5.10

ब्रह्मण्याधाय कर्माणि सङ्गं त्यक्त्वा करोति यः ।
लिप्यते न स पापेन पद्मपत्रमिवाम्भसा ॥
brahmaṇyādhāya karmāṇi saṅgaṃ tyaktvā karoti yaḥ |
lipyate na sa pāpena padmapatramivāmbhasā ||
Sri Madhvacharya (1238–1317)Bhagavad Gita Tatparya Nirnaya
तत्पूजात्मकानि तत्कृतानि मम शुभार्थमिति ब्रह्मण्याधानम्। स्वातन्त्र्याभावापेक्षयैव जीवस्याकर्तृत्वम्। ‘स्ववन्दनं यथा पित्रा कारितं शिशुकर्तृकम्। एवं पूजा विष्ण्वधीना भवेज्जीवकृतेत्यपि’ इति प्रवृत्ते॥
Swami Sivananda (1887–1963)Bhagavad Gita
10. He who performs actions, offering them to Brahman and abandoning attachment, is not tainted by sin as a lotus leaf by water.
Sri Vishwesha Tirtharu (1931–2019)Gitasaroddhara
5.8–5.14 · ಜ್ಞಾನಿಯು ಲೋಕವಿಮುಖನಲ್ಲ
ಜ್ಞಾನಿಯು ಲೋಕವಿಮುಖನಲ್ಲ ಸರ್ವಕರ್ಮಾಣಿ ಮನಸಾ ಸಂನ್ಕಸ್ಯಾಸ್ತೇ ಸುಖಂ ವಶೀ | ಜ್ಞಾನಯೋಗಿಯಲ್ಲಿ ಕರ್ಮದ ಸಂಬಂಧವೇಇರುವುದಿಲ್ಲ ಎಂದು ಕೆಲವರ ಅಭಿವ್ರಾಯವಿದೆ. ಕರ್ಮಯೋಗವು ಸಾಧಕನ ಪೂರ್ವಾವಸ್ಥೆಯಾಗಿದ್ದರೆ ಜ್ಞಾನಯೋಗವು ಅವನ ಕೊನೆಯ ಹಂತವಾಗಿದೆ. ಏಕಕಾಲದಲ್ಲಿ ಇವೆರಡೂ ನಾಥಕನ್ಲಿ ಮೇಶೈಸರ ಲಾರವು . ಈ ಕ್ರಿಯೆ, ಕ್ರಿಯ ಸಾಫಲಸಂಬಂಧ ಹ ಹಾಗೂ ಇವುಗಳಕಾರಣಗಳಿನಿಸಿದ ಈ ಪ್ರಪಂಚಮಾಯಾಮಯವೆನಿಸಿದ್ದುನಿದ್ದೆಯಿಂದ ಎಚ್ಚತ್ತವನಿಗೆ ಸ್ವಷ್ಠರಾಜ್ಯದ ವಿಭ್ರಮ, ವಿಲಾಸಗಳೆಲ್ಲ ಕ್ಷಣ ಮಾತ್ರದಲ್ಲಿ ಅದೃಶ್ವವಾಗುವಂತೆ ಜ್ಞಾನವನ್ನು ಪಡೆದವನ ಪಾಲಿಗೆ ಈ ಪ್ರಪಂಚವೆಲ್ಲ ಬರಿ ಕನಸೇ ಆಗಿರುವುದು. ಹಗ್ಗವನ್ನು ಸರಿಯಾಗಿನೋಡಿದವನು ಅಲ್ಲಿತಾನು ಕಲ್ಪಿಸಿಕೊಂಡ ಹಾವನ್ನು ಮತ್ತೆಕಾಣಲಾರನಸ್ಟೆ! ಅದರಂತೆ ಆತ್ಮಜ್ಞಾನವನ್ನು ಪಡೆದ ಮೇಲೆ ಅದರ ಅಧಿಷ್ಠುನದಲ್ಲಿಯೇಕಲ್ಪನೆಗೊಂಡಿರುವಮಾಯಿಕವಾದ ಜಗತ್ತಿನ ದರ್ಶನವು ಜ್ಞಾನಿಗೆ ಆಗುವುದಿಲ್ಲ. ಇಂತಹ ದೆಶೆಯಲ್ಲಿ ಅವನು ಕರ್ಮವನ್ನು ಹೇಗೆ ಮಾಡಿ ಯಾನು? ಆದುದರಿಂದ ಯಜ್ಞರೂಪವಾದ ಸತ್ಯರ್ಮದ ಅನುಷ್ಠಾನವು ಅಜ್ಞಾನದಲ್ಲಿ ತೊಳಲಾಡುವ ವ್ಯಕ್ತಿಗಳಿಗೆ ಮಾತ್ರ ಮೀಸಲಾದುದು. ಬ್ರಹ್ಮಜ್ಞಾನವನ್ನು ಪಡೆದವ್ಯಕ್ತಿಯು, ಜ್ಞಾನಹಾಗೂ ಕರ್ಮ ಸಂನ್ಯಾಸದಲ್ಲಿ ಮಾತ್ರ ಅಧಿಕೃತನು. ಅವನು ತನ್ನ ಶರೀರ ರಕ್ಷಣೆಗೆ ಮಾತ್ರ ಅವಶ್ಯಕವೆನಿಸುವ ಕಾರ್ಯಗಳನ್ನು ನಿರ್ಲಿಪ್ತತೆಯಿಂದ ನಿರ್ವಹಿಸುವನು. ಇತರ ನಿತ್ಯ-ನೈಮಿತ್ತಿಕ ಧಾರ್ಮಿಕ-ಸಾಮಾಜಿಕವೆನಿಸುವಯಾವಕಾರ್ಯಗಳನ್ನೂ ಜ್ಞಾನಿಯಾದವನು ಮಾಡಲಾರನೆಂದು ಶ್ರೀತಂಕರಾಜಾರ್ಯಮೊದಲಾದವರುಪ್ರತಿಪಾದಿಸಿ, ಇದರ ಸಮರ್ಶನೆಗಾಗಿ ಸರ್ವಕರ್ಮಾಣಿ ಮನಸಾ ಸಂನೃಸ್ಯಾಸ್ತೆ ಸುಖಂ ವತೀ। ನ ಕರ್ತೃತ್ವಂ ನ ಕರ್ಮಾಣಿ | ನೈವ ಕುರ್ವನ್‌ ನಕಾರಯಾನ್‌ | ಶಾರೀರಂ ಕೇವಲಂ ಕರ್ಮ । ಮುಂತಾದ ಶ್ಲೋಕಗಳನ್ನು ಉದಾಹರಿಸುತ್ತಾರೆ. ಈ ವಾಕ್ಯಗಳನ್ನು ಪರಾಮರ್ಶಿಸುವಾಗಲೇ ಇವರು ಹೇಳುವ ಕರ್ಮಸಂನ್ಯಾಸವು ಗೀತೆಗೆ ಸಮ್ಮತವಲ್ಲವೆಂದು ಸ್ಪಷ್ಟವಾಗುವುದು. ಸರ್ವ ಕರ್ಮಗಳ ಕಾಯಿಕ ತ್ಯಾಗವನ್ನು ಹೇಳಿರದೆಮಾನಸಿಕತ್ಯಾಗವನ್ನಷ್ಟೇ ಇಲ್ಲಿವಿಧಾನಮಾಡಲಾಗಿದೆ. "ಸರ್ವಕರ್ಮಾಣಿ ಮನಸಾ ನಂ್ಕಸ್ಯ' ಈ ವಾಕ್ಯದಲ್ಲಿ ಮಾನಸಿಕವಾಗಿ ಯಾವ ಫಲಾಭಿಲಾಷೆಯನ್ನೂ ಮಾಡಲಾಗದು ಮತ್ತು ತಾನು ಕರ್ತಾ ಎಂಬ ಸ್ವಾತಂತ್ರ್ಯದ ಅಭಿಮಾನವೂ ಮನಸ್ಸಿನಲ್ಲಿರಬಾರದು ಎಂಬ ಆಶಯವೇ ವ್ಯಕ್ತವಾಗುತ್ತದೆ. ""ಮನಸಾ'' ಎಂಬ ಪದವು ಇಲ್ಲಿ ಅರ್ಥಪೂರ್ಣವಾಗಿದೆ. ಪಶ್ಯನ್‌ ಶೃಣ್ವನ್‌ ಸ್ಪೃಶನ್‌ ಜಿಪ್ರನ್‌ ಅಶ್ನನ್‌ ಗಚ್ಛನ್‌ ಸ್ವಪನ್‌ ಶ್ವಸನ್‌ । ಪ್ರಲಪನ್‌ ವಿಸೃಜನ್‌ ಗೃಷ್ಣನ್‌ ಉನ್ಫಿಷನ್‌ ನಿಮಿಷನ್ನಪಿ ಎಂದು ಜ್ಞಾನಿಗೆ ಸಕಲ ವ್ಯವಹಾರಗಳನ್ನು ನಿರೂಪಿಸಿ ಜ್ಞಾನಿಯು ಬ್ರಹ್ಮಾರ್ಪಣಬುದ್ಧಿಯಿಂದ ಪರಮಾತ್ಮನ ಸ್ವತಂತ್ರ ಕ್ರಿಯಾಶಕ್ತಿಯ ನಿರಂತರ ಅನುಸಂಧಾನದ ಜೊತೆಗೆ ಅನಾಸಕ್ತಿಯಿಂದ ಈ ಎಲ್ಲ ವ್ಯವಹಾರಗಳನ್ನೂ ನಿರ್ವಹಿಸುವನೆಂದು ಹೇಳಿರುವುದರಿಂದ ಕಾಯಿಕವಾಗಿ ಕರ್ಮಗಳ ವರಿತ್ಯಾಗವನ್ನು ಇಲ್ಲಿ ಪ್ರತಿಪಾದಿಸಿಲ್ಲವೆಂದು ಸುಸ್ಪಷ್ಟವಾಗುವುದು. ಅಹಂಕಾರ ಮತ್ತು ಫಲಾಶೆಗಳ ಪರಿವರ್ಜನೆಯೇ ಕರ್ಮದ ಮಾನಸಿಕ ತ್ಯಾಗವೆನಿಸಿದೆ. ಕಾಮ್ಯಕರ್ಮಗಳ ವರ್ಜನವೇ ಸಂನ್ಯಾಸವೆಂದೂ ಸರ್ವಲೌಕಿಕ ಫಲಗಳನ್ನು ಬಿಡುವುದೇತ್ಯಾಗವೆಂದೂ ಹದಿನೆಂಟನೆಯ ಅಧ್ಯಾಯದಲ್ಲಿ ವರ್ಣಿಸಲಾಗಿದೆ. ಪ್ರಪಂಚವು ಕಾಲ್ಪನಿಕವಾಗಿದ್ದು ಜ್ಞಾನಿಯಾದವನಿಗೆ ಈ ಜಗತ್ತು ಕಾಣುವುದೇ ಇಲ್ಲವಾದರೆತನ್ನ ರಕ್ಷಣೆಗಾಗಿ ಉಪಯುಕ್ತವಾದ ಕಾರ್ಯಗಳನ್ನಾದರೂ ಅವನು ಹೇಗೆ ಮಾಡಬಲ್ಲನು? ಶರೀರ ಹಾಗೂ ಇತರ ಆಹಾರಾದಿ ಪದಾರ್ಥಗಳೂ ಜಗತ್ತಿನ ಜೊತೆಗೆನಿವೃತ್ತಿ ಹೊಂದಿರುವುದರಿಂದ ಅವನು ಯಾವಕ್ರಿಯೆಯನ್ನೂ ಮಾಡಲಾರನ್ಟೆ ಹೀಗಿರುವಾಗ ನಿತ್ಯಜೀವನೋಪಯುಕ್ತಕಾರ್ಯಗಳ ಮಟ್ಟಿಗೆ ಅವನಿಗೆ ಅವಕಾಶವನ್ನು ಸಲ್ಲಿಸಿರುವುದು ಅತ್ಯಂತ ಅರ್ಥಶೂನ್ಯವಾಗಿದೆ. ರೋಕಾನುಗ್ರಹಕಾರಕವೂ ಆತ್ಮೋನ್ನತಿಪೋಷಕವೂ ಆದ ವಿಸ್ತಾರವಾದ ಶ್ರೇಷ್ಠ ಕರ್ತವ್ಯಗಳನ್ನೆಲ್ಲ ದೂರಸರಿಸಿ ಉದರ ಪೋಷಣೆಗೆ ಅವಶ್ಯವೆನಿಸಿದ ಕಾರ್ಯಗಳ ಮಟ್ಟಿಗೆ ಜ್ಞಾನಿಯ ಕರ್ತವ್ಯವನ್ನು ಮೊಟಕುಗೊಳಿಸುವುದರಿಂದ ಜ್ಞಾನಿಯ ಮಟ್ಟವನ್ನೇ ಕೆಳಗಿಳಿಸಿದಂತಾಗುವುದು. ಬ್ರಹ್ಮಜ್ಞಾನಿಯಾದ ಉದಾರ, ವಿಶಾಲ ಮನಸ್ಸಿನ ಮಹಾಪುರುಷನು ಈ ಜಗತ್ತಿನಲ್ಲಿ ಶರೀರಹಾಗೂ ಅದಕ್ಕೆ ಸಂಬಂಧಿಸಿದ ವಸ್ತುಗಳನ್ನು ಮಾತ್ರ ಕಾಣುವನು. ಉಳಿದ ಪ್ರವಂಚವೆಲ್ಲ ಅವನಿಗೆ ಶೂನ್ಯವೆನ್ನುವುದು ಅರ್ಥರಹಿತವಾದ ವಿಚಾರವೆನಿಸುವುದು. ಜಗತ್ತು ಮಾಯಿಕವಾದುದರಿಂದ ಬ್ರಹ್ಮಜ್ಞಾನಿಗೆ ಇದು. ಗೋಚರವಾಗುವುದಿಲ್ಲ ವೆನ್ನುವುದರಿಂದ ಆಧ್ಯಾತ್ಮಿಕ ಪ್ರಪಂಚ ಹಾಗೂ ಜಗತ್ತಿನ ಸಂಬಂಧವನ್ನೇ ಕಡಿದುಹಾಕಿದಂತೆ. ಬ್ರಹ್ಮ ದರ್ಶನವನ್ನು ಹೊಂದಿದ ಮಹಾನುಭಾವನಿಂದಲೇ ಲೋಕದ ಜನರು ಪರಮಾತ್ಮನ ವಿಚಾರವನ್ನರಿಯಬೇಕು. ಬ್ರಹ್ಮಜ್ಞಾನಿಯಾದ ಜೀವನ್ಮುಕ್ರನಿಗೆ ಈ ಜಗತ್ತೇಕಾಣದಾದರೆ ಭಗವಂತನ ಸಂದೇಶವನ್ನು ಲೋಕೆ ನೀಡುವವರು ಬೇರೆ ಯಾರು ? ಪರಮಾತ್ಮನನ್ನೂ ಅಜ್ಞಾನಿ ಜನತೆಯನ್ನೂ ಜೋಡಿಸುವ ಸೇತುವೆಯೇ ಬ್ರಹ್ಮಜ್ಞಾನಿಯಾಗಿದ್ದು ಅವನ ಲೋಕದರ್ಶನ ವನ್ನೇ ಅಲ್ಲಗಳೆದರೆ ಯಷಿಗಳ ಸಾಕ್ಷಾತ್ಕಾರದ ಪ್ರತಿಧ್ವನಿಗಳೂ ಅವರ ಅನುಭವದ ಉದ್ಗಾರಗಳೂ ಎನಿಸಿದ ಈಗ ದೊರೆಯುವ ಶಾಸ್ತ್ರೀಯ ಉಪದೇಶಗಳೆಲ್ಲ ಅಜ್ಞಾನಿಗಳಾದ ಸಾಧಕರ, ಅನುಭವದ ಿನ್ನೆಲೆಯಿಲ್ಲದ, ಅಪ್ರಗಲ್ಪ ವಿಚಾರಗಳಿನಿಸುವವು. ಜ್ಞಾನಿಗಳೂ ಅಜ್ಞಾನಿಗಳೂ ಎಲ್ಲರೂ ಈ ಲೋಕದಲ್ಲಿ ಸ್ವಕರ್ತವ್ಯವನ್ನು ಮಾಡಲೇಬೇಕೆಂದು ಬೋಧಿಸುವ ಗೀತೆಗೆ ಈ ವಾದವು ಸರ್ವಥಾಸಮೃತವಲ್ಲ ಬ್ರಹ್ಮಣ್ಯಾಧಾಯ ಕರ್ಮಾಣಿ ಸಂಗಂ ತ್ಯಕ್ತ್ವಾ ಕರೋತಿ ಯಃ | ಎಂದು ಗೀತೆಯಲ್ಲಿ ನಿರೂಪಿಸಿದಂತೆ ಅಸಂಗಮತ್ತು ಬ್ರಹ್ಮಾರ್ಪಣ ಬುದ್ಧಿಯಿಂದ ಸ್ವಕರ್ತವ್ಯಾಚರಣೆ ಹಾಗೂ ಲೋಕವ್ಯವಹಾರ ಇವೆರಡೂ ಬ್ರಹ್ಮಜ್ಞಾನಿಗಳಲ್ಲೂ ಇವೆ ಎಂಬುದನ್ನು ಅರಿತುಕೊಂಡು ಅವರು ತೋರಿಸಿದ ಹಾದಿಯಲ್ಲಿ ಅವರು ನಡೆಯುವರೀತಿಯಲ್ಲಿ ಹೆಜ್ಜೆ ಇಡಲು ನಾವು ಪ್ರಯತ್ನಿಸಬೇಕು.
