6.47

योगिनामपि सर्वेषां मद्गतेनान्तरात्मना ।
श्रद्धावान्भजते यो मां स मे युक्ततमो मतः ॥
yogināmapi sarveṣāṃ madgatenāntarātmanā |
śraddhāvānbhajate yo māṃ sa me yuktatamo mataḥ ||
Sri Madhvacharya (1238–1317)Bhagavad Gita Tatparya Nirnaya
तपसश्चैव यज्ञादेर्ध्यानमेव विशिष्यते। अज्ञानिध्यानतो ज्ञानं ध्यानं सज्ञानमप्यतः। तत्रापि मय्यभक्तस्य नान्यद्ध्यानां प्रयोजकम्। अन्यसामान्यविद्यो मे यश्चान्यं नेति पश्यति। अवरत्वदृगुदासीनो विद्वेषी चेत्यभक्तयः। मद्भक्तोऽपि हि कार्यार्थे यो ध्यायेदन्यदेवताम्। परिवारतामृते तस्मात् केवलं मदुपासकः। वरोऽन्यान् मदधीनांश्च सर्वान् जानन् विशुद्दधीः’ इति च दत्तात्रेयवचनम्॥47॥
Swami Sivananda (1887–1963)Bhagavad Gita
47. And among all the Yogis, he who, full of faith and with his inner self merged in Me, worships Me, he is deemed by Me to be the most devout.
Bannanje Govindacharya (1936–2020)Bhagavad Gita Pravachana
ಯೋಗಿನಾಮ್‌ ಅಪಿ ಸರ್ವೇಷಾಮ್‌ ಮತ್‌ ಗತೇನ ಅಂತಃ ಆತ್ಮನಾ । ಶ್ರದ್ಧಾವಾನ್‌ ಭಜತೇ ಯಃ ಮಾಮ್‌ ಸಃ ಮೇ ಯುಕ್ತ ತಮಃ ಮತಃ -ನನ್ನಲ್ಲಿ ಒಳಬಗೆಯನ್ನಿರಿಸಿ ಶ್ರದ್ಧೆಯಿಂದ ನನ್ನನ್ನು ಸೇವಿಸುವವನು ಇತರ ಎಲ್ಲಾ ಧ್ಯಾನಯೋಗಿಗಳಿಗಿಂತಲೂ ಹಿರಿಯ ಯೋಗಿ ಎಂದು ನನ್ನ ತೀರ್ಮಾನ. ಧ್ಯಾನವನ್ನು ಮಾಡುವಾಗ ನಾವು ಮನಸ್ಸನ್ನು ಯಾವುದರ ಮೇಲೆ ಕೂಡಾ ಏಕಾಗ್ರ ಮಾಡಿ ಧ್ಯಾನ ಮಾಡಬಹುದು. ಕೆಲವರು ಅನೇಕ ಕ್ಷುದ್ರ ದೇವತೆಗಳು, ಭೂತ-ಪ್ರೇತಗಳನ್ನು ಉಪಾಸನೆ ಮಾಡುವವರಿದ್ದಾರೆ. ಆದರೆ ಕೃಷ್ಣ ಹೇಳುತ್ತಾನೆ: “ಯಾರು ಭಗವಂತನಲ್ಲೇ ಮನಸ್ಸನ್ನಿಟ್ಟು ಧ್ಯಾನ ಮಾಡುತ್ತಾರೋ ಅವರು ಎಲ್ಲರಿಗಿಂತ ಹಿರಿಯ ಯೋಗಿ” ಎಂದು. ಭಗವಂತನನ್ನು ಬಿಟ್ಟು ಇನ್ನೇನನ್ನೋ ಧ್ಯಾನ ಮಾಡಿದರೆ ಏನೂ ಉಪಯೋಗವಿಲ್ಲ. ನಮ್ಮ ಜ್ಯೋತಿಷಿಗಳು ಸಾಮಾನ್ಯವಾಗಿ “ಇಂತಹ ಗ್ರಹಚಾರಕ್ಕೆ ಇಂತಹ ದೇವತೆಯನ್ನು ಉಪಾಸನೆ ಮಾಡು' ಎಂದು ಹೇಳುತ್ತಾರೆ. ಅದರರ್ಥ ಭಗವಂತನನ್ನು ಆ ಪ್ರತೀಕದಲ್ಲಿ ಕಾಣು ಎಂದರ್ಥ. ಯಾವುದೇ ದೇವತೆಯನ್ನು ಉಪಾಸನೆ ಮಾಡುವಾಗ ಆ ಪ್ರತೀಕದಲ್ಲಿ ಭಗವಂತನ ಉಪಾಸನೆ ಮಾಡದಿದ್ದರೆ ಅದು ನಿಜವಾದ ಯೋಗವಾಗುವುದಿಲ್ಲ. ಧ್ಯಾನದಲ್ಲಿ ಕೇವಲ ಭಗವಂತನನ್ನು ಕಾಣಬೇಕು ಎನ್ನುವ ಬಯಕೆ ಮತ್ತು ಎಲ್ಲಾ ಪ್ರತೀಕದಲ್ಲೂ ಅವನನ್ನೇ ಕಾಣುವುದು ಶ್ರೇಷ್ಠವಾದ ಯೋಗ. ಈ ರೀತಿ ಬದುಕಿದಾಗ ನಮ್ಮ ಬದುಕೇ ಒಂದು ಯೋಗವಾಗುತ್ತದೆ. ಇತಿ ಷಷ್ಠೋ5ಧ್ಯಾಯಃ ಆರನೆಯ ಅಧ್ಯಾಯ ಮುಗಿಯಿತು ಇಲ್ಲಿಗೆ ಭಗವದ್ಗೀತೆಯ ಮೊದಲ ಷಟ್ಕ(ಮೊದಲ ಆರು ಅಧ್ಯಾಯ) ಮುಗಿಯಿತು. ಈ ಷಟ್ಕದಲ್ಲಿ ಭಗವಂತನ ಉಪಾಸನೆಯ ಜ್ಞಾನ ಮತ್ತು ಸಾಂಖ್ಯವನ್ನು ಕೃಷ್ಣ ವಿವರಿಸಿದ. ಜ್ಞಾನಪೂರ್ವಕವಾಗಿ ಭಗವದುಪಾಸನೆಯನ್ನು ಮಾಡುವಂತಹ ವಿಧಾನವನ್ನು ಗೀತೆಯ ಮೊದಲ ಷಟ್ಕ ವಿವರಿಸುತ್ತದೆ. ಮುಂದೆ ಭಗವಂತನನ್ನು ಉಪಾಸನೆ ಮಾಡುವ ವಿಷಯಾಂಶ(೩50600 ಮತ್ತು ಭಗವಂತನ ಮಹಿಮೆ-ಅದರ ವಿವರಗಳು ಬರುತ್ತವೆ.
Bibek Debroy (1955–2024)The Bhagavad Gita
(47) ‘My view is that he who is devoted and worships me, with his self immersed in me, is the most accomplished among all yogis.’