ್ಯೇನ ತಥಾನದಾಂತಸ್ಯ ಭಾರತ ।
ಯತ್ಶೈವ ನಿವಸೇದ್ದಾಂತಃ ತದರಣ್ಯಂ ಸ ಚಾಶ್ರಮಃ ॥
-ಮ. ಭಾ.ಶಾಂತಿಪರ್ವ
“ಮನೋನಿಗ್ರಹವಿದ್ದವನಿಗೆ ಅರಣ್ಯ ಏಕೆ? ಮನೋನಿಗ್ರಹವಿಲ್ಲದವನಿಗೂ
ಅರಣ್ಯೆ? ನಿಗ್ರಹಶೀಲನು ಎಲ್ಲಿರುವನೋ ಅದೇ ಅರಣ್ಯ ಅದೇ ಆಶ್ರಮ.''
ಆದುದರಿಂದ ಕರ್ಮತ್ಯಾಗದತ್ತ ಲಕ್ಷ್ಯ ಕೊಡುವುದಕ್ಕಿಂತ ಮನೋನಿಗ್ರಹದ
ಕಡೆಗೇ ಗಮನ ಕೊಡುವುದು ಸೂಕ್ತವೆನಿಸುವುದು. ಇಷ್ಟೇ ಅಲ್ಲದೆ ಮನೋ
ನಿಗ್ರಹವನ್ನು ಪಡೆಯಬೇಕಾದರೂ ಕರ್ಮವು ಆವಶ್ಯಕವಾಗಿರುವುದು. ಅದು
ಇಲ್ಲದೆ ರಾಗದ್ವೇಷಗಳ ಪರಿಹಾರವಾಗಿ ಮನೋನಿಗ್ರಹವನ್ನು ಹೇಗೆ
ಸಾಧಿಸಬಲ್ಲ ನು? ಹೀಗೆ ಸರ್ವಾತ್ಮ ನಾಕರ್ಮ ಅನಿವಾರ್ಯ ಹಾಗೂ ಆವಶ್ಯಕ
ವೆಂದು ಸ್ಪಷ್ಟವಾಗುತ್ತದೆ. ಇದನ್ನೆ;
ಕರ್ಮೇಂದ್ರಿಯಾಣಿ ಸಂಯಮ್ಯ
ಯ ಆಸ್ತೇ ಮನಸಾ ಸ್ಥರನ್ ।
ಇಂದ್ರಿಯಾರ್ಥಾನ್ ವಿಮೂಢಾತ್ಮಾ
ಮಿಥ್ಯಾಚಾರಃ ಸ ಉಚ್ಛತೇ [1
-ಎಂದು ಮುಂತಾದ ಶ್ಲೋಕಗಳಲ್ಲಿ ಪರಮಾತ್ಮನು ತಿಳಿಸಿದ್ದಾನೆ.
3.1–3.35 · ಸ್ವಧರ್ಮೇ ನಿಧನಂ ಶ್ರೇಯಃ
ಸ್ವಧರ್ಮೇ ನಿಧನಂಶ್ರೇಯಃ
ಇನ್ನು ಅರ್ಜುನನ
ತತ್ಮಿಂ ಕಮ ಣಿ ಘೋರೇಮಾಂ
ನಿಯೋಜಯಸಿ.... ।
ಎಂಬ ಪ್ರಶ್ನೆ ಉಳಿದಿದೆ. ಕರ್ಮದ ಪ್ರಮಾಣವು ಕಡಿಮೆಯಾಗಿರುವ
ಸನಕಾದಿಗಳ ಜ್ಞಾನಯೋಗದ ಮಾರ್ಗವಿರುವಾಗ ಯುದ್ಧದ ಈ ಕಠೋರ
ಮಾರ್ಗವನ್ನು ಯಾಕೆತಾನು ಆರಿಸಬೇಕು? ಅರಣ್ಯದಲ್ಲಿ ಶಾಂತನಾಗಿದ್ದು ಜಪ,
ತಪಸ್ಸು ಮುಂತಾದ ಕರ್ಮಗಳನ್ನು ಆಚರಿಸಿಕೊಂಡು ಹಾಯಾಗಿ ಯಾಕೆ
ಇರಬಾರದು ಎಂದು ಅರ್ಜುನನು ಮಾಡಿದ ಪ್ರಶ್ನೆಗೆ ಉತ್ತರ ಕೊಡುವುದು
ಉಳಿದಿದೆ.
