4.42

तस्मादज्ञानसम्भूतं हृत्स्थं ज्ञानासिनात्मनः ।
छित्त्वैनं संशयं योगमातिष्ठोत्तिष्ठ भारत ॥
tasmādajñānasambhūtaṃ hṛtsthaṃ jñānāsinātmanaḥ |
chittvainaṃ saṃśayaṃ yogamātiṣṭhottiṣṭha bhārata ||
Swami Sivananda (1887–1963)Bhagavad Gita
42. Therefore, with the sword of knowledge (of the Self) cut asunder the doubt of the self born of ignorance, residing in thy heart, and take refuge in Yoga; arise, O Arjuna!
Sri Vishwesha Tirtharu (1931–2019)Gitasaroddhara
4.40–4.42 · ಸಂಶಯಾತ್ಮಾ ವಿನಶ್ಯತಿ
ಸಂಶಯಾತ್ಮಾ ವಿನಶೃತಿ ಇಂತಹ ಜ್ಞಾನವನ್ನು ಪಡೆಯಲು ತತ್ತ್ವದರ್ಶಿಗಳಾದ ಗುರುಗಳಿಗೆ ನಾವು ಶರಣೆನ್ನ ಬೇಕು. ಸೇವೆ, ಪರಿಪ್ರಶ್ನೆ ಗಳಿಂದ ಗುರುಗಳಿಂದ ಜ್ಞಾನವನ್ನು ಪಡೆದು ನಂತರ ಮನನ, ನಿದಿಧ್ಯಾಸನಗಳಿಂದ ಸಾಕ್ಷಾತ್ಕಾರದ ಮಟ್ಟವನ್ನು ನಾವು ಹೊಂದಬಹುದು. ಇದಕ್ಕಾಗಿ ಶ್ರದ್ಧೆ, ತತ್ತ್ವನಿಷ್ಠೆಗಳು ಅತ್ಯಾವಶ್ಯಕ. ಶ್ರದ್ಧೆ ಇರುವಲ್ಲಿ ಕರ್ತವ್ಯದಲ್ಲಿ ಯಾವ ಲೋಪದೋಷಗಳೂತತಲೆಹಾಕಲಾರವು. ಶ್ರದ್ಧೆ ಎಂದರೆ ಕುರುಡುನಂಬಿಕೆಯಲ್ಲ. ವಿವೇಚನೆಯಿಂದ ನಾವು ತತ್ತ್ವಜ್ಞಾನ ಪಡೆದಮೇಲೆನಾವುಪಡೆದ ತತ್ತ್ವಜ್ಞಾನಕ್ಕೂನಮ್ಮ ಕೃತಿಗೂ ಹೊಂದಿಕೆಇದ್ದಲ್ಲಿ ನಾವು ತ್ರದ್ಧಾವಂತರೆನಿಸುವೆವು. ತನ್ನತಂದೆ ನಿರುಪಯುಕ್ತ ಬಡಕಲು ಹಸುಗಳನ್ನು ದಾನಮಾಡುತ್ತಿರುವುದನ್ನು ನಚಿಕೇತನು ನೋಡಿದಾಗ- ತಂ ಹತ್ರದ್ಧಾಂವಿವೇಶ | -ಕಾಠಕ ಅವನಲ್ಲಿ ಶ್ರದ್ಧೆಯು ಪ್ರವೇಶಿಸಿತು. ತತ್‌ಕ್ಚಣದಲ್ಲಿ ತಂದೆಯ ಈ ಲೋಭಪೂರ್ಣವಾದ ಕೃತಿಯನ್ನು ಆತನು ಪ್ರತಿಭಟಸುತ್ತಾನೆ. ಶ್ರದ್ಧೆಯು, ತತ್ತ್ವನಿಷ್ಠೆಯು