अन्तवत्तु फलं तेषां तद्भवत्यल्पमेधसाम् ।
देवान्देवयजो यान्ति मद्भक्ता यान्ति मामपि ॥
antavattu phalaṃ teṣāṃ tadbhavatyalpamedhasām |
devāndevayajo yānti madbhaktā yānti māmapi ||
Sri Madhvacharya (1238–1317)Bhagavad Gita Tatparya Nirnaya
‘ज्ञात्वा परत्वं विष्णोस्तु पृथग् देवान् यजन् नरः।
याति देवांस्तदज्ञात्वा तम एव प्रपद्यते।
तथाऽपि यावदन्यैस्तु साम्यं हीनत्वमेकताम्।
न निश्चिन्वन्ति जायन्ते संसारे ते पुनः पुनः’ इति च॥23॥
Swami Sivananda (1887–1963)Bhagavad Gita
23. Verily the reward (fruit) that accrues to those men of small intelligence is finite. The
worshippers of the gods go to them, but My devotees come to Me.
Sri Vishwesha Tirtharu (1931–2019)Gitasaroddhara
ಶ್ರೀಕೃಷ್ಣನೇ ಪರದೇವತೆ
ಶ್ರೀಕೃಷ್ಣನೇ ಪರಜೀವತೆ
ಇಂತಹ ಸರ್ವೋತ್ತಮವಾದ ಪರತತ್ತ್ವ ಯಾವುದು? ಶ್ರುತಿ ಪುರಾಣಗಳಲ್ಲಿ
ವರ್ಣಿತರಾದ ಪರಸ್ಪರ ಭಿನ್ನರಾದ ಅನೇಕ ದೇವತೆಗಳಲ್ಲಿ ಸಾರ್ವಭೌಮ
ದೇವತೆಯಾದ ಪರಮಾತ್ಮನು ಯಾರೆಂಬುದನ್ನು ನಾವು. ಹೇಗೆ
ಗುರುತಿಸಿಕೊಳ್ಳಬೇಕು? ಈ ಪರವಸ್ತುವನ್ನು ಅರಸುವಲ್ಲಿ ಪುನಃ ಗೊಂದಲ
ವಾಗುವ ಸಂದರ್ಭವಿದೆ. ಗೀತೆಯು ಈ ಪರತತ್ತ್ವದ ನಿರ್ದೆೇಶವನ್ನು ಸ್ಪಷ್ಟ
ಶಬ್ದಗಳಿಂದ ಮಾಡಿ ನಮ್ಮ ಮನೋವ್ಯಾಕುಲತೆಯನ್ನು ದೂರಮಾಡಿದೆ.
ಅಂತವತ್ತು ಫಲಂ ತೇಷಾಂ
ತದ್ಭವತ್ಕಲ್ಪಮೇಧಸಾಮ್ |
ದೇವಾನ್ ದೇವಯಜೋ ಯಾಂತಿ
ಮದ್ಭಕ್ತಾ ಯಾಂತಿ ಮಾಮಪಿ ॥
ದೇವತೆಗಳ ಉಪಾಸನೆಯಿಂದ ಅಲ್ಪ ಫಲಗಳು ದೊರೆಯಬಲ್ಲವು. ತನ್ನ
ಭಕ್ತರು ತನ್ನ ಉಪಾಸನೆಯಿಂದ ಶಾಶ್ವತ ಫಲವನ್ನು ಪಡೆಯುವರು. ಈ
ಮಾತಿನಿಂದ ಶ್ರೀವಿಷ್ಣು ವು ದೇವತೆಗಳ ಸಾಲಿನಲ್ಲಿ ಸೇರಿದವನಲ್ಲ; ಜೀವರಿಗೆ
ಮುಕ್ತಿದಾತನಾದ ಸಕಲ ದೇವತೆಗಳಿಗೆ ಒಡೆಯನಾದ ಪರಮಾತ್ಮನೇ
ಆತನೆಂಬುದುಸ್ಟಷ್ಟವಾಗುವುದು. ಗೀತೆಯಲ್ಲಿ ಎಲ್ಲ ಕಡೆಗಳಲ್ಲಿಯೂ ದೇವತೆಗಳ
ಉಪಾಸನೆ ಹಾಗೂ ಶ್ರೀಕೃಷ್ಣನ ಉಪಾಸನೆ ಇವೆರಡನ್ನು ಪ್ರತ್ಯೇಕವಾಗಿ ವಿಂಗಡಿಸಿ
ಶ್ರೀಕೃಷ್ಣನ ಭಕ್ತಿಯಿಂದಲೇ ಜನರಿಗೆ ಸಂಸಾರದಿಂದ ಬಿಡುಗಡೆ ಮತ್ತು ಶಾಶ್ವತ
ಸುಖಲಾಭವಾಗುವುದೆಂದು ತಿಳಿಸಲಾಗಿದೆ. ಇದರಿಂದ ಪರದೇವತೆ ಯಾದ
ವಸ್ತು; ವು ಶ್ರೀಹರಿಯೆಂಬುದೇ ಗೀತೆಯ ಆಶಯವೆಂದು ವಿಶದವಾಗು ವುದು.
ಹನ್ನೊಂದನೆಯ ಅಧ್ಯಾಯದಲ್ಲಿಯಂತೂ ಶ್ರೀಕೃಷ್ಣನನ್ನೇ ವಾಯು, ಯಮ,
ಅಗ್ನಿ, ವರುಣ ಎಂಬುದಾಗಿಯೂ ಸಕಲ ದೇವತೆಗಳ ಆಶ್ರಯವೆಂದೂ
ಸ್ತುತಿಸಲಾಗಿದೆ. ಇದರಿಂದ ಸರ್ವದೇವತೆಗಳ ಶಬ್ದಗಳಿಂದ ಪ್ರತಿಪಾದ್ಯನಾದ
ದೇವದೇವನು ಶ್ರೀಕೃಷ್ಣನೇ ಎಂಬ ಬಗ್ಗೆ ಯಾವ ಸಂಶಯವೂ ಉಳಿಯುವುದಿಲ್ಲ.
ಅಂತೂ ಸಕಲ ಜಗಜ್ಜನ್ಮಾದಿಕಾರಣವೂ ಗುಣಪೂರ್ಣವೂ ದೋಷರಹಿತವೂ
ಸ್ವತಂತ್ರವೂ ಸರ್ವೋತ್ತಮವೂ ಆದ ತತ್ತ್ವವನ್ನೇ ನಾವು ಪರಮಾತ್ಮನೆಂದು
ಕರೆಯುತ್ತೇವೆ.
ಅತೋಶಶೇಷಗುಣೋನ್ನದ್ದಂ ನಿರ್ದೋಷಂ ಯಾವದೇವಓ।
ತಾವದೇವೇಶ್ವರೋ ನಾಮ
ಎಂಬುದಾಗಿ ಶ್ರೀಮದಾಚಾರ್ಯರು ಸಕಲಗುಣಸಂಪನ್ನವೂ
ನಿರ್ದೋಷವೂ ಆದ ವರಿಪೂರ್ಣ ವಸ್ತು ಯಾವುದೋ ಅದೇ ಈಶ್ವರವೆಂದು
ಕರೆದಿದ್ದಾರೆ. ಈ ಪರತತ್ತ್ವವು ಒಂದೇ ಆಗಿದ್ದು ಇದರ ನಿಯಂತ್ರಣದಲ್ಲಿಯೇ
ಸಕಲ ದೇವತೆಗಳೂ ವಿಶ್ವಪ್ರವರ್ತನಕಾರ್ಯವನ್ನು ನಡೆಸುತ್ತಿರುವರು. ಈ
ಪರತತ್ತ್ವವು ಪ್ರತಿಯೊಂದು ವಸ್ತುವಿನಲ್ಲಿಯೂ ಅದೇ ತರಹದ ಚಿನ್ಮಯ
ಆಕಾರದಲ್ಲಿ ನೆಲೆಸಿ ಸಕಲ ಜಗದವ್ಯವಹಾರವನ್ನು ನಡೆಸುತ್ತಿರುವುದರಿಂದ ಎಲ್ಲ
ಶಬ್ದಗಳೂ ಎಲ್ಲ ಆಕಾರಗಳೂ ಪರಮಾತ್ಮನಲ್ಲಿವೆ. ಈ ಸರ್ವೋತ್ತಮ ವಸ್ತುವನ್ನು
ಯಾವ ಶಬ್ಬಆಕಾರಗಳಿಂದಲೂ ನಾವು ಚಿಂತಿಸಬಹುದು. ಪರಮಾತ್ಮನಲ್ಲಿರುವ
ಗುಣಪೂರ್ಣತೆ ಮೊದಲಾದ ಮೂಲಭೂತ ಲಕ್ಷಣಗಳನ್ನು ಅಲ್ಲಗಳೆಯದೆ,
