अधिभूतं क्षरो भावः पुरुषश्चाधिदैवतम् ।
अधियज्ञोऽहमेवात्र देहे देहभृतां वर ॥
adhibhūtaṃ kṣaro bhāvaḥ puruṣaścādhidaivatam |
adhiyajño'hamevātra dehe dehabhṛtāṃ vara ||
Sri Madhvacharya (1238–1317)Bhagavad Gita Tatparya Nirnaya
8.3–8.4
परमाक्षरं विष्णुरेव मुख्यत इति प्रसिद्धत्वात् तथैव परिहरति। अज्ञानां तदपि ज्ञापयितुं तथैव
परिहारः। पुनरहमिति नोक्तमित्याशङ्का ‘अव्यक्तं व्यक्तिमापन्नम्’ इति विष्णावेव प्रयुक्तेनाव्यक्तशब्देन
‘अव्यक्तोऽक्षर इत्युक्तः’ इति परिह्रियते। ‘ये चाप्यक्षरमव्यक्तम्’ इत्यत्र तु पृथक् प्रश्नादुपासकयोः
फलतारतम्यकथनात् कूटस्थोऽक्षर उच्यते’ इत्युक्ताक्षरादपि चोत्तमः इति
विष्णोरुत्तमत्वकथनाच्चान्यदेवेत्यवसीयते। ‘अधियज्ञोऽहमेव’ इति साधियज्ञमित्युक्त्वा
प्राप्तभेदनिवृत्यर्थम्। तस्मैव सर्वप्राणिदेहस्थितरूपान्तरापेक्षया सहितत्वं युज्यते।
‘प्राणिनां देहगो विष्णुरधियज्ञ इतीरितः।
स एव व्याप्तरूपेण ब्रह्मेति परिकीर्त्यते।
तैस्तैरधिकयज्यत्वाद् बृंहितत्वाच्च हेतुतः।
अध्यात्मं तत्स्वभावो यदधिकः परमात्मगः।
पुंसां सजडभावानां सर्गः कर्म हरेः स्मृतम्।
भूताधिकत्वतो जीवा अधिभूतमितीरिताः।
अधिको दैवतं विष्णुरेव यस्यास्तु सा रमा।
पुरुप्राणाधिदैवाख्या त्विति ज्ञेयमिदं नरैः’ इति तत्त्वविवेके।
कथंरूपोऽधियज्ञ इति प्रश्नस्तु ‘अहमेव’ इत्युक्तत्वात् तल्लक्षणोक्त्यैव परिहृतः॥03-04॥
Swami Sivananda (1887–1963)Bhagavad Gita
4. Adhibhuta (knowledge of the elements) pertains to My perishable Nature, and the
Purusha or soul is the Adhidaiva; I alone am the Adhiyajna here in this body, O best among the
embodied (men)!
Bannanje Govindacharya (1936–2020)Bhagavad Gita Pravachana
ಅಧಿಭೂತಮ್ ಕ್ಷರಃ ಭಾವಃ ಪುರುಷಃ ಚ ಅಧಿದೈವತಮ್ ।
ಅಧಿಯಜ್ಞಃ ಅಹಮ್ ಏವ ಅತ್ರ ದೇಹೇ ದೇಹಭೃತಾಮ್ ವರ- ಹುಟ್ಟಿ ಸಾಯುವ IDR, ಬ್ರಹ್ಮಾಂಡ
[ದೇಹೆಂದ್ರಿಯಗಳಿಂದ ಕೂಡಿದ ಜೀವರಾಶಿ] 'ಅಧಿಭೂತ', ಶರೀರದೊಳಗಿದ್ದು ನಿಯಮಿಸುವ ತತ್ತ್ವಾಭಿಮಾನಿ
ದೇವತೆಗಳು[ಜಗತ್ತಿನ ಹಿರಿಯ ಚಾಲಕಶಕ್ತಿಯಾಗಿ “ಪುರುಷ' ಎನಿಸಿದ ಶ್ರೀತತ್ವ | 'ಅಧಿದೈವ'. ಹಿರಿಯ ಜೀವವೇ,
ಈ ದೇಹದಲ್ಲಿ ನಾನೇ 'ಅಧಿಯಜ್ಞ'.
