4.5

श्रीभगवानुवाच ।
बहूनि मे व्यतीतानि जन्मानि तव चार्जुन ।
तान्यहं वेद सर्वाणि न त्वं वेत्थ परन्तप ॥
śrībhagavānuvāca |
bahūni me vyatītāni janmāni tava cārjuna |
tānyahaṃ veda sarvāṇi na tvaṃ vettha parantapa ||
Swami Sivananda (1887–1963)Bhagavad Gita
5. Many births of Mine have passed, as well as of thine, O Arjuna! I know them all but thou knowest not, O Parantapa!
Sri Vishwesha Tirtharu (1931–2019)Gitasaroddhara
4.5–4.8 · ಭಗವಂತನ ಅವತಾರ ಮತ್ತು ಅದರ ಉದ್ದೇಶ
ಭಗವಂತನ ಅವತಾರ ಮತ್ತು ಅದರ ಉದ್ದೇಶ ಶ್ರೀಕೃಷ್ಣನು ತಾನು ಕರ್ಮಯೋಗದ ಉವದೇಶವನ್ನು ಸೂರ್ಯನಿಗೆ ಮಾಡಿರುವೆನೆಂದು ಹೇಳಿರುವನು. ದ್ವಾವರಯುಗದಲ್ಲಿ ಇರುವ ಕೃಷ್ಣನು ಸೃಷ್ಟಿಯ ಆದಿಯಲ್ಲಿಸೂರ್ಯನಿಗೆ ಹೇಗೆ ಉಪದೇಶ ಮಾಡಿದನು ಎಂದು ಸಹಜವಾಗಿ ಏಳಬಹುದಾದ ಪ್ರಶ್ನೆಯನ್ನು ಶ್ರೀಕೃಷ್ಣನು ತನ್ನ ಅವತಾರದವಿಚಾರವನ್ನು ವಿವರಿಸಿ ಪರಿಹರಿಸುತ್ತಾ ನೆ ಜೀವನಿಗೆ ಅನೇಕ ಜನ್ಮ ಗಳೂ ಪರಮಾತ್ಮ ನಿಗೆ ಅನೇಕ ಅವತಾರಗಳೂ ಇವೆ. ತನ್ನ ಒಂದು ಜನ್ಮವನ್ನೇ ತನ್ನ ಸಮಗ್ರ ಜೀವನವೆಂದು ನಾವು ಭಾವಿಸಬಾರದು. ಧರ್ಮಾಚರಣೆಯನ್ನು ಮಾಡಿಕೊಂಡಿದ್ದರೂ ಜೀವನದಲ್ಲಿ ಬಹಳ ದುಃಖ ಕಷ್ಟಗಳನ್ನು ಅನೇಕರು ಅನುಭವಿಸುತ್ತಾರೆ. ಅಧರ್ಮಶೀಲರಾಗಿ ಸ್ವೇಚ್ಛಾಚಾರಿ ಗಳಾಗಿದ್ದರೂ ಜೀವನದ ಸಕಲ ಸುಖ, ಭೋಗ, ವಿಲಾಸಗಳನ್ನು ಪಡೆಯುವವರೂ ಇದ್ದಾರೆ. ಆದ್ದರಿಂದ ಧರ್ಮಾಚರಣೆಯೇ ಯಾಕೆ ಬೇಕು ಎಂದು ಕೆಲವರು ಪ್ರಶ್ನಿಸುತ್ತಾರೆ. ತನ್ನ ಒಂದು ಜನ್ಮವೇ ತನ್ನಇಡೀ ಜೀವನವೆಂಬ ಭಾವನೆಯಿಂದಲೇ ಇಂತಹ ಪ್ರಶ್ನೆಗಳು ಉದ್ಭವಿಸುವವು. ಕಳ್ಳನೂ ಕಳ್ಳತನ ಮಾಡಿದ ಒಂದೆರಡು ದಿನಗಳನ್ನು ಸುಖಸಂತೋಷಗಳಲ್ಲೇ ಕಳೆಯಬಹುದು. ಔಷಧೋಪಚಾರಮಾಡಿದ ಒಂದೆರಡು ದಿನಗಳಲ್ಲಿ ಅದರ ಲಾಭವು ದೊರಕದೆ ಇರಬಹುದು. ಕೆಲವೇ ದಿನಗಳ ಅನುಭವದಿಂದ ಒಂದರ ಲಾಭ-ಹಾನಿಗಳನ್ನು ಯಾರೂ ನಿರ್ಧರಿಸುವುದಿಲ್ಲ. ಪ್ರತಿಯೊಂದರ ಒಳ್ಳೆಯ ಹಾಗೂ ಕೆಟ್ಟ ಪರಿಣಾಮಗಳನ್ನು ಕಾಣಲು ನಾವು ಅನೇಕ ದಿನಗಳವರೆಗೆ ಪ್ರತೀಕ್ಷೆಯನ್ನು ಮಾಡಬೇಕಾಗುತ್ತದೆ. ಧರ್ಮ-ಅಧರ್ಮಗಳ ಬಗ್ಗೆಯೂ ಇದೇ ಮಾತು ಅನ್ವಯಿಸುತ್ತದೆ. ಆತ್ಮನ ವಿಶಾಲ ದೀರ್ಫಜೀವನದಲ್ಲಿ ಒಂದು ಜನ್ಮ ಎಂದರೆ ಒಂದು ದಿವಸವಿದ್ದಹಾಗೆ, ಕೇವಲ ಒಂದು ಜನ್ಮದ ಆಗುಹೋಗುಗಳಿಂದಲೇತನ್ನ ಎಲ್ಲ ಧರ್ಮ, ಕರ್ಮಗಳ ಫಲಿತಾಂಶಗಳನ್ನು ಅಳೆಯಬಾರದು. ತನ್ನ ಜೀವನದ ಒಂದು ಅಂಶವನ್ನು ಮಾತ್ರ ನೋಡಿ ತಾತ್ಕಾಲಿಕ ಸುಖದುಃಖಗಳಿಂದ ನಾವು ಮಾಡುವ ನಿರ್ಧಾರವು ಎಂದಿಗೂ ಸತ್ಯವಾಗಿರಲಾರದು. ಅಪೂರ್ಣವಾದ ಚಿತ್ರ ಹಾಗೂ ಶಿಲ್ಪಗಳು ವಿಕೃತವಾಗಿಯೇ ತೋರಬಹುದು. ಅಂತೆಯೇ ನಮ್ಮ ಜೀವನದ ಅಪೂರ್ಣ ದರ್ಶನದಿಂದಲೇ ಧರ್ಮ-ಅಧರ್ಮಗಳ ವಾಸ್ತವಿಕ ಪರಿಣಾಮಗಳನ್ನು ನಾವು ನಿರ್ಧರಿಸಲಾರೆವು. ಜೀವನು ಅನಾದಿಯಾಗಿದ್ದು ಒಂದು ದೈಹಿಕ ಜೀವನವು ಜೀವಾತ್ಮರ ಅನಂತವಾದ, ವಿಸ್ತಾರವಾದ ಜೀವನದ ಒಂದು ಭಾಗಮಾತ್ರವಾಗಿದೆಯೆಂದು ಶಾಸ್ತ್ರವುಸಾರಿದೆ. ಈ ದೃಷ್ಟಿಯಿಂದನಮ್ಮ ಜೀವನವನ್ನೂ ಕರ್ತವ್ಯಾಕರ್ತವ್ಯಗಳನ್ನೂ ನಾವು ಪರೀಕ್ಷಿಸಿದರೆ ಜೀವನದ ಸುಖದುಃಖಗಳ ಸರಿಯಾದ ಅರ್ಥವು ನಮಗೆ ಆಗುವುದು. ತಾತ್ಕಾಲಿಕ ಸುಖದುಃಖಗಳಿಂದ ವಿಚಲಿತರಾಗದೆ ಧರ್ಮಮಾರ್ಗದಲ್ಲಿ ಮುನ್ನಡೆಯುವ ಧೀರಭಾವವೂ ನಮಗೆ ಪ್ರಾವವಾಗುವುದು. ಹೀಗೆ ಜೀವನಿಗೆ ಅನೇಕ ಜನ್ಮಗಳಿರುವಂತೆ ಪರಮಾತ್ಮನಿಗೂ ಅನೇಕ ಜನ್ಮಗಳಿವೆ. ಪರಮಾತ್ಮನ ಈ ಜನ್ಮವನ್ನು ಅವನ ಅವತಾರವೆಂದು ಕರೆಯಲಾಗು ವುದು. ಅವನು ಯಾವುದೇವಿಕಾರ, ಬಂಧನಗಳಿಗೆ ಒಳಗಾಗದೆ ಸ್ವೇಚ್ಛೆಯಿಂದ ಜಗತ್ತಿನಲ್ಲಿ ವ್ರಾದುರ್ಭವಿಸುವನು. ತನ್ನ ವ್ರಾದುರ್ಭಾವದ ಹಿಂದುಮುಂದು ಗಳನ್ನು ಯಾವಾಗಲೂ ಭಗವಂತನು ಅರಿತಿರುವನು. ನಮಗಾದರೋ ನಮ್ಮ ಜನ್ಮದ ಪೂರ್ವಾವರಗಳು ಗೊತ್ತಿರುವುದಿಲ್ಲ. ಹಿಂದೇನು ? ಮುಂದೇನು ? ಎಂಬುದನ್ನೇನೂ ತಿಳಿಯದೆ ವರವಶರಾಗಿ ವುಣ್ಯವಾವಗಳ ಹಿಡಿತಕ್ಕೆ ಸಿಲುಕಿ ಜಗತ್ತಿನ ಹುಟ್ಟುಸಾವುಗಳ ಚಕ್ರದಲ್ಲಿ ತಿರುಗುತ್ತಿರುವೆವು. ಇದೇ ಭಗವಂತನ ಹಾಗೂನಮ್ಮವ್ರಾದುರ್ಭಾವಗಳಲ್ಲಿಇರುವ ಅಂತರವಾಗಿದೆ. ತಾನ್ಯಹಂ ವೇದ ಸರ್ವಾಣಿ ನತ್ವಂ ವೇತ್ಚ ಪರಂತಪ। . ಸರ್ವಜ್ಞನೂ ಸ್ವತಂತ್ರನೂ ಆದ ಪರಮಾತ್ಮನ ಅವತಾರದ ಉದ್ದೇರ ಏನೆಂಬುದನ್ನು ಶ್ರೀಕೃಷ್ಣನೇ ಸ್ವತಃ ವಿವರಿಸುತ್ತಾನೆ. ನಾವು ಯಾವುದೇ ಕಾರ್ಯವನ್ನು ಒಂದು ಪ್ರಯೋಜನದ ಅಪೇಕ್ಷೆಯಿಂದ ನೆರವೇರಿಸುವೆವು. ಪರಮಾತ್ಮನು ಇದೇ ರೀತಿ ವ್ರಯೋಜನದ ಅಪೇಕ್ಷೆಯಿಂದ ಕಾರ್ಯವನ್ನು ಮಾಡಿದಲ್ಲಿ ಅವನ ಪೂರ್ಣತೆಗೆ ಭಂಗ ಬರುವುದು. ಯಾವುದಾದರೂ ಒಂದನ್ನು ವಡೆಯಬೇಕೆಂಬ ಬಯಕೆಯು ಅದನ್ನು ಹೊಂದಿರದ ಅವೂರ್ಣ ವ್ಯಕ್ತಿಯಲ್ಲೇ ಮೂಡಬಲ್ಲದು. ಸರ್ವವನ್ನೂ ಹೊಂದಿ ವರಿವೂರ್ಣ ವ್ಯಕ್ತಿಯಾದ ಭಗವಂತನಲ್ಲಿ ಯಾವ ಬಯಕೆಯೂ ಉಂಟಾಗಲು ಅವಕಾಶವಿಲ್ಲ ಹೀಗಾಗಿ ಯಾವ ಪ್ರಯೋಜನದ ಆಶೆಯಿಂದ ಪರಮಾತ್ಮ ನು ಪ್ರವರ್ತಿಸುವನು? ಎಂಬ ಸಂದೇಹವು ಉದ್ಭವಿಸುವುದು ಸಹಜವಾಗಿದೆ. ಈ ಸಂದೇಹಕ್ಕೆ ಪರಿಹಾರವನ್ನು ಒದಗಿಸುವ ರೀತಿಯಲ್ಲಿ ತನ್ನ ಅವತಾರದ ಉದ್ದೇಶವನ್ನು ಸ್ವಾಮಿಯು ನಿರೂಪಿಸಿದ್ದಾನೆ. ಪೂರ್ಣನಾದ ಪರಬ್ರಹ್ಮನಲ್ಲಿಸ್ವಪ್ರಯೋಜನದ ಅವೇಕ್ಷೆಯು ಇಲ್ಲದಿದ್ದರೂಕರುಣಾವೂರ್ಣನಾದ ಆತನು