यस्य सर्वे समारम्भाः कामसङ्कल्पवर्जिताः ।
ज्ञानाग्निदग्धकर्माणं तमाहुः पण्डितं बुधाः ॥
yasya sarve samārambhāḥ kāmasaṅkalpavarjitāḥ |
jñānāgnidagdhakarmāṇaṃ tamāhuḥ paṇḍitaṃ budhāḥ ||
Swami Sivananda (1887–1963)Bhagavad Gita
19. He whose undertakings are all devoid of desires and (selfish) purposes, and whose
actions have been burnt by the fire of knowledge,—him the wise call a sage.
Sri Vishwesha Tirtharu (1931–2019)Gitasaroddhara
4.18–4.20 · ಕರ್ಮದಲ್ಲಿ ಅಕರ್ಮ ಅಕರ್ಮದಲ್ಲಿ ಕರ್ಮ
ಕರ್ಮದಲ್ಲಿ ಅಕರ್ಮ; ಅಕರ್ಮದಲ್ಲಿ ಕರ್ಮ
ಈವರೆಗೆ ನಿರೂಪಿಸಿದ ಕರ್ಮಯೋಗದ ಸಾರಸಂಗ್ರಹವನ್ನು ಗೀತೆಯು ಈ
ಚುಟುಕಾದಶ್ಲೋಕದಲ್ಲಿ ಮಾಡಿದೆ.
ಕರ್ಮಣ್ಯಕರ್ಮ ಯಃ ಪಕ್ಯೇ
ದಕರ್ಮಣಿ ಚಕರ್ಮ ಯಃ ॥
ಸ ಬುದ್ಧಿಮಾನ್ ಮನುಷ್ಯೇಷು
ಸ ಯುಕ್ತಃ ಕೃತ್ನ್ನ ಕರ್ಮಕೃತ್ ॥
ಕರ್ಮದಲ್ಲಿ ಅಕರ್ಮವನ್ನು, ಅಕರ್ಮದಲ್ಲಿ ಕರ್ಮವನ್ನು ಕಾಣಬೇಕೆಂಬುದು
ಅದರ ಸರಳಾರ್ಥವಾಗಿದೆ. ಇದು ಒಂದು ಒಗಟಿನಂತೆ ನಮಗೆ ಕಾಣುತ್ತದೆ.
ಕರ್ಮಯೋಗದ ಸಾರವನ್ನು ಸಂಕ್ಷಿಪ್ತವಾಗಿ ಈ ಶ್ಲೋಕವು ನಿರೂಪಿಸಿದೆ. ನಾವು
ಕಾರ್ಯವನ್ನು ಮಾಡುತ್ತಿರುವಾಗಲಿಲ್ಲನಾವೇ ಇದನ್ನು ಮಾಡುತ್ತಿರುವೆವೆಂಬ
ಅಹಂಕಾರವುನಿರೂಢವಾಗಿರುವುದು. ಪರಮಾತ್ಮನೇ ಸರ್ವಕರ್ತನೆಂದು ತಿಳಿದ
ಆಸ್ತಿಕರಿಗೂ ಕೂಡ ತಮ್ಮಿಂದ ಕ್ರಿಯೆಯು ನಡೆಯುತ್ತಿರುವ ಸಮಯದಲ್ಲಿ
ಭಗವಂತನ ಶಕ್ತಿಯೇ ನಮ್ಮ ವ್ಯಾಪಾರದ ಹಿನ್ನೆಲೆಯಾಗಿದ್ದು ಅದರಿಂದಲೇ ಈ
ಕಾರ್ಯನಡೆಯುತ್ತದೆಎಂಬಸ್ಥರಣೆಯು ಯಾವಾಗಲೂಇರುತ್ತಿಲ್ಲ. ಸರ್ವದಾ
ಸರ್ವ ವ್ಯಾಪಾರಪ್ರವರ್ತಕನಾದ ಭಗವಂತನವಿಸ್ಥರಣೆಯಿಂದಲೇ ಅಹಂಕಾರವು
ಮೂಡಿಬರಲು ಅವಕಾಶವಾಗುವುದು. ಅಹಂಕಾರ, ಅಭಿನಿವೇಶದಿಂದಲೇ ಈ
ಕ್ರಿಯೆಗಳು ಬಂಧಕವಾಗಿ ಪರಿಣಮಿಸುವವು. ಆದುದರಿಂದ ನಾವು ಕ್ರಿಯೆ
ಯನ್ನು ನಡೆಸುವಾಗಲೆಲ್ಲ ""ನಾನಿದನ್ನು ಸ್ವತಂತ್ರವಾಗಿ ಮಾಡುತ್ತಿರುವುದಲ್ಲ;
ಪರಮಾತ್ಮನ ಮಹಾವ್ಯಾಪಾರದಿಂದಲೇಇದು ನಡೆಯುತ್ತದೆ'' ಎಂಬಸುದೃಢ
ಅನುಸಂಧಾನವಿರುವುದು ಅವಶ್ಯಕವಾಗಿದೆ. ಸರ್ವಕರ್ತನ ಸಂಸ್ಕ ರಣೆಯಿದ್ದ ರೆ
ಅಲ್ಲಿ ಆಸಕ್ತಿ ಅಹಂಕಾರಗಳಿಗೆ ಪ್ರವೇಶವೇ ಇರುವುದಿಲ್ಲ. ಕರ್ಮದಲ್ಲಿ
ಅಕರ್ಮವನ್ನು ನೋಡಬೇಕು ಎಂಬುದರ ಆಶಯವು ಇದೇ ಆಗಿದೆ. ನಾವು
ಕರ್ಮವನ್ನು ಆಚರಿಸಿದರೂ ಅದು ನಮ್ಮ ಕರ್ಮವಲ್ಲ ನಮ್ಮ ಸ್ವಶಕ್ತಿಯಿಂದ ಅದು
ನಡೆದುದಲ್ಲವೆಂಬಪರಿಜ್ಞಾನವೇಕರ್ಮದಲ್ಲಿ ಅಕರ್ಮದನಿರೀಕ್ಷಣೆಯಾಗಿದೆ.
