5.8

नैव किञ्चित्करोमीति युक्तो मन्येत तत्त्ववित् ।
पश्यञ्श‍ृण्वन्स्पृशञ्जिघ्रन्नश्नन्गच्छन्स्वपञ्श्वसन् ॥
naiva kiñcitkaromīti yukto manyeta tattvavit |
paśyañśṛṇvanspṛśañjighrannaśnangacchansvapañśvasan ||
Sri Madhvacharya (1238–1317)Bhagavad Gita Tatparya Nirnaya
5.8–5.9
यथा न्यासस्य योगरूपत्वं तथाऽऽह - नैव किञ्चिदित्यादिना। ‘विष्णुनाऽर्थेष्वीरितानि मनआदीनि सर्वशः। वर्तन्तेऽन्यो न स्वतन्त्र इति जानन् हि तत्ववित्’ इति च॥08, 09॥
Swami Sivananda (1887–1963)Bhagavad Gita
8. “I do nothing at all”—thus will the harmonised knower of Truth think—seeing, hearing, touching, smelling, eating, going, sleeping, breathing,
Sri Vishwesha Tirtharu (1931–2019)Gitasaroddhara
5.8–5.14 · ಜ್ಞಾನಿಯು ಲೋಕವಿಮುಖನಲ್ಲ
ಜ್ಞಾನಿಯು ಲೋಕವಿಮುಖನಲ್ಲ ಸರ್ವಕರ್ಮಾಣಿ ಮನಸಾ ಸಂನ್ಕಸ್ಯಾಸ್ತೇ ಸುಖಂ ವಶೀ | ಜ್ಞಾನಯೋಗಿಯಲ್ಲಿ ಕರ್ಮದ ಸಂಬಂಧವೇಇರುವುದಿಲ್ಲ ಎಂದು ಕೆಲವರ ಅಭಿವ್ರಾಯವಿದೆ. ಕರ್ಮಯೋಗವು ಸಾಧಕನ ಪೂರ್ವಾವಸ್ಥೆಯಾಗಿದ್ದರೆ ಜ್ಞಾನಯೋಗವು ಅವನ ಕೊನೆಯ ಹಂತವಾಗಿದೆ. ಏಕಕಾಲದಲ್ಲಿ ಇವೆರಡೂ ನಾಥಕನ್ಲಿ ಮೇಶೈಸರ ಲಾರವು . ಈ ಕ್ರಿಯೆ, ಕ್ರಿಯ ಸಾಫಲಸಂಬಂಧ ಹ ಹಾಗೂ ಇವುಗಳಕಾರಣಗಳಿನಿಸಿದ ಈ ಪ್ರಪಂಚಮಾಯಾಮಯವೆನಿಸಿದ್ದುನಿದ್ದೆಯಿಂದ ಎಚ್ಚತ್ತವನಿಗೆ ಸ್ವಷ್ಠರಾಜ್ಯದ ವಿಭ್ರಮ, ವಿಲಾಸಗಳೆಲ್ಲ ಕ್ಷಣ ಮಾತ್ರದಲ್ಲಿ ಅದೃಶ್ವವಾಗುವಂತೆ ಜ್ಞಾನವನ್ನು ಪಡೆದವನ ಪಾಲಿಗೆ ಈ ಪ್ರಪಂಚವೆಲ್ಲ ಬರಿ ಕನಸೇ ಆಗಿರುವುದು. ಹಗ್ಗವನ್ನು ಸರಿಯಾಗಿನೋಡಿದವನು ಅಲ್ಲಿತಾನು ಕಲ್ಪಿಸಿಕೊಂಡ ಹಾವನ್ನು ಮತ್ತೆಕಾಣಲಾರನಸ್ಟೆ! ಅದರಂತೆ ಆತ್ಮಜ್ಞಾನವನ್ನು ಪಡೆದ ಮೇಲೆ ಅದರ ಅಧಿಷ್ಠುನದಲ್ಲಿಯೇಕಲ್ಪನೆಗೊಂಡಿರುವಮಾಯಿಕವಾದ ಜಗತ್ತಿನ ದರ್ಶನವು ಜ್ಞಾನಿಗೆ ಆಗುವುದಿಲ್ಲ. ಇಂತಹ ದೆಶೆಯಲ್ಲಿ ಅವನು ಕರ್ಮವನ್ನು ಹೇಗೆ ಮಾಡಿ ಯಾನು? ಆದುದರಿಂದ ಯಜ್ಞರೂಪವಾದ ಸತ್ಯರ್ಮದ ಅನುಷ್ಠಾನವು ಅಜ್ಞಾನದಲ್ಲಿ ತೊಳಲಾಡುವ ವ್ಯಕ್ತಿಗಳಿಗೆ ಮಾತ್ರ ಮೀಸಲಾದುದು. ಬ್ರಹ್ಮಜ್ಞಾನವನ್ನು ಪಡೆದವ್ಯಕ್ತಿಯು, ಜ್ಞಾನಹಾಗೂ ಕರ್ಮ ಸಂನ್ಯಾಸದಲ್ಲಿ ಮಾತ್ರ ಅಧಿಕೃತನು. ಅವನು ತನ್ನ ಶರೀರ ರಕ್ಷಣೆಗೆ ಮಾತ್ರ ಅವಶ್ಯಕವೆನಿಸುವ ಕಾರ್ಯಗಳನ್ನು ನಿರ್ಲಿಪ್ತತೆಯಿಂದ ನಿರ್ವಹಿಸುವನು. ಇತರ ನಿತ್ಯ-ನೈಮಿತ್ತಿಕ ಧಾರ್ಮಿಕ-ಸಾಮಾಜಿಕವೆನಿಸುವಯಾವಕಾರ್ಯಗಳನ್ನೂ ಜ್ಞಾನಿಯಾದವನು ಮಾಡಲಾರನೆಂದು ಶ್ರೀತಂಕರಾಜಾರ್ಯಮೊದಲಾದವರುಪ್ರತಿಪಾದಿಸಿ, ಇದರ ಸಮರ್ಶನೆಗಾಗಿ ಸರ್ವಕರ್ಮಾಣಿ ಮನಸಾ ಸಂನೃಸ್ಯಾಸ್ತೆ ಸುಖಂ ವತೀ। ನ ಕರ್ತೃತ್ವಂ ನ ಕರ್ಮಾಣಿ | ನೈವ ಕುರ್ವನ್‌ ನಕಾರಯಾನ್‌ | ಶಾರೀರಂ ಕೇವಲಂ ಕರ್ಮ । ಮುಂತಾದ ಶ್ಲೋಕಗಳನ್ನು ಉದಾಹರಿಸುತ್ತಾರೆ. ಈ ವಾಕ್ಯಗಳನ್ನು ಪರಾಮರ್ಶಿಸುವಾಗಲೇ ಇವರು ಹೇಳುವ ಕರ್ಮಸಂನ್ಯಾಸವು ಗೀತೆಗೆ ಸಮ್ಮತವಲ್ಲವೆಂದು ಸ್ಪಷ್ಟವಾಗುವುದು. ಸರ್ವ ಕರ್ಮಗಳ ಕಾಯಿಕ ತ್ಯಾಗವನ್ನು ಹೇಳಿರದೆಮಾನಸಿಕತ್ಯಾಗವನ್ನಷ್ಟೇ ಇಲ್ಲಿವಿಧಾನಮಾಡಲಾಗಿದೆ. "ಸರ್ವಕರ್ಮಾಣಿ ಮನಸಾ ನಂ್ಕಸ್ಯ' ಈ ವಾಕ್ಯದಲ್ಲಿ ಮಾನಸಿಕವಾಗಿ ಯಾವ ಫಲಾಭಿಲಾಷೆಯನ್ನೂ ಮಾಡಲಾಗದು ಮತ್ತು ತಾನು ಕರ್ತಾ ಎಂಬ ಸ್ವಾತಂತ್ರ್ಯದ ಅಭಿಮಾನವೂ ಮನಸ್ಸಿನಲ್ಲಿರಬಾರದು ಎಂಬ ಆಶಯವೇ ವ್ಯಕ್ತವಾಗುತ್ತದೆ. ""ಮನಸಾ'' ಎಂಬ ಪದವು ಇಲ್ಲಿ ಅರ್ಥಪೂರ್ಣವಾಗಿದೆ. ಪಶ್ಯನ್‌ ಶೃಣ್ವನ್‌ ಸ್ಪೃಶನ್‌ ಜಿಪ್ರನ್‌ ಅಶ್ನನ್‌ ಗಚ್ಛನ್‌ ಸ್ವಪನ್‌ ಶ್ವಸನ್‌ । ಪ್ರಲಪನ್‌ ವಿಸೃಜನ್‌ ಗೃಷ್ಣನ್‌ ಉನ್ಫಿಷನ್‌ ನಿಮಿಷನ್ನಪಿ ಎಂದು ಜ್ಞಾನಿಗೆ ಸಕಲ ವ್ಯವಹಾರಗಳನ್ನು ನಿರೂಪಿಸಿ ಜ್ಞಾನಿಯು ಬ್ರಹ್ಮಾರ್ಪಣಬುದ್ಧಿಯಿಂದ ಪರಮಾತ್ಮನ ಸ್ವತಂತ್ರ ಕ್ರಿಯಾಶಕ್ತಿಯ ನಿರಂತರ ಅನುಸಂಧಾನದ ಜೊತೆಗೆ ಅನಾಸಕ್ತಿಯಿಂದ ಈ ಎಲ್ಲ ವ್ಯವಹಾರಗಳನ್ನೂ ನಿರ್ವಹಿಸುವನೆಂದು ಹೇಳಿರುವುದರಿಂದ ಕಾಯಿಕವಾಗಿ ಕರ್ಮಗಳ ವರಿತ್ಯಾಗವನ್ನು ಇಲ್ಲಿ ಪ್ರತಿಪಾದಿಸಿಲ್ಲವೆಂದು ಸುಸ್ಪಷ್ಟವಾಗುವುದು. ಅಹಂಕಾರ ಮತ್ತು ಫಲಾಶೆಗಳ ಪರಿವರ್ಜನೆಯೇ ಕರ್ಮದ ಮಾನಸಿಕ ತ್ಯಾಗವೆನಿಸಿದೆ. ಕಾಮ್ಯಕರ್ಮಗಳ ವರ್ಜನವೇ ಸಂನ್ಯಾಸವೆಂದೂ ಸರ್ವಲೌಕಿಕ ಫಲಗಳನ್ನು ಬಿಡುವುದೇತ್ಯಾಗವೆಂದೂ ಹದಿನೆಂಟನೆಯ ಅಧ್ಯಾಯದಲ್ಲಿ ವರ್ಣಿಸಲಾಗಿದೆ. ಪ್ರಪಂಚವು ಕಾಲ್ಪನಿಕವಾಗಿದ್ದು ಜ್ಞಾನಿಯಾದವನಿಗೆ ಈ ಜಗತ್ತು ಕಾಣುವುದೇ ಇಲ್ಲವಾದರೆತನ್ನ ರಕ್ಷಣೆಗಾಗಿ ಉಪಯುಕ್ತವಾದ ಕಾರ್ಯಗಳನ್ನಾದರೂ ಅವನು ಹೇಗೆ ಮಾಡಬಲ್ಲನು? ಶರೀರ ಹಾಗೂ ಇತರ ಆಹಾರಾದಿ ಪದಾರ್ಥಗಳೂ ಜಗತ್ತಿನ ಜೊತೆಗೆನಿವೃತ್ತಿ ಹೊಂದಿರುವುದರಿಂದ ಅವನು ಯಾವಕ್ರಿಯೆಯನ್ನೂ ಮಾಡಲಾರನ್ಟೆ ಹೀಗಿರುವಾಗ ನಿತ್ಯಜೀವನೋಪಯುಕ್ತಕಾರ್ಯಗಳ ಮಟ್ಟಿಗೆ ಅವನಿಗೆ ಅವಕಾಶವನ್ನು ಸಲ್ಲಿಸಿರುವುದು ಅತ್ಯಂತ ಅರ್ಥಶೂನ್ಯವಾಗಿದೆ. ರೋಕಾನುಗ್ರಹಕಾರಕವೂ ಆತ್ಮೋನ್ನತಿಪೋಷಕವೂ ಆದ ವಿಸ್ತಾರವಾದ ಶ್ರೇಷ್ಠ ಕರ್ತವ್ಯಗಳನ್ನೆಲ್ಲ ದೂರಸರಿಸಿ ಉದರ ಪೋಷಣೆಗೆ ಅವಶ್ಯವೆನಿಸಿದ ಕಾರ್ಯಗಳ ಮಟ್ಟಿಗೆ ಜ್ಞಾನಿಯ ಕರ್ತವ್ಯವನ್ನು ಮೊಟಕುಗೊಳಿಸುವುದರಿಂದ ಜ್ಞಾನಿಯ ಮಟ್ಟವನ್ನೇ ಕೆಳಗಿಳಿಸಿದಂತಾಗುವುದು. ಬ್ರಹ್ಮಜ್ಞಾನಿಯಾದ ಉದಾರ, ವಿಶಾಲ ಮನಸ್ಸಿನ ಮಹಾಪುರುಷನು ಈ ಜಗತ್ತಿನಲ್ಲಿ ಶರೀರಹಾಗೂ ಅದಕ್ಕೆ ಸಂಬಂಧಿಸಿದ ವಸ್ತುಗಳನ್ನು ಮಾತ್ರ ಕಾಣುವನು. ಉಳಿದ ಪ್ರವಂಚವೆಲ್ಲ ಅವನಿಗೆ ಶೂನ್ಯವೆನ್ನುವುದು ಅರ್ಥರಹಿತವಾದ ವಿಚಾರವೆನಿಸುವುದು. ಜಗತ್ತು ಮಾಯಿಕವಾದುದರಿಂದ ಬ್ರಹ್ಮಜ್ಞಾನಿಗೆ ಇದು. ಗೋಚರವಾಗುವುದಿಲ್ಲ ವೆನ್ನುವುದರಿಂದ ಆಧ್ಯಾತ್ಮಿಕ ಪ್ರಪಂಚ ಹಾಗೂ ಜಗತ್ತಿನ ಸಂಬಂಧವನ್ನೇ ಕಡಿದುಹಾಕಿದಂತೆ. ಬ್ರಹ್ಮ ದರ್ಶನವನ್ನು ಹೊಂದಿದ ಮಹಾನುಭಾವನಿಂದಲೇ ಲೋಕದ ಜನರು ಪರಮಾತ್ಮನ ವಿಚಾರವನ್ನರಿಯಬೇಕು. ಬ್ರಹ್ಮಜ್ಞಾನಿಯಾದ ಜೀವನ್ಮುಕ್ರನಿಗೆ ಈ ಜಗತ್ತೇಕಾಣದಾದರೆ ಭಗವಂತನ ಸಂದೇಶವನ್ನು ಲೋಕೆ ನೀಡುವವರು ಬೇರೆ ಯಾರು ? ಪರಮಾತ್ಮನನ್ನೂ ಅಜ್ಞಾನಿ ಜನತೆಯನ್ನೂ ಜೋಡಿಸುವ ಸೇತುವೆಯೇ ಬ್ರಹ್ಮಜ್ಞಾನಿಯಾಗಿದ್ದು ಅವನ ಲೋಕದರ್ಶನ ವನ್ನೇ ಅಲ್ಲಗಳೆದರೆ ಯಷಿಗಳ ಸಾಕ್ಷಾತ್ಕಾರದ ಪ್ರತಿಧ್ವನಿಗಳೂ ಅವರ ಅನುಭವದ ಉದ್ಗಾರಗಳೂ ಎನಿಸಿದ ಈಗ ದೊರೆಯುವ ಶಾಸ್ತ್ರೀಯ ಉಪದೇಶಗಳೆಲ್ಲ ಅಜ್ಞಾನಿಗಳಾದ ಸಾಧಕರ, ಅನುಭವದ ಿನ್ನೆಲೆಯಿಲ್ಲದ, ಅಪ್ರಗಲ್ಪ ವಿಚಾರಗಳಿನಿಸುವವು. ಜ್ಞಾನಿಗಳೂ ಅಜ್ಞಾನಿಗಳೂ ಎಲ್ಲರೂ ಈ ಲೋಕದಲ್ಲಿ ಸ್ವಕರ್ತವ್ಯವನ್ನು ಮಾಡಲೇಬೇಕೆಂದು ಬೋಧಿಸುವ ಗೀತೆಗೆ ಈ ವಾದವು ಸರ್ವಥಾಸಮೃತವಲ್ಲ ಬ್ರಹ್ಮಣ್ಯಾಧಾಯ ಕರ್ಮಾಣಿ ಸಂಗಂ ತ್ಯಕ್ತ್ವಾ ಕರೋತಿ ಯಃ | ಎಂದು ಗೀತೆಯಲ್ಲಿ ನಿರೂಪಿಸಿದಂತೆ ಅಸಂಗಮತ್ತು ಬ್ರಹ್ಮಾರ್ಪಣ ಬುದ್ಧಿಯಿಂದ ಸ್ವಕರ್ತವ್ಯಾಚರಣೆ ಹಾಗೂ ಲೋಕವ್ಯವಹಾರ ಇವೆರಡೂ ಬ್ರಹ್ಮಜ್ಞಾನಿಗಳಲ್ಲೂ ಇವೆ ಎಂಬುದನ್ನು ಅರಿತುಕೊಂಡು ಅವರು ತೋರಿಸಿದ ಹಾದಿಯಲ್ಲಿ ಅವರು ನಡೆಯುವರೀತಿಯಲ್ಲಿ ಹೆಜ್ಜೆ ಇಡಲು ನಾವು ಪ್ರಯತ್ನಿಸಬೇಕು.