ಇದಕ್ಕೆ ಗೀತೆಯ ಸಮಾಧಾನವು ಹೀಗಿದೆ : ಪ್ರತಿಯೊಬ್ಬನಿಗೂ ಅನೇಕ
ಕರ್ತವ್ಯಮಾರ್ಗಗಳು ತೋರಬಹುದು. ಅವುಗಳಲ್ಲಿ ಯಾವುದು ತನ್ನ ಸ್ವಧರ್ಮ
ವೆಂಬುದನ್ನು ಅರಿತುಕೊಂಡು ಆ ಮಾರ್ಗದಲ್ಲಿ ನಡೆಯುವುದರಲ್ಲೇ ಅವನ
ಪುರುಷಾರ್ಥ ಅಡಗಿದೆ. ವ್ಯಕ್ತಿಯ ಸ್ವರೂಪ, ಯೋಗ್ಯತೆಯನ್ನು ಅನುಸರಿಸಿ
ಕರ್ತವ್ಯಗಳೂ ಬೇರೆಬೇರೆಯಾಗಿರುತ್ತವೆ. ನಮ್ಮ ವ್ಯಕ್ತಿಸ್ವರೂಪಕ್ಕನುಸರಿಸಿ ನಾವು
ಮಾಡಬೇಕಾದ ಕರ್ತವ್ಯವನ್ನು ನಿರ್ಧರಿಸಬೇಕು. ಶುಕ್ಕ ಸನಕಾದಿಗಳು
ಜ್ಞಾನಯೋಗವನ್ನು ಅನುಸರಿಸುವುದೂ ಮನು, ಜನಕ ಮೊದಲಾದವರು
ಕರ್ಮಯೋಗವನ್ನು ಅವಲಂಬಿಸಿರುವುದೂ ಅವರವರವ್ಯಕ್ತಿತ್ತವನ್ನು ಆಧರಿಸಿದ
ಸ್ವಧರ್ಮಗಳಿಗೆ ಅನುಸಾರವಾಗಿಯೇ ಆಗಿದೆ. ಅರ್ಜುನನದೂ ಜನಕಾದಿಗಳಂತೆ
ಕರ್ಮಯೋಗಕ್ಕೆ ಮೀನಲಾಗಿರಿಸಿದ್ದ ಜೀವನ. ಅವನ ವ್ಯಕ್ತಿತ್ವವೇ ಅಂತಹದು.
ಶಮಪ್ರಧಾನವಾದ ಯತಿಧರ್ಮವನ್ನು ಸ್ವೀಕರಿಸಿ ನಡೆಯುವ ಸ್ವರೂಪವು
ಅವನದಲ್ಲ. ಅವನು ಆಧಿಕಾರಿಕರೆಂದು ಪರಿಗಣಿಸಲಾದ ಜೀವರ ವರ್ಗದಲ್ಲಿ
ಸೇರಿದವನು. ಲೋಕದಲ್ಲಿಯ ದೌಷ್ಟ್ಯ ಅಧರ್ಮಗಳನ್ನು ನಿವಾರಿಸಿ
ಸಜ್ಜನರನ್ನು ಸಂರಕ್ಷಿಸಿ ಮುನ್ನಡೆಸುವ ಆಧಿಕಾರಿಕ ವ್ಯಕ್ತಿತ್ವವು ಅವನದಾಗಿದೆ. ತನ್ನ
ವ್ಯಕ್ತಿತ್ವಕ್ಕೆ ಅನುಗುಣವಾದ ಕರ್ತವ್ಯವನ್ನು ಬಿಟ್ಟು ಬೇರೆ ದಾರಿಯಲ್ಲಿ ನಡೆದರೆ
ಅದರಿಂದ ಅವನ ಪ್ರಗತಿಯಾಗಲಾರದು. ಹೀಗೆ ಪ್ರತಿಯೊಬ್ಬರ ವಿಷಯದಲ್ಲೂ
ವ್ಯಕ್ತಿಯ ಸ್ವರೂವವನ್ನು ಆಧರಿಸಿ ಕರ್ತವ್ಯವು ನಿರ್ಧರಿಸಲ್ಪಡುತ್ತದೆ.