ನಮ್ಮ ಕಾರ್ಯದಲ್ಲಿ ನಮ್ಮ ಸ್ವಾತಂತ್ರ್ಯದ ಪರಿಮಿತಿಯನ್ನು ತಿಳಿದುಕೊಳ್ಳುವುದಲ್ಲದೆ
ಪ್ರತಿಯೊಂದು ಕರ್ಮದಲ್ಲಿ ಪರಮಾತ್ಮನ ವ್ಯಾಪಾರವನ್ನೂ ನಾವು ಕಾಣಬೇಕು.
"ಆ' ಎನ್ನುವುದಕ್ಕೆ ಪರಮಾತ್ಮನೆಂದೂ ಅರ್ಥವಿರುವುದರಿಂದ ಅಕರ್ಮವೆಂದರೆ
ಪರಮಾತ್ಮ ವ್ಯಾಪಾರವೆಂದೂತಾತ್ಟರ್ಯವಾಗುವುದು.
ಜಗತ್ತಿನ ಪ್ರತಿಯೊಂದು ವ್ಯವಹಾರಕ್ಕೂ ಇಬ್ಬರು ಕರ್ತರಿರುವರು. ಜೀವ
ಮತ್ತು ಪರಮಾತ್ಮ ಇವರೇ ಆ ಇಬ್ಬರು ಕರ್ತರು. ತಂದೆಯು ಮಗುವಿನ ಕೈಯಿಂದ
ಅಕ್ಷರವನ್ನು ಬರೆಸುವಾಗ ಅಲ್ಲಿ ಇಬ್ಬರ ಬುದ್ಧಿ, ಪ್ರಯತ್ನಗಳೂ ಸೇರುವವು.
ಒಂದೇಕ್ರಿಯೆಯಲ್ಲಿಇಬ್ಬರು ಕರ್ತರು ಇರುವುದನ್ನು ನಾವೆಲ್ಲತಿಳಿಯಬಲ್ಲೆವು.
ನಮ್ಮಿಂದ ಕ್ರಿಯೆಯು ನಡೆಯುವಾಗಲೇ ಪರಮಾತ್ಮನು ಶಕ್ತಿದಾತನಾಗಿ ನಮ್ಮ
ಜೊತೆಗೆ ಇದ್ದು ನಮ್ಮ ಕೈಹಿಡಿದು ಕಾರ್ಯವನ್ನು ನಡೆಸುತ್ತಾನೆ. ಪ್ರತಿಯೊಂದು
ಕ್ರಿಯೆಯಲ್ಲೂ ಹೀಗೆ ಇಬ್ಬರ ಬುದ್ಧಿ ವ್ಯಾಪಾರಗಳ ಸಮಾವೇಶವು ಇದೆ. ಆದರೆ
ಪರಮಾತ್ಮನು ಸ್ವತಂತ್ರಶಕ್ತಿಯಿಂದ ಇದನ್ನು ಸಾಧಿಸುತ್ತಿದ್ದರೆ ಪರಮಾತ್ಮನ
ಅಧೀನರಾದ ನಾವು ಅವನ ಬಲದಿಂದಲೇ ಈ ಕಾರ್ಯವನ್ನುಮಾಡುತ್ತಿ ರುವೆವು.
ನಾವು ವಿಷ್ಣುವಿನ ಪ್ರತಿಬಿಂಬರಾಗಿರುವೆವು. ಬಿಂಬದ ವ್ಯಾಪಾರವಿಲ್ಲದ
ಪ್ರತಿಬಿಂಬದಲ್ಲಿ ಅದೆಂತು ಕ್ರಿಯೆಯು ಸಂಭವಿಸಬಹುದು?
ವಿಷ್ಣೊ (ಠೇವ ಕರ್ಮ
ನಾಹಂ ಚಿತ್ಪ್ರತಿಬಿಂಬಃ ಕಿಂಚಿತ್ ಕರೋಮಿ ।
-ಗೀತಾಭಾಷ್ಯ
ಸ್ವತಂತ್ರ ಶಕ್ತಿಯಿಲ್ಲದಿರುವುದರಿಂದ ನಾವು. ಕರ್ತರಾಗಿದ್ದರೂ
ಅಕರ್ತರೆನಿಸಿಕೊಳ್ಳುವೆವು. ಪರಮಾತ್ಮನಂತೂ ಸ್ವತಂತ್ರಕರ್ತನಿರುವನು. ಅವನ
ವ್ಯಾಪಾರಕ್ಕೆ ನಮ್ಮ ಅಪೇಕ್ಷೆಯೇ ಇರುವುದಿಲ್ಲ. ನಮ್ಮ ಸರ್ವ ಅವಸ್ಥೆಗಳಲ್ಲೂ
ನಮಗೆ ಪ್ರವರ್ತಕನಾಗಿ ಭಗವಂತನಿರುವನು. ನಾವು ನಿದ್ರೆಯಲ್ಲಿದ್ದಾಗಲೂ
ಸ್ವಪ್ನಾವಸ್ಥೆಯಲ್ಲಿ ಇರುವಾಗಲೂ ಪರಮಾತ್ಮನ ವ್ಯಾಪಾರವು ಸರ್ವದಾ
ಅವ್ಯಾಹತವಾಗಿ ನಡೆಯುತ್ತದೆ. ಸ್ವಪ್ನದಲ್ಲಿ ಚಲಚ್ಚಿತ್ರಗಳಲ್ಲಿಯ ದೃಶ್ಯಗಳಂತೆ
ವಿಚಿತ್ರಾದ್ಭುತ ವಸ್ತುಗಳನ್ನು ಸೃಜಿಸಿ ತೋರಿಸುವವರು ಯಾರು? ಅಲ್ಲಿ ನಮ್ಮ
ಅಪೇಕ್ಷೆ ಸ್ವಾತಂತ್ರ್ಯಗಳು ಏನೂ ನಡೆಯುವುದಿಲ್ಲ. ಹೀಗೆ ನಮ್ಮ ಪ್ರತಿಯೊಂದು
ಕಾರ್ಯದಲ್ಲಿ ಪರಮಾತ್ಮನ ವ್ಯಾಪಾರದ ಹಿನ್ನೆಲೆಯಿದೆ. ಆದರೆ ಭಗವಂತನ
ವ್ಯಾಪಾರದಲ್ಲಿ ನಮ್ಮದೇನೂ ಆವಶ್ಯಕತೆಯಿರುವುದಿಲ್ಲ. "ಅಕರೃಣಿ ಚಕರ ಯಃ'
ನಮ್ಮ ಅಕರ್ಮದ ಅವಸ್ಥೆಯಲ್ಲೂ ಪರಮಾತ್ಮನ ಶಕ್ತಿಯ ನಿತ್ಯ ಜಾಗೃತವಾಗಿ
ವ್ಯವಹಾರವನ್ನು ನಡೆಸುತ್ತದೆ. ಅದು ಅಖಂಡವಾಗಿ ಪರಾಪೇಕ್ಷಿಯಿಲ್ಲದೆ
ಸರ್ವದಾ ಕ್ರಿಯಾಶೀಲವಾಗಿದೆ. ಅಂತೂ ಪರಮಾತ್ಮನ ವ್ಯಾಪಾರವಿಲ್ಲದೆ ಜೀವನ
ಯಾವುದೇವ್ಯವಹಾರವು ನಡೆಯಲಾರದು. ಭಗವಂತನ ವ್ಯವಹಾರವಾದರೋ
ಜೀವಾತ್ಮನ ಆವಶ್ಯಕತೆ ಇಲ್ಲದೆ ಸ್ವತಂತ್ರವಾಗಿ ನಡೆಯುತ್ತದೆ. ಕರ್ಮದಲ್ಲಿ
ಅಕರ್ಮವನ್ನು, ಅಕರ್ಮದಲ್ಲಿ ಕರ್ಮವನ್ನು ತಿಳಿಯುವುದೆಂದರೆ-ಜೀವಾತ್ಮನ
ಅಶಕ್ತಿ ಅಸ್ವಾತಂತ್ರ್ಯಗಳನ್ನು ಪರಮಾತ್ಮನ ಅಖಂಡವ್ಯವಹಾರಹಾಗೂ ಅಬಾಧಿತ
ಸ್ವಾತಂತ್ರ್ಯಗಳನ್ನು ತಿಳಿಯುವುದೇ ಆಗಿದೆ.
ನಾವು ಮೇಲೆ ತಿಳಿಸಿರುವ ಉಪದೇಶವನ್ನು ಈ ಶ್ಲೋಕದಿಂದ ಇನ್ನೊಂದು
ರೀತಿಯಿಂದಲೂ ಗ್ರಹಿಸಿಕೊಳ್ಳಬಹುದು. ಜೀವನು ಮಾತ್ರ ವಿಧಿನಿಯಮಗಳಿಗೆ
ಒಳಪಟ್ಟವನಾದುದರಿಂದ ಅವನಿಗೆ ಕರ್ಮನಿರ್ಬಂಧ ಇದೆ. ಆದುದರಿಂದ
ಕರ್ಮಕ್ಕೆ ಒಳಪಟ್ಟವನಾದ ಜೀವನನ್ನು “ಕರ್ಮ'' ಎಂಬುದಾಗಿಕರೆಯಲಾಗಿದೆ.
ಪರಮಾತ್ಮನು ""ಅಕರ್ಮ''ನಾಗಿರುವನು. ಅವನು ಕರ್ಮವನ್ನು ದಾಟಿರುವನು.
ಕರ್ಮದ ಯಾವ ವಿಧಿ-ನಿರ್ಬಂಧಗಳೂ ಭಗವಂತನಿಗೆ ಇಲ್ಲದಿರುವುದರಿಂದ
ಕರ್ಮಾತೀತನಾದ ಪರಮಾತ್ಮನನ್ನು '"ಅಕರ್ಮ'' ಎಂದು ಕರೆದಿರುವುದು
ಅರ್ಥಪೂರ್ಣವೇ ಆಗಿದೆ. ವಿಧಿಬದ್ಧನಾದ ಜೀವನು ಕರ್ಮವನ್ನು
ಆಚರಿಸಿದರೂ ಅವನು ಅದನ್ನು ತನ್ನ ಸ್ವಂತ ಶಕ್ತಿಯಿಂದಲೇ ಮಾಡಿದುದಲ್ಲ.
