उद्धरेदात्मनात्मानं नात्मानमवसादयेत् ।
आत्मैव ह्यात्मनो बन्धुरात्मैव रिपुरात्मनः ॥
uddharedātmanātmānaṃ nātmānamavasādayet |
ātmaiva hyātmano bandhurātmaiva ripurātmanaḥ ||
Sri Madhvacharya (1238–1317)Bhagavad Gita Tatparya Nirnaya
6.5–6.6
‘उद्धरेतैव संसाराज्जीवात्मानं परात्मना।
विष्णुर्बन्धुः सतां नित्यं परात्मा ह्यसतामरिः।
तत्प्रसादजया भक्त्या जितो यस्य वशे त्विव।
वर्तते तस्य मित्रं स तदन्यस्य च शत्रुवत्’ इति च।
‘परमात्मा समाहितः’ इति वाक्यशेषाच्च॥05, 06॥
Swami Sivananda (1887–1963)Bhagavad Gita
5. Let a man lift himself by his own Self alone; let him not lower himself, for this self alone
is the friend of oneself and this self alone is the enemy of oneself.
Sri Vishwesha Tirtharu (1931–2019)Gitasaroddhara
ಕರ್ಮಯೋಗಿಗೆ ಲೋಕಸೇವೆ ಅನಿವಾರ್ಯ
ಕರ್ಮಯೋಗಿಗೆ ಲೋಕಸೇವೆ ಅನಿವಾರ್ಯ
ಧ್ಯಾನಯೋಗದಮೊದಲುನಾವುಮಾಡುವಕರ್ಮಗಳೆಂದರೆ ಜಪ, ಪೂಜೆ
ಹಾಗೂ ಇತರ ವರ್ಣಾಶ್ರಮೋಚಿತ ಕರ್ತವ್ಯಗಳೆಂದು ಮಾತ್ರ ನಾವು
ಭಾವಿಸಿದ್ದೇವೆ. ಪಾಠ-ಪ್ರವಚನ ಮುಂತಾದ ಆಯಾಯ ವರ್ಣಗಳು ಮಾಡುವ
ವಿಶೇಷಧರ್ಮಗಳು ಮಾತ್ರವಲ್ಲದೆ, ಎಲ್ಲವರ್ಣದವರು ಮಾಡಲೇಬೇಕಾದ,
ಸರ್ವಸಾಧಾರಣವೆನಿಸುವ ಒಂದು ಶ್ರೇಷ್ಠ ಕರ್ತವ್ಯವೂ ಇದೆ. ಅದೇ
ನಾನಾಜನಶುಶ್ರೂಷೆ ಈ ಜಗತ್ತಿನಲ್ಲಿರುವ ಅನೇಕ ಬಗೆಯ ಜನತೆಯ
ಸೇವೆಯೂ ಸಾಧಕನು ಅನುಷ್ಠಿಸಬೇಕಾದ ಮುಖ್ಯ ಕರ್ತವ್ಯಗಳಲ್ಲಿ ಒಂದೆನಿಸಿದೆ.
ಎಲ್ಲಿ ದುಃಖ, ರೋಗ, ಹಸಿವುಗಳಿವೆಯೋ ಅಂತಹ ಆರ್ತಜನರಿಗಾಗಿ ನಮ್ಮ
ಹೃದಯ ಮಿಡುಕಬೇಕು. ಎಲ್ಲ ಜನರಲ್ಲಿರುವ ಹರಿಯನ್ನು ಸ್ಥರಿಸಿ ಸ್ವಾರ್ಥ
ಭಾವನೆಯನ್ನು ತ್ಯಜಿಸಿ ಜನಸೇವೆಯನ್ನು ಕೈಗೊಳ್ಳುವುದರಿಂದ ಭಗವಂತನು
ಪ್ರೀತನಾಗುವನು.
ತಸ್ಯ ಪ್ರಾಣ್ಯುಪಕಾರೇಣ ಸಂತುಷ್ಟೋ ಭವತೀಶ್ವರಃ |
-ಗೀತಾತಾತ್ಪರ್ಯ
ಸಾಕ್ಷಾತ್ಕಾರವನ್ನು ಪಡೆಯುವವರೆಗೆ ತನ್ನ ಜಪಪೂಜಾದಿಗಳ ಜೊತೆಗೆ
ಸಾಧಕನು ಈ ಜನಶುಶ್ರೂಷೆಯ ಕಾರ್ಯವನ್ನೂ ಕ್ಲೆಗೊಳ್ಳಬೇಕು. ಇದು
ಐಚ್ಛಿಕವಲ್ಲ. ಕಡ್ಡಾಯವಾಗಿ ಈ ಸೇವೆಯನ್ನು ನಾವು ಆಚರಿಸಲೇಬೇಕು.
ಸರಕಾರಕ್ಕೆ ಕರ, ಕಂದಾಯಗಳನ್ನು ಕೊಡುವುದು ಹೇಗೆ ಅನಿವಾರ್ಯವೊ
ಅದರಂತೆ ನಾನಾಜನನೇವೆಯು ಭಗವಂತನು ನಮಗೆ ವಿಧಿಸಿದ ಕಡ್ಡಾಯದ
ಕರ್ತವ್ಯವಾಗಿದೆ. ಇದು ಜಗತ್ತಿನ ಅಧಿದೇವತೆಗೆ ನಾವು ಸಲ್ಲಿಸಬಹುದಾದ
ಕಂದಾಯವೆನಿಸಿದೆ. ಕರ, ಕಂದಾಯಗಳನ್ನು ಕೊಡಲು ತಪ್ಪಿದಲ್ಲಿ ಅವನು ರಾಷ್ಟ್ರದ
ಯೋಗ್ಯ ನಾಗರಿಕನಾಗಬಲ್ಲನೆ? ಅದರಂತೆ ವಿಶ್ವರಾಜ್ಯದ ಏಕಮೇವ
ಸಾರ್ವಭೌಮನೆನಿಸಿದ ಭಗವಂತನಿಗಾಗಿ ದೀನ ದಲಿತರ ಸೇವೆಯನ್ನು
ನಡೆಸದಿದ್ದರೆ ನಾವು ಹೇಗೆ ವಿಶ್ವದ ಯೋಗ್ಯ ಪ್ರಜೆಗಳೆನಿಸಬಲ್ಲೆವು?
