श्रीभगवानुवाच ।
पार्थ नैवेह नामुत्र विनाशस्तस्य विद्यते ।
न हि कल्याणकृत्कश्चिद् दुर्गतिं तात गच्छति ॥
śrībhagavānuvāca |
pārtha naiveha nāmutra vināśastasya vidyate |
na hi kalyāṇakṛtkaścid durgatiṃ tāta gacchati ||
Swami Sivananda (1887–1963)Bhagavad Gita
40. O Arjuna, neither in this world, nor in the next world is there destruction for him; none,
verily, who does good, O My son, ever comes to grief!
Sri Vishwesha Tirtharu (1931–2019)Gitasaroddhara
6.34–6.40 · ಧ್ಯಾನಮಾರ್ಗವು ಕಠಿಣ ಆದರೆ ನಿರಪಾಯ
ಧ್ಯಾನ ಮಾರ್ಗವು ಕಠಿಣ, ಆದರೆ ನಿರಪಾಯ
ಗೀತೆಯಲ್ಲಿ ಹಾಗೂ ಉವನಿಷತ್ತಿನಲ್ಲಿ ಹೇಳಿರುವ ಈ ಧ್ಯಾನಯೋಗ
ವನ್ನಾಚರಿಸುವುದು ನಿಜಜೀವನದಲ್ಲಿ ನಮಗೆ ಬಹಳ ಕಠಿಣವೆನಿಸುತ್ತದೆ. ಮನಸ್ಸು
ಮರ್ಕಟನಂತಿದೆ. ಗಾಳಿಯನ್ನು ಒಂದೇಕಡೆ ಶೇಖರಿಸಿಡುವುದು ಹೇಗೋಹಾಗೆ
ಮನಸ್ಸಿನ ಕೇಂದ್ರೀಕರಣವೂ ಕೈಲಾಗದ ಕಾರ್ಯವೆಂದು ನಮಗನಿಸುತ್ತದೆ. ಎಷ್ಟು
ಪ್ರಯತ್ನಿಸಿದರೂ ಮನಸ್ಸು ಅಚಲವಾಗಿ ಭಗವಂತನಲ್ಲಿ ನೆಲೆನಿಲ್ಲುವಂತೆ
ಮಾಡಲು ನಮಗೆ ಸಾಧ್ಯವಾಗುತ್ತಿಲ್ಲ. ಮನಸ್ಸಿನಲ್ಲಿರುವ ಈ ಚಂಚಲತೆಯು
ಧ್ಯಾನಯೋಗದಲ್ಲಿ ನಮ್ಮನ್ನು ತೀರ ಅಸಮರ್ಥರನ್ನಾಗಿ ಮಾಡಿದೆ. ಇದು
ನಮ್ಮೆಲ್ಲರನ್ನೂ ಕಾಡಿಸುತ್ತಿರುವ ಅನಾದಿಯಾದ ಸಮಸ್ಯೆಯಾಗಿದೆ. ನಮ್ಮೆಲ್ಲರ
ಪರವಾಗಿಯೇ ಅರ್ಜುನನು ಈ ಪ್ರಶ್ನೆಯನ್ನು ಭಗವಂತನ ಮುಂದಿಡುತ್ತಾನೆ.
ಚಂಚಲಂಹಿ ಮನಃ ಕೃಷ್ಣ ಪ್ರಮಾಥಿ ಬಲವದ್ ದೃಢಂ [
ಶ್ರೀಕೃಷ್ಣನು ಮನಸ್ಸಿನ ಈ ಕುಚೇಷ್ಟೆಯನ್ನು ಎದುರಿಸಲು ಎರಡು
ಮಾರ್ಗಗಳನ್ನು ಬೋಧಿಸಿದ್ದಾನೆ. ಒಂದು ನಿರಂತರ ಅಭ್ಯಾಸ, ಇನ್ನೊಂದು
ವಿಷಯವೈರಾಗ್ಯ. ನಮ್ಮ ಮನಸ್ಸಿನೊಳಗೆ ಪರಮಾತ್ಮ ಕಾಲಿಡಲೇ ಸಾಧ್ಯವಿಲ್ಲ.
