अज्ञश्चाश्रद्दधानश्च संशयात्मा विनश्यति ।
नायं लोकोऽस्ति न परो न सुखं संशयात्मनः ॥
ajñaścāśraddadhānaśca saṃśayātmā vinaśyati |
nāyaṃ loko'sti na paro na sukhaṃ saṃśayātmanaḥ ||
Swami Sivananda (1887–1963)Bhagavad Gita
40. The ignorant, the faithless, the doubting self proceeds to destruction; there is neither this
world nor the other nor happiness for the doubting.
Sri Vishwesha Tirtharu (1931–2019)Gitasaroddhara
4.40–4.42 · ಸಂಶಯಾತ್ಮಾ ವಿನಶ್ಯತಿ
ಸಂಶಯಾತ್ಮಾ ವಿನಶೃತಿ
ಇಂತಹ ಜ್ಞಾನವನ್ನು ಪಡೆಯಲು ತತ್ತ್ವದರ್ಶಿಗಳಾದ ಗುರುಗಳಿಗೆ ನಾವು
ಶರಣೆನ್ನ ಬೇಕು. ಸೇವೆ, ಪರಿಪ್ರಶ್ನೆ ಗಳಿಂದ ಗುರುಗಳಿಂದ ಜ್ಞಾನವನ್ನು ಪಡೆದು
ನಂತರ ಮನನ, ನಿದಿಧ್ಯಾಸನಗಳಿಂದ ಸಾಕ್ಷಾತ್ಕಾರದ ಮಟ್ಟವನ್ನು ನಾವು
ಹೊಂದಬಹುದು. ಇದಕ್ಕಾಗಿ ಶ್ರದ್ಧೆ, ತತ್ತ್ವನಿಷ್ಠೆಗಳು ಅತ್ಯಾವಶ್ಯಕ. ಶ್ರದ್ಧೆ
ಇರುವಲ್ಲಿ ಕರ್ತವ್ಯದಲ್ಲಿ ಯಾವ ಲೋಪದೋಷಗಳೂತತಲೆಹಾಕಲಾರವು. ಶ್ರದ್ಧೆ
ಎಂದರೆ ಕುರುಡುನಂಬಿಕೆಯಲ್ಲ. ವಿವೇಚನೆಯಿಂದ ನಾವು ತತ್ತ್ವಜ್ಞಾನ
ಪಡೆದಮೇಲೆನಾವುಪಡೆದ ತತ್ತ್ವಜ್ಞಾನಕ್ಕೂನಮ್ಮ ಕೃತಿಗೂ ಹೊಂದಿಕೆಇದ್ದಲ್ಲಿ
ನಾವು ತ್ರದ್ಧಾವಂತರೆನಿಸುವೆವು. ತನ್ನತಂದೆ ನಿರುಪಯುಕ್ತ ಬಡಕಲು ಹಸುಗಳನ್ನು
ದಾನಮಾಡುತ್ತಿರುವುದನ್ನು ನಚಿಕೇತನು ನೋಡಿದಾಗ-
ತಂ ಹತ್ರದ್ಧಾಂವಿವೇಶ | -ಕಾಠಕ
ಅವನಲ್ಲಿ ಶ್ರದ್ಧೆಯು ಪ್ರವೇಶಿಸಿತು. ತತ್ಕ್ಚಣದಲ್ಲಿ ತಂದೆಯ ಈ
ಲೋಭಪೂರ್ಣವಾದ ಕೃತಿಯನ್ನು ಆತನು ಪ್ರತಿಭಟಸುತ್ತಾನೆ. ಶ್ರದ್ಧೆಯು,
ತತ್ತ್ವನಿಷ್ಠೆಯು ಜಾಗೃತವಾದಲ್ಲಿ ಅನ್ಯಾಯ-ಆಕ್ಕತ್ಯಗಳನ್ನು ಪ್ರತಿಭಟಿಸುವ
ಸಾತ್ತ್ವಿಕ ಪ್ರವೃತ್ತಿಯು ಸಹಜವಾಗಿ ಒಡಮೂಡುವುದು. ಹಿರಿಯರೆಂದು ಅವರು
ಮಾಡುವ ಅಕ್ಕತ್ಯವನ್ನು ಕಣ್ಣುಮುಚ್ಚಿ ಅನುಸರಿಸುವ ಕುರುಡುಭಾವನೆಗೆ
ಶ್ರದ್ಧಾವಂತನಲ್ಲಿ ಅವಕಾಶ ಇರುವುದಿಲ್ಲ. ತಾನು ಪಡೆದ ತತ್ತ್ವಜ್ಞಾನಕ್ಕೆ
ಅನುಗುಣವಾಗಿ ತನ್ನ ಜೀವನವನ್ನು ರೂಪಿಸಬೇಕೆನ್ನುವ ಅದಮ್ಯ ಉತ್ಸಾಹವೇ ಈ
ಶ್ರದ್ಧೆ ಎನಿಸುವುದು.