ಅದರ ಅನುಸಂಧಾನದ ಜೊತೆಗೆ ಅವನನ್ನು ಯಾವ ಶಬ್ದ ಆಕಾರಗಳಿಂದಲೂ
ನಾವು ಉಪಾಸನೆ ಮಾಡಬಹುದು. ಹೀಗೆ ವಾಸ್ತವವಾಗಿ ಹಿಂದೂ ಧರ್ಮದಲ್ಲಿ
ಭಗವಂತನ ನಾಮರೂಪಗಳ ಗೊಂದಲಕ್ಕೆ ಎಡೆಯೇ ಇಲ್ಲ. ಸಕಲ
ದೇವತೆಗಳಿಗೂ ಸರ್ವಜೀವರಿಗೂ ಸ್ವಾಮಿಯಾದ, ಪ್ರಕೃತಿಗೆ ಅತೀತನಾದ,
ವಿಶ್ವವ್ಯಾಪಿಯಾದ ಪರಮಾತ್ಮನಲ್ಲಿ ಚಿದಾನಂದಮಯವಾದ ಸಕಲರೂಪಗಳೂ
ಇವೆ. ಸಕಲ ಶಬ್ದ ಗಳಿಂದಲೂ ಅವನನ್ನು ಬಣ್ಣಿಸಬಹುದು. ಇಂತಹ ಮನೋಹರ
ವಾದ ಸರ್ವಸಂಗ್ರಾಹಕವಾದ ಪರತತ್ತ್ವನಿರೂಪಣೆಯೇ ಹಿಂದೂ ಧರ್ಮದಲ್ಲಿ
ಇರುವುದರಿಂದ ಎಲ್ಲರೂ ಸರ್ವಶಬ್ದ ಪ್ರತಿಪಾದ್ಯನಾದ ಶ್ರೀಹರಿಯನ್ನು ಏಕನಿಷ್ಠೆ
ಹಾಗೂ ದೃಢಭಕ್ತಿಯಿಂದ ಭಜಿಸಿ ಆತ್ಮದ ಶ್ರೇಯಸ್ಸನ್ನು ಸಾಧಿಸಿಕೊಳ್ಳಬೇಕು.
Bannanje Govindacharya (1936–2020)Bhagavad Gita Pravachana
ಅಂತವತ್ ತು ಫಲಮ್ ತೇಷಾಮ್ ತತ್ ಭವತಿ ಅಲ್ಪಚೇತಸಾಮ್ |
ದೇವಾನ್ ದೇವಯಜಃ ಯಾಂತಿ ಮತ್ ಭಕ್ತಾಃ ಯಾಂತಿ ಮಾಮ್ ಅಪಿ-ಅಲ್ಪ ಮತಿಗಳಾದ ಅಂತವರ ಆ ಫಲಕ್ಕೆ
ಅಳಿವುಂಟು. ದೇವತೆಗಳನ್ನು ಪೂಜಿಸುವವರು ದೇವತೆಗಳನ್ನು ಸೇರುತ್ತಾರೆ. ನನ್ನ ಭಕ್ತರು ನನ್ನನ್ನು ಸೇರುತ್ತಾರೆ.
ಕೃಷ್ಣನ ಮಾತನ್ನು ಕೇಳಿದಾಗ ನಮ್ಮಲ್ಲಿ ಒಂದು ಭಾವನೆ ಮೂಡಬಹುದು: “ಯಾರು ಫಲ ಕೊಟ್ಟರೆ ನಮಗೇನು?
