4.13

चातुर्वर्ण्यं मया सृष्टं गुणकर्मविभागशः ।
तस्य कर्तारमपि मां विद्ध्यकर्तारमव्ययम् ॥
cāturvarṇyaṃ mayā sṛṣṭaṃ guṇakarmavibhāgaśaḥ |
tasya kartāramapi māṃ viddhyakartāramavyayam ||
Sri Madhvacharya (1238–1317)Bhagavad Gita Tatparya Nirnaya
‘सत्वसत्वाधिकरजोरजोभिस्तमसा तथा। वर्णा विभक्ताश्चत्वारः सात्विका एव वैष्णवाः’ इति च। कर्मविभागं ‘शमो दम’ इत्यादिना वक्ष्यति। वैष्णवाः सात्विका एव तामसा एव चापरे। दौर्लभ्यसुलभत्वेन तेषां वर्णादिभिन्नता’ इति च। ‘स्वाभाविको ब्राह्मणादिः शमाद्यैरेव भिद्यते। योनिभेदकृतो भेदो ज्ञेय औपाधिकस्त्वयम् विष्णुभक्तिश्चानुगता सर्ववर्णेषु विश्पतिम्। आरभ्य हीयतेऽथापि भेदः स्वाभाविकस्ततः’ इति नारदीये। ‘कर्ताऽपि भगवान् विष्णुरकर्तेति च कथ्यते। तस्य कर्ता यतो नान्यः स्वतन्त्रत्वात् परात्मनः’ इति च। अपि शब्दो गुणसमुच्चयार्थः। कर्ता मे नास्तीत्यपि विद्धीति॥13॥
Swami Sivananda (1887–1963)Bhagavad Gita
13. The fourfold caste has been created by Me according to the differentiation of Guna and Karma; though I am the author thereof, know Me as the non-doer and immutable. COMMENTARY: The four castes are Brahmana, Kshatriya, Vaisya and Sudra. This division is according to the Guna and Karma. Guna is quality. Karma is the kind of work. Both Guna and Karma determine the caste of a man. In a Brahmana, Sattwa predominates. He possesses serenity, purity, self-restraint, straightforwardness and devotion. In a Kshatriya, Rajas predominates. He possesses prowess, splendour, firmness, dexterity, generosity and rulership. In a Vaisya, Rajas predominates and Tamas is subordinate to Rajas. He does the duty of ploughing, protection of cattle and trade. In a Sudra, Tamas predominates and Rajas is subordinate to the quality of Tamas. He renders service to the other three castes. Human temperaments and tendencies vary according to the Gunas.
Sri Vishwesha Tirtharu (1931–2019)Gitasaroddhara
ಗೀತೆಯು ನಿರೂಪಿಸಿದ ಚಾತುರ್ವರ್ಣ್ಯ
ಗೀತೆಯು ನಿರೂಪಿಸಿದ ಚಾತುರ್ವರ್ಣ್ಯ ಭಕ್ತಿಹಾಗೂ ಕರ್ಮಾನುಷ್ಠಾನಗಳಲ್ಲಿ ಈ ರೀತಿಯ ತಾರತಮ್ಯ ಅಂತರಗಳಿಗೆ ಜೀವರಲ್ಲಿರುವ ಸ್ವಭಾವ, ಗುಣ, ವ್ಯಕ್ತಿತ್ವಗಳಿಗೆ ಅನುಸಾರವಾಗಿ ಪರಮಾತ್ಮನು ಮಾಡಿರುವ ಸೃಷ್ಟಿವ್ಯವಸ್ಥೆಯೇ ಕಾರಣವಾಗಿದೆ. ಜೀವರಲ್ಲಿರುವ ಈ ಗುಣ, ಸ್ವಭಾವಗಳನ್ನು ಪರಮಾತ್ಮನು ಸೃಜಿಸಿರುವುದಿಲ್ಲ. ಈ ಗುಣಧರ್ಮಗಳು ಸ್ವಾಭಾವಿಕ ಹಾಗೂ ಅನಾದಿಯಾಗಿದ್ದು ಆ ಆಧಾರದಿಂದ ಪರಮಾತ್ಮನು ಮಾಡಿರುವ ಈ ಜಗದ್ರಚನೆಯಲ್ಲಿ ಸಾಧಕರೊಳಗೆ ಪರಸ್ಪರ ಅಂತರವಿರುವುದು ಸಹಜವೇ ಆಗಿದೆ. ಈ ವಿಚಾರವನ್ನು ಚಾತುರ್ವರ್ಣ್ಯಂ ಮಯಾ ಸೃಷ್ಟ 0 ಗುಣಕರ್ಮವಿಭಾಗಶಃ ॥ ಎಂಬಶ್ಲೋಕದಲ್ಲಿ ಪರಮಾತ್ಮ ನು ನಿರೂಪಿಸಿದ್ದಾನೆ. ಈ ಮಾತಿನ ಅರ್ಥ ವಿವರಣೆಯಲ್ಲಿ ಸ್ವಲ್ಪ ಗೊಂದಲಕ್ಕೆ ಎಡೆಯಿದೆ. ವರ್ಣವಿಭಾಗವು ಗುಣಕರ್ಮಾನುಸಾರಿಯಾಗಿದೆ ಎಂಬ ಅಭಿಪ್ರಾಯವು ಆಪಾತವಾಗಿ ಈ ಶ್ಲೋಕದಿಂದ ಪ್ರತೀತವಾಗುವುದು. ಆದರೆ ನಿಷ್ಕಾಮಭಕ್ತರ ಹಾಗೂ ಸಕಾಮ ಭಕ್ತರ ತಾರತಮ್ಯವನ್ನು ವಿವರಿಸುವ ಸಂದರ್ಭದಲ್ಲಿ ಜಾತಿ ವ್ಯವಸ್ಥೆಯ ವಿಚಾರಕ್ಕೆ ಪ್ರಸಕ್ತ ಇರುವುದಿಲ್ಲ. ಆದುದರಿಂದ ವರ್ಣವ್ಯವಸ್ಥೆಯು ಜನ್ಮಾದಿಯಾಗಿರಲಿ, ಗುಣದಿಂದಾಗಿರಲಿ, ಅದನ್ನು ಇಲ್ಲಿ ನಿರೂಪಿಸುವ ಸಂದರ್ಭವೇ ಇರುವುದಿಲ್ಲ. ಆದ್ದರಿಂದ ಇಲ್ಲಿ ಚಾತುರ್ವರ್ಣ್ಯ ಎಂದರೆ ಪ್ರಚಲಿತವಾದ ವರ್ಣವ್ಯವಸ್ಥೆಯನ್ನು ಪರಿಗ್ರಹಿಸಬಾರದು. ಮಾತ್ರವಲ್ಲದೆ, ವರ್ಣವಿಭಾಗಕ್ಕೆ ಗುಣಕರ್ಮಗಳು ಆಧಾರವೆನ್ನುವುದು ವಸ್ತುಸ್ಥಿತಿಗೆ ವಿರುದ್ಧವೂ ಆಗುವುದು. ಶಮದಮಾದಿ ಸದ್ಗುಣಗಳು ಬರಿ ಒಂದು ಜಾತಿಗೆಮಾತ್ರ ಮೀಸಲಾಗಿಲ್ಲ. ನಾಲ್ಕುವರ್ಣಗಳ ಜನರಲ್ಲೂ ಇಂತಹ ವಿಶಿಷ್ಟ ಸದ್ಗುಣಗಳನ್ನು ನಾವು ಕಾಣಬಹುದು. ಬ್ರಾಹ್ಮಣನೆನೆಸಿಕೊಂಡವನಲ್ಲಿ ಇಲ್ಲದೆ ಇರುವ ಭಗವದ್ಭಕ್ತಿ ಮುಂತಾದ ವಿಶಿಷ್ಟ ನಡವಳಿಕೆಗಳು ವೈಶ್ಯ ಶೂದ್ರರಲ್ಲಿ ಇರಲು ಸಾಧ್ಯವಿದೆ. ಪ್ರಚಲಿತವಾದ ಜಾತಿ ವಿಭಾಗಕ್ಕೂ ಗೀತೆಯಲ್ಲಿ ಕಂಡುಬರುವ ಶಮದಮಾದಿಗಳ ವರ್ಗೀಕರಣಕ್ಕೂ ಏನೂ ಹೊಂದಿಕೆಯು ಕಂಡುಬರುವುದಿಲ್ಲ. ಇನ್ನು ಗೀತೆಯಲ್ಲಿ ಹೇಳಿರುವ ಪದ್ಧತಿಯಲ್ಲೇ ಹೊಸ ವರ್ಣವಿಭಾಗವನ್ನು ಗುಣಕರ್ಮಗಳ ಆಧಾರದಿಂದಲೇ ಏರ್ಪಡಿಸುವುದೆಂದರೆ ಇದೂ ಅತ್ಯಂತ ಅವ್ಯವಹಾರ್ಯಕ್ರಮವಾಗಬಲ್ಲದು. ಗುಣಗಳ ಆಧಾರದಿಂದ ಜಾತಿ ವಿಭಾಗವನ್ನು ರಚಿಸಿಸಮಾಜ ರಚನೆಯನ್ನು ಮಾಡಲು ಎಂದಿಗೂ ಶಕ್ಕವಾಗಲಾರದು. ಭಿನ್ನಭಿನ್ನ ಸಂದರ್ಭಗಳಲ್ಲಿ ಮಾನವನ ಗುಣ, ನಡವಳಿಕೆಗಳಲ್ಲಿ ಬದಲಾವಣೆಗಳಾಗ ಬಹುದು. ಅಂತಹ ಪ್ರಸಂಗದಲ್ಲಿ ಶಾಸ್ತ್ರೀಯ ಸಂಸ್ಕಾರ, ವೃತ್ತಿ ಕಸಬುಗಳನ್ನು ಅವಲಂಬಿಸಿಕೊಂಡಿರುವ ವರ್ಣ ಪದ್ಧತಿಯನ್ನು ಒಬ್ಬನಲ್ಲಿ ಕ್ಷಣಕ್ಷಣದಲ್ಲಿ ಬದಲಿಸುತ್ತಹೋಗುವುದು ವ್ಯವಹಾರ್ಯವೆನಿಸಲಾರದು. ಯಾರಲ್ಲಿ ಯಾವ ಗುಣಗಳು ಇವೆ, ಇಲ್ಲವೆಂಬುದನ್ನು ನಿರ್ಧರಿಸಿ ಸಾಮಾಜಿಕ ವ್ಯವಸ್ಥೆಯನ್ನು ಮಾಡುವಾಗ ತೀವ್ರ ಸಂಘರ್ಷಣೆಗೆ ಎಡೆಯಾಗಬಹುದು. ಒಬ್ಬನ ವೈಯಕ್ತಿಕ ಗುಣ, ಪ್ರಭಾವಗಳನ್ನು ಅವನ ವೈಯಕ್ತಿಕ, ಆಧ್ಯಾತ್ಮಿಕ ಸಾಧನೆಯಲ್ಲಿ ನಿರ್ಧರಿಸುವಲ್ಲಿ ಆಧಾರವಾಗಿ ಉಪಯೋಗಿಸಿಕೊಳ್ಳಬಹುದು. ಆದರೆ ವೈಯಕ್ತಿಕ ಗುಣ ನಡತೆಗಳ ಆಧಾರದಿಂದ ಸಾಮಾಜಿಕ ವ್ಯವಸ್ಥೆಯನ್ನು ಏರ್ಪಡಿಸುವುದೆಂದರೆ ನಿತ್ಯ ಸಂಘರ್ಷವನ್ನು ಆಹ್ವಾನಿಸಿದಂತೆಯೇ ಸರಿ. ಆದ್ದರಿಂದ ಗುಣ ಕರ್ಮಗಳ ಆಧಾರದಿಂದ ಜಾತಿಗಳನ್ನು ವಿಭಜಿಸಿ ಹೊಸ ಸಾಮಾಜಿಕವ್ಯವಸ್ಥೆಯನ್ನು ರೂಪಿಸಲೂಸಾಧ್ಯವಿಲ್ಲಎಂದುಸ್ಪಷ್ಟವಾಗುವುದು. ಪ್ರಚಲಿತವಾದ ಜಾತಿ ವ್ಯವಸ್ಥೆಯಲ್ಲಿ ಗುಣ ವಿಭಾಗವನ್ನು ಹೊಂದಿಸುವುದೂ ಶಕ್ಕವಲ್ಲ. ಯಾಕೆಂದರೆ, ಬ್ರಾಹ್ಮಣನಿಗೆ ಹೇಳಿದ ಸದ್ಗುಣಗಳು ಇತರ ವರ್ಗದವರಲ್ಲಿ ಬೇಕಾದಷ್ಟು ದೊರೆಯುತ್ತಿರುವಾಗ ಬ್ರಾಹ್ಮಣಜಾತಿಯಲ್ಲಿ ಜನಿಸಿದವರಲ್ಲಿ ಮಾತ್ರ ಇಂತಹ ಶೀಲ, ಸದ್ಗುಣಗಳು ಇರುವವು, ಉಳಿದವರಲ್ಲಿ ಇಲ್ಲವೆಂದು ಹೇಳುವುದು ವಸ್ತುಸ್ಥಿತಿಗೆ ವಿರುದ್ಧವೆನಿಸುವುದು. ಆದುದರಿಂದ ಯಾವ ಅರ್ಥದಿಂದ ಶ್ರೀಕೃಷ್ಣನು ಈ ಮಾತನ್ನು ಹೇಳಿರುವನೆಂಬುದನ್ನು ವಿಮರ್ಶಿಸಬೇಕಾಗಿದೆ. ಶ್ರೀಮದಾಚಾರ್ಯರು ತಮ್ಮ ಗೀತೆಯ ವ್ಯಾಖ್ಯಾನದಲ್ಲಿ ಈ ಮಾತಿನ ನಿಜಾರ್ಥವನ್ನು ವಿಶದಪಡಿಸಿದ್ದಾರೆ. ಇಲ್ಲಿ ಚಾತುರ್ವರ್ಣ್ಯವೆಂಬ ಪದದಿಂದ ಶರೀರವನ್ನೇ ಆಧರಿಸಿಕೊಂಡಿರುವ ಪ್ರಚಲಿತಗಳಾದ ನಾಲ್ಕು ವರ್ಣಗಳನ್ನು ಪರಿಗ್ರಹಿಸಿರದೆ ಆತ್ಮನಮೂಲಭೂತ ವ್ಯಕ್ತ್ವ ಸ್ವರೂಪ, ಗುಣಗಳ ಆಧಾರದಿಂದ ಜೀವರನ್ನು ನಾಲ್ಕು ರೀತಿಯಿಂದ ವಿಂಗಡಿಸಿ, ನಿರೂಪಿಸಲಾಗಿದೆ. ಮುಕ್ತಿಗೆ ಅರ್ಹರಾದ ಸಜ್ಜನರಾದ ಮಾನವರ ಗುಂಪನ್ನು ಇಲ್ಲಿ ನಾಲ್ಕು ವರ್ಗವಾಗಿ ವಿಂಗಡಿಸಲಾಗಿದೆ. ಇವರೆಲ್ಲರೂ ಸತ್ತ್ವಪ್ರಧಾನರೇ ಆಗಿದ್ದು ಅವರಸತ್ತ್ವ, ರಜ, ತಮೋಗುಣಗಳ ಅಂತರದಿಂದ ಈ ಜೀವ ವರ್ಗವನ್ನೇ ನಾಲ್ಕುವರ್ಣಗಳಾಗಿ ವಿಭಜಿಸಲಾಗಿದೆ. ಶಮದಮಾದಿ ಸದ್ಗುಣಗಳು ಎಲ್ಲ ಜನರಲ್ಲೂ ಅವಶ್ಯವಾಗಿ ಬೇಕಾಗಿವೆ. ಆಸದ್ಗುಣಗಳತಾರತಮ್ಯವನ್ನು ಅವಲಂಬಿಸಿ ಅವರವರವ್ಯಕ್ತಿತ್ವವನ್ನು ನಾಲ್ಕು ರೀತಿಯಾಗಿ ವರ್ಗಿಕರಿಸಲಾಗಿದೆ. ಇದೇ ಗೀತೆಯಲ್ಲಿ ನಿರೂಪಿತ ವಾಗಿರುವ, ಆತ್ಮವನ್ನು ಅವಲಂಬಿಸಿರುವ ಚಾತುರ್ವರ್ಣ್ಯವಾಗಿದೆ. ಸ್ವಾಭಾವಿಕೋ ಬ್ರಾಹ್ಮಣಾದಿಃ ಶಮಾದ್ಯೈರೇವ ಭಿದ್ಯತೇ | ಯೋನಿಭೇದಕೃತೋ ಭೇದಃ ಜ್ಞೇಯ ಔಪಾಧಿಕಸ್ತ್ವಯಮ್‌ ॥ ಬ್ರಾಹ್ಮಣ, ಕ್ಚತ್ರಿಯ, ವೈಶ್ಯ, ಶೂದ್ರ ಎಂಬ ವಿಭಾಗವನ್ನು ಎರಡು ರೀತಿಯಿಂದ ಮಾಡಲಾಗುತ್ತದೆ. ಹುಟ್ಟು ಶರೀರ ಇವುಗಳ ಆಧಾರದಿಂದ ಏರ್ಪಡಿಸಿದ ಬ್ರಾಹ್ಮಣಾದಿ ವಿಭಾಗವು ಔಪಾಧಿಕವಾಗಿದ್ದು ಜೀವರ, ಮೂಲಭೂತ ಸದ್ಗುಣಗಳ ಹಿನ್ನೆಲೆಯಲ್ಲಿರುವ ವರ್ಣ ವಿಭಾಗವೇ ಸ್ವಾಭಾವಿಕವಾದುದು. ಒಬ್ಬನ ಬಾಹ್ಯ ಶರೀರವನ್ನೇ ಕಂಡು ಅವನ ನಿಜವಾದ ವ್ಯಕ್ತಿತ್ವ ವರ್ಣಗಳನ್ನು ನಿರ್ಧರಿಸುವುದು ಉಚಿತವೆನಿಸುವುದಿಲ್ಲ, ಅವನ ಕೃತಿ, ವ್ಯವಹಾರ, ನಡತೆಗಳಿಂದ ಅವನ ವರ್ಣವನ್ನು ನಾವು ನಿರ್ಧರಿಸಬೇಕಾಗುವುದು. ಶಾರೀರಿಕವಾದವರ್ಣ ವಿಭಾಗಕ್ಕಿಂತಲೂ ಆತ್ಮನಮೂಲಭೂತ ಗುಣಧರ್ಮ ಗಳನ್ನು ಆಧರಿಸಿದ ವ್ಯಕ್ತಿತ್ವದ ವಿಭಾಗವೇ ಮುಖ್ಯವಾದ ವರ್ಣವಿಭಾಗವಾಗಿದೆ. ಜನ್ಮವನ್ನು ಅವಲಂಬಿಸಿದ ಔಪಾಧಿಕವಾದ ವರ್ಣ ವಿಭಾಗವು ಸಾಮಾಜಕ ವ್ಯವಸ್ಥೆಗೂ ಸ್ಥೃತಿವಿಹಿತಗಳಾದ ಧರ್ಮಾನುಷ್ಠಾನಗಳಿಗೂ ಆಧಾರವಾಗಿದ್ದರೆ ಗೀತೆಯಲ್ಲಿ ಹೇಳಿದ ಆತ್ಮನ ಗುಣ, ಪ್ರವೃತ್ತಿಗಳನ್ನು ಅವಲಂಬಿಸಿರುವ ಸ್ವಾಭಾವಿಕ ವರ್ಣವಿಭಾಗವೇ ನಮ್ಮ ಆಧ್ಯಾತ್ಮಿಕ ಸಾಧನಾನುಷ್ಠಾನಗಳಿಗೆ ಮೂಲಭೂತವೆನಿ ಸಿದೆ. ಅಧಿಕಶ್ಚೆ ತ್‌ ಗುಣಃ ಶೂದ್ರೇ ಬ್ರಾಹ್ಮ ಣಾದಿ: ಸ ಉಚ್ಛತೇ | ಬ್ರಾಹ್ಮಣೋನಪ್ಕಲ್ಪ ಗುಣಕಃ ಶೂದ್ರ ಏವೇತಿ ಕೀರ್ತಿತಃ ॥ ಶರೀರತಃ ಶೂದ್ರನಾಗಿದ್ದರೂ ಶಮದಮಾದಿ ಸದ್ಗುಣಗಳು ಹೆಚ್ಚು ಇದ್ದರೆ ಆತ್ಮದ ದೃಷ್ಟಿಯಿಂದ ಆತನು ಬ್ರಾಹ್ಮಣನೇ ಆಗಿರುತ್ತಾನೆ. ಬ್ರಾಹ್ಮಣಶರೀರವನ್ನು ಪಡೆದಿದ್ದರೂ ಶಮದಮಾದಿ ಸದ್ಗುಣಗಳು ಕಡಿಮೆಯಾಗಿದ್ದರೆ ಆತ್ಮದ ಹಿನ್ನೆಲೆಯಲ್ಲಿ ಆತನು ಶೂದ್ರನೇ ಆಗಿರುವನು. ಆದುದರಿಂದ ಜಾತಿ, ಜನ್ಮಗಳಿಂದಲೆ, ವ್ಯಕ್ತಿತ್ವವನ್ನು ಅಳೆಯಬಾರದು. ನೀತಿ, ಭಕ್ತಿ ಸದ್ಗುಣ ಗಳಿಂದಲೇ ಮಾನವನ ವ್ಯಕ್ತಿತ್ವವನ್ನು, ಆತನ ನಿಜಸ್ವರೂಪವನ್ನು ನಾವು ತಿಳಿದುಕೊಳ್ಳಬೇಕು. ಎಷ್ಟು ಮೇಲ್ಮಟ್ಟದ ಶರೀರ ಇದ್ದರೂ ಅದರಿಂದಲೇ ಒಳಗಿರುವ ಜೀವನು ಶ್ರೇಷ್ಠನೆ. ಆಗಿರಬೇಕೆಂದಿಲ್ಲ.. ಜೀವನ ಸ್ವರೂಪ ವ್ಯಕ್ತಿತ್ವವನ್ನು ಪ್ರತಿಬಿಂಬಿತಗೊಳಿಸುವ ಸದ್ಗುಣ ಸದ್‌ವ್ಯವಹಾರಗಳೇ ಆತನನ್ನು ಅಳೆಯುವ ಮಾನದಂಡಗಳೆಂಬುದೇ ಗೀತೆಯ ಆಶಯವಾಗಿದೆ. ಆದುದರಿಂದಲೇ: ವಿಪ್ರಾದ್ದಿಷಡ್ಗುಣಯುತಾದರವಿಂದನಾಭ- ಪಾದಾರವಿಂದವಿಮುಖಾತ್‌ ಶ್ವಪಚಂ ವರಿಷ್ಠಮ್‌ ॥ ಎಂದು ಭಾಗವತದಲ್ಲಿ ಭಗವದ್‌ ವಿಮುಖನಾದ ಬ್ರಾಹ್ಮಣನಿಗಿಂತ ಭಗವದ್‌ ಭಕ್ತನಾದ ಹೊಲೆಯನೇ ಶ್ರೇಷ್ಠನೆಂದು ವರ್ಣಿಸಿದ್ದಾರೆ. ಭಾರತದಲ್ಲಿ ಧರ್ಮವ್ಯಾಧನ ಉಪಾಖ್ಯಾನದಲ್ಲಿ: ಯಸ್ತು ಶೂದ್ರೋ ದಮೇ ಸತ್ಯೇ ಧರ್ಮೇಚ ಸತತೋತ್ಠಿತಃ |' ತಂ ಬ್ರಾಹ್ಮಣಮಹಂ ಮನ್ಯೇ ವೃತ್ತೇನ ಹಿ ಭವೇದ್‌ ದ್ವಿಜಃ ॥ ಎಂಬುದಾಗಿ, ಸತ್ಯ ದಮ ಮುಂತಾದ ಸದ್ಗುಣಗಳುಳ್ಳ ಶೂದ್ರನು ಬ್ರಾಹ್ಮಣನೇ ಆಗಿರುವನೆಂದೂ ಸದ್ವರ್ಶನೆಯಿಂದಲೇ ಬ್ರಾಹ್ಮಣನನ್ನು ಗುರ್ತಿಸಬೇಕೆಂದೂ ಹೇಳಲಾಗಿದೆ. ಯಕ್ಷ ಪ್ರಶ್ನೆಯ ಸಂದರ್ಭದಲ್ಲಿಯೂ ಕಾರಣಂಹಿ ದ್ವಿಜತ್ಹೇ ಚ ವೃತ್ತ ಮೇವ ನ ಸಂಶಯಃ ಎಂದು ಸಜ್ಜಾರಿತ್ರ್ಯವೇ ಬ್ರಾಹ್ಮಣ್ಯದ ಹೇತುವೆಂದು ಬರೆಯಲಾಗಿದೆ. ಇವೆಲ್ಲ ಔಪಾಧಿಕವಾದ ಶಾರೀರಿಕ ವರ್ಣ ವಿಭಾಗವನ್ನು ಅಲ್ಲಗಳೆಯುವ ದೃಷ್ಟಿಯಿಂದ ಬರೆಯಲ್ಪಟ್ಟಿಲ್ಲ. ಆತ್ಮನ ವ್ಯಕ್ತಿತ್ವ ಮತ್ತು ಅವನ ಶ್ರೇಷ್ಠತೆಯನ್ನು ಸದ್ಗುಣ ಸಜ್ಜಾ ರಿತ್ರ್ಯದಿಂದಲೇ ನಿರ್ಧರಿಸಬೇಕೆಂಬುದೇ ಈ ವಾಕ್ಯಗಳ: ತಾತ್ಪ ರ್ಯವಾಗಿದೆ. ಧರ್ಮಶಾಸ್ತ್ರಗಳಲ್ಲಿ ಹೇಳಿದ ವರ್ಣವ್ಯವಸ್ಥೆಯು ಔಪಾಧಿಕವಾಗಿದ್ದರೂ ಅದು ಅನವಶ್ಯವೆಂದು ಅಭಿಪ್ರಾಯವಲ್ಲ. ಧರ್ಮಶಾಸ್ತ್ರೋಕ್ತಕರ್ಮಾನುಷ್ಠುನ ಗಳಿಗೆ ಅದೇ ಆಧಾರವಾಗಿದ್ದು ಅದರ ರೀತಿಯಲ್ಲೇ ನಾವು ಆ ಕರ್ಮಗಳನ್ನು ಆಚರಿಸಬೇಕು. ಆದರೆ ಒಬ್ಬನಿಗೆ ಮುಕ್ತಿಗಿರುವ ಅರ್ಹತೆಯನ್ನು ಅವನ ಜನ್ಮ ಜಾತಿಗಳಿಂದಲೇ ನಿರ್ಧರಿಸಲು ಬರುವುದಿಲ್ಲ. ಬ್ರಾಹ್ಮಣ, ಕ್ಷತ್ರಿಯ ಮುಂತಾದ ಔಪಾಧಿಕ ಜಾತಿಗಳನ್ನಾಧರಿಸಿ ಧರ್ಮಶಾಸ್ತ್ರೋಕ್ತ ಕರ್ತವ್ಯಗಳನ್ನು ನಾವು ವಿಂಗಡಿಸಿದರೂ ಮುಕ್ತಿಯನ್ನು ಮಾತ್ರ ಈ ಬಾಹ್ಯಜಾತಿಯ ಆಧಾರದಿಂದ ನಿರ್ಧರಿಸಲು ಸಾಧ್ಯವಿಲ್ಲ. ಭಕ್ತಿ ಪ್ರಾರ್ಥನೆ, ಉಪಾಸನೆ ಐೂದಲಾದ ಆಧ್ಯಾತ್ಮಿಕ ಸಾಧನೆಗೆ ಬೇಕಾದ ಆರ್ಹತೆಗಳನ್ನು ಒಬ್ಬನ ನಿಜವಾದ ಸಜ್ಜನಿಕೆಯನ್ನು ಅವನ ಜನ್ಮಜಾತಿಗಳಿಂದಲೇ ನಿರ್ಧರಿಸಬಾರದು. ಬ್ರಾಹ್ಮಣಜಾತಿಯಲ್ಲಿ ಹುಟ್ಟಿದ ಕೂಡಲೇ ಅವನು ಸಹಜವಾಗಿಯೇ ಶಮದಮಾದಿ ಗುಣಸಂಪನ್ನನಾದ ಸಜ್ಜನನಾಗಿರುವನೆಂಬ ನಿಯಮ ಇರುವುದಿಲ್ಲ. ಸಜ್ಜನಿಕೆಯನ್ನೂ ಅದರ ಅಂತರವನ್ನೂ ಮಾನವನ ಸದ್‌ವ್ಯವಹಾರ ಮತ್ತು ಸತ್ತ್ವ, ರಜಸ್ಸು ತಮಸ್ಸುಗಳ ತಾರತಮ್ಯದಿಂದಲೇನಿರ್ಧರಿಸಬೇಕಾಗುವುದು. ಯಾವುದೇ ಜಾತಿಯಲ್ಲಿದ್ದರೂ ಈ ಸಜ್ಜನರನ್ನು ಕಂಡುಹಿಡಿದು ಅವರನ್ನು ನಾವು ಗೌರವಿಸಬೇಕಾಗಿದೆ. ಮಾನವರಲ್ಲಿ ಮೂಲಭೂತವಾಗಿ ಇರಬಹುದಾದ ಈ ಸಜ್ಜನಿಕೆಯನ್ನೂ ಅದರ ಅಂತರವನ್ನೂ ಗುರುತಿಸಿಕೊಳ್ಳುವುದಕ್ಕಾಗಿಯೇ ಗೀತೆಯು ಈ ಸ್ವಾಭಾವಿಕವಾದ ಆತ್ಮಗುಣವನ್ನೇ ಆಧರಿಸಿರುವ ವರ್ಣವಿಭಾಗವನ್ನು ನಿರೂಪಿಸಿದೆ. ಗೀತೆಯು