9.30

अपि चेत्सुदुराचारो भजते मामनन्यभाक् ।
साधुरेव स मन्तव्यः सम्यग्व्यवसितो हि सः ॥
api cetsudurācāro bhajate māmananyabhāk |
sādhureva sa mantavyaḥ samyagvyavasito hi saḥ ||
Swami Sivananda (1887–1963)Bhagavad Gita
30. Even if the most sinful worships Me, with devotion to none else, he too should indeed be regarded as righteous, for he has rightly resolved.
Sri Vishwesha Tirtharu (1931–2019)Gitasaroddhara
9.22–9.31 · ಯೋಗಕ್ಷೇಮಂ ವಹಾಮ್ಯಹಮ್
ಯೋಗಕೇಮಂ ವಹಾಮಹಂ ವೈ ೧೧2೧25. ಭೆ ತನ್ನ ಭಕ್ತ ರ ಸಂರಕ್ಷ ಣೆಯ ಪೂರ್ಣ ಭಾರವನ್ನು ಭಗವಂತನು ಹೊತ್ತಿ ರುಷನು, ತನ್ನನ್ನೇ ತ್ತ ದೃಢನಿಷ್ಠೆಯಿಂದ ಉಪಾಸಿಸುವ ನಿತ್ಯಾಭಿ ಯುಕ್ತರಾದ ಭಕ್ತರ ಯೋಗಕ್ಷೇಮವನ್ನು ತಾನು ನಿರ್ವಹಿಸುವೆನೆಂದು ಶ್ರೀಕೃಷ್ಣನು ಗೀತೆಯಲ್ಲಿ ಅಭಿವಚನವನ್ನು ನೀಡಿರುವನು. ನಮ್ಮಲ್ಲಿ ಆತ್ಮವಿಶ್ವಾಸ ಹಾಗೂ ಹೃದಯ ಬಲವನ್ನು ಕುದುರಿಸುವ ಜಗದೀಶ್ವರನ ಆಶ್ವಾಸನದ ದಿವ್ಯ ಸಂಜೀವಿನಿಯು ಮ ದ ದೊರಕಿರುವಾಗ ಜನತೆಯು ಜೀವನದ ಹೋರಾಟದಲ್ಲಿ ಕಂಗೆಡುವುದೇಕೆ? ಭಗವದ್ಭಕ್ತಿಯ ಭದ್ರವಾದತಳಹದಿಯ ಮೇಲೆ ಜೀವನದ ಉತ್ತು ೦ಗ ಸೌಧದ ನಿರ್ಮಾಣಕಾರ್ಯದಲ್ಲಿ ನಾವು ದೃಢ ನಿರ್ಧಾರದಿಂದ ತೊಡಗಬಹುದು. ತನ್ನನ್ನು ಮೊರಹೊಕ್ಕು ವ್ರಾರ್ಥಿಸುತ್ತಿ ರುವ ಭಕ್ತಃ ವರ್ಗವನ್ನು ರಕ್ಷಿಸುವುದು ತನ್ನ ವ್ರತವೆಂದು ರಾಮಾವತಾರದಲ್ಲಿ ಭಗವಂತನು ಹೇಳಿದ್ದಾನೆ. ಸಕೃದೇವ ಪ್ರಹನ್ನೋ ಯಃ ತವಾಸ್ಮೀತಿ ಚೆ ಯಾಚತೇ | ಅಭಯಂ ಸರ್ವಭೂತೇಚ್ಛಃ ದದಾಮ್ಯೇತದ್‌ ವ್ರತಂ ಮಮ ॥ ಇದು ರಾಮಾವತಾರದಲ್ಲಿ ಶರಣಾಗತ ಭಕ್ತನಿಗೆ ಪರಮಾತ್ಮನೇ ನೀಡಿದ ಅಭಯವಾಣಿಯಾಗಿದ್ದರೆ, ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ ತೇಷಾಂ ನಿತ್ಯಾಭಿಯುಕ್ತಾ ನಾಂ ಯೋಗಕ್ಷ್ನ ಮಂ ವಹಾಮ್ಯಹಂ 1 ಇದು ಕೃಷ್ಣಾ ವತಾರದಲ್ಲಿ ಭಗವಂತನು ನೀಡಿದ ಭರವಸೆಯ ಅಮೃತವಾಣಿ ಆಗಿದೆ. ಕೌಂತೇಯ ಪ್ರತಿಜಾನೀಹಿ ನ ಮೇ ಭಕ್ತಃ ಪ್ರಣಶ್ಯತಿ । “ಅರ್ಜುನಃ ನನ್ನ ಭಕ್ತನಿಗೆ ಎಂದೆಂದಿಗೂನಾಶವಿಲ್ಲವೆಂಬುದನ್ನು ದೃಢವಾಗಿ ತಿಳಿದುಕೋ' ಎಂದು ಭಕ್ತಿಯ ಮಾರ್ಗದಲ್ಲಿ ಮುನ್ನಡೆಯುವವನಿಗೆ ಯಾವ ಹಾನಿಯೂ ಇಲ್ಲವೆಂದು ಅಭಿನಿವೇಶದಿಂದ ಭಗವಂತನು ಸಾರಿದ್ದಾನೆ. ಇಂತಹ ಸುಸ್ಪಷ್ಟ ಘೋಷಣೆಗಳಿರುವಾಗ ಜೀವಬ್ರಹ್ಮ್ಮೈಕ್ಯದಂತಹ ಅಪಕ್ವ ಹಾಗೂ ಅಸಂಬದ್ಧ ವಿಚಾರಗಳನ್ನು ತಲೆಯಲ್ಲಿ ತುಂಬಿಕೊಂಡು ಭಕ್ತಿವಿರೋಧಿ ಮಾರ್ಗಗಳನ್ನು ಬೋಧಿಸಿ ಜನರ ಮನಸ್ಸಿನಲ್ಲಿ ವೃಥಾ ಗೊಂದಲವೆಬ್ಬಿಸುವುದನ್ನು ಕಂಡು ನಮ್ಮ ಮನಸ್ಸಿಗೆ ಬಹಳ ಸಂತಾಪವಾಗುತ್ತಿದೆ. ಭಗವಂತನೇ ಭಕ್ತಿಮಾರ್ಗವನ್ನು ಶ್ರೇಷ್ಠವೂ ಪವಿತ್ರವೂ ಎನಿಸಿದ ನಿರಾತಂಕವಾದ ರಾಜಪಥ ವೆಂದು ಘೋಷಿಸಿರುವಾಗ ಆ ಮಾರ್ಗದಲ್ಲಿ ನಡೆಯಲು ಸಂಕೋಚ, ಸಂದೇಹಗಳೇಕೆ? ಇದು ಅಜ್ಞಾನಿಗಳಿಗೆ ಮಾತ್ರ ಮೀಸಲಾದ ದಾರಿಯೆಂದು ಅದನ್ನು ಏಕೆ ಹೀಗಳೆಯುತ್ತಾರೆಂಬುದೇ ನಮಗೆ ಅರ್ಥವಾಗುತ್ತಿಲ್ಲ. ಜನರು ಇಂತಹ ಅಸಂಬದ್ಧ ವಿಚಾರ ಗೊಂದಲಗಳಲ್ಲಿ ವೃಥಾ ಕಾಲಹರಣ ಮಾಡದೆ ನಿಸಂಕೋಚಭಾವದಿಂದ ಭಕ್ತಿಯೋಗವನ್ನಾಶ್ರಯಿಸುವುದೇ ವಿಹಿತವಾಗಿದೆ. ಕೌಂತೇಯ ಪ್ರತಿಜಾನೀಹಿ ನಮೇ ಭಕ್ತಃ ಪ್ರಣಶ್ಯತಿ । ಈ ವಾಕ್ಯದಲ್ಲಿ ಶ್ರೀಕೃಷ್ಣನು ತನ್ನ ಭಕ್ತರಿಗೆ ಎಂದಿಗೂ ನಾಶವಿಲ್ಲವೆಂದು ಅರ್ಜುನನಿಂದ ಪ್ರತಿಜ್ಞೆ ಮಾಡಿಸುತ್ತಾನೆ. ಅದೇಕೆ? ತಾನು ಪ್ರತಿಜ್ಞೆ ಮಾಡದೆ ಅರ್ಜುನನಿಂದ ಭಗವಂತನು ಏಕೆ ಪ್ರತಿಜ್ಞೆ ಮಾಡಿಸುತ್ತಾನೆ? ತನ್ನ ಪ್ರತಿಜ್ಞೆಯಾದರೂ ಕೆಲವೊಮ್ಮೆ ಹುಸಿಯಾದೀತು. ತನ್ನ ಭಕ್ತರ ಪ್ರತಿಜ್ಞೆಯು ಎಂದಿಗೂ ಹುಸಿಯಾಗಲಾರದೆಂದು ಶ್ರೀಕೃಷ್ಣನ ಆಶಯವಾಗಿದೆ. ಸ್ವನಿಯಮಮಪಹಾಯ ಮತ್‌ ಪ್ರತಿಜ್ಞಾಂ ಯತಮಧಿಕರ್ತುಮವಪ್ಪುತೋ ರಥಸ್ಥಃ ಧೃತರಥಚರಣೋರಭ್ಯಯಾಚ್ಛಲದ್ದು: ಹರಿರಿವ ಹಂತುಮಿಮಂ ಗತೋತ್ತರೀಯಃ ॥ ಎಂದು ಭಾಗವತದಲ್ಲಿ ಭೀಷ್ಮರು ವರ್ಣಿಸುತ್ತಾರೆ. ""ತನ್ನ ಭಕ್ತರ ಪ್ರತಿಜ್ಞೆಯು ಹುಸಿಯಾಗಬಾರದೆಂದು ಚಕ್ರವನ್ನು ಧರಿಸಿ ತನ್ನ ಪ್ರತಿಜ್ಞೆಯನ್ನೇ ಭಕ್ತರಿಗಾಗಿ ಭಂಗಗೊಳಿಸಲು ಅಣಿಯಾದ ಶ್ರೀಕೃಷ್ಣನ ಭಕ್ತಾನುಗ್ರಹಕಾರಕವಾದ ಆ ಪ್ರಸನ್ನವದನವನ್ನು ನಾನೆಂತು ಮರೆಯಲಿ! ಮರಣಶಯ್ಯೆಯಲ್ಲಿ ದ್ವಭೀಷ್ಮರ ಉದ್ಗಾರವಿದು. ಮಹಾಭಾರತ ಯುದ್ಧದಲ್ಲಿ ತಾನು ಆಯುಧವನ್ನು ಧರಿಸುವುದಿಲ್ಲವೆಂದು ಶ್ರೀಕೃಷ್ಣನು ಪ್ರತಿಜ್ಞೆ ಮಾಡಿದ್ದರೂ ಕೃಷ್ಣನು ಆಯುಧವನ್ನು ಧರಿಸುವಂತೆ ಮಾಡುವೆನೆಂಬ ಭೀಷ್ಮರ ಪ್ರತಿಜ್ಞೆಯನ್ನು ಪರಿಪಾಲಿಸುವುದಕ್ಕಾಗಿ ಅವರ ಶಸ್ತ್ರಾಸ್ತ್ರಗಳಿಂದ ಪೀಡಿತನಾದಂತೆ ನಟಿಸಿ, ತನ್ನ ಪ್ರತಿಜ್ಞೆಯನ್ನು ಮುರಿದು ಶಸ್ತ್ರಧಾರಣೆಯನ್ನು ಮಾಡುವನು. ತನ್ನ ಮಾತಿಗಿಂತಲೂ ತನ್ನ ಭಕ್ತರ ಮಾತಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಿದ ಶ್ರೀಕೃಷ್ಣನು ನಮ್ಮಲ್ಲಿ ವಿಶ್ವಾಸವನ್ನು ಮೂಡಿಸುವುದಕ್ಕಾಗಿ ತನ್ನ ಪರಮಭಕ್ತ ಅರ್ಜುನನಿಂದಲೇ ""ನ ಮೇ ಭಕ್ತಃ ಪ್ರಣಶ್ಯತಿ' ಎಂದು ಪ್ರತಿಜ್ಞೆ ಮಾಡಿಸುತ್ತಾನೆಂದು ಈ ಶ್ಲೋಕವನ್ನು ಸ್ವಾರಸ್ಯಕರ ರೀತಿಯಲ್ಲಿ ಕೆಲವರು ವ್ಯಾಖ್ಯಾನ ಮಾಡಿರುವರು.
