4.28

द्रव्ययज्ञास्तपोयज्ञा योगयज्ञास्तथापरे ।
स्वाध्यायज्ञानयज्ञाश्च यतयः संशितव्रताः ॥
dravyayajñāstapoyajñā yogayajñāstathāpare |
svādhyāyajñānayajñāśca yatayaḥ saṃśitavratāḥ ||
Swami Sivananda (1887–1963)Bhagavad Gita
28. Some again offer wealth, austerity and Yoga as sacrifice, while the ascetics of self-restraint and rigid vows offer study of scriptures and knowledge as sacrifice.
Sri Vishwesha Tirtharu (1931–2019)Gitasaroddhara
4.26–4.32 · ಯಜ್ಞದ ವಿವಿಧ ಪ್ರಕಾರಗಳು
ಯಜ್ಞದ ವಿವಿಧ ಪ್ರಕಾರಗಳು ಪರಮಾತ್ಮ. ನ ಸ್ವಾತಂತ್ರ್ಯ, ಸರ್ವಕರ್ತೃತ್ವ ಗಳನ್ನು ಸರ್ವದಾ ಸ್ಥ ರಿಸಿಕೊಂಡು ದ್ರ ಫಲಾಶೆಗಳಿಲ್ಲದೆ ಭಗವಂತನ ಸೇವಾರೂಪವಾಗಿ ಸ್ವಧರ್ಮವನ್ನಾಚರಿಸು ವುದೇ ನಿಜವಾದ ಕರ್ಮಾಚರಣೆಯಾಗಿದೆ. ಯಜ್ಞ! ರೂಪವಾದ ಇಂತಹ ಕರ್ಮವು ನಮಗೆ ಸಂಸಾರ ಬಂಧನಕ್ಕೆ ಪೋಷಕವಾಗುವುದಿಲ್ಲಎಂಬುದೇ ಇಷ್ಟರವರೆಗಿನ ಗೀತೋಪದೇಶದ ಮಥಿತಾರ್ಥವಾಗಿದೆ. ಯಜ್ಞ ರೂಪವಾದ ಈ ಕರ್ಮದ ವಿವಿಧ ರೀತಿಗಳನ್ನು ಈ ನಾಲ್ಕನೆಯ ಅಧ್ಯಾಯದಲ್ಲಿ ಪರಮಾತ್ಮನು ವಿವರಿಸುತ್ತಾನೆ: ದ್ರವ್ಯಯಜ್ಞಾಸ್ಪಪೋಯಜ್ನಾಃ ಯೋಗಯಜ್ಞಾ ಸ್ರಥಾಪರೇ | ಸ್ವಾಧ್ಯಾಯಜ್ಞಾನಯಜ್ಞಾತ್ಹ ಯತಯಃ ಸಂಶಿತವ್ರತಾಃ ॥ ಏವಂ ಬಹುವಿಧಾ ಯಜ್ಞಾ ವಿತತಾ ಬ್ರಹ್ಮಣೋ ಮುಖೇ | ಪರಮಾತ್ಮನ ಪ್ರೀತಿಯಾಗಲಿ ಎಂಬ ಉದ್ದೇಶದಿಂದ ಕಾಮರಾಗಾದಿಗಳು ಇಲ್ಲದೆ ಮಾಡುವಕಾರ್ಯಗಳೆಲ್ಲವೂ ಯಜ್ಞಗಳೇ. ಅಗ್ನಿಯಲ್ಲಿ ಆಹುತಿಯನ್ನು ನೀಡಿ ನಡೆಸಲಾಗುವ ಪ್ರಸಿದ್ಧವಾದ ಯಜ್ಞವನ್ನು ಸಂನ್ಯಾಸಿಗಳು ಮಾಡಬಾರದು ಎಂದಿದೆ. ಆದರೆ ಗೀತೆಯಲ್ಲಿ ನಿರೂಪಿಸಿದ ಯಜ್ಞಕ್ಕೆ ಎಲ್ಲರೂ ಅಧಿಕಾರಿಗಳೇ. ಯೋಗಿಗಳು ಮಾಡುವ ಭಗವದುಪಾಸನೆಯೂ ಸಾಧಕರು ನಡೆಸುವ ಇಂದ್ರಿಯನಿಗ್ರಹ ಉಪವಾಸ ಪ್ರಾಣಾಯಾಮಾದಿಗಳೂ ವಿದ್ವಾಂಸರ ಪಾಠಪ್ರವಚನಗಳೂ ಎಲ್ಲವೂ ಯಜ್ಞಗಳೇ ಆಗಿವೆ. ಹೆಚ್ಚೇಕೆ, ಇಂದ್ರಿಯಗಳಿಂದ ನಡೆಯುವ ವಿಷಯೋಪಭೋಗವ್ಯವಹಾರವೂ ಕೂಡ ಯಜ್ಞವೇ ಆಗುವುದು. ಶಬ್ದಾದೀನ್‌ ವಿಷಯಾನನ್ಯೇ ಇಂದ್ರಿಯಾಗ್ನಿಷು ಜುಹ್ಹತಿ | ಇಂದ್ರಿಯವೆಂಬ ಅಗ್ನಿಯಲ್ಲಿ ರೂಪ, ರಸಮುಂತಾದ ಹವಿಸ್ಸನ್ನು ಕೆಲವರು ಹೋಮಿಸುವರೆಂದು ವಿಷಮೋಪಭೋಗದ ಯಜ್ಞವನ್ನು ವರ್ಣಿಸಲಾಗಿದೆ. ಶರೀರವೂ ಪರಮಾತ್ಮನ ಸೇವೆಗೆ ಉಪಕರಣವೆಂದು ಬಗೆದು ಸೇವಾಕಾರ್ಯವು ಅವ್ಯಾಹತವಾಗಿ ನಡೆಯಲೆಂಬ ಭಾವನೆಯಿಂದ ನಿರಭಿಮಾನದಿಂದ ಶರೀರ ಪೋಷಣೆಗಾಗಿ ಆಹಾರಾದಿ ಪದಾರ್ಥಗಳನ್ನು ಸ್ವೀಕರಿಸಿದರೆ ಅದೂಪವಿತ್ರವಾದ ಯಜ್ಞವೆನಿಸುವುದು. ಯಾಂತ್ರಿಕನು ತನ್ನ ಯಂತ್ರವು ಸರಿಯಾಗಿ ಕೆಲಸ ಮಾಡಲೆಂದು ಅದಕ್ಕೆ ಎಣ್ಣೆಯನ್ನು ಹಾಕುವಂತೆ ಶರೀರವೂ ಒಂದು ಯಂತ್ರೋಪಕರಣವೆಂದು ಭಾವಿಸಿ ಅದಕ್ಕೆ ಪೋಷಕದ್ರವ್ಯವನ್ನು ಜ್ಞಾನಿಯು ನೀಡುವನು. ಈ ಸಂದರ್ಭದಲ್ಲಿ ಅವನಲ್ಲಿ ಯಾವುದೇ ಚಿತ್ತೋದ್ರೇಕ ವಿಕಾರಗಳಿಗೆ ಅವಕಾಶವಿರುವುದಿಲ್ಲ. ಇಂತಹ ಮಾನಸಿಕ ಸುಸ್ಥಿತಿಯಿಂದ ನಡೆಸ ಲಾಗುವ ಆಹಾರಾದಿ ಸೇವನೆಯಾಗಲಿ ಇತರ ಎಲ್ಲ ದೈನಂದಿನ ಶಾರೀರಿಕ ವ್ಯವ ಹಾರಗಳಾಗಲಿ ಯಜ್ಞದ ಪ್ರಭೇದಗಳೆಂದೇ ಗೀತೆಯಲ್ಲಿ ಪರಿಗಣಿಸಲಾಗಿದೆ. ಛಾಂದೋಗ್ಯೋಪನಿಷತ್ತಿನಲ್ಲಿ ಜೀವನವನ್ನೇ ಒಂದು ಯಜ್ಞವೆಂದು ಕರೆಯಲಾಗಿದೆ. ಪರಮಾತ್ಮನ ಸೇವೆಗಾಗಿಯೇ ತನ್ನ ಜೀವನದ ಸಕಲ ವ್ಯವಹಾರಗಳನ್ನು ಮೀಸಲಾಗಿರಿಸಿದ ಪುಣ್ಯಪುರುಷನ ಜೀವನವೇ ಒಂದು ಪರಮಯಜ್ಞವೆನಿಸುವುದು. ಎಲ್ಲಿ ತ್ಯಾಗವಿದೆಯೋ ಎಲ್ಲಿ ಭಗವಂತನಲ್ಲಿ ಸಮರ್ವಣಬುದ್ಧಿ ಇದೆಯೋ ಅಲ್ಲೇ ಯಜ್ಞದ ನಿಜವಾದ ತಿರುಳು ಇದೆ. ಪವಿತ್ರವಾದ ಜೀವನದಲ್ಲಿ ಈ ಭಾವವು ಸಂಪೂರ್ಣವಾಗಿ ಅನುಸ್ಕೂತ ವಾಗಿರುವುದರಿಂದ ಅದನ್ನು ಯಜ್ಞವೆಂದು ಕರೆದಿರುವುದು ಸಹಜವೇ ಆಗಿದೆ. ಯಜ್ಞದಲ್ಲಿ ದಕ್ಷಿಣೆಗೆ ಪ್ರಾಮುಖ್ಯವಾದ ಸ್ಥಾನವಿರುವುದು. ದಕ್ಷಿಣೆಯಿಲ್ಲದ ಯಜ್ಞವು ಫಲಕಾರಿಯಾಗಲಾರದು. ಜೀವನ ಯಜ್ಞದಲ್ಲಿ ದಕ್ಷಿಣೆಯು ಯಾವುದೆಂಬುದನ್ನು ವಿವೇಚಿಸಿ ಸತ್ಯ, ದಯೆ, ಅಭಯಗಳೇ ದಕ್ಷಿಣೆಗಳೆಂದು ಉಪನಿಷತ್ತು ನಿರೂಪಿಸಿದೆ. ಈ ಸದ್ಗುಣಗಳಿಂದಲೇ ನಮ್ಮ ಜೀವನಯಜ್ಞವು ಪರಿಪೂರ್ಣತೆಯನ್ನೂ ಸಾಫಲ್ಯವನ್ನೂ ಪಡೆಯಬಲ್ಲದು. ಮರಣವೇ ಈ ಯಜ್ಞದ ಅವಭೃಥವೆಂದು ಮಾರ್ಮಿಕವಾಗಿ ಕೊನೆಯಲ್ಲಿ ವರ್ಣಿಸಲಾಗಿದೆ. ನಿಜವಾದ ಜ್ಞಾನಿಯೂ ಕರ್ತವ್ಯನಿರತನೂ ಆದ ವ್ಯಕ್ತಿಯು ಮರಣಕ್ಕೆ ಅಂಜುವುದಿಲ್ಲ. ಮರಣವೊಂದು ವರದಾನ ಎಂದು ಬಗೆದು ಅದನ್ನು ಆದರದಿಂದರೇ ಎದುರಿಸುವನು. ಯಜ್ಞವನ್ನು ಅನುಷ್ಠಾನ ಮಾಡುವವರು ಅವಭೃಥಸ್ನಾನಕ್ಕೆ ಉತ್ಸಾಹದಿಂದ ಹಾತೊರೆಯುವಂತೆ ತನ್ನ ಜೀವನದ ಪರಮಸಿದ್ಧಿಯನ್ನು ಪಡೆಯುವುದಕ್ಕಾಗಿ ಮರಣವನ್ನು ಆನಂದದಿಂದ ಕರ್ಮಯೋಗಿಗಳು ಸ್ವಾಗತಿಸಬಲ್ಲರು. ಹೀಗೆ ಯಜ್ಞವನ್ನು ಅತ್ಯಂತ ವಿಸ್ತೃತವಾದ ಅರ್ಥದಲ್ಲಿ ನಮಗೆ ಗೀತೆಯು ತೋರಿಸಿದೆ. ತಾನು, ತನ್ನದು ಎಂಬ ಪರಿಮಿತ ವರ್ತುಲದಲ್ಲಿಯೇ ತಿರುಗುತ್ತ ಸ್ವಾರ್ಥಕ್ಕಾಗಿಯೇ ಜೀವನದ ಎಲ್ಲ ವ್ಯವಹಾರಗಳನ್ನೂ ನಡೆಸುವ ಭೋಗಜೀವನದಿಂದ ನಮ್ಮನ್ನು ಪರಾವೃತ್ತಗೊಳಿಸಿ ಲೋಕಕ್ಕಾಗಿ, ಲೋಕದ ಅಂತರ್ಯಾಮಿಯಾದ ಭಗವಂತನಿಗಾಗಿ, ತನ್ನ ಜೀವನವನ್ನು ಧಾರೆ ಎರೆಯುವ ತ್ಯಾಗಜೀವನವನ್ನು ಗೀತೆಯು ನಮಗೆ ಬೋಧಿಸಿದೆ. ಸ್ವರ್ಗ, ಸಂಪತ್ತು ಮೊದಲಾದ ಲೌಕಿಕ ಸುಖಗಳನ್ನು ಪಡೆಯುವುದಕ್ಕಾಗಿ ವಿವಿಧ ದೇವತೆಗಳ ಹೆಸರಿನಲ್ಲಿ ಅಗ್ನಿಯಲ್ಲಿ ಫೃತ, ಹವಿಸ್ಸುಗಳನ್ನು ಪ್ರಕ್ಷೇಷಿಸುವುದೇ ಯಜ್ಞವೆಂದು ಭಾವಿಸಿದ ಜನತೆಗೆ ಯಜ್ಞದ ವಿಸ್ತಾರವಾದ ಭವ್ಯರೂಪವನ್ನು ಗೀತೆಯಲ್ಲಿ ವಿವರಿಸಲಾಗಿದೆ. ಸ್ವಾಮಿಯು ತನ್ನ ವಿಶ್ವರೂಪವನ್ನು ಅರ್ಜುನನಿಗೆ ತೋರಿಸಿ ದಂತೆ ಗೀತೆಯಲ್ಲಿ ಯಜ್ಞದ ವಿಶ್ವರೂಪವನ್ನು