3.9

यज्ञार्थात्कर्मणोऽन्यत्र लोकोऽयं कर्मबन्धनः ।
तदर्थं कर्म कौन्तेय मुक्तसङ्गः समाचर ॥
yajñārthātkarmaṇo'nyatra loko'yaṃ karmabandhanaḥ |
tadarthaṃ karma kaunteya muktasaṅgaḥ samācara ||
Sri Madhvacharya (1238–1317)Bhagavad Gita Tatparya Nirnaya
‘कर्मणा बध्यते जन्तुरित्यादिकमप्यवैष्णवकर्मविषयमित्याह- यज्ञार्थादिति। ‘ज्ञो नाम भगवान् विष्णुस्त्वं यात्युद्देश एष यः। स यज्ञ इति सम्प्रोक्तो विहिते कर्मणि स्थितः’ इति बर्कश्रुतिः॥09॥
Swami Sivananda (1887–1963)Bhagavad Gita
9. The world is bound by actions other than those performed for the sake of sacrifice; do thou, therefore, O son of Kunti, perform action for that sake (for sacrifice) alone, free from attachment! COMMENTARY: If anyone does actions for the sake of the Lord, he is not bound. His heart is purified by performing actions for the sake of the Lord. Where this spirit of unselfishness does not govern the action, such actions bind one to worldliness, however good or glorious they may be.
Sri Vishwesha Tirtharu (1931–2019)Gitasaroddhara
ಕರ್ಮವು ಯಜ್ಞ ರೂಪವಾಗಿರಲಿ
ಕರ್ಮವು ಯಜ್ಞ! ರೂಪವಾಗಿರಲಿ ಇನ್ನೂ ಒಂದು ಪ್ರಶ್ನೆ ಯನ್ನು ಬಿಡಿಸಬೇಕಾಗಿದೆ. ಕರ್ಮವು ಬಂಧಕವೆಂದು ಶಾಸ್ತ್ರವುಸಾರಿ ಹೇಳಿದೆ: ಕರ್ಮಣಾ ಬಧ್ಯತೇ ಜಂತುಃ | ಹೀಗೆ ಬಂಧಕವಾಗುವ ಕರ್ಮವನ್ನು ಆಚರಿಸಿಕೊಂಡು ನಾವು ಮುಕ್ತಿಯನ್ನು ಹೇಗೆ ಪಡೆಯುವುದು? ಮುಕ್ತಿವಿರೋಧಿಯಾದ ಕರ್ಮವನ್ನು ಆಚರಿಸುತ್ತ ಮುಕ್ತಿಯನ್ನು ಪಡೆಯಲು ಪ್ರಯತ್ನಿಸುವುದು ದುಹಾಹಸವೇ ಆಗುವುದು. ಅಪಥ್ಯವನ್ನು ಆಚರಿಸುತ್ತ ಔಷಧವನ್ನು ಸ್ವೀಕರಿಸುವುದು ಅನುಪಯುಕ್ತವೆನಿಸು ವಂತೆ, ಕರ್ಮಾಚರಣೆಯೊಂದಿಗೆ ನಾವು ಮಾಡುವ ಮುಕ್ತಿಯ ಪ್ರಯತ್ನವೂ ವಿಫಲವೇ ಆಗುವುದು ಎಂಬುದೇ ಈ ಪ್ರಶ್ನೆ -ಇದನ್ನೇ ಮೂರನೇ ಅಧ್ಯಾಯದಲ್ಲಿ ವಿಸ್ತಾ ರವಾಗಿ ಪರಿಹರಿಸಲಾಗಿದೆ. ಏನೂ ಆಹಾರವಿಲ್ಲದೆ ಜೀವಿಸಲು ಅಸಾಧ್ಯವಾದುದರಿಂದ ನಾವು ಜೀವಿಸಲು ಏನಾದರೂ ಆಹಾರವನ್ನು ಸ್ವೀಕರಿಸಲೇಬೇಕು. ಯಾವುದೇ ಕೆಟ್ಟ ಆಹಾರವನ್ನು ಸ್ವೀಕರಿಸುವುದರಿಂದ ಶರೀರವು ಕೆಟ್ಟುಹೋಗುವುದೆಂದು ಆಹಾರವನ್ನೇ ಸ್ವೀಕರಿಸದಿದ್ದರೆ ಅದರಿಂದ ಶರೀರವೇ ಅಳಿದು ಹೋಗಬಹುದು. ಅದಕ್ಕಾಗಿ ಉತ್ತಮ ಪೌಷ್ಟಿಕ ಆಹಾರವನ್ನು ಸ್ವೀಕರಿಸಿಯೇ ಶರೀರವನ್ನು ಪೋಷಿಸಬೇಕು. ಅದರಂತೆ ಕರ್ಮಗಳಿಂದ ಸಂಸಾರಬಂಧನವು ಬಿಗಿಯಾಗುವು ದೆಂದು ಕರ್ಮವನ್ನೇ ತ್ಯಜಿಸುವುದಲ್ಲ. ಕೆಟ್ಟ ಕರ್ಮಗಳಿಂದ ಮಾತ್ರ ಈ ಅನರ್ಥವಾಗುವುದು. ಉತ್ತಮ ಭಾವನೆಯಿಂದ ಸತ್‌ಕರ್ಮವನ್ನು ಆಚರಿಸುವುದ ರಿಂದ ಯಾವಕೆಡುಕೂ ಆಗಲಾರದು. ಅಂತಹ ಕರ್ಮವು ಮುಕ್ತಿಗೆ ವಿರೋಧಿ ಯಾಗಲಿ ಬಂಧಕವಾಗಲಿ ಆಗಲಾರದು. ಅದು ಚೈತನ್ಯಪೋಷಣೆಗೆ, ಆತ್ಮವಿಕಾಸಕ್ಕೆ ಸಹಾಯಕವೇ ಆಗುವುದು. ಆಹಾರದಲ್ಲಿ ಒಳ್ಳೆಯದು ಹಾಗೂ ಕೆಟ್ಟದ್ದನ್ನು ಪರಾಮರ್ಶಿಸಿ ಒಳ್ಳೇ ಆಹಾರವನ್ನು ಸ್ವೀಕರಿಸುವಂತೆ ಇಡೀ ಕರ್ಮವನ್ನೇ ನಾವು ದ್ವೇಷಿಸದೆ ಕರ್ಮಗಳನ್ನು ಪೃಥಕ್ಕರಿಸಿ ಒಳ್ಳೇ ಕರ್ಮವನ್ನು ಆಚರಿಸುವುದರಿಂದಲೇ ಆತ್ಮನ ಪೋಷಣೆ ಇದೆ. ನಮ್ಮ ಆತ್ಮನಕಲ್ಯಾಣಮಯ ರೂಪವನ್ನು ಮುಚ್ಚಿಡುವ ಅಜ್ಞಾನದ ಪೆಟ್ಟಿಗೆಯನ್ನು ತೆರೆಯುವ ಬೀಗದ ಕೈಯೇ ಕರ್ಮ ಎನ್ನಬಹುದು. ಬೀಗದ ಕೈಯಿಂದಪೆಟ್ಟಿಗೆಯನ್ನು ಮುಚ್ಚಲೂಬಹುದು; ತೆರೆಯಲೂಬಹುದು. ಅದರಂತೆ ಕರ್ಮವು ಬಂಧಕವೂ ಎನಿಸಬಹುದು; ಮೋಚಕವಾಗಿಯೂ ಪರಿಣಮಿಸಬಹುದು. ಅದನ್ನು ಮಾಡುವ ದೃಷ್ಟಿಯನ್ನು ಇದು ಅವಲಂಬಿಸಿಕೊಂಡಿದೆ. ಕರ್ಮಗಳಲ್ಲಿ ಯಾವುದು ಬಂಧಕವೆಂಬುದನ್ನು ಮೊದಲಾಗಿ ನಾವು ಅರಿತು ಕೊಳ್ಳಬೇಕು. ಕರ್ಮ-ವಿಕರ್ಮಗಳ ವಿವೇಚನೆಯನ್ನು ಮಾಡಿ, ಯಾವ ಕರ್ಮವು ನಮ್ಮನ್ನು ಸಂಸಾರದ ಕಡೆಗೆ ತಳ್ಳದೆ ಪರಮಾತ್ಮನ ಕಡೆಗೆ ಒಯ್ಯಬಹುದೋ ಅಂತಹ ಸತ್ಯರ್ಮವನ್ನು ಅರಿತುಕೊಂಡು ಅದರಂತೆ ನಡೆಯುವುದರಿಂದ ಜೀವನದಲ್ಲಿ ನಿಜವಾದ ಲಾಭವನ್ನೇ ವಡೆಯಬಹುದು. ಕರ್ಮದ ಈ ವಿವೇಚನೆಯನ್ನು ಶ್ರೀಕೃಷ್ಣನು ಈ ರೀತಿ ಮಾಡಿರುವನು: ಯಜ್ಞಾರ್ಥಾತ್‌ ಕರ್ಮಣೊದನ್ಯತ್ರ ಲೋಕೋತಯಂ ಕರ್ಮಬಂಧನಃ | ಯಜ್ಞವೆಂದರೆ ಭಗವಂತನ ಅಥವಾ ಅವನಿಗಾಗಿ ಮಾಡುವ ತ್ಯಾಗಪೂರ್ವಕವಾದ ಸೇವೆ. ಪರಮಾತ್ಮನ ಉದ್ದೇಶದಿಂದ ಮಾಡುವ ಕರ್ಮವು ಬಂಧಕವಾಗಲಾರದು. ಸ್ವಾರ್ಥದ ಉದ್ದೇಶದಿಂದ ನಡೆಸುವ ಕಾರ್ಯಗಳೇ ಸಂಸಾರದಲ್ಲಿ ನಮ್ಮನ್ನು ಬಿಗಿಯುವ ಶೃಂಖಲೆಗಳಾಗಬಲ್ಲವು. ಭಗವಂತನ ಪೂಜಾರೂಪವಾಗಿ ನಾವು ಕರ್ಮಗಳನ್ನು ಮಾಡಹೊರಟರೆ, ಅವೇ ನಮ್ಮ ಆತ್ಮಸೌಂದರ್ಯವನ್ನು ಬೆಳಗಿಸುವ ಪುಷ್ಪಣಾರ, ಆಭರಣಗಳಾಗುವವು. ಹಿಂದೆ, ಕರ್ಮವನ್ನು ಆಚರಿಸುವಾಗ ಆಸಕ್ತಿಯನ್ನು ತ್ಯಜಿಸಬೇಕೆಂದು ಹೇಳಿದ್ದರೆ, ಈಗ ಕರ್ಮವನ್ನು ಯಜ್ಞರೂಪವಾಗಿ ಆಚರಿಸಬೇಕೆಂಬ ಹೊಸ ಸಂಗತಿಯನ್ನು ತಿಳಿಸಲಾಗಿದೆ. ತ್ಯಾಗ ಮತ್ತು ಸೇವೆ ಇವೆರಡು ಯಜ್ಞದಲ್ಲಿ ಅಡಕವಾದ ಅಂಶಗಳು. ಭಗವತ್‌ಸೇವಾ ದೃಷ್ಟಿಯಿಂದನಮ್ಮಲ್ಲಿರುವವಸ್ತುವಿನತ್ಯಾಗದೊಂದಿಗೆನಡೆಸುವ ಕ್ರಿಯೆಯೇ ಯಜ್ಞವಾಗುವುದು. ಬರಿ ಅಗ್ನಿಯಲ್ಲಿ ಮಾಡುವ ಹೋಮವೇ ಯಜ್ಞವೆಂಬ ಪರಿಮಿತ ಅರ್ಥದಲ್ಲಿ ಈ ಯಜ್ಞಶಬ್ಧವನ್ನು ಇಲ್ಲಿ ಬಳಸಲಾಗಿಲ್ಲ. ಯಜ್ಞಶಬ್ದದ ಅರ್ಥದ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ. ಭಗವತ್‌ ಪ್ರೀತಿಯಾಗಲಿ ಎಂಬ ಉದ್ದೇಶದಿಂದ ಅವನ ಪೂಜಾರೂಪವಾಗಿ ಫಲದ ಆಸಕ್ತಿ ಇಲ್ಲದೆ ಮಾಡುವ ಸತ್ಕಾರ್ಯಗಳೆಲ್ಲ ಯಜ್ಞಗಳಾಗುವವು. ಯುದ್ಧವನ್ನು ರಾಗದ್ವೇಷಗಳಿಲ್ಲದೆ ಹೇಗೆ ಮಾಡಲಿ ಎಂಬ ಪ್ರಶ್ನೆಯನ್ನು ಶ್ರೀಕೃಷ್ಣನು ಈ ರೀತಿಯಾಗಿ ಪರಿಹರಿಸಿದ್ದಾನೆ. ಈ ಭಾವನೆಯಿಂದ ಪ್ರೇರಿತನಾಗಿ ಶ್ರೀಹರಿಯ ಪೂಜಾರೂಪವಾಗಿ ಈ ಯುದ್ಧವನ್ನು ಮಾಡುವಾಗ ರಾಗದ್ವೇಷಾದಿಗಳ ಉದಯವಾಗಲು ಅವಕಾಶವೆಲ್ಲಿ ? ಸ್ವಾರ್ಥ ಪ್ರೇರಿತನಾಗಿ ಮಾಡುವಾಗ ಮಾತ್ರ ಈ ಮನೋವಿಕಾರಗಳು ತಲೆಯೆತ್ತುವವು. ಅಂತಹ ಕಾಮ್ಯಕರ್ಮಗಳನ್ನು ಮಾತ್ರ ದೂರೇಣ ಹೃವರಂ ಕರ್ಮ! ಎಂದು ಶ್ರೀಕೃಷ್ಣ ಪರಮಾತ್ಮನು ನಿಂದಿಸಿರುವುದಾಗಿದೆ. ಯಜ್ಞರೂಪವಾದ ಕರ್ತವ್ಯವನ್ನೇ ಶ್ರೀಕೃಷ್ಣನು ಪ್ರಶಂಸಿಸಿ ಆಚರಿಸಬೇಕೆಂದು ವಿಧಿಸಿರುವುದರಿಂದ ಪರಮಾತ್ಮನ ಉಪದೇಶಗಳಲ್ಲಿ ಯಾವುದೇ ವಿರೋಧ ಅಸಂಗತಿಗಳು ಇಲ್ಲವೆಂಬುದು ಇಲ್ಲಿ ಸ್ಪಷ್ಟವಾಗುವುದು.