ಅವನಿಗೆ ಆ ಕರ್ಮದಲ್ಲಿ ಪೂರ್ಣ ಸ್ವಾತಂತ್ರ್ಯವಿಲ್ಲದಿರುವುದನ್ನು ಲಕ್ಷಿಸಿ,
ಜೀವನಲ್ಲಿ ಯಾವುದೇ ಸ್ವತಂತ್ರ ಕ್ರಿಯಾಶಕ್ತಿ ಇಲ್ಲವೆಂಬ ಅಭಿಪ್ರಾಯದಿಂದ
ಅವನಲ್ಲಿ ಕರ್ಮವಿರುವುದಿಲ್ಲಎಂದು ಇಲ್ಲಿತಿಳಿಸಲಾಗಿದೆ. ವಿಧಿಗೆ ಅತೀತನಾದ
ಪರಮಾತ್ಮನಲ್ಲೇ ಸರ್ವಕರ್ಮಗಳೂ ಇವೆ. ಜಗತ್ತಿನಲ್ಲಿ ನಡೆಯುವ ಎಲ್ಲ
ಕರ್ಮಗಳಿಗೂ ಅವನೇ ಪ್ರವರ್ತಕನಾಗಿರುವನು.
ನಖತೇ ತ್ಹತ್ ಕ್ರಿಯತೇ ಕಿಂಚನಾರೇ ।
-ಖಗ್ವೇದ, 10-113-9
ಪರಮಾತ್ಮನಿಲ್ಲದೆ ಜಗತ್ತಿನಲ್ಲಿ ಯಾವ ಕ್ರಮ, ವ್ಯವಹಾರಗಳೂ ನಡೆಯ
ಲಾರವು. ಭಗವಂತನ ಈ ಸ್ವಾತಂತ್ರ್ಯ ಹಾಗೂ ಸರ್ವಕರ್ಮ ಪ್ರವರ್ತಕತ್ವವನ್ನೇ
ಅಕರ್ಮಣಿ ಚಕರ್ಮಯಃ।
ಎಂಬಲ್ಲಿ ನಿರೂಪಿಸಲಾಗಿದೆ. ಆಯಾ ಜೀವರ ಅಸ್ವಾತಂತ್ರ್ಯ ಮತ್ತು ಪರಮಾತ್ಮನ
ಅವಲಂಬನೆ, ಶ್ರೀಹರಿಯ ಸ್ವಾತಂತ್ರ್ಯ ಮತ್ತು ಸರ್ವಕರ್ತೃತ್ವದ ಸ್ಮರಣೆ,
ಅನುಸಂಧಾನಗಳು ನಮ್ಮಲ್ಲಿ ಸದಾ ಜಾಗೃತವಿರಬೇಕೆಂಬುದೇ ಈ ಶ್ಲೋಕದ
ಭಾವಾರ್ಥವಾಗಿದೆ.
ಈ ಶ್ಲೊ ಕವನ್ನು ಅನೆ ಕರು ತಮ್ಮ ವಿಚಾರ ಕಲ್ಪ ನೆಗಳಿಗನುಸಾ ರವಾಗಿ ಬೇರೆ
ಬೇರೆರೀತಿಯಿಂದವ್ಯಾಖ್ಯಾನ ಮಾಡಿದ್ದಾರೆ. ಕರ್ಮವನ್ನು ಮಾಡುವುದು ಹಾಗೂ
ಬಿಡುವುದು ಇವೆರಡೂ ಭ್ರಮೆಯೇ ಆಗಿದೆ. ಕರ್ಮವನ್ನು ನಾವುಮಾಡುತ್ತಿರು
ವಾಗ ನಿಜವಾಗಿಯೂ ಈ ಕ್ರಿಯೆಯು ನಮ್ಮಲ್ಲಿ ಇರುವುದಿಲ್ಲ. ಆದರೆ ನಾವು
ಕರ್ಮವನ್ನು ಆಗರಿಸುತ್ತಿಲ್ಲವೆಂದು ಭಾವಿಸಿಕೊಂಡಿರುವ ಅವಸ್ಥೆಯಲ್ಲೂ
ನಮ್ಮಲ್ಲಿ ಕರ್ಮಗಳು ಇದ್ದೇ ಇರುತ್ತವೆ. ಆದ್ದರಿಂದ ಕರ್ಮ ಅಕರ್ಮ ಇವೆರಡೂ
ಅಸತ್ಯಗಳೇ ಆಗಿವೆ. ವಾಹನವು ಓಡುತ್ತಿರುವಾಗ ಮರ, ಗಿಡಗಳಲ್ಲಿ
ಚಲನವಲನಗಳನ್ನು ನಾವು ಕಾಣುತ್ತೇವೆ. ನಿಜವಾಗಿ ಅವು ಚಲಿಸುವುದಿಲ್ಲ.