ಹಿಂದಿನ ಶ್ಲೋಕದಲ್ಲಿ ನೋಡಿದಂತೆ ಅಧ್ಯಾತ್ಮ ಎಂದರೆ ಶರೀರದಲ್ಲಿ ಬಂಧಿಯಾಗಿರುವ ಜೀವ. ಈ ಜೀವದ
ಭೋಗಕ್ಕಾಗಿ ಸೃಷ್ಟಿಯಾಗಿರತಕ್ಕಂತಹ ಪಂಚಭೂತಾತ್ಮಕವಾದ ಈ ಪ್ರಪಂಚದ ಸಮಸ್ತ ವಿಚಾರಗಳೂ
ಅಧಿಭೂತದಲ್ಲಿ ಸೇರಿದೆ. ಪಂಚಭೂತದ ಮೂಲದ್ರವ್ಯ ಮತ್ತು ಪಂಚಭೂತದಿಂದ ನಿರ್ಮಾಣಗೊಂಡ ಪ್ರಪಂಚ
ಅಧಿಭೂತ. ಜಡ ಪ್ರಕೃತಿಯಿಂದ ಹಿಡಿದು ಸ್ಥೂಲ ವಿಶ್ವದ ತನಕ ತ್ರಿಗುಣಾತ್ಮಕವಾದ ಎಲ್ಲವೂ "ಅಧಿಭೂತ'.
ಕೃಷ್ಣ ಹೇಳುತ್ತಾನೆ... “ಪುರುಷಶ್ಚಾಧಿದೈವತಮ್” ಎಂದು. ಈ ಶರೀರದೊಳಗಿರುವ ಜೀವಕ್ಕೆ
ನೆರವಾಗುವುದಕ್ಕೋಸ್ಕರ ದೇಹದಲ್ಲಿ ಬೇರೆ ಬೇರೆ ಇಂದ್ರಿಯಗಳನ್ನು ನಿಯಂತ್ರಿಸತಕ್ಕಂತಹ ದೇವತೆಗಳಿದ್ದಾರೆ.
ಇದು ಅಧಿದೈವತಾ ವಿಜ್ಞಾನ. ಇದು ಒಂದು ಮುಖ. ಇನ್ನೊಂದು ರೀತಿಯಲ್ಲಿ ನೋಡಿದರೆ ಇಲ್ಲಿ ಕೃಷ್ಣ 'ಪುರುಷ'
ಎಂದು ಸಂಬೋಧಿಸಿದ್ದಾನೆ. ನಮ್ಮ ದೇಹದಲ್ಲಿ ನಾಲ್ಕು "ಪುರುಷರಿದ್ದಾರೆ'. ಶರೀರಪುರುಷ, ಛಂದಃಪುರುಷ,
ವೇದಪುರುಷ ಮತ್ತು ಸಂವತ್ಸರಪುರುಷ. ಈ ದೇಹ ನಿಂತು ನಡೆದಾಡಬೇಕಾದರೆ ದೇಹದಲ್ಲಿ ಶರೀರಪುರುಷನಾದ
ಶಿವಶಕ್ತಿ ಬೇಕು. ಮನಸ್ಸು ಯೋಚಿಸಿದ್ದನ್ನು ಸ್ಪಂದನ, ಪರಾಶರ, ಪಶ್ಯಂತಿ, ಮದ್ಯಮ ಮತ್ತು ವೈಖರಿ ರೂಪದಲ್ಲಿ
ವಾಕ್ ಶಕ್ತಿ ಯಾಗಿ ಹೊರಹೊಮ್ಮಲು ಛಂದಃಪುರುಷನಾದ ಶೇಷ ಕಾರಣ. ಮನೋಮಯ ಕೋಶದಲ್ಲಿದ್ದು,
ವೇದಾಂತದ ಚಿಂತನೆ, ಮನಸ್ಸಿನಲ್ಲಿ ಮನನ ಶಕ್ತಿ ಕೊಡತಕ್ಕವ ವೇದಪುರುಷ ಗರುಡ. ವೇದಪುರುಷ ನಮಗೆ
ಅಪೂರ್ವವಾದ ವೈದಿಕ ವಾಜ್ಮಯ ಶಕ್ತಿ ಪ್ರಾಪ್ತವಾಗುವಂತೆ ಮಾಡುತ್ತಾನೆ. ಜೀವದ ಯೋಗ್ಯತೆಯನ್ನು, ಇಡೀ
ಜೀವದ ಸ್ವರೂಪವನ್ನು ನಿಯಂತ್ರಣ ಮಾಡುವವ ಜೀವಕಲಾಭಿಮಾನಿ ಚತುರ್ಮುಖಬ್ರಹ್ಮ, ಈತ
ಸಂವತ್ಸರಪುರುಷ. [ “ಸಂ-ವತ್ಸ-ರ'- ಅಂದರೆ ಚೆನ್ನಾಗಿ ಮಕ್ಕಳನ್ನು ಸಾಕುವ ಪಿತಾಮಹ]. ಬ್ರಹ್ಮ-ವಾಯು
ಜೀವನನ್ನು ಮೇಲಕ್ಕೆತ್ತಿ ಸಾಧನೆಯ ಹಾದಿಯಲ್ಲಿ ತೊಡಗಿಸುತ್ತಾರೆ. ಹೀಗೆ ಈ ಪಂಚದೇವತೆಗಳು ಭಗವಂತನ
ನಂತರ ದೇಹದಲ್ಲಿರುವ ಪ್ರಮುಖ ಅಧಿದೇವತೆಗಳು. ಅವರಿಂದ ನಿಯಂತ್ರಿಸಲ್ಪಟ್ಟ ಸಮಸ್ತ ಬ್ರಹ್ಮಾಂಡ
ಅಧಿಭೂತ.