ನಾನಾಜನಸ್ಯ ಶುಶ್ರೂಷಾ ಕರ್ಮಾಖ್ಯಾ ಕರವನ್ನಿತೇಃ।
-ಗೀತಾತಾತ್ಪರ್ಯ
ಲೋಕಸೇವೆಯ ಅನಿವಾರ್ಯತೆಯನ್ನೂ ಅದರ ಹಿಂದಿರುವವವಿತ್ರವಾದ
ಭಾವವನ್ನೂ ಇದು ವಿವರಿಸುತ್ತದೆ. ಶ್ರೀಮಧ್ವಾಚಾರ್ಯರು ಜನಸೇವೆಯು
ಸಾಧಕನಿಗೆ ಅವಶ್ಯಕವೆಂದು ಪ್ರತಿಪಾದಿಸಲು ಗಿತಾತಾತ್ಪರ್ಯದಲ್ಲಿ ಉದಾಹರಿಸಿದ
ಶ್ಲೋಕವಿದು. ಇದು. ನಮಗೆ ಪ್ರಿಯವಾದ ಧ್ಯೇಯವಾಕ್ಕವೆನಿಸಿದೆ.
ಕರ್ಮಾಚರಣೆಯು ಅವಶ್ಯವೆಂದು ಭಾವಿಸಿ, ತಮ್ಮ ವೈಯಕ್ತಿಕ ಧರ್ಮಕರ್ಮ
ಗಳನ್ನು ಮಾತ್ರ ಆಚರಿಸಿ, ಸಮಾಜದ ಬಗ್ಗೆ ಉದಾಸೀನವಾಗಿರುವ ಪ್ರವೃತ್ತಿಯನ್ನೇ
ನಾವು ಹೆಚ್ಚಾಗಿ ಕಾಣುತ್ತೇವೆ. ಸಮಾಜದ ಸೇವೆಯೆಂದರೆ ಅದೊಂದು
ಲೌಕಿಕಕಾರ್ಯವೆಂದೂ ಅದನ್ನುತೊರೆದು ದಿನವಿಡೀ ಜಪ-ತವಮೊದಲಾದ
ವೈಯಕ್ತಿಕವಾದ ಆಧ್ಯಾತ್ಮಿಕ ಕಾರ್ಯಗಳಲ್ಲಿ ತೊಡಗುವವನೇ ಕಟ್ಟು
ಧಾರ್ಮಿಕನೆಂಬ ಒಂದು ಭಾವನೆಯು ಪ್ರಚಲಿತವಿದೆ. ಗೀತೆಯಲ್ಲಿ ಹೇಳಿದ
ಕರ್ಮದ ಸಂದೇಶವನ್ನು ವರ್ಣಾಶ್ರಮ ಪದ್ಧತಿಯಿಂದ ಬಂದ ನಮ್ಮ ನಮ್ಮ ವೃತ್ತಿ
ಹಾಗೂ ಜಪ-ಪೂಜಾದಿಗಳಲ್ಲೇ ನಾವುಪರಿಮಿತಗೊಳಿಸಿದ್ದೇವೆ. ನಮ್ಮ ಆಧ್ಯಾತ್ಮಿಕ
ಸಾಧನೆಯಲ್ಲಿ ಆರ್ತಜನತೆಯ ಸೇವೆಯು ಒಂದು ಪ್ರಧಾನವಾದ
ಅಂಶವಾಗಿದೆಯೆಂದೂ ಸಾಧಕನು ತನ್ನ ನಿತ್ಯಾನುದ್ಧಾನಗಳ ಜೊತೆಗೆ ಈ
ಸೇವಾಕಾರ್ಯವನ್ನು ಆಚರಿಸಲೇಬೇಕೆನ್ನುವುದು ಗೀತೆಯ ಆದೇಶವೆಂದೂ
ಶ್ರೀಮಧ್ವಾಚಾರ್ಯರು ಪ್ರತಿಪಾದಿಸಿದ್ದಾರೆ. ವೇದಾಂತವು ಸಮಾಜವಿಮುಖವಾದ
ದೃಷ್ಟಿಯನ್ನು ನಮಗೆ ನೀಡದೆ ವೈಯಕ್ತಿಕ ಹಾಗೂ ಸಮಾಜದ ಉನ್ನತಿಗೆ
ಪೋಷಕವಾದ ವಿಧಾಯಕವಾದ. ಮಾರ್ಗವನ್ನು ಹೇಗೆ ತೋರಿಸುತ್ತದೆ
ಎಂಬುದನ್ನು ಇದರಿಂದ ನಾವು ಮನಗಾಣಬಹುದು.