ಅದರಂತೆ ಸಾಮಾಜಿಕ ಹೊಣೆಗಾರಿಕೆಯಿಂದ ಪ್ರಾಪ್ತವಾಗುವ
ವರ್ಣಾಶ್ರಮೋಚಿತ ಕರ್ತವ್ಯಗಳನ್ನು ನಾವು ನಿಷ್ಠೆಯಿಂದ ಅನುಸರಿಸಬೇಕು. ತನ್ನ
ನಿಜಸ್ವರೂಪವನ್ನು ಪರಿಶೀಲಿಸಿ ವ್ಯಕ್ತಿಧರ್ಮವನ್ನು ನಿರ್ಧರಿಸುವಂತೆ ಶಾಸ್ತ್ರಗಳಿಂದ
ನಮ್ಮ ಸಾಮಾಜಿಕ ಜವಾಬ್ದಾರಿಯನ್ನು ಅರಿತು ಕ್ರಮಪ್ರಾಪ್ತವಾದ ನಮ್ಮ
ವರ್ಣಧರ್ಮಗಳನ್ನು ತಿಳಿದು ಅದರಂತೆ ನಡೆಯಬೇಕು. ಈ ವ್ಯಕ್ತಿಧರ್ಮ,
ವರ್ಣಧರ್ಮಗಳೆರಡೂ ಸ್ವಧರ್ಮಗಳಾಗಿದ್ದು ಈ ಎರಡೂ ದೃಷ್ಟಿಗಳಿಂದ
ಯತಿಧರ್ಮದ ಬದಲು ಕ್ಹಾತ್ರಧರ್ಮವನ್ನು ಅರ್ಜುನನು ಪರಿಗ್ರಹಿನ
ಬೇಕಾಗಿದೆ. ಸಂನ್ಯಾಸಧರ್ಮವಾಗಲಿ ಅರಣ್ಯಕ್ಕೆ ಹೋಗಿ ವಾನವ್ರಸ್ಥವೃತ್ತಿಯನ್ನು
ಅವಲಂಬಿಸುವುದಾಗಲಿ ಶ್ರೇಷ್ಠವೇ ಇರಬಹುದು. ಆದರೆ ದುಷ್ಟನಿಗ್ರಹ ಹಾಗೂ
ಧರ್ಮ ರಕ್ಷಣೆಯ ವಿಶಿಷ್ಟ ಹೊಣೆಗಾರಿಕೆಯನ್ನು ಹೊತ್ತ ಅರ್ಜುನನು ತನ್ನ ಈ
ಕರ್ತವ್ಯವನ್ನು ತೊರೆದು ಶ್ರೇಷ್ಠ ಮಾರ್ಗವೆಂದು ಸಂನ್ಯಾಸಿ ಅಥವಾ
ವಾನಪ್ರಸ್ಥನಾಗುವುದು ಉಚಿತವಾಗಲಾರದು. ಬೇರೆ ಅಧಿಕಾರ ಸ್ಥಾನಗಳಲ್ಲಿ
ನಿಯುಕ್ತರಾದವರು ತಮ್ಮ ಕರ್ತವ್ಯದಲ್ಲಿ ಅಲಕ್ಷ್ಯ ಮಾಡಿ ಬೇರೆ ಎಷ್ಟೇ
ಉಪಯುಕ್ತಕಾರ್ಯವನ್ನುನಡೆಸಿದರೂ ಅದು ಪ್ರಶಂಸನೀಯವೆನಿಸುವುದಿಲ್ಲ.
ಸೈನ್ಯ ಅಥವಾ ಆಡಳಿತದ ಕಾರ್ಯದಲ್ಲಿ ನಿಯುಕ್ತರಾದವರು ತಮ್ಮ ಕೆಲಸದ
ವೇಳೆಯಲ್ಲಿ ಪವಿತ್ರ ಕಾರ್ಯವೆಂದು ಧಾರ್ಮಿಕ ಗಂಥಗಳ ಅಧ್ಯಯನದಲ್ಲೇ
ತೊಡಗಿದರೆ ಅದು ಧರ್ಮವೆನಿಸಲಾರದು. ತನಗೆ ನಿಯೋಜಿಸಲ್ಪಟ್ಟ
ಕಾರ್ಯವನ್ನು ನಿಷ್ಠೆಯಿಂದ ಆಚರಿಸುವುದರಿಂದಲೇ ಮನುಷ್ಯನು ಶ್ರೇಷ್ಠ
ವ್ಯಕ್ತಿಯಾಗಬಲ್ಲನು. ಹೊರತು ಅವನು ಯಾವಕಾರ್ಯಮಾಡುತ್ತಿದ್ದಾನೆಂಬು
ದರಿಂದಲೇ ಅವನ ಮಹತ್ತ್ವವನ್ನು ನಿರ್ಧರಿಸಲಾರೆವು.