ಅದರಂತೆ ನಮ್ಮಲ್ಲಿ ಕ್ರಿಯೆಗಳು ತೋರಿದರೂ ವಾಸ್ತವವಾಗಿ ಅವು ಸಂಭವಿಸಿಲ್ಲ
ಎಂದೇ ತಿಳಿಯಬೇಕು. ಬಹುದೂರದಲ್ಲಿದ್ದ ವ್ಯಕ್ತಿಯು ನಡೆಯುತ್ತಿದ್ದರೂ
ಆತನು ನಡೆಯದೆ ಒಂದೇ ಕಡೆ ಸ್ಥಿರವಾಗಿ ನಿಂತಿದ್ದಾನೆಂದು ನಾವು
ಭ್ರಮಿಸುವುದುಂಟು. ಆತನು ನಡೆಯುವುದಿಲ್ಲವೆಂದು ನಾವು ತಿಳಿದುಕೊಂಡಿ
ದ್ದರೂ ದೂರದಲ್ಲಿರುವ ಆತನು ಚಲಿಸುತ್ತಲೇ ಇರುವನು. ಅದರಂತೆ ನಾವು
ಕರ್ಮವನ್ನು ಮಾಡದೆಯೇ ನಿರ್ವ್ಯಾಪಾರರಾಗಿ ಇರುವೆವೆಂದು ಭಾವಿಸಿ
ಕೊಂಡಾಗಲೂನಮ್ಮಲ್ಲಿ ಈಕಾಲ್ಪನಿಕ ಕರ್ಮಗಳಕಿರುಕುಳ ಎದ್ದೇತೀರುವುದು.
ಕರ್ಮವು ಅಸತ್ಯವಾಗಿದ್ದರೂ ಸರ್ವದಾ ಅದರ ಉಪದ್ರವಕ್ಕೆ ನಾವು
ಗುರಿಯಾಗುತ್ತಲೇಇರುವೆವು ಎಂದು ಈ ಶ್ಲೋಕದ ವಿವರಣೆಯನ್ನು ಕೆಲವರು
ಮಾಡಿರುವರು. ಕರ್ಮಪ್ರಪಂಚವು ಸದಾ ನಮಗೆ ಅಂಟಿಕೊಂಡಿದ್ದರೂ ಅದು
ಕೇವಲ ಕಾಲ್ಪನಿಕವೆಂದು ಅವರ ದೃಷ್ಟಿಯಲ್ಲಿ ಶ್ಲೋಕದ ಭಾವಾರ್ಥವಾಗಿದೆ.
ಈ ನಿರೂಪಣೆಯು ಅತ್ಯಂತವಿಚಿತ್ರವೆಂದು ನಮಗನಿಸುತ್ತದೆ. ಇಷ್ಟರವರೆಗೆ
ಹಾಗೂ ಇನ್ನು ಮುಂದಿನ ಭಾಗದಲ್ಲಿ ನಿರ್ಬಂಧಪೂರ್ವಕವಾಗಿ ಅರ್ಜುನನಿಗೆ
ಕರ್ತವ್ಯಾಚರಣೆಯ ಬಗ್ಗೆ ಉಪದೇಶವನ್ನು ನೀಡಿದ ಪರಮಾತ್ಮನು ಈ ಪ್ರಸಂಗ
ಸಂದರ್ಭಗಳಿಗೆ ವಿರುದ್ಧವಾಗಿ ಕರ್ತವ್ಯ ಪ್ರಪಂಚವನ್ನು ಅಲ್ಲಗಳೆಯುವ ಈ
ಭಾವನೆಯನ್ನು ನೀಡಿದ್ದಾನೆಂದು ನಾವು ಹೇಗೆ ಭಾವಿಸೋಣ? ನಾವು
ಮಾಡುತ್ತಿರುವ ಕರ್ತವ್ಯಗಳೆಲ್ಲ ಸ್ವಪ್ನ ಪ್ರಪಂಚದಂತೆ ಅಸತ್ಯವಾಗಿದ್ದರೆ ಇದನ್ನು
ಬಹು ಪ್ರಯಾಸದಿಂದ, ಶ್ರದ್ಧೆಯಿಂದ ನಾವೇಕೆ ಅನುಷ್ಠಾನ ಮಾಡಬೇಕು?
ಮಹಾಪ್ರಯತ್ನದಿಂದಇಷ್ಟೆಲ್ಲ ಕರ್ಮದ ಹಗರಣಮಾಡಿದರೂ ನಮ್ಮ ಈ ಎಲ್ಲ
ಸಾಧನೆಗಳು "“ಇಲ್ಲ'' ಎನ್ನುವುದಾದರೆ ಮೊದಲಿನಿಂದಲೇ ಸುಮ್ಮನಿರುವುದು
ಲೇಸೆಂಬ ಭಾವನೆಯು ಉಂಟಾಗಲಾರದೆ? ಕರ್ಮ, ಅಕರ್ಮ ಇವೆರಡೂ
ಕಾಲ್ಪ ನಿಕವೆಂಬ ಉಪದೇಶದಿಂದ ಅರ್ಜುನನಿಗೆ ಕರ್ತವ್ಯದ ಪ್ರವೃತ್ತಿ ಯಾಗುವುದರ
ಬದಲು ಗೊಂದಲವನ್ನೇ ಉಂಟುಮಾಡಿದಂತಾಗುವುದು. ಇಂತಹ
ಅಪ್ರಾಸಂಗಿಕವಾದ ವರ್ತನೆಯನ್ನು ಭಗವಂತನಿಂದ ನಾವುನಿರೀಕ್ಷಿಸಲಾರೆವು.