ವಿಷಯಾಸಕ್ತಿಯ ಹೊಲಸಿನಿಂದ ಅದು ತುಂಬಿಹೋಗಿದೆ. ಮೊದಲು ನಮ್ಮಲ್ಲಿ
ಅಂಟಿಕೊಂಡಿರುವ ಈ ಕಿಲುಬನ್ನು ತೆಗೆದು ಅಂತರಂಗವನ್ನು ಪರಿಶುದ್ಧಿಗೊಳಿ
ಸಿದರೆ ನಮ್ಮ ಹೃದಯಮಂದಿರಕ್ಕೆ ಪರಮಾತ್ಮನನ್ನು ಸ್ವಾಗತಿಸಲು ನಮಗೆ ಎನೂ
ಕ್ಲೇಶ, ಸಂಕಟಗಳಿನಿಸವು. ವಿಷಯ ಪ್ರೇಮವಿರುವವರೆಗೆ ಪರಮಾತ್ಮನ ಪ್ರೇಮ
ಉದಯಿಸಲಾರದು. ಪರಮಾತ್ಮನನ್ನು ಸ್ಥರಿಸಬೇಕೆಂದರೂ ಅವನನ್ನು
ಸುಲಭವಾಗಿ. ಮರೆಯುತ್ತಿರುವೆವು. ಆದರೆ ವಿಷಯಪದಾರ್ಥಗಳನ್ನು
ಮರೆಯಬೇಕೆಂದು ಪ್ರಯತ್ನಿಸಿದರೂ ಅವುಗಳ ವಿಚಾರವನ್ನು ತಲೆಯಿಂದ
ಹೊರಗೆ ಹಾಕಲು ಸಾಧ್ಯವಾಗುತ್ತಿಲ್ಲ. ವಿಷಯ ಪ್ರೇಮವು ಅಷ್ಟುಸುದೃಢವಾಗಿ
ನಮ್ಮ ಮನಸ್ಸಿನಲ್ಲಿ ಬೇರೂರಿದೆ. ಧ್ಯಾನದಲ್ಲಿ ನಾವು ಯಶಸ್ವಿಯಾಗದಿರುವುದಕ್ಕೆ
ಈ ಲೌಕಿಕ ಪ್ರೇಮದ ಒತ್ತಡ ಹಾಗೂ ಪರಮಾತ್ಮನ ಪ್ರೇಮದ ಅಭಾವಗಳೇ
ಕಾರಣಗಳಾಗಿವೆ. ನಾವು ನಮ್ಮ ಮಡದಿ, ಮಕ್ಕಳು, ಮನೆ, ಮಹಡಿಗಳಲ್ಲಿ
ಮಾಡುವಷ್ಟು ಪ್ರೀತಿಯನ್ನು ಪರಮಾತ್ಮನಲ್ಲಿ ಮಾಡದಿರುವಾಗ ನಾವು ಹೇಗೆ
ಅವನ ಧ್ಯಾನವನ್ನು ಮಾಡಬಲ್ಲೆವು? ಎಲ್ಲಿ ಪ್ರೇಮವಿದೆಯೋ ಅಲ್ಲಿ ಮನಸ್ಸು
ಕ್ರೇಂದ್ರೀಕೃತವಾಗಲು ಏನೂ ಪ್ರಯಾಸವಾಗುವುದಿಲ್ಲ. ನಮಗೆ ಪ್ರಿಯವಾದ
ಲೌಕಿಕವಸ್ತುಗಳನ್ನು ಎಲ್ಲ ದೈನಂದಿನ ವ್ಯವಹಾರಗಳ ಮಧ್ಯದಲ್ಲೂ ಸ್ವಪ್ನದಲ್ಲೂ
ಸದಾ ಚಿಂತಿಸುತ್ತಿರುವೆವು. ಶ್ರೀಹರಿಯನ್ನು ಒಂದು ಗಳಿಗೆಯಾದರೂ ಚಿಂತಿಸಲು
ನಮಗೆ ಏಕೆ ಸಾಧ್ಯವಾಗುತ್ತಿಲ್ಲ? ಇದು ಮನಸ್ಸಿನಲ್ಲಿಯೇ ನಾವು
ಪ್ರಶ್ನಿಸಿಕೊಳ್ಳಬೇಕಾದ ಸಂಗತಿಯಾಗಿದೆ. ನಮ್ಮ ಹೃದಯದಲ್ಲಿ ಭಕ್ತಿಯಸೆಲೆಯೇ
ಬತ್ತಿಹೋಗಿದೆ. ನಾವು ಭಕ್ತಿಯ ಪ್ರದರ್ಶನವನ್ನು ಮಾಡುತ್ತಿರುವೆವೇಹೊರತು
ನಿಜವಾದ ಭಕ್ತಿಯನ್ನಲ್ಲ.