ಹೀಗೆಯೇವ್ಯಕ್ತಿಯ ವಿಶಿಷ್ಟ ಪರಿಸ್ಥಿತಿ, ಸಂದರ್ಭಗಳನ್ನು ಅನುಸರಿಸಿ ನಮ್ಮ
ಕರ್ತವ್ಯವನ್ನು ವಿವೇಚಿಸುವ ಪ್ರಸಂಗವೂ ನಮ್ಮ ಜೀವನದಲ್ಲಿ ಬರುತ್ತದೆ.
ನದಿಯಲ್ಲಿ ಒಬ್ಬನು ಮುಳುಗುತ್ತಿರುವಾಗ, ತೀರದಲ್ಲಿ ಜಪಮಾಡುತ್ತಿರುವವನು
ಜಪವನ್ನು ಬಿಟ್ಟು ಮುಳುಗುವವನನ್ನು ಮೇಲಕ್ಕೆತ್ತಲು ಪ್ರಯತ್ನಿಸುವುದೇ
ಧರ್ಮವೆನಿಸುವುದು. ಜಪವೇ ಶ್ರೇಷ್ಠವೆಂದು ಆತನು ಮೂಗು ಹಿಡಿದು ಕುಳಿತರೆ
ಅದು ಸರಿಯೆನಿಸುವುದೆ? ದೇವರ ಗುಡಿಗೆ ಹೋಗುವುದೇನೋ ಒಳ್ಳೆಯ
ಕಾರ್ಯವೇ; ಆದರೆ ಶಾಲೆಗೆ ಹೋಗುವುದನ್ನು ತಪ್ಪಿಸಿ ಹುಡುಗರು ದೇವರ
ಗುಡಿಗೆ ಹೋದರೆ ಅದನ್ನು ಯಾರೂ ಅಭಿನಂದಿಸಲಾರರು. ಮಕ್ಕಳಿಗಾಗಿ,
ಪತಿಗಾಗಿ ತಾನು ನಿರ್ವಹಿಸಬೇಕಾದ ಕೌಟುಂಬಿಕ ಕರ್ತವ್ಯಗಳನ್ನು ತೊರೆದು
ಮಹಿಳೆಯರು ಸಮಾಜಸೇವೆಯೆಂದು ಹೊರಗೇ ಅಡ್ಮಾಡುತ್ತಿದ್ದರೆ ಅದು
ಧರ್ಮ ಎನಿಸಲಾರದು.
ಮಹಾಭಾರತದಲ್ಲಿ ಧರ್ಮವ್ಯಾಧನ ಉಪಾಖ್ಯಾನದಲ್ಲಿ ಪ್ರತಿಯೊಬ್ಬನೂ
ತನ್ನ ಈ ವೈಯಕ್ತಿಕ ಹೊಣೆಗಾರಿಕೆಯನ್ನು ಪಾಲಿಸುವುದರ ಅವಶ್ಯಕತೆಯನ್ನು
ಒತ್ತಿಹೇಳಲಾಗಿದೆ. ತರುಣ ಬ್ರಾಹ್ಮಣ ಯುವಕನೊಬ್ಬನು ತನ್ನ ವೃದ್ಧ
ತಾಯಿತಂದೆಗಳಿಗೆ ಸಲ್ಲಿಸಬೇಕಾದ ಸೇವಾಕಾರ್ಯವನ್ನು ನಿರ್ವಹಿಸದೆ ಯಾವ
ರಕ್ಷಕರೂ ಇಲ್ಲದ ಅವರನ್ನು ಮನೆಯಲ್ಲೇ ಬಿಟ್ಟುತಾನು ತಪಸ್ವಿಯಾಗಬೇಕೆಂದು
ಅರಣ್ಯದಲ್ಲಿ ಇರುತ್ತಾನೆ. ಅನೇಕ ವರ್ಷಗಳವರೆಗೆ ತಪ್ಪಸ್ಸನ್ನು ಆಚರಿಸಿ
ಉಗ್ರಶಕ್ತಿಯನ್ನು ಪಡೆಯುತ್ತಾನೆ. ಒಮ್ಮೆ ಒಂದು ಮರದ ಕೆಳಗೆ ಆತ
ಕುಳಿತಿರುವಾಗಮೇಲಿರುವಹಕ್ಕಿಯು ಆತನಮೇಲಿತನ್ನ ಅಶುಚಿ ಪದಾರ್ಥವನ್ನು