ಆಚಾರವೂ ಭಕ್ತಿಯೂ
ಆಚಾರವೂ ಭಕ್ತಿಯೂ ಪರಮಾತ್ಮನು ಮಾಡಿದ ಭಕ್ತಿಯ ಪ್ರಶಂಸೆಯನ್ನು ತಮ್ಮ ಸ್ವಚ್ಛಂದ ವ್ಯವಹಾರಕ್ಕಾಗಿ ದುರುಪಯೋಗಪಡಿಸುವವರೂ ಅನೇಕರಿದ್ದಾರೆ. ಭಕ್ತಿ ಯೊಂದಿದ್ದರೆ ಸಾಕು, ಎಷ್ಟು ಅನೀತಿ ಅನಾಚಾರಗಳನ್ನಾದರೂ ಮಾಡಿ ದಕ್ಕಿಸಿಕೊಳ್ಳಬಹುದೆಂದು ಕೆಲವರು ಭಾವಿಸಿದ್ದಾರೆ. ನೀತಿ, ನಡತೆ, ಸದಾಚಾರ ಮುಂತಾದ ಬಾಹ್ಯವ್ಯವಹಾರಗಳಿಗೆ ನಾವು ಏನೂ ಮಹತ್ವ್ವಕೊಡಬೇಕಾಗಿಲ್ಲ ಆಂತರ್ಯದಲ್ಲಿ ಭಕ್ತಿಯೊಂದಿದ್ದರೆ ಬಾಹ್ಯದಲ್ಲಿ ಯಾವ ದುರ್ವ್ಯವಹಾರವನ್ನು ಮಾಡಿದರೂ ಅವನು ಮುಕ್ತಿಯನ್ನು ಪಡೆಯಬಲ್ಲನೆಂಬ ಈ ವಿಚಾರದ ಸಮರ್ಶನೆಗೆ ಅಪಿ ಚೇತ್‌ ಸುದುರಾಚಾರೋ ಭಜತೇ ಮಾಮನನ್ಯಭಾಕ್‌ | ಸಾಧುರೇವಸ ಮಂತವ್ಯಃ... ಈ ಶ್ಲೋಕವನ್ನು ಉದಾಹರಿಸಲಾಗುತ್ತಿದೆ. ದುರಾಜಾರಿಯಾಗಿದ್ದರೂ ಭಕ್ತನಾಗಿದ್ದರೆ ಅವನು ಸಾಧುವೆಂದು ಈ ಶ್ಲೋಕದಿಂದ ಕಂಡುಬರುವ ಅರ್ಥವನ್ನು ಗ್ರಹಿಸಿದಾಗ ಭಕ್ತಿಮಾರ್ಗವು ಅನೀತಿ ಅನಾಚಾರಗಳಿಗೆ ಮುಕ್ತದ್ವಾರ ದಂತಿದೆ ಎಂದು ನಮಗೆ ಅನಿಸಬಹುದು. ಆದರೆ ಉವನಿಷತ್ತಿ; ನಲ್ಲಿ ನಾವಿರತೋ ದುಶ್ಚ ರಿತಾತ್‌... ಪ್ರಜ್ಞಾನೇನೈನಮಾಪ್ನಯಾತ್‌ -ಕರೋಪನಿಷತ್‌ ಎಂದು ದುರಾಚಾರದಿಂದ ದೂರನಾದವನೇ ಪರಮಾತ್ಮನನ್ನು ಹೊಂದಬಲ್ಲನೆಂದು ಭಕ್ತಿಗೂ ಸದಾಚಾರಕ್ಕೂ ಅಭೇದ್ಯ ಸಂಬಂಧವನ್ನು ಬೋಧಿಸಲಾಗಿದೆ. ಪರಮಾತ್ಮನಲ್ಲಿ ಪ್ರೇಮಭಾವವನ್ನು ಬೆಳೆಸಿಕೊಂಡಿರುವವನು