ಲೋಕದಲ್ಲಿ ಎರಡು ಬಗೆಯ ಜನರಿರುವರು. ಜವಾನುವ್ಯುನ ನಿರತರಾಗಿ
ನಾಮಾಜಿಕ ಕಾರ್ಯವನ್ನು ತೊರೆಯುವವರು ಕೆಲವರು. ಸಮಾಜಸೇವೆ
ಯಲ್ಲಿಯೇ ನಿರತರಾಗಿ ದೇವರನ್ನೇ ಮರೆಯುವವರು ಕೆಲವರು. ಈ ಎರಡು
ಬಗೆಯ ಜನರ ಜೀವನವೂ ಅಪೂರ್ಣವೆನಿಸುತ್ತದೆ. ಸಮಾಜಸೇವೆಯಿಲ್ಲದ
ನಿತ್ಯಕರ್ಮಗಳು ಪೂರ್ಣ ಧರ್ಮವೆನಿಸಲಾರವು. ಪರಮಾತ್ಮನ ಭಕ್ತಿಪೂಜೆ
ಗಳಿಲ್ಲದ ಸಮಾಜಸೇವೆಯೂ ಪರಿಪೂರ್ಣ ಸೇವೆ ಎನಿಸಲಾರದು. ಧರ್ಮದ
ಒಂದು ಮುಖವನ್ನು ಮಾತ್ರ ಪರಿಗ್ರಹಿಸಿ ಇನ್ನೊಂದು ಭಾಗವನ್ನು ಅಲಕ್ಷಿಸಿದರೆ
ನಮ್ಮ ಧರ್ಮವು ಪರಿಪೂರ್ಣವೆನಿಸಲಾರದು. ಆನೆಯ ಒಂದೊಂದು ಭಾಗವನ್ನು
ಮಾತ್ರ ಮುಟ್ಟಿಕುರುಡರು ತಾವು ಆನೆಯನ್ನು ಅರಿತೆವೆಂದು ಭಾವಿಸಿಕೊಂಡಂತೆ
ನಮ್ಮ ಪರಿಸ್ಥಿತಿಯಾಗುವುದು. ಆನೆಯ ಬಾಲವನ್ನು ಮಾತ್ರ ಮುಟ್ಟಿ ಆನೆಯು
ಹಗ್ಗದಂತಿದೆ ಎಂದು ಆಕುರುಡರು ಹೇಳಿದಂತೆ. ಅದರಂತೆ ಧರ್ಮದ ಒಂದು
ಭಾಗವೆನಿಸುವ ನಿತ್ಯಕರ್ಮಾನುಷ್ಠಾನವನ್ನು ಮಾತ್ರ ಆಚರಿಸಿ ಇನ್ನೊಂದು
ಭಾಗವೆನಿಸುವ ಲೋಕಸೇವೆಯನ್ನು ಪರಿತ್ಯಜಿಸಿದರೆ ನಮ್ಮ ಧರ್ಮವು
ಅಪೂರ್ಣವಾಗುವುದು. ಆದುದರಿಂದ ಧಾರ್ಮಿಕರೆನಿಸುವವರು ಸಮಾಜ
ಸೇವೆಯ ಮಹತ್ತ್ವವನ್ನೂ ಸಾಮಾಜಿಕ ಕಾರ್ಯಕರ್ತರು ನಿಸ್ವಾರ್ಥ
ಸೇವಾಭಾವದಸ್ಫ್ಯರ್ತಿಗೆ ಆಧಾರವೆನಿಸಿದ ಭಗವದ್ಭಕ್ತಿಯನ್ನೂ ಅರಿತುಕೊಂಡು
ಅವೆರಡನ್ನೂ ತಮ್ಮ ಜೀವನದಲ್ಲಿ ಸಮ್ಮಿಲಿತಗೊಳಿಸಬೇಕು.
ಕಾಶೀಯಾತ್ರೆಯನ್ನು ಮುಗಿಸಿ ಗಂಗಾತೀರ್ಥವನ್ನು ಪಾತ್ರೆಗಳಲ್ಲಿ ತುಂಬಿ
ಕೊಂಡು ಕೆಲವರು ಸಾಧುಗಳು ಹಿಂದಿರುಗುತ್ತಿದ್ದರು. ಆ ತೀರ್ಥವನ್ನು
ರಾಮೇಶ್ವರದಲ್ಲಿ ಅಭಿಷೇಕ ಮಾಡಬೇಕೆಂದು ಅವರ ಸಂಕಲ್ಪವಾಗಿತ್ತು.
ಹಿಂದಿರುಗುವ ದಾರಿಯಲ್ಲಿ ರಾಜಸ್ಥಾನದ ಮರುಭೂಮಿಯಲ್ಲಿ ಒಂಟೆ
ಯೊಂದು ನೀರಿಲ್ಲದೆ ಪ್ರಾಣಸಂಕಟದಿಂದ ನರಳುತ್ತಿತ್ತು. ಅದನ್ನು ಕಂಡು
ಸಾಧುಗಳಿಗೆ ಮರುಕವೇನೋ ಆಯಿತು. ಆದರೆ ಅದರ ಸಂಕಟವನ್ನು
ನಿವಾರಿಸಲು ನೀರಿನ ಅನೂಕೂಲವಿಲ್ಲ ದೆ ಅವರೆಲ್ಲ ನಿರುಪಾಯರಾಗಿದ್ದ ರು.