ಕೆಡಹಿತು. ಕೋಪಾವಿಷ್ಠನಾದ ಆತನು ಮುಖವೆತ್ತ ಕೆಂಗಣ್ಣಿನಿಂದ ಆಹಕ್ಕಿಯನ್ನು
ನೋಡಿದ. ಕೂಡಲೇ ಅದು ಸುಟ್ಟು ಬೂದಿಯಾಯಿತು. ತನ್ನ ತಪಸ್ಸಿನ ಬಗ್ಗೆ
ಈತನಲ್ಲಿ ಅಹಂಭಾವ ಉದಯಿಸಿತು. ಭಿಕ್ಷೆಗಾಗಿ ಗ್ರಾಮದಲ್ಲಿ ಸಂಚರಿಸುತ್ತ ಈ
ತಪಸ್ವಿಯು ಒಂದು ಮನೆಯ ಮುಂದೆ ಬಂದು ನಿಂತನು. ಮನೆಯ ಗೃಹಿಣಿಯು
ಅತ್ಯಂತಸಾದ್ವಿಯಾಗಿದ್ದಳು. ತಪಸ್ವಿಗೆ ಭಿಕ್ಷೆಯನ್ನು ನೀಡಬೇಕೆಂದು ಆಕೆಹೊರಟು
ನಿಂತಾಗ ಬಳಲಿದ ತನ್ನ ಪತಿಯು ಹೊರಗಿನಿಂದ ಬರುವುದನ್ನು ಕಂಡಳು.
ಪತಿಯನ್ನು ಉಪಚರಿಸಿ ಆತನ ಸೇವೆಯನ್ನು ಮಾಡುವ ಭರದಲ್ಲಿ ಈ
ಅತಿಥಿಯನ್ನು ಅಕೆ ಮರೆತಳು. ಸ್ವಲ್ಪಹೊತ್ತಿನ ನಂತರ ಅತಿಥಿಯ ನೆನಪಾಗಿ ಭಿಕ್ಷ
ಹಿಡಿದುಕೊಂಡು ಅವನ ಬಳಿಗೆ ಬಂದಳು. ಕೋವಾಕ್ರಾಂತನಾದ ಅತಿಥಿ
ತಪಸ್ವಿಯನ್ನು ಇವಳು ಎಷ್ಟು ಸಂತೈಸಿದರೂ ಅವನ ಸಿಟ್ಟು ಇಳಿಯಲಿಲ್ಲ.
ಆಕ್ಕೆ “ನಾನೇನು ಅರಣ್ಯದಲ್ಲಿನೀನು ಬೂದಿಮಾಡಿದ ಹಕ್ಕಿಯಲ್ಲ' ಎಂದು
ನುಡಿದಳು. ಇದನ್ನು ಕೇಳಿ ಆತಪಸ್ವಿತಣ್ಣಗಾದ. ಅಲ್ಲಿಯ ಘಟನೆಯನ್ನು ಇವಳು
ತಿಳಿದ ಬಗೆ ಹೇಗೆ? ಇವಳಿಗೆ ಈ ಜ್ಞಾನಶಕ್ತಿ ಹೇಗೆ ಬಂದಿತು? ಎಂದು
ಅಚ್ಚರಿಗೊಂಡು ಇವಳನ್ನು ಬೇಡಿದಾಗ, ಧರ್ಮವ್ಯಾಧನ ಬಳಿ ಹೋಗಲು
ತಿಳಿಸಿದಳು. ಧರ್ಮವ್ಯಾಧನು ಮಾಂಸವನ್ನು ಮಾರುತ್ತಿದ್ದನು. ಅವನ ಈ
ವ್ಯಾಪಾರವನ್ನು ಕಂಡು ಅವನ ಬಳಿ ಹೋಗಲು ಈ ತಪಸ್ವಿ ಹಿಂಜರಿದಾಗ,
ಧರ್ಮವ್ಯಾಧನೇ "ಸಾಧ್ವೀಮಣಿಯಿಂದ ಕಳಿಸಲ್ಪಟ್ಟವನಲ್ಲ ವೇನೀನು?' ಎಂದು
ಈತನ ಪೂರ್ವಾಪರವನ್ನು ಹೇಳಲು, ಇವನಿಗೆ ಮತ್ತೂ ವಿಸ್ಮಯವಾಯಿತು.
ಧರ್ಮವ್ಯಾಧನು ತಾನು ಮಾಡುವ ವ್ಯಾಪಾರದ ನೀತಿ, ಸೇವಾಭಾವಗಳನ್ನು
ಆತನಿಗೆ ವಿವರಿಸಿ, ತನ್ನ ವೃದ್ಧ ತಂದೆತಾಯಿಗಳ ಸೇವೆಯನ್ನು ತಾನು ಮಾಡುವ
ವಿಧಾನವನ್ನು ಅವನಿಗೆ ಪ್ರತ್ಯಕ್ಷವಾಗಿ ತೋರಿಸಿದನು. ತಂದೆತಾಯಿಗಳ ಬಗ್ಗೆ ತಾನು
ಮಾಡಬೇಕಾದ ಕರ್ತವ್ಯವನ್ನು ಬಿಟ್ಟು ಅರಣ್ಯಕ್ಕೆ ಬಂದಿರುವ ಈ ತವಸ್ವಿಗಿಂತ
ಶೆಚ್ಚಿನಸಿದ್ಧಿಯನ್ನು, ಯೋಗ್ಯತೆಯನ್ನು ಪಕಿಯ ಬಗ್ಸೆ ತಂದೆತಾಯಿಯರ ಬಗ್ಗೆ
ತಮ್ಮ ವೈಯಕ್ತಿಕ ಕರ್ತವ್ಯವನ್ನು ನಿಷ್ಠೆಯಿಂದ, ಭಗವದ್ಭಕ್ತಿಯಿಂದ ಸಲ್ಲಿಸುತ್ತಲೇ
ತಮ್ಮ ವ್ಯವಹಾರವನ್ನು ನಡೆಸುತ್ತಿರುವ ಸಾಧ್ವಿ ಹಾಗೂ ಧರ್ಮವ್ಯಾಧರು
ಪಡೆದಿರುವರು. ಯಾರೂತಾವು ಮಾಡಬೇಕಾದ ವೈಯಕ್ತಿಕಹಾಗೂಸಾಮಾಜಿಕ
ಕರ್ತವ್ಯಗಳನ್ನು ಬಟ್ಟು ಬೇರೆ ಯಾವುದೇಎಷ್ಟೇ ಶ್ರೇಷ್ಠವಾದ ಕಾರ್ಯಗಳನ್ನು
ಮಾಡಿದರೂ ಅವರು ಅದರಿಂದ ಶ್ರೇಯಸ್ಸನ್ನು ಪಡೆಯಲಾರರು.
ಧರ್ಮವ್ಯಾಧನ ಕಥೆಯಲ್ಲಿ ಕಂಡುಬರುವ ತಪಸ್ವಿ ಬ್ರಾಹ್ಮಣನು ಈ ಮಾತಿಗೆ
ಒಳ್ಳೆಯ ನಿದರ್ಶನನಾಗಿದ್ದಾನೆ. ಪ್ರತಿಯೊಬ್ಬರೂ ತಮ್ಮ ತಮ್ಮ ವ್ಯಕ್ತಿಧರ್ಮ,
ವರ್ಣ-ಧರ್ಮಗಳನ್ನು ಅರಿತುಕೊಂಡು ತಮ್ಮ ಹೊಣೆಗಾರಿಕೆಯನ್ನು
ಭಕ್ತಿಯಿಂದ, ಶ್ರದ್ಧೆಯಿಂದ ನಿರ್ವಹಿಸುವುದರಲ್ಲೇ ಅವರ ಜೀವನದಸಿದ್ಧಿ ಇದೆ.
ಸ್ವಧರ್ಮೆ ನಿಧನಂ ಶ್ರೇಯಃ ।
ಪರಧರ್ಮೋ ಭಯಾವಹಃ।
ಅರ್ಜುನನದು ಕರ್ಮಯೋಗಿಯ ವ್ಯಕ್ತಿತ್ವ ಅದರಲ್ಲೂ ಕ್ಚತ್ರಿಯನಾಗಿ
ಲೋಕ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತವ. ಇಂತಹ ಧರ್ಮಯುದ್ಧದಲ್ಲಿ
ಪ್ರಮುಖ ಭಾಗವನ್ನು ವಹಿಸಿ ಕರ್ತವ್ಯವನ್ನು ಪೂರೈಸದೆ ಶಮಪ್ರಧಾನವಾದ
ಯತಿಧರ್ಮವನ್ನು ಆಚರಿಸಲು ಅವನಿಗೆ ಅಧಿಕಾರ ಏನಿದೆ? ನೀರಿಗಿಂತ ಹಾಲು
ಶ್ರೇಷ್ಠವೇನೋನಿಜ. ಆದರೆ ಮೀನನ್ನು ನೀರಿನಿಂದ ತೆಗೆದು ಹಾಲಿನಲ್ಲೇಇಟ್ಟರೆ
ಅದು ಬದುಕಬಹುದೆ? ಅದರಂತೆ ಮಾನವನು ತನ್ನ ವ್ಯಕ್ತಿಧರ್ಮ,
ವರ್ಣಧರ್ಮ, ಪ್ರಾಸಂಗಿಕ ಧರ್ಮಗಳನ್ನು ಪರಿಶೀಲಿಸಿ ತನ್ನ ಸ್ವಧರ್ಮವನ್ನು
ನಿರ್ಧರಿಸಿ ಆಮಾರ್ಗದಿಂದಲೇ ನಡೆಯಬೇಕು.