ಪ್ರಪಂಚದ ವಿಷಯಗಳಲ್ಲಿ ಆಸಕ್ತಿಯನ್ನು ಕಳೆದುಕೊಂಡಿರುತ್ತಾನೆ. ವಿಷಯಾಸಕ್ತ ನಲ್ಲದ ಇಂತಹ ಭಕ್ತನು ರಾಗದ್ವೇಷದೂಷಿತಗಳಾದ ಹೀನಕ್ಕತ್ವಗಳನ್ನು ಹೇಗೆ ಮಾಡಬಲ್ಲನು? ಭಗವತ್‌ ಪ್ರೇಮಕ್ಕೆ ವಶಂವದವನಾಗಿ, ಲೋಕವ್ಯವಸ್ಥೆಗಾಗಿ ದೇವರು ಏರ್ಪಡಿಸಿದ ನಿಯಮಗಳನ್ನು ಸ್ವಯಂ ಪ್ರೇರಣೆಯಿಂದ ಅನುಸರಿಸುತ್ತಿರುವ ಭಕ್ತನಿಂದ ಅವುಗಳಿಗೆ ವಿಸಂಗತಗಳಾದ ವ್ಯವಹಾರಗಳು ಹೇಗೆ ಘಟಸಬಲ್ಲವು? ಆದುದರಿಂದ ಭಕ್ತಿ ಮತ್ತು ಸದಾಚಾರಗಳು ವರಸ್ಬರ ಅವಿಭಕ್ತಗಳಾಗಿಯೇ ಇರುವವು. ಆದರೆ ಲೋಕದಲ್ಲಿ ಭಕ್ತರೆನಿಸಿಕೊಂಡು ಮುದ್ರೆ, ಅಂಗಾರಕ ಮೊದಲಾದ ಭಕ್ತಿಯ ಲಾಂಛನಗಳನ್ನು ಧರಿಸಿದವರೂ ತಾಸುಗಟ್ಟಲೆ ಜಪಪೂಜಾ ಪಾರಾಯಣಗಳಲ್ಲಿ ನಿರತರಾದವರೂ ಅನೈತಿಕ ವ್ಯವಹಾರಗಳಲ್ಲಿ ತೊಡಗಿರುವುದನ್ನು ಕಾಣುತ್ತಿರುವೆವಲ್ಲವೆ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಬಹಿರಂಗದಲ್ಲಿ ಪೂಜಾದಿಗಳ ವಿಡಂಬನೆ ಮಾಡಿ ಅಂತರಂಗದಲ್ಲಿ ಅನೀತಿ, ವಂಚನೆಗಳಲ್ಲಿತೊಡುಗುವವರನ್ನು ನಿಜವಾದ ಭಕ್ತರ ಸಾಲಿನಲ್ಲಿ ವರಿಗಣಿಸಲಾಗುವುದಿಲ್ಲ. ರಂಗಭೂಮಿಯಲ್ಲಿ ದುಃಖ ದೈನ್ಯಗಳನ್ನು ಅಭಿನಯಿಸುವ ನಟರಂತೆ ಇವರು ಕೇವಲ ವೇಷಧಾರಿಗಳು. ಇವರದು ಭಾವನೆಯಿಲ್ಲದ ಭಕ್ತಿಯ ಅಭಿನಯ ಮಾತ್ರ. ಡಾಂಭಿಕತ್ವೇನ ಸೋತನುನೇಯಃ। ಎಂದು ಗೀತಾಭಾಷ್ಯದಲ್ಲಿ ಆಚಾರ್ಯರು ಇಂತಹವರ ಬಗ್ಗೆ ಕಟುವಾಗಿ ಜರೆದಿದ್ದಾರೆ. ನಿಜವಾದ ಭಕ್ತನ ಅಂತರಂಗ ಬಹಿರಂಗಗಳೆರಡೂ ಪರಿಶುದ್ಧವಿರುತ್ತವೆ. ಅನಂತಗುಣಾಕರನಾದ ವಿಶ್ವದ ವ್ಯವಸ್ಥಾಪಕನೂ ಆದ ಪರಮಾತ್ಮನು ಎಲ್ಲಕಡೆಯಲ್ಲಿಯೂನೆಲೆಸಿರುವನು ಎಂಬ ಜಾಗೃತ ಪ್ರಜ್ಞೆಯನ್ನು ವಡೆದ ಭಕ್ತನು ದುರ್ವ್ಯವಹಾರಗಳಿಗೆ ಎಂದಿಗೂ ಇಳಿಯಲಾರ. ಭಕ್ತಿಯಿಂದ ಮಾನವನಲ್ಲಿ ಉಂಟಾಗುವ ಸತ್ಪರಿಣಾಮವೇ ಸದಾಚಾರವಾಗಿದ್ದು ಅವೆರಡೂ ಪರಸ್ಪರವಾಗಿ ಹೊಂದಿಕೊಂಡೇ ಇರುವವು. ಆದುದರಿಂದ ಆಚಾರ, ನಡತೆಹೇಗೇ ಇರಲಿ, ಭಕ್ತಿಯೊಂದಿದ್ದರೆಸಾಕು ಎನ್ನುವುದು ಅಶಾಸ್ತ್ರೀಯವೂ ಅವೈಜ್ಞಾನಿಕವೂ ಆದ ವಿಚಾರವಾಗಿದೆ. ಜನರ ಬಾಹ್ಯ ವರ್ತನೆಯಿಂದಲೇ ಅವರ ಆಂತರಿಕವಾದ ಭಕ್ತಿಯ ನೈಜತೆಯನ್ನು ನಾವು ಅಳೆಯಬೇಕಾಗುವುದು. ಮೊದಲು ದುರಾಚಾರದಲ್ಲಿ ತೊಡಗಿದ್ದರೂ ಮುಂದೆ ಪರಮಾತ್ಮನಲ್ಲಿ ಭಕ್ತಿಯ ಉದಯವಾಗಿತನ್ನ ಹಿಂದಿನ ಅಕೃತ್ಯಗಳ ಬಗ್ಗೆ ಜಿಗುಪ್ಸೆ ಪಶ್ಚಾತ್ರಾಪಗಳನ್ನು ಹೊಂದಿ ಸರಿಯಾದ ಭಕ್ತಜೀವನ ವನ್ನು ನಡೆಸುತ್ತಿರುವವನನ್ನು ಅವನ ಹಿಂದಿನ ಆಚರಣೆಯನ್ನು ಅವಲಂಬಿಸಿ ತಿರಸ್ಕರಿಸದೆ ಅವನ ಸಜ್ಜನಿಕೆಯನ್ನು ಗೌರವಿಸಬೇಕೆಂಬುದೇ ಗೀತೆಯ ಅಭಿಪ್ರಾಯವಾಗಿದೆ. ದುರಾಜಾರಿಗೂ ಹೀನವೃತ್ತಿಯನ್ನವಲಂಬಿಸಿದವನಿಗೂ ತನ್ನನ್ನು ಭಕ್ತಿ ಜಲಧಾರೆಯಿಂದ ತೊಳೆದು ಪುನೀತಗೊಳಿಸಿಕೊಳ್ಳಲವಕಾಶವಿದೆ. ತಮ್ಮ ಪಾಪ ಜೀವನವನ್ನು ನೆನೆದು ತಮ್ಮ ಉದ್ಧಾರದ ಬಗ್ಗೆ ಪೂರ್ಣ ನಿರಾಶೆಗೊಂಡವರ ಹೃದಯವನ್ನು