नाहं प्रकाशः सर्वस्य योगमायासमावृतः ।
मूढोऽयं नाभिजानाति लोको मामजमव्ययम् ॥
nāhaṃ prakāśaḥ sarvasya yogamāyāsamāvṛtaḥ |
mūḍho'yaṃ nābhijānāti loko māmajamavyayam ||
Swami Sivananda (1887–1963)Bhagavad Gita
25. I am not manifest to all (as I am), being veiled by the Yoga Maya. This deluded world
does not know Me, the unborn and imperishable.
Bannanje Govindacharya (1936–2020)Bhagavad Gita Pravachana
ನ ಅಹಮ್ ಪ್ರಕಾಶಃ ಸರ್ವಸ್ಯ ಯೋಗ ಮಾಯಾ ಸಮಾವೃತಃ |
ಮೂಢಃ ಅಯಮ್ ನ ಅಭಿಜಾನಾತಿ ಲೋಕಃ ಮಾಮ್ ಅಜಮ್ ಅವ್ಯಯಮ್-ನನ್ನ ಸಾಮರ್ಥ್ಯ ಮತ್ತು ಪ್ರಕೃತಿಯ
ಮಾಯೆಯಿಂದ ಮುಚ್ಚಿಕೊಂಡಿರುವ ನಾನು ಎಲ್ಲರಿಗೂ ಬಯಲಾಗಲಾರೆ. ಹುಟ್ಟಿರದ ಸಾವಿರದ ನನ್ನನ್ನು ಈ
ತಿಳಿಗೇಡಿ ಮಂದಿ ತಿಳಿಯಲಾರರು.
ಭಗವಂತ ಎಲ್ಲರಿಗೂ ಕಾಣಿಸಿಕೊಳ್ಳುವುದಿಲ್ಲ. ಆತನ ಅನಂತ ಗುಣದ ಸ್ಪಷ್ಟ ಚಿತ್ರ ಯಾರಿಗೂ ಬರುವುದು
ಸಾಧ್ಯವಿಲ್ಲ. ಮನುಷ್ಯನ ಚಿಂತನೆಗೆ ಒಂದು ಮಿತಿ ಇದೆ, ಆದರೆ ಭಗವಂತ ಆ ಮಿತಿಯ ಒಳಗಿಲ್ಲ. ಆದ್ದರಿಂದ ನಮ್ಮ
ಬುದ್ಧಿ ಆತನ ಅನಂತವಾದ ಜ್ಞಾನವನ್ನು, ಅನಂತವಾದ ಶಕ್ತಿಯನ್ನು, ಆನಂತ ರೂಪವನ್ನು ಗ್ರಹಿಸಲಾರದು.
ನಾವು ಇಚ್ಛೆಪಟ್ಟಾಗ ಭಗವಂತ ಕಾಣುವುದಿಲ್ಲ. ಆದರೆ ಕಾಲ ಪಕ್ವವಾದಾಗ ತನ್ನ ಇಚ್ಛೆಯಂತೆ. ಭಗವಂತ
ಜ್ಞಾನಾನಂದ ಸ್ವರೂಪವಾದ ಮನಸ್ಸು ಮತ್ತು ಜ್ಞಾನಾನಂದ ಸ್ವರೂಪವಾದ ಇಂದ್ರಿಯಗಳಿಗೆ ಯಥಾಶಕ್ತಿ
ಗೋಚರವಾಗಬಲ್ಲ. ಈ ಲೋಕದಲ್ಲಿ ಅಜ್ಞಾನದ ಮೋಹಕ್ಕೆ ಒಳಗಾದ ಜೀವಜಾತ ಎಂದೂ ಭಗವಂತನನ್ನು
ಗ್ರಹಿಸಲಾರದು. ಜೀವನಿಗೂ ಮತ್ತು ಭಗವಂತನಿಗೂ ನಡುವೆ ಇರುವ ಅಜ್ಞಾನವೆಂಬ ಮಾಯಾ ಪರದೆಯಿಂದಾಗಿ
ಭಗವಂತ ನಮಗೆ ಕಾಣುವುದಿಲ್ಲ.
Bibek Debroy (1955–2024)The Bhagavad Gita
(25)
‘Shrouded in my powers of yoga and maya, I am not evident to everyone. I
am not born and am without change. But the ignorant world does not know
me.’