ಇದರ ಮುಂದಿನ ಭಾಗದಲ್ಲೇ ಗೀತೆಯಲ್ಲಿ ಹೀಗೆ ಹೇಳಲಾಗಿದೆ:
ತ್ಯಕ್ತ್ವಾ ಕರ್ಮಫಲಾಸಂಗ ನಿತೃತೃಪ್ಪೋ ನಿರಾಶ್ರಯಃ |
ಕರ್ಮಣ್ಯಭಿಪ್ರವೃತ್ತೋಷಷಿ ನೈವ ಕಿಂಚಿತ್ ಕರೋತಿ ಸಃ ॥
ಈ ಶ್ಲೋಕದಲ್ಲಿ ಕರ್ಮದಲ್ಲಿ ಅಕರ್ಮವನ್ನು ಕಾಣುವ ವಿಧಾನವನ್ನು
ವಿವರಿಸಲಾಗಿದೆ. ಫಲಾಸಕ್ತಿಯಿಲ್ಲದೆ ನಿರಹಂಕಾರಿಯಾಗಿ ಕರ್ಮಗಳನ್ನು
ಆಚರಿಸುತ್ತಿದ್ದವನು ಕರ್ಮಿಯಾಗಿದ್ದರೂ ಅಕರ್ಮಿಯೆನಿಸಿಕೊಳ್ಳುವನು ಎಂದು
ಈ ಶ್ಲೋಕದ ಅಭಿಪ್ರಾಯವಾಗಿದೆ.
ಕರ್ಮದಲ್ಲಿ ಅಕರ್ಮವನ್ನು ಕಾಣುವುದೆಂದರೆ ಕರ್ಮತ್ಯಾಗವಲ್ಲ. ಆಚರಿಸಿದ
ಕರ್ಮವನ್ನು ಅಸತ್ಯವೆಂದು ಭಾವಿಸುವುದೂ ಅಲ್ಲ. ಆಸಕ್ತಿ ಅಹಂಕಾರಗಳಿಂದ
ವಿರಹತವಾದ ಕರ್ಮಾನುಷ್ಠುನವೇ ಅಕರ್ಮ ಎನ್ನುವುದನ್ನು ಗೀತಾಚಾರ್ಯನೇ
ಇಲ್ಲಿ ಸ್ಪಷ್ಟವಾಗಿ ನಿರೂಪಿಸಿದ್ದಾನೆ. ""ಕರ್ಮಣ್ಯಕರ್ಮ ಯಃ ಪಶ್ಯೇತ್''
ಎನ್ನುವುದರ ಅರ್ಥವನ್ನು ವಿವೇಚಿಸುವಾಗ ಅದರ ಮುಂದೆಯೇ ಇರುವ ಈ
ಶ್ಲೋಕದ ಭಾವಾರ್ಥವನ್ನು ಗಮನದಲ್ಲಿಟ್ಟುಕೊಂಡರೆ ಯಾವ ಗೊಂದಲವೂ
ಇಲ್ಲದೆ ಈ ಒಗಟು ಮಾತಿನ ತಾತ್ಪರ್ಯವನ್ನು ಗ್ರಹಿಸಬಲ್ಲೆವು.
ಪ್ರಪಂಚವಾಗಲಿ ನಾವು ನೋಡುತ್ತಿರುವ ಕರ್ಮವಾಗಲಿ ಅಸತ್ಯ ಎಂಬ
ವಿಚಾರವು ಭಗವದ್ಗೀತೆಯಲ್ಲಿ ಎಲ್ಲಿಯೂ ನಿರೂಪಿತವಾಗಿರುವುದಿಲ್ಲ.
ಗೀತೆಯು ಹೆಜ್ಜೆ ಹೆಜ್ಜೆಗೂ ಬೋಧಿಸಿದ ಕರ್ಮಯೋಗದ ಸಿದ್ಧಾಂತಕ್ಕೆ ಇದು
ಅತ್ಯಂತವಿರೋಧಿಯೂ ಆಗುವುದು. ಬ್ರಹ್ಮನಸಾಕ್ಷಾತ್ಯಾರವನ್ನು ಪಡೆದವನಿಗೂ
ಗೀತೆಯು ಕರ್ತವ್ಯದ ಬೋಧೆಯನ್ನು ಮಾಡಿದೆಯೆಂದು ಎಲ್ಲರೂ
ಅಂಗೀಕರಿಸುತ್ತಾರೆ. ಭಗವಂತನೇ ಸಾಕ್ಷಾತ್ ತನ್ನ ಉದಾಹರಣೆಯನ್ನು ನೀಡಿ
ಎಲ್ಲರೂ ಕರ್ತವ್ಯವನ್ನಾಚರಿಸಬೇಕೆಂದು ಆದೇಶವನ್ನು ನೀಡಿರುವನು.