ಅವರಲ್ಲಿ ಒಬ್ಬನು ತನ್ನ ಕೈಯಲ್ಲಿದ್ದ ಗಂಗಾಪಾತ್ರೆಯನ್ನೇ ಒಡೆದು ಆ ನೀರನ್ನೇ
ಒಂಟಿಯ ಬಾಯಿಗೆ ಸುರುವಿದನು. ರಾಮೇಶ್ವರನ ಅಭಿಷೇಕಕ್ಕಾಗಿ ಸಂಗ್ರಹಿಸಿದ್ದ
ಗಂಗಾತೀರ್ಥವನ್ನು ಒಂಟೆಯ ಬಾಯಿಗೆ ಹಾಕಿದ ಬಗ್ಗೆ ಉಳಿದವರು
ಆಕ್ಷೇಪಿಸಿದಾಗತನಗೆ ಈ ಒಂಟೆಯಲ್ಲೇ ರಾಮೇಶ್ವರನ ದರ್ಶನವಾಯಿತೆಂದೂ
ಕಷ್ಟದಲ್ಲಿ ಸಿಲುಕಿದ ಪ್ರಾಣಿಗಳಿಗೆ ಮಾಡುವ ಉಪಕಾರವೂ ಈಶ್ವರನ ಪೂಜೆಯೇ
ಆಗಿರುವುದೆಂದೂ ಆ ಸಾಧುವು ಅವರಿಗೆ ಬೋಧಿಸಿದನು. ಪರಮಾತ್ಮನು
ನಮ್ಮಿಂದ ಬಹುದೂರದಲ್ಲಿ ಇಲ್ಲ; ನಮ್ಮ ಸೇವೆಯನ್ನು ಸ್ವೀಕರಿಸಲು ಸಿದ್ಧನಾಗಿ
ನಮ್ಮ ಮುಂದೆಯೇ ಎಲ್ಲ ಪ್ರಾಣಿಗಳಲ್ಲಿ ನೆಲೆಸಿದ್ದಾನೆ. ಜನತೆಯಲ್ಲಿರುವ
ಪರಮಾತ್ಮನನ್ನು ಗುರುತಿಸಿಕೊಂಡು ಲೋಕಾರಾಧನೆಯನ್ನು ಮಾಡುವುದೇ
ವಿಶೇಷವಾದ ಪರಮಾತ್ಮನ ಪೂಜೆಯೆಂದು ಪ್ರಹ್ಲಾದನು ಉಪದೇಶಿಸಿರುವುದನ್ನು
ಭಾಗವತದಲ್ಲಿ ವರ್ಣಿಸಲಾಗಿದೆ.
ಆದರೆ ಲೋಕಸೇವೆಯನ್ನು ಮಾಡುವಾಗಲೂ ಅಲ್ಲಿ ಪರಮಾತ್ಮನ
ವಿಸ್ಮರಣೆಯು ಸಲ್ಲದು. ಯಾವುದೇ ಕಾರ್ಯಕ್ಕೆ ಹಿನ್ನೆಲೆಯಾಗಿ ಒಂದು
ಉದ್ದೇಶವು ಇರಲೇಬೇಕಾಗುವುದು. ಭಗವಂತನನ್ನು ಮರೆತು ಅವನ ಪ್ರೀತಿಯ
ಉದ್ದೇಶವಿಲ್ಲದೆ ಪ್ರವರ್ತಿಸಿದಾಗ ಸಹಜವಾಗಿ ಇತರ ಲೌಕಿಕ ಕಾಮನೆಗಳ
ಉದಯವಾಗುವುದು ಅನಿವಾರ್ಯ. ಲೋಕಸೇವೆಯನ್ನು ಮಾಡುವಾಗಲೂ
ಲೋಕದ ಅಂತರಂಗದಲ್ಲಿ ನೆಲೆಸಿದ ಭಗವಂತನ ಸೇವಾಭಾವನೆ ಇಲ್ಲದಿದ್ದರೆ
ಅಲ್ಲಿಯೂ ಸ್ವಾರ್ಥಪ್ರವೃತ್ತಿಯ ಪ್ರವೇಶವಾಗಿ ಕೀರ್ತಿ, ಪ್ರತಿಷ್ಠೆ ಅಧಿಕಾರ
ಮೊದಲಾದವುಗಳ ಆಕಾಂಕ್ಷೆಯಿಂದ ಆ ಸೇವೆಯಲ್ಲಿ ಕೃತ್ರಿಮತೆಯು
ನೆಲೆಸುವುದು. ಭಗವತ್ಯೀತೃರ್ಥವಲ್ಲದ ಸ್ವಾರ್ಥಪೂರ್ಣ ಕಾರ್ಯಗಳೆಲ್ಲಎಷ್ಟೇ
ವರೋಪಕಾರಿಗಳಾಗಿದ್ದರೂ ಇವೆಲ್ಲ ಇಷ್ಟುಪೂರ್ತಗಳಾಗಿದ್ದು ತಾತ್ಕಾಲಿಕ
ಫಲಕಾರಿಗಳಾಗಿವೆ. ಆದುದರಿಂದ ಲೋಕಸೇವೆಯನ್ನು ಮಾಡುವಾಗಲೂ
ಭಗವತ್ಸೆ ೇವಾದೃಷ್ಟಿ ಜಾಗೃತವಾಗಿರಬೇಕು.
ಉದ್ದ] ರೇದಾತ್ಮನಾನ5ತ್ಮಾನಂ |
ಅಂತೂ ಗೀತೆಯಲ್ಲಿ ಇಷ್ಟರವರೆಗೆ ಹೇಳಿದ ರೀತಿಯಲ್ಲಿ ಕರ್ಮ
ಯೋಗವನ್ನಾಡರಿಸಿದ ವ್ಯಕ್ತಿಯೇ ಧ್ಯಾನಯೋಗಕ್ಕೆ ಅಧಿಕಾರಿ ಎನಿಸುವನು. ಈ
ಧ್ಯಾನಯೋಗವೇ ಮುಂದೆ ಅಪರೋಕ್ಷಣ್ನಾನದ ಮೂಲಕ ಮುಕ್ತಿಸುಖಕ್ಕೆ
ಕಾರಣವಾಗಿರುವುದರಿಂದ ಮನಸ್ಸನ್ನು ಸ್ವಾಧೀನಗೊಳಿಸಿ ಈ ಧ್ಯಾನಯೋಗದ
ಬಗ್ಗೆ ವಿಶೇಷ ಅಭಿನಿವೇಶದಿಂದ ನಾವು ಪ್ರವೃತ್ತರಾಗಬೇಕು. ನಮ್ಮ ಉದ್ಧಾರದ
ಕೀಲಿಕೈೆಯು ನಮ್ಮಲ್ಲಿಯೇ ಇದೆ.
ನಮಗೆ ಅತ್ಯಂತ ಪ್ರಿಯವಾದ ಆತ್ಮವಸ್ತುವನ್ನು ಸಾಂಸಾರಿಕ ಕ್ಲೇಶವಿದೂರ
ವನ್ನಾಗಿ, ಪರಮಸುಖಭಾಜನವನ್ನಾಗಿ ಮಾಡುವುದು ನಮ್ಮ ಆದ್ಯ ಕರ್ತವ್ಯ
ವಾಗಿದೆ. ನಮ್ಮ ಮನಸ್ಸಿನ ಮೂಲಕವೇನಾವುಇದನ್ನು ಸಾಧಿಸಬೇಕು.
ಮನ ಏವ ಮನುಷ್ಯಾಣಾಂ ಕಾರಣಂ ಬಂಧಮೋಕ್ಷ ಯೋಃ।
ನಮ್ಮ ಉದ್ಧಾರ ಹಾಗೂ ಅವನತಿಯ ಮೂಲವು ನಮ್ಮ ಮನಸ್ಸೇ
ಆಗಿರುವುದು. ಆ ಮನಸ್ಸು ನಮ್ಮ ಶತ್ರುವೂ ಆಗಬಲ್ಲದು; ಮಿತ್ರನಾಗಿ,
ಬಂಧುವಾಗಿನಮಗೆ ಆತ್ಯಂತಿಕ ಉಪಕಾರವನ್ನೂ ಮಾಡಬಲ್ಲದು. ಪೆಟ್ಟಿಗೆಯನ್ನು
ಮುಚ್ಚಲೂ ತೆರೆಯಲೂ ಸಹಾಯಕವಾಗುವ ಬೀಗದ ಕೈಯಂತೆ ಮನಸ್ಸೇ ಬಂಧ
ಮೋಕ್ಷಗಳಿಗೆ ಕಾರಣ. ಹೀಗೆ ನಮ್ಮ ಉದ್ದಾರದ ಕೀಲಿಕೈಯು ನಮ್ಮಲ್ಲಿಯೇ
ಇರುವಾಗ ನಾವು ಉತ್ಸಾಹದಿಂದ ಮುಕ್ತಿಸಾಧನೆಯ ಬಗ್ಗೆ ಏಕೆ
ಮುನ್ನಡೆಯಬಾರದು? ಆದರೆ ಈ ಮನಸ್ಸು ದೊಡ್ಡ ಆನೆಯಂತೆ ಇದೆ. ಪಳಗಿದ
ಆನೆಯಿಂದ ನಾವು ಬೇಕಾದ ಕೆಲಸಗಳನ್ನು ಸಾಧಿಸಬಹುದು. ಆದರೆ ಆನೆ
ಪಳಗಿರದಿದ್ದರೆ ಅದೇ ನಮಗೆ ಮಾರಕವೂ ಆಗಬಹುದು. ಮನಸ್ಸಿನ ಮೇಲೆ
ನಿಯಂತ್ರಣವನ್ನು ಸಾಧಿಸಿದಲ್ಲಿ ಅದು ನಮಗೆ ಪರಮಮಿತ್ರನಾಗಿ
ಪರಿಣಮಿಸುವುದು. ಆದರೆ ಪಳಗದಿರುವ ಅನಿಯಂತ್ರಿತ ಮನಸ್ಸು ಮಹಾ
ಶತ್ರುವಾಗಿ ಸಂಸಾರದ ಪ್ರಪಾತದಲ್ಲಿ ನಮ್ಮನ್ನು ಒಗೆಯಬಹುದು. ಈ
ವಿಷಯದಲ್ಲಿನಾವು ಬಹಳ ಜಾಗರೂಕರಾಗಿ ವರ್ತಿಸಬೇಕು.
ನಮ್ಮ ಶತ್ರುಮಿತ್ರರಿಬ್ಬರೂ ನಮ್ಮಲ್ಲೇ ಇರುವರು. ನಮ್ಮ ಶತ್ರುಗಳು
ಹೊರಗಿರುವರೆಂದು ಹೊರಗಿನ ಜನರಲ್ಲಿ ನಾವೇಕೆ ದ್ವೇಷಾಸೂಯೆಗಳನ್ನು
ಮಾಡಬೇಕು? ಸ್ವಾರ್ಥಿ ಭಕ್ತನೊಬ್ಬನು "“ದೇವ, ನಿನ್ನ ಆಯುಧಗಳು ನನ್ನ
ಶತ್ರುಗಳ ಮೇಲೆಎರಗಲಿ/'' ಎಂದು ದೇವರನ್ನು ಪ್ರಾರ್ಥಿಸಿದ. ಆಯುಧಗಳು
ಅವನ ಮೇಲೆಯೇ ಬೀಳಲು ಅಣಿಯಾದಾಗ ಗಾಬರಿಯಿಂದ ಆ ಭಕ್ತನು
ಭಗವನ್, ನನ್ನ ಶತ್ರುಗಳ ಮೇಲೆ ಪ್ರಯೋಗಿಸಬೇಕೆಂದು ನಾನು ಕೇಳಿರುವಾಗ
ನನ್ನ ಮೇಲೆಯೇ ಈ ಆಯುಧಗಳ ಪ್ರಯೋಗವೇಕೆ ನಡೆದಿದೆ? ನಿನ್ನ ಗುರಿ
ತಪ್ಪಿದೆಯೆ? ಎಂದು ಪ್ರಶ್ನಿಸಿದನು. "“ನನ್ನ ಗುರಿ ಏನೂತಪ್ಪಿಲ್ಲ. ನಿನ್ನ ಮೊದಲ
ಶತ್ರುವು ನಿನ್ನಲ್ಲಿಯೇ ಇರುವನು. ಅದಕ್ಕಾಗಿ ನಿನ್ನ ಪ್ರಾರ್ಥನೆಯಂತೆ ನಿನ್ನ
ಮೇಲೆಯೇ ಈ ಶಸ್ತ್ರದ ಪ್ರಹಾರ'' ಎಂದು ಭಗವಂತನು ಉತ್ತರಿಸಿದನಂತೆ.
