6.26

यतो यतो निश्चरति मनश्चञ्चलमस्थिरम् ।
ततस्ततो नियम्यैतदात्मन्येव वशं नयेत् ॥
yato yato niścarati manaścañcalamasthiram |
tatastato niyamyaitadātmanyeva vaśaṃ nayet ||
Swami Sivananda (1887–1963)Bhagavad Gita
26. From whatever cause the restless, unsteady mind wanders away, from that let him restrain it and bring it under the control of the Self alone.
Sri Vishwesha Tirtharu (1931–2019)Gitasaroddhara
6.26–6.30 · ಧ್ಯಾನಯೋಗದ ಸ್ವರೂಪ ಮತ್ತು ವಿಧಾನ
ಧ್ಯಾನಯೋಗದ ಸ್ವರೂಪ ಮತ್ತುವಿಧಾನ ತನ್ನ ಮಾನಸಿಕ ಪ್ರಸನ್ನತೆಗೆ ಅನುಕೂಲವಾದ ಪ್ರದೇಶದಲ್ಲಿ ವಸ್ತ್ರ ಅಜಿನ, ದರ್ಭಗಳ ಮೇಲೆ ಸ್ಥಿರವಾದ ಯೋಗ್ಯ ಆಸನದಲ್ಲಿ ಕುಳಿತು ಇಂದ್ರಿಯವ್ಯಾಪಾರಗಳನ್ನು ನಿಯಮಿಸಿಕೊಂಡು ಏಕಾಗ್ರ ಮನಸ್ಸಿನಿಂದ ಧ್ಯಾನವನ್ನು ಆರಂಭಿಸಬೇಕು. ಸುತ್ತಮುತ್ತಲೂ ಕಣ್ಣು ಹರಿಸದೆ ಮೂಗಿನ ತುದಿಯನ್ನೇ ನೋಡುತ್ತ ಮನಸ್ಸನ್ನು ಏಕಾಗ್ರಗೊಳಿಸಲು ಪ್ರಯತ್ನಿಸಬೇಕು. ಶರೀರವು ಸರಳವಾಗಿರಬೇಕು. ಶರೀರವು ಚಲಿಸಿದಂತೆ ಮನಸ್ಸೂ ಹರಿದಾಡಲು ಉಪಕ್ರಮಿಸುವುದು. ಈ ಧ್ಯಾನಯೋಗಕ್ಕೆ ಅನುಕೂಲವಾಗುವಂತೆ ಶರೀರದ ಸುಸ್ಥಿತಿಯ ಕಡೆಗೂ ಗಮನ ಕೊಡಬೇಕು. ಯೋಗವಿಘಾತಕವಾಗುವಂತಹ ಕಾಯಕ್ಷೀತಕರವಾದ ವ್ಯಾಪಾರವನ್ನು ತೊರೆಯಬೇಕು. ಅತಿ ಆಹಾರಸೇವನೆಯೂ ಸಲ್ಲ ದು; ನಿರಾಹಾರನಾಗಿ ಶಕ್ತಿಹ್ರಾಸವನ್ನೂ ತಂದುಕೊಳ್ಳ ಬಾರದು. ವೃಥಾ ನಿದ್ರಾತ್ಯಾಗದಿಂದಲೂ ಅತಿಯಾದ ನಿದ್ರೆಯಿಂದಲೂ ಯೋಗಾಭ್ಯಾಸಕ್ಕೆ ಹಾನಿಯೇ ಒದಗುವುದು. ಉಚಿತವಾದ ಪ್ರಮಾಣದಲ್ಲಿ ಆಹಾರ, ನಿದ್ರಾ, ವಿಹಾರಗಳನ್ನು ಕೈಗೊಂಡು ನಿಯಮಬದ್ಧ ಜೀವನವನ್ನು ನಡೆಸಿದರೆ ಧ್ಯಾನಯೋಗಕ್ಕೆ ಹಿತವಾದ ಶರೀರಸ್ಥಿತಿಯನ್ನು ಪಡೆಯಬಹುದು. ಗಾಳಿಯಿಂದ ಪ್ರತಿಕ್ಷಣವೂ ದೀಪವು ಚಲಿಸುತ್ತಿರುವಂತೆ ವಿಷಯ ಪದಾರ್ಥಗಳ ಸಂಪರ್ಕದಿಂದ ಮನಸ್ಸು ವಿಕಾರವಶವಾಗುತ್ತಲೇ ಇರುತ್ತದೆ. ಗಾಳಿ ಇಲ್ಲದಕಡೆ ನಿಶ್ಚಲವಾಗಿರುವ ದೀಪದಂತೆ ಯೋಗಿಯದು ವಿಷಯವಿಮುಕ್ತವಾದಮನಸ್ಸು ಭಗವಂತನನ್ನು ಹೊರತು ಬೇರೆ ಯಾವುದೂ ಆತನಿಗೆ ಕಾಣುವುದಿಲ್ಲ. ನಿಶ್ಚಲ ಮನಸ್ಸಿನಿಂದ ಭಗವಂತನನ್ನೇ ಚಿಂತಿಸುತ್ತಿರುವಾಗ ಅನುಭವಮಾತ್ರ ವೇದ್ಯವಾದ ಇಂದ್ರಿಯಾತೀತ ಅತಿಶಯಿತ ಆನಂದವನ್ನು ಯೋಗಿಯು ಪಡೆಯುವನು. ಅದಕ್ಕಿಂತ ಮಿಗಿಲಾದ ಆನಂದವು ಪ್ರವಂಚದಲ್ಲಿ ಆತನಿಗೆ ಎಲ್ಲಿಯೂ ದೊರೆಯಲಾರದು. ಭೋಗದ ಸುಖಕ್ಕಿಂತಲೂತ್ಯಾಗದಸುಖಮಿಗಿಲಾಗಿದ್ದರೆ ಅದಕ್ಕೂ ಪೂರ್ಣತೆಯ ಸೊಬಗನ್ನು ನೀಡುವ ಈ ಯೋಗದ ಆನಂದವು ನಾವು ಜೀವನದಲ್ಲಿ ಪಡೆಯಬಹುದಾದ ಆನಂದದ ಗೌರೀಶಂಕರವೆನಿಸಿದೆ. ತೂತುಗಳಿಂದ ತುಂಬಿರುವ ವಾತ್ರದಲ್ಲಿ ನೀರು ನಮಗೆ ಅರಿಯದಂತೆಯೇ ಸೋರಿಹೋಗುವಂತೆ ನಮ್ಮ ಮನಸ್ಸಿನಸ್ಥಿತಿಯಾಗಿದೆ. ಉತ್ತಮ ವಿಚಾರಗಳೆಲ್ಲ ನಮ್ಮ ಚಿತ್ತದಲ್ಲಿ ಕ್ಷಣಮಾತ್ರದಲ್ಲಿ ಮಾಯವಾಗುವವು. ಯೋಗಿಯು ಮನಸ್ಸಿನ ಶತಚ್ಚಿದ್ರಗಳನ್ನೆಲ್ಲ ತುಂಬಿ ಭಗವದ್‌ಜ್ಞಾನದ ಅಮೃತಜಲಧಾರೆಯಿಂದ ತನ್ನ ಹೃದಯಕುಂಭವನ್ನು ತುಂಬಿಕೊಳ್ಳುವನು. ಜ್ಞಾನದ ಒಂದು ಬಿಂದುವೂಹೊರಗೆ ಸೋರಿ ಹೋಗದಂತೆ ಅವನು ಜಾಗೃತನಾಗಿರುವನು. ಯತೋ ಯತೋ ನಿಸ್ಸ ರತಿ ಮನಶ್ಚಂಚಲಮಸ್ಥಿ ರಂ। ತತಸ್ತತೋ ನಿಯಮ್ಮೈತತ್‌... ಇಂತಹ ಅವಿರತ ಜಾಗರೂಕ ಪ್ರಯತ್ನದಿಂದ ವರಮಾತೃನವೂರ್ಣಚಿತ್ರವನ್ನು ಚಿತ್ರಭಿತ್ತಿಯಲ್ಲಿ ಅವನು ಮೂಡಿಸಿಕೊಳ್ಳುವನು. ಭಗವಂತನ ನಿರಂತರ ಚಿಂತನ ದಿಂದಲೇ ಕ್ರಮದಿಂದ ಅಪರೋಕ್ಷ ದರ್ಶನವಾಗುವುದು. ಈ ಅಪರೋಕ್ಷ ಜ್ಞಾನವೇ ಜೀವನದಲ್ಲಿ ನಾವು ಪಡೆಯಬಹುದಾದ ಅಮೂಲ್ಯಫಲ. ಅಪರೋಕ್ಷ ಜ್ಞಾನಿಯು, ಎಲ್ಲರಲ್ಲಿ ಭಗವಂತನನ್ನೂ ಭಗವಂತನಲ್ಲಿಯೇ ಎಲ್ಲವನ್ನೂ ಕಾಣುವನು. ಪರಮಾತ್ಮನು ಎಲ್ಲರಿಗೂ ಆಧಾರನೆನಿಸಿ ಎಲ್ಲರ ಹೊರಗೂ ವ್ಯಾವಿಸಿರುವಂತೆ ಅಂತರ್ಯಾಮಿಯಾಗಿ ಪ್ರೇರಕನಾಗಿ ಎಲ್ಲರ ಒಳಗೂ ನೆಲೆಸಿರುತ್ತಾನೆ. ತದಂತರಸ್ಯ ಸರ್ವಸ್ಯ ತದು ಸರ್ವಸ್ಯ ಬಾಹ್ಯತಃ | ಈಶೋಪನಿಷತ್‌ ಹೀಗೆ ಒಳಗೂ ಹೊರಗೂ ಎಲ್ಲೆಲ್ಲಿಯೂ ಪರಮಾತ್ಮನ ದರ್ಶನವೇ ಸಮಾಧಿಸ್ಥನಿಗೆ ದೊರಕುವುದು. ಪರಮಾತ್ಮನೆಂಬ ಅಮೃತ ಸಮುದ್ರದಲ್ಲಿ ಮೀನಿನಂತೆ ಈ ಸಮಾಧಿಸ್ಥನು ಈಸುವನು. ಯೋಮಾಂ ಪಶ್ಯತಿ ಸರ್ವತ್ರ ಸರ್ವಂ ಚಮಯಿ ಪಶ್ಯತಿ | ಹೀಗೆ ಹರಿಯನ್ನು ಸಕಲ ಜಗತ್ತಿನ ಆಧಾರನೆಂದೂ ಅಂತರ್ಗತನೆಂದೂ ಕಂಡು ಆನಂದಿಸುವ ಸ್ಥಿತಿಯೇ ಭಕ್ತಿಯ ಪರಮ ಚರಮಾವಸ್ಥೆಯಾಗಿದ್ದು ಧ್ಯಾನಯೋಗವೇಇದರ ಪ್ರಧಾನಸಾಧನವಾಗಿದೆ. ಧ್ಯಾನದ ಅವಸ್ಥೆಯಲ್ಲಿ ನಮಗೆ ತೋರುವ ವಸ್ತುವೇ ಭಗವಂತನಲ್ಲ. ಗುರುಗಳ ಉವದೇಶದಿಂದ ನಮಗೆ ಪರಮಾತ್ಮ ಸ್ವರೂಪದ ಸುದೃಢ ಜ್ಞಾನವಾಗಿರುತ್ತದೆ. ಆ ಸಂಸ್ಕಾರದ ಬಣ್ಣದಿಂದ ನಾವು ರೂಪಿಸುವ ಚಿತ್ರವೇ ಧ್ಯಾನದ ಕಾಲದಲ್ಲಿ ನಮಗೆ ಗೋಚರವಾಗುತ್ತದೆ. ಸಂಸ್ಕಾರಮಯವಾದ ಈ ಚಿತ್ರವೇ ಜ್ಞಾನಾನಂದಮಯವಾದ ಭಗವಂತನ ರೂಪವೆಂದು ನಾವು ಭಾವಿಸಬಾರದು. ಹೊರಗೆ ನಾವು ಪೂಜಿಸುವ ಕಲ್ಲಿನ ಪ್ರತಿಮೆಯೇ ದೇವರಾಗಿರದೆ ಅದು ಅವನ ಪ್ರತೀಕವಾಗಿರುವಂತೆ ಧ್ಯಾನದಲ್ಲಿ ಮನಸ್ಸಿ ನ ಮೇಲೆ ಮೂಡುವ ಚಿತ್ರವೂ ದೇವರ ಪ್ರತಿಮೆ ಎಂದೇ ಭಾವಿಸಿ ಅದಕ್ಕಿಂತ ಬೇರೆಯಾದ ಚಿನ್ಮಯರೂಪವನ್ನೇನಾವು ಚಿಂತಿಸಬೇಕು. ನೇದಂ ಯದಿದಮುಪಾಸತೇ ॥ ತಲವಕಾರೋವನಿಷತ್‌ ಉಪಾಸನೆಯ ಕಾಲದಲ್ಲಿ ಮನಸ್ಸಿನಲ್ಲಿ ಚಿತ್ರಿತವಾಗುವ ರೂವವೇ ದೇವರಲ್ಲ, ಆದುದರಿಂದ ಧ್ಯಾನದ ಕಾಲದಲ್ಲಿ ನಮಗೆ ಪರಮಾತ್ಮನ ದರ್ಶನವಾಗುವುದಿಲ್ಲ. ಆಗ ಪರಮಾತ್ಮನ ಈ ಮಾನಸ ಪ್ರತೀಕದ ದರ್ಶನವೂ ಅವನ ಚಿದಾನಂದಮಯ ರೂಪದಸ್ಥರಣೆಯೂ ಅಖಂಡವಾಗಿ ನಡೆಯುತ್ತದೆ. ಈ ಧ್ಯಾನದ ಪರಾಕಾಷ್ಠೆಯನ್ನು ತಲುಪಿದ ಮೇಲೆಯೇ ಚಿದಾನಂದರೂಪಿಯಾದ ಭಗವಂತನಸಾಕ್ಷಾದ್ವರ್ಶನವು ಯೋಗಿಗೆ ದೊರೆಯುವುದು. ಪರೋಕ್ಷಜ್ಞಾನದ ಚರಮ ಸೀಮೆಯೇ ಧ್ಯಾನವಾಗಿದ್ದು ಪರಮಾತ್ಮನ ಈ ಏಕಾಗ್ರವಾದ ನಿರಂತರ ಚಿಂತನದಿಂದಲೇ ಒಂದು ದಿವ್ಯವಾದ ಅಲೌಕಿಕ ಆನಂದದ ಅನುಭವವು ಅವನಿಗಾಗುವುದು. ಈ ಧ್ಯಾನಾವಸ್ಥೆಯ ಕೊನೆಯ ಹಂತವನ್ನು ತಲುಪಿದಾಗ ಪರಮಾತ್ಮನ ದಿವ್ಯಮೂರ್ತಿಯೇ ದೃಗ್ಗೋಚರವಾಗುವಂತಹ ಅವರೋಕ್ಷಾನು ಭವ ಸೌಭಾಗ್ಯವೂ ಅವನಿಗೆ ಪ್ರಾಪ್ತವಾಗುವುದು. ಧ್ಯಾನದ ಮಹಾಫಲವೇ ಅಪರೊ ಕ್ಟಾನುಭವವಾಗಿದೆ. ಧ್ಯಾನಯೋಗದ ಸ್ಥಿತಿಯಲ್ಲಿ ಪರಮಾತ್ಮನ ಸ್ವರೂಪದ ಹೊರತು ಬೇರೆ ಯಾವ ವದಾರ್ಥಗಳೂ ಚಿತ್ತದಲ್ಲಿಸುಳಿಯಬಾರದು. ಹೀಗೆ ಭಗವದ್ವಿಷಯಕ ವಾದ ಅಖಂಡ ಚಿತ್ತವೃತ್ತಿಯೇ ಧ್ಯಾನವಾಗಿದೆ. ದ್ರೋಣಾಚಾರ್ಯರು ರಾಜಕುಮಾರರಿಗೆ ಧನುರ್ವಿದ್ಯೆಯ ಪರೀಕ್ಷೆಯನ್ನು ಮಾಡುವಸಂದರ್ಭದಲ್ಲಿ ಒಂದು ದೊಡ್ಡಮರದಲ್ಲಿ ಕೃತಕ ಹಕ್ಕಿಯನ್ನಿ ಟ್ಟು ಅದರ ಕಣ್ಣಿ ಗೆ ಗುರಿಯಿಟ್ಟು ಬಾಣವ್ರಯೋಗ ಮಾಡಲು ಶಿಷ್ಯರಿಗೆ ಆದೇಶ ನೀಡಿದರು. ಗುರಿ ಹೊಡೆಯಲು ನಿಂತ ಪ್ರತಿಯೊಬ್ಬರಲ್ಲಿಯೂ ""ನಿಮಗೆ ಅಲ್ಲಿ ಏನು ತೋರುತ್ತಿದೆ?'' ಎಂದು ಕೇಳಲು ಎಲ್ಲರೂ ಎದುರಿಗೆ ನಿಂತಿರುವಮರಮತ್ತು ಅದರ ಶಾಖೋಪಶಾಖೆಗಳನ್ನು ವರ್ಣಿಸಿ ಹೇಳಿದರು. ಅರ್ಜುನನಿಗೆ ಮಾತ್ರ ಎದುರಿಗಿರುವ ಕೃತಕ ಹಕ್ಕಿಯ ಕಣ್ಣಿನ ವಿನಾ ಬೇರೇನೂ ತೋರಲಿಲ್ಲವಂತೆ. ಸಾಧನೆಯಲ್ಲಿ ಅರ್ಜುನನ ಈ ಏಕಾಗ್ರದೃಷ್ಟಿಯನ್ನು ನಾವು ಅಳವಡಿಸಿ ಕೊಳ್ಳಬೇಕು. ಧನುರ್ಧಾರಿಯು ಉಳಿದ ಕಡೆಗೆ ಕಣ್ಣು ಹಾಯಿಸದೆ ಗುರಿಯ ಕಡೆಗೆ ಮಾತ್ರ ತನ್ನ ದೃಷ್ಟಿಯನ್ನು ಕೇಂದ್ರೀಕರಿಸುವಂತೆ ಉಳಿದೆಲ್ಲವನ್ನೂ ಮರೆತು ಬ್ರಹ್ಮನೊಬ್ಬನನ್ನೇ ಚಿತ್ತಪಟಲದಲ್ಲಿ ಚಿತ್ರಿಸಬಲ್ಲವನೇ ಧ್ಯಾನದಲ್ಲಿ ಯಶಸ್ವಿ ಯಾಗಬಲ್ಲನು. ಗಣಪತಿಯ ಚಿತ್ರವನ್ನು ಬರೆಯಲು ಉಪಕ್ರಮಿಸಿ ಅದು ಒಂದು ಕಪಿಯ ಚಿತ್ರವಾಗಿ ವರಿಣಮಿಸಿದಂತೆ ನಮ್ಮ ಸ್ಥಿತಿಯಾಗಿದೆ. ದೇವರ ಧ್ಯಾನಕ್ಕೆ ಕುಳಿತ ನಮ್ಮ ಮನೋರಂಗದಲ್ಲಿ ದೇವರ ಬದಲು ಬೇರೆ ಏನೇನೋ ವಿಕೃತ ಚಿತ್ರಗಳೇ ಕುಣಿದಾಡುತ್ತವೆ. ಪರಮಾತ್ಮನೊಬ್ಬನೇ ನಮ್ಮ ಹೃದಯಸಿಂಹಾಸನ ದಲ್ಲಿವಿರಾಜಮಾನನಾಗುವಂತೆ ಮಾನಸಿಕ ಏಕಾಗ್ರತೆಯನ್ನು ಸಾವು ಸಾಧಿಸಬೇಕು. ಪ್ರಣವೋ ಧನುಃ ಶರೋ ಹ್ಯಾತ್ಮಾ ಬ್ರಹ್ಮ ತಲ್ಲಕ್ಷ್ಯಮುಚ್ಛತೇ । ಅಪ್ರಮತ್ತೇನ ವೇದ್ಧವ್ಯಂ ಶರವತ್ತ ನ ಯೋ ಭವೇತ್‌ ॥ ಆಥರ್ವಣೋವನಿಷತ್‌ ನಮ್ಮ ಮನಸ್ಸು ಒಂದು ಬಾಣವಾಗಿದೆ. ಬ್ರಹ್ಮನ ಕಡೆಗೆ ಗುರಿಯಿಟ್ಟು ಇದನ್ನು ಪ್ರಯೋಗಿಸಬೇಕು. ಧನುಸ್ಸಿನ ಆಸರೆಯಿಲ್ಲದಿದ್ದರೆ ಬಾಣವು ಗುರಿಯನ್ನು ಮುಟ್ಟಲಾರದೆಮಧ್ಯದಲ್ಲಿಯೇಕೆಳಗೆ ಬೀಳುತ್ತದೆ. ಧನುಸ್ಸಿನ ಆಧಾರದಿಂದಲೇ ಅದುವೇಗವನ್ನು ಪಡೆಯಬಲ್ಲದು. ಮನಸ್ಸೂ ವೇಗವನ್ನು ದೊರಕಿಸಿಕೊಳ್ಳಲು ವೇದದ ಆಸರೆಯನ್ನು ವಡೆಯಬೇಕು. ವೇದದ ಅಧ್ಯಯನದಿಂದ ಶಕ್ತಿ ಸಂಪನ್ನವಾದ ಮನಸ್ಸು ಬ್ರಹ್ಮನ ಕಡೆಗೆ ವೇಗದಿಂದ ಸಾಗಬಹುದು. ವೇದವೇ ಇದಕ್ಕೆ ಧನುಸ್ಸು. ಬಾಣವನ್ನು ಬಿಡುವಾಗ ಗುರಿಕಾರನಿಗೆ ಸ್ನಿರದೃಷ್ಟಿಯಿರ ಬೇಕಾಗುವಂತೆ ಆವ್ರಮತ್ತನಾಗಿ ಅನ್ಯ ವ್ಯಾಸಂಗವಿಲ್ಲದೆ ಪರಮಾತ್ಮನ ಕಡೆಗೆ ಚಿತ್ರವೃತ್ತಿಯ ನಿರಂತರಧಾರೆಯನ್ನು ಹರಿಸಬೇಕು.
Bannanje Govindacharya (1936–2020)Bhagavad Gita Pravachana
ಯತಃ ಯತಃ ನಿಶ್ಚರತಿ ಮನಃ ಚಂಚಲಮ್‌ ಅಸ್ಥಿರಮ್‌ | ತತಃ ತತಃ ನಿಯಮ್ಯ ಏತತ್‌ ಆತ್ಮನಿ ಏವ ವಶಮ್‌ ನಯೇತ್‌ -ಗಟ್ಟಿಗೊಳ್ಳದೆ ಎತ್ತೆತ್ತ ಸರಿಯುವ ಬಗೆ, ಯಾವೆಡೆಯೆಲ್ಲ ಹರಿಯಿತು, ಆಯಾ ಕಡೆಯಿಂದ ಮತ್ತೆ ಹೊರಳಿಸಿ ಭಗವಂತನಲ್ಲೇ ನಿಲ್ಲುವಂತೆ ಹಿಡಿತಕ್ಕೆ ತರಬೇಕು. ನಮ್ಮ ಮನಸ್ಸು ಬಹಳ ಚಂಚಲ. ಈ ಕಾರಣದಿಂದ ಅದು ಎಲ್ಲೆಡೆ ಹರಿಯುತ್ತಿರುತ್ತದೆ. ಅದು ०९०९ ಜಾರುತ್ತದೋ ಅಲ್ಲಿಅಲ್ಲಿ ಭಗವಂತನೆಂಬ ಒಡ್ಡು ಹಾಕಿ ಅದನ್ನು ಭಗವಂತನಲ್ಲಿ ನೆಲೆನಿಲ್ಲುವಂತೆ ಮಾಡಬೇಕು. ಇದಕ್ಕೆ ನಿರಂತರ ಪ್ರಯತ್ನ ಅಗತ್ಯ.
Bibek Debroy (1955–2024)The Bhagavad Gita
(26) ‘Towards whatever the fickle and restless mind veers, withdrawing it from that, bring it under the control of the atman.’