ತನ್ನ ಪತಿಯ ಕಡೆಗೆ ಹೊರಟ ಮುಗುದೆಯೊಬ್ಬಳು ಧ್ಯಾನಾರೂಢನಾದ
ರಾಜನನ್ನು ಅನ್ಯಮನಸ್ಥತೆಯಿಂದ ತುಳಿದು, ಅದರ ಪರಿವೆ ಇಲ್ಲದೆ
ಮುಂದುವರಿಯಲು, ಅವಮಾನಿತನಾಗಿ ಕೋಪಗೊಂಡ ರಾಜನು ಅವಳನ್ನು
ಕರೆಸಿ ವಿಚಾರಣೆಗೊಳಪಡಿಸಿದಾಗ ಅವಳು ನಗುತ್ತ ಉತ್ತರಿಸಿದಳು: ನಾನು
ಸಾಮಾನ್ಯ ಮಾನವನಾದ ನನ್ನ ಪ್ರಿಯ ಪತಿಯನ್ನು ನೆನೆದುಕೊಂಡು ಹೋಗುವ
ಭರದಲ್ಲಿ ಕಾಲಿನಿಂದ ರಾಜನನ್ನು ಮುಟ್ಟಿದ್ದು ನನಗೇ ತಿಳಿಯಲಿಲ್ಲ;
ಹೀಗಿರುವಾಗ ಅನಂತ ಗುಣಶಾಲಿಯಾದ ಜಗದೊಡೆಯನನ್ನೇ ತಲ್ಲೀನತೆ
ಯಿಂದ ಸ್ಥರಿಸುವ ಈ ರಾಜನಿಗೆ ಅದು ಹೇಗೆ ತಿಳಿಯಿತು? ನನಗೆ ಇರುವ
ಪತಿಪ್ರೇಮದಷ್ಟೂ ಹರಿಪ್ರೇಮವು ಈತನಿಗಿಲ್ಲವೆ? ಎಂದು ಅವಳು ಸವಾಲು
ಹಾಕಿದಳು. ಇದು ವಾಸ್ತವವಾದ ಪ್ರಶ್ನೆಯಾಗಿದೆ. ನಮ್ಮ ಸೊತ್ತು ಪರಿವಾರಗಳಲ್ಲಿ
ಮಾಡುವ ಪ್ರೀತಿಯ ಅರ್ಧದಷ್ಟೂ ನಾವು ಪರಮಾತ್ಮನನ್ನು ಪ್ರೀತಿಸುತ್ತಿಲ್ಲ.
ಆದುದರಿಂದಲೇ ನಮ್ಮ ಹೃದಯ ದೇಗುಲದಲ್ಲಿ ಪರಮಾತ್ಮನ ಪ್ರತಿಮೆಯು
ಚಲವಾಗಿದೆ. ಸ್ಥಿರ ಪ್ರತಿಮೆಯನ್ನು ಸ್ಥಾಪಿಸಲು ನಾವು ಅಶಕ್ತರಾಗಿರುವೆವು.
ವಿಷಯವೈರಾಗ್ಯ ಮತ್ತು ಭಗವತ್ ಪ್ರೇಮಗಳಿಂದಲೇ ನಾವು ಇದರಲ್ಲಿ
ಯಶಸ್ವಿಯಾಗಬಲ್ಲೆವು.
ಯತತೋಇಷಪಿ ಹರೇಃ ಪದಸಂಸ್ಕರಣೇ
ಸಕಲಂ ಹೃಘಮಾಶು ಲಯಂ ವ್ರಜತಿ |
ದ್ವಾದಶಸ್ತೊ ತ್ರ
ಎಂದು ಶ್ರೀಮದಾಚಾರ್ಯರು ಅಪ್ಪಣೆ ಕೊಡಿಸಿದಂತೆ ಪರಮಾತ್ಮನ ಧ್ಯಾನವನ್ನು
ಏಕಾಗ್ರತೆಯಿಂದ ಮಾಡಲು ನವಗೆ ಶಕ್ಕವಾಗದಿದ್ದರೂ ಅದಕ್ಕಾಗಿ ಪ್ರಾಮಾಣಿಕ
ಪ್ರಯತ್ನವನ್ನು ಮಾಡುವುದರಿಂದಲೂ ನಮ್ಮ ಸಕಲ ಪಾಪಗಳ
ಪರಿಹಾರವಾಗುವುದು.
ಧ್ಯಾನಮಾರ್ಗದಲ್ಲಿ ಅಯಶಸ್ವಿಯಾಗಿ ಯೋಗಭ್ರಷ್ಟನಾದವನು ಇಹಪರ
ಗಳಿರಡಕ್ಕೂ ಎರವಾ ಗುವನೆ? ಎಂಬ ಅರ್ಜುನನ ಸಂಶಯಕ್ಕೂ ಶ್ರೀಕೃಷ್ಣನು ಇದೇ
ರೀತಿಯ ಪರಿಹಾರವನ್ನು ಹೇಳಿದ್ದಾ ನೆ.
ನಹಿ ಕಲ್ಯಾಣಕೃತ್ ಕಶ್ಚಿ ದ್ ದುರ್ಗತಿಂತಾತ ಗಚ್ಛತಿ [
ಒಳ್ಳೆಯ ಕೆಲಸವನ್ನು ಮಾಡುವವನಿಗೆ ಅದನ್ನು ಪೂರ್ಣಗೊಳಿಸಲಾಗ
ದಿದ್ದರೂ ದುರ್ಗತಿಯು ಖಂಡಿತ ಬರುವುದಿಲ್ಲ. ಸದುದ್ದೇಶದಿಂದ ಮಾಡಿದ
ಪ್ರಾಮಾಣಿಕ ಪ್ರಯತ್ನಕ್ಕೆ ಉತ್ತಮ ಫಲವು ನಿಶ್ಚಯವಾಗಿ ದೊರೆಯುವುದು. ಇದು
ಭಗವಂತನು ನೀಡಿದ ಭರವಸೆಯಾಗಿದೆ. ಮಂತ್ರಿ ಮಾಗಧರು ನೀಡುವ
ಆಶ್ವಾಸನದಂತೆ ಇದು ಹುಸಿಯಾಗುವುದಿಲ್ಲ. ಈ ಜನ್ಮದಲ್ಲಿ ನಮ್ಮ ಸಾಧನೆ
ಅದೂರ್ಣವಾದಲ್ಲಿ ಜನ್ಮಾಂತರದಲ್ಲಿ ಅದನ್ನು ಮುಂದುವರಿಸುವಸ್ನನ್ನಿವೇಶವನ್ನು
ಪರಮಾತ್ಥನು ಒದಗಸತ್ತಾರೆ ಪರಮಾತ್ಮನ ಈಧಿಯವ, ಸು್ಯಸ್ಥೆಗಳ್ಲಿ ನಾವ,
ಪೂರ್ಣ ವಿರ್ವಾಸವನ್ನಿಟ್ಟು ಧೈರ್ಯದಿಂದ ಸಾಧನೆಯನ್ನು ನಡೆಸಿಕೊಂಡು