ಅರ್ಥಾತ್ ನಮ್ಮ ಶತ್ರುವು ನಮ್ಮಲ್ಲಿಯೇ ಅಡಗಿರುವನೆಂದು ಭಾವಿಸಿ ನಮ್ಮನ್ನು
ಸುಧಾರಿಸಿಕೊಳ್ಳಲು ನಾವು ಪ್ರಯತ್ನಿಸಬೇಕಲ್ಲದೆ ದ್ವೇಷಜರ್ರುರಿತರಾಗಿ
ಶತ್ರುಗಳೆಂದು ಬೇರೆ ಜನರಲ್ಲಿ ಪ್ರತೀಕಾರಭಾವನೆಯನ್ನು ಬೆಳೆಸಿ ನಮ್ಮ ಅಮೂಲ್ಯ
ಜೀವನವನ್ನು ಹಾಳುಗೆಡವಬಾರದು. ನಮ್ಮ ಪ್ರಥಮ ಶತ್ರುವೆನಿಸಬಹುದಾದ
ಮನಸ್ಸಿನ ಮೇಲೆ ವಿಜಯ ಸಾಧಿಸಿ, ಜೀವನದಲ್ಲಿ ಆಧ್ಯಾತ್ಮಿಕ ಪ್ರಗತಿಯನ್ನು
ಸಾಧಿಸುವುದೇ ನಮ್ಮ ಪರಮ ಕರ್ತವ್ಯವಾಗಿದೆ.
ಧ್ಯಾನಯೋಗದಲ್ಲಿ ಯಶಸ್ವಿಯಾಗಲು ಮನೋನಿಗ್ರಹವು ಆವಶ್ಯಕವಿರು
ವಂತೆ ಭಗವಂತನ ಅನುಗ್ರಹವೂ ಬೇಕು. ನಾವು ಭಕ್ತಿ ಸ್ವಕರ್ತವ್ಯಗಳಿಂದ ಅವನನ್ನು
ಪ್ರಸನ್ನಗೊಳಿಸಿದರೆ ಮಾತ್ರ ಧ್ಯಾನಕ್ಕೆ ಅವಶ್ಯವೆನಿಸಿದ ಮಾನಸಿಕ ಬಲವನ್ನು
ಅವನು ನೀಡುವನು. ಅವನ ಅನುಗ್ರಹಬಲವಿಲ್ಲದೆ ಕೇವಲಸ್ವಪ್ರಯತ್ನದಿಂದಲೇ
ಅವನನ್ನು ಧ್ಯಾನಿಸಲೂಸಾಕ್ಟಾತ್ಮರಿಸಲೂ ಸಾಧ್ಯವಿಲ್ಲ.
ಯಮೇವೈಷ ವೃಣುತೇ ತೇನ ಲಭ್ಯಃ
ಕಠೋಪನಿಷತ್ತು
ಎಂದು ಉಪನಿಷತ್ತಿನಲ್ಲಿ ಅವನ ಅನುಗ್ರಹದಿಂದಲೇ ನಮಗೆ ಅವನ ದರ್ಶನ
ಲಾಭವೆಂದು ಹೇಳಲಾಗಿದೆ. ನಮ್ಮ ಭಕ್ತಿ ಧರ್ಮಗಳಿಗೊಲಿದು ನಮಗೆ
ಮೋಕ್ಷದಾತನಾಗಬಹುದಾದ ಪರಮಾತ್ಮನು ನಮ್ಮ ಸ್ವೇಚ್ಛಾವೃತ್ತಿ ಹಾಗೂ
ಲೋಕಘಾತಕ ಪ್ರವೃತ್ತಿಯಿಂದ ಮುನಿದರೆ ನಮಗೆ ಆತನು ಮಿತ್ರನಾಗಿ
ಉಳಿಯಲಾರ. ಭಗವಂತನಿಂದ ನಾವು ಘೋರ ಶಿಕ್ಷೆಯನ್ನೇ ಅನುಭವಿಸ
ಬೇಕಾಗುತ್ತದೆ. ಆದುದರಿಂದ ಭಗವಂತನ ಒಲವನ್ನು ಪಡೆಯಲು ಅವನು
ಜಗತ್ತಿನ ಹಿತಕ್ಕಾಗಿ ಏರ್ಪಡಿಸಿದ ನಿಯಮ, ಶಿಸ್ತುಗಳನ್ನು ನಿಷ್ಠೆಯಿಂದ
ಅನುಸರಿಸುವುದೂ ಆತ್ಮದ ಪ್ರಗತಿಗೆ ಅವಶ್ಯವಾಗಿದೆ.
ಹೀಗೆ ಕರ್ತವ್ಯನಿಷ್ಠೆ ಮನೋನಿಗ್ರಹ, ಹರಿಪ್ರಸಾದ ಈ ತ್ರಿವಿಧ
ಸಾಧನೆಗಳಿಂದ ಧ್ಯಾನಯೋಗದ ಮಾರ್ಗದಲ್ಲಿನಡೆಯಲು ಉಪಕ್ರಮಿಸಬೇಕು.