ಒಬ್ಬನು ತನಗೆ ಒಪ್ಪಿಗೆಯಾಗುವ ಪತ್ನಿಯನ್ನು ಆರಿಸಬಲ್ಲ. ತನಗೆ
ಬೇಡವಾದಾಗ ಪತ್ನಿಯನ್ನು ತೊರೆಯಲೂ ಸಾಧ್ಯವಾಗಬಹುದು. ಆದರೆ ತನ್ನ
ತಾಯಿಯ ಬಗ್ಗೆ ಹೀಗೆ ನಡೆಯಬಲ್ಲನೆ? ಈ ತಾಯಿ ಚೆನ್ನಾಗಿಲ್ಲ
ಸುಂದರಳಾಗಿಲ್ಲ; ತನಗೆ ಬೇರೆತಾಯಿ ಬೇಕೆಂದು ಬದಲಿಸಲು ಸಾಧ್ಯವೆ? ನಾವು
ಹುಟ್ಟುವಾಗಲೇ ನಮ್ಮತಾಯಿ ಸಿದ್ಧಳಾಗಿರುತ್ತಾಳೆ. ಅವಳನ್ನೇ ತಾಯಿಯೆಂದು
ಸ್ವೀಕರಿಸಿ ಪ್ರತ್ರರಾಗಿ ನಮ್ಮ ಸೇವೆ, ಕರ್ತವ್ಯಗಳನ್ನು ನಾವು ಮಾಡಬೇಕಾಗುತ್ತದೆ.
ಧರ್ಮದ ಬಗ್ಗೆಯೂ ಇದೇ ರೀತಿಯನ್ನು ನಾವು ಅನುಸರಿಸಬೇಕು. ನಾವು
ಹುಟ್ಟುವಾಗಲೇನಮ್ಮ ಧರ್ಮವೂನಿರ್ಧರಿತವಾಗಿರುತ್ತದೆ. ನಮ್ಮ ಸೇವೆಯನ್ನು
ಪಡೆಯಲು ಅದು ಸಿದ್ಧವಾಗಿರುವುದು. ಅದನ್ನು ಬದಲಿಸುವ ಗೋಜಿಗೇನಾವು
ಹೋಗಬಾರದು. ನಮಗೆ ವ್ರಾಪ್ತವಾದ ಧರ್ಮವನ್ನು ನಿಷ್ಠೆಯಿಂದ ಅನುಷ್ಠಾನ
ಮಾಡಬೇಕು. ಇದನ್ನೇ ವರ್ಣಧರ್ಮವೆನ್ನಲಾಗುವುದು.
Bannanje Govindacharya (1936–2020)Bhagavad Gita Pravachana
ನ ಹಿ ಕಶ್ಚಿತ್ ಕ್ಷಣಮ್ ಅಪಿ ಜಾತು ತಿಷ್ಠತಿ ಅಕರ್ಮ ಕೃತ್ |
ಕಾರ್ಯತೇ ಹಿ ಅವಶಃ ಕರ್ಮ ಸರ್ವಃ ಪ್ರಕೃತಿಜೈಃ ಗುಣೈಃ--ಯಾವನೂ ಒಂದು ಕ್ಷಣ ಕೂಡಾ ಏನೂ ಮಾಡದೇ
ತೆಪ್ಪಗಿರುವುದು ಸಾಧ್ಯವಿಲ್ಲ. ಪ್ರತಿಯೊಬ್ಬನೂ ಪ್ರಕೃತಿಯ ಗುಣಗಳಿಂದ ಅರಿವಿಲ್ಲದೆಯೇ (ಭಗವಂತನ
ಅಧೀನವಾಗಿ) ಕರ್ಮ ಮಾಡುತ್ತಾನೆ.