ಅಜ್ಞಾನ-ವಿಪರ್ಯಯಗಳಿಗೆ ಒಳಗಾದವನು ಜೀವನವಿಡೀ ಪ್ರತಿಯೊಂದನ್ನೂ
ಸಂಶಯದೃಷ್ಟಿಯಿಂದಲೇ ನೋಡುವ ಶ್ರದ್ಧಾಹೀನನಾದ ವ್ಯಕ್ತಿಯು ಈ
ಪರಮಜ್ಜಾನವನ್ನು ಪಡೆಯಲಾರನೆಂದು ಹೇಳಿ ತತ್ತ್ವನಿಶ್ಚಯ ಮತ್ತುನಿಷ್ಠೆಯ
ಮಹತ್ವವನ್ನು ಗೀತೆಯು ವಿವರಿಸಿದೆ. ಭಕ್ತಿ ಧರ್ಮಾಚರಣೆ ಮುಂತಾದ ನಮ್ಮ
ಪ್ರತಿಯೊಂದುಸಾಧನಾನುಷ್ಠಾನದ ಹಿನ್ನೆಲೆಯಲ್ಲೂ ಶ್ರದ್ಧೆಯ ಅಧಿಷ್ಠುನವಿರು
ವುದು ಅವಶ್ಯವಾಗಿದೆ. ಡೋಲಾಯಮಾನವಾದ ಮನಸ್ಸಿನಿಂದ ಮಾಡುವ
ಉಪಾಸನೆ- ಆಚರಣೆಗಳಿಂದ ನಿಜವಾದ ಫಲವನ್ನು ಪಡೆಯಲಾರೆವು. ಒಂದು
ಒಳ್ಳೆಯ ಕಾರ್ಯಕ್ಕಾಗಿ ನಮ್ಮ ಅಪಾರಶಕ್ತಿ ಸಂಪತ್ತುಗಳನ್ನು ವಿನಿಯೋಗಿಸುತ್ತೇವೆ.
ಆದರೆ ಆಸತ್ಯಾರ್ಯದಲ್ಲೇ ಆಂತರಿಕವಾದ ವಿಶ್ವಾಸನಿಷ್ಠೆಗಳಿಲ್ಲದಿದ್ದರೆಕೇವಲ ಈ
ಬಾಹ್ಯಾಡಂಬರದಿಂದ ಯಾವ ಶ್ರೇಯೋ ಲಾಭವೂ ಆಗಲಾರದು. ವೃಥಾ ಶ್ರಮ,
ಧನಹಾನಿಯಿಂದ ಇದು ಮಾನಸಿಕ ವ್ಯಥೆಗೇಕಾರಣವಾಗುವುದು.
ನಾಯಂ ಲೋಕೋಸಸ್ತಿ ನಪರಃ ನಸುಖಂ ಸಂಶಯಾತ್ಮನಃ [
ವಿಶ್ವಾಸಬಲವಿಲ್ಲದ ಸಂಶಯಶೀಲ ವ್ಯಕ್ತಿಯು ಇಹಪರಗಳೆರಡಕ್ಕೂ
ಎರವಾಗುವನು.
ಧರ್ಮರಾಜನಿಗೆ ಶ್ರೀಕೃಷ್ಣನು ಸತ್ಯ-ಅಸತ್ಯಗಳ ವಿವೇಚನೆಯನ್ನು ಮಾಡಿ
ಲೋಕಹಿತಕಾರಿಯಾದ ಸಜ್ಜನಿಕೆಗೆ ಪೋಷಕವಾದ ಕೃತಿಯೇ ನಿಜವಾದ
ಸತ್ಯವೆಂದು ಅನೇಕ ಸಂದರ್ಭಗಳಲ್ಲಿ ಬೋಧಿಸಿದ್ದನು. ನಿರಪರಾಧಿ ಜನರನ್ನು
ದರೋಡೆಗಾರರಿಂದ ರಕ್ಷಿಸುವುದಕ್ಕಾಗಿ ಅವರಲ್ಲಿ ಸುಳ್ಳು ಹೇಳಿದರೂ ಅದು
ಸತ್ಯವೆನಿಸುವುದು. ಅಡಗಿದ ಗ್ರಾಮೀಣ ಜನರ ಇರವನ್ನು ದರೋಡೆಗಾರರಿಗೆ
ಅರುಹಿ, ತನ್ನ ಕುರುಡು ಸತ್ಯನಿಷ್ಠೆಯನ್ನು ಪ್ರದರ್ಶಿಸಿದ ಕೌಶಿಕ ಬ್ರಾಹ್ಮಣನು
ನರಕವನ್ನು ಅನುಭವಿಸಬೇಕಾಯಿತು. ಲೋಕದ ಹಾಗೂ ಧರ್ಮದರಕ್ಷಣೆಗಾಗಿ
ಅವಶ್ಯ ಪ್ರಸಂಗದಲ್ಲಿ ಸುಳ್ಳು ನುಡಿದರೂ ಅದು ಸತ್ಯದ ಶ್ರೇಣಿಯಲ್ಲೇ
ಸೇರುವುದೆಂಬುದು ಶಾಸ್ತ್ರಸಮ್ಮತ ವಿಚಾರವಾಗಿದೆ. ಈ ದೃಷ್ಟಿಯಿಂದಲೇ
ದ್ರೋಣನನ್ನು ಕೊಲ್ಲಬೇಕಾದ ಸಂದರ್ಭದಲ್ಲಿ ಸುಳ್ಳು ಹೇಳಲು ಶ್ರೀಕೃಷ್ಣನು
ಧರ್ಮರಾಜನಿಗೆ ಬೋಧಿಸುತ್ತಾನೆ. ಶ್ರೀಕೃಷ್ಣನು ಹೇಳಿದ ಈ ಧರ್ಮಾಧರ್ಮ
ವಿವೇಚನೆಯಲ್ಲಿ ಧರ್ಮರಾಜನಿಗೆ ಪೂರ್ಣ ವಿಶ್ವಾಸ ಉಂಟಾಗಲಿಲ್ಲ. ಶ್ರೀಕೃಷ್ಣನ
ಮಾತನ್ನು ಪೂರ್ತಿಯಾಗಿ ತೆಗೆದುಹಾಕುವ ಧೈರ್ಯವೂ ಅವನಲ್ಲಿ ಇರಲಿಲ್ಲ. ಈ
ಸಂದಿಗ್ಧ ಮನಸ್ಮಿತಿಯಲ್ಲೇ "" ಅಶ್ವತ್ಥಾಮಾ ಹತಃ' ಎಂದು ಅತಿ ಕಷ್ಟದಿಂದ
ಧರ್ಮರಾಜನು ನುಡಿದಿದ್ದನು. ಈ ಸಂದೇಹದ ಫಲವಾಗಿಯೇ ಮುಂದೆ
ಅವಸಾನಕಾಲದಲ್ಲಿ ಧರ್ಮರಾಜನಿಗೆ ನರಕದರ್ಶನವಾಗಿದೆ. ಶ್ರೀಕೃಷ್ಣನ
ಉಪದೇಶದಂತೆ ನಡೆಯಲೂ ಅವನಿಗೆ ಪೂರ್ಣ ವಿಶಾ ಸವಿರಲಿಲ್ಲ.
ನ ಚಾತಿವಿಸ್ರಂಭ ಆಸೀತ್ರವ ಕೃಷ್ಣವಾಕ್ಕೇ ।
-ಮ. ಭಾ.ತಾತ್ಪರ್ಯನಿರ್ಣಯ
ಹೀಗೆ ಡೋಲಾಯಮಾನವಾದ ಮನೋಭೂಮಿಕೆಯಿಂದ ಕಾರ್ಯವನ್ನು
ಮಾಡಿರುವುದರಿಂದ ಧರ್ಮರಾಜನು ಅನಿಷ್ಟಫಲವನ್ನು ಪಡೆಯುವತಾಗಿದೆ.