Bannanje Govindacharya (1936–2020)Bhagavad Gita Pravachana
ಉದ್ಧರೇತ್ ಆತ್ಮನಾ ಆತ್ಮಾನಮ್ ನ ಆತ್ಮಾನಮ್ ಅವಸಾದಯೇತ್ |
ಆತ್ಮಾ ಏವ ಹಿ ಆತ್ಮನಃ ಬಂಧುಃ ಆತ್ಮಾ ಏವ ರಿಪುಃ ಆತ್ಮನಃ -ಬಗೆಯ ಬಲದಿಂದ [ಭಗವಂತನ ಹಸಾದದಿಂದ]
ಜೀವವನ್ನು ಮೇಲೆತ್ರಬೇಕು; ಜೀವವನ್ನು ಜಂಜಡಗೊಳಿಸಬಾರದು. ಬಗೆಯೇ[ಭಗವಂತನೇ। ಜೀವದ ಗೆಳೆಯ;
ಬಗೆಯೇ[ಭಗವಂತನೇ[]ಜೀವದ ಹಗೆಯು.
ಈ ಹಿಂದೆ ಹೇಳಿದಂತೆ ಆತ್ಮ ಎನ್ನುವ ಪದಕ್ಕೆ ಅನೇಕ ಅರ್ಥಗಳಿವೆ. ಆತ್ಮ ಎಂದರೆ ಶರೀರ, ಮನಸ್ಸು, ಜೀವ,
ಪರಮಾತ್ಮ. ಹೀಗೆ ಈ ಶ್ಲೋಕದಲ್ಲಿ ಬಂದಿರುವ ಆತ್ಮ ಶಬ್ದಕ್ಕೆ ಈ ಎಲ್ಲಾ ಅರ್ಥವನ್ನೂ ಜೋಡಿಸಿ ನೋಡಿದರೆ
ಅನೇಕ ವಿಚಾರ ಸ್ಪಷ್ಟವಾಗುತ್ತದೆ. “ಉದ್ಧರೇತ್ ಆತ್ಮನಾ ಆತ್ಮಾನಮ್ ನ ಆತ್ಮಾನಮ್ ಅವಸಾದಯೇತ್”
ಅಂದರೆ ನಮ್ಮ ಅಧಃಪಾತಕ್ಕೂ ಕಾರಣ ಮನಸ್ಸು. ನಮ್ಮ VETER, ಕಾರಣ ಮನಸ್ಸು. ಆದ್ದರಿಂದ
ಮನಸ್ಸಿನಿಂದ(ಆತ್ಮಾನಾ) ಜೀವದ(ಆತ್ಮಾನಂ) ಉದ್ಧಾರದ ದಾರಿಯನ್ನು ಹುಡುಕು ಎನ್ನುತ್ತಾನೆ ಕೃಷ್ಣ. ಎಂದೂ
ಮನಸ್ಸನ್ನು ಕೆಳಕ್ಕೆ ಕಳುಹಿಸಬೇಡ. ಆತ್ಮದ(ಜೀವದ) ಅವಸಾನಕ್ಕೆ ಕಾರಣವಾಗುವಂತೆ ಮನಸ್ಸನ್ನು
ಸ್ವಚ್ಛಂದವಾಗಿ ಬಿಡಬೇಡ. ಅದನ್ನು ಮೇಲಕ್ಕೆ ಕೊಂಡು ಹೋಗು. ಮನಸ್ಸು ಕೆಳಗೆ ಹೋದರೆ ಅದು ನಮ್ಮನ್ನು
ಪಾತಾಳಕ್ಕೆ ತಳ್ಳಿ ಬಿಡುತ್ತದೆ. "ಆ ಮನಸ್ಸನ್ನು ಎತ್ತರಕ್ಕೆ ಕಳಿಸು. ಎತ್ತರಕ್ಕೆ ಹೋದ ಮನಸ್ಸು ನಿನ್ನನ್ನು ಎತ್ತರಕ್ಕೆ
ಕೊಂಡೊಯ್ಯುತ್ತದೆ. ಮನಸ್ಸಿನಿಂದ ನಿನ್ನ ಜೀವ ಸ್ವರೂಪವನ್ನು ಉದ್ದಾರ ಮಾಡಿಕೋ. ಜೀವಕ್ಕೆ ಮನಸ್ಸೇ ಬಂಧು,
ಮನಸ್ಸೇ ಶತ್ರು. ಆದ್ದರಿಂದ ಸಾಧನೆ ಮಾಡಬೇಕಾದರೆ ಮನಸ್ಸನ್ನು ಬಂಧುವಾಗಿ ಪರಿವರ್ತನೆ ಮಾಡಿಕೋ.
ಮನಸ್ಸು ನಿನ್ನ ಶತ್ರುವಾಗಿ ನಿಂತರೆ ನಿನ್ನ ಜೀವಮಾನದಲ್ಲೇ ಉದ್ಧಾರವಿಲ್ಲ. ಅದಕ್ಕಾಗಿ ಮೊದಲು ಬುದ್ಧಿಬಲದಿಂದ
ಮನಸ್ಸಿಗೆ ತರಬೇತಿ ಕೊಟ್ಟು ಅದನ್ನು ಗೆಲ್ಲಬೇಕು' ಎನ್ನುವುದು ಕೃಷ್ಣನ ಸಂದೇಶ. ಮನಸ್ಸನ್ನು ಗೆದ್ದರೆ ಎಲ್ಲವೂ
ಪ್ರಶಾಂತ, ಯಾವ ಗೊಂದಲವೂ ಇಲ್ಲ. ಇದು ಧ್ಯಾನಕ್ಕೆ ಬೇಕಾದ ಪೂರ್ವ ಸ್ಥಿತಿ.