Bannanje Govindacharya (1936–2020)Bhagavad Gita Pravachana
ನೈವ ಕಿಂಚಿತ್‌ ಕರೋಮೀತಿ ಯುಕ್ತೋ ಮನ್ಯೇತ ತತ್ತ್ವವಿತ್‌। ಪಶ್ಯನ್‌ ಶೃಣ್ವನ್‌ ಸ್ಪೃಶನ್‌ ಜಿಫ್ರನ್ನಶ್ನನ್‌ ಗಚ್ಛನ್‌ ಸ್ವಪನ್‌ ಶ್ವಸನ್‌ ॥೮॥
5.8–5.9
ನ ಏವ ಕಿಂಚಿತ್‌ ಕರೋಮಿ ಇತಿ ಯುಕ್ತಃ ಮನ್ಯೇತ ತತ್ತ್ವವಿತ್‌। ಪಶ್ಯನ್‌ ಶೃಣ್ವನ್‌ ಸ್ಪೃಶನ್‌ ಜಿಫ್ರನ್‌ ಅಶನ್‌ ಗಚ್ಛನ್‌ ಸ್ವಪನ್‌ ಶ್ವಸನ್‌ || ಪ್ರಲಪನ್‌ ವಿಸೃಜನ್‌ ಗೃಹ್ಹನ್‌ ಉನ್ಮಿಷನ್‌ ನಿಮಿಷನ್‌ ಅಪಿ | ಇಂದ್ರಿಯಾಣಿ ಇಂದ್ರಿಯ ಅರ್ಥೇಷು ವರ್ತಂತೇ ಇತಿ ಧಾರಯನ್‌ - ನಿಜವರಿತ ಸಾಧಕ ತಾನಾಗಿ ಏನೂ ಮಾಡುತ್ತಿಲ್ಲ ಎಂದು ತಿಳಿಯಬೇಕು- ಕಾಣುವಾಗ, ಕೇಳುವಾಗ, ಮುಟ್ಟುವಾಗ, ಮೂಸುವಾಗ, ತಿನ್ನುವಾಗ, ತಿರುಗುವಾಗ, ಮಲಗುವಾಗ, ಉಸಿರುವಾಗ, ಉಸುರುವಾಗ, ಕಳೆಯುವಾಗ, ಕೊಳ್ಳುವಾಗ, ಎವೆ ಮುಚ್ಚುವಾಗ, ಎವೆ ಬಿಚ್ಚುವಾಗ ಕೂಡಾ-ಇಂದ್ರಿಯಗಳು ತಮ್ಮ ಕೆಲಸದಲ್ಲಿ ತೊಡಗಿವೆ ಎಂದು ಭಾವಿಸುತ್ತಾ. ನಮ್ಮ ಜೀವನದಲ್ಲಿ ದೇವರಪೂಜೆ ಮಾತ್ರ ಅನುಷ್ಠಾನವಲ್ಲ. ನಮ್ಮ ಪ್ರತಿಯೊಂದು ನಡೆಯೂ ಒಂದು ಕರ್ಮಯೋಗವಾಗಬೇಕು. ಯಾವುದೋ ಕಾಲ ವಿಶೇಷದಲ್ಲಿ ಮಾತ್ರ ದೇವರ ಪೂಜೆ ಮಾಡುವುದಲ್ಲ. ನಮ್ಮ ಇಡೀ ಬದುಕೇ ಒಂದು ಯಜ್ಞವಾಗಬೇಕು. ಯಜ್ಞವನ್ನು ಕನ್ನಡದಲ್ಲಿ “ಬೇಳುವೆ' ಎನ್ನುತ್ತಾರೆ. ನಮ್ಮ ಬಾಳುವೆಯೇ ಒಂದು ಬೇಳುವೆಯಾಗಬೇಕು. ಕರ್ಮಾನುಷ್ಠಾನ ಮಾಡುವವನು "ನಾನು ನಾನಾಗಿ ಏನನ್ನೂ ಮಾಡುತ್ತಿಲ್ಲ, ನನ್ನದು ಇಚ್ಛಾಪೂರ್ವಕ ಕೃತಿ ಆದರೆ ಇಲ್ಲಿ ನನಗೆ ಸ್ವಾತಂತ್ರವಿಲ್ಲ” ಎನ್ನುವ ಸತ್ಯವನ್ನು ಅರಿತಿರಬೇಕು. ನಾವು ಮಾಡಬೇಕು ಎಂದುಕೊಂಡದ್ದನ್ನು ನಮ್ಮಿಂದ ಮಾಡಲು ಆಗುವುದಿಲ್ಲ, ನಾವು ಬಯಸಿದ್ದು ಸಿಗುವುದಿಲ್ಲ, ಫಲದಲ್ಲಿ ನಮಗೆ ಸ್ವಾತಂತ್ರ್ಯವಿಲ್ಲ. ಇದು ಪ್ರತಿಯೊಬ್ಬರ ಅನುಭವಕ್ಕೆ ಬರುವ ವಿಚಾರ. ಆದರೆ ಕ್ರಿಯೆ ಮಾತ್ರ ನಮ್ಮ ಮುಖೇನ ಆಗುತ್ತಿರುತ್ತದೆ. 'ನಾನು ಇಂತಹದ್ದೇ ಸಿಗಬೇಕು, ಇಂತಾದ್ದು ಸಿಗಬಾರದು ಎನ್ನುವ ಇಚ್ಛೆಯಿಂದಾಗಲೀ, ನಾನು ಮಾಡುತ್ತಿದ್ದೇನೆ ಎನ್ನುವ ಅಹಂಕಾರದಿಂದಾಗಲೀ ಮಾಡುತ್ತಿಲ್ಲ; ನನ್ನೊಳಗಿರುವ ಭಗವಂತ ಇದನ್ನು ಮಾಡಿಸುತ್ತಿದ್ದಾನೆ' ಎಂದು ತತ್ವಜ್ಞಾನಿ. ತಿಳಿದಿರುತ್ತಾನೆ. = ಆದ್ದರಿಂದ ಯಾವುದರಲ್ಲೂ "ನಾನು, ನನ್ನದು" ಎನ್ನುವ ಅಹಂಕಾರ ಅವನಿಗಿರುವುದಿಲ್ಲ. ಎಲ್ಲವೂ ಭಗವಂತನ ಇಚ್ಛೆಯಂತೆ ನೆಡೆಯುತ್ತದೆ ಹೊರತು ಇಲ್ಲಿ ನಾವು ಸ್ವತಂತ್ರ ಕರ್ತಾರರಲ್ಲ ಎನ್ನುವ ನಿಜವನ್ನರಿತು ಆತ ತನ್ನ ಕ್ರಿಯೆಯನ್ನು ಮಾಡುತ್ತಾನೆ. ಪಶ್ಯನ್‌-ನೋಡುವಾಗ, ಶೃಣ್ವನ್‌-ಕೇಳುವಾಗ, ಸ್ಪೃಶನ್‌-ಸ್ಪರ್ಶದಲ್ಲಿ, ಜಿಫ್ರನ್‌-ಮೂಸುವಾಗ, ಅಶ್ನನ್‌- ತಿನ್ನುವಾಗ, ಗಚ್ಛನ್‌-ತಿರುಗುವಾಗ, ಸ್ವಪನ್‌-ಮಲಗುವಾಗ, ಶ್ವಸನ್‌-ಉಸಿರಿನಲ್ಲಿ, ಪ್ರಲಪನ್‌-ಮಾತಿನಲ್ಲಿ, ವಿಸೃಜನ್‌-ವಿಸರ್ಜಿಸುವಾಗ, ಗೃಹ್ಣನ್‌-ಸ್ವೀಕರಿಸುವಾಗ, ಉನ್ಮಿಷನ್‌-ತೆರೆಯುತ್ತಾ, ನಿಮಿಷನ್‌-ಮುಚ್ಚುತ್ತಾ, ಹೀಗೆ ತನ್ನೆಲ್ಲಾ ಕ್ರಿಯೆಯಲ್ಲಿ ತಾನೇನೂ ಮಾಡುತ್ತಿಲ್ಲ ಅನ್ನುವ ಅರಿವನ್ನು ತತ್ವಜ್ಞಾನಿ ತಿಳಿದಿರುತ್ತಾನೆ. ಉದಾಹರಣೆಗೆ- ನಾವು ಒಂದು ಹೂವಿನ ಅಂದವನ್ನು ಕಣ್ಣಿನಿಂದ ಸವಿಯುತ್ತೇವೆ; ಅದರ ಪರಿಮಳವನ್ನು ಮೂಗಿನಿಂದ ಮೂಸಿ ಆಸ್ವಾಧಿಸುತ್ತೇವೆ; ಆ ಹೂವನ್ನು ಮುಟ್ಟಿ-ಮುಡಿದು ಸಂತೋಷ ಪಡುತ್ತೇವೆ. ಈ ಹೂವನ್ನು ಸೃಷ್ಟಿಸಿದವ, ಅದಕ್ಕೆ ಅಂದವನ್ನು ಕೊಟ್ಟವ ಆ ಭಗವಂತ. ಆ ಹೂವನ್ನು ನೋಡುವ ಕಣ್ಣನ್ನು ನಮಗೆ ಕೊಟ್ಟವ ಆತ(ಹುಟ್ಟು ಕುರುಡನಿಗೆ ಈ ಯೋಗವಿಲ್ಲ. ಈ ಅನುಸಂಧಾನವಿದ್ದರೆ ನೋಡುವ-ಮುಟ್ಟುವ-ಮೂಸವ ಕ್ರಿಯೆಯಲ್ಲಿ 'ನನ್ನದು' ಎನ್ನುವ ಅಹಂಕಾರಕ್ಕೆ ಎಡೆಯಿಲ್ಲ. ಅದೇ ರೀತಿ-ತಿನ್ನುವುದು: ಈ ಪ್ರಪಂಚದಲ್ಲಿ ಎಷ್ಟೋ ಜನ ಒಂದು ಹೊತ್ತಿನ ಆಹಾರಕ್ಕೂ ಗತಿ ಇಲ್ಲದೇ ಇನ್ನೊಬ್ಬರ ಮುಂದೆ ಕೈಚಾಚಿಕೊಂಡು ಬದುಕುತ್ತಾರೆ. ಆದರೆ ನಮಗೆ ಭಗವಂತ ಮೂರು ಹೊತ್ತಿನ ತುತ್ತಿಗೆ ಅನುಕೂಲ ಮಾಡಿ ಕೊಟ್ಟಿದ್ದಾನೆ ಅನ್ನುವ ಅನುಸಂಧಾನದಿಂದ ಊಟ ಮಾಡಿದಾಗ ಅದೊಂದು ಯಜ್ಞವಾಗುತ್ತದೆ. ಇನ್ನು.ವನಿದ್ದೆ: ನಿದ್ದೆಯಲ್ಲಿ ನಾವು ಭಗವಂತನ ಸಮೀಪದಲ್ಲಿರುತ್ತೇವೆ. ಆದರೆ ಆ ಎಚ್ಚರ ನಮಗಿರುವುದಿಲ್ಲ. ಒಂದು ವೇಳೆ ನಿದ್ದೆಯೇ ಬಾರದಿದ್ದರೆ? ಇಡೀ ರಾತ್ರಿ ಕನಸಿನಲ್ಲೇ ಕಳೆದರೆ? ಇದನ್ನು ನಮ್ಮಿಂದ ಉಹಿಸುವುದೂ ಕಷ್ಟ. ಹುಟ್ಟಿದಾಗ ನಮಗರಿವಿಲ್ಲದಂತೆ ಉಸಿರಾಟ ಆರಂಭವಾಯಿತು. ನಿದ್ದೆಯಲ್ಲೂ ನಮಗರಿವಿಲ್ಲದಂತೆ ನಮ್ಮ ಉಸಿರಿನ ಕ್ರಿಯೆ ನಿರಂತರ. ಆದರೆ ಈ ಉಸಿರು ಯಾವಾಗ ನಿಲ್ಲುತ್ತದೆ ಎನ್ನುವುದು ನಮಗೆ ತಿಳಿದಿಲ್ಲ. ಹೀಗೆ ಪ್ರತಿಯೊಂದು ಕ್ರಿಯೆಯಲ್ಲಿ ಆ ವಿಶ್ವಶಕ್ತಿಯ ಅನುಸಂಧಾನವೇ ನಿಜವಾದ ಕರ್ಮಯೋಗ. ಭಗವಂತ ನಮಗೆ ಅಮೂಲ್ಯವಾದ ಕೈ ಕೊಟ್ಟಿದ್ದಾನೆ. ಪ್ರಾಣಿಗಳಿಗೆ ನಾಲ್ಕೂ ಕಾಲೇ. ಕೈ ಇಲ್ಲ. ತನ್ನ ಮೈ ಮೇಲೆ ಯಾವುದೋ ಜೀವಿ ಕುಳಿತು ರಕ್ತ ಹೀರುತ್ತಿದ್ದರೂ ಅದನ್ನು ಓಡಿಸುವ ಕೈ ಅವುಗಳಿಗಿಲ್ಲ. ಇಂತಹ ಅಮೂಲ್ಯವಾದ ಕೈಯನ್ನು ಭಗವಂತ ನಮಗೆ ಕರುಣಿಸಿದ್ದಾನೆ. ಅತ್ಯಂತ ಸೂಕ್ಷ್ಮ ಇಂದ್ರಿಯವಾದ ಕಣ್ಣನ್ನು ರಕ್ಷಿಸುವ ರೆಪ್ಪೆಗಳು, ಅವು ನಿರಂತರ ತೆರೆಯವುದು-ಬಿಚ್ಚುವುದರಿಂದ ಕಣ್ಣಿನ ರಕ್ಷಣೆ. ಒಂದು ವೇಳೆ, ಕಣ್ಣಿಗೆ ಏನಾದರೂ ಕಸ ಬಿದ್ದರೆ ನಮಗರಿವಿಲ್ಲದಂತೆ ಕಣ್ಣಿಗೆ ನೀರಿನ ಸರಬರಾಜಾಗಿ ಕಣ್ಣಿನ ರಕ್ಷಣೆಯಾಗುತ್ತದೆ. ಈ ಅಪೂರ್ವ ಯಂತ್ರದ ವಿನ್ಯಾಸ ಮಾಡಿದ ಶಿಲ್ಪಿ ಆ ಭಗವಂತ. ನಮ್ಮ ಪ್ರತಿಯೊಂದು ಇಂದ್ರಿಯಗಳನ್ನೂ ಇಂದ್ರಿಯಾಭಿಮಾನಿ ದೇವತೆಗಳು ನಿಯಂತ್ರಿಸುತ್ತಾರೆ ಎನ್ನುವ ವಿಚಾರವನ್ನು ನಾವು ಈ ಹಿಂದೆ ವಿಶ್ಲೇಷಿಸಿದ್ದೇವೆ. ಉದಾಹರಣೆಗೆ ಸೂರ್ಯ ಕಣ್ಣಿನ ಹಾಗೂ ಚಂದ್ರ ಕಿವಿಯ ದೇವತೆ. ಸುಪರ್ಣಿ-ವಾರುಣಿ-ಪಾರ್ವತಿ ಶಬ್ದ-ಸ್ಪರ್ಶ-ಗಂಧದ ಅಭಿಮಾನಿ ದೇವತೆಯರು. ಮನೋಭಿಮಾನಿ ದೇವತೆಯಾಗಿ ಗರುಡ ಶೇಷ ರುದ್ರರಿದ್ದಾರೆ. ಹೀಗೆ ನಮ್ಮ ಕ್ರಿಯೆಯ ಹಿಂದೆ ಅದ್ಭುತವಾದ ಆಧ್ಯಾತ್ಮಿಕ ಶಕ್ತಿ ಕೆಲಸ
Bibek Debroy (1955–2024)The Bhagavad Gita
(8) ‘The wise who follow yoga know that they are not doing anything even when they see, hear, touch, smell, eat, go, dream11 or breathe...’