ಪ್ರತಿಪಾದಿಸಿದ ವರ್ಣವಿಭಾಗವು. ಶರೀರಭೇದವನ್ನು ಅವಲಂಬಿಸಿದ ಜಾತಿವಿಭಾಗವಾಗಿರದೆ. ಪ್ರಪಂಚದಲ್ಲಿರುವ. ಸಜ್ಜನ ಸಮಾಜದ ವರ್ಗೀಕರಣವಾಗಿರುವುದು. ಆತ್ಮದ ಗುಣಧರ್ಮಗಳ ಕಡೆಗೆ ಗಮನವಿಟ್ಟು ಜನರನ್ನು ವರ್ಗೀಕರಿಸುವ ಈ ದೃಷ್ಟಿ ಯಿಂದ ಔಪಾಧಿಕ ವರ್ಣಧರ್ಮಗಳಿಂದ ಸಂಭವಿಸಬಹುದಾದ ಅನೇಕ ಲೋಪಹಾನಿಗಳನ್ನು ಪರಿಹರಿಸಿ ಸಮಾಜದಲ್ಲಿ ಸಾಮರಸ್ಯವನ್ನು ಸ್ಥಾಪಿಸಲು ಅವಕಾಶವಾಗುವುದು. ಅಂತೂ ಚಾತುರ್ವರ್ಣ್ಯವೆಂದರೆ ಜಗತ್ತಿನ ಸಜ್ಜನ ಸಮೂಹವೆಂದೇ ನಿಜವಾದ ಅರ್ಥವಾಗಿದೆ. ಈ ಸಜ್ಜನವೃಂದಕ್ಕೆ ದೇಹವನ್ನೂ ಇತರ ಸಾಧನಸಾಮಗ್ರಿಗಳನ್ನೂ ನೀಡಿ ಈ ಜಗತ್ತಿಗೆ ತಂದಿರುವ ಪರಮಾತ್ಮನು ತಂದೆ, ತಾಯಿ, ಗುರುಗಳಿಗಿಂತಲೂ ಮಿಗಿಲಾಗಿ ಸರ್ವದಾ ಸರ್ವ ರೀತಿಯಿಂದಲೂ ಪರಮೋಪಕಾರಕನಾಗಿರುವನು. ಇಂತಹವನನ್ನು ಮರೆತು ಲೌಕಿಕಫಲಗಳಿಗಾಗಿ ಬೇರೆ ಕಡೆಗೆ ಓಡಾಡುವುದರಿಂದ ಸರ್ವಥಾ ಶ್ರೇಯಸ್ಸು ಉಂಟಾಗಲಾರದು. ಆದುದರಿಂದ ಸಜ್ಜನರೆಲ್ಲರೂ ಅನನ್ಯಭಕ್ತಿಯಿಂದ ಲೋಕೈಕನಾಯಕನೂ ಅನಂತಕಲ್ಯಾಣಗುಣನಿಧಿಯೂ ಪರಬ್ರಹ್ಮನೂ ಆದ ಶ್ರೀಹರಿಯನ್ನೇ ಆಶ್ರಯಿಸ ಬೇಕು. ಅವನನ್ನು ತೊರೆದು ಇತರ ದೇವತೆಗಳನ್ನಾಗಲಿ ಭೂತಗಳನ್ನಾಗಲಿ ಸಾಮಾನ್ಯ ಕ್ಚುದ್ರ ಮಾನವ ವ್ಯಕ್ತಿಗಳನ್ನಾಗಲಿ ಸ್ವಾರ್ಥಭಾವನೆಯಿಂದ ಮೊರೆಯಿಡುವುದು ಉಚಿತವಾಗುವುದಿಲ್ಲ. ಸರ್ವೋತ್ತಮವಾದ ಪರಬ್ರಹ್ಮ ವಸ್ತುವು ಒಂದೇ ಆಗಿದೆ. ಅದರಲ್ಲಿ ಅಚಲವಾದ ಶ್ರದ್ಧೆ ನಿಷ್ಠೆ, ಭಕ್ತಿಗಳನ್ನು ಕಾಯ್ದುಕೊಳ್ಳಬೇಕು. ನಾನಾವಿಧ ಫಲವಾಸನೆಗಳಿಂದ ವಿವಿಧ ದೇವತೆಗಳನ್ನು ಆರಾಧಿಸಿ ನಮ್ಮ ಭಾವನೆಯನ್ನು ವಿಕ್ಷಿಪ್ತಗೊಳಿಸಿಕೊಳ್ಳಬಾರದು. ಬಹುಜನರು ತಿಳಿದುಕೊಂಡಂತೆ ಹಿಂದೂ ಧರ್ಮವು ಅನೇಕ ದೇವತೆಗಳ ಪರಮಶ್ರೇಷ್ಠತೆಯನ್ನು ಸಾರುವ ವಿಕ್ಷಿಪ್ತ ವಾದವಲ್ಲ. ಏಕದೇವತಾ ವಾದವೇ ಗೀತೆಯ ಪರಮಾಭಿಪ್ರಾಯವಾಗಿದೆಯೆಂಬುದು ಇಲ್ಲಿಸ್ಪಷ್ಟವಾಗುವುದು. ಒಂಭತ್ತನೇ ಅಧ್ಯಾಯದಲ್ಲಿ ಇದನ್ನು ಇನ್ನೂ ಸ್ಪಷ್ಟವಡಿಸಲಾಗಿದೆ: ಯೇಜಪೃನ್ಯದೇವತಾಭಕ್ತಾ ಯಜಂತೇ ಶ್ರದ್ಧಾಯಾನ್ವಿತಾಃ | ...ಅಹಂ ಹಿ ಸರ್ವಯಜ್ಞಾ ನಾಂ ಭೋಕ್ತಾಚ ಪ್ರಭುರೇವಚ। ನತು ಮಾಮಭಿಜಾನಂತಿ ತತ್ತೆ ಪನಾತತ್ಚ 'ವಂತಿ ತೇ॥ ಯಾಂತಿ ದೇವವ್ರತಾ ದೇವಾನ್‌ ಪಿತ್ಠನ್‌ ಯಾಂತಿ ಪಿತೃ ವ್ರತಾಃ। ಭೂತಾನಿ ಯಾಂತಿ ಭೂತೇಜ್ಯಾ ಯಾಂತಿ ಮದ್ಯಾಜಿನೋಷಪಿ ಮಾಂ ಅನ್ಯದೇವತೆಗಳಿಂದರೆ ಯಾರು? ಸರ್ವೋತ್ತಮನಾದ, ಮೋಕ್ಟದಾತನಾದ ಪರಬ್ರಹ್ಮನೆಂದರೆ ಯಾರು? ಎಂಬುದನ್ನು ಇಲ್ಲಿ ವಿಶದೀಕರಿಸಲಾಗಿದೆ. "ಮಾಂ '"ಮದ್ಯಾಜಿನಃ' ಎಂಬ ಶಬ್ದಗಳಿಂದ ಸರ್ವೋತ್ತಮನಾದ ಪರದೇವತೆಯು ತಾನೇ ಎಂದು ಶ್ರೀಕೃಷ್ಣನು ಹೇಳಿರುವನು. ಇದರಿಂದ ಶ್ರೀವಿಷ್ಣುವೇ ಸರ್ವದೇವತೆಗಳಿಗೆ ಸ್ವಾಮಿಯೂ ಸರ್ವಕರ್ಮಗಳಲ್ಲಿ ಆರಾಧ್ಯಪುರುಷಣೂ ಆದ. ಪರದೈವವೆಂಬುದು.. ನಿಸಸಂದಿಗೃವಾಗಿ ಸಿದ್ಧವಾಗುವುದು. ದೇವತೆಗಳ, ಪಿತೃ ಭೂತಗಳ ಆರಾಧನೆಯಿಂದ ಅಲ್ಪಫಲವು ದೊರೆಯುವುದೆಂದೂ ಅನ್ಯದೇವತೆಗಳನ್ನು ಪೂಜಿಸಿದರೂ ಅವರ ಒಳಗಿದ್ದು ಅದನ್ನು ಸ್ವೀಕರಿಸಿ ಆ ಕ್ಚುದ್ರ ಫಲಗಳನ್ನು ನೀಡುವ ಸರ್ವಯಜ್ಞಭೋಕ್ತನಾದ ಶ್ರೀಹರಿಯೇ ಸರ್ವೋತ್ತಮ ದೇವತೆಯಾಗಿದ್ದು ಅವನ ಆರಾಧನೆಯಿಂದ ಮೋಕ್ಷರೂಪವಾದ ಮಹಾಫಲವು ದೊರೆಯುವುದೆಂಬುದನ್ನೂ ಮೇಲೆ ಉದಾಹರಿಸಿದ ಶ್ಲೋಕಗಳಲ್ಲಿ ನಿರೂಪಿಸಲಾಗಿದೆ.
Bannanje Govindacharya (1936–2020)Bhagavad Gita Pravachana
ಚಾತುರ್ವರ್ಣ್ಯಮ್‌ ಮಯಾ ಸೃಷ್ಟಂ ಗುಣಕರ್ಮ ವಿಭಾಗಶಃ | ತಸ್ಯ ಕರ್ತಾರಮ್‌ ಅಪಿ ಮಾಮ್‌ ವಿದ್ಧಿ ಅಕರ್ತಾರಮ್‌ ಅವ್ಯಯಮ್‌ -- ತ್ರಿಗುಣಗಳು ಮತ್ತು ಕರ್ಮಗಳ ವಿಂಗಡಣೆಯಿಂದ ನಾಲ್ಕು ವರ್ಣಗಳ ಗುಂಪನ್ನು ನಿರ್ಮಿಸಿದೆ. ಏತರಿಂದಲೂ ಬದಲಾವಣೆಗೊಳ್ಳದ ನಾನು ಅದನ್ನು ಮಾಡಿದರೂ ನಿಜವಾಗಿ ಏನನ್ನೂ ಮಾಡುವುದಿಲ್ಲವೆಂದು ತಿಳಿ. (ಬದಲಾವಣೆಗೊಳ್ಳದ ನಾನು ಅದನ್ನು ನಿರ್ಮಿಸಿದವನು ಮತ್ತು ನನ್ನನ್ನು ಯಾರೂ ನಿರ್ಮಿಸಿಲ್ಲ ಎಂದು ತಿಳಿ) ಕೃಷ್ಣ ಹೇಳುತ್ತಾನೆ: "ನಾನು ಗುಣಕರ್ಮವಿಭಾಗಶಃ ನಾಲ್ಕು ವರ್ಣಗಳನ್ನು ಸೃಷ್ಟಿ ಮಾಡಿದೆ ಎಂದು". ನಮಗೆ ತಿಳಿದಂತೆ ನಾಲ್ಕು ವರ್ಣಗಳು- ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ. ಭಗವಂತನ ಈ ನುಡಿಯನ್ನು ತಪ್ಪಾಗಿ ಅರ್ಥೈಸುವವರೇ ಹೆಚ್ಚು. ಭಗವಂತನೇ ನಾಲ್ಕು ವರ್ಣಗಳನ್ನು ಸೃಷ್ಟಿಸಿದರೆ ಈ ವರ್ಣಭೇದ ಭಾರತವನ್ನು ಬಿಟ್ಟು ಬೇರೆ ದೇಶದಲ್ಲಿ ಏಕಿಲ್ಲ ಎಂದು ಪ್ರಶ್ನಿಸುವವರಿದ್ದಾರೆ. ಮೂಲಭೂತವಾಗಿ ನೋಡಿದರೆ ಕೃಷ್ಣ ಇಲ್ಲಿ ಹೇಳಿರುವುದು ಜಾತಿಯ ಬಗ್ಗೆ ಅಲ್ಲ-ಬದಲಿಗೆ ನಾಲ್ಕು ವರ್ಣಗಳ ಬಗ್ಗೆ. ವರ್ಣ ಮತ್ತು ಜಾತಿಯನ್ನು ಸಂಕೀರ್ಣವಾಗಿ ಕೂಡಾ ಬಳಸುತ್ತಾರೆ. ಸಂಸ್ಕೃತದಲ್ಲಿ ಒಂದು ಪದಕ್ಕೆ ಅನೇಕ ಅರ್ಥಗಳಿರುತ್ತವೆ. ಒಂದು ಪದಕ್ಕೆ ಅನೇಕ ಆಯಾಮವಿರುವುದರಿಂದ ನಮಗೆ ಕೆಲವೊಮ್ಮೆ ಗೊಂದಲವಾಗುತ್ತದೆ. ಜಾತಿ ಎನ್ನುವುದಕ್ಕೆ ಎರಡು ಅರ್ಥವಿದೆ. ಒಂದು ಹುಟ್ಟುಗುಣ ಸ್ವಭಾವ(ಜೀವ ಸ್ವಭಾವ-ಹುಟ್ಟುವಾಗಲೇ ಪಡೆದುಕೊಂಡು ಬಂದಿದ್ದು, ಮೂಲ ತೈೈಗುಣ್ಯಕ್ಕೆ ಸಂಬಂಧಪಟ್ಟದ್ದು) ಅದು ವರ್ಣ; ಇನ್ನೊಂದು ಯಾವ ಮನೆಯಲ್ಲಿ ಹುಟ್ಟಿದನೋ ಆ ಜಾತಿ (ಬ್ರಾಹ್ಮಣರ ಮನೆಯಲ್ಲಿ ಹುಟ್ಟಿದ ಹುಡುಗ ಬ್ರಾಹ್ಮಣ ಹುಡುಗ, ಕ್ಷತ್ರಿಯನ ಮನೆಯಲ್ಲಿ ಹುಟ್ಟಿದ ಹುಡುಗ ಕ್ಷತ್ರಿಯ ಹುಡುಗ). ಈ ಸೂಕ್ಷ್ಮ ಅರಿಯದಿದ್ದರೆ ಇಲ್ಲಿ ನಮಗೆ ಗೊಂದಲವಾಗುತ್ತದೆ. ಆದ್ದರಿಂದ ಈ ಶ್ಲೋಕದಲ್ಲಿ ವರ್ಣ ಎಂದರೆ ಮೂಲ ಹುಟ್ಟು ಸ್ವಭಾವ. ವರ್ಣ ಅಂದರೆ ಬಣ್ಣ. ಒಬ್ಬ ಮನುಷ್ಯನ ಬಣ್ಣ ಅಂದರೆ ಏನು ? "ಆತನ ಬಣ್ಣ ಬಯಲಾಯಿತು" ಎಂದು ಸಾಮಾನ್ಯವಾಗಿ ನಾವು ಹೇಳುವುದಿದೆ. ಒಬ್ಬನ ಬಣ್ಣ ಬಯಲಾಗುವುದು ಎಂದರೆ ಆತನ ನಿಜ ವ್ಯಕ್ತಿತ್ವ ಬಯಲಾಗುವುದು. ಇಲ್ಲಿ ಬಣ್ಣ ಎಂದು ಹೇಳಲು ಇನ್ನೊಂದು ಕಾರಣವಿದೆ. ನಮ್ಮ ಸ್ವಭಾವಕ್ಕೆ ಬಣ್ಣವಿದೆ [ಇದು ನಮ್ಮ ಕಣ್ಣಿಗೆ ಕಾಣದ ಬಣ್ಣ]. ಸಾತ್ವಿಕ-ಬಿಳಿ; ರಾಜಸ-ಕೆಂಪು; ತಾಮಸ-ಕಪ್ಪು. ಹೀಗೆ ಬಣ್ಣ ಸ್ವಭಾವವನ್ನು ಪ್ರತಿನಿಧಿಸುತ್ತದೆ. ಅಷ್ಟೇ ಅಲ್ಲದೇ ನಮ್ಮ ಸ್ವಭಾವ ನಮ್ಮೊಳಗಿನ ಒಂದು ಶಕ್ತಿ. ನಮ್ಮ ಭಾವನೆಗನುಗುಣವಾಗಿ ನಮ್ಮ ದೇಹ ಬಣ್ಣದ ಕಿರಣಗಳನ್ನು ಹೊರಹೊಮ್ಮುತ್ತದೆ[ಇದು