ಕುರ್ಯಾದ್ ವಿದ್ವಾನ್ ತಥಾನಸಕ್ತಃ |
ಎಂದು ಜ್ಞಾನಿಯಾದವನು ಕರ್ಮವನ್ನು ಆಚರಿಸಬೇಕೆಂದು ಗೀತೆಯಲ್ಲಿ ಸ್ಪಷ್ಟವಾಗಿ
ಪ್ರತಿಪಾದಿಸಲಾಗಿದೆ. ಕರ್ಮವು ಮಿಥ್ಯೆಯೆಂದೂ ಜ್ಞಾನವನ್ನು ಪಡೆದಮೇಲೆ
ಕರ್ಮಾಚರಣೆಯು ಬೇಡವೆಂದೂ ಬಲವಾಗಿ ಪ್ರತಿಪಾದಿಸುವ
ಶಂಕರಾಚಾರ್ಯರೂ ""ತ್ಯಕ್ತಾ ದ ಕರ್ಮಫಲಾಸಂಗಂ'' ಎಂಬ ಶ್ಲೊ ೇಕದಲ್ಲಿ
ಬ್ರಹ್ಮಜ್ಞಾನಿಗೂ ಕರ್ತವ್ಯದ ಸಂಬಂಧವನ್ನು ನಿರೂಪಿಸಲಾಗಿದೆ ಎಂಬುದನ್ನು
ಒಪ್ಪಿಕೊಂಡಿರುವರು. ಅಂತೂ ಜ್ಞಾನವನ್ನು ಪಡೆದ ಮೇಲೂ
ಕರ್ತವ್ಯಾಚರಣೆಯನ್ನು ಗೀತೆಯು ಬೋಧಿಸಿದೆ ಎನ್ನುವುದರಲ್ಲಿ ಏನೂ
ವಿವಾದವಿಲ್ಲ. ಕರ್ಮವುಮಿಠ್ಯೆಯೆಂದು ಗೀತೆಯ ಅಭಿಪ್ರಾಯವಿದ್ದಲ್ಲಿ ಜ್ಞಾನಿಗೆ
ಗೀತೆಯು ಕರ್ಮವನ್ನು ಬೋಧಿಸಿರುವುದು ಹೇಗೆ ಉಚಿತವಾಗುವುದು? ಕರ್ಮವು
ಮಿಠ್ಕೆಯಾದಲ್ಲಿ ಬ್ರಹ್ಮದರ್ಶನದ ಅನಂತರ ಅದನ್ನು ಆಚರಿಸುವುದು ಹೇಗೆ?
ಹಗ್ಗವನ್ನು ಹಾವೆಂದು ಭ್ರಮಿಸಿದವನಿಗೆ ಹಗ್ಗದ ಸರಿಯಾದ
ತಿಳುವಳಿಕೆಯುಂಟಾದಾಗಹಾವಿನ ಭ್ರಮೆ ಉಳಿಯುವುದಿಲ್ಲ. ಅದರಂತೆ ಭ್ರಮೆಯ
ದೆಶೆಯಲ್ಲಿ ಜಗತ್ತುಮತ್ತು ಕರ್ಮಗಳ ಕಲ್ಪನೆ ಇದ್ದರೂ ಇವು ಅಸತ್ಯವಾಗಿದ್ದರೆ,
ಸತ್ಯ ದರ್ಶನವನ್ನು ಪಡೆದ ಬ್ರಹ್ಮಜ್ಞಾನಿಗೆ ಇವು ಯಾವವೂ ಗೋಚರವಾಗಲಾರವು.
ಯಥಾರ್ಥ ದರ್ಶನದ ನಂತರವೂ ಯಾವುದು ಉಳಿದಿದೆಯೋ ಅದು ಅಸತ್ಯದ
ಗುಂಪಿಗೆ ಸೇರಲಾರದು. ಬ್ರಹ್ಮಜ್ಞಾನವನ್ನು ಪಡೆದವನೂ ಜಗತ್ತಿನಲ್ಲಿದ್ದು
ಕರ್ತವ್ಯವನ್ನು ಸಲ್ಲಿಸುತ್ತಿದ್ದರೆ ಈ ಪ್ರಪಂಚಮತ್ತು ಅವನು ಆಚರಿಸುವಕರ್ಮಗಳು
ಮಾಯಿಕವೆಂದೂ ಅಸತ್ಯವೆಂದೂ ಹೇಗೆ ಹೇಳುವುದು? ಯಥಾರ್ಥವಾದ
ಬ್ರಹ್ಮದರ್ಶನವನ್ನು ಪಡೆದ ನಂತರವೂ ಗೋಚರವಾಗಿರುವ ಈ ಕರ್ಮ
ಪ್ರಪಂಚವೂ ಅದರ ಆಧಾರವಾಗಿರುವ ಈ ಜಗತ್ತೂ ಸತ್ಯವೆಂಬುದೇ ಗೀತೆಯ
ಆಶಯವಾಗಿದೆ. ಆದುದರಿಂದ" ಕರ್ಮಣ್ಯಕರ್ಮ ಯಃಪಶ್ಕೇತ್'' ಈ ಶ್ಲೋಕವೂ
ಕರ್ಮದ ಅಸತ್ಯತೆಯನ್ನು ಪ್ರತಿಪಾದಿಸುತ್ತಿದೆ ಎನ್ನುವುದು ಗೀತೆಯ ಮೂಲ
ಪ್ರತಿಪಾದನೆಗೇ ವಿರೋಧಿಯಾಗಿದೆ.
Bannanje Govindacharya (1936–2020)Bhagavad Gita Pravachana
ಯಸ್ಯ ಸರ್ವೇ ಸಮಾರಂಭಾಃ ಕಾಮ ಸಂಕಲ್ಪವರ್ಜಿತಾಃ
ಜ್ಞಾನ ಅಗ್ನಿ ದಗ ಕರ್ಮಾಣಮ್ ತಮ್ ಆಹುಃ ಪಂಡಿತಮ್ ಬುಧಾಃ -- ಮಾಡುವ ಬಯಕೆ, ಪಡೆಯುವ
ಬಯಕೆಗಳನ್ನು ತೊರೆದು ಎಲ್ಲಾ ಕರ್ಮಗಳಲ್ಲೂ ತೊಡಗುವವನು ಅರಿವಿನ ಬೆಂಕಿಯಿಂದ ಕರ್ಮಗಳನ್ನು
ಸುಟ್ಟವನು. ಬಲ್ಲವರು ಅಂಥವನನ್ನು ಪಂಡಿತ ಎನ್ನುತ್ತಾರೆ.