ಜಾಗೃತವಾದಲ್ಲಿ ಅನ್ಯಾಯ-ಆಕ್ಕತ್ಯಗಳನ್ನು ಪ್ರತಿಭಟಿಸುವ ಸಾತ್ತ್ವಿಕ ಪ್ರವೃತ್ತಿಯು ಸಹಜವಾಗಿ ಒಡಮೂಡುವುದು. ಹಿರಿಯರೆಂದು ಅವರು ಮಾಡುವ ಅಕ್ಕತ್ಯವನ್ನು ಕಣ್ಣುಮುಚ್ಚಿ ಅನುಸರಿಸುವ ಕುರುಡುಭಾವನೆಗೆ ಶ್ರದ್ಧಾವಂತನಲ್ಲಿ ಅವಕಾಶ ಇರುವುದಿಲ್ಲ. ತಾನು ಪಡೆದ ತತ್ತ್ವಜ್ಞಾನಕ್ಕೆ ಅನುಗುಣವಾಗಿ ತನ್ನ ಜೀವನವನ್ನು ರೂಪಿಸಬೇಕೆನ್ನುವ ಅದಮ್ಯ ಉತ್ಸಾಹವೇ ಈ ಶ್ರದ್ಧೆ ಎನಿಸುವುದು. ಅಜ್ಞಾನ-ವಿಪರ್ಯಯಗಳಿಗೆ ಒಳಗಾದವನು ಜೀವನವಿಡೀ ಪ್ರತಿಯೊಂದನ್ನೂ ಸಂಶಯದೃಷ್ಟಿಯಿಂದಲೇ ನೋಡುವ ಶ್ರದ್ಧಾಹೀನನಾದ ವ್ಯಕ್ತಿಯು ಈ ಪರಮಜ್ಜಾನವನ್ನು ಪಡೆಯಲಾರನೆಂದು ಹೇಳಿ ತತ್ತ್ವನಿಶ್ಚಯ ಮತ್ತುನಿಷ್ಠೆಯ ಮಹತ್ವವನ್ನು ಗೀತೆಯು ವಿವರಿಸಿದೆ. ಭಕ್ತಿ ಧರ್ಮಾಚರಣೆ ಮುಂತಾದ ನಮ್ಮ ಪ್ರತಿಯೊಂದುಸಾಧನಾನುಷ್ಠಾನದ ಹಿನ್ನೆಲೆಯಲ್ಲೂ ಶ್ರದ್ಧೆಯ ಅಧಿಷ್ಠುನವಿರು ವುದು ಅವಶ್ಯವಾಗಿದೆ. ಡೋಲಾಯಮಾನವಾದ ಮನಸ್ಸಿನಿಂದ ಮಾಡುವ ಉಪಾಸನೆ- ಆಚರಣೆಗಳಿಂದ ನಿಜವಾದ ಫಲವನ್ನು ಪಡೆಯಲಾರೆವು. ಒಂದು ಒಳ್ಳೆಯ ಕಾರ್ಯಕ್ಕಾಗಿ ನಮ್ಮ ಅಪಾರಶಕ್ತಿ ಸಂಪತ್ತುಗಳನ್ನು ವಿನಿಯೋಗಿಸುತ್ತೇವೆ. ಆದರೆ ಆಸತ್ಯಾರ್ಯದಲ್ಲೇ ಆಂತರಿಕವಾದ ವಿಶ್ವಾಸನಿಷ್ಠೆಗಳಿಲ್ಲದಿದ್ದರೆಕೇವಲ ಈ ಬಾಹ್ಯಾಡಂಬರದಿಂದ ಯಾವ ಶ್ರೇಯೋ ಲಾಭವೂ ಆಗಲಾರದು. ವೃಥಾ ಶ್ರಮ, ಧನಹಾನಿಯಿಂದ ಇದು ಮಾನಸಿಕ ವ್ಯಥೆಗೇಕಾರಣವಾಗುವುದು. ನಾಯಂ ಲೋಕೋಸಸ್ತಿ ನಪರಃ ನಸುಖಂ ಸಂಶಯಾತ್ಮನಃ [ ವಿಶ್ವಾಸಬಲವಿಲ್ಲದ ಸಂಶಯಶೀಲ ವ್ಯಕ್ತಿಯು ಇಹಪರಗಳೆರಡಕ್ಕೂ ಎರವಾಗುವನು. ಧರ್ಮರಾಜನಿಗೆ ಶ್ರೀಕೃಷ್ಣನು ಸತ್ಯ-ಅಸತ್ಯಗಳ ವಿವೇಚನೆಯನ್ನು ಮಾಡಿ ಲೋಕಹಿತಕಾರಿಯಾದ ಸಜ್ಜನಿಕೆಗೆ ಪೋಷಕವಾದ ಕೃತಿಯೇ ನಿಜವಾದ ಸತ್ಯವೆಂದು ಅನೇಕ ಸಂದರ್ಭಗಳಲ್ಲಿ ಬೋಧಿಸಿದ್ದನು. ನಿರಪರಾಧಿ ಜನರನ್ನು ದರೋಡೆಗಾರರಿಂದ ರಕ್ಷಿಸುವುದಕ್ಕಾಗಿ ಅವರಲ್ಲಿ ಸುಳ್ಳು ಹೇಳಿದರೂ ಅದು ಸತ್ಯವೆನಿಸುವುದು. ಅಡಗಿದ ಗ್ರಾಮೀಣ ಜನರ ಇರವನ್ನು ದರೋಡೆಗಾರರಿಗೆ ಅರುಹಿ, ತನ್ನ ಕುರುಡು ಸತ್ಯನಿಷ್ಠೆಯನ್ನು ಪ್ರದರ್ಶಿಸಿದ ಕೌಶಿಕ ಬ್ರಾಹ್ಮಣನು ನರಕವನ್ನು ಅನುಭವಿಸಬೇಕಾಯಿತು. ಲೋಕದ ಹಾಗೂ ಧರ್ಮದರಕ್ಷಣೆಗಾಗಿ ಅವಶ್ಯ ಪ್ರಸಂಗದಲ್ಲಿ ಸುಳ್ಳು ನುಡಿದರೂ ಅದು ಸತ್ಯದ ಶ್ರೇಣಿಯಲ್ಲೇ ಸೇರುವುದೆಂಬುದು ಶಾಸ್ತ್ರಸಮ್ಮತ ವಿಚಾರವಾಗಿದೆ. ಈ ದೃಷ್ಟಿಯಿಂದಲೇ ದ್ರೋಣನನ್ನು ಕೊಲ್ಲಬೇಕಾದ ಸಂದರ್ಭದಲ್ಲಿ ಸುಳ್ಳು ಹೇಳಲು ಶ್ರೀಕೃಷ್ಣನು ಧರ್ಮರಾಜನಿಗೆ ಬೋಧಿಸುತ್ತಾನೆ. ಶ್ರೀಕೃಷ್ಣನು ಹೇಳಿದ ಈ ಧರ್ಮಾಧರ್ಮ ವಿವೇಚನೆಯಲ್ಲಿ ಧರ್ಮರಾಜನಿಗೆ ಪೂರ್ಣ ವಿಶ್ವಾಸ ಉಂಟಾಗಲಿಲ್ಲ. ಶ್ರೀಕೃಷ್ಣನ ಮಾತನ್ನು ಪೂರ್ತಿಯಾಗಿ ತೆಗೆದುಹಾಕುವ ಧೈರ್ಯವೂ ಅವನಲ್ಲಿ ಇರಲಿಲ್ಲ. ಈ ಸಂದಿಗ್ಧ ಮನಸ್ಮಿತಿಯಲ್ಲೇ "" ಅಶ್ವತ್ಥಾಮಾ ಹತಃ' ಎಂದು ಅತಿ ಕಷ್ಟದಿಂದ ಧರ್ಮರಾಜನು ನುಡಿದಿದ್ದನು. ಈ ಸಂದೇಹದ ಫಲವಾಗಿಯೇ ಮುಂದೆ ಅವಸಾನಕಾಲದಲ್ಲಿ ಧರ್ಮರಾಜನಿಗೆ ನರಕದರ್ಶನವಾಗಿದೆ. ಶ್ರೀಕೃಷ್ಣನ ಉಪದೇಶದಂತೆ ನಡೆಯಲೂ ಅವನಿಗೆ ಪೂರ್ಣ ವಿಶಾ ಸವಿರಲಿಲ್ಲ. ನ ಚಾತಿವಿಸ್ರಂಭ ಆಸೀತ್ರವ ಕೃಷ್ಣವಾಕ್ಕೇ । -ಮ. ಭಾ.ತಾತ್ಪರ್ಯನಿರ್ಣಯ ಹೀಗೆ ಡೋಲಾಯಮಾನವಾದ ಮನೋಭೂಮಿಕೆಯಿಂದ ಕಾರ್ಯವನ್ನು ಮಾಡಿರುವುದರಿಂದ ಧರ್ಮರಾಜನು ಅನಿಷ್ಟಫಲವನ್ನು ಪಡೆಯುವತಾಗಿದೆ. ಈ ಬಗ್ಗೆ ಕುಮಾರಿಲಭಟ್ಟರ ಜೀವನದ ಒಂದು ಸನ್ನಿವೇಶವನ್ನು ಉದಾಹರಿಸಬಹುದು. ಒಮ್ಮೆ ಬೌದ್ಧ ಗುರುಗಳೊಬ್ಬರ ಆಗ್ರಹಕ್ಕೆ ಒಳಗಾದ ಕುಮಾರಿಲರನ್ನು ಬೌದ್ಧ ಶಿಷ್ಯರು ಮಹಡಿಯಿಂದ ೆಳಕ್ಕೆ ಕೆಡವಿದರು. ವೇದವು ಪ್ರಮಾಣವಾದರೆ ತಮಗೆ ಏನೂ ಮರಣಾದ್ಯುಪದ್ರವವು ಆಗಬಾರದೆಂದು ಘೋಷಿಸಿ ಕುಮಾರಿಲರು ಕೆಳಗೆ ಧುಮುಕಿದರು. ಮರಣವೇನೂ ಸಂಭವಿಸ ಲಿಲ್ಲ. ಆದರೆ ಅವರ ಒಂದು ಕಣ್ಣಿಗೆ ಧಕ್ಕೆಯಾಗಿ ಅದು ಕುರುಡಾಯಿತು. ಕುಮಾರಿಲರಿಗೆ ವೇದದ ಬಗ್ಗೆ ನಂಬಿಕೆಯು ಪ್ರಗಾಢವಾಗಿಯೇಇತ್ತು ಆದರೆ ಆ ನಂಬಿಕೆಯಲ್ಲಿ ಕೊಂಚತಿಥಿಲತೆಯಿತ್ತು. "ವೇದವು ಪ್ರಮಾಣವಾದರೆ'' ಎನ್ನುವ ಅವರ ಮಾತಿನಲ್ಲಿ ಈ ಶೈಥಿಲ್ಯದ ಅಪಸ್ವರವು ಎದ್ದು ಕಾಣುತ್ತದೆ. ವೇದವು ಪ್ರಮಾಣವೇ ಆಗಿದೆ; ತನಗೆ ಏನೂ ಅನರ್ಥ ಸಂಭವಿಸುವುದಿಲ್ಲವೆನ್ನುವ ನಿರ್ಧಾರದ ಧೀರ ಘೋಷವನ್ನು ಅವರು ಉಸುರಲಿಲ್ಲ. ""ವೇದವು ಪ್ರಮಾಣವಾದರೆ'' ಎನ್ನುವಸಂಶಯವಾಣಿಯ ಕಹಿಫಲವನ್ನು ಆಗಲೇ ಅವರು ಪಡೆಯುವಂತಾಯಿತು. ನಮ್ಮ ಪ್ರತಿಯೊಂದು ಸಂಸ್ಕೃತಿಗೂ ಅಚಲವಿಶ್ವಾಸದ ಹನ್ನೆಲೆಯಿರಬೇಕು. ನಮ್ಮ ಜೀವನದಲ್ಲಿ ಎಲ್ಲಿಯೂ ಸಂಶಯ-ವಿಪರ್ಯಾಸಗಳ ಗಾಳಿ ಸುಳಿಯದಂತೆ ನಾವು ಎಚ್ಚರಿಕೆ ವಹಿಸಬೇಕು. ವ್ಯಾಮೋಹದಿಂದಾಗಲಿ ಅರೆಮನಸ್ಸಿನಿಂದಾಗಲಿ ಮಾಡಿದ ಕೃತಿಗಳು ಸತ್ಫಲವನ್ನು ನೀಡಲಾರವು. ಭಗವಂತನೇ ರಕ್ಷಕನೆಂಬ ದೃಢವಿಶ್ವಾಸದಿಂದ ಭಕ್ತನು ಪ್ರಬಲ ವಿಪತ್ತಿಗಳನ್ನೂ ಎದುರಿಸಿವಿಜಯಶೀಲನಾಗುವನು. ರಕ್ಷ. ತೀತ್ಯೇವ ವಿಶಾ ಸಃ ತದೀಯೋಸಹಮಿತಿ ಸ್ಥ ತೆ | -ಗೀತಾತಾತ್ಪ ರ್ಯ ಶಾಸ್ತ್ರೀಯ ವಿವೇಚನೆಯಿಂದ ಸುದೃಢವಾದ ತತ್ತ್ವಜ್ಞಾನವನ್ನು ಪಡೆದು ಅದರತಳಹದಿಯಲ್ಲಿ ತನ್ನ ಕರ್ತವ್ಯವನ್ನು ಕಂಡು ನಿರ್ಧಾರದಿಂದ ಮುನ್ನಡೆಯ ಬೇಕು. ಧರ್ಮಸಮ್ಮೂಢಚೇತನನೂ ಸಂಶಯಗ್ರಸ್ತನೂ ಆದ ಅರ್ಜುನನಿಗೆ ಜ್ಞಾನದಹಿನ್ನೆಲೆಯನ್ನು ಒರಗಿಸಿ ದೃಢನಿರ್ಧಾರವನ್ನು ಮೂಡಿಸುವುದಕ್ಕಾಗಿಯೇ ಶ್ರೀಕೃಷ್ಣನು ಇಲ್ಲಿ ಸಂಶಯ ವಿಪರ್ಯಾಸಗಳಿಂದ ಆಗುವ ಅನರ್ಥವನ್ನು ವಿವರಿಸುತ್ತಾನೆ. ಈ ಸಂಶಯ-ಭ್ರಾಂತಿಗಳನ್ನು ಕಿತ್ತೊಗೆದು ತತ್ತ್ವಜ್ಞಾನದ ನಿರಭ್ರ ಶುಭ್ರ ಪ್ರಭೆಯಿಂದ ಬೆಳಗುವ ಕರ್ತವ್ಯದ ರಾಜಪಥದಲ್ಲಿ ನಿಃತಂಕವಾಗಿ ನಿರಾತಂಕವಾಗಿಸಾಗಬೇಕೆಂದು ಪರಮಾತ್ಮನು ಆದೇಶನೀಡುತ್ತಾನೆ: .. ಪೃತ್‌ಸ್ಥಂ ಜ್ಞಾನಾಸಿನಾನತತ್ಯನಃ। ಛಿತ್ವ ನಂ ಸಂಶಯಂ ಯೋಗ- ಮಾತಿಷ್ಠೊ ತ್ರಿಷ್ಠ ಭಾರತ ॥ ಇದಕ್ಕಾಗಿಯೇ ಗೀತೆಯ 4ನೇ ಅಧ್ಯಾಯದ ಕೊನೆಯಲ್ಲಿ ತತ್ತ್ವಜ್ಞಾನದ ಮಹತ್ತ್ವವನ್ನು ವಿಶೇಷವಾಗಿ ವರ್ಣಿಸಲಾಗಿದೆ.
Bannanje Govindacharya (1936–2020)Bhagavad Gita Pravachana
ತಸ್ಮಾತ್‌ ಅಜ್ಞಾನ ಸಂಭೂತಮ್‌ ಹೃತ್‌ सुल ಜ್ಞಾನ ಅಸಿನಾ ಆತ್ಮನಃ | ಛಿತ್ವೈನಮ್‌ ಸಂಶಯಮ್‌ ಯೋಗಮ್‌ ಆತಿಷ್ಠ ಉತ್ತಿಷ್ಠ ಭಾರತ-ಆದ್ದರಿಂದ, ಓ ಭಾರತಾ, ಅಜ್ಞಾನದಿಂದ ಹುಟ್ಟಿ ಬಗೆಯೊಳಹೊಕ್ಕು ನಿಂತ ನಿನ್ನ ಈ ಸಂದೇಹವನ್ನು ತಿಳಿವಿನ ಕತ್ತಿಯಿಂದ ಕತ್ತರಿಸಿ ಜ್ಞಾನದ ದಾರಿಯಲ್ಲಿ ನಡೆ; ಎದ್ದು ನಿಲ್ಲು. "ಆದ್ದರಿಂದ ಎದ್ದು ನಿಲ್ಲು, ಭರತ ಚಕ್ರವರ್ತಿಯಂತಹ ಮಹಾ ಪುರುಷರು ಹುಟ್ಟಿ ಬಂದ ವಂಶದವನಾದ ನೀನು ಜ್ಞಾನ ಸ್ವರೂಪನಾದ ಭಗವಂತನ ಭಕ್ತಿಯಲ್ಲಿ ನಿರತನಾದ ಜ್ಞಾನಿ(ಭಾರತ); ನಿನ್ನ ಮನಸ್ಸಿನಲ್ಲಿ ಕುಳಿತಿರುವ ಸಂಶಯವನ್ನು ಭಗವಂತನೆನ್ನುವ ಜ್ಞಾನ ಕತ್ತಿಯಿಂದ ಕಡಿದು ಹಾಕು. ಅನ್ಯಾಯದ ವಿರುದ್ಧ ಹೋರಾಟ ಭಗವಂತನ ಪೂಜೆ ಎನ್ನುವ ಧೀಕ್ಷೆ ತೊಟ್ಟು, ಸತ್ಯದ, ಪ್ರಾಮಾಣಿಕತೆಯ ಬದುಕನ್ನು ಬದುಕುವುದಕ್ಕೋಸ್ಕರ ಪುಣ್ಯದ ಸಾಧನೆಯಲ್ಲಿ ತೊಡಗು" ಎನ್ನುತ್ತಾನೆ ಕೃಷ್ಣ. ಇತಿ ಚತುರ್ಥೋ$ಧ್ಯಾಯಃ ನಾಲ್ಕನೆಯ ಅಧ್ಯಾಯ ಮುಗಿಯಿತು. rk i
Bibek Debroy (1955–2024)The Bhagavad Gita
(42) ‘O descendant of Bharata!59 Therefore, use the sword of knowledge to slice away this doubt in your heart, resulting from your own ignorance. Follow yoga!60 Arise!’