Bannanje Govindacharya (1936–2020)Bhagavad Gita Pravachana
ಬ್ರಹ್ಮಣಿ ಆಧಾಯ ಕರ್ಮಾಣಿ ಸಂಗಮ್‌ ತ್ಯಕ್ತ್ವಾ ಕರೋತಿ ಯಃ | ಲಿಪ್ಯತೇ ನ ಸಃ ಪಾಪೇನ ಪದ್ಮಪತ್ರಮ್‌ ಇವ ಅಂಭಸಾ-ಕರ್ಮಗಳನ್ನು ಭಗವಂತನಲ್ಲಿ ಒಪ್ಪಿಸಿ, ನಂಟು ನೀಗಿ ಮಾಡುವವನು ಪಾಪದಿಂದ ಅಂಟಿಸಿಕೊಳ್ಳುವುದಿಲ್ಲ-ತಾವರೆ ಎಲೆ ನೀರಿನಿಂದ ಹೇಗೋ ಹಾಗೆ. ನಾವು ಪೂಜೆಯ ಕೊನೆಯಲ್ಲಿ "ಶ್ರೀ ಕೃಷ್ಣಾರ್ಪಣ ಮಸ್ತು" ಎಂದು ಹೇಳುತ್ತೇವೆ. ಇದರ ಅರ್ಥ " ಆ ಭಗವಂತನಲ್ಲಿ ಅರ್ಪಿತ". ಅರ್ಪಿಸುವುದು ಎಂದರೆ " ಈ ಕರ್ಮವನ್ನು ಭಗವಂತ ತನ್ನ ಪೂಜಾರೂಪವಾಗಿ ನನ್ನ ಮೂಲಕ ನನ್ನ ಉದ್ಧಾರಕ್ಕಾಗಿ ಅವನೇ ಮಾಡಿಸಿಕೊಂಡ” ಎನ್ನುವ ಸಂಕಲ್ಪ. ಹೀಗೆ ನಾವು ಕರ್ಮವನ್ನು ಮಾಡಿದಾಗ ಯಾವ ಕರ್ಮದ ಲೇಪವೂ ನಮಗೆ ಅಂಟುವುದಿಲ್ಲ. 'ನಾನು, ನನ್ನದು, ನನ್ನಿಂದ' ಎನ್ನುವ ಅಹಂಕಾರ ಹೊರಟುಹೋಗುತ್ತದೆ. ಇದು ಆನಂದಮಯವಾದ ವಿಸ್ಮಯ. ತಾವರೆ ಎಲೆ ನೀರಿನಲ್ಲೇ ಇದ್ದರೂ ಕೂಡಾ ಹೇಗೆ ನೀರನ್ನು ತನಗೆ ಅಂಟಿಸಿಕೊಳ್ಳುವುದಿಲ್ಲವೋ ಹಾಗೇ, ಕರ್ಮದ ಜೊತೆಗೇ ಇದ್ದು, ಕರ್ಮ ಮಾಡಿ, ಕರ್ಮವನ್ನು ಅಂಟಿಸಿಕೊಳ್ಳದೇ ಇರುವುದು ಈ ಅನುಸಂಧಾನದಿಂದ ಮಾತ್ರ ಸಾಧ್ಯ.
Bibek Debroy (1955–2024)The Bhagavad Gita
(10) ‘He who establishes himself in the brahman,14 and giving up attachment, performs action, is not touched by sin, like water on the leaf of a lotus.’