ವರರಉದ್ದಾರ, ಅನುಗ್ರಪಗಳನ್ನು ಬಯಸಿ ಅದಕ್ಕಾಗಿ ಪ್ರವರ್ತಿಸಬಹುದು. ನಾವು ವರರ ಉಪಕಾರಕ್ಕಾಗಿ ಶ್ರಮಿಸುವಾಗಲೂ ಆಂತರ್ಯದಲ್ಲಿ ಸ್ವಂತದ ವ್ರಯೋಜನದ ಆರೆಯು ಇದ್ದೇ ಇರುವುದು. ಸಾಮಾನ್ಯ ಜನರಲ್ಲಿ ಕ್ಟುದ್ರ ಸ್ವಾರ್ಥದ ಆರೆಯಿದ್ದರೆಮಹಾತ್ಮರಲ್ಲಿ ಭಗವಂತನ ಅನುಗ್ರಹವನ್ನು ಹೊಂದಿ ಆತ್ಮೋತ್ಪತಿಯನ್ನು ವಡೆಯುವ ಮಹೋನ್ನತ ಆಕಾಂಕ್ಷೆ ಇರುತ್ತ ದೆ. ಆಂತೂ ಪ್ರತಿಯೊಬ್ಬರೂ ಯಾವುದಾದರೂ ತುಚ್ಛ ಅಥವಾ ಉಚ್ಚ ಆಕಾಂಕ್ಷೆಯಿಂದ ಪ್ರೇರಿತರಾಗಿಯೇ ಪ್ರತಿಯೊಂದು ಕಾರ್ಯವನ್ನು ಕೈಗೊಳ್ಳುವರು. ಸ್ವಪ್ರಯೋಜನದ ಅವೇಕ್ಷೆಯ ಲವಲೇಶವೂಇಲ್ಲದೆ ಕೇವಲ ಅನ್ಯರ ಕಲ್ಯಾಣದ ಕಾಮನೆಯಿಂದಲೇ ಪ್ರವೃತ್ತವಾಗುವ ಏಕೈಕ ವಸ್ತುವು ಜಗತ್ತಿನಲ್ಲಿ ಇರುವುದಾದರೆ ಅದು ಕರುಣಾನಿಧಿಯಾದ ಪರಬ್ರಹ್ಮ ಒಂದೇ. ಅವನ ಲೀಲಾವತಾರವಾಗಲಿ ಸೃಷ್ಟಿಯಾಗಲಿ ಕೇವಲ ಕರುಣೆಯಿಂದ ಪ್ರೇರಿತ ವಾದುದು. ಅಲ್ಲಿ ಸ್ವಂತದ ಬಯಕೆ ಏನೂ ಇರುವುದಿಲ್ಲ. ಜಗತ್ತಿನಲ್ಲಿ ಇರುವ ಸತ್‌ಚೇತನರ ಉದ್ಭಾರಕ್ಕಾಗಿಯೇ. ಪರಮಾತ್ಮನ. ಅವತಾರ. ಧರ್ಮದ ಗ್ಲಾನಿಯೂ ಅಧರ್ಮದ ಅಧ್ಯುತ್ಹಾನವೂ ಆದಾಗ ದುಷ್ಟರ ನಿಗ್ರಹದಿಂದಲೂ ನಾಧುಜನತೆಯ ರಕ್ಷಣೆಯಿಂದಲೂ ಧಾರ್ಮಿಕಶಕ್ತಿಯನ್ನು ವ್ರಜ್ವಲಿತಗೊಳಿಸು ವುದಕ್ಕಾಗಿಯೇ ತಾನು ಅವತರಿಸುವುದಾಗಿ ಪರಮಾತ್ಮನು ನಿರೂಪಿಸಿದ್ದಾ ನೆ ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ । ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್‌ ॥ ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕತಾಮ್‌ [ ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ॥ ಪರಮಾತ್ಮನು ಭೂಮಿಯಲ್ಲಿ ಅವತರಿನದೆ ತನ್ನ ಸ್ಥಾನದಲ್ಲಿ ಇದ್ದೇ ತನ್ನ ಅಖಂಡ ಇಚ್ಛಾಶಕ್ತಿಯಿಂದಲೇ ದುಷ್ಟರನ್ನು ನಿಗ್ರಹಿಸಬಲ್ಲ ಆದರೂ ಭೂಮಿಗಿಳಿದು ಸಾಮಾನ್ಯ ಮಾನವರೊಡನೆ ಬೆರೆತು ತನ್ನ ಲೀಲಾಕಾರ್ಯಗಳನ್ನು ನಡೆಸಿರುವನು. ಇದರಲ್ಲೂ ನಮ್ಮನ್ನು ತರಬೇತಿಗೊಳಿಸುವ ಅವನ ಉದ್ದೇಶವು ಅಡಗಿದೆ. ಮಗುವನ್ನು ಕಂಕುಳಲ್ಲಿ ಇಟ್ಟುಕೊಂಡು ತಾಯಿ ವೇಗವಾಗಿ ನಡೆಯಬಲ್ಲಳು. ಆದರೆ ಅವಳು ಹಾಗೆ ನಡೆದರೆ ಮಗು ನಡೆಯನ್ನು ಕಲಿಯುವುದೆಂದು? ಆದ್ದರಿಂದ ತಾಯಿ ತನ್ನ ವೇಗವನ್ನು ಕುಗ್ಗಿಸಿ ಮಗುವಿನ ಹೆಜ್ಜೆಗೆ ಸರಿಯಾಗಿ ತನ್ನ ಹೆಜ್ಜೆಯನ್ನಿಟ್ಟು ನಿಧಾನವಾಗಿ ನಡೆದು ಮಗುವಿಗೆ ತರಬೇತಿಯನ್ನು ನೀಡುವಳು. ಪರಮಾತ್ಮನ ಅವತಾರ ಕಾರ್ಯದಲ್ಲೂ ಈ ಮಾತೆಯ ಅಂತಃಕರಣವೇ ಹರಿದಿದೆ. ತಾನು ಧರೆಗಿಳಿದು ಮಾನವನಾಗಿ ವ್ಯವಹರಿಸಿ, ಮಾನವರಾಗಿ ನಾವು ಹೇಗೆ ನಡೆಯಬೇಕೆಂಬುದನ್ನು ಪರಮಾತ್ಮನು ನಮಗೆ ಕಲಿಸಿಕೊಡುತ್ತಿದ್ದಾನೆ. ನಮಗೆ ಜೀವನದ ಶಿಕ್ಷಣವನ್ನು ನೀಡುವುದ ಕ್ಯಾಗಿಯೇ ಪರಮಾತ್ಮನ ಅವತಾರ. ಇದನ್ನು ಭಾಗವತದಲ್ಲಿ ಹೀಗೆ ನಿರೂಪಿಸ ಲಾಗಿದೆ: ಮರ್ತ್ಯಾವತಾರಸ್ತಿ ಹೆ ಮರ್ತ್ಯಶಿಕ್ಸ! ಣಂ1 ""ಮಾನವನಿಗೆ ಶಿಕ್ಷಣ ನೀಡುವುದೇ ಭಗವಂತನ ಮಾನವಾವತಾರದ ಪ್ರಯೋಜನ.'' ಪರಮಾತ್ಮನು ತನ್ನ ಅವತಾರದಲ್ಲಿ ದುಷ್ಟರನ್ನು ಯಾಕೆ ನಿಗ್ರಹಿಸುತ್ತಾನೆ? ರಾಗದ್ವೇಷಾದಿಗಳು ಇಲ್ಲದ ಭಗವಂತನು ಇಂತಹ ಹಿಂನಾಕೃತ್ಯದಲ್ಲಿ ಯಾಕೆ ಪ್ರವೃತ್ತನಾಗುವನು? ಸಾಮಾನ್ಯ ಜನರಲ್ಲಿ ದೇಹಾಭಿಮಾನ ಇರುವುದರಿಂದ ರಾಗದ್ವೇಷಾದಿಗಳು ಉದಯಿಸಿ ನಿಗ್ರಹ, ಅನುಗ್ರಹಗಳನ್ನು ಅವರು ಮಾಡಬಲ್ಲರು. ರಾಜನು ತನ್ನನ್ನು ಹೊಗಳಿದವರಿಗೆ ಪುರಸ್ಕಾರವನ್ನೂ ತೆಗಳಿದವರಿಗೆ ಶಿಕ್ಷೆ ದಂಡಗಳನ್ನೂ ವಿಧಿಸುವುದು ಪ್ರಕೃತಿ ಬಂಧನಕ್ಕೆ ಒಳಗಾದ ಆತನಿಗೆ ಸಹಜವೇ ಆಗಿದೆ. ಆದರೆ ಪ್ರಕೃತಿಗೆ ಅತೀತನೂ ರಾಗದ್ವೇಷಾದಿ ದೂರನೂ ಆದ ಪರಮಾತ್ಮನೇ ಅಧಿಕಾರಿಗಳು, ರಾಜರು ಮುಂತಾದಸಾಮಾನ್ಯ ವ್ಯಕ್ತಿಗಳಂತೆ ತನ್ನ ಭಕ್ತರನ್ನು ಅನುಗ್ರಹಿಸುವುದೂ ತನ್ನ ವಿರೋಧಿಗಳನ್ನು ದಂಡಿಸುವುದೂ ಹೇಗೆ ಸಮಂಜಸವೆನಿಸುವುದು? ಎಂದು ಕೆಲವರು ಪ್ರಶ್ನಿಸುತ್ತಾರೆ. ಭಾಗವತದ ಏಳನೇಸ್ಕಂದದಲ್ಲಿ ಈ ಪ್ರಶ್ನೆಯನ್ನು ವಿವೇಚಿಸಿದ್ದಾರೆ: ಸರ್ವಾತ್ಮನಃ ಸಮದೃಶೋ ಹೃದ್ಧಯಸ್ಯಾನಹಂಕೃತೇಃ ॥ ತತ್‌ಕೃತಂ ಮತಿವೈಷಮ್ಯಂ ನಿರವದ್ಯಸ್ಯ ನ ಕ್ವಚಿತ್‌ ॥ ಪ್ರಕೃತಿಗೆ ಅತೀತನಾದ ಪರಮಾತ್ಮನಿಗೆ ರಾಗದ್ವೇಷಾದಿ ಮನೋವಿಕಾರಗಳ ಲವಲೇಶವೂ ಇರುವುದಿಲ್ಲ. ಸ್ತೋತ್ರ, ನಿಂದೆಗಳಿಂದ ನಮ್ಮಂತೆ ಅವನಲ್ಲಿ ಯಾವುದೇ ವಿಕಾರ ವಿಪರಿಣಾಮಗಳು ಸಂಭವಿಸುವುದಿಲ್ಲ. ತನ್ನ ಸ್ತೋತ್ರ ಪೂಜೆಗಳಿಗೆ ಮರುಳಾಗಿಯಾಗಲಿ ತನ್ನ ನಿಂದೆಯಿಂದ ವಿಭ್ರಾಂತನಾಗಿಯಾಗಲಿ ಪರಮಾತ್ಮನು ಶಿಕ್ಷರಕ್ಷಿಗಳನ್ನು ವಿಧಿಸುತ್ತಿಲ್ಲ. ಸತ್ಯವನ್ನು ತಿಳಿದು ಆತತ್ತ್ವಜ್ಞಾನದ ತಳಹದಿಯಲ್ಲಿ ತಮ್ಮ ಜೀವನವನ್ನು ನಡೆಸುವವರೇಸಂತರುಹಾಗೂ ಭಕ್ತರು. ಈ ಸಕ್ಕವನ್ನು ತೆಗಳಿ ವಿವರ್ಯಯವನ್ನು ಜಗತ್ತಿನಲ್ಲಿ ಹರಡಿ ಲೋಕವ್ಯವಸ್ಥೆಯನ್ನು ಹಾಳುಗೆಡಹುವ ರಾಜಸ, ತಾಮನ ಜೀವಗಳೇ ಭಗವದ್‌ದ್ರೋಹಿಗಳು. ಪರಮಾತ್ಮನು ದೇವತೆಗಳನ್ನು ಹಾಗೂ ತನ್ನ ಭಕ್ತರನ್ನು ಸಂರಕ್ಷಿಸುವುದೆಂದರೆ ಸಾತ್ವಿಕ ಶಕ್ತಿಯನ್ನು ಬಲಗೊಳಿಸಿದಂತೆ. ಅಸುರರನ್ನು ನಿಗ್ರಹಿಸುವಲ್ಲಿ ರಾಜನ, ತಾಮನದುಚಕ್ತಿಗಳ ದಮನವೇಸದೆಯುತ್ತದೆ. ಸ್ವಾರ್ಥಪೂರ್ಣವಾದಮಮತೆ, ಅಭಿಮಾನಗಳಿಂದ ವರಮಾತ್ಮನ ಶಿಕ್ಚಾರಕ್ಷಾ ವ್ಯಾವಾರಗಳು ನಡೆಯುತ್ತಿಲ್ಲ ಜಗತ್ತಿನ ಸೃಷ್ಟಿಯ ಉದ್ದೇಶಕ್ಕೆ ಸಹಾಯವಾಗುವಂತೆ ವ್ರವಂಚದ ಸ್ಥಿತಿ, ವಿಕಾನಗಳಿಗೆ ಅನುಗುಣಗಳಾಗುವ ಸಾತ್ತ್ವಿಕ ವಿಧಾಯಕ ಶಕ್ತಿಯನ್ನು