ಹೋಗಬೇಕು. ನಾವೀಗಎಲ್ಲರೂ ಧ್ಯಾನ, ಸಮಾಧಿಗಳನ್ನು ಮಾಡಬೇಕೆಂದು ಕರೆ
ನೀಡುತ್ತಿಲ್ಲ. ತಮಗೆ ಸಾಧ್ಯವಾಗುವಂತಹ ಆಧ್ಯಾಕ್ಮಿಕ ಸಾಧನೆಯನ್ನು
ಪ್ರತಿಯೊಬ್ಬರೂ ನಿರ್ವಂಚನೆಯಿಂದಕ್ಕೆಗೊಳ್ಳಲಿ. ಪ್ರತಿದಿನವೂ ಸಂಧ್ಯಾವಂದನ
ದಂತಹಸರಕ ಶಾಸ್ತ್ರೀಯ ಪ್ರಾರ್ಥನೆಯ ನ್ನಾರರೂವ್ರತಿ ಯೊಬ್ಬರೂ ಆಚರಿಸಿ
ಕ್ರಮಕ್ರಮವಾಗಿ ಆತ್ಮೋನ್ಸತಿಯನ್ನು ಸಾಧಿಸಲಿ ಇಂತಹ ವ್ರಾರಂಭಿಕ
ಪ್ರಯತ್ನ ದಿಂದ ಮುಂದಿನಹಾದಿಯು ಸಹಜವಾಗಿ ಏನೂ ಶ್ರಮವಿಲ್ಲ ದೆಅವನಿಗೆ
ಗೋಚರವಾಗುವುದು.
Bannanje Govindacharya (1936–2020)Bhagavad Gita Pravachana
ಭಗವಾನ್ ಉವಾಚ-ಭಗವಂತ ಹೇಳಿದನು:
ಪಾರ್ಥ ನ ಏವ ಇಹ ನ ಅಮುತ್ರ ವಿನಾಶಃ ತಸ್ಯ ವಿದ್ಯತೇ |
ನಹಿ ಕಲ್ಯಾಣಕೃತ್ ಕಶ್ಚಿತ್ ದುರ್ಗತಿಮ್ ತಾತ ಗಚ್ಛತಿ- ಪಾರ್ಥಾ, ಅವನ ಸಾಧನೆ ವ್ಯರ್ಥವಲ್ಲ, ಇಹದಲ್ಲಿ ಮತ್ತು
ಪರದಲ್ಲಿ. ಅಪ್ಪಾ, ಒಳಿತನ್ನು ಮಾಡುವವನು ಎಂದೂ ಕೇಡನ್ನು ಪಡೆಯುವುದಿಲ್ಲ.
ಅರ್ಜುನನ ಪ್ರಶ್ನೆಗೆ ಕೃಷ್ಣನ ಉತ್ತರ ದೊಡ್ಡ ಭರವಸೆ. ಕೃಷ್ಣ ಹೇಳುತ್ತಾನೆ: “ಸಾಧನೆಯ ದಾರಿಯಲ್ಲಿ ಸಾಗಿದವರು
ಇಹದಲ್ಲಿ ಅಥವಾ ಪರದಲ್ಲಿ ಏನನ್ನೂ ಕಳೆದುಕೊಳ್ಳುವುದಿಲ್ಲ. ಓ ನನ್ನ ಪ್ರೀತಿಯ ಮಿತ್ರನೇ, ಒಳ್ಳೆಯದನ್ನು
ಮಾಡಿದವರು ಎಂದೂ ಕೆಟ್ಟದ್ದನ್ನು ಪಡೆಯುವುದಿಲ್ಲ. ಇದು ಪ್ರಕೃತಿಯ ನಿಯಮ” ಎಂದು. ಇಲ್ಲಿ ಕೃಷ್ಣ
ಅರ್ಜುನನನ್ನು ಪಾರ್ಥಾ ಎಂದು ಸಂಬೋಧಿಸಿದ್ದಾನೆ. ಪಾರ್ಥ ಎಂದರೆ ಪಾರವನ್ನು(ದಡವನ್ನು]) ತಿಳಿದವನು.
