नात्यश्नतस्तु योगोऽस्ति न चैकान्तमनश्नतः ।
न चातिस्वप्नशीलस्य जाग्रतो नैव चार्जुन ॥
nātyaśnatastu yogo'sti na caikāntamanaśnataḥ |
na cātisvapnaśīlasya jāgrato naiva cārjuna ||
Swami Sivananda (1887–1963)Bhagavad Gita
16. Verily Yoga is not possible for him who eats too much, nor for him who does not eat at
all; nor for him who sleeps too much, nor for him who is (always) awake, O Arjuna!
Bannanje Govindacharya (1936–2020)Bhagavad Gita Pravachana
ನ ಅತಿ ಅಶ್ನತಃ ತು ಯೋಗಃ ಅಸ್ತಿ ನ ಚ ಅತ್ಯಂತಮ್ ಅನಶ್ನತಃ |
ನ ಚ ಅತಿ ಸ್ವಪ್ನ ಶೀಲಸ್ಯ ಜಾಗ್ರತಃ ನ ಏವ ಚ ಅರ್ಜುನ- ಹೇ ಅರ್ಜುನಾ, ಹೊಟ್ಟೆಬಾಕನಿಗೆ ಧ್ಯಾನಯೋಗ
ಸಾಧ್ಯವಿಲ್ಲ. ತೀರಾ ತಿನ್ನದವನಿಗೂ ಇಲ್ಲ. ತುಂಬಾ ತೂಕಡಿಸುವವನಿಗೂ ಇಲ್ಲ. ನಿದ್ದೆಗೇಡಿಗೂ ಇಲ್ಲ.
ಅತಿಯಾಗಿ ತಿನ್ನುವವನಿಗೆ ಧ್ಯಾನ ಸಾಧ್ಯವಿಲ್ಲ. ಹೊಟ್ಟೆಗೆ ಹೆಚ್ಚು ಆಹಾರ ಹೋದಾಗ ಮನಸ್ಸು ನಿಸ್ತೇಜವಾಗುತ್ತದೆ.
ಆದ್ದರಿಂದ ಮನನಶೀಲ ಹೊಟ್ಟೆಬಾಕನಾಗಿರಬಾರದು. ಅತಿಯಾದ ಆಹಾರ ಸೇವನೆ ಒಳ್ಳೆಯದಲ್ಲ. ಈ
ಕಾರಣಕ್ಕಾಗಿ ಅತಿಥಿ ಸತ್ಕಾರದಲ್ಲಿ ಒತ್ತಾಯ ಮಾಡಿ ಬಡಿಸುವುದು ತಪ್ಪು. ಅದೇ ರೀತಿ ಯಾವಾಗಲೂ ಸರಿಯಾಗಿ
ತಿನ್ನದೇ ಇದ್ದರೆ ಅದರಿಂದ ದೇಹ ಪೋಷಣೆ ಇಲ್ಲವಾಗಿ ದೇಹ ಕುಸಿಯುತ್ತದೆ. ಭಗವಂತನ
ಸಾಕ್ಷಾತ್ಕಾರವಾಗುವುದು ಈ ದೇಹದ ಮೂಲಕವೇ. ಆದ್ದರಿಂದ ನಾವು ನಿಯತವಾದ ಆಹಾರವನ್ನು ನಿಯತ
ಕಾಲದಲ್ಲಿ ತಿನ್ನುವ ಅಭ್ಯಾಸ ಮಾಡಿಕೊಳ್ಳಬೇಕು.
ಆಹಾರದ ಜೊತೆಗೆ ನಮ್ಮ ನಿದ್ದೆ ಮಾಡುವ ಅಭ್ಯಾಸ ನಿಯತವಾಗಿರಬೇಕು. ನಾವು ಹೇಗೆ ಅಭ್ಯಾಸ
ಮಾಡಿಕೊಂಡೆವೋ ಹಾಗೇ ನಮ್ಮ ಮನಸ್ಸು ಎಂದೂ ಅತಿನಿದ್ದೆ ಒಳ್ಳೆಯದಲ್ಲ. ಅದೇ ರೀತಿ ನಿದ್ದೆಗೆಟ್ಟರೆ ಖಂಡಿತ
ಧ್ಯಾನ ಸಾಧ್ಯವಿಲ್ಲ. ನಿಯತವಾದ ಆಹಾರ ನಿದ್ದೆ ನಮ್ಮ ಆರೋಗ್ಯಕ್ಕೂ ಪೂರಕ ಹಾಗೂ ಧ್ಯಾನಕ್ಕೆ ಅತ್ಯಗತ್ಯ.
Bibek Debroy (1955–2024)The Bhagavad Gita
(16)
‘O Arjuna! He who eats too much cannot achieve yoga. Nor he who doesn’t
eat at all. Nor he who sleeps too much,23 or stays awake too much.’