ಸಾಮಾನ್ಯ ಮನುಷ್ಯನ ಕಣ್ಣಿಗೆ ಕಾಣದು]. ತುಂಬಾ ಕೋಪ ಬಂದಾಗ ಮೈಯಿಂದ ಕೆಂಪು ಕಿರಣ; ಮನಸ್ಸು ಪ್ರಸನ್ನವಾಗಿದ್ದಾಗ ಹಸಿರು ಕಿರಣ; ಜ್ಞಾನದ ಆಳ ತಿಳಿದ ಜ್ಞಾನಿಯ ಮೈಯಿಂದ ನೀಲ ಕಿರಣ. ಹೀಗೆ ಬಣ್ಣ ನಮ್ಮ ಒಳಗಿನ ಸ್ವಭಾವವನ್ನು ಪ್ರತಿನಿಧಿಸುತ್ತದೆ. ಈ ಕಾರಣಕ್ಕಾಗಿ ಜ್ಞಾನಾನಂದಮಯನಾದ ಭಗವಂತ ನೀಲಮೇಘಶ್ಯಾಮ. ಮೇಲಿನ ವಿವರವನ್ನು ತಿಳಿದಾಗ ಸ್ಪಷ್ಟವಾಗಿ ನಮಗೆ ಅರ್ಥವಾಗುವುದು ಒಂದು ವಿಚಾರ. ಜಾತಿ ಹುಟ್ಟಿದ ಮನೆಗೆ ಮತ್ತು ತಂದೆ-ತಾಯಿಯನ್ನು ಅವಲಂಬಿಸಿ ಬರುವುದು. ವರ್ಣ ಎನ್ನುವುದು ನಮ್ಮ ಅಂತರಂಗ ಪ್ರಪಂಚ-ನಮ್ಮ ಮೂಲ ಸ್ವಭಾವ. ಈ ವರ್ಣವನ್ನು ಪ್ರಪಂಚದ ಮೂಲೆ ಮೂಲೆಯಲ್ಲೂ ಕಾಣಬಹುದು. ಭಾರತದಲ್ಲಿ ಶಾಸ್ತ್ರಕಾರರು ಇದನ್ನು ಗುರುತಿಸಿ ಅದಕ್ಕೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎನ್ನುವ ಹೆಸರು ಕೊಟ್ಟರು ಅಷ್ಟೇ. ಜಾತಿ ಜನ್ಮತಃ ಆದರೆ ವರ್ಣಗಳನ್ನು ಗುಣಕರ್ಮದಿಂದ ವಿಭಾಗಿಸಿರುವುದು. ಬ್ರಾಹ್ಮಣರ ಮನೆಯಲ್ಲಿ ಹುಟ್ಟುವ ಹುಡುಗ ಬ್ರಾಹ್ಮಣ ಜಾತಿಯ ಹುಡುಗ. ಆದರೆ ಆತ ಸ್ವಭಾವತಃ ಕ್ಷತ್ರಿಯನಾಗಿರಲೂಬಹುದು; ಒಂದೇ ಮನೆಯಲ್ಲಿ ನಾಲ್ಕು ವರ್ಣದ ಮಕ್ಕಳು ಹುಟ್ಟಲೂಬಹುದು. ಬೆಸ್ತರ ಹುಡುಗಿಯಲ್ಲಿ ಹುಟ್ಟಿದ ವೇದವ್ಯಾಸರು ಮಹಾಬ್ರಾಹ್ಮಣ. ಇದು ವರ್ಣವನ್ನು ಅವಲಂಬಿಸಿ ಬಂದದ್ದು. ಅದೇ ವೇದವ್ಯಾಸರ ಮಗ, ಶ್ರೇಷ್ಠ ಜ್ಞಾನಿ-ವಿದುರ 'ಕ್ಷತ್ತಾಕೆಲಸದವಳ ಮಗ). ಇದು ಸಾಮಾಜಿಕ ರಾಜಕೀಯದಿಂದ ಬಂದಿದ್ದು! ಜೀವಸ್ವಭಾವ ಮತ್ತು ಕರ್ಮಕ್ಕನುಗುಣವಾಗಿ ಭಗವಂತ ಒಂದು ವರ್ಣವನ್ನು ಜೀವಕ್ಕೆ ಹುಟ್ಟುವಾಗಲೇ ಕೊಟ್ಟಿರುತ್ತಾನೆ. ವರ್ಣ ಇಲ್ಲದೆ ಸಮಾಜ ಸುಗಮವಾಗಿ ನಡೆಯದು. ಪುರುಷಸೂಕ್ತದಲ್ಲಿ ಈ ನಾಲ್ಕು ವರ್ಣಗಳನ್ನು ಆಯಾ ವರ್ಣದ ಕರ್ಮಕ್ಕನುಗುಣವಾಗಿ ದೇಹದ ನಾಲ್ಕು ಭಾಗವಾಗಿ ಈ ರೀತಿ ವಿವರಿಸಿದ್ದಾರೆ: ಬ್ರಾಹ್ಮಣೋಸ್ಯ ಮುಖಮಾಸೀತ್‌ | ಬಾಹೂ ರಾಜನ್ಯಃ ಕೃತಃ | ಊರೂ ತದಸ್ಯ ಯದ್ವೈಶ್ಯಃ | ಪದ್ಭ್ಯಾಗಮ್‌ ಶೂದ್ರೋ ಅಜಾಯತ ॥ ದೇಹಕ್ಕೆ ಪಂಚಾಗವಾಗಿರುವ ಹಾಗೂ ಪೂಜೆಯಲ್ಲಿ ಶ್ರೇಷ್ಠ ಎನಿಸಿದ ಪಾದವನ್ನು ಶೂದ್ರನಿಗೆ ಹೋಲಿಸಿದರು. ಇದು ದೇಹದ ಅಡಿಪಾಯ. ಶೂದ್ರ ಎಂದರೆ ದುಃಖದಲ್ಲಿ ಕರಗಿದವ ಎಂದರ್ಥ. ಈತನಲ್ಲಿ ಅರಸೊತ್ತಿಗೆ ಇರುವುದಿಲ್ಲ. ಅದರೆ ಇನ್ನೊಬ್ಬರ ಸೇವೆ ಮಾಡುವ ಸೇವಾ ಗುಣ ಮಹತ್ವವಾಗಿರುತ್ತದೆ (Service Quality). ಈ ಗುಣ ಇಲ್ಲದವ ಮನುಷ್ಯನೇ ಅಲ್ಲ. ಯಾರೂ ಏಕವರ್ಣದವರಲ್ಲ. ಎಲ್ಲರಲ್ಲೂ ಎಲ್ಲಾ ಸ್ವಭಾವವಿರುತ್ತದೆ. ಯಾವ ಸ್ವಭಾವ ನಮ್ಮಲ್ಲಿ B39 NSodee (majority) ನಾವು ಆ ವರ್ಣಕ್ಕೆ ಸೇರುತ್ತೇವೆ. ಶೂದ್ರ ಸ್ವಭಾವ ಎಷ್ಟು ಮುಖ್ಯ ಎಂದರೆ ಈ ಸ್ವಭಾವ ಇಲ್ಲದೆ ಬೇರೆ ಸ್ವಭಾವಕ್ಕೆ ಬೆಲೆಯೇ ಇಲ್ಲ. ಯಾವಾಗಲೂ ನಾವು ಮಾಡುವ ಕರ್ಮವನ್ನು ಸೇವಾ ಮನೋವೃತ್ತಿಯಿಂದ ಮಾಡಬೇಕು. ಉದಾಹರಣೆಗೆ: ಬ್ರಾಹ್ಮಣನಾದವನು ಸಮಾಜ ಸೇವೆಯ ಭಾವನೆಯಿಂದ ಜ್ಞಾನದಾನ ಮಾಡಬೇಕು. ಇಲ್ಲದಿದ್ದರೆ ಅದು ಜ್ಞಾನದಾನವೆನಿಸುವುದಿಲ್ಲ. ವೈಶ್ಯನನ್ನು. ದೇಹದ ಸೊಂಟದ ಭಾಗಕ್ಕೆ ಹೋಲಿಸಿದರು. ಕಾರಣ ಈತನ ಸ್ವಭಾವ ವ್ಯಾಪಾರ ಮತ್ತು ವಾಣಿಜ್ಯ (Production). ಸಾಮಾನ್ಯವಾಗಿ ಹಿಂದಿನ ಕಾಲದ ಜೀವನ ಪದ್ಧತಿಯಂತೆ ವೈಶ್ಯರು ಒಂದು ಊರಿನಿಂದ ಇನ್ನೊಂದು ಊರಿಗೆ ಸಂಚರಿಸುತ್ತಾ ತಮ್ಮ ವ್ಯಾಪಾರವನ್ನು ಮಾಡುತ್ತಿದ್ದರು. ಆದ್ದರಿಂದ ಅವರನ್ನು ಸೊಂಟಕ್ಕೆ ಹೋಲಿಸಿದ್ದಾರೆ. ಕ್ಷತ್ರಿಯರ ಸ್ವಭಾವ ತಮ್ಮ ತೋಳ್ಪಲದಿಂದ ಸಮಾಜದ ರಕ್ಷಣೆ ಮಾಡುವುದು ಮತ್ತು ಆಡಳಿತ (Protection and Administration) ನೆಡೆಸುವುದಾದ್ದರಿಂದ ಅವರನ್ನು ತೋಳಿಗೆ ಹೋಲಿಸಿದ್ದಾರೆ. ಇನ್ನು ಬ್ರಾಹ್ಮಣ ಸ್ವಭಾವ; ಇವರ ಮೂಲಕರ್ಮ ಜ್ಞಾನದ ಮಾರ್ಗದರ್ಶನ(/156019). ಅದಕ್ಕಾಗಿ ಇವರನ್ನು ತಲೆಗೆ ಹೋಲಿಸಿದರು. ಸ್ವಭಾವತಃ ಬ್ರಾಹ್ಮಣ ಎನಿಸಿದವನು ಸದಾ ಭಗವಂತನ ಚಿಂತನೆ, ಇಂದ್ರಿಯ ನಿಗ್ರಹ, ಸುಳ್ಳು ಹೇಳದ, ಮುಖವಾಡ ಇಲ್ಲದ ಬದುಕು, ಸದಾ ಅಂತರಂಗ ಬಹಿರಂಗ ಶುದ್ಧಿ- ಈ ಮೂಲ ಗುಣಗಳನ್ನು ಹೊಂದಿರುತ್ತಾನೆ. ಹೀಗೆ ಈ ನಾಲ್ಕು ವರ್ಣಗಳು ಸೇರಿದರೆ ಮಾತ್ರ ಒಂದು ಪರಿಪೂರ್ಣ ಸಮಾಜ ನಿರ್ಮಾಣವಾಗಲು ಸಾಧ್ಯ. ಇಲ್ಲಿ ಮೇಲು-ಕೀಳು ಎನ್ನುವ ಭಾವನೆ ಸಲ್ಲದು. ಎಲ್ಲರೂ ಮೋಕ್ಷ ಯೋಗ್ಯ ಜೀವರೇ. ಇದು ಆಧ್ಯಾತ್ಮಿಕ ವರ್ಗೀಕರಣ ಮತ್ತು ವ್ಯವಸ್ಥೆ. 'ಇದನ್ನು ಅನಾದಿನಿತ್ಯವಾದ ಜೀವದ ಮೂಲ ಸ್ವಭಾವಕ್ಕನುಗುಣವಾಗಿ ಮತ್ತು ಕರ್ಮಕ್ಕನುಗುಣವಾಗಿ ನಾನು ಈ ಭೂಮಿ ಮೇಲೆ ಸೃಷ್ಟಿಸಿದೆ' ಎಂದಿದ್ದಾನೆ ಕೃಷ್ಣ. ಇಲ್ಲಿ ನಾವು ತಿಳಿಯಬೇಕಾದ ಒಂದು ಮೂಲಭೂತ ಅಂಶವೇನೆಂದರೆ- ಜೀವವನ್ನು ಭಗವಂತ ಸೃಷ್ಟಿಸಿಲ್ಲ. ಜೀವ ಮತ್ತು ಜೀವಸ್ವಭಾವ ಅನಾದಿನಿತ್ಯ. ಜೀವದ ಸ್ವಭಾವಕ್ಕನುಗುಣವಾಗಿ ಅದಕ್ಕೆ ಬೇಕಾದ ದೇಹ, ಶಕ್ತಿ, ಪ್ರಪಂಚದ ನಿರ್ಮಾಣ ಮಾಡಿ, ಅದಕ್ಕೊಂದು ಅಸ್ಥಿತ್ವ. ಕೊಟ್ಟು, ಜೀವಸ್ವಭಾವದ ವಿಕಾಸಕ್ಕೋಸ್ಕರ ಜೀವವನ್ನು ಬಿತ್ತಿ ಬೆಳೆಸುವವ ಭಗವಂತ. ಇಂತಹ ಭಗವಂತ ಎಲ್ಲರ ಕರ್ತಾರ. ಇಂತಹ ಭಗವಂತನಿಗೆ ಇನ್ನೊಬ್ಬ ಕರ್ತಾರನಿಲ್ಲ. ಆತ ಎಲ್ಲವುದರ ಕಾರಣ ಆದರೆ ಆತನಿಗೆ ಕಾರಣವಾದ ಇನ್ನೊಂದು ವಸ್ತು ಇಲ್ಲ. "ಬದಲಾವಣೆಗೊಳ್ಳದ ನಾನು ಅದನ್ನು ನಿರ್ಮಿಸಿದವನು ಮತ್ತು ನನ್ನನ್ನು ಯಾರೂ ನಿರ್ಮಿಸಿಲ್ಲ ಎಂದು ತಿಳಿ” ಎಂದು ಕೃಷ್ಣ ಅರ್ಜುನನಿಗೆ ಹೇಳುತ್ತಾನೆ.
Bibek Debroy (1955–2024)The Bhagavad Gita
(13) ‘In accordance with gunas and action, the four varnas were created by me.19 But despite being the creator of these, know me to be constant20 and not the agent.’21