ಸಾಧನೆಯ ಹಾದಿಯಲ್ಲಿ ಹೆಜ್ಜೆ ಇಟ್ಟವನು ಒಮ್ಮೆಗೇ ಭಗವಂತನನ್ನು ಕಾಣದಿದ್ದರೂ ಕೂಡಾ, ಆತ ಎಂದೂ
ಮಧ್ಯದಲ್ಲಿ ಮುಳುಗುವುದಿಲ್ಲ. ಆತ ಸಾಧನೆಯ ಆಚೆ ದಡವನ್ನು ಸೇರಿಯೇ ಸೇರುತ್ತಾನೆ. ಒಳ್ಳೆಯದನ್ನು
ಮಾಡಿದವರಿಗೆ ಒಳ್ಳೆಯ ಮಾರ್ಗವನ್ನು ತುಳಿದವರಿಗೆ ಎಂದೂ ಕೆಟ್ಟದ್ದಾಗುವುದಿಲ್ಲ. ನಮ್ಮಲ್ಲಿ ಕೆಲವರು
ಹೇಳುವುದಿದೆ: “ನಾನು ನನ್ನ ಜೀವನದಲ್ಲಿ ಎಂದೂ ಕೆಟ್ಟ ಕೆಲಸ ಮಾಡಿಲ್ಲ, ಯಾವತ್ತೂ ಒಬ್ಬರಿಗೆ ಕೇಡನ್ನು
ಬಯಸಲಿಲ್ಲ, ಆದರೆ ಏಕೆ ದೇವರು ನನಗೆ ಹೀಗೆ ಮಾಡಿದ?” ಎಂದು. ನಾವು ಜೀವನದಲ್ಲಿ *ಕೆಟ್ಟದ್ದನ್ನು ಮಾಡಿಲ್ಲ,
ಕೆಟ್ಟದ್ದನ್ನು ಎಣಿಸಿಲ್ಲ' ಎನ್ನುವುದು ಕೇವಲ ಈ ಜನ್ಮಕ್ಕೆ ಸೀಮಿತ. ಆದರೆ ಜೀವದ ಗತಿ ಅನಾದಿ ಅನಂತ. ಅದು
ಜನ್ಮದಿಂದ ಜನ್ಮಕ್ಕೆ ಹರಿದು ಬರುವ ಪ್ರವಾಹ. ನಾವು ಈ ಜನ್ಮದಲ್ಲಿ ಒಂದು ದುರಂತ ಅಥವಾ ಕಷ್ಟಕ್ಕೆ
ಒಳಗಾದರೆ ಅದಕ್ಕೆ ಕಾರಣ ಭೂತವಾಗಿರುವಂತಹ ಇನ್ನೊಂದು ಕ್ರಿಯೆ ನಮ್ಮಿಂದ ನಡೆದಿರಲೇ ಬೇಕು. ಕೆಟ್ಟದ್ದನ್ನು
ಮಾಡದವನು ಕೆಟ್ಟದ್ದನ್ನು ಪಡೆಯುವುದಿಲ್ಲ. ಒಳ್ಳೆಯದನ್ನು ಮಾಡಿದವನು ಒಳ್ಳೆಯದನ್ನು ಪಡೆಯದೇ
ಇರುವುದಿಲ್ಲ. ಇದು ಸಾರ್ವಕಾಲಿಕ ಸತ್ಯ. ಇದಕ್ಕೆ ಅಪವಾದವೇ ಇಲ್ಲ. ಅದು ಹೇಗೆ ಎನ್ನುವುದನ್ನು ಕೃಷ್ಣ ಮುಂದೆ
ವಿವರಿಸುತ್ತಾನೆ.
Bibek Debroy (1955–2024)The Bhagavad Gita
(40)
Bhagavan42 said:
‘O son of Pritha!43 In this world, nor in the other world, is there any
destruction. Because, O son,44 a person who acts well45 never comes to
grief.’