ನಮಗೆತೋರಿಸಿರುವನು. ಲೌಕಿಕ ಯಜ್ಞದಲ್ಲಿ ಪಶುವಧೆಯೂ ಒಂದು ಅಂಗವಾಗಿ ಪರಿಗಣಿತವಾಗಿದೆ. ಗೀತೆಯು ಬೋಧಿಸಿದ ಯಜ್ಞದಲ್ಲಿ ನಾವು ವಧಿಸಬೇಕಾಗಿರುವ ವಶುಗಳೆಂದರೆ ನಮ್ಮ ಒಳಗಿರುವ ಅಹಂಕಾರ, ಮಮತೆಗಳೇ ಆಗಿವೆ. ಭೋಗಲಾಲಸೆಗೆ ಪರವಶರಾದ ಜನರು ಪಶುಗಳಂತೆ ಸ್ವೇಚ್ಛಾ ಪ್ರವೃತ್ತರಾಗಿ ಅವಿವೇಕದಿಂದ ವರ್ತಿಸುತ್ತಾರೆ. ನಮ್ಮಲ್ಲಿ ಹುದುಗಿರುವ ಈ ಪಶುತ್ವವನ್ನು ವಧಿಸುವುದೇ ಗೀತೆಯು ವಿಧಿಸುವ ಯಜ್ಞದ ಪವಿತ್ರಬಲಿಯಾಗಿದೆ. ಮಮತೆ, ಮೋಹಗಳಿಗೆ ಒಳಗಾದ ಜನರು ಎಲ್ಲವನ್ನು ಮೇಕೆಯಂತೆ ""ಮೇ ಮೇ" -ನನ್ನದು ನನ್ನದೆಂದೇ ಅನ್ನುವರು. ಇಂತಹ ಸ್ವಾರ್ಥ ಪಶುವಿನ ವಿಹಾರ ಭೂಮಿಯಾಗಿದೆ ನಮ್ಮ ಜೀವನ. ಇದಮದ್ಯಮಯಾ ಲಬ್ಧಂ ಇಮಂ ಪ್ರಾಪ್ಟ್ಯೇ ಮನೋರಥಂ। ಈಹಂತೇ ಕಾಮಭೋಗಾರ್ಥಮನ್ಯಾಯೇನಾರ್ಥಸಂಚಯಾನ್‌ । ಪ್ರಪಂಚದಲ್ಲಿ ಯಾವುದು ಕಾಣಸಿಗುತ್ತದೋ ಅದೆಲ್ಲ ತನ್ನದಾಗಬೇಕೆಂದು ಇವರು ಸದಾ ಬಡಬಡಿಸುತ್ತಾ ರೆ. ಇಂದು ಇದನ್ನು ಪಡೆದಿದ್ದೇನೆ, ನಾಳೆ ಇನ್ನೊಂದನ್ನು ಪಡೆಯಬೇಕೆಂಬುದೇ ಇಂತಹವರ ಮಂತ್ರ, ಚಿಂತನೆಗಳು. ಸಂಪತ್ತನ್ನು ಅಭಿವೃದ್ಧಿಪಡಿಸಲು, ಅಧಿಕಾರಕ್ಕೆ ಕೊನೆಯವರೆಗೂ ಅಂಟಿಕೊಳ್ಳಲು ಯಾವ ಕ್ಕತ್ಯ ಅವ್ಯವಹಾರಗಳನ್ನು ಮಾಡಲೂ ಇಂತಹ ಜನರು ಅಂಜುವದಿಲ್ಲ, ಇಂದು ಇಂತಹ ಪ್ರವೃತ್ತಿಯನ್ನು ಎಲ್ಲ ರಂಗಗಳಲ್ಲೂ ಬಹಳ ಅಸಹನೀಯವೆನ್ನುವ ಸ್ಥಿತಿಯಲ್ಲಿ ನಾವು ನೋಡುತ್ತಲೇ ಇದ್ದೇವೆ. ಗೀತೆಯು ನಿರೂಪಿಸಿದ ಈ ಯಜ್ಞದೃಷ್ಟಿಯು ನಮ್ಮ ಜೀವನದ ಎಲ್ಲ ರಂಗಗಳಲ್ಲೂ ವ್ಯಾಪಿಸಿದರೆ ಮಾತ್ರ ಈ ವಿಕಲ್ಪ ವಿಕಾರಗಳ ನಿರ್ನಾಮವಾಗಬಲ್ಲದು. ಈ ಸ್ವಾರ್ಥಪಶುವಿನ ಬಲಿದಾನ ಮಾಡಿ ವಿಶ್ವದ ಅಧಿದೇವತೆಯಾದ ಭಗವಂತನಿಗೆ ನಮ್ಮದೆಲ್ಲವನ್ನೂ ಅರ್ಪಿಸಿ ಅವನ ಪೂಜಾರೂಪವಾಗಿ ವಿಶ್ವಜತಕರವಾದ ಸೇವಾಕಾರ್ಯಗಳನ್ನೆಲ್ಲ ನಡೆಸುವುದೇ ಈ ಜೀವನವ್ಯಾಪಿ ಪವಿತ್ರ ಯಜ್ಞವಾಗಿದೆ. ಇದೇ ಭಗವಂತನ ನಿಜವಾದ ಮಹಾಪೂಜೆಯೆನಿಸುವುದು. ಪ್ರಾತಃಪ್ರಭೃತಿಸಾಯಾಂತಂ ಸಾಯಾದಿ ಪ್ರಾತರಂ ತತಃ | ಯತ್‌ ಕರೋಮಿ ಜಗನ್ನಾಥ ತದಸ್ತುತವ ಪೂಜನಂ ॥ -ಪಂಚರಾತ್ರ ಎಂದು ಹೇಳಿದಂತೆ ಬೆಳಗಿನಿಂದ ಸಾಯಂಕಾಲದವರೆಗೆ ನಾವು ಮಾಡುವ ಎಲ್ಲ ಕಾರ್ಯಗಳೂ ಪರಮಾತ್ಮನ ಪೂಜೆಯೆನ್ನುವ ರೀತಿಯಲ್ಲಿ ನಾವು ವ್ಯವಹರಿಸಬೇಕು. ದಿನಕ್ಕಿಒಂದುಘಂಟೆಯಾಗಲಿವಾರಕ್ಕೆ ಒಂದು ದಿನವಾಗಲಿ ದೇವರಪೂಜಿಯನ್ನು ಮಾಡಿ, ದೇವರನ್ನು, ಧರ್ಮವನ್ನು ಗುಡಿಯೊಳಗಾಗಲಿ ಪೆಟ್ಟಿಗೆಯಲ್ಲಾಗಲಿ, ನಮಗೂ ಅದಕ್ಕೂ ಮುಂದಿನ ಪೂಜಾಪ್ರಾರ್ಥನೆಗಳವರೆಗೆ ಸಂಬಂಧವೇ ಇಲ್ಲವೆನ್ನುವರೀತಿಯಲ್ಲಿ ಬಿಟ್ಟುಉಳಿದ ಸಮಯದಲ್ಲಿ ವ್ಯವಹರಿಸುವ ಧರ್ಮ ವನ್ನು ಗೀತೆಯು ನಮಗೆ ಬೋಧಿಸುತ್ತಿಲ್ಲ. ಧರ್ಮವು ಜೀವನವ್ಯಾಪಿಯಾಗಿ ರಬೇಕು. ಧರ್ಮವು ಜೀವನದ ಒಂದು ಅಂಗವಾಗಿರದೆ ಜೀವನದ ಎಲ್ಲ ರಂಗಗಳಿಗೂ ಚೈತನ್ಮದಾಯಿಯಾಗಿ, ಅದು ಶರೀರಕ್ಕೆ ಆತ್ಮದಂತೆ ನಮ್ಮ ಜೀವನದಲ್ಲಿ ಪ್ರತಿಷ್ಠಿತವಾಗಿರಬೇಕು. ಜೀವನನಿರ್ವಾಹಕ್ಕಾಗಿ ನಾವು ನಡೆಸುವ ವ್ಯವಹಾರಗಳನ್ನು ಧರ್ಮದಿಂದ ಬೇರ್ಪಡಿಸಿ ಇಡಬಾರದು. ಪರಮಾತ್ಮನಲ್ಲಿ ಭೃತ್ಯಭಾವನೆಯನ್ನು ತುಂಬಿಕೊಂಡು ತಾನು ಮಾಡುವ ಜೀವನವೃತ್ತಿಗಳಲ್ಲಿಯೂ ಪ್ರಾಮಾಣಿಕತೆ ಹಾಗೂ ಲೋಕಹಿತದೃಷ್ಟಿಯಲ್ಲಿ ಬೆಳೆಸಿಕೊಂಡು ಅನಿಷಿದ್ಧವಾದ ಲೌಕಿಕ ವ್ಯವಹಾರಗಳನ್ನು ನಡೆಸಿದಲ್ಲಿ ಅದೂ ಧರ್ಮವೆನಿಸುವುದು. ಭಾರತದಲ್ಲಿ ಉಲ್ಲೆ ೇಖಿಸಲಾದ ತುಲಾಧಾರನ ಕಥೆಯು ಇದಕ್ಕೆ ಜ್ವಲಂತ ನಿದರ್ಶನವಾಗಿದೆ. ತನ್ನ ತಪಸ್ಸಿನ ಬಗ್ಗೆ ಅಹಂಭಾವಕ್ಕೆ ಒಳಗಾದ ಬ್ರಾಹ್ಮಣ ಜಾಜಲಿಯು ನಗರದಲ್ಲಿರುವ ತುಲಾಧಾರನ ಯೋಗ್ಯತೆಯೂತನಗಿಲ್ಲವೆಂಬ ಅಶರೀರವಾಣಿಯ ಮೂದಲಿಕೆಯ ಮಾತಿನಿಂದ ಅವಮಾನಿತನಾಗಿ ವ್ಯಾಪಾರಿ ತುಲಾಧಾರನ ಬಳಿಗೆ ಬರುತ್ತಾನೆ. ತುಲಾಧಾರನ ವೇಷ, ವ್ಯವಹಾರಗಳನ್ನು ನೋಡಿ ಅವನ ಬಳಿ ಉಪದೇಶವನ್ನು ಪಡೆಯಲು ಜಾಜಲಿಯು ಹಿಂದೆಮುಂದೆ ನೋಡುತ್ತಿದ್ದಾಗ ತುಲಾಧಾರನೇ ಜಾಜಲಿಯ ಪೂರ್ವಾಪರ ವಿಚಾರಗಳನ್ನು ತಿಳಿಸುತ್ತಾನೆ. ಆಶ್ಚರ್ಯಚಕಿತನಾದ ಜಾಜಲಿಯು, ಈ ದಿವ್ಯದೃಷ್ಟಿಯ ರಹಸ್ಯವೇನು? ಯಾವ ಮಂತ್ರ, ತಂತ್ರ ಚಮತ್ಕಾರಗಳಿಂದ ಈ ಅಪರೋಕ್ಷ ದೃಷ್ಟಿಯ ಬುದ್ಧಿಯು ಲಭಿಸಿತೆಂದು ತುಲಾಧಾರನನ್ನು ಕೇಳುತ್ತಾನೆ. ಆಗ ತುಲಾಧಾರನು ನೀಡುವ ಉತ್ತರವು ಮಾರ್ಮಿಕವೂ ಮನನೀಯವೂ ಆಗಿದೆ. “ನನ್ನಕ್ಕಿಯಲ್ಲಿರುವತಕ್ಕಡಿಯೇನನಗೆಗುರುವಾಗಿದೆ. ಬೇರೆ ಯಾವುದೇಮಂತ್ರ, ಚಮತ್ಕಾರಗಳನ್ನು ನಾನು ಪಡೆದಿಲ್ಲ. ಯಾರೇ ಬರಲಿ, ತನ್ನವರಿರಲಿ, ಪರಕೀಯರಿರಲಿ, ತಕ್ಕಡಿಯ ದಂಡಿಗೆ ಒಂದೇ ರೀತಿ ಇರುತ್ತದೆ. ಅದರಂತೆಯೇ ನಾನು ನಡೆಸಿರುವ ಪ್ರಾಮಾಣಿಕ ವ್ಯವಹಾರದಿಂದಲೇ ತಾನು ಈ ಶಕ್ತಿಯನ್ನು ಪಡೆದಿರುವೆನು'' ಎನ್ನುತ್ತಾನೆತುಲಾಧಾರ. ಅದ್ರೋಹೇಣೈವ ಭೂತಾನಾಂ ಅಲ್ಬದ್ರೋಹೇಣವಾ ಪುನಃ ಸಾಧ್ಯವಿದ್ದಷ್ಟು ಪರರಿಗೆ ತನ್ನಿಂದ ದ್ರೋಹವಾಗದಂತೆ ವ್ಯವಹಾರವನ್ನು ನಡೆಸುವ ತನ್ನ ಪ್ರಾಮಾಣಿಕ ಪ್ರಯತ್ನವನ್ನು ತುಲಾಧಾರನು ವಿವರಿಸುತ್ತಾನೆ. ಜೀವನನಿರ್ವಾಹಕ್ಕಾಗಿ ಲೌಕಿಕ ಉದ್ಯೋಗಗಳನ್ನು ನಾವು ಆಶ್ರಯಿಸಿದರೂ ಅದನ್ನು ಧರ್ಮಮಯವನ್ನಾಗಿ ಹೇಗೆ ಪರಿವರ್ತಿಸಿಕೊಳ್ಳಬಹುದೆಂಬುದನ್ನು ನಾವು. ತುಲಾಧಾರನ ಉದಾಹರಣೆಯಿಂದ ತಿಳಿದುಕೊಳ್ಳಬಹುದು. ತುಲಾಧಾರನ ಈ ಕಥೆಯು ನವಗೆ ಆತ್ಯಂತ ಪ್ರಿಯವಾದ ಉಪಾಖ್ಯಾನವಾಗಿದೆ. ಜೀವನದ ಪೂರ್ಣ ತತ್ತ್ವ ಆದರ್ಶಗಳೇ ಈ ಕಥೆಯಲ್ಲಿ ಅಡಕವಾಗಿವೆ. ನಮ್ಮನಿತ್ಯ ಜೀವನದಲ್ಲಿ ಧರ್ಮವು ಹೇಗೆ ಸಮನ್ವಿತವಾಗಬಲ್ಲದೆಂಬುದನ್ನು ಧರ್ಮದ ಸರಳತನಹಾಗೂ ವ್ಯವಹಾರ್ಯತೆಯನ್ನುಇದು ಚೆನ್ನಾಗಿತೋರಿಸಿಕೊಡುತ್ತಿದೆ. ಅಂತೂ ಭಗವದ್ದಕ್ತಿ ಹಾಗೂ ತ್ಯಾಗ ಭಾವನೆಗಳಿಂದ ಪ್ರೇರಿತರಾಗಿ ನಾವು ಎಸಗುವ ಸಕಲ ಕಾರ್ಯಗಳೂ ಯಜ್ಞರೂಪವೆನಿಸುವವು. ಇಂತಹ ಕೃತಿಗಳಿಂದ ನಮ್ಮ ಜೀವನವನ್ನು ಪವಿತ್ರಗೊಳಿಸಬೇಕೆಂಬುದೇ ಗೀತೆಯ ಮುಖ್ಯ ಸಂದೇಶವಾಗಿದೆ.