ನಮ್ಮ ಜೀವನದ ತೊಡಗುವಿಕೆಯ ಹಿಂದೆ ಒಂದು ಕಾಮನೆ,ಸಂಕಲ್ಪ ಇರುತ್ತದೆ. ನಾನು ಸುಖ ಪಡಬೇಕು, ನನ್ನ
ಮನೆಮಂದಿಯನ್ನು ಸುಖವಾಗಿಡಬೇಕು ಎನ್ನು ವ ಕಾಮನೆ. ಇದಕ್ಕಾಗಿ ಇನ್ಯಾವುದೋ ವಿಧಾನವನ್ನು
ಅನುಸರಿಸುತ್ತೇವೆ. ಇದು ಪ್ರತಿಯೊಂದು ಕ್ರಿಯೆಯ ಹಿಂದೆ ಮನುಷ್ಯನನ್ನು ಕಾಡುವ ಸಮಸ್ಯೆ. ತನ್ನ ಬಯಕೆಯ
ಈಡೇರಿಕೆಗಾಗಿ ನಮ್ಮನ್ನು ನಾವು ತೊಡಗಿಸಿಕೊಳ್ಳುತ್ತೇವೆ. ಯಾರಿಗೆ ತನ್ನ ತೊಡಗುವಿಕೆಯಲ್ಲಿ ಬಯಕೆಗಳ ಸ್ಪರ್ಶ
ಇಲ್ಲವೋ ಅವನು ಪಂಡಿತ. ಒಬ್ಬ ಪಂಡಿತನ ಪಾಂಡಿತ್ಯವನ್ನು ಅವನ ನುಡಿಯಲ್ಲಿ ಅಲ್ಲ, ನಡೆಯಲ್ಲಿ ಕಾಣಬೇಕು.
ನಿನ್ನ ಜೀವನದಲ್ಲಿ ಹೀಗೇ ಆಗಬೇಕು, ಹೀಗೇ ಮಾಡಬೇಕು, ಅದರಿಂದ ಇಂತಹದ್ದೇ ಸಿಗಬೇಕು ಅನ್ನುವ ಬಯಕೆ,
ಆಸೆಗಳನ್ನು ಬಿಟ್ಟು ನಿರಾಳವಾಗಿ ಕರ್ತವ್ಯ ಮಾಡು. ಭಗವಂತ ಏನು ಕೊಡುತ್ತಾನೆ ಅದನ್ನು ಪ್ರಸಾದವಾಗಿ
ಸ್ವೀಕರಿಸು. ಏನು ಬಂತೋ ಅದರಲ್ಲಿ ತೃಪ್ತಿಪಡುವುದನ್ನು ಕಲಿ. ಇಲ್ಲವಲ್ಲಾ ಎಂದು ಸಂಕಟ ಪಡಬೇಡ. ಇದು
'ಕಾಮಸಂಕಲ್ಪ ವರ್ಜ್ಯ. [ಏನೂ ಬೇಡ ಎಂದು ಬಯಸುವುದಲ್ಲ, ಇಂತದ್ದೇ ಬೇಕು ಎಂದು ಬಯಸದೇ ಇರುವುದು
ಕಾಮಸಂಕಲ್ಪವರ್ಜ್ಯ]. ಏನು ಬಂತೋ ಬರಲಿ, ನೀನು ಪ್ರಯತ್ನಶೀಲನಾಗು. ಬಂದದ್ದರಲ್ಲಿ ಸಂತೋಷದಿಂದ
ಬದುಕು. ಇಂತಹ ಅರಿವಿನಿಂದ ಮಾಡಿದ ಕರ್ಮ ಸ್ವಚ್ಛವಾಗಿರುತ್ತದೆ. ಇದು ಕರ್ಮದ ಕೊಳೆ ಅರಿವಿನ ಬೆಂಕಿಯಿಂದ
ಸ್ವಚ್ಛವಾಗುವಿಕೆ. ಇಂತಹ ನಡೆ ಉಳ್ಳವನು ಪಂಡಿತ ಎನಿಸುತ್ತಾನೆ. ಇಂತವರನ್ನು ಜ್ಞಾನಿಗಳು “ಜ್ಞಾನಿಗಳೆಂದು'
ಗುರುತಿಸುತ್ತಾರೆ. ಮನುಷ್ಯ ಏನನ್ನು ಹೇಳುತ್ತಾನೆ ಅದು ಮುಖ್ಯವಲ್ಲ, ಏನನ್ನು ರೂಢಿಸಿಕೊಳ್ಳುತ್ತಾನೆ ಅದು
ಮುಖ್ಯ. ಮನಸ್ಸಿನ ತುಂಬಾ ಆಸೆಗಳನ್ನು ತುಂಬಿಕೊಂಡು ಯಾವುದ್ಯಾವುದೋ ಆಸೆಯ ಬೆನ್ನುಹತ್ತಿ ಸೋಗು
ಹಾಕಿಕೊಂಡು ಬದುಕುವವನು ಎಂದೂ ಎತ್ತರಕ್ಕೇರಲಾರ.
Bibek Debroy (1955–2024)The Bhagavad Gita
(19)
‘He whose efforts are always devoid of desire for fruit and ego,25 he whose
actions have been burnt by the fire of knowledge, the learned call him
wise.’