ನನಗೆ ನನ್ನ ಇಷ್ಟಾರ್ಥ ಸಿದ್ಧಿಯಾದರೆ ಸಾಕು” ಎಂದು. ಅದಕ್ಕಾಗಿ ಈ ಶ್ಲೋಕದಲ್ಲಿ ಕೃಷ್ಣ ಎಚ್ಚರಿಕೆಯ
ನುಡಿಯನ್ನಾಡುತ್ತಾನೆ. ಕೃಷ್ಣ ಹೇಳುತ್ತಾನೆ “ಅಂತವತ್ತು ಫಲಂ ತೇಷಾಂ ತದ್ ಭವತ್ಯಲ್ಪಚೇತಸಾಮ್” ಎಂದು.
ಅಂದರೆ ಯಾವುದೋ ಒಂದು ಕ್ಷುದ್ರ ಫಲ ಸಿಕ್ಕಿತು ಎಂದು ಹಿಗ್ಗುವವರು ಅಲ್ಬಮತಿಗಳು. ಈ ರೀತಿಯಾಗಿ ಸಿಗುವ
ಫಲ ಎಂದೂ ಶಾಶ್ವತ ಅಲ್ಲ, ಅದು ಕ್ಷಣಿಕ. “ನೀವು ಯಾವ ದೇವತೆಯನ್ನು ಪೂಜಿಸುತ್ತೀರೋ ಆ ದೇವತೆಯನ್ನು
ಸೇರುತ್ತೀರೇ ಹೊರತು ಮೋಕ್ಷವನ್ನಲ್ಲ” ಎನ್ನುತ್ತಾನೆ ಕೃಷ್ಣ. ಯಾವ ದೇವತೆಗಳೂ ಕೂಡಾ ಅನಂತ ಕಾಲದ ತನಕ
ನಮ್ಮನ್ನು ಅವರ ಲೋಕದಲ್ಲಿ ಇರಗೊಡುವುದಿಲ್ಲ. ಆದ್ದರಿಂದ ನಾವು ಮಾಡಿದ ಕರ್ಮದ ಅವಧಿ ಮುಗಿದಾಕ್ಷಣ
ಮರಳಿ ಈ ಮೃತ್ಯುಲೋಕಕ್ಕೆ ಬರಬೇಕಾಗುತ್ತದೆ. ಈ ಕಾರಣದಿಂದ ಭಗವಂತನ ಅರಿವಿಲ್ಲದ ಕೇವಲ ದೇವತಾ
ಉಪಾಸನೆ ಶಾಶ್ವತ ಮೋಕ್ಷವನ್ನು ಕೊಡಲಾರದು.
ಭಗವಂತನಲ್ಲಿ ಮನವಿಟ್ಟು, ಏಕಭಕ್ತಿಯಿಂದ ಭಗವಂತನನ್ನು ಭಜಿಸಿದರೆ ಆಗ 'ತದ್ಧಾಮಂ ಪರಮಂ Dy
ಎಲ್ಲಿಂದ ಎಂದೂ ಮರಳಿ ಬರಬೇಕಾಗಿಲ್ಲವೋ ಅಂತಹ ಶಾಶ್ವತವಾದ ಮೋಕ್ಷವನ್ನು ಪಡೆಯುತ್ತಾರೆ.
ಭಗವಂತನನ್ನು ಪ್ರೀತಿಸುವುದರಿಂದ ಯಥಾರ್ಥ ಜ್ಞಾನ ಸಿದ್ಧಿಯಾಗುತ್ತದೆ. ಇದರಿಂದ ಎಂದೆಂದೂ ದುಃಖವಿಲ್ಲದ
ಭಗವದ್ ಪ್ರಾಪ್ತಿ ರೂಪವಾದ ಮೋಕ್ಷವನ್ನು ಪಡೆಯುಬಹುದು.
