अपि चेदसि पापेभ्यः सर्वेभ्यः पापकृत्तमः ।
सर्वं ज्ञानप्लवेनैव वृजिनं सन्तरिष्यसि ॥
api cedasi pāpebhyaḥ sarvebhyaḥ pāpakṛttamaḥ |
sarvaṃ jñānaplavenaiva vṛjinaṃ santariṣyasi ||
Swami Sivananda (1887–1963)Bhagavad Gita
36. Even if thou art the most sinful of all sinners, yet thou shalt verily cross all sins by the
raft of knowledge.
COMMENTARY: One can overcome sin through Self-knowledge.
Sri Vishwesha Tirtharu (1931–2019)Gitasaroddhara
4.33–4.38 · ಜ್ಞಾನವೇ ಯಜ್ಞದ ಫಲ
ಜ್ಞಾನವೇ ಯಜ್ಞದ ಫಲ
ಇಂತಹ ಯಜ್ಞದ ಉದ್ದೇಶವೇನು? ನಾವು ಮಾಡುವ ಎಲ್ಲಯಜ್ಞಮಯ
ಕಾರ್ಯಗಳಿಂದ ಪಡೆಯಬಹುದಾದ ಪರಮಪುರುಷಾರ್ಥವೇನು? ಭಕ್ತಿ
ತ್ಯಾಗಗಳಿಂದ ನಾವು ಮಾಡುವ ಸತ್ಯರ್ಮಗಳೆಲ್ಲ ಒಂದು ಸಾಧನೆಯಾಗುತ್ತವೆ;
ಭಗವಂತನಕಡೆಗೆ ಸಾಗುವ ದಿವ್ಯಯಾತ್ರೆ ಎನಿಸುತ್ತವೆ. ಈ ಪವಿತ್ರ ಕರ್ಮಗಳಿಂದ
ಹೃದಯಸಂಸ್ಕಾರವನ್ನು ಹೊಂದಿ ಭಗವಂತನ ದರ್ಶನವನ್ನು ಪಡೆಯುವುದು,
ಇವೆಲ್ಲ ಸತ್ಕರ್ಮಗಳ ಅಂತಿಮ ಗುರಿಯಾಗಿದೆ.
ಸರ್ವಂ ಕರ್ಮಾಖಿಲಂ ಪಾರ್ಥ ಜ್ಞಾ; ನೇ ಪರಿಸಮಾಪ್ಯತೇ [
ಆದುದರಿಂದ ಯಜ್ಞದ ವಿವಿಧ ಪ್ರಕಾರಗಳಲ್ಲಿ ಜ್ಞಾನಯಜ್ಞಕ್ಕೆ ವಿಶೇಷ
ಮಹತ್ವವಿದೆ. ಭಗವದ್ ಜ್ಞಾನವನ್ನು ಪಡೆಯುವ ವಿಶೇಷ ಪ್ರಯತ್ನವೇ
ಜ್ಞಾನಯಜ್ಞವಾಗಿದ್ದು ವಿವಿಧ ಲೌಕಿಕಹಾಗೂ ಲೋಕಸೇವಾಕಾರ್ಯಗಳನ್ನು
ಯಜ್ಞರೂಪದಿಂದ ಮಾಡುತ್ತಿದ್ದರೂ ದಿನವೂ ಜ್ಞಾನಕಾರ್ಯಕ್ಕಾಗಿ ಸ್ವಲ್ಪ
ಸಮಯವನ್ನಾದರೂ ಮೀಸಲಾಗಿಡುವುದು ಅವಶ್ಯವಾಗಿದೆ. ಜ್ಞಾನಕ್ಕಾಗಿಯೇ
ವಿವಿಧ ಯಜ್ಞಗಳನ್ನು ನಡೆಸುತ್ತಿರುವಾಗ ಜ್ಞಾನವನ್ನೇ ಅಲಕ್ಷಿಸಿ ಕರ್ಮಮಾರ್ಗ
ವನ್ನು ಮಾತ್ರ ನಾವು ಆಶ್ರಯಿಸಿಕೊಂಡಿರಬಾರದು.
ಶ್ರೇಯಾನ್ ದ್ರವ್ಯಮಯಾದ್ಯಜ್ಞಾತ್ ಜ್ಞಾನಯಜ್ಞ; ಪರಂತಪ।
ಇತರ ಲೌಕಿಕ ಸಾಧನ ಸಂಪತ್ತುಗಳಿಂದ ನಡೆಸಲಾಗುವ ಯಜ್ಞಕ್ಕಿಂತಲೂ
ಜ್ಞಾನಸಂಪಾದನೆಗಾಗಿ ನಡೆಸುವ ಶ್ರವಣಮನನಾದಿರೂಪ ಯಜ್ಞವು ಮಹತ್ತರ
ವಾದುದು. ಈ ಜ್ಞಾನವು ಇಲ್ಲದೆ ಇದ್ದರೆ ಕರ್ಮಮಾರ್ಗದಲ್ಲಿಯೂ ನಾವು
ಸರಿಯಾಗಿನಡೆಯಲಾರೆವು. ಜ್ಞಾನದಿಂದ ವಂಚಿತರಾದರೆಕರ್ತವ್ಯಾಕರ್ತವ್ಯ ಪ್ರಜ್ಞೆ
ಇಲ್ಲದೆ ವ್ಯಾಮೋಹಕ್ಕೆ ಒಳಗಾಗುವ ಪ್ರಸಂಗವು ಬರುವುದರಿಂದಕರ್ಮಮಾರ್ಗ
ದಲ್ಲಿ ಮುನ್ನಡೆಯಲೂ ಜ್ಞಾನದ ಅವಲಂಬನವು ಅತ್ಯಾವಶ್ಯಕವಾಗಿದೆ.
ಸ್ವಾಧ್ಯಾಯಪ್ರವಚನೇ ಏವೇತಿ ನಾಕೋ ಮೌದ್ಗಲ್ಯಃ [
ತದ್ಧಿ ತಪಸ್ಪದ್ಧಿ ತಪಃ ॥ “ತೈತ್ತಿರೀಯೋಪನಿಷತ್
ಎಂದು ಉಪನಿಷತ್ತಿನಲ್ಲಿ ಜ್ಞಾನಸಂಪಾದನೆಯ ಸಾಧನೆಯನ್ನು ಮಹಾ ತಪಸ್ಸೆಂದು
ಒತ್ತಿಹೇಳಿದ್ದಾರೆ. ಜಪಪೂಜೆಗಳಿಗೆ ಕುಳಿತಾಗಲೂ ನಮಗೆ ಏಕಾಗ್ರತೆಯನ್ನು
ಹೊಂದಲುಸಾದ್ಯವಾಗುವುದಿಲ್ಲ. ಆದರೆಗ್ರಂಥದಪ್ರವಚನಹ 3 ಗೂಅಭ್ಯಸದಲ್ಲಿ
ತೊಡಗಿದಾಗ ಉಳಿದ ವಿಷಯಗಳನ್ನು ಮರೆತು ಮನಸ್ಸನ್ನು ತಲ್ಲೀನಗೊಳಿಸಲು
ಸಾಧ್ಯವಾಗುವುದು. ಆದುದರಿಂದ ಭಾವಸಮಾಧಿಯನ್ನು ಹೊಂದಲು ಇತರ
ಉಪಾಯಗಳಿಗಿಂತ ಜ್ಞಾನ ಸಾಧನೆಯ ಕಾರ್ಯವೇ ಹೆಚ್ಚು ಸುಲಭವೂ
ಅನುಕೂಲವೂ ಆಗಿದೆ.