ಈ ಬಗ್ಗೆ ಕುಮಾರಿಲಭಟ್ಟರ ಜೀವನದ ಒಂದು ಸನ್ನಿವೇಶವನ್ನು
ಉದಾಹರಿಸಬಹುದು. ಒಮ್ಮೆ ಬೌದ್ಧ ಗುರುಗಳೊಬ್ಬರ ಆಗ್ರಹಕ್ಕೆ ಒಳಗಾದ
ಕುಮಾರಿಲರನ್ನು ಬೌದ್ಧ ಶಿಷ್ಯರು ಮಹಡಿಯಿಂದ ೆಳಕ್ಕೆ ಕೆಡವಿದರು. ವೇದವು
ಪ್ರಮಾಣವಾದರೆ ತಮಗೆ ಏನೂ ಮರಣಾದ್ಯುಪದ್ರವವು ಆಗಬಾರದೆಂದು
ಘೋಷಿಸಿ ಕುಮಾರಿಲರು ಕೆಳಗೆ ಧುಮುಕಿದರು. ಮರಣವೇನೂ ಸಂಭವಿಸ
ಲಿಲ್ಲ. ಆದರೆ ಅವರ ಒಂದು ಕಣ್ಣಿಗೆ ಧಕ್ಕೆಯಾಗಿ ಅದು ಕುರುಡಾಯಿತು.
ಕುಮಾರಿಲರಿಗೆ ವೇದದ ಬಗ್ಗೆ ನಂಬಿಕೆಯು ಪ್ರಗಾಢವಾಗಿಯೇಇತ್ತು ಆದರೆ ಆ
ನಂಬಿಕೆಯಲ್ಲಿ ಕೊಂಚತಿಥಿಲತೆಯಿತ್ತು. "ವೇದವು ಪ್ರಮಾಣವಾದರೆ'' ಎನ್ನುವ
ಅವರ ಮಾತಿನಲ್ಲಿ ಈ ಶೈಥಿಲ್ಯದ ಅಪಸ್ವರವು ಎದ್ದು ಕಾಣುತ್ತದೆ. ವೇದವು
ಪ್ರಮಾಣವೇ ಆಗಿದೆ; ತನಗೆ ಏನೂ ಅನರ್ಥ ಸಂಭವಿಸುವುದಿಲ್ಲವೆನ್ನುವ
ನಿರ್ಧಾರದ ಧೀರ ಘೋಷವನ್ನು ಅವರು ಉಸುರಲಿಲ್ಲ. ""ವೇದವು
ಪ್ರಮಾಣವಾದರೆ'' ಎನ್ನುವಸಂಶಯವಾಣಿಯ ಕಹಿಫಲವನ್ನು ಆಗಲೇ ಅವರು
ಪಡೆಯುವಂತಾಯಿತು. ನಮ್ಮ ಪ್ರತಿಯೊಂದು ಸಂಸ್ಕೃತಿಗೂ ಅಚಲವಿಶ್ವಾಸದ
ಹನ್ನೆಲೆಯಿರಬೇಕು. ನಮ್ಮ ಜೀವನದಲ್ಲಿ ಎಲ್ಲಿಯೂ ಸಂಶಯ-ವಿಪರ್ಯಾಸಗಳ
ಗಾಳಿ ಸುಳಿಯದಂತೆ ನಾವು ಎಚ್ಚರಿಕೆ ವಹಿಸಬೇಕು. ವ್ಯಾಮೋಹದಿಂದಾಗಲಿ
ಅರೆಮನಸ್ಸಿನಿಂದಾಗಲಿ ಮಾಡಿದ ಕೃತಿಗಳು ಸತ್ಫಲವನ್ನು ನೀಡಲಾರವು.
ಭಗವಂತನೇ ರಕ್ಷಕನೆಂಬ ದೃಢವಿಶ್ವಾಸದಿಂದ ಭಕ್ತನು ಪ್ರಬಲ ವಿಪತ್ತಿಗಳನ್ನೂ
ಎದುರಿಸಿವಿಜಯಶೀಲನಾಗುವನು.