3.1–3.35 · ಸ್ವಧರ್ಮೇ ನಿಧನಂ ಶ್ರೇಯಃ
ಸ್ವಧರ್ಮೇ ನಿಧನಂಶ್ರೇಯಃ ಇನ್ನು ಅರ್ಜುನನ ತತ್ಮಿಂ ಕಮ ಣಿ ಘೋರೇಮಾಂ ನಿಯೋಜಯಸಿ.... । ಎಂಬ ಪ್ರಶ್ನೆ ಉಳಿದಿದೆ. ಕರ್ಮದ ಪ್ರಮಾಣವು ಕಡಿಮೆಯಾಗಿರುವ ಸನಕಾದಿಗಳ ಜ್ಞಾನಯೋಗದ ಮಾರ್ಗವಿರುವಾಗ ಯುದ್ಧದ ಈ ಕಠೋರ ಮಾರ್ಗವನ್ನು ಯಾಕೆತಾನು ಆರಿಸಬೇಕು? ಅರಣ್ಯದಲ್ಲಿ ಶಾಂತನಾಗಿದ್ದು ಜಪ, ತಪಸ್ಸು ಮುಂತಾದ ಕರ್ಮಗಳನ್ನು ಆಚರಿಸಿಕೊಂಡು ಹಾಯಾಗಿ ಯಾಕೆ ಇರಬಾರದು ಎಂದು ಅರ್ಜುನನು ಮಾಡಿದ ಪ್ರಶ್ನೆಗೆ ಉತ್ತರ ಕೊಡುವುದು ಉಳಿದಿದೆ. ಇದಕ್ಕೆ ಗೀತೆಯ ಸಮಾಧಾನವು ಹೀಗಿದೆ : ಪ್ರತಿಯೊಬ್ಬನಿಗೂ ಅನೇಕ ಕರ್ತವ್ಯಮಾರ್ಗಗಳು ತೋರಬಹುದು. ಅವುಗಳಲ್ಲಿ ಯಾವುದು ತನ್ನ ಸ್ವಧರ್ಮ ವೆಂಬುದನ್ನು ಅರಿತುಕೊಂಡು ಆ ಮಾರ್ಗದಲ್ಲಿ ನಡೆಯುವುದರಲ್ಲೇ ಅವನ ಪುರುಷಾರ್ಥ ಅಡಗಿದೆ. ವ್ಯಕ್ತಿಯ ಸ್ವರೂಪ, ಯೋಗ್ಯತೆಯನ್ನು ಅನುಸರಿಸಿ ಕರ್ತವ್ಯಗಳೂ ಬೇರೆಬೇರೆಯಾಗಿರುತ್ತವೆ. ನಮ್ಮ ವ್ಯಕ್ತಿಸ್ವರೂಪಕ್ಕನುಸರಿಸಿ ನಾವು ಮಾಡಬೇಕಾದ ಕರ್ತವ್ಯವನ್ನು ನಿರ್ಧರಿಸಬೇಕು. ಶುಕ್ಕ ಸನಕಾದಿಗಳು ಜ್ಞಾನಯೋಗವನ್ನು ಅನುಸರಿಸುವುದೂ ಮನು, ಜನಕ ಮೊದಲಾದವರು ಕರ್ಮಯೋಗವನ್ನು ಅವಲಂಬಿಸಿರುವುದೂ ಅವರವರವ್ಯಕ್ತಿತ್ತವನ್ನು ಆಧರಿಸಿದ ಸ್ವಧರ್ಮಗಳಿಗೆ ಅನುಸಾರವಾಗಿಯೇ ಆಗಿದೆ. ಅರ್ಜುನನದೂ ಜನಕಾದಿಗಳಂತೆ ಕರ್ಮಯೋಗಕ್ಕೆ ಮೀನಲಾಗಿರಿಸಿದ್ದ ಜೀವನ. ಅವನ ವ್ಯಕ್ತಿತ್ವವೇ ಅಂತಹದು. ಶಮಪ್ರಧಾನವಾದ ಯತಿಧರ್ಮವನ್ನು ಸ್ವೀಕರಿಸಿ ನಡೆಯುವ ಸ್ವರೂಪವು ಅವನದಲ್ಲ. ಅವನು ಆಧಿಕಾರಿಕರೆಂದು ಪರಿಗಣಿಸಲಾದ ಜೀವರ ವರ್ಗದಲ್ಲಿ ಸೇರಿದವನು. ಲೋಕದಲ್ಲಿಯ ದೌಷ್ಟ್ಯ ಅಧರ್ಮಗಳನ್ನು ನಿವಾರಿಸಿ ಸಜ್ಜನರನ್ನು ಸಂರಕ್ಷಿಸಿ ಮುನ್ನಡೆಸುವ ಆಧಿಕಾರಿಕ ವ್ಯಕ್ತಿತ್ವವು ಅವನದಾಗಿದೆ. ತನ್ನ ವ್ಯಕ್ತಿತ್ವಕ್ಕೆ ಅನುಗುಣವಾದ ಕರ್ತವ್ಯವನ್ನು ಬಿಟ್ಟು ಬೇರೆ ದಾರಿಯಲ್ಲಿ ನಡೆದರೆ ಅದರಿಂದ ಅವನ ಪ್ರಗತಿಯಾಗಲಾರದು. ಹೀಗೆ ಪ್ರತಿಯೊಬ್ಬರ ವಿಷಯದಲ್ಲೂ ವ್ಯಕ್ತಿಯ ಸ್ವರೂವವನ್ನು ಆಧರಿಸಿ ಕರ್ತವ್ಯವು ನಿರ್ಧರಿಸಲ್ಪಡುತ್ತದೆ. ಅದರಂತೆ ಸಾಮಾಜಿಕ ಹೊಣೆಗಾರಿಕೆಯಿಂದ ಪ್ರಾಪ್ತವಾಗುವ ವರ್ಣಾಶ್ರಮೋಚಿತ ಕರ್ತವ್ಯಗಳನ್ನು ನಾವು ನಿಷ್ಠೆಯಿಂದ ಅನುಸರಿಸಬೇಕು. ತನ್ನ ನಿಜಸ್ವರೂಪವನ್ನು ಪರಿಶೀಲಿಸಿ ವ್ಯಕ್ತಿಧರ್ಮವನ್ನು ನಿರ್ಧರಿಸುವಂತೆ ಶಾಸ್ತ್ರಗಳಿಂದ ನಮ್ಮ ಸಾಮಾಜಿಕ ಜವಾಬ್ದಾರಿಯನ್ನು ಅರಿತು ಕ್ರಮಪ್ರಾಪ್ತವಾದ ನಮ್ಮ ವರ್ಣಧರ್ಮಗಳನ್ನು ತಿಳಿದು ಅದರಂತೆ ನಡೆಯಬೇಕು. ಈ ವ್ಯಕ್ತಿಧರ್ಮ, ವರ್ಣಧರ್ಮಗಳೆರಡೂ ಸ್ವಧರ್ಮಗಳಾಗಿದ್ದು ಈ ಎರಡೂ ದೃಷ್ಟಿಗಳಿಂದ ಯತಿಧರ್ಮದ ಬದಲು ಕ್ಹಾತ್ರಧರ್ಮವನ್ನು ಅರ್ಜುನನು ಪರಿಗ್ರಹಿನ ಬೇಕಾಗಿದೆ. ಸಂನ್ಯಾಸಧರ್ಮವಾಗಲಿ ಅರಣ್ಯಕ್ಕೆ ಹೋಗಿ ವಾನವ್ರಸ್ಥವೃತ್ತಿಯನ್ನು ಅವಲಂಬಿಸುವುದಾಗಲಿ ಶ್ರೇಷ್ಠವೇ ಇರಬಹುದು. ಆದರೆ ದುಷ್ಟನಿಗ್ರಹ ಹಾಗೂ ಧರ್ಮ ರಕ್ಷಣೆಯ ವಿಶಿಷ್ಟ ಹೊಣೆಗಾರಿಕೆಯನ್ನು ಹೊತ್ತ ಅರ್ಜುನನು ತನ್ನ ಈ ಕರ್ತವ್ಯವನ್ನು ತೊರೆದು ಶ್ರೇಷ್ಠ ಮಾರ್ಗವೆಂದು ಸಂನ್ಯಾಸಿ ಅಥವಾ ವಾನಪ್ರಸ್ಥನಾಗುವುದು ಉಚಿತವಾಗಲಾರದು. ಬೇರೆ ಅಧಿಕಾರ ಸ್ಥಾನಗಳಲ್ಲಿ ನಿಯುಕ್ತರಾದವರು ತಮ್ಮ ಕರ್ತವ್ಯದಲ್ಲಿ ಅಲಕ್ಷ್ಯ ಮಾಡಿ ಬೇರೆ ಎಷ್ಟೇ ಉಪಯುಕ್ತಕಾರ್ಯವನ್ನುನಡೆಸಿದರೂ ಅದು ಪ್ರಶಂಸನೀಯವೆನಿಸುವುದಿಲ್ಲ. ಸೈನ್ಯ ಅಥವಾ ಆಡಳಿತದ ಕಾರ್ಯದಲ್ಲಿ ನಿಯುಕ್ತರಾದವರು ತಮ್ಮ ಕೆಲಸದ ವೇಳೆಯಲ್ಲಿ ಪವಿತ್ರ ಕಾರ್ಯವೆಂದು ಧಾರ್ಮಿಕ ಗಂಥಗಳ ಅಧ್ಯಯನದಲ್ಲೇ ತೊಡಗಿದರೆ ಅದು ಧರ್ಮವೆನಿಸಲಾರದು. ತನಗೆ ನಿಯೋಜಿಸಲ್ಪಟ್ಟ ಕಾರ್ಯವನ್ನು ನಿಷ್ಠೆಯಿಂದ ಆಚರಿಸುವುದರಿಂದಲೇ ಮನುಷ್ಯನು ಶ್ರೇಷ್ಠ ವ್ಯಕ್ತಿಯಾಗಬಲ್ಲನು. ಹೊರತು ಅವನು ಯಾವಕಾರ್ಯಮಾಡುತ್ತಿದ್ದಾನೆಂಬು ದರಿಂದಲೇ ಅವನ ಮಹತ್ತ್ವವನ್ನು ನಿರ್ಧರಿಸಲಾರೆವು. ಹೀಗೆಯೇವ್ಯಕ್ತಿಯ ವಿಶಿಷ್ಟ ಪರಿಸ್ಥಿತಿ, ಸಂದರ್ಭಗಳನ್ನು ಅನುಸರಿಸಿ ನಮ್ಮ ಕರ್ತವ್ಯವನ್ನು ವಿವೇಚಿಸುವ ಪ್ರಸಂಗವೂ ನಮ್ಮ ಜೀವನದಲ್ಲಿ ಬರುತ್ತದೆ. ನದಿಯಲ್ಲಿ ಒಬ್ಬನು ಮುಳುಗುತ್ತಿರುವಾಗ, ತೀರದಲ್ಲಿ ಜಪಮಾಡುತ್ತಿರುವವನು ಜಪವನ್ನು ಬಿಟ್ಟು ಮುಳುಗುವವನನ್ನು ಮೇಲಕ್ಕೆತ್ತಲು ಪ್ರಯತ್ನಿಸುವುದೇ ಧರ್ಮವೆನಿಸುವುದು. ಜಪವೇ ಶ್ರೇಷ್ಠವೆಂದು ಆತನು ಮೂಗು ಹಿಡಿದು ಕುಳಿತರೆ ಅದು ಸರಿಯೆನಿಸುವುದೆ? ದೇವರ ಗುಡಿಗೆ ಹೋಗುವುದೇನೋ ಒಳ್ಳೆಯ ಕಾರ್ಯವೇ; ಆದರೆ ಶಾಲೆಗೆ ಹೋಗುವುದನ್ನು ತಪ್ಪಿಸಿ ಹುಡುಗರು ದೇವರ ಗುಡಿಗೆ ಹೋದರೆ ಅದನ್ನು ಯಾರೂ ಅಭಿನಂದಿಸಲಾರರು. ಮಕ್ಕಳಿಗಾಗಿ, ಪತಿಗಾಗಿ ತಾನು ನಿರ್ವಹಿಸಬೇಕಾದ ಕೌಟುಂಬಿಕ ಕರ್ತವ್ಯಗಳನ್ನು ತೊರೆದು ಮಹಿಳೆಯರು ಸಮಾಜಸೇವೆಯೆಂದು ಹೊರಗೇ ಅಡ್ಮಾಡುತ್ತಿದ್ದರೆ ಅದು ಧರ್ಮ ಎನಿಸಲಾರದು. ಮಹಾಭಾರತದಲ್ಲಿ ಧರ್ಮವ್ಯಾಧನ ಉಪಾಖ್ಯಾನದಲ್ಲಿ ಪ್ರತಿಯೊಬ್ಬನೂ ತನ್ನ ಈ ವೈಯಕ್ತಿಕ ಹೊಣೆಗಾರಿಕೆಯನ್ನು ಪಾಲಿಸುವುದರ ಅವಶ್ಯಕತೆಯನ್ನು ಒತ್ತಿಹೇಳಲಾಗಿದೆ. ತರುಣ ಬ್ರಾಹ್ಮಣ ಯುವಕನೊಬ್ಬನು ತನ್ನ ವೃದ್ಧ ತಾಯಿತಂದೆಗಳಿಗೆ ಸಲ್ಲಿಸಬೇಕಾದ ಸೇವಾಕಾರ್ಯವನ್ನು ನಿರ್ವಹಿಸದೆ ಯಾವ ರಕ್ಷಕರೂ ಇಲ್ಲದ ಅವರನ್ನು ಮನೆಯಲ್ಲೇ ಬಿಟ್ಟುತಾನು ತಪಸ್ವಿಯಾಗಬೇಕೆಂದು ಅರಣ್ಯದಲ್ಲಿ ಇರುತ್ತಾನೆ. ಅನೇಕ ವರ್ಷಗಳವರೆಗೆ ತಪ್ಪಸ್ಸನ್ನು ಆಚರಿಸಿ ಉಗ್ರಶಕ್ತಿಯನ್ನು ಪಡೆಯುತ್ತಾನೆ. ಒಮ್ಮೆ ಒಂದು ಮರದ ಕೆಳಗೆ ಆತ ಕುಳಿತಿರುವಾಗಮೇಲಿರುವಹಕ್ಕಿಯು ಆತನಮೇಲಿತನ್ನ ಅಶುಚಿ ಪದಾರ್ಥವನ್ನು ಕೆಡಹಿತು. ಕೋಪಾವಿಷ್ಠನಾದ ಆತನು ಮುಖವೆತ್ತ ಕೆಂಗಣ್ಣಿನಿಂದ ಆಹಕ್ಕಿಯನ್ನು ನೋಡಿದ. ಕೂಡಲೇ ಅದು ಸುಟ್ಟು ಬೂದಿಯಾಯಿತು. ತನ್ನ ತಪಸ್ಸಿನ ಬಗ್ಗೆ ಈತನಲ್ಲಿ ಅಹಂಭಾವ ಉದಯಿಸಿತು. ಭಿಕ್ಷೆಗಾಗಿ ಗ್ರಾಮದಲ್ಲಿ ಸಂಚರಿಸುತ್ತ ಈ ತಪಸ್ವಿಯು ಒಂದು ಮನೆಯ ಮುಂದೆ ಬಂದು ನಿಂತನು. ಮನೆಯ ಗೃಹಿಣಿಯು ಅತ್ಯಂತಸಾದ್ವಿಯಾಗಿದ್ದಳು. ತಪಸ್ವಿಗೆ ಭಿಕ್ಷೆಯನ್ನು ನೀಡಬೇಕೆಂದು ಆಕೆಹೊರಟು ನಿಂತಾಗ ಬಳಲಿದ ತನ್ನ ಪತಿಯು ಹೊರಗಿನಿಂದ ಬರುವುದನ್ನು ಕಂಡಳು. ಪತಿಯನ್ನು ಉಪಚರಿಸಿ ಆತನ ಸೇವೆಯನ್ನು ಮಾಡುವ ಭರದಲ್ಲಿ ಈ ಅತಿಥಿಯನ್ನು ಅಕೆ ಮರೆತಳು. ಸ್ವಲ್ಪಹೊತ್ತಿನ ನಂತರ ಅತಿಥಿಯ ನೆನಪಾಗಿ ಭಿಕ್ಷ ಹಿಡಿದುಕೊಂಡು ಅವನ ಬಳಿಗೆ ಬಂದಳು. ಕೋವಾಕ್ರಾಂತನಾದ ಅತಿಥಿ ತಪಸ್ವಿಯನ್ನು ಇವಳು ಎಷ್ಟು ಸಂತೈಸಿದರೂ ಅವನ ಸಿಟ್ಟು ಇಳಿಯಲಿಲ್ಲ. ಆಕ್ಕೆ “ನಾನೇನು ಅರಣ್ಯದಲ್ಲಿನೀನು ಬೂದಿಮಾಡಿದ ಹಕ್ಕಿಯಲ್ಲ' ಎಂದು ನುಡಿದಳು. ಇದನ್ನು ಕೇಳಿ ಆತಪಸ್ವಿತಣ್ಣಗಾದ. ಅಲ್ಲಿಯ ಘಟನೆಯನ್ನು ಇವಳು ತಿಳಿದ ಬಗೆ ಹೇಗೆ? ಇವಳಿಗೆ ಈ ಜ್ಞಾನಶಕ್ತಿ ಹೇಗೆ ಬಂದಿತು? ಎಂದು ಅಚ್ಚರಿಗೊಂಡು ಇವಳನ್ನು ಬೇಡಿದಾಗ, ಧರ್ಮವ್ಯಾಧನ ಬಳಿ ಹೋಗಲು ತಿಳಿಸಿದಳು. ಧರ್ಮವ್ಯಾಧನು ಮಾಂಸವನ್ನು ಮಾರುತ್ತಿದ್ದನು. ಅವನ ಈ ವ್ಯಾಪಾರವನ್ನು ಕಂಡು ಅವನ ಬಳಿ ಹೋಗಲು ಈ ತಪಸ್ವಿ ಹಿಂಜರಿದಾಗ, ಧರ್ಮವ್ಯಾಧನೇ "ಸಾಧ್ವೀಮಣಿಯಿಂದ ಕಳಿಸಲ್ಪಟ್ಟವನಲ್ಲ ವೇನೀನು?' ಎಂದು ಈತನ ಪೂರ್ವಾಪರವನ್ನು ಹೇಳಲು, ಇವನಿಗೆ ಮತ್ತೂ ವಿಸ್ಮಯವಾಯಿತು. ಧರ್ಮವ್ಯಾಧನು ತಾನು ಮಾಡುವ ವ್ಯಾಪಾರದ ನೀತಿ, ಸೇವಾಭಾವಗಳನ್ನು ಆತನಿಗೆ ವಿವರಿಸಿ, ತನ್ನ ವೃದ್ಧ ತಂದೆತಾಯಿಗಳ ಸೇವೆಯನ್ನು ತಾನು ಮಾಡುವ ವಿಧಾನವನ್ನು ಅವನಿಗೆ ಪ್ರತ್ಯಕ್ಷವಾಗಿ ತೋರಿಸಿದನು. ತಂದೆತಾಯಿಗಳ ಬಗ್ಗೆ ತಾನು ಮಾಡಬೇಕಾದ ಕರ್ತವ್ಯವನ್ನು ಬಿಟ್ಟು ಅರಣ್ಯಕ್ಕೆ ಬಂದಿರುವ ಈ ತವಸ್ವಿಗಿಂತ ಶೆಚ್ಚಿನಸಿದ್ಧಿಯನ್ನು, ಯೋಗ್ಯತೆಯನ್ನು ಪಕಿಯ ಬಗ್ಸೆ ತಂದೆತಾಯಿಯರ ಬಗ್ಗೆ ತಮ್ಮ ವೈಯಕ್ತಿಕ ಕರ್ತವ್ಯವನ್ನು ನಿಷ್ಠೆಯಿಂದ, ಭಗವದ್ಭಕ್ತಿಯಿಂದ ಸಲ್ಲಿಸುತ್ತಲೇ ತಮ್ಮ ವ್ಯವಹಾರವನ್ನು ನಡೆಸುತ್ತಿರುವ ಸಾಧ್ವಿ ಹಾಗೂ ಧರ್ಮವ್ಯಾಧರು ಪಡೆದಿರುವರು. ಯಾರೂತಾವು ಮಾಡಬೇಕಾದ ವೈಯಕ್ತಿಕಹಾಗೂಸಾಮಾಜಿಕ ಕರ್ತವ್ಯಗಳನ್ನು ಬಟ್ಟು ಬೇರೆ ಯಾವುದೇಎಷ್ಟೇ ಶ್ರೇಷ್ಠವಾದ ಕಾರ್ಯಗಳನ್ನು ಮಾಡಿದರೂ ಅವರು ಅದರಿಂದ ಶ್ರೇಯಸ್ಸನ್ನು ಪಡೆಯಲಾರರು. ಧರ್ಮವ್ಯಾಧನ ಕಥೆಯಲ್ಲಿ ಕಂಡುಬರುವ ತಪಸ್ವಿ ಬ್ರಾಹ್ಮಣನು ಈ ಮಾತಿಗೆ ಒಳ್ಳೆಯ ನಿದರ್ಶನನಾಗಿದ್ದಾನೆ. ಪ್ರತಿಯೊಬ್ಬರೂ ತಮ್ಮ ತಮ್ಮ ವ್ಯಕ್ತಿಧರ್ಮ, ವರ್ಣ-ಧರ್ಮಗಳನ್ನು ಅರಿತುಕೊಂಡು ತಮ್ಮ ಹೊಣೆಗಾರಿಕೆಯನ್ನು ಭಕ್ತಿಯಿಂದ, ಶ್ರದ್ಧೆಯಿಂದ ನಿರ್ವಹಿಸುವುದರಲ್ಲೇ ಅವರ ಜೀವನದಸಿದ್ಧಿ ಇದೆ. ಸ್ವಧರ್ಮೆ ನಿಧನಂ ಶ್ರೇಯಃ । ಪರಧರ್ಮೋ ಭಯಾವಹಃ। ಅರ್ಜುನನದು ಕರ್ಮಯೋಗಿಯ ವ್ಯಕ್ತಿತ್ವ ಅದರಲ್ಲೂ ಕ್ಚತ್ರಿಯನಾಗಿ ಲೋಕ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತವ. ಇಂತಹ ಧರ್ಮಯುದ್ಧದಲ್ಲಿ ಪ್ರಮುಖ ಭಾಗವನ್ನು ವಹಿಸಿ ಕರ್ತವ್ಯವನ್ನು ಪೂರೈಸದೆ ಶಮಪ್ರಧಾನವಾದ ಯತಿಧರ್ಮವನ್ನು ಆಚರಿಸಲು ಅವನಿಗೆ ಅಧಿಕಾರ ಏನಿದೆ? ನೀರಿಗಿಂತ ಹಾಲು ಶ್ರೇಷ್ಠವೇನೋನಿಜ. ಆದರೆ ಮೀನನ್ನು ನೀರಿನಿಂದ ತೆಗೆದು ಹಾಲಿನಲ್ಲೇಇಟ್ಟರೆ ಅದು ಬದುಕಬಹುದೆ? ಅದರಂತೆ ಮಾನವನು ತನ್ನ ವ್ಯಕ್ತಿಧರ್ಮ, ವರ್ಣಧರ್ಮ, ಪ್ರಾಸಂಗಿಕ ಧರ್ಮಗಳನ್ನು ಪರಿಶೀಲಿಸಿ ತನ್ನ ಸ್ವಧರ್ಮವನ್ನು ನಿರ್ಧರಿಸಿ ಆಮಾರ್ಗದಿಂದಲೇ ನಡೆಯಬೇಕು. ಒಬ್ಬನು ತನಗೆ ಒಪ್ಪಿಗೆಯಾಗುವ ಪತ್ನಿಯನ್ನು ಆರಿಸಬಲ್ಲ. ತನಗೆ ಬೇಡವಾದಾಗ ಪತ್ನಿಯನ್ನು ತೊರೆಯಲೂ ಸಾಧ್ಯವಾಗಬಹುದು. ಆದರೆ ತನ್ನ ತಾಯಿಯ ಬಗ್ಗೆ ಹೀಗೆ ನಡೆಯಬಲ್ಲನೆ? ಈ ತಾಯಿ ಚೆನ್ನಾಗಿಲ್ಲ ಸುಂದರಳಾಗಿಲ್ಲ; ತನಗೆ ಬೇರೆತಾಯಿ ಬೇಕೆಂದು ಬದಲಿಸಲು ಸಾಧ್ಯವೆ? ನಾವು ಹುಟ್ಟುವಾಗಲೇ ನಮ್ಮತಾಯಿ ಸಿದ್ಧಳಾಗಿರುತ್ತಾಳೆ. ಅವಳನ್ನೇ ತಾಯಿಯೆಂದು ಸ್ವೀಕರಿಸಿ ಪ್ರತ್ರರಾಗಿ ನಮ್ಮ ಸೇವೆ, ಕರ್ತವ್ಯಗಳನ್ನು ನಾವು ಮಾಡಬೇಕಾಗುತ್ತದೆ. ಧರ್ಮದ ಬಗ್ಗೆಯೂ ಇದೇ ರೀತಿಯನ್ನು ನಾವು ಅನುಸರಿಸಬೇಕು. ನಾವು ಹುಟ್ಟುವಾಗಲೇನಮ್ಮ ಧರ್ಮವೂನಿರ್ಧರಿತವಾಗಿರುತ್ತದೆ. ನಮ್ಮ ಸೇವೆಯನ್ನು ಪಡೆಯಲು ಅದು ಸಿದ್ಧವಾಗಿರುವುದು. ಅದನ್ನು ಬದಲಿಸುವ ಗೋಜಿಗೇನಾವು ಹೋಗಬಾರದು. ನಮಗೆ ವ್ರಾಪ್ತವಾದ ಧರ್ಮವನ್ನು ನಿಷ್ಠೆಯಿಂದ ಅನುಷ್ಠಾನ ಮಾಡಬೇಕು. ಇದನ್ನೇ ವರ್ಣಧರ್ಮವೆನ್ನಲಾಗುವುದು.
Bannanje Govindacharya (1936–2020)Bhagavad Gita Pravachana
ಯಜ್ಞಾ ಅರ್ಥಾತ್‌ ಕರ್ಮಣಃ ಅನ್ಯತ್ರ ಲೋಕಃ ಅಯಮ್‌ ಕರ್ಮ ಬಂಧನಃ | ತತ್‌ ಅರ್ಥಮ್‌ ಕರ್ಮ ಕೌಂತೇಯ ಮುಕ್ತಸಂಗಃ ಸಮಾಚರ-- ಭಗವಂತನ ಪೂಜಾರೂಪವಾದ ಇಂತಹ ಕರ್ಮಕ್ಕಿಂತ ಬೇರೆಯಾದ ನಡೆಯಲ್ಲಿ ಮಾತ್ರ ಸಾಧಕ ಕರ್ಮದ ಕಟ್ಟಿಗೆ ಸಿಲುಕುತ್ತಾನೆ. ६ ಕೌಂತೇಯಾ, ಫಲದ ನಂಟು ತೊರೆದು, ಭಗವಂತನ ಪೂಜೆಯೆಂದು ಕರ್ಮ ಮಾಡು. ಈ ಲೋಕ ಕರ್ಮದ ಬಂಧನಕ್ಕೆ ಒಳಗಾಗಿದೆ. ಆದರೆ ಎಲ್ಲಾ ಕರ್ಮವೂ ಬಂಧಕ ಅಲ್ಲ. ತಿಳಿದು ಮಾಡುವ ಕರ್ಮ ಎಂದೂ ಬಂಧಕವಾಗುವುದಿಲ್ಲ. ನಾವು ಮಾಡುವ ಕರ್ಮವನ್ನು ಭಗವಂತನ ಪ್ರಜ್ಞೆಯಿಂದ ಮಾಡಬೇಕು. ನಾವು ಸೂತ್ರದ ಗೊಂಬೆಗಳಿದ್ದಂತೆ. ಭಗವಂತ ಸೂತ್ರದಾರ. ಈ ಎಚ್ಚರದಿಂದ ನಾವು ಕರ್ಮ ಮಾಡಿದಾಗ ನಮ್ಮ ಪ್ರತಿಯೊಂದು ಕರ್ಮವೂ ಕೂಡಾ ಯಜ್ಞವಾಗುತ್ತದೆ. ಉದಾಹರಣೆಗೆ ನಾವು ಉಸಿರಾಡುತ್ತೇವೆ. ಹೊರಗಿನಿಂದ ಆಮ್ಲಜನಕವನ್ನು ಹೀರಿ ಕಾರ್ಬನ್‌ ಡೈ ಆಕ್ಸೈಡನ್ನು ಹೊರ ಹಾಕುತ್ತೇವೆ. ನಮ್ಮೊಳಗಿರುವ ಆ ವಿಶೇಷ ಯಂತ್ರದ ಕಲ್ಪನೆ ಕೂಡಾ ನಮಗಿರುವುದಿಲ್ಲ. ನಮಗೆ ಅರಿವಿಲ್ಲದಂತೆ ಈ ಕ್ರಿಯೆ ನಡೆಯುತ್ತಿರುತ್ತದೆ. ನಾವು ಬಿಟ್ಟ ಗಾಳಿಯನ್ನು ಗಿಡಗಳು ಸೇವಿಸಿ ನಮಗೆ ಬೇಕಾದ ಆಮ್ಲಜನಕವನ್ನು ಕೊಡುತ್ತವೆ. ಇದೆಲ್ಲವೂ ಆ ಭಗವಂತನ ವ್ಯವಸ್ಥೆ. ಈ ಕಾರಣಕ್ಕಾಗಿ ಭಾರತೀಯರು ಅತಿಹೆಚ್ಚು ಆಮ್ಲಜನಕವನ್ನು ಕೊಡುವ ಅಶ್ವತ್ಥವೃಕ್ಷವನ್ನು ಪೂಜಿಸುತ್ತಾರೆ. ಆ ವೃಕ್ಷದಲ್ಲಿ ಭಗವಂತನ ವಿಶೇಷ ವಿಭೂತಿ ಅಡಗಿದೆ. ಈ ರೀತಿ ನಾವು ನಮ್ಮ ಪ್ರತಿಯೊಂದು ಕಾರ್ಯದಲ್ಲೂ ಭಗವಂತನ ಹಿರಿಮೆಯನ್ನು ತಿಳಿದಾಗ, ನಾವು ಮಾಡುವ ಕರ್ಮ-ಕರ್ಮಯೋಗವಾಗುತ್ತದೆ. ಹಾಗೂ ಅದು ಎಂದೂ ಬಂಧಕವಾಗುವುದಿಲ್ಲ. ಇಲ್ಲಿ ಬಳಕೆಯಾದ 'ಯಜ್ಞ' ಪದದ ಅರ್ಥ 'ಯಜ-ದೇವ-ಪೂಜಾ' ಅಂದರೆ ದೇವರ ಪೂಜೆ ಎಂದರ್ಥ. ದೇವರನ್ನು ಕೂಡಾ ಯಜ್ಞ ಎಂದು ಕರೆಯುತ್ತಾರೆ. ಆದ್ದರಿಂದ ಕೇವಲ ಅಗ್ನಿ ಮುಖದಲ್ಲಿ ಮಾಡುವ ಪೂಜೆ ಮಾತ್ರ ಯಜ್ಞವಲ್ಲ. ನಮ್ಮ ಪ್ರತಿಯೊಂದು ಕರ್ಮವನ್ನು ಭಗವತ್ರಜ್ಞೆಯಿಂದ ಮಾಡಿದಾಗ ಅದು ಯಜ್ಞವಾಗುತ್ತದೆ. ಇಲ್ಲಿ ನಾವು ಬಿಡಬೇಕಾದದ್ದು ಕರ್ಮವನ್ನಲ್ಲ, ಬದಲಿಗೆ ನಾವು ಕರ್ಮದ ಬಗ್ಗೆ ಇರುವ ನಮ್ಮ ಭಾವನೆಯನ್ನು ಬದಲಿಸಿ ಕೊಳ್ಳಬೇಕು ಅಷ್ಟೆ. ಕರ್ಮ ಎಂದರೆ 'ಕರ*-ಮ' ಅಂದರೆ ಭಗವಂತನ ರಾಜ್ಯದ ಪ್ರಜೆಗಳಾದ ನಾವು ಆತನಿಗೆ ಸಲ್ಲಿಸುವ 'ಕರ' ಅಥವಾ ಕಂದಾಯವೇ ಕರ್ಮ. ಭಗವಂತ ಎಂದೂ ದುಡ್ಡಿನ ಕಂದಾಯವನ್ನು ಪಡೆಯುವುದಿಲ್ಲ. ಆತನ ಕರ ಸಂದಾಯವನ್ನು ನಾವು- ನಮ್ಮನ್ನು ಸಮಾಜ ಕ್ರಿಯೆಯಲ್ಲಿ ತೊಡಗಿಸಿಕೊಂಡು ಸಲ್ಲಿಸಬೇಕು. ಈ ಭಾವನೆ ಬಂದಾಗ ಕರ್ಮ ಬಂಧಕವಾಗದೇ ಮೋಕ್ಷ ಮಾರ್ಗವಾಗುತ್ತದೆ. ಇಲ್ಲಿ ಕೃಷ್ಣ ಅರ್ಜುನನನ್ನು 'ಕೌಂತೇಯಾ' ಎಂದು ಸಂಬೋಧಿಸಿದ್ದಾನೆ. ಈ ರೀತಿ ಇಲ್ಲಿ ಸಂಬೋಧಿಸಲು ವಿಶೇಷ ಕಾರಣವಿದೆ. ಕುಂತಿ ಅಷ್ಟು ದೊಡ್ಡ ಮನೆತನದಲ್ಲಿ ಹುಟ್ಟಿ ಬೆಳೆದರೂ ಕೂಡಾ, ಆಕೆ ಎಂದೂ ಭೋಗದ ಆಸೆಗೆ ಬಲಿಬಿದ್ದವಳಲ್ಲ. ತನ್ನ ಯೌವನವನ್ನು ಕಾಡಿನಲ್ಲಿ ಕಳೆದ ಆಕೆ, ತನ್ನ ಮಕ್ಕಳು ಧೈರ್ಯಗೆಟ್ಟಾಗ ಧೈರ್ಯ ತುಂಬಿದ ಧೀರ ಮಹಿಳೆ. ಆಕೆ ಅನುಭವಿಸಿದ ಕಷ್ಟ ಅಪ್ಪಿಷ್ಟಲ್ಲ. ಆದರೆ ಆಕೆ ಕೃಷ್ಣನಲ್ಲಿ “ನನಗೆ ಕಷ್ಟವನ್ನೇ ಕೊಡು, ಏಕೆಂದರೆ ಆಗ ನಮಗೆ ಸದಾ ನಿನ್ನೊಂದಿಗಿರುವ ಭಾಗ್ಯವಿರುತ್ತದೆ” ಎಂದಾಕೆ! ಕರ್ತವ್ಯನಿಷ್ಠೆಯನ್ನು ಜಗತ್ತಿಗೆ ತೋರಿದ ಧೀರ ಮಹಿಳೆ ಆಕೆ. ಇಂತಹ ಮಹಾ ಮಹಿಳೆಯ ಮಗನಾದ ನಿನಗೆ ಕರ್ಮಯೋಗದ ಬಗ್ಗೆ ತಿಳಿದೇ ಇದೆ. ಎನ್ನುವ ಧ್ವನಿಯಲ್ಲಿ ಕೃಷ್ಣ ಅರ್ಜುನನನ್ನು 'ಕೌಂತೇಯಾ' ಎಂದು ಸಂಬೋಧಿಸಿದ್ದಾನೆ. ಈ ರೀತಿ ಜ್ಞಾನವನ್ನು ಮತ್ತು ಕರ್ಮವನ್ನು ಹೇಗೆ ಸಮನ್ವಯಗೊಳಿಸಿಕೊಂಡು ಬದುಕಬೇಕು ಎನ್ನುವುದನ್ನು ಹೇಳಿದ ಕೃಷ್ಣ, ಮುಂದೆ ಅದು ಸ್ಪಷ್ಟವಾಗಿ ಅರ್ಥವಾಗುವಂತೆ ಒಂದು ಕಥೆಯ ರೂಪದಲ್ಲಿ ವಿವರಣೆಯನ್ನು ಕೊಡುತ್ತಾನೆ. ಆ ವಿವರಣೆಯನ್ನು ಮುಂದಿನ ಶ್ಲೋಕಗಳಲ್ಲಿ ನೋಡೋಣ.
Bibek Debroy (1955–2024)The Bhagavad Gita
(9) ‘O son of Kunti!12 All action other than that for sacrifices shackles people to the bondage of action.13 Therefore, do action for that purpose, without attachment.’