ಹೀಗಿದ್ದರೆ ಈ ಕರ್ಮಮಾರ್ಗದಲ್ಲಿ ನಡೆಯುವುದಕ್ಕಿಂತ ಪೂರ್ಣವಾಗಿ ಇಡೀ
ಜೀವನದಲ್ಲಿ ಜ್ಞಾನಸಾಧನೆಯನ್ನು ಮಾತ್ರ ಅನುಷ್ಠಾನ ಮಾಡಿದರೆ ಸಾಲದೆ?
ಗೀತೆಯಲ್ಲಿ ಹೇಳಿದ ವಿವಿಧ ಕರ್ಮಯಜ್ಞಗಳಲ್ಲಿ ತೊಡಗಿ ವೃಥಾ
ಕಾಲಹರಣವನ್ನೇಕೆ ಮಾಡಬೇಕು? ಶ್ರೇಷ್ಠವಾದ ಜ್ಞಾನಯಜ್ಞವನ್ನು ಮಾತ್ರ
ಆಶ್ರಯಿಸಬಹುದಲ್ಲವೆ? ಎಂಬತಂಕೆಯು ಬರಬಹುದಾಗಿದೆ. ಆದರೆ ಜ್ಞಾನವು
ಅಂತಿಮ ಗುರಿಯಾಗಿದ್ದರೂ ಜ್ಞಾನಮಾರ್ಗವೇ ಶ್ರೇಷ್ಠವಾಗಿದ್ದರೂ ಕರ್ಮದ
ಸಹಾಯವಿಲ್ಲದೆ ಈ ಗುರಿಯನ್ನು ಮುಟ್ಟಲು ಸಾಧ್ಯವಿಲ್ಲವೆಂಬುದನ್ನು ನಾವು
ನೆನಪಿನಲ್ಲಿಟ್ಟುಕೊಳ್ಳಬೇಕು. ಜ್ಞಾನಮಾರ್ಗವೂ ಶ್ರೇಷ್ಠವೆಂದ ಕೂಡಲೇ ಉಳಿದ
ಕರ್ಮ ಸಾಧನೆಗಳು ಬೇಡವೆನ್ನುವ ಅರ್ಥದಲ್ಲಿ ನಾವು ಪರ್ಯವಸಾನ
ಮಾಡಬಾರದು. ಹೊಲದಿಂದ ಬಿಳೆ ಪಡೆಯುವುದೇ ರೈತನ ಮುಖ್ಯ ಗುರಿ.
ಅದಕ್ಕಾಗಿ ಸಸಿಗಳನ್ನು ನೆಡುವುದೇ ಅವನ ಮುಖ್ಯ ಕೆಲಸವಾಗಿದೆ. ಆದರೆ
ಹೊಲದಲ್ಲಿ ಮಾಡಬೇಕಾದ ಇತರ ಸಾಧನಸಂಸ್ಕಾರಗಳನ್ನು ಮಾಡದೆ ಕೇವಲ
ಸಸಿಗಳನ್ನು ನೆಡುವುದರಿಂದ ಬೆಳೆಯನ್ನು ಪಡೆಯಬಲ್ಲನೆ? ಉಳುವುದು, ನೀರು
ಹಾಕುವುದು ಮುಂತಾದ ವಿವಿಧ ಸಾಧನೆಗಳಿಂದ ಒಡಗೂಡಿ ಬೀಜಗಳನ್ನು
ಬಿತ್ತುವುದರಿಂದಲೇ ರೈತನು ಕೃಷಿಯ ಸಾಫಲ್ಯವನ್ನು ಪಡೆಯಬಲ್ಲನು.
ಸಾಕ್ಷಾತ್ಕಾರವನ್ನು ಪಡೆಯುವಗುರಿಯನ್ನು ಮುಟ್ಟಲೂ ಜ್ಞಾನಯಜ್ಞದ ಜೊತೆಗೆ
ಅದಕ್ಕೆ ಪೋಷಕವಾಗಿ ಕರ್ಮ ಯಜ್ಞಗಳನ್ನು ನಾವು ಅನುಷ್ಠಾನ ಮಾಡಲೇ
ಬೇಕಾಗುತ್ತದೆ.