ಪೋಷಿಸಿ ಪ್ರತಿರೋಧಕ ಶಕ್ತಿಗಳನ್ನು ಅಡಗಿಸುವುದೇ ಪರಮಾತ್ಮನ ಅವತಾರವ್ಯಾವಾರದ ಗುರಿಯಾಗಿದೆ. ಇಲ್ಲಿ ರಾಗದ್ವೇಷಗಳಿಗೆ ಎಡೆಯೆಲ್ಲಿ? ತನ್ನ ಸ್ವಾರ್ಥಸಾಧನೆಯ ಸಂಕುಚಿತ ವೃತ್ತಿ ಗೆ ಇಲ್ಲಿ ಅವಸರವೇ ಇಲ್ಲ ಭಾಗವತದಲ್ಲಿ ಹೀಗೆ ಹೇಳಿದ್ದಾರೆ: ಸತ್ವಂ ಸುರಾನೀಕಮಿವೈಧಯತ್ಯಜಃ ರಜಸ್ತಮಸ್ಕಾನ್‌ ಪ್ರಹಿಣೋತ್ಯುರುಕ್ರಮಃ ॥ ವರಮಾತ್ಮನ ವ್ಯಾಪಾರವನ್ನು ಈ ದೃಷ್ಟಿಯಿಂದ ನೋಡಿದಾಗ ಅವನಲ್ಲಿ ಯಾವ ವೈಷಮ್ಯ, ಪಕ್ಷಪಾತಗಳನ್ನೂ ಎಣಿನಲು ಸಾಧ್ಯವಿಲ್ಲ. ಕೆಲವು ವ್ಯಕ್ತಿಗಳು ತಮ್ಮ ಇತಿಮಿತಿಗಳನ್ನು ಮೀರಿ ಪೆಡಂಭೂತಗಳಂತೆ, ಲೋಕಕ್ಷೊ ಭಕಾರಕ ಅನಿಷ್ಟ ಶಕ್ತಿಗಳಾಗಿ ಸ್ವೇಚ್ಛಾಚಾರದಿಂದ ವರ್ತಿಸಿ ಲೋಕ ವ್ಯವಸ್ಥೆಯ ತಳಹದಿಯನ್ನೇ ಅಲುಗಾಡಿಸುತ್ತಾರೆ ಶರೀರದ ಒಂದು ಭಾಗದಲ್ಲಿ ಬೆಳೆದ ಕ್ಯಾನ್ಸರ್‌ ರೋಗವು ಇಡೀ ಶರೀರವನ್ನೇ ಕಲುಷಿತಗೊಳಿಸುವಂತೆ ಅಂತಹ ವ್ಯಕ್ತಿಗಳು ತಮ್ಮ ದಾನವಬಲದಿಂದ ಇಡೀ ಜಗತ್ತನ್ನೇ ಕದಡಿಸುತ್ತಾರೆ. ಪ್ರಪಂಚ ವನ್ನು ಉಳಿಸಲು ಇಂತಹ ದುಃಶಕ್ತಿಗಳ ದಮನವು ಅನಿವಾರ್ಯವೇ ಆಗಿರು ವುದು. ಶರೀರದ ಒಂದು ಭಾಗವು ತನ್ನ ಮಿತಿಯನ್ನು ಮೀರಿ ಉಬ್ಬಿ ಬೆಳೆದಾಗ ಶಸ್ತ್ರಚಿಕಿತ್ಸೆಯು ಅನಿವಾರ್ಯವಾಗುವಂತೆ ಲೋಕಮರ್ಯಾದೆಯನ್ನು ಅತಿಕ್ರಮಿಸಿ, ತಮ್ಮ ಪಾಠವೀ ದುವಕ್ತಿಯಿಂದ ಮುನ್ನಡೆಯುವ ಈ ಅಸುರ ವ್ಯಕ್ತಿಗಳ ದಮನವೂ ಹಿಂಸೆಯಾಗಿರದೆ ಜಗತ್ತನ್ನು ಉಳಿಸಲು ದೇವರು ನಡೆಸಿರುವ ಶಸ್ತ್ರ ಚಿಕಿತ್ಸೆಯೆಂದೇ ಹೇಳಬೇಕಾಗುವುದು. ಆಶೆ, ರೋಷಗಳಿಂದ ಮಾಡುವ ಹಿಂಸೆಗೂ ಜಗದ್‌ವ್ಯವಸ್ಥೆಗಾಗಿ ಮಾಡುವ ನಿಗ್ರಹಕಾರ್ಯಕ್ಕೂ ಇರುವ ಮಹಾ ಅಂತರವನ್ನು ನಾವು ಗ್ರಹಿಸಿಕೊಂಡರೆ ಭಗವಂತನ ಅವತಾರ ಕಾರ್ಯದ ಬಗ್ಗೆ ಶಂಕಾಶಂಕೆಗಳು ನಮ್ಮಲ್ಲಿ ಒಡಮೂಡಲಾರವು. ಅಂತೂ ಈ ಭಗವದ್ಗೀತೆಯು