ಇಲ್ಲಿ ಕೆಲವರಿಗೆ ಒಂದು ಗೊಂದಲವಾಗಬಹುದು. “ದೇವರು ಏಕೆ ಹೊಗಳುವಿಕೆಯನ್ನು ಇಷ್ಟಪಡುತ್ತಾನೆ? ಆತ ಏಕೆ
ತನ್ನನ್ನು ಹೊಗಳುವವರನ್ನು ಮಾತ್ರ ಉದ್ಧರಿಸಿ ಉಳಿದವರನ್ನು ಉದ್ಭರಿಸುವುದಿಲ್ಲ?” ಎಂದು. ದೇವರು
ಪ್ರೀತಿಸುವುದು ಹೊಗಳಿಕೆಯನ್ನಲ್ಲ-ಸತ್ಯವನ್ನು. ವಿಷ್ಣು ಸಹಸ್ರನಾಮದಲ್ಲಿ ಬರುವ ಸಾವಿರ ನಾಮದಲ್ಲಿ ದೇವರು
ಅಂದರೆ ಏನು ಆತನ ಮಹಾತ್ಮೆ O(etymologically) ಎನ್ನುವ ಸತ್ಯ ಅಡಗಿದೆ. ಭಗವಂತ ಯಾರು
ಸತ್ಯವನ್ನು ತಿಳಿಯುತ್ತಾರೋ ಅವರನ್ನು ಪ್ರೀತಿಸುತ್ತಾನೆ. ಆತನಿಗೆ ವೈಯಕ್ತಿಕ ಇಷ್ಟಾನಿಷ್ಟವಿಲ್ಲ. ಆತ ಇಷ್ಟ
ಪಡುವುದು ಯಥಾರ್ಥ ಜ್ಞಾನವನ್ನು. ಯಥಾರ್ಥ ಜ್ಞಾನ-ಭಕ್ತಿ ರೂಪದಲ್ಲಿದೆ. ನಿಜವಾದ ಭಕ್ತಿ-ಯಥಾರ್ಥ
ಜ್ಞಾನದಲ್ಲಿದೆ. ಯಥಾರ್ಥದ ಅರಿವು ಭಗವಂತನಿಗೆ ಇಷ್ಟ ಮತ್ತು ಇದು ಮೋಕ್ಷವನ್ನು ತಲುಪಲು ಬೇಕಾದ
ಅರ್ಹತೆ. ಆದ್ದರಿಂದ ಭಗವಂತ ತನ್ನನ್ನು ಹೊಗಳುವವರನ್ನು ಉದ್ಭರಿಸುವುದಲ್ಲ. ಆತ ಯಥಾರ್ಥವನ್ನು
ತಿಳಿದವರನ್ನು ಉದ್ಧರಿಸುತ್ತಾನೆ ಮತ್ತು ಅರ್ಹತೆ ಉಳ್ಳವರಿಗೆ ಮೋಕ್ಷ ಕರುಣಿಸುತ್ತಾನೆ.
“ಶಾಶ್ವತ ಫಲವನ್ನು ಕೊಡತಕ್ಕಂತಹ ಅಂತರ್ಯಾಮಿಯ ಉಪಾಸನೆಯಲ್ಲಿ ಗಟ್ಟಿಯಾಗಿ-ಮೋಕ್ಷವನ್ನು ಪಡೆ
ಎನ್ನುವುದು ಇಲ್ಲಿ ಕೃಷ್ಣನ ಸಂದೇಶ.
ಭಗವಂತನನ್ನು ತಿಳಿಯಬೇಕು ಎಂದು ಭಕ್ತಿ ಮತ್ತು ಜ್ಞಾನ ಮಾರ್ಗದಲ್ಲಿ ಸಾಗಿದವರಿಗೂ ಕೂಡಾ ಭಗವಂತನನ್ನು
ತಿಳಿಯುವುದು ಎಷ್ಟು ಕಷ್ಟ ಎನ್ನುವುದನ್ನು ಕೃಷ್ಣ ಈ ಅಧ್ಯಾಯದಲ್ಲಿ ಇನ್ನೂ ವಿವರಿಸುತ್ತಾನೆ.
Bibek Debroy (1955–2024)The Bhagavad Gita
(23)
‘The fruits of those28 who have little intellect come to an end.29
Worshippers of gods attain the gods. My devotees attain me.’