ತತ್ ಸ್ವಯಂ ಯೋಗಸಂಸಿದ್ಧ ಭ ಕಾಲೇನಾತ್ಮನಿ ವಿಂದತಿ ।
ಕರ್ಮಯೋಗದ ಸಿದ್ಧಿಯನ್ನು ಪಡೆದವನೇ ಈ ಜ್ಞಾನವನ್ನು ಹೊಂದಲು
ಯೋಗ್ಯನಾಗುವುದರಿಂದ ಕರ್ಮವು ಅವಶ್ಯಕ ಎಂದು ಗೀತೆಯು ನಿರೂಪಿಸಿದೆ.
ಅಂತೂ ಕರ್ಮಾಚರಣೆಯ ಸಹಕಾರದಿಂದ ಶ್ರವಣ, ಮನನ, ಧ್ಯಾನಾದಿ
ರೂಪವಾದ ಜ್ಞಾನಯಜ್ಞದಿಂದ ಪರಮಾತ್ಮನ ಅಪರೋಕ್ಷ ಜ್ಞಾನದಂತಹ
ಮೋಕ್ಷದ ಅಂತರಂಗಸಾಧನವನ್ನು ನಾವು ಹೊಂದುವೆವು. ಸಂಸಾರಬಂಧನಕ್ಕೆ
ಕಾರಣಗಳಾದ ಪಾಪಗಳ ವಿಮೋಚನೆಗೆ ಈ ಸಾಕ್ಷಾತ್ಕಾರವೇ ಪರಮಸಾಧನ
ವಾಗಿದೆ. ನಾವುತಿಳಿದೋತಿಳಿಯದೆಯೋಮಾಡಿರುವ ಅನಂತದುಷ್ಠತ್ಯಗಳಿಂದ
ನಮ್ಮ ಮನಸ್ಸು ಪಾಪಮಲೀಮಸವಾಗಿದೆ. ಇದರ ಪ್ರಕ್ನಾಲನೆ ಮಾಡಿ ನಮ್ಮನ್ನು
ಪುನೀತಗೊಳಿಸುವ ಅಮೃತಜಲಧಾರೆಯೇ ಈ ಸಾಕ್ಟಾತ್ಯಾರವೆನಿಸುವುದು.
ಪಾಪದ ರಾಶಿರಾಶಿಗಳಿದ್ದರೂ ಈ ಜ್ಞಾನದ ದಿವ್ಯಾಸ್ತ್ರದಿಂದ ಅವುಗಳ
ನಿರ್ಮೂಲನವಾಗುವುದು. ಎಷ್ಟು ಆಳವಾದ, ವಿಸ್ತಾರವಾದ, ಜಲರಾಶಿಯನ್ನೂ
ಚಿಕ್ಕ ನಾವೆಯಿಂದ ನಾವು ಸುಲಭವಾಗಿ ದಾಟಬಲ್ಲೆವು. ಕಟ್ಟಿಗೆಗಳ
ಮೂಟಿಗಳಿಷ್ಟಿದ್ದರೂ ಬೆಂಕಿಗೆ ಅವುಗಳನ್ನು ಸುಡಲು ಶ್ರಮವೆನಿಸುವುದೆ? ಪಾಪದ
ಮಹಾಸಾಗರದಿಂದ ಪಾರುಮಾಡಿಸಬಲ್ಲ ಹಡಗೂ, ದುಷ್ಕರ್ಮಗಳ ಒಣ
ಕಟ್ಟಿಗೆಗಳನ್ನು ಭಸ್ಮೀಕರಿಸಬಲ್ಲ ದಿವ್ಯಾಗ್ನಿಯೂ ಈ ಜ್ಞಾನವೇ ಆಗಿದೆ:
ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ |
ಜ್ಞಾನಕ್ಕೆ ಮಿಗಿಲಾದ ಪವಿತ್ರವಾದ ಪದಾರ್ಥವೇನಿದೆ? ನಿರ್ಮಲ ಜಲವನ್ನು
ಪವಿತ್ರವೆಂದು ಕರೆಯುತ್ತೇವೆ. ಗಂಗಾಜಲವು ಪರಮ ಪವಿತ್ರವೆನಿಸಿದೆ. ಆದರೆ
ಇವುಗಳು ನಮಗೆ ಇಷ್ಟರವರೆಗೆ ಅಂಟಿಕೊಂಡಿರುವ ಶರೀರದ ಮತ್ತುಮನಸ್ಸಿನ
ಮಲವನ್ನು ಮಾತ್ರ ಪ್ರಕ್ಷಾಲನ ಮಾಡಬಲ್ಲವು. ಸ್ನಾನ ಮಾಡಿದ ನಂತರವೂ
ಮಣ್ಣು ನಮ್ಮ ಮೈಯಲ್ಲಿ ಅಂಟಿಕೊಂಡು ಪುನಃ ನಮ್ಮ ಶರೀರವು ಮಲಿನವಾಗುವ
ಸಂದರ್ಭವಿದೆ. ಗಂಗಾಸ್ನಾನಾದಿ ಪವಿತ್ರಕರ್ಮಗಳನ್ನು ಮಾಡಿದ ಬಳಿಕವೂ ಪುನಃ
ಅನೇಕ ದುಷ್ಕತ್ಯಗಳನ್ನು ಮಾಡುವುದುಂಟು. ಅದರಿಂದ ಪುನಃ ನಮ್ಮ ಮನಸ್ಸು
ಮಲಿನವಾಗಲು ಅವಕಾಶವಾಗುವುದು. ಆದರೆ ಈ ಅಪರೋಕ್ಷದರ್ಶನದ
ಶಕ್ತಿಯೇ ವಿಲಕ್ಷಣವಿದೆ. ಇಷ್ಟರವರೆಗೆ ನಮಗೆ ಅಂಟಿಕೊಂಡಿರುವ ಪಾಪದ
ಮಲವನ್ನು ಇದು ತೊಳೆಯುವುದರ ಜೊತೆಗೆ ಮುಂದೆ ನಾವು ಮಾಡುವ
ಕೃತಿಗಳಿಂದ ನಮಗೆ. ಸಂಭವಿಸಬಹುದಾದ ಪಾಪಸಂಬಧವನ್ನೂ ಇದು
ನಿರ್ಮೂಲಗೊಳಿಸುವುದು.
ತದಧಿಗಮ ಉತ್ತರಪೂರ್ವಾಘಯೋರಶ್ಲೇಹಷವಿನಾಶ್ ।
ಎಂದು ಬ್ರಹ್ಮಸೂತ್ರದಲ್ಲಿ ನಿರೂಪಿಸಿದಂತೆ ಜ್ಞಾನದಿಂದ ಹಿಂದಿನ ಪಾಪಗಳ
ನಾಶವಾಗುವುದಲ್ಲದೆ ಮುಂದೆ ಯಾವ ಪಾಪಕೃತಿಗಳೂ ನಮ್ಮಿಂದ ಘಟಿಸದಂತೆ
ಮಾಡುವ ಒಂದು ದೈವೀ ಚಮತ್ಕಾರವೂ ಈ ಜ್ಞಾನದಲ್ಲಿದೆ. ಜ್ಞಾನವು ಪಾಪದ
ಬೇರನ್ನೇ ಸಮೂಲವಾಗಿ ಉಜ್ಜಾಟನೆ ಮಾಡುವುದು. ಮುಂದೆ ಯಾವ
ಪಾಪಮಲದ ಲೇಪವೂ ಜ್ಞಾನಿಗಾಗಲಾರದು. ಆದುದರಿಂದ ಜ್ಞಾನವು
ಪವಿತ್ರತಮವಾದ ವಸ್ತುವಾಗಿದೆ.