ಕೃಷ್ಣನ ಈ ಸಂದೇಶ ಕೇಳಿದಾಗ ನಮಗೆ ಒಂದು ಪ್ರಶ್ನೆ ಎದುರಾಗುತ್ತದೆ. ಈ ಹಿಂದೆ ಕೃಷ್ಣನೇ ಹೇಳಿದಂತೆ
ಯಾವುದೂ ನಮ್ಮ ಕೈಯಲ್ಲಿಲ್ಲ. ಭಗವಂತನ ಅನುಗ್ರಹವಿಲ್ಲದೆ ನಾವು ನಮ್ಮ ಮನಸ್ಸನ್ನು ಸ್ವತಂತ್ರವಾಗಿ ಎಂದೂ
ನಿಯಂತ್ರಿಸಲು ಸಾಧ್ಯವಿಲ್ಲ. ಹೀಗಿರುವಾಗ ನಾವು ನಮ್ಮ ಮನಸ್ಸನ್ನು ನಿಯಂತ್ರಿಸುವುದು ಹೇಗೆ? ಈ ನಮ್ಮ
ಪ್ರಶ್ನೆಗೆ ಇದೇ ಶ್ಲೋಕದಲ್ಲಿ ಉತ್ತರವಿದೆ.ಆತ್ಮ ಎಂದರೆ ಪರಮಾತ್ಮ ಎನ್ನುವ ಸೂಕ್ಷ್ಮ ಅರ್ಥದಲ್ಲಿ ಈ ಶ್ಲೋಕವನ್ನು
ನೋಡಿದಾಗ ನಮ್ಮ ಪ್ರಶ್ನೆಗೆ ಉತ್ತರ ಸಿಗುತ್ತದೆ. “ಉದ್ಧರೇತ್ ಆತ್ಮನಾ ಆತ್ಮಾನಮ್” ಅಂದರೆ
“ಆತ್ಮನಿಂದಲೇ(ಭಗವಂತನಿಂದಲೇ) ಆತ್ಮನನ್ನು(ಜೀವನನ್ನು]) ಉದ್ಧರಿಸಬೇಕು. ಸಾಮಾನ್ಯವಾಗಿ ಮನಸ್ಸು
ನಮ್ಮ ಮಾತನ್ನು ಕೇಳುವುದಿಲ್ಲ. “ನನ್ನಿಂದ ಇದು ಸಾಧ್ಯವಿಲ್ಲ” ಎನ್ನುತ್ತದೆ ಮನಸ್ಸು. ಆದರೆ ನಮಗೆ ಭಗವಂತ
ಬುದ್ಧಿ ಕೊಟ್ಟಿದ್ದಾನೆ, ನಾವು ಅದನ್ನು ಉಪಯೋಗಿಸಬೇಕು. ಬುದ್ಧಿಯನ್ನು ಉಪಯೋಗಿಸಿ ಆ ಭಗವಂತನಲ್ಲಿ
“ನನಗೆ ಒಳ್ಳೆಯ ಮನಸ್ಸನ್ನು ಕೊಡು, ನನ್ನನ್ನು ಉದ್ಧಾರದ ದಾರಿಯಲ್ಲಿ ನಡೆಸು, ಸಾಧನೆ ಮಾಡುವಂತಹ
ಸದ್ಭುದ್ಧಿಯನ್ನು ಕೊಡು” ಎಂದು ಆ ಭಗವಂತನಲ್ಲಿ ನಿರಂತರ ಪ್ರಾರ್ಥಿಸು. ಆತ ನಮ್ಮ ಅತ್ಯಂತ ಆತ್ಮೀಯ
ಹಿತಚಿಂತಕ ಬಂಧು. ಅವನೊಬ್ಬನೇ ಯಾವುದೇ ಸ್ವಾರ್ಥವಿಲ್ಲದ, ಶಾಶ್ವತ, ನಿರ್ವ್ಯಾಜ್ಯ, ನಿರಂತರ ಬಂಧು. ಆತ
ಖಂಡಿತ ನಮ್ಮ ಪ್ರಾರ್ಥನೆಯನ್ನು ಮನ್ನಿಸಿ ನಮ್ಮ ಮನಸ್ಸಿನಲ್ಲಿ ಬಂದು ಕೂರುತ್ತಾನೆ.
ಭಗವಂತನನ್ನು ನಾವು ಹೇಗೆ ಕಾಣುತ್ತೇವೇ ಅದೇ ಭಾವದಲ್ಲಿ ಆತ ವ್ಯಕ್ತನಾಗುತ್ತಾನೆ. ದೇವತೆಗಳು ಆತನನ್ನು
ಜ್ಞಾನಿಯಾಗಿ ಕಂಡರು- ಆತ ಅವರಿಗೆ ಜ್ಞಾನಿಯಾಗಿ ಕಾಣಿಸಿಕೊಂಡು ಅವರ ಉದ್ಧಾರ ಮಾಡಿದ. ರಾಕ್ಷಸರು ಆತ
ಕೊಲ್ಲುವವ ಮತ್ತು ಶತ್ರು ಎಂದು ತಿಳಿದು ಅವನನ್ನು ದ್ವೇಷಿಸಿದರು- ಆತ ಅವರಿಗೆ ಶತ್ರುವಾಗಿ ಕಾಣಿಸಿದ.
ಆದ್ದರಿಂದ ಕೃಷ್ಣ ಹೇಳುತ್ತಾನೆ: “ಆತ್ಮಾ ಏವ ರಿಪುಃ ಆತ್ಮನಃ” ಎಂದು. ಅಂದರೆ ನಾವು ಅಹಂಕಾರದಿಂದ ದಾರಿ
ತಪ್ಪಿದಾಗ ಆತ ನಮಗೆ ನಮ್ಮ ಶತ್ರುವಿನಂತೆ ಭಾಸವಾಗುತ್ತಾನೆ. ಈ ಬಗ್ಗೆ ಮುಂದಿನ ಶ್ಲೋಕ ಇನ್ನೂ ಹೆಚ್ಚಿನ
ಬೆಳಕನ್ನು ಚೆಲ್ಲುತ್ತದೆ
Bibek Debroy (1955–2024)The Bhagavad Gita
(5)
‘Use the atman to raise the atman. Do not lower the atman. The atman is
the atman’s friend and the atman is the atman’s enemy.’7