ಬೆಳಗಿಸುವ ಆಶಾದೀಪವೇ ಭಕ್ತಿಯಾಗಿರುವುದು. ಇಂತಹ ಭಕ್ತಿಗಂಗೆಯ ಅಮೃತಧಾರೆಯಲ್ಲಿ ವಿಹರಿಸಿದವನು ಮತ್ತೆ ದುರಾಚಾರದ ವಿಷವರ್ತುಲದಲ್ಲಿ ಇಳಿಯಲಾರನೆಂಬುದು ಸ್ಪಷ್ಟವೇ ಇದೆ. ಇಂದು ಜಗತ್ತಿನಲ್ಲಿ ವಿಕಟತಾಂಡವವನ್ನು ಆಡುತ್ತಿರುವ ಭ್ರಷ್ಟಾ ಚಾರದ ಮಹಾದೈತ್ಯನ ಹುಟ್ಟಡಗಿಸಲು ಭಕ್ತಿಯ ಅಮೃತವ್ರಾಶನವೇ ಏಕಮಾತ್ರ ಉಪಾಯವಾಗಿದೆ. ಸರಕಾರವು ವಿಧಿಸುವ ಕಾಯಿದೆಗಳಿಂದಲೇ ಲೋಕದ ಸುಧಾರಣೆಯಾಗದು. ಜನರ ಮನಸ್ಸಿನಲ್ಲಿ ಸುಧಾರಣೆ, ಪರಿವರ್ತನೆಗಳಾಗದೇ ಉಳಿದಿರುವುದರಿಂದ ಈಗಮಾಡಲಾದಕಾಯಿದೆಗಳೆಲ್ಲ ಅಯಶಸ್ವಿಗಳೇ ಆಗಿವೆ. ಈ ಕಾಯಿದೆಗಳು ಬೆಳೆದಂತೆ ಅವುಗಳನ್ನು ಉಲ್ಲಂಘಿಸುವ ಕುತಂತ್ರಗಳ ಆವಿಷ್ಯುರಗಳಿಗಿಂತ ಹೆಚ್ಚಿನದೇನೂ ಆಗುತ್ತಿ ಲ್ಲ ನ ಕಾಯಿದೆಯು ಸುಧಾರಣೆಯ ಮಗುವಾಗಿದೆ. ಅದುಸುಧಾರಣೆಯತಾಯಿಯಾಗಲಾರದು. ಜನರಮನಸ್ಸಿನಲ್ಲಿ ಆಗುವ ಸುಧಾರಣೆಯಿಂದ ಯಶಸ್ವೀ ಕಾಯಿದೆಗಳನ್ನು ಸೃಜಿಸಬಲ್ಲೆವಲ್ಲದೆ ಕಾಯಿದೆಬಲದಿಂದ ಲೋಕವನ್ನು ಸುಧಾರಿಸಲು ಸಾಧ್ಯವಾಗಲಾರದು. ನೀತಿ-ಶೀಲಗಳ ಬಗ್ಗೆ ಅಂತಹ ಮೂಲಭೂತ ಮನೋಭೂಮಿಕೆಯನ್ನು ನಿರ್ಮಿಸುವುದೇ ಇಂದಿನ ಪ್ರಧಾನವಾದ ರಾಷ್ಟ್ರನಿರ್ಮಾಣಕಾರ್ಯವಾಗಿದೆ. ಎಲ್ಲಶೀಲ-ಸದ್ಗುಣಗಳ ಮುಖ್ಯ ಪ್ರೇರಕಶಕ್ತಿಯಾದ ನೈಜವಾದ ಭಕ್ತಿಭಾವವನ್ನು ಸುಶಿಕ್ಷಿತ ಜನಾಂಗದಲ್ಲಿ ಒಡಮೂಡಿಸುವಂತಹ ಮಹಾಪ್ರಯತ್ನವು ಇಂದು ಭರದಿಂದನಡೆಯಜೀಕಾಗಿದೆ.
