4.15

एवं ज्ञात्वा कृतं कर्म पूर्वैरपि मुमुक्षुभिः ।
कुरु कर्मैव तस्मात्त्वं पूर्वैः पूर्वतरं कृतम् ॥
evaṃ jñātvā kṛtaṃ karma pūrvairapi mumukṣubhiḥ |
kuru karmaiva tasmāttvaṃ pūrvaiḥ pūrvataraṃ kṛtam ||
Swami Sivananda (1887–1963)Bhagavad Gita
15. Having known this, the ancient seekers after freedom also performed actions; therefore, do thou perform actions as did the ancients in days of yore.
Bannanje Govindacharya (1936–2020)Bhagavad Gita Pravachana
ಏವಮ್‌ ಜ್ಞಾತ್ವಾ ಕೃತಮ್‌ ಕರ್ಮ ಪೂರ್ವೈಃ ಅಪಿ ಮುಮುಕ್ಷುಭಿಃ ಕುರು ಕರ್ಮ ಏವ ತಸ್ಮಾತ್‌ ತ್ವಮ್‌ ಪೂರ್ವೈಃ ಪೂರ್ವ ತರಮ್‌ ಕೃತಮ್‌-ಬಿಡುಗಡೆ ಬಯಸಿದ ಹಿಂದಿನವರು ಕೂಡಾ ಹೀಗೆ 'ತಿಳಿದು' ಕರ್ಮ ಮಾಡಿದರು. ಆದ್ದರಿಂದ ಹಿಂದಿನಿಂದಲೂ ಇದ್ದು ಹಿರಿಯರು ಮಾಡಿಕೊಂಡು ಬಂದ ಕರ್ಮವನ್ನೇ ನೀನು ಮಾಡು. ಕರ್ಮದ ಬಂಧನದಿಂದ ಬಿಡಿಸಿಕೊಳ್ಳಲು "ನಿಷ್ಕ್ರೀಯತೆ' ಸುಲಭೋಪಾಯ ಎಂದು ಕೆಲವರು ಯೋಚಿಸಬಹುದು. ಕೃಷ್ಣ ನಿಷ್ಕ್ರೀಯತೆಯನ್ನು ಉಗ್ರವಾಗಿ ವಿರೋಧಿಸುತ್ತಾನೆ. 'ನೂರು ವರುಷ ಬದುಕು ಆದರೆ ಕರ್ತವ್ಯಕರ್ಮ ಮಾಡಿಕೊಂಡು ಬದುಕು. ನಿಷ್ಕ್ರೀಯನಾಗಿ ಬದುಕಬೇಡ'. ಇದು ಕೃಷ್ಣನ ಸಿದ್ಧಾಂತ. ಕರ್ಮ ಮಾಡುವುದು ಎಂದರೆ ಏನನ್ನಾದರೂ ಮಾಡುವುದಲ್ಲ. ನಮ್ಮ ಜೀವಸ್ವಭಾವ(ವರ್ಣ)ಕ್ಕೆ ತಕ್ಕಂತೆ ಕರ್ಮ ನಡೆಯುತ್ತಿರಬೇಕು. ಮಾಡುವ ಕರ್ಮವನ್ನು ಜ್ಞಾನಪೂರ್ವಕವಾಗಿ ತಿಳಿದು ಅಭಿಮಾನ-ಅಹಂಕಾರ-ಫಲಾಪೇಕ್ಷೆ ಇಲ್ಲದೇ ಮಾಡಬೇಕು. "ನಿನ್ನ ಹಿಂದಿನ ರಾಜರ್ಷಿಗಳು, ಖುಪಿ-ಮುನಿಗಳು ಮಾಡಿದ್ದೂ ಇದನ್ನೇ . ಕರ್ಮಯೋಗ ಮತ್ತು ಜ್ಞಾನಯೋಗವೆಂಬ ಉಭಯ ಯೋಗವಿಲ್ಲದೇ ಭಗವಂತನ ಸಂಯೋಗವಿಲ್ಲ" ಎನ್ನುತ್ತಾನೆ ಕೃಷ್ಣ.
Bibek Debroy (1955–2024)The Bhagavad Gita
(15) ‘Knowing this, those, who sought liberation in the past, performed action. Therefore, you perform action alone, the path followed by predecessors in earlier times.’