Bannanje Govindacharya (1936–2020)Bhagavad Gita Pravachana
ದ್ರವ್ಯ ಯಜ್ಞಾಃ ತಪಃ ಯಜ್ಞಾಃ ಯೋಗ ಯಜ್ಞಾಃ ತಥಾ ಅಪರೇ | ಸ್ವಾಧ್ಯಾಯ ಜ್ಞಾನ ಯಜ್ಞಾಃ ಚ ಯತಯಃ ಸಂಶಿತ ವ್ರತಾಃ -ಕೆಲವರು ಸೊತ್ತುಗಳನ್ನು ಹೋಮಿಸುವವರು. ಕೆಲವರು ತಪಸ್ಸನ್ನೇ ಭಗವಂತನಲ್ಲಿ ಹೋಮಿಸುವವರು. ಕರ್ಮ ಸಾಧನೆಯೇ ಕೆಲವರ ಯಜ್ಞ. ಚುರುಕು ನಿಷ್ಠೆಯ ಪ್ರಯತ್ನಶೀಲರಾದ ಕೆಲವರಿಗೆ ವೇದಾಧ್ಯಯನ, ಭಗವಂತನ ಅರಿವೇ ಯಜ್ಞ. ದ್ರವ್ಯಯಜ್ಞ: ಕೆಲವರು... ದ್ರವ್ಯದ ಮೂಲಕ ಭಗವಂತನನ್ನು ಆರಾಧನೆ ಮಾಡುತ್ತಾರೆ. ಇದು ಅಗ್ನಿ ಮುಖೇನವಿರಬಹುದು, ಧನದಾನ, ಅನ್ನದಾನ, ಕನ್ಯಾದಾನ ಇತ್ಯಾದಿ ದಾನಗಳ ಮುಖೇನ ಇರಬಹುದು. ಯೋಗ್ಯನಾದವನಿಗೆ, ಯೋಗ್ಯ ಕಾಲದಲ್ಲಿ, ಯೋಗ್ಯವಾದುದನ್ನು, ಅವರೊಳಗಿರುವ ಭಗವಂತ ಪ್ರೀತನಾಗಲಿ ಎಂದು ಕೊಡುವುದು ದ್ರವ್ಯ ಯಜ್ಞ. ತಪೋಯಜ್ಞ: ಇದಕ್ಕೆ ಎರಡು ಮುಖ. ಒಂದು ಬಾಹ್ಯ ಇನ್ನೊಂದು ಅಂತರಂಗ. ಒಂದು ನಿರಂತರ ಧ್ಯಾನ, ಅದಕ್ಕೆ ಬಾಹ್ಯ ಪರಿಕರಗಳ ಅಗತ್ಯವಿಲ್ಲ. ಎರಡನೇಯದು ಭಗವಂತನ ಚಿಂತನೆಗೆ ಬೇಕಾದ ಆತ್ಮಸಂಯಮ(65010079)-ಇದನ್ನು ತಪಸ್ಸು ಎನ್ನುತ್ತಾರೆ. ಉದಾಹರಣೆಗೆ ಬ್ರಹ್ಮಚರ್ಯಪಾಲನೆ, ವೃತಾನುಷ್ಠಾನ, ಇತ್ಯಾದಿ. ಯೋಗಯಜ್ಞ: ಅಂದರೆ ವಿಧವಿಧವಾದ ಕರ್ಮಯೋಗವನ್ನು ಭಗವಂತನ ಪ್ರೀತ್ಯರ್ಥ ಅನುಷ್ಠಾನ ಮಾಡುವುದು. ಇದು ಬಾಹ್ಯ ಕರ್ಮಗಳ ಮೂಲಕ ಭಗವಂತನ ಆರಾಧನೆ. ಉದಾಹರಣೆಗೆ: ದೇವರಿಗೆ 108 ಪ್ರದಕ್ಷಿಣೆ, ಅರ್ಚನೆ , ಇತ್ಯಾದಿ. ಇದಲ್ಲದೆ ಯೋಗ ಶಾಸ್ತ್ರದಲ್ಲಿ ಹೇಳಿರುವ ಯಮನಿಯಮನ ಪಾಲನೆ. ಸ್ವಾಧ್ಯಾಯ ಜ್ಞಾನಯಜ್ಞ: ಇದು ಭಗವಂತನಿಗೆ ಅತ್ಯಂತ ಪ್ರಿಯವಾದ ಯಜ್ಞ. ಇಲ್ಲಿ ಸ್ವಾಧ್ಯಾಯ ಎನ್ನುವುದಕ್ಕೆ ಅನೇಕ ಅರ್ಥಗಳಿವೆ. ತನಗೆ ಸಂಬಂಧಪಟ್ಟದ್ದನ್ನು, ತಾನು ಓದಬೇಕಾದುದನ್ನು ಓದುವುದು. ತನ್ನ ಶಾಖೆಯ ವೇದಾಧ್ಯಯನ; ಎಲ್ಲಾ ಕಡೆ ಸ್ವತಂತ್ರನಾಗಿರುವ ಸರ್ವೋತ್ತಮನಾದ ಭಗವಂತನ ಗುಣವನ್ನು ಅಧ್ಯಯನ ಮೂಲಕ ಎಲ್ಲಾ ಗ್ರಂಥಗಳಲ್ಲಿ ಕಂಡುಕೊಳ್ಳುವುದು ಸ್ವಾಧ್ಯಾಯ. ಈ ಕಾಲದಲ್ಲಿ ಶಾಸ್ತ್ರದ ರಹಸ್ಯವನ್ನು ತಿಳಿದವರು ಸಿಗುವುದು ತುಂಬಾ ವಿರಳ. ಅಂತಹ ಸಂದರ್ಭದಲ್ಲಿ ಕಾಲವನ್ನು ವ್ಯರ್ಥ ಮಾಡದೇ, ಭಗವಂತ ಎಷ್ಟು ಬುದ್ಧಿ ಕೊಟ್ಟಿದ್ದಾನೋ ಅಷ್ಟನ್ನು ಬಳಸಿ ಸ್ವಂತ ಎಷ್ಟು ಸಾಧ್ಯವೋ ಅಷ್ಟನ್ನು ಅಧ್ಯಯನ ಮಾಡುವುದೂ ಸ್ವಾಧ್ಯಾಯ. ಈ ಎಲ್ಲಾ ಸ್ವಾಧ್ಯಾಯ ನಮ್ಮ ಜ್ಞಾನದ ಬೆಳವಣಿಗೆಗೆ ಪೋಷಕವಾದದ್ದು. ನಾವು ತಿಳಿಯುವುದು, ತಿಳಿದದ್ದನ್ನು ಇನ್ನೊಬ್ಬರಿಗೆ ಹಂಚುವುದು ಭಗವಂತನಿಗೆ ಅತ್ಯಂತ ಪ್ರಿಯ. ಇನ್ನೊಬ್ಬರಿಗೆ ಹಂಚುವುದರಿಂದ ಹೆಚ್ಚಾಗುವ ಏಕಮೇವ ಸಂಪತ್ತು ಎಂದರೆ ಅದು ಜ್ಞಾನ. ಜ್ಞಾನಯಜ್ಞ ಮಾಡಬೇಕಾದರೆ ನಾವು ಯತಿಗಳಾಗಬೇಕು. ಇಲ್ಲಿ ಯತಿ ಎಂದರೆ ಸನ್ಯಾಸಿ ಅಲ್ಲ. ಯತಿ ಅಂದರೆ ನಿರಂತರ ಪ್ರಯತ್ನಶೀಲ. ಸಾಧನೆ ಜೊತೆಗೆ ಹರಿತವಾದ ವೃತ ಕೂಡಾ ಅಗತ್ಯ. ಅಂದರೆ ಸ್ವಚ್ಛವಾದ ಪ್ರಾಮಾಣಿಕವಾದ ಬದುಕು. ಇದಿಲ್ಲದೇ ಮಾಡುವ ಯಾವ ಕರ್ಮ ಕೂಡಾ ಯಜ್ಞವಾಗುವುದಿಲ್ಲ. ಅಧ್ಯಾತ್ಮದ ದಾರಿಯಲ್ಲಿ ಮುಂದೆ ಸಾಗಲು ಛಲ ಅಗತ್ಯ.
Bibek Debroy (1955–2024)The Bhagavad Gita
(28) ‘Some use the yajna of offering gifts; others use the yajna of penance. Some use the yajna of yoga and still others, firm in their resolve and careful, use the yajna of knowledge.’42