ಕೃಷ್ಣಾವತಾರದಲ್ಲೇ ಪ್ರಪ್ರಥಮವಾಗಿ ಪ್ರಕಟವಾದುದಲ್ಲವೆಂದೂ ವರಮಾತ್ಮನಿಂದರೇ ಅತಿ ವ್ರಾಚೀನ ಕಾಲದಲ್ಲಿ ಉವದಿಷ್ಟವಾದ ಅಮರ ಸಂದೇಶವೆಂದೂ ಭಗವಂತನು ನಿರೂಪಿಸಿ "ತಾನು ಸಂಪ್ರದಾಯಕ್ಕೆ ವ್ಯತಿರಿಕ್ತವಾದ ಹೊಸ ಮಾರ್ಗವನ್ನು ತುಳಿಯುತ್ತಿರುವೆನೆ?' ಎಂದು ಅರ್ಜುನನಿಗೆ ಮೂಡಬಹುದಾದ ಸಂಶಯವನ್ನು ನಿವಾರಿಸಿ, ಈ ಕರ್ಮ ಯೋಗದಲ್ಲಿ ಅತಿರಯವಾದ ಶ್ರದ್ಧೆ ಅಭಿರುಚಿಗಳನ್ನು ಉತ್ಪಾದಿಸಿರುವನು.
Bannanje Govindacharya (1936–2020)Bhagavad Gita Pravachana
ಭಗವಾನ್‌ ಉವಾಚ-ಭಗವಂತ ಹೇಳಿದನು. ಬಹೂನಿ ಮೇ ವ್ಯತೀತಾನಿ ಜನ್ಮಾನಿ ತವ ಚ ಅರ್ಜುನ | ತಾನಿ ಅಹಮ್‌ ವೇದ ಸರ್ವಾಣಿ ನ ತ್ವಮ್‌ ವೇತ್ಥ ಪರಂತಪ-ಓ ಅರ್ಜುನಾ, ನನಗೆ ಹಲವಾರು ಹುಟ್ಟುಗಳು ಆಗಿ ಹೋದವು. ನಿನಗೆ ಕೂಡಾ. ಓ ಅರಿಗಳನ್ನು ತರಿದವನೇ, ಅವೆಲ್ಲವನ್ನೂ ನಾನು ಬಲ್ಲೆ- ಆದರೆ ನಿನಗೆ ಗೊತ್ತಿಲ್ಲ. ಜನ್ಮ ಅಂದರೆ ಜನನ ಅಥವಾ ಹುಟ್ಟುವುದು. ಇಲ್ಲದೇ ಇರುವುದು ಹುಟ್ಟುವುದಿಲ್ಲ. ಜಡವನ್ನು ಹುಟ್ಟಿತು ಎಂದು ನಾವು ಕರೆಯುವುದಿಲ್ಲ. ಸೂಕ್ಷ್ಮ ಶರೀರದಿಂದ ಸ್ಥೂಲ ಶರೀರದಲ್ಲಿ ಕಾಣಿಸಿಕೊಳ್ಳುವುದು ಜನನ. ಸಾಯುವುದು ಅಂದರೆ ಸೂಕ್ಷ್ಮಶರೀರ ಸ್ಥೂಲಶರೀರವನ್ನು ತೈಜಿಸುವುದು. ಇಲ್ಲಿ ಕೃಷ್ಣ ಹೇಳುತ್ತಾನೆ: "ನನಗೆ ಹಾಗೂ ನಿನಗೆ ಅನೇಕ ಹುಟ್ಟುಗಳು ಆಗಿ ಹೋದವು. ನನಗೆ ಅದು ತಿಳಿದಿದೆ ಆದರೆ ಪರಂತಪನಾದ ನಿನಗೂ ಈ ವಿಚಾರ ತಿಳಿದಿಲ್ಲ" ಎಂದು.
Bibek Debroy (1955–2024)The Bhagavad Gita
(5) Bhagavan9 said: ‘O Arjuna! Many are the births that you and I have been through. I know them all. O scorcher of foes!10 You know not.’