ಕರ್ಮತ್ಯಾಗದಿಂದ ಸಿದ್ದಿ ಸಿಗದು. ಅಷ್ಟೇ ಅಲ್ಲ, ಕರ್ಮತ್ಯಾಗ ಮಾಡುವುದು ಸಾಧ್ಯವೇ ಇಲ್ಲ. ನಮ್ಮ ಅನ್ನಮಯ
ಮತ್ತು ಪ್ರಾಣಮಯಕೋಶ ನಿರಂತರ ಕಾರ್ಯ ನಿರ್ವಹಿಸುತ್ತಿರುತ್ತವೆ. ಬದುಕಿರುವಾಗ ನಿಷ್ಕ್ರೀಯರಾಗಿರುವುದು
ಅಸಾಧ್ಯ. ಯಾವ ಕಾಲದಲ್ಲೂ ಕೂಡಾ ಒಂದು ಕ್ಷಣವೂ ನಿಷ್ಕ್ರೀಯನಾಗಿ ಇರುವುದು ಯಾರಿಗೂ ಸಾಧ್ಯವಿಲ್ಲ.
"ಕಾರ್ಯತೇ ಹಿ ಅವಶಃ”"-ದೇಹದ ಒಳಗಿರುವ ಜೀವನಲ್ಲಿ ಆತನ ದೇಹದ ಮೂಲಕ, ಮನಸ್ಸಿನ ಮೂಲಕ,
ಮಾತಿನ ಮೂಲಕ-ಕೆಲಸ ಮಾಡಿಸಲ್ಪಡುತ್ತದೆ. ಅದು ಜೀವನ ಸ್ವಾಧೀನದಲ್ಲಿರುವುದಿಲ್ಲ. ಅದು ಭಗವಂತನ ವಶ.
ಇಡೀ ವಿಶ್ವವೇ ಪ್ರಕೃತಿಯಿಂದ ಸೃಷ್ಠಿಯಾಗಿದೆ. ಅದರ ಮೂಲ ದ್ರವ್ಯ ಸತ್ವ-ರಜಸ್ಸು-ತಮಸ್ಸು. ಜೀವಕ್ಕೆ ಅದರದ್ದೇ
ಆದ ಸ್ವಭಾವವಿರುತ್ತದೆ. ಅದಕ್ಕನುಗುಣವಾಗಿ ಪ್ರಕೃತಿಯ ಈ ತ್ರಿಗುಣಗಳ ಪ್ರಭಾವ ನಮ್ಮ ಮೇಲಾಗುತ್ತಿರುತ್ತದೆ.
ಆದ್ದರಿಂದ ನಿಷ್ಕ್ರೀಯತೆ ಎನ್ನುವುದು ಅರ್ಥಶೂನ್ಯ. ನಾವು ಜೀವನದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು.
ಕರ್ತವ್ಯ ಶೀಲರಾಗಬೇಕು. ಅದರೊಂದಿಗೆ ಮಾನಸಿಕವಾಗಿ ಐಹಿಕ ಪ್ರಪಂಚದಿಂದ ಆಚೆಗಿನ ಸತ್ಯದ ಕಡೆ ನಮ್ಮ
ಮನಸ್ಸು ಜಾಗೃತವಾಗಿರಬೇಕು. ಈ ಎಚ್ಚರದಿಂದ ಎಲ್ಲಾ ಕರ್ತವ್ಯ ಕರ್ಮಗಳನ್ನು ಮಾಡಬೇಕು. ನಿಷ್ಕ್ರೀಯತೆ
ವೇದಾಂತವಲ್ಲ-ಕರ್ತವ್ಯಚ್ಯತಿ ಅಧ್ಯಾತ್ಮವಲ್ಲ. ಭಗವಂತನ ಪ್ರಜ್ಞೆಯೊಂದಿಗೆ ನಿನ್ನ ಪಾಲಿನ ಕರ್ಮ ನೀನು
ಮಾಡು. ಹೀಗೆ ಮಾಡಿದಾಗ ಕರ್ಮ ಮತ್ತು ಜ್ಞಾನ ಮಾರ್ಗಗಳು ಒಂದಕ್ಕೊಂದು ಪೂರಕವಾಗುತ್ತವೆ.
Bibek Debroy (1955–2024)The Bhagavad Gita
(5)
‘No one can ever exist, even for a short while, without performing action.
Because the qualities of nature8 force everyone to perform action.’