ಕೃಷ್ಣ ಮುಂದುವರಿದು ಹೇಳುತ್ತಾನೆ: ಪ್ರತಿಯೊಂದು ದೇಹದ ಒಳಗೂ ನಾನು ಒಂದೊಂದು ರೂಪದಲ್ಲಿದ್ದೇನೆ
ಎಂದು. ಭಗವಂತನ ಈ ರೂಪವೇ 'ಅಧಿಯಜ್ಞ' ರೂಪ. ಯಜ್ಞವನ್ನು ಅಧಿಕರಿಸಿ, ಅದನ್ನು ನಿಯಂತ್ರಿಸುವ ಯಜ್ಞ
ಭೋಕ್ತಾರ, ಯಜ್ಞವನ್ನು ಮಾಡುವವ, ಮಾಡಿಸುವವ, ಮತ್ತು ಫಲಪ್ರದನಾದ ಭಗವಂತ ಅಧಿಯಜ್ಞ. ನಾವು
ಭಗವಂತನ ಪೂಜಾರೂಪ ಎಂದು ತಿಳಿದು ಮಾಡುವ ಎಲ್ಲಾ ಕರ್ಮವೂ ಯಜ್ಞ. "ಯಜ ದೇವಾ ಪೂಜಾಯಾಂ' -
ನಮ್ಮ ಬದುಕಿನ ಪ್ರತಿಯೊಂದು ಕ್ರಿಯೆಯೂ ಭಗವಂತನ ಆರಾಧನೆ. ನಮ್ಮ ದೇಹದೊಳಗಿದ್ದು, ಸಕಲ
ತತ್ತ್ವಾಭಿಮಾನಿ ದೇವತೆಗಳ ಮುಖೇನ ಕ್ರಿಯೆ ಮಾಡಿಸುವ ಭಗವಂತ "ಅಧಿಯಜ್ಞ'.
ಎರಡನೇ ಆಯಾಮದಲ್ಲಿ ಈ ಶ್ಲೋಕವನ್ನು ನೋಡಿದರೆ [ಹಿಂದಿನ ಶ್ಲೋಕದಲ್ಲಿ ಭಗವಂತ-ಭಗವಂತನ ಸ್ವಭಾವ
ಮತ್ತು ಅವನ ಕ್ರಿಯೆ ಎನ್ನುವ ಅರ್ಥ ವಿಶ್ಲೇಷಣೆಯಂತೆ] ಅಧಿಭೂತ ಎಂದರೆ ಬ್ರಹ್ಮಾದಿಸಮಸ್ತ ದೇವತೆಗಳು.
ಚೇತನಾಚೇತನಾತ್ಮಕ ಪ್ರಪಂಚ, ಜೀವರು, ಶರೀರ, ಬ್ರಹ್ಮ ಮತ್ತು ಬ್ರಹ್ಮಾಂಡ ಎಲ್ಲವೂ ಅಧಿಭೂತ. ಎಲ್ಲಾ
ದೇವತೆಗಳಿಗೂ ಮಿಗಿಲಾದ ಭಗವಂತನ ಅನಂತರ ಬ್ರಹ್ಮಾದಿ ದೇವತೆಗಳಿಗೂ ತಾಯಿಯಾದ "छट" ಶ್ರೀತತ್ವ
ಅಧಿದೈವ. ಎಲ್ಲೆಡೆ ತುಂಬಿದ್ದು ಎಲ್ಲಾ ಜೀವರ ಒಳಗೆ ಅಂತರ್ಯಾಮಿಯಾಗಿ ನಿಂತು ನಿಯಮಿಸುವ ಭಗವಂತ
ಅಧಿಯಜ್ಞ.
Bibek Debroy (1955–2024)The Bhagavad Gita
(4)
‘O best among those who have bodies!8 Perishable elements are adhibhuta
and the purusha is adhidaiva. In this body, I myself am adhiyajna.’