ರಕ್ಷ. ತೀತ್ಯೇವ ವಿಶಾ ಸಃ ತದೀಯೋಸಹಮಿತಿ ಸ್ಥ ತೆ |
-ಗೀತಾತಾತ್ಪ ರ್ಯ
ಶಾಸ್ತ್ರೀಯ ವಿವೇಚನೆಯಿಂದ ಸುದೃಢವಾದ ತತ್ತ್ವಜ್ಞಾನವನ್ನು ಪಡೆದು
ಅದರತಳಹದಿಯಲ್ಲಿ ತನ್ನ ಕರ್ತವ್ಯವನ್ನು ಕಂಡು ನಿರ್ಧಾರದಿಂದ ಮುನ್ನಡೆಯ
ಬೇಕು. ಧರ್ಮಸಮ್ಮೂಢಚೇತನನೂ ಸಂಶಯಗ್ರಸ್ತನೂ ಆದ ಅರ್ಜುನನಿಗೆ
ಜ್ಞಾನದಹಿನ್ನೆಲೆಯನ್ನು ಒರಗಿಸಿ ದೃಢನಿರ್ಧಾರವನ್ನು ಮೂಡಿಸುವುದಕ್ಕಾಗಿಯೇ
ಶ್ರೀಕೃಷ್ಣನು ಇಲ್ಲಿ ಸಂಶಯ ವಿಪರ್ಯಾಸಗಳಿಂದ ಆಗುವ ಅನರ್ಥವನ್ನು
ವಿವರಿಸುತ್ತಾನೆ. ಈ ಸಂಶಯ-ಭ್ರಾಂತಿಗಳನ್ನು ಕಿತ್ತೊಗೆದು ತತ್ತ್ವಜ್ಞಾನದ ನಿರಭ್ರ
ಶುಭ್ರ ಪ್ರಭೆಯಿಂದ ಬೆಳಗುವ ಕರ್ತವ್ಯದ ರಾಜಪಥದಲ್ಲಿ ನಿಃತಂಕವಾಗಿ
ನಿರಾತಂಕವಾಗಿಸಾಗಬೇಕೆಂದು ಪರಮಾತ್ಮನು ಆದೇಶನೀಡುತ್ತಾನೆ:
.. ಪೃತ್ಸ್ಥಂ ಜ್ಞಾನಾಸಿನಾನತತ್ಯನಃ।
ಛಿತ್ವ ನಂ ಸಂಶಯಂ ಯೋಗ-
ಮಾತಿಷ್ಠೊ ತ್ರಿಷ್ಠ ಭಾರತ ॥
ಇದಕ್ಕಾಗಿಯೇ ಗೀತೆಯ 4ನೇ ಅಧ್ಯಾಯದ ಕೊನೆಯಲ್ಲಿ ತತ್ತ್ವಜ್ಞಾನದ
ಮಹತ್ತ್ವವನ್ನು ವಿಶೇಷವಾಗಿ ವರ್ಣಿಸಲಾಗಿದೆ.
Bannanje Govindacharya (1936–2020)Bhagavad Gita Pravachana
ಅಜ್ಞಃ ಚ ಅಶ್ರದ್ದಧಾನಃ ಚ ಸಂಶಯ ಆತ್ಮಾ ವಿನಶ್ಯತಿ
ನ ಅಯಮ್ ಲೋಕಃ ಅಸ್ತಿ ನ ಪರಃ ನ ಸುಖಮ್ ಸಂಶಯ ಆತ್ಮನಃ -- ಅರಿವಿರದ, ನಂಬಿಕೆ ಕಳೆದುಕೊಂಡ
ಇಬ್ಬಂದಿ ವಿನಾಶದತ್ತ ಸಾಗುತ್ತಾನೆ. ಇಬ್ಬಂದಿಗೆ ಇಹವಿಲ್ಲ; ಪರವಿಲ್ಲ; ನೆಮ್ಮದಿಯೂ ಇಲ್ಲ.
ಜ್ಞಾನವಿಲ್ಲದ, ಶ್ರದ್ಧೆ ಇಲ್ಲದ ಅಜ್ಞಾನಿಗಳು ನಿರಂತರ ಸಂಶಯದಲ್ಲೇ ಬದುಕುತ್ತಾರೆ. ಜ್ಞಾನ ಮತ್ತು ಶ್ರದ್ಧೆ ಇಲ್ಲದಾಗ
ಅಲ್ಲಿ ಸಂಶಯ ಬೆಳೆಯಲಾರಂಭಿಸುತ್ತದೆ. ಆ ಸಂಶಯ ಮನಸ್ಸನ್ನು ಆಕ್ರಮಿಸಿ ನಂತರ ಚಿತ್ತವನ್ನು ತಲುಪುತ್ತದೆ
ಬುದ್ಧಿಗೆ ಬಂದ ಸಂಶಯಕ್ಕೆ ಪರಿಹಾರವಿಲ್ಲ. ಅದು ನಮ್ಮನ್ನು ಅಧಃಪಾತಕ್ಕೆ ಕೊಂಡೊಯ್ಯುತ್ತದೆ. ಇದರಿಂದ
ಅಂತವರಿಗೆ ಇಹವಿಲ್ಲ, ಪರವಿಲ್ಲ, ಎಂದೆಂದೂ ನೆಮ್ಮದಿ ಇಲ್ಲ.
Bibek Debroy (1955–2024)The Bhagavad Gita
(40)
‘The ignorant, the faithless and the doubting are destroyed. For the doubting
person, this world, other worlds and happiness don’t exist.’