Bannanje Govindacharya (1936–2020)Bhagavad Gita Pravachana
ಅಪಿ ಚೇತ್‌ ಸು ದುರಾಚಾರಃ ಭಜತೇ ಮಾಮ್‌ ಅನನ್ಯ ಭಾಕ್‌ | ಸಾಧುಃ ಏವ ಸಃ ಮಂತವ್ಯಃ ಸಮ್ಯಕ್‌ ವ್ಯವಸಿತಃ ಹಿ ಸಃ -ಬೇರೆಡೆಗೆ ಬಗೆಗೊಡದೆ ನನ್ನಲ್ಲೇ ಭಕ್ತಿಯಿಡುವವನು ಎಂತಹ ನಡತೆಗೇಡಿಯಾದರೂ ಮೂಲತಃ ಒಳ್ಳೆಯವನೆಂದೇ ತಿಳಿಯಬೇಕು. ಏಕೆಂದರೆ ಅವನು ಖಚಿತವಾಗಿ ನಿಜವನರಿತವನು. ನಿಜವಾದ ಭಕ್ತರು ಸಾಮಾನ್ಯವಾಗಿ ಎಂದೂ ದುರಾಚಾರಿಗಳಾಗಿರುವುದಿಲ್ಲ. ಅಕಸ್ಮಾತ್‌ ಒಬ್ಬ ಸಾತ್ವಿಕ ಯಾವುದೋ ಪ್ರಾರಾಬ್ಧ ಕರ್ಮದಿಂದ ಒಂದು ಜನ್ಮದಲ್ಲಿ ನಡತೆಗೇಡಿಯಾಗಿದ್ದರೂ ಸಹ ಆತ ಮೂಲತಃ ಉತ್ತಮನೇ ಆಗಿರುತ್ತಾನೆ. ಏಕೆಂದರೆ ಆತ ತನ್ನ ಅನೇಕ ಜನ್ಮದಲ್ಲಿ ಭಗವದ್‌ ಸಾಧನೆ ಮಾಡಿರುತ್ತಾನೆ. ಇದು ಸಾಮಾನ್ಯರಾದ ನಮಗೆ ಕಾಣದಿದ್ದರೂ ಕೂಡಾ ಭಗವಂತನಿಗೆ ಕಾಣುತ್ತದೆ. ಭಗವಂತನ ದೃಷ್ಟಿಯಲ್ಲಿ ಆತ ಉತ್ತಮನೆನಿಸಿರುತ್ತಾನೆ. ಈ ಕಾರಣಕ್ಕಾಗಿ ನಾವು ಯಾರನ್ನೂ ಹಗುರವಾಗಿ ಕಾಣಬಾರದು. ಒಬ್ಬ ಕೆಟ್ಟ ದಾರಿಯಲ್ಲಿ ನಡೆಯುತ್ತಿದ್ದರೆ ಅದಕ್ಕೆ ಅನೇಕ ಕಾರಣಗಳಿರಬಹುದು. ಆತ ಸಾತ್ವಿಕನೂ ಇರಬಹುದು. ಆದರೆ ಆತನ Bor) ಕರ್ಮ ಆತನನ್ನು ಆ ಮಾರ್ಗದಲ್ಲಿ ನಡೆಯುವಂತೆ ಮಾಡಿರಬಹುದು. ಉತ್ತಮನೆನಿಸಿದವನು ಶಾಶ್ವತವಾಗಿ ಆ ದಾರಿಯಲ್ಲಿ ಸಾಗುವುದಿಲ್ಲ ಎನ್ನುತ್ತಾನೆ ಕೃಷ್ಣ ಮುಂದಿನ ಶ್ಲೋಕದಲ್ಲಿ.
Bibek Debroy (1955–2024)The Bhagavad Gita
(30) ‘Even if the most evil of persons worships me single-mindedly, he should be thought of as a righteous person. Because his resolve is correct.’