Bannanje Govindacharya (1936–2020)Bhagavad Gita Pravachana
ಅಪಿ ಚೇತ್ ಅಸಿ ಪಾಪೇಭ್ಯಃ ಸರ್ವೇಭ್ಯಃ ಪಾಪ ಕೃತ್ ತಮಃ
ಸರ್ವಮ್ ಜ್ಞಾನ ಪ್ಲವೇನ ಏವ ವೃಜಿನಮ್ ಸಂತರಿಷ್ಯಸಿ-ನೀನು ಎಲ್ಲಾ ಪಾಪಿಗಳಿಗಿಂತಲೂ ಹಿರಿಯ
ಪಾಪಿಯಾಗಿದ್ದರೂ ಸರಿಯೇ, ಎಲ್ಲಾ ಪಾತಕಗಳನ್ನೂ ತಿಳಿವಿನ ದೋಣಿಯಿಂದ ದಾಟಬಲ್ಲೆ.
"ನೀನು ನಿನ್ನ ಕಾಲದಲ್ಲಿನ ಸರ್ವಶ್ರೇಷ್ಠ ಪಾಪಿಯಾಗಿದ್ದರೂ ಕೂಡಾ, ಒಮ್ಮೆ ನಿನಗೆ ಭಗವಂತನ ಅರಿವು
ಮೂಡಿದರೆ ನೀನು ಗೆದ್ದಂತೆ" ಎನ್ನುತ್ತಾನೆ ಕೃಷ್ಣ. ಏಕೆಂದರೆ ತಿಳುವಳಿಕೆ ಬಂದ ಮೇಲೆ ಜ್ಞಾನದ ಮಾರ್ಗದಲ್ಲಿ
ಸಾಗಿದರೆ ಹಿಂದಿನ ಯಾವ ಪಾಪವೂ ನಿಲ್ಲುವುದಿಲ್ಲ. ಜ್ಞಾನವೆನ್ನುವುದು ಪಾಪದ ಕಡಲಿನಲ್ಲಿ ದೋಣಿಯಂತೆ. ಅದು
ನಮ್ಮನ್ನು ದಡ ಸೇರಿಸಬಲ್ಲದು. ಪಾಪದ ಕಡಲನ್ನು ದಾಟಲು ಇರುವ ಒಂದೇ ಒಂದು ಸಾಧನ ಜ್ಞಾನ. ಇಂತಹ
ದೊಡ್ಡ ಭರವಸೆಯನ್ನು ಕೃಷ್ಣ ಕೊಟ್ಟಿದ್ದಾನೆ. ಆದ್ದರಿಂದ ನಾವೆಲ್ಲರೂ ಇಂದೇ ಈ ಕ್ಷಣದಿಂದ ಜ್ಞಾನ ಮಾರ್ಗದಲ್ಲಿ
ಸಾಗುವ ಸಂಕಲ್ಪ ತೊಟ್ಟು ಮುಂದುವರಿಯೋಣ- ಏಕೆಂದರೆ ನಾಳೆ ಎಂದರೆ ಆ ನಾಳೆ ನಮ್ಮ ಪಾಲಿಗೆ ಬಾರದೇ
ಇರಬಹುದು! Yesterday was history, tomorrow is a mystery, today is God's gift, that's why we
call it 'the present’.
ಜ್ಞಾನ ಮಾರ್ಗವನ್ನು ಹಿಡಿದ ಒಬ್ಬ ಪಾಪಿಯ ಪಾಪಕರ್ಮವೇನಾಗುತ್ತದೆ ಎನ್ನುವುದಕ್ಕೆ ಮುಂದಿನ ಶ್ಲೋಕದಲ್ಲಿ
ಕೃಷ್ಣ ವಿವರಣೆಯನ್ನು ಕೊಟ್ಟಿದ್ದಾನೆ.
Bibek Debroy (1955–2024)The Bhagavad Gita
(36)
‘Even if you are a greater sinner than all the other sinners, you will